Yadgir District Reported Crimes
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 26/2017
PÀ®A 143.109.366(J),506,302, ¸ÀAUÀqÀ 149 L¦¹
¸ÀAUÀqÀ 3(1)R 3(1)
S,2(5), SC/ST PA Act 1989;ದಿನಾಂಕ 12.04.2017 ರಂದು ಮದ್ಯಾಹ್ನ 12:00 ಗಂಟೆಗೆ ಪಿಯರ್ಾದಿ
ಶ್ರೀಮತಿ ಲಕ್ಷ್ಮಿ ಗಂಡ ಕಾಶಿನಾಥ ಚಲುವಾದಿ ವ:20 ವರ್ಷ ಜಾ:ಹಿಂದು ಚಲುವಾದಿ ಉ:ಕೂಲಿಕೆಲಸ ಸಾ:ಬೂದಿಹಾಳ
ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ
ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನತವರೂರು ಮುದ್ದೆಬಿಹಾಳ
ತಾಲೂಕಿನ ನಾವದಗಿ ಗ್ರಾಮವಾಗಿದ್ದು ನನಗೆ ಸುಮಾರು 4 ವರ್ಷಗಳ ಹಿಂದೆ ಬೂದಿಹಾಳ ಗ್ರಾಮದ ಕಾಶಿನಾಥ ತಂದೆ ಬಸಪ್ಪ ಚಲುವಾದಿ
ಇವರೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ನನ್ನ ಮದುವೆಯಾಗಿದ್ದು ನಂತರ ನನ್ನ ಗಂಡನು ಬೂದಿಹಾಳ
ಗ್ರಾಮದ ಕುರುಬ ಜನಾಂಗದವಳಾದ ಪಾರ್ವತಿ ತಂದೆ ಮಲ್ಲಪ್ಪ ಕರಿಬಂಡಿ ಇವಳಿಗೆ ಕರೆದುಕೊಂಡು
ಓಡಿಹೋಗಿದ್ದು ಬಳಿಕ ನಾನು ನನ್ನ ತವರು ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡೆನು ನನ್ನ ಗಂಡನು
ಪಾರ್ವತಿಯನ್ನು ಓಡಿಸಿಕೊಂಡು ಹೋದ ಘಟನೆಯ ಬಗ್ಗೆ ಕೊಡೆಕಲ್ಲ ಠಾಣೆಯಲ್ಲಿ ಕೇಸು ಆಗಿ ನನ್ನ
ಗಂಡನಿಗೆ ಅರೆಸ್ಟ ಮಾಡಿ ಜೈಲಿಗೆ ಕಳುಹಿಸಿದ್ದರಿಂದ ನನ್ನ ಗಂಡನು ಕೊರ್ಟನಿಂದ ಜಾಮಿನು ಆದ ಬಳಿಕ
ನಾವದಗಿ ಗ್ರಾಮಕ್ಕೆ ಬಂದು ನನ್ನ ಸಂಗಡ ತವರು ಮನೆಯಲ್ಲಿ ಉಳಿದುಕೊಂಡಿದ್ದನು ಆಗ ನಾನು
ಗಬರ್ಿಣಿಯಾಗಿದ್ದು ನಾನು ಗಭರ್ಿಣಿಯಾದ ಸಂದರ್ಭದಲ್ಲಿ ನನ್ನ ಗಂಡನು ನನ್ನ ಮತ್ತೆ ಬಿಟ್ಟು
ಪಾರ್ವತಿಯನ್ನು ಓಡಿಸಿಕೊಂಡು ಹೋಗಿರುತ್ತಾನೆ ನಂತರ ನಾನು ಹೆಣ್ಣುಮಗುವಿಗೆ ಜನ್ಮನೀಡಿದ್ದು
ಅದಕ್ಕೆ ಭೂಮಿಕಾ ಅಂತಾ ಹೆಸರಿಟ್ಟಿದ್ದು ಸದ್ಯ ಒಂದು ವರ್ಷದ ವಯ್ಯಸಿನದ್ದು ಇತ್ತು.
ಸುಮಾರು 15-20 ದಿನಗಳ ಹಿಂದೆ ನನ್ನ ತವರು ಮನೆಯವರು ನನಗೆ ಇಂದಿಲ್ಲ
ಅಥವಾ ಮುಂದಾದರು ನಿನ್ನ ಸಂಸಾರಿಕ ಜೀವನ ಸುದ್ದು ಆಗುತ್ತದೆ ಅಂತಾ ಹೇಳಿ ನನಗೆ ನನ್ನ ಗಂಡನ ಊರಾದ
ಬೂದಿಹಾಳ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದು ನಾನು ಇಲ್ಲಿ ಬೂದಿಹಾಳಕ್ಕೆ ಬಂದು ನನ್ನ ಗಂಡನ
ಮನೆಯಲ್ಲಿ ನಮ್ಮ ಅತ್ತೆ ಮಲ್ಲಮ್ಮ ಮಾವ ಬಸಪ್ಪ , ಮೈದುನ ಪರಶುರಾಮ , ನೇಗೆಣಿ
ಹುಲಗಮ್ಮ, ನಾದಿನಿ ಮಹಾದೇವಿ, ಇವರೊಂದಿಗೆ ನನ್ನ ಮಗಳನ್ನು ಕರೆದುಕೊಂಡು
ವಾಸವಿದ್ದೇನು. ಮನೆಯಲ್ಲಿ ನನ್ನ ಅತ್ತೆ, ಮಾವ,
ಮೈದುನ, ನೇಗೆಣಿ, ನಾದಿನಿ ಇವರುಗಳು ನನಗೆ ನೀನು ಮತ್ತೆ ಯಾಕೆ ಇಲ್ಲಿ ಬಂದು ಇದ್ದಿಯಾ ನಿನ್ನ ಗಂಡಾ ಅಂತು ಬೇರೆ
ಕುರುಬ ಜನಾಂಗದ ಪಾರ್ವತಿಯೊಂದಿಗೆ ಓಡಿ ಹೋಗಿದ್ದು ನೀನು ಯಾಕೆ ನಮಗೆ ಮೂಲ ಆಗಿದ್ದಿಯಾ ನಿನಗೆ
ನಮ್ಮ ಆಸ್ತಿಯಲ್ಲಿ ಯಾವುದೆ ಪಾಲು ಬಿಟ್ಟುಕೊಡುವದಿಲ್ಲ ನಿನ್ನ ಮಗಳು ನೀನು ಎಲ್ಲಿಯಾದರೂ ಹೋಗಿ
ಸಾಯಿರಿ ಇಲ್ಲದಿದ್ದರೆ ಇಲ್ಲಿಯೆ ನಿಮ್ಮನ್ನು ಖಲಾಸ ಮಾಡಿ ಊತಹಾಕುತ್ತೇವೆ ಅಂತಾ
ಬೈದಾಡುತ್ತಿದ್ದರು. ಮತ್ತು ನನ್ನ ಗಂಡಿನಿಗೂ ಪೋನ
ಮೂಲಕ ಮಾತಾಡಿದ್ದು ನನ್ನ ಗಂಡ ಮತ್ತು ಅವನೊಂದಿಗೆ ಓಡಿ ಹೋದ ಪಾರ್ವತಿ ಇವರು ಸಹ
ಅವರುಗಳೀಗೆ ನನಗೆ ಮತ್ತು ನನ್ನ ಮಗಳಿಗೆ ಖಲಾಸ ಮಾಡಿಬಿಡರಿ ಅಂತಾ ಅನ್ನುತ್ತಿದ್ದರು. ಆದರೂ ನಾನು
ನನ್ನ ಗಂಡ ಇಂದಿಲ್ಲ ನಾಳೆ ನನ್ನೊಂದಿಗೆ ಸಂಸಾರ ಮಾಡಬಹುದು ಅಂತಾ ಇಲ್ಲಿಯೇ ಉಳಿದುಕೊಂಡೆನು. ನಮಗೆ
ಬೂದಿಹಾಳ ಮತ್ತು ಕೊಡೆಕಲ್ಲ ಸೀಮಾಂತರದಲ್ಲಿ ನನ್ನ ಗಂಡನ ಮನೆಯವರ ಒಟ್ಟು 6 ಎಕರೆ ಜಮೀನು ಇದ್ದು ಈ ಜಮೀನಿನಲ್ಲಿ ನನಗೆ ಮತ್ತು
ನನ್ನ ಮಗಳಿಗೆ ಯಾವುದೆ ಪಾಲು ಕೊಡಬಾರದು ಅಂತಾ ಅವರುಗಳು ಅವರವರಲ್ಲಿ ಮಾತನಾಡಿಕೊಳ್ಳುತ್ತಿದ್ದರು.
ದಿನಾಂಕ 11.04.2017 ರಂದು ರಾತ್ರಿ
ನಾವುಗಳೆಲ್ಲರೂ ಊಟ ಮಾಡಿ ನಮ್ಮ ಅತ್ತೆ, ಮಾವ,
ನಾದಿನಿ ಮಹಾದೇವಿ ಇವರೊಂದಿಗೆ ನಮ್ಮ ಮನೆಯ
ಮುಂದಿನ ಅಂಗಳದಲ್ಲಿ ನಾನು ನನ್ನ ಮಗಳಾದ ಭೂಮಿಕಾ ವ: 01 ವರ್ಷ ಇವಳಿಗೆ ಕರೆದುಕೊಂಡು ಮಲಗಿಕೊಂಡಿದ್ದು ನನ್ನ ಮೈದುನ
ಪರಶುರಾಮ ಆತನ ಹೆಂಡತಿ ಹುಲಗಮ್ಮ ಇವರು ಮನೆಯ ಒಳಗೆ ಮಲಗಿಕೊಂಡಿದ್ದರು ನಾನು ನನ್ನ ಮಗಳಿಗೆ ರಾತ್ರಿ 11:00 ಗಂಟೆಯ ಸುಮಾರಿಗೆ ಮೊಲೆ ಹಾಲುಕುಡಿಸಿ ಮಲಗಿಸಿದೇನು ನಂತರ ನನಗೆ
ಸುಮಾರು ರಾತ್ರಿ 1:00 ಗಂಟೆಯ
ಸುಮಾರಿಗೆ ಎಚ್ಚರವಾದಾಗ ನನ್ನ ಮಗಳಿಗೆ ಪಕ್ಕದಲ್ಲಿ ನೋಡಲಾಗಿ ಇರಲಿಲ್ಲ ಹಾಗೂ ನನ್ನ ಸಂಗಡ
ಮಲಿಗಿಕೊಂಡಿದ್ದ ನನ್ನ ಅತ್ತೆ, ಮಾವ ,
ನಾದಿನಿ , ಮನೆಯಲ್ಲಿ ಮಲಗಿಕೊಂಡಿದ್ದ ನನ್ನ ನೇಗೆಣಿ ಮತ್ತು ಮೈದುನ ರವರು
ಇರಲಿಲ್ಲ ಆಗ ನಾನು ಗಾಬರಿಗೊಂಡು ಮನೆಯ
ಸುತ್ತಮುತ್ತಾ ಹುಡುಕಾಡುತ್ತಿರುವಾಗ ಇವರೆಲ್ಲರೂ
ಬಂದರು. ಇವರಿಗೆ ನಾನು ನನ್ನ ಮಗಳು ಕಾಣಸುತ್ತಿಲ್ಲ ಅಂತಾ ತಿಳಿಸಿದಾಗ ಇಲ್ಲೆ ಎಲ್ಲಿಯಾದರು ಇರಬಹುದು
ಹುಡುಕಾಡು ಅಂತಾ ಹೇಳಿ ಹೋಗಿ ಮಲಗಿಕೊಂಡರು ದಿನಾಂಕ 12.04.2017 ರಂದು ಮುಂಜಾನೆ ಮತ್ತೆ ನನ್ನ ಮಗಳಿಗೆ ನಮ್ಮೂರಿನಲ್ಲಿ ಮತ್ತು
ಸುತ್ತಮುತ್ತಲಿನಲ್ಲಿ ಹುಡುಕಾಡುತ್ತಿದ್ದಾಗ ನಮ್ಮ ಸಂಬಂದಿಕರಾದ ಚಂದ್ರಶೇಖರ ತಂದೆ ಮರೆಪ್ಪ
ಚಲುವಾದಿ, ಮಾರುತಿ ತಂದೆ ಸೋಮಪ್ಪ
ಚಲುವಾದಿ ಇವರು ನನಗೆ ನಿಮ್ಮ ಮಗಳು ಹೊರಟ್ಟಿ
ಬ್ರಿಡ್ಜ ಕೆಳಗಡೆ ಇದೆ ಅಂತಾ ತಿಳಿಸಿದರು ಈ ವಿಷಯವನ್ನು ನಾನು ನನ್ನ ತವರೂರಾದ ನಾವದಗಿಗೆ ಪೋನ ಮಾಡಿ ನನ್ನ ತಂದೆ
ಶಾಂತಪ್ಪ ಹಾಗೂ ನನ್ನ ದೊಡ್ಡಪ್ಪ ಪರಸಪ್ಪ ಮತ್ತು ನಮ್ಮ ಸಂಬಂದಿಕರಿಗೆ ತಿಳಿಸಿ ನಂತರ ನಾವು
ಹೊರಟ್ಟಿ ಬ್ರಿಡ್ಜ ಕೆಳಗಡೆ ಹೋಗಿ ನೋಡಲಾಗಿ ಆಗ
ಅಂದಾಜು ಮುಂಜಾನೆ 9-00 ಗಂಟೆ
ಆಗಿತ್ತು. ನನ್ನ ಮಗಳು ಬೋರಲಾಗಿ ಶವವಾಗಿ ಬಿದ್ದಿದ್ದಳು ನನ್ನ ಮಗಳಿಗೆ ತಿರುವಿ ಹಾಕಿ ನೋಡಲಾಗಿ
ಕುತ್ತಿಗೆಗೆ ನನ್ನ ಮಗಳು ಧರಿಸಿದ ಪ್ಯಾಂಟನ್ನು ಬಿಗಿದಿದ್ದು ನನ್ನ ಮಗಳಿಗೆ ಕಾಲು ಕೈಗಳಿಗೆ,
ಕುಂಡಿ ಚೆಪ್ಪಿಗೆ ತರುಚಿದ ಗಾಯವಾಗಿದ್ದು,
ಮತ್ತು ಬಾಯಿಯಿಂದ ರಕ್ತಬಂದಿದ್ದು
ಇರುತ್ತದೆ.ಸ್ವಲ್ಪ ಹೊತ್ತಿನಲ್ಲಿಯೇ ನಾವದಗಿಯಿಂದ ನನ್ನ ತಂದೆ ಶಾಂತಪ್ಪ ದೊಡ್ಡಪ್ಪ ಪರಸಪ್ಪ,
ತಮ್ಮ ಭೀಮರಾಯ, ಮತ್ತು ನಮ್ಮ ಅಣ್ಣತಮ್ಮಕೀಯ ಬಸಪ್ಪ ತಾಯಿ ಮಾನವ್ವ, ಪರಸಪ್ಪ ತಂದೆ ಛತ್ರಪ್ಪ, ಲಕ್ಷಿಂಬಾಯಿ ಗಂಡ ಇಜ್ಜಪ್ಪ, ಮತ್ತು ನಮ್ಮೂರ ಗೌಡರಾದ ಭೀಮನಗೌಡ ತಂದೆ ಅಪ್ಪಣ್ಣ ದೇಸಾಯಿ ಹಾಗೂ
ಇತರರು ಬಂದಿದ್ದು ಅವರು ಕೂಡಾ ನನ್ನ ಮಗಳ ಶವವನ್ನು ನೋಡಿದ್ದು ನನ್ನ ಗಂಡ ಕಾಶಿನಾಥ ತಂದೆ ಬಸಪ್ಪ
ಚಲುವಾದಿ, ಅವನೊಂದಿಗೆ ಓಡಿ ಹೋದ ಕುರುಬ
ಜಾತಿಯ ಪಾರ್ವತಿ ತಂದೆ ಮಲ್ಲಪ್ಪ ಕರಿಬಂಡಿ,
ಪಾರ್ವತಿಯ ತಾಯಿಯಾದ ರೇಣವ್ವ ಗಂಡ
ಮಲ್ಲಪ್ಪ ಕರಿಬಂಡಿ ಇವರ ಪ್ರಚೋದನೆ ಮತ್ತು
ಕುಮ್ಮಕ್ಕಿನಿಂದ ನನ್ನ ಅತ್ತೆ ಮಲ್ಲಮ್ಮ ಗಂಡ ಬಸಪ್ಪ ಚಲುವಾದಿ , ಮಾವ ಬಸಪ್ಪ ತಂದೆ ಚಂದಪ್ಪ ಚಲುವಾದಿ, ಮೈದುನ ಪರಶುರಾಮ ತಂದೆ ಬಸಪ್ಪ ಚಲುವಾದಿ, ನೇಗೆಣಿ ಹುಲಗಮ್ಮ ಗಂಡ ಪರಶುರಾಮ ಚಲುವಾದಿ, ನಾದಿನಿ ಮಹಾದೇವಿ ಗಂಡ ಸಂಗಪ್ಪ ಚಲುವಾದಿ ಇವರುಗಳು
ನಾನು ದಿನಾಂಕ 11.04.2017 ರಂದು
ರಾತ್ರಿ ನಿದ್ದೆಯಲ್ಲಿ ಇದ್ದಾಗ ಪಕ್ಕದಲ್ಲಿ ಮಲಗಿದ್ದ ನನ್ನ ಮಗಳಿಗೆ ತಗೆದುಕೊಂಡು ಹೋಗಿ
ಕುತ್ತಿಗೆಗೆ ನನ್ನ ಮಗಳು ತೊಟ್ಟ ಪ್ಯಾಂಟಿನಿಂದ ಬಿಗಿದು ಕೊಲೆಮಾಡಿ ಕೆ.ಬಿ.ಜೆ.ಎನ್.ಎಲ್ ಕಾಲುವೆಯ
ಹೊರಟ್ಟಿ ಬ್ರಿಡ್ಜ ಕೆಳಗೆ ಮುಳ್ಳಿನ ಕಂಟಿಯಲ್ಲಿ ಬೊರಲುಮಾಡಿ ಹಾಕಿರುತ್ತಾರೆ. ಕಾರಣ ನನ್ನ ಮಗಳು
ಜೀವಂತ ಇದ್ದರೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ನಾನು ನನ್ನ ಮಗಳಿಗೆ ಕರೆದುಕೊಂಡು
ಮಲಗಿಕೊಂಡಾಗ ನಾನು ಸಂಪೂರ್ಣ ನಿದ್ರೆಯಲ್ಲಿ ಇದ್ದಾಗ ನನ್ನ ಗಂಡ ಕಾಶಿನಾಥ ತಂದೆ ಬಸಪ್ಪ ಚಲುವಾದಿ,
ಅವನೊಂದಿಗೆ ಓಡಿ ಹೋದ ಕುರುಬ ಜಾತಿಯ ಪಾರ್ವತಿ
ತಂದೆ ಮಲ್ಲಪ್ಪ ಕರಿಬಂಡಿ, ಪಾರ್ವತಿಯ ತಾಯಿಯಾದ ರೇಣವ್ವ ಗಂಡ ಮಲ್ಲಪ್ಪ
ಕರಿಬಂಡಿ ಇವರ ಪ್ರಚೋದನೆ ಮತ್ತು ಕುಮ್ಮಕ್ಕಿನಿಂದ
ನನ್ನ ಅತ್ತೆ ಮಲ್ಲಮ್ಮ ಗಂಡ ಬಸಪ್ಪ ಚಲುವಾದಿ , ಮಾವ ಬಸಪ್ಪ ತಂದೆ ಚಂದಪ್ಪ ಚಲುವಾದಿ, ಮೈದುನ ಪರಶುರಾಮ ತಂದೆ ಬಸಪ್ಪ ಚಲುವಾದಿ, ನೇಗೆಣಿ ಹುಲಗಮ್ಮ ಗಂಡ ಪರಶುರಾಮ ಚಲುವಾದಿ, ನಾದಿನಿ ಮಹಾದೇವಿ ಗಂಡ ಸಂಗಪ್ಪ ಚಲುವಾದಿ ಇವರುಗಳು ನನ್ನ ಮಗಳಿಗೆ
ತಗೆದುಕೊಂಡು ಹೋಗಿ ಕೊಲೆ ಮಾಡಿದ್ದು ಅವರ ಕಾನೂನು ಪ್ರಕಾರ ಕ್ರಮ ಜರುಗಿಸ ಬೇಕುಅಂತಾ ಸಾರಾಂಶದ
ಮೇಲಿಂದ ಠಾಣೆಯ ಗುನ್ನೆ 26/2017 ಕಲಂ 143.109.366(ಎ),506,302, ಸಂಗಡ 149
ಐಪಿಸಿ ಸಂಗಡ 3(1)ಖ, 3(1) ಖ,2(5), ಖಅ/ಖಖಿ ಕಂ ಂಛಿಣ 1989 ನೇದ್ದರ
ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
ಗೋಗಿ
ಪೊಲೀಸ್ ಠಾಣೆ ಗುನ್ನೆ ನಂ. 48-2017 ಕಲಂ, 87 ಕೆ.ಪಿ.ಆ್ಯಕ್ಟ್
;- ದಿನಾಂಕ: 12/04//2017 ರಂದು 6:15 ಪಿಎಮ್ ಕ್ಕೆ ಮಾನ್ಯ ಶ್ರೀ. ಕೃಷ್ಣಾ ಸುಬೇದಾರ ಪಿಎಸ್ಐ ಗೋಗಿ ಠಾಣೆ ಸಾಹೇಬರು 4 ಜನ ಆರೋಪಿತರು ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ
ಬಂದು ಒಂದು ಜಪ್ತಿ ಪಂಚನಾಮೆ, ವರದಿ
ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ, ಇಂದು
ದಿನಾಂಕ: 12/04/2017 ರಂದು 04:30
ಪಿಎಮ್ ಕ್ಕೆ ಠಾಣೆಯಲ್ಲಿದ್ದಾಗ ಖಚಿತ ಭಾತ್ಮೀ
ಮೇರೆಗೆ ಇಬ್ಬರೂ ಪಂಚರು ಸಿಬ್ಬಂದಿಯವರೊಂದಿಗೆ ಗೋಗಿಯಿಂದ ಹೋರಟು ಗೋಗಿಪೇಟ ಗ್ರಾಮಕ್ಕೆ 04:45
ಪಿಎಂ ಕ್ಕೆ ಹೋಗಿ ಅಲ್ಲಿ ಮರೆಮ್ಮ ಗುಡಿಯ
ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ
ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ
ಪಡಿಸಿಕೊಂಡು ಪಂಚರ ಸಮಕ್ಷಮ 05:00 ಪಿಎಮ್
ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 4 ಜನರು ಸಿಕ್ಕಿಬಿದ್ದಿದ್ದು, ಒಟ್ಟು 1500/- ರೂ, ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 05:00 ಪಿಎಮ್ ದಿಂದ 06:00 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡಿದ್ದು ಮುಂದಿನ ಕ್ರಮ
ಕುರಿತು 06.15 ಪಿಎಂ ಕ್ಕೆ ಹಾಜರಾಗಿ
ವರದಿ ಕೊಟ್ಟು ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ಎಪ್
ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 48/2017 ಕಲಂ, 87 ಕೆ.ಪಿ.
ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು