Police Bhavan Kalaburagi

Police Bhavan Kalaburagi

Saturday, February 29, 2020

BIDAR DISTRICT DAILY CRIME UPDATE 29-02-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-02-2020

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 26-02-2020 ರಂದು ಫಿರ್ಯಾದಿ ಸೊನುಬಾಯಿ ಗಂಡ ಕಾಳು ಮೂಳೆ ಸಾ: ಔರಾದ(ಬಿ) ರವರ ಮಗನಾದ ಮುನ್ನಾ @ ರಂಜು ತಂದೆ ಕಾಳು ಮೂಳೆ ವಯ: 22 ವರ್ಷ, ಜಾತಿ: ಮುತಗಾರ ಇತನು ಸರಾಯಿ ಕುಡಿದ ನಶೆಯಲ್ಲಿ ಸಾರಾಯಿ ಬಾಟಲಿ ಒಡೆದು ತನ್ನ ಹೊಟ್ಟೆಗೆ ಹಾಗೂ ಕುತ್ತಿಗೆಗೆ ಗಾಯಮಾಡಿಕೊಂಡಿದ್ದರಿಂದ ಅವನಿಗೆ ಔರಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ನಂತರ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಮತರ ಔರಾದಕ್ಕೆ ಮನೆಗೆ ಕರೆದುಕೊಂಡು ಬಂದಿದ್ದು, ನಂತರ 28-02-2020 ರಂದು ಮುನ್ನಾ ಇತನಿಗೆ ಬೇನೆ ಹೆಚ್ಚಾಗಿದ್ದರಿಂದ ಚಿಕಿತ್ಸೆ ಕುರಿತು ಔರಾದ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ಆಂಬುಲೇನ್ಸನಲ್ಲಿ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಆತನ ಸಾವಿನಲ್ಲಿ ಯಾರ ಮೇಲೆ ಯಾವುದೇ ದೂರು ಸಂಶಯವಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 12/2020, ಕಲಂ. 279, 304 () ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 28-02-2020 ರಂದು ಫಿರ್ಯಾದಿ ಗೋದಾವರಿ ಗಂಡ ಅಂಗದರಾವ ಬಿರಾದಾರ ವಯ: 50 ವರ್ಷ, ಜಾತಿ: ಮರಾಠಾ, ಸಾ: ದೇವನಾಳ, ತಾ: ಹುಲಸೂರ ರವರ ಗಂಡನಾದ ಅಂಗದರಾವ ತಂದೆ ಕೃಷ್ಣಾಜಿ ಬಿರಾದಾರ ರವರು ಬಸವಕಲ್ಯಾಣ-ಹುಲಸೂರ ರಸ್ತೆಯ ಶಿವಾಜಿ ಚೌಕ ಹತ್ತಿರ ರಸ್ತೆಯ ಮೇಲೆ ಸೈಕಲ್ ಚಲಾಯಿಸಿಕೊಂಡು ಹುಲಸೂರಕ್ಕೆ ಹೋಗುವಾಗ ಟಿಪ್ಪರ ನಂ. ಕೆಎ-33/-5661 ನೇದರ ಚಾಲಕನಾದ ಆರೋಪಿಯು ತನ್ನ ಟಿಪ್ಪರ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಂಗದರಾವ ರವರು ಚಲಾಯಿಸುತ್ತಿರುವ ಸೈಕಲಿಗೆ ಹಿಂದಿನಿಂದ ಡಿಕ್ಕಿ ಮಾಡಿದಾಗ ಅಂಗದರಾವ ರವರು ಕೆಳಗೆ ಬಿದ್ದಾಗ ಟಿಪ್ಪರನ ಬಲಗಡೆಯ ಮುಂದಿನ ತ್ತು ಹಿಂದಿನ ಟೈರ ದೇಹದ ಮೇಲಿಂದ ಹೋಗಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ನಂತರ ಆರೋಪಿಯು ತನ್ನ ಟಿಪ್ಪರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 18/2020, ಕಲಂ. 498(), 306 ಜೊತೆ 34 ಐಪಿಸಿ :-
ದಿನಾಂಕ 28-02-2020 ರಂದು ಫಿರ್ಯಾದಿ ಶಾಂತಾಬಾಯಿ ಗಂಡ ನಾಗಪ್ಪಾ ಉದೆಯಕಾರ ವಯ: 65 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಹೇರೂರ (ಕೆ), ತಾ: ಚಿತ್ತಾಪೂರ, ಜಿ: ಕಲಬುರಗಿ ರವರ ಮಗಳಾದ ಸಮುದ್ರಾಬಾಯಿ ಇವಳಿಗೆ 10 ವರ್ಷಗಳ ಹಿಂದೆ ಶರಣನಗರ ಗ್ರಾಮದ ಸತೀಶ ತಂದೆ ಅರ್ಜುನ ಅಣಕಲ ಇವನ ಜೋತೆ ಸಂಪ್ರದಾಯವಾಗಿ ಮದುವೆ ಮಾಡಿಕೊಟ್ಟಿದ್ದು, ಸಮುದ್ರಬಾಯಿ ಇವಳಿಗೆ ಒಂದು ಮಗು ಆಗುವವರೆಗೆ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡು ನಂತರ ಅವಳಿಗೆ ಆರೋಪಿತರಾದ ಅತ್ತೆ ಜಗದೇವಿ ಮತ್ತು ನಾದಿನಿ ಸಂಗೀತಾ ಹಾಗೂ ಗಂಡ ಸತೀಷ ಎಲ್ಲರೂ ಅವಳಿಗೆ ನೀನು ನಾವು ಹೇಳಿದ ಹಾಗೆ ಕೇಳುತ್ತಿಲ್ಲ, ನಿನಗೆ ಅಡುಗೆ ಮಾಡಲು ಬರುವುದೇ ಇಲ್ಲಾ, ನಾವು ಇಲ್ಲಿತನಕ ನಿನಗೆ ಇಟ್ಟಿಕೊಂಡಿದ್ದೆ ಹೆಚ್ಚು ಅಂತ ಬೈಯುವುದು ಮೈಮೇಲೆ ಬಿದ್ದು ಹೊಡೆಯುದು ಮಾಡುತ್ತಿದ್ದರು, ಮಗಳ ಅತ್ತೆ ಅವಳಿಗೆ ನೀನಿದ್ದರೆಷ್ಟು ಸತ್ತರೆಷ್ಟು ನಿಮ್ಮಪ್ಪನ ಮನೆಗೆ ಓಡಿಸಿಕೊಟ್ಟರೆ ನಮಗೆ ಯಾರು ಕೇಳೊರು ಅಂತ ಕೂದಲು ಹಿಡಿದು ಹೊಡೆಯುತ್ತಿದ್ದಳು, ಅಣ್ಣನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂತ ನಾದನಿ ಇವಳು ಕೈಗಳು ವತ್ತಿ ಹಿಡಿದು ಒಡಿಮುರಿಯುತ್ತಿದ್ದಳು, ಗಂಡ ನೇಲಕ್ಕೆ ಹಾಕಿ ಹೊಡೆ ಬಡೆ ಮಾಡಿ, ನಿನು ಸತ್ತರೆ ಛಲೋ ಆಗುತ್ತದೆ ಅಂತಾ ಕಿರುಕುಳ ಕೊಡುತ್ತಿದ್ದರು, ಸದರಿ ವಿಷಯದ ಮಗಳು ಫಿರ್ಯಾದಿಗೆ ಹೇಳಿದಾಗ ಅಳಿಯನಿಗೆ ಮತ್ತು ಮನೆಯವರಿಗೆ ಬುದ್ದಿವಾದ ಹೇಳಿ ಹೋದ ಮೇಲೆ ತದನಂತರ ಸ್ವಲ್ಪ ದಿವಸ ಚನ್ನಾಗಿ ನೋಡಿಕೊಂಡಿದ್ದು ಇರುತ್ತದೆ. ನಂತರ ದಿನಾಂಕ 28-02-2020 ರಂದು ಫಿರ್ಯಾದಿಯವರ ಮಗ ಗುರುನಾಥ ಇತನಿಗೆ ಅಳಿಯ ಕರೆ ಮಾಡಿ ತಿಳಿಸಿದೆನೆಂದರೆ 1100 ಗಂಟೆಗೆ ನಾವ್ಯಾರು ಮನೆಯಲ್ಲಿ ಇಲ್ಲದಿದ್ದಾಗ ನಿಮ್ಮ ತಂಗಿ ಮನೆಯಲ್ಲಿ ಬೇಹೋಶ ಆಗಿ ಬಿದ್ದಿದ್ದು, ಆಗ ಪಕ್ಕದ ಮನೆಯ ಕಾವೇರಿ ಇವಳು ನನಗೆ ಕರೆ ಮಾಡಿದಾಗ ನಾನು ಮನೆಗೆ ಬಂದು ನೋಡಿ ಅವಳಿಗೆ ಮುಡಬಿ ಸರಕಾರಿ ಆಸ್ಪತ್ರೆಗೆ ತಂದಿರುತ್ತೆನೆ ಇಲ್ಲಿ ವೈದ್ಯರು ಸಮುದ್ರಾಬಾಯಿ ಇವಳು ತೀರಿಕೊಂಡಿರುತ್ತಾಳೆ ಅಂತಾ ಹೇಳಿದ್ದು, ಆಗ ಫಿರ್ಯಾದಿಯು ತನ್ನ ಸೊಸೆ ಸಂಗೀತಾ ಹಾಗೂ ಮೈದುನ ಅಪ್ಪಾರಾವ ತಂದೆ ಶರಣಪ್ಪ ಉದಯಕರ ಹಾಗೂ ಮಗ ಜಗನ್ನಾಥ ಎಲ್ಲರು ಸೇರಿ ಮುಡಬಿ ಸರಕಾರಿ ಆಸ್ಪತ್ರೆಗೆ ಬಂದಾಗ ಮಗಳು ಸಮುದ್ರಾಬಾಯಿ ಇವಳು ಮೃತಪಟ್ಟಿದ್ದು ನಿಜವಿರುತ್ತದೆ, ಫಿರ್ಯಾದಿಯವರ ಮಗಳು ಸಮುದ್ರಾಬಾಯಿ ಇವಳು ದಿನಾಂಕ 28-2-2020 ರಂದು 0900 ಗಂಟೆಯಿಂದ 1100 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಗಂಡ, ಅತ್ತೆ, ನಾದಿನಿ ಎಲ್ಲರು ಕೂಡಿ ನೀಡುವ ಮಾನಸೀಕ ಹಾಗೂ ದೈಹಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮನೆಯಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾಳೆಂದು ಕೊಟ್ಟ ಪಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 68/2020, ಕಲಂ. 498(), 323, 504 ಜೊತೆ 34 ಐಪಿಸಿ :-
ಫಿರ್ಯಾದಿ ಸಾವಿತ್ರಾ ಗಂಡ ಸುನೀಲ ಸಾಳುಂಕೆ, ವಯ: 25 ವರ್ಷ, ಜಾತಿ: ಘಿಸಾಡಿ, ಸಾ: ಶಹಾಜಾನಿ ಔರಾದ, ತಾ: ನಿಲಂಗಾ, ಸದ್ಯ: ಅಂಬೇಡ್ಕರ ಚೌಕ ಹತ್ತಿರ, ಭಾಲ್ಕಿ ರವರ ತಾಯಿ ದಿನಾಂಕ 30-12-2013 ರಂದು ಶಹಾಜಾನಿ ಔರಾದನ ಸುನೀಲ ಸಾಳುಂಕೆ ಇತನೊಂದಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ, ಗಂಡನ ಮನೆಯಲ್ಲಿ ಗಂಡ ಸುನೀಲ, ಮಾವ ಅಂಕುಶ, ಅತ್ತೆ ಜೀಜಾಬಾಯಿ ರವರು ವಾಸವಾಗಿದ್ದು, ಮದುವೆಯಾದ ತಿಂಗಳವರೆಗೆ ಮನೆಯವರೆಲ್ಲ ಸರಿಯಾಗಿ ನೋಡಿಕೊಂಡು ನಂತರದಿಂದ ಗಂಡ ಸುನಿಲ ಇತನು ದಿನನಿತ್ಯವಾಗಿ ಸರಾಯಿ ಕುಡಿದುಕೊಂಡು ಹೊಡೆ-ಬಡೆ ಮಾಡಿರುತ್ತಾನೆ ಹಾಗೂ ಅತ್ತೆ ಜೀಜಾಬಾಯಿ 50 ವರ್ಷ, ಮಾವ ಅಂಕುಶ 60 ವರ್ಷ ಇವರೆಲ್ಲರು ನೀನು ನೋಡಲು ಚೆನ್ನಾಗಿಲ್ಲ, ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತ ಮಾನಸೀಕವಾಗಿ ಹಿಂಸೆ ಮಾಡುತ್ತಾ ಮತ್ತು ಕಿರುಕುಳ ಕೊಡುತ್ತಿರುತ್ತಾರೆ, ಫಿರ್ಯಾದಿಯು ಸದರಿ ವಿಷಯದ ಬಗ್ಗೆ ತಮ್ಮ ತಾಯಿಗೆ ತಿಳಿಸಿದ್ದು, ಅದಕ್ಕೆ ತಾಯಿಯವರು ಕೂಡ ಗಂಡ ಮತ್ತು ಗಂಡನ ಮನೆಯವರಿಗೆ ನನ್ನ ಮಗಲಿಗೆ ಚೆನ್ನಾಗಿ ನೋಡಿಕೊಳ್ಳಿರಿ ಅಂತ ಹೇಳಿರುತ್ತಾರೆ, ಆದರೆ ಪದೆ ಪದೆ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಅತ್ತೆ ಫಿರ್ಯಾದಿಗೆ ದಿನ ನಿತ್ಯವಾಗಿ ಅವಾಚ್ಯ ಶಬ್ದಗಳಿಂದ ಬೈಯುವದು, ಕಾಲಿನಿಂದ ಒದೆಯುವದು, ಹೊಡೆಯುವದು ಮತ್ತು ಮಾವ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿರುತ್ತಾರೆ, ಫಿರ್ಯಾದಿಯು ಹಬ್ಬ ಹರಿದಿನಗಳಲ್ಲಿ ಭಾಲ್ಕಿಯನ್ನ ತವರಿಗೆ ಬಂದಾಗ ಇಲ್ಲಿಗೆ ಬಂದು ಎಲ್ಲರೂ ಹಡೆಬಡೆ ಮಾಡಿ ಜಗಳ ಮಾಡಿರುತ್ತಾರೆ, ಆದ್ದರಿಂದ ಫಿರ್ಯಾದಿಯು ಅವರ ಕಿರುಕುಳ ತಾಳಲಾರದೆ ಒಂದು ತಿಂಗಳಿಂದ ಭಾಲ್ಕಿಯನ್ನ ತವರಿನಲ್ಲಿಯೇ ವಾಸವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 31/2020, ಕಲಂ. 186, 384, 511 ಐಪಿಸಿ :-
ದಿನಾಂಕ 31-12-2019 ರಂದು ಸನ್ಮಾನ್ಯ ಶ್ರೀ ಪ್ರಭು ಚವ್ಹಾಣ, ಪಶು ಸಂಗೋಪನಾ ಮತ್ತು ವಕ್ಫ ಸಚಿವರು ಹಾಗು ಬೀದರ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕರ್ನಾಟಕ ಸರ್ಕಾರ ಬೆಂಗಳೂರು ರವರು ಬೀದರದ ಪ್ರಾದೇಶಿಕ ಸಾರಿಗೆ ಅಧೀಕಾರಿಗಳ ಕಛೇರಿಗೆ ಭೇಟ್ಟಿ ನೀಡಿದ್ದು ಅಂದು ಫಿರ್ಯಾದಿ ಕೆ.ಟಿ ವಿಶ್ವನಾಥ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬೀದರ ರವರು ರಜೆಯ ಮೇಲಿದ್ದು, ಅಂದಿನ ಶ್ರೀ ಎಮ್.ಹೆಚ ರಘು ಮೋಟರ ವಾಹನ ನಿರೀಕ್ಷಕರು ಇವರು ಪ್ರಭಾರಿ ಆರ್.ಟಿ. ಎಂದು ಕರ್ತವ್ಯದ ಮೇಲಿದ್ದರು, ಅಂದು ಸಚಿವರು ಭೇಟಿ ನೀಡಿದ ಕಾಲಕ್ಕೆ ಕಛೇರಿಯ ಕೆಲವು ಅವ್ಯವಸ್ಥೆಯ ಬಗ್ಗೆ ಮಾತನಾಡಿ ಅದನ್ನು ಸರಿಪಡಿಸಲು ಕೆಲವೊಂದು ಸೂಚನೆಗಳನ್ನು ನೀಡಿರುತ್ತಾರೆ ಅದರಂತೆ ಫಿರ್ಯಾದಿಯವರ ನಂತರದ ದಿನಗಳಲ್ಲಿ ಮಾನ್ಯ ಸಚಿವರು ನೀಡಿದ ಸೂಚನೆಗಳನ್ನು ಪಾಲಿಸಿದ್ದು ಇರುತ್ತದೆ, ಇದಾದ ಒಂದು ವಾರದ ನಂತರ ಕೆಲವು ಜನರು ನಾನು ಸಚಿವರ ಆಪ್ತನಿದ್ದೇನೆ, ಅವರ ಪಿ. ಇದ್ದೇನೆ, ಅವರ ಬಲಗೈ ಬಂಟನಾಗಿದ್ದೇನೆ ಸಚಿವರಿಗೆ ನಾನೇ ಆರ್.ಟಿ. ಕಛೇರಿಗೆ ಕರೆದುಕೊಂಡು ಬಂದಿರುತ್ತೇನೆ, ನಿಮ್ಮ ಕಛೇರಿಯ ಬಗ್ಗೆ ತುಂಬಾ ದೂರುಗಳಿರುತ್ತವೆ ಅವುಗಳನ್ನು ಇಲ್ಲಿಯೇ ಮುಚ್ಚಬೇಕೇ ಅಥವಾ ಅದರ ಬಗ್ಗೆ ಕ್ರಮ ಕೈಕೊಳ್ಳಬೇಕೆ ಎಂದು ಪದೇ ಪದೇ ಫಿರ್ಯದಿಯವರಿಗೆ ಬೇರೆ ಬೇರೆ ನಂಬರಗಳಿಂದ ಕರೆ ಮಾಡಿ ಕೇಳಿರುತ್ತಾರೆ, ಅದಕ್ಕೆ ಫಿರ್ಯಾದಿಯು ಉತ್ತರವಾಗಿ ನಮ್ಮ ಕಛೇರಿಗೆ ಸಂಬಂಧಿಸಿದಂತೆ ಅಂತಹ ಯಾವುದೇ ದೂರುಗಳಿದ್ದರೇ ತೋರಿಸಿ ಅದಕ್ಕೆ ಸೂಕ್ತ ಉತ್ತರ ಕೊಡಲಾಗುವುದೆಂದು ಹೇಳಿದ್ದು ನಂತರದಲ್ಲಿ ಫಿರ್ಯಾದಿಯು ಖುದ್ದಾಗಿ ಮಾನ್ಯ ಸಚಿವರ ಕಛೇರಿಗೆ ಭೇಟ್ಟಿ ನೀಡಿ ಅಲ್ಲಿದ್ದ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯವರಿಗೆ ಬಗ್ಗೆ ವಿಚಾರಿಸಲಾಗಿ ಅವರು ನಮ್ಮ ಕಛೇರಿಯಲ್ಲಿ ಅಂತಹ ಯಾವುದೇ ವ್ಯಕ್ತಿಗಳಿಲ್ಲ ನಿಮಗ್ಯಾರೋ ಮೋಸ ಮಾಡಲು ರೀತಿ ಕರೆ ಮಾಡಿರಬಹುದೆಂದು ಅವರು ತಿಳಿಸಿರುತ್ತಾರೆ, ಈಗ ಸುಮಾರು 20-25 ದಿವಸಗಳ ಹಿಂದೆ ಬಿ-ಟಿವಿ ನ್ಯೂಸ ಚಾನಲದ ಜಿಲ್ಲಾ ವರದಿಗಾರರಾದ ಶ್ರೀ ಓಂಕಾರ ಮಠಪತಿ ರವರು ಆರ್.ಟಿ. ಕಛೇರಿಗೆ ಭೇಟ್ಟಿ ನೀಡಿ ಸಚಿವರು ನಿಮ್ಮ ಕಛೇರಿಗೆ ಭೇಟ್ಟಿ ನೀಡಿದ್ದು ಇದರ ಉದ್ದೇಶವೇನಿರಬಹುದು? ಅಂತ ಪದೇ ಪದೇ ಕೇಳಿದ್ದು ಅದಕ್ಕೆ ಫಿರ್ಯಾದಿಯು ಉತ್ತರವಾಗಿ ಅವರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಸರ್ಕಾರಿ ಕಛೇರಿಗಳಿಗೆ ಭೇಟ್ಟಿ ನೀಡಿ ಸೂಚನೆಗಳು ನೀಡುವುದು ಮತ್ತು ದೂರುಗಳಿದ್ದರೇ ಅದನ್ನು ಬಗೆಹರಿಸುವುದು ಅವರ ದೈನಂದಿನ ಕೆಲಸವಿದ್ದು ಬಗ್ಗೆ ನಾನೇನು ಹೇಳಲು ಆಗುವುದಿಲ್ಲ ಎಂದು ಅವರಿಗೆ ಹೇಳಿದ್ದು, ನಂತರ ಎರಡನೇ ಪ್ರೆಶ್ನೆಯಾಗಿ ಹಾಗಿದ್ದಲ್ಲಿ ಅವರ ಪಿ. ಎಂದು, ಬಲಗೈ ಬಂಟರೆಂದು ನಿಮ್ಮನ್ನು ಯಾರಾದರೂ ಕಾಲ್ ಮಾಡಿ ಬ್ಲಾಕಮೇಲ್ ಮಾಡಲು ಪ್ರಯತ್ನ ಮಾಡಿದ್ದಾರಾ ಎಂದು ಪದೇ ಪದೇ ಕೇಳಲಾಗಿ ಪಿ. ಎಂದು, ಬಲಗೈ ಬಂಟ ಎಂದು ಯಾರೋ ಕರೆ ಮಾಡಿದ್ದು ನಿಜ ಸಚಿವರು ಬಂದು ಹೋದ ಮೇಲೆ ಸುಮಾರು ಕರೆಗಳು ಬಂದಿರುತ್ತವೆಂದು ಹೇಳಿದ್ದು, ಅದಕ್ಕೆ ಮಠಪತಿ ರವರು ಪದೇ ಪದೇ ಕಾಲ್ ಮಾಡ್ಲಿಕೆ ಅವರ ಡಿಮ್ಯಾಂಡ್ ಏನಾದರೂ ಇದ್ದಿರಬಹುದಾ ಎಂದು ಕೇಳಲಾಗಿ ಅನಧೀಕೃತ ವ್ಯಕ್ತಿಗಳು ಪದೇ ಪದೇ ರೀತಿ ಕರೆ ಮಾಡುತ್ತಿದ್ದಾರೆಂದರೇ ಇರಬಹುದೇನೋ ಇನ್ನೇನು ಇರ್ಲಿಕ್ಕೆ ಸಾಧ್ಯ ಅಂತ ಹೇಳಿದ್ದು, ಆದರೇ ಎಲ್ಲಿಯೂ ಸಹ ಮಾನ್ಯ ಸಚಿವರ ಬಗ್ಗೆಯಾಗಲೀ ಅಥವಾ ಅವರ ಸಿಬ್ಬಂದಿಯವರ ಬಗ್ಗೆಯಾಗಲಿ ಅವರು ಹಣ ಡಿಮ್ಯಾಂಡ್ ಮಾಡಿರುತ್ತಾರೆಂದು ಎಲ್ಲಿಯೂ ಯಾರ ಮುಂದೆಯೂ ಹೇಳಿರುವುದಿಲ್ಲ, ಅದಾದ ನಂತರ ಅಂದರೇ ಈಗ ಸುಮಾರು 15-20 ದಿನಗಳಿಂದ ಓಂಕಾರ ಮಠಪತಿ ರವರು ಬೇರೆ ಬೇರೆ ಮೋಬೈಲಗಳಿಂದ ಫಿರ್ಯಾದಿಯವರಿಗೆ ಮತ್ತು ಅರುಣ ಟೆಕ್ರಾಜ್ ಹೋಮಗಾರ್ಡ ಸಿಬ್ಬಂದಿ ರವರಿಗೆ ಕರೆ ಮಾಡಿ ನಿಮ್ಮ ಕಛೇರಿಯ ಮೇಲೆ ಕಂಪ್ಲೇಂಟ್ಸ್ಇದೆ ಬಗ್ಗೆ ನನ್ನ ಬಳಿ ವಿಡಿಯೋ ರಿಕಾರ್ಡಿಂಗ್ ಇದೆ ನಾನು ರಿಕಾರ್ಡಿಂಗ್ ಅನ್ನು ನ್ಯೂಸ್ ಚಾನೆಲದಲ್ಲಿ ಪ್ರಸಾರ ಮಾಡಬಾರದೆಂದರೇ ನೀವು ನನಗೆ 50,000/- ಹಣ ಕೊಡಬೇಕೆಂದು ಒತ್ತಾಯಿಸಿರುತ್ತಾನೆ, ಫಿರ್ಯಾದಿಯವರು ಅವರಿಗೆ ಹಣ ಕೊಡದೇ ಇದ್ದಾಗ ಅವರು ನಿರಂತರವಾಗಿ ಕರೆ ಮಾಡುತ್ತಾ ನೀವು ನನಗೆ ಹಣ ಕೊಡದಿದ್ದರೇ ನಿಮ್ಮ ಕಛೇರಿಯಲ್ಲಿ ಹೇಗೆ ಕೆಲಸ ಮಾಡುತ್ತೀರೋ ನೋಡೋಣ ಎಂದು ಹೆದರಿಸಿ ಮಾನಸಿಕವಾಗಿ ಹಿಂಸಿಸಿ ಸರ್ಕಾರಿ ಕರ್ತವ್ಯದಲ್ಲಿ ಅಡೆ ತಡೆ ಉಂಟು ಮಾಡಿರುತ್ತಾರೆ, ಅವರು ಫಿರ್ಯಾದಿಯವರಿಗೆ ಸಾಕಷ್ಟು ಒತ್ತಾಯ ಮಾಡಿದರೂ ಸಹ ಫಿರ್ಯಾದಿಯಾಗಲಿಲೀ ಅಥವಾ ಅರುಣ ಹೋಮಗಾರ್ಡ ರವರಾಗಲೀ ಓಂಕಾರ ಮಠಪತಿ ರವರಿಗೆ ಯಾವುದೇ ರೀತಿಯ ಹಣ ನೀಡಿರುವುದಿಲ್ಲ ಅವರು ಪ್ರತಿಸಾರಿ ಹಣ ಕೇಳಿದ್ದು ಕರೆ ಮುಖಾಂತರವೇ, ಆದ್ದರಿಂದ ಅವರು ಹಣ ಕೇಳಿದಕ್ಕೆ ಫಿರ್ಯಾದಿಯವರ ಬಳಿ ಯಾವುದೇ ದಾಖಲೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 35/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 28-02-2020 ರಂದು ಫಿರ್ಯಾದಿ ಮಾರುತಿರಾವ ತಂದೆ ಭೀಮರಾವ ಚವಾಣ, ಜಾತಿ: ಮರಾಠಾ, ಸಾ: ಚಿಟಗುಪ್ಪಾ ರವರು ತನ್ನ ತಮ್ಮನಾದ ಈಶ್ವರ ಇಬ್ಬರೂ ಚಿಟಗುಪ್ಪಾ ಪಟ್ಟಣದಲ್ಲಿ ಶಿವಾಜಿ ಜಯಂತಿ ಪ್ರಯುಕ್ತ ಶಿವಾಜಿ ಚೌಕ ಹತ್ತಿರ ಇರುವಾಗ ಅತ್ತಿಗೆಯಾದ ಶಶಿಕಲಾ ಗಂಡ ಈಶ್ವರ ಚವಾಣ ವಯ: 55 ವರ್ಷ ರವರು ಪ್ರೀಯಾರ್ದಶನಿ ಕಾಲೋನಿಯಿಂದ ನಡೆದುಕೊಂಡು ಬರುವಾಗ ಪ್ರೀಯಾರ್ದಶನಿ ಕಾಲೋನಿ-ಚಿಟಗುಪ್ಪಾ ರೋಡ ಗುಣವಂತ ಡಾಕ್ಟರ ರವರ ಹೊಲದ ಹತ್ತಿರ ರೋಡಿನ ಮೇಲೆ ಎದುರಗಡೆಯಿಂದ ಅಂದರೆ ಚಿಟಗುಪ್ಪಾ ಕಡೆಯಿಂದ ಬಂದ ಯಾವುದೋ ಒಂದು ವಾಹನದ ಚಾಲಕನ್ನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ವಾಹನ ಸಮೇತ ಡಿ ಹೋಗಿರುತ್ತಾನೆ, ಸದರಿ ಘಟನೆಯಿಂದ ಅತ್ತಿಗೆ ಶಶಿಕಲಾ ರವರಿಗೆ ತಲೆಗೆ ರಕ್ತಗಾಯ, ಬಲಗಡೆ ಹಣೆಗೆ ರಕ್ತಗಾಯ, ಎರಡು ಮೊಳಕಾಲಿಗೆ, ಎರಡು ಕಾಲುಗಳ ಹೆಬ್ಬೆರಳಿಗೆ, ಎರಡು ಭುಜಕ್ಕೆ ತರಚಿದ ಗಾಯ, ಎಡ ಮುಂಗೈಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿ ಬೇಹುಷವಾಗಿದ್ದರಿಂದ ಅವರಿಗೆ ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 25/2020, ಕಲಂ. 32, 34 ಕೆ.ಇ ಕಾಯ್ದೆ :-  
ದಿನಾಂಕ 28-02-2020 ರಂದು ಖಾನಾಪೂರ[ಕೆ] ವಾಡಿ ಕ್ರಾಸ ಡಿ.ಕೆ ಧಾಬಾದ ಹತ್ತಿರ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಹಳದಿ ಬಣ್ಣದ ಪ್ಲಾಸ್ಟೀಕ್ ಚೀಲದಲ್ಲಿ ಸರಾಯಿವುಳ್ಳ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡುತಿದ್ದಾನೆಂದು ಕರೆ ಮುಖಾಂತರ ಮಾರುತಿ .ಎಸ್. ಬಸವಕಲ್ಯಾಣ ನಗರ ಪೊಲೀಸ್ ಠಾಣೆ  ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಡಿ.ಕೆ ಧಾಬಾದ ಹತ್ತಿರ ಹೋಗಿ ನೋಡಲು ಬಾತ್ಮಿಯಂತೆ ಆರೋಪಿ ರಾಜಕುಮಾರ ತಂದೆ ಜಗನ್ನಾಥ ಪಾಟೀಲ್ ವಯ: 38 ವರ್ಷ, ಜಾತಿ: ಕುರುಬ, ಸಾ: ಖಾನಾಪೂರ [ಕೆ] ವಾಡಿ, ತಾ: ಬಸವಕಲ್ಯಾಣ ಇತನು ತನ್ನ ಹತ್ತಿರ ಒಂದು ಹಳದಿ ಬಣ್ಣದ ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡು ಕುಳಿತಿರುವುದನ್ನು ನೋಡಿ ಎಲ್ಲರೂ ಹೋಗಿ ಸದರಿ ಆರೋಪಿತನ ಮೇಲೆ ಒಮ್ಮೆಲೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಗೆ ನಿನ್ನ ಹತ್ತಿರ ಇರುವ ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ? ಎಂದು ವಿಚಾರಿಸಿದಾಗ ಅವನು ಸರಾಯಿವುಳ್ಳ ಬಾಟಲಗಳು ಇವೆ ಎಂದು ತಿಳಿಸಿದಾಗ ನಿನ್ನ ಹತ್ತಿರ ಇರುವ ಸರಾಯಿವುಳ್ಳ ಬಾಟಲಗಳು ಮಾರಾಟ ಮಾಡುವ ಬಗ್ಗೆ ಯಾವುದೇ ರೀತಿ ಲೈಸನ್ಸ್ ಮತ್ತು ದಾಖಲಾತಿ ಇದ್ದರೆ ಹಾಜರ ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದ್ದು, ನಂತರ ಅವನಿಗೆ ನೀನು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾದ ಎಂದು ತಿಳಿಸಿ ಅವನ ಹತ್ತಿರ ಇದ್ದ ಕೆಂಪು ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲು ಅದರಲ್ಲಿ 1) ಓರಿಜಿನಲ್ ಚಾಯಿಸ್ ವಿಸ್ಕಿ 90 ಎಂ.ಎಲ್ ನ 19 ಸರಾಯಿ ಪೌಚಗಳು ಅ.ಕಿ 576.08 ರೂ., 2) ಓಲ್ಡ್ ಟಾವರ್ನ ವಿಸ್ಕಿ 180 ಎಂ.ಎಲ್ ನ 19 ಸರಾಯಿ ಪೌಚಗಳು ಅ.ಕಿ 1408.47 ರೂ., 3) ಮ್ಯಾಕಡಾಲ್ 180 ಎಂ.ಎಲ್ ನ 05 ಸರಾಯಿ ಬಾಟಲಗಲು ಅ.ಕಿ 811/- ರೂ., ಹೀಗೆ ಒಟ್ಟು ಬೆಲೆ 2,795.55 ಇದ್ದು ನೇದವುಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿಗೆ ದಸ್ತಗಿರಿ ಮಾಡಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.