ಅಸ್ವಾಭಾವಿಕ ಸಾವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಶಿವದರ್ಶನ ಕತ್ನಳ್ಳಿ ಸಾ: ಅಫಜಲಪೂರ ರವರ ಗಂಡನಾದ ಶಿವದರ್ಶನ ರವರು ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದರು ನನ್ನ ಗಂಡನು ನಮ್ಮ ಸಂಬಂಧಿಕರಾದ ಹಣಮಂತ ಅಳ್ಳಗಿ ಮತ್ತು ಶಾಂತಮಲ್ಲ ಉಡಚಾಣ ಇವರ ಒಟ್ಟು 14 ಎಕರೆ ಹೊಲವನ್ನು ಪಾಲಿನಂತೆ ಮಾಡಿರುತ್ತಾರೆ ನನ್ನ ಗಂಡನ ಹೊಲದ ಸಾಗುವಳಿಗಾಗಿ ಮತ್ತು ಮನೆಯ ಖರ್ಚಿಗಾಗಿ ಊರ ಮನೆಯವರ ಹತ್ತಿರ ಸುಮಾರು 7 ರಿಂದ 8 ಲಕ್ಷ ರೂಪಾಯಿ ಸಾಲಮಾಡಿಕೊಂಡಿದ್ದರು. ದಿನಾಂಕ 15-09-2019 ರಂದು 8:00 ಪಿ.ಎಮ್ ಕ್ಕೆ ನಾನು ನನ್ನ ಎರಡು ಗಂಡು ಮಕ್ಕಳನ್ನು ಕರೆದುಕೊಂಡು ಅಂಗಡಿಗೆ ಹೋಗಿರುತ್ತೇನೆ ಮರಳಿ 8:30 ಪಿ.ಎಮ್ ಕ್ಕೆ ಮರಳಿ ಮನೆಗೆ ಬಂದು ನೋಡಲಾಗಿ ನನ್ನ ಗಂಡನು ಮನೆಯಲ್ಲಿ ಬಿದ್ದು ಒದ್ದಾಡುತ್ತಿದ್ದನು ಆಗ ನನ್ನ ಗಂಡನಿಗೆ ವಿಚಾರಿಸಿದಾಗ ನನ್ನ ಗಂಡನು ನಾನು ಸಾಲಕ್ಕೆ ಹೆದರಿ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಔಷದಿ ಕುಡಿದಿರುತ್ತೇನೆ ಎಂದು ತಿಳಿದಿದ ಮೇರೆಗೆ ನನ್ನ ಗಂಡನನ್ನು ನಾನು ನನ್ನ ಗಂಡನ ಅಣ್ಣನಾದ ಶಿವಶಿದ್ದ ಪ್ರಸಾದ ಇಬ್ಬರು ಕೂಡಿ ಖಾಸಗಿ ವಾಹನದಲ್ಲಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಲ್ಲಿಂದ ದಿನಾಂಕ 22-09-2019 ರಂದು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ. ನನ್ನ ಗಂಡನು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನಿನ್ನೆ ದಿನಾಂಕ 25-09-2019 ರಂದು ರಾತ್ರಿ 10:30 ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ನನ್ನ ಗಂಡನು ತಾನು ಮಾಡಿದ ಸಾಲಕ್ಕೆ ಹೆದರಿ ಕ್ರಿಮಿನಾಷಕ ಔಷದಿ ಸೇವನೆ ಮಾಡಿ ಆತ್ಮಹತ್ಯ ಮಾಡಿಕೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಅಂಬಿಕಾ ಗಂಡ ಆನಂದ ಸುಂಬಡ ಸಾ||ಹಂಗರಗಾ (ಬಿ) ಗ್ರಾಮ ರವರ ಗಂಡ ಆನಂದ ಇವರ ಹೆಸರಿನಲ್ಲಿ ಹೊಲದ ಸರ್ವೆ ನಂ 68/1 ನೇದ್ದರಲ್ಲಿ 3 ಎಕರೆ ಜಮೀನು ಇರುತ್ತದೆ, ನನ್ನ ಗಂಡ ಹೊಲದ ಸಲುವಾಗಿ ಬಿಳವಾರ ಪಿ.ಕೆ.ಜಿ.ಬಿ ಬ್ಯಾಂಕನಲ್ಲಿ ಸುಮಾರು 70 ಸಾವಿರ ಸಾಲ ಮತ್ತು ಯಡ್ರಾಮಿ ಪಿ.ಕೆ.ಜಿ.ಬಿ ಬ್ಯಾಂಕನಲ್ಲಿ 70 ಸಾವಿರ ಸಾಲ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 14500 ರೂ ಸಾಲ ಹಾಗೂ ಖಾಸಗಿಯಾಗಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು, ನನ್ನ ಗಂಡ ಆನಂದ ಇವರು ಕಳೆದ ಬೇಸಿಗೆಯಲ್ಲಿ ಹೊಲದಲ್ಲಿ ಕಲ್ಲಂಗಡಿ ಬೆಳೆ ಹಾಕಿದ್ದು ಅದರಿಂದ ನನಗೆ ಬಹಳ ಸಾಲವಾಗಿದೇ ಮಳೆಯು ಸಹ ಸರಿಯಾಗಿ ಬಾರದೆ
ಹೊಲದಲ್ಲಿನ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 25-09-2019 ರಂದು ರಾತ್ರಿ ನನ್ನ ಗಂಡ ತಂಬಿಗೆ ತಗೆದುಕೊಂಡು ಬೈಹಿರದೇಸೆಗೆ ಹೋದರು ನಂತರ ಸ್ವಲ್ಪ ಹೊತ್ತಾದ ನಂತರ ನನ್ನ ಗಂಡ ಮನೆಗೆ ಬಂದು ನಾನು ಸಾಲದ ಸಲುವಾಗಿ ವಿಷ ಕುಡಿದಿರುತ್ತೆನೆ ಅಂತಾ ಹೇಳಿ ಒಮ್ಮೇಲೆ ಒದ್ದಾಡಿ ವಾಂತಿ ಮಾಡಿಕೊಂಡರು ಆಗ ನಾನು ಗಾಬರಿಗೊಂಡು ನಾನು ನಮ್ಮ ಮೈದುನಾ ಭೀಮರಾಯ ನಮ್ಮೂರ ಮಲ್ಲಿನಾಥ ತಂದೆ ಬಾಬುರಾಯಗೌಡ ಬಿರಾದಾರ, ಸಿದ್ದುಗೌಡ ತಂದೆ ಗುರಣ್ಣಗೌಡ ಮಾಲಿ ಪಾಟೀಲ ರವರು ಕೂಡಿಕೊಂಡು ನನ್ನ ಗಂಡನಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಹಸನಾಪುರ ಕ್ರಾಸ ಹತ್ತಿ ನಿನ್ನೆ ದಿನಾಂಕ:
25-09-2019 ರಂದು ರಾತ್ರಿ ನನ್ನ ಗಂಡ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.