Police Bhavan Kalaburagi

Police Bhavan Kalaburagi

Monday, June 14, 2021

BIDAR DISTRICT DAILY CRIME UPDATE 14-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-06-2021

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 07/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 13-06-2021 ರಂದು ಫಿರ್ಯಾದಿ ಗುಂಡಮ್ಮಾ ಗಂಡ ವೈಜಿನಾಥ ಪಾಂಡೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಪಂಡರಗೇರಾ, ತಾ: ಬಸವಕಲ್ಯಾಣ ರವರ ಮಗನಾದ ಪ್ರೇಮ @ ಶಾಮರಾವ ತಂದೆ ವೈಜಿನಾಥ ಪಾಂಡೆ ವಯ: 12 ವರ್ಷ ಈತನು ಸಂಬಂಧಿಕರ ಗ್ರಾಮವಾದ ಸಸ್ತಾಪೂರದಲ್ಲಿ ಅವರ ಹೊಲದಲ್ಲಿದ್ದ ಮನೆಯಲ್ಲಿ ಮನೆಯ ಪಡಸಾಲೆಯಲ್ಲಿ ಕುಳಿತಿರುವಾಗ ಒಂದು ವಿಷಕಾರಿ ಹಾವು ಮಗನಿಗೆ ಕಡೆದಾಗ ಆತನಿಗೆ ಖಾಸಗಿ ಚಿಕಿತ್ಸೆ ಕುರಿತು ನಾರಾಯಣಪೂರಕ್ಕೆ ಹೋಗಿ ಅಲ್ಲಿಂದ ಸರಕಾರಿ ಆಸ್ಪತ್ರೆಗೆ ತಂದಾಗ ಚಿಕಿತ್ಸೆ ಫಲಕಾರಿಯಾಗದೇ ಪ್ರೇಮ ಈತನು ಮೃತಪಟ್ಟಿರುತ್ತಾನೆ, ತನ್ನ ಮಗನ ಸಾವಿನ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 90/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 12-06-2021 ರಂದು ಫಿರ್ಯಾದಿ ಅಶ್ವಿನಿ ಗಂಡ ಸಂತೋಷರಡ್ಡಿ ವಯ: 27 ವರ್ಷ, ಸಾ: ಔರಾದ(ಸಿರ್ಸಿ), ಸದ್ಯ: ಕರಡಿಮಾಲ್ ಬೀದರ ರವರ ಗಂಡ ಸಂತೋಷರಡ್ಡಿ ತನ್ನ ಖಾಸಗಿ ಕೆಲಸ ಕುರಿತು ಅಮಲಾಪೂರಕ್ಕೆ ಹೋಗುತ್ತೆನೆಂದು ಹೇಳಿ ಮನೆಯಿಂದ ತನ್ನ ಮೋಟಾರ ಸೈಕಲ್ ನಂ ಕೆಎ-38/ವ್ಹಿ-4801 ನೇದರ ಮೇಲೆ ಅಮಲಾಪೂರ ಕಡೆಯಿಂದ ಬೀದರ ಕಡೆ ಬರುತ್ತಿರುವಾಗ ಹಿಂದಿನಿಂದ ಅಂದರೆ ಅಮಲಾಪೂರ ಕಡೆಯಿಂದ ಕಾರ ನಂ ಕೆಎ-38/ಎಮ್-3886 ನೇದರರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗು ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದು ಸಂತೋಷ ರಡ್ಡಿ ಇವರು ಬರುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರ ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಸಂತೋಷರಡ್ಡಿ ಇವರಿಗೆ ತಲೆಗೆ ಭಾರಿಗಾಯವಾಗಿ ರಕ್ತ ಸುರಿದಿರುತ್ತದೆ, ಸದರಿ ಘಟನೆ ಶ್ರೀನಿವಾಸ ರೆಡ್ಡಿ ತಂದೆ ಬಾಲರೆಡ್ಡಿ ರವರು ನೋಡಿ 108 ಅಂಬುಲೇನ್ಸ ಕರೆಯಿಸಿ ಅಂಬುಲೇನ್ಸ್ ಬಂದಾಗ ನೋಡಿ ಸಂತೋಷರಡ್ಡಿ ಇತನು ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 36/2021, ಕಲಂ. 457, 380 ಐಪಿಸಿ:-

ದಿನಾಂಕ 12-06-2021 ರಂದು 2100 ಗಂಟೆಯಿಂದ ದಿನಾಂಕ 13-06-2021 ರಂದು 0500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಸತೀಶ ಂದೆ ಸಂಗಪ್ಪಾ ಹಾಸಗೊಂಡಾ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಶಾಹಪುರ ಗ್ರಾಮ, ತಾ:ಜಿ: ಬೀದರ ರವರ ಮನೆಯ ಕೀಲಿ ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯ ಅಲಮಾರಾ ಲಾಕರ್ ಮುರಿದು ಒಳಗೆ ಇದ್ದ 1) ನಗದು ಹಣ 80,000/- ರೂ., 2) 5 ಗ್ರಾಂ ಬಂಗಾರದ ಒಂದು ಉಂಗುರು .ಕಿ 20,000/- ರೂ., 3) 5 ತೋಲೆ ಬೆಳ್ಳಿಯ 5 ಉಂಗುರು .ಕಿ 3000/- ರೂ., ಹೀಗೆ ಒಟ್ಟು 1,03,000/- ರೂ. ಬೆಲೆ ಬಾಳುವ ಬಂಗಾರ, ಬೆಳ್ಳಿ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 32/2021, ಕಲಂ. 279, 338 ಐಪಿಸಿ :-

ದಿನಾಂಕ 13-06-2021 ರಂದು ಫಿರ್ಯಾದಿ ಪ್ರಕಾಶ ತಂದೆ ವಿದ್ಯಾವಾನ ಪಾಂಚಾಳ ವಯ: 28 ವರ್ಷ, ಜಾತಿ: ಪಾಂಚಾಳ, ಸಾ: ಹಾಲಹಳ್ಳಿ ರವರ ಅಣ್ಣ ಲೋಕೇಶ ತಂದೆ ವಿದ್ಯಾವಾನ ವಯ: 36 ವರ್ಷ, ಜಾತಿ: ಪಾಂಚಾಳ, ಸಾ: ಹಾಲಹಳ್ಳಿ, ಸದ್ಯ: ಹುಲಸೂರ ಇತನು ಸೆಂಟ್ರಿಂಗ ಕೆಲಸ ಕುರಿತು ಹುಲಸೂರದಿಂದ ಜಾಮಖಂಡಿಗೆ ನ್ನ ಪ್ಯಾಶನ ಪ್ರೋ ಮೋಟರ ಸೈಕಲ ನಂ. ಕೆಎ-56/-4810 ನೇದರ ಮೇಲೆ ಹುಲಸೂರು ರೋಡ ಮುಖಾಂತರ ಜಾಮಖಂಡಿಗೆ ಹೋಗುತ್ತಿರುವಾಗ ಶಾಹಜನಿ ಔರಾದ-ಭಾಲ್ಕಿ ರೋಡಿನ ಮೇಲೆ ಜಾಮಖಂಡಿ ಗ್ರಾಮದ ವಚೀಲಾಬಾಯಿ ಗಂಡ ಪುಂಡಲಿಕರಾವ ಬಿರಾದಾರ ರವರ ಹೊಲದ ಹತ್ತಿರ ಶಹಜಾನಿ ಔರಾದ ಕಡೆಯಿಂದ ಕಾರ ನಂ. ಕೆಎ-03/ಎನ್ಎ-4358 ನೇದರ ಚಾಲಕನಾದ ಆರೋಪಿ ವಿಜಯ ರೆಡ್ಡಿ ತಂದೆ ಮುಕುಂದ ರೆಡ್ಡಿ ಸೆರಿಕರ ವಯ: 33 ವರ್ಷ, ಜಾತಿ: ರೆಡ್ಡಿ, ಸಾ: ಬೇಮಳಖೇಡಾ, ತಾ: ಚಿಟಗುಪ್ಪಾ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಲೋಕೇಶ ಈತನಿಗೆ ಬಲಗಾಲಿನ ಮೊಳಕಾಲು ಕೆಳಗೆ ಭಾರಿ ರಕ್ತಗಾಯ, ಬಲಗೈ ಹೆಬ್ಬೆರಳಿಗೆ ಭಾರಿ ರಕ್ತಗಾಯ ಮತ್ತು ಬೆನ್ನಿಗೆ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಅಣ್ಣ ರೂಪೇಶ ಮತ್ತು ಜಾಮಖಂಡಿ ಗ್ರಾಮದ ಗೋರಖ ಜಾಧವ ಇಬ್ಬರೂ ಕೂಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹುಲಸೂರು ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ಲೋಕೇಶ ಇತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಸವಕಲ್ಯಾಣಕ್ಕೆ ಕರೆದುಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. 279, 337, 338 ಐಪಿಸಿ ಜೋತೆ 187 ಐ.ಎಮ್.ವಿ ಕಾಯ್ದೆ :-  

ದಿನಾಂಕ 13-06-2021 ರಂದು ಫಿರ್ಯಾದಿ ಪ್ರವೀಣಕುಮಾರ ತಂದೆ ಸುಭಾಷ ಕಟ್ಟೆ ಸಾ: ಶಹಾಪೂರ ಗೇಟ್, ಬೀದರ ರವರು ತನ್ನ ತಾಯಿ ಸಂಗಮ್ಮಾ ಗಂಡ ಸುಭಾಷ ಕಟ್ಟೆ ಇಬ್ಬರು ಪಲ್ಸರ ಮೋಟಾರ್ ಸೈಕಲ್ ನಂ. ಕೆಎ-38/ಯು-5318 ನೇದರ ಮೇಲೆ ಬೀದರದಿಂದ ಹುಲಸೂರಕ್ಕೆ ತಾಯಿಯ ಕರ್ತವ್ಯದ ಕುರಿತು ಹೋಗಿ ಹುಲಸೂರ ಆಸ್ಪತ್ರೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಇಬ್ಬರು ಮೋಟಾರ್ ಸೈಕಲ್ ಮೇಲೆ ಹುಲಸೂರದಿಂದ ಬಿಟ್ಟು ಭಾಲ್ಕಿ ಮಾರ್ಗವಾಗಿ ಬೀದರಗೆ ಬರುತ್ತಿರುವಾಗ ಭಾಲ್ಕಿ ಬೀದರ ರೋಡಿನ ಲಾಲಬಾಗ ದರ್ಗಾ ದಾಟಿ ಸ್ವಲ್ಪ ಮುಂದೆ ಬಂದಾಗ ಹಿಂದುಗಡೆಯಿಂದ ಒಬ್ಬ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಳಾಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ್ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗೈ ಭುಜಕ್ಕೆ ಗುಪ್ತಗಾಯ, ಬಲಗಾಲಿಗೆ ಮತ್ತು ಎಡಗಾಲಿಗೆ, ಎಡಗೈಗೆ ತರಚಿದ ಗಾಯಗಳಾಗಿರುತ್ತವೆ ಮತ್ತು ತಾಯಿ ಸಂಗಮ್ಮಾ ರವರಿಗೆ ತಲೆಯ ಎಡಭಾಗದಲ್ಲಿ, ಹಣೆಯ ಎಡಭಾಗದಲ್ಲಿ, ಎಡಕಿವಿಗೆ, ಎಡ ಮೇಲಕಿನ ಹತ್ತಿರ ಭಾರಿ ರಕ್ತಗಾಯ ಮತ್ತು ಎಡ ಮತ್ತು ಬಲಗಣ್ಣಿನ ಹತ್ತಿರ ರಕ್ತಗಾಯಗಳಾಗಿ ಮಾತನಾಡಲಾರದ ಸ್ಥಿತಿಯಲ್ಲಿ ಇದ್ದರು, ಡಿಕ್ಕಿ ಪಡಿಸಿದ ವಾಹನ ಚಾಲಕ ತನ್ನ ವಾಹನ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ. ಅಷ್ಟರಲ್ಲಿ ಪರಿಚಯಸ್ಥರಾದ ಬಸವರಾಜ ತಂದೆ ವೈಜಿನಾಥ ಚಾರೆ ಯರನಳ್ಳಿ ಮತ್ತು ರೋಸ್ ಪ್ಲೇಮಿನ್ ತಂದೆ ವಿಜಯಕುಮಾರ ಚಿಕಪೇಟ್ ಗ್ರಾಮ ರವರು ಘಟನೆ ನೋಡಿ ಫಿರ್ಯಾದಿಯವರ ಹತ್ತಿರ ಬಂದು  ಗಾಯಗೊಂಡ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬೀದರ ಭಾಲ್ಕೆ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.