ಆಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಸಾಗಿಸುತ್ತಿದ್ದವರ
ಬಂಧನ :
ಕಮಲಾಪೂರ ಠಾಣೆ : ದಿನಾಂಕ
13.02.2016 ರಂದು ಬೆಳ್ಳಿಗ್ಗೆ ಕಮಲಾಪೂರ ಗ್ರಾಮ ಸಿಮಾಂತರದ ಓಕಳಿ ಕ್ರಾಸ ಹತ್ತಿರ ಇಬ್ಬರು
ವ್ಯಕ್ತಿಗಳು ಮೋಟಾರ ಸೈಕಲ ಮೇಲೆ ಪ್ಲಾಸ್ಟಿಕ ಚೀಲದಲ್ಲಿ ಶ್ರೀಗಂಧನ ಕಟ್ಟಿಗೆಗಳನ್ನು ಅಕ್ರಮವಾಗಿ
ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಗಜಾನನ್ ಕೆ.ನಾಯಕ
ಪಿ.ಎಸ್.ಐ ಕಮಲಾಪೂರ ಪೊಲೀಸ್ ಠಾಣೆ ಸಿಬ್ಬಂದಿಯವರಾದ
ಕತಲಸಾ ಪಿಸಿ 310, ರಾಜೇಂದ್ರ ರಡ್ಡಿ ಪಿಸಿ 484, ಮಲ್ಲಿಕಾರ್ಜುನ ಪಿಸಿ 1229 ಮತ್ತು ಬಾಬು ಶೇರಿಕಾರ ಪಿಸಿ 333 ರವರು ಹಾಗು ಪಂಚರೊಂದಿಗೆ ಕಮಲಾಪೂರ ದಿಂದ ಓಕಳಿ ಕಡೆಗೆ ಹೋಗುವ ಓಕಳಿ ಕ್ರಾಸ ಹತ್ತಿರ
ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಹಿರೊ ಸ್ಲೇಂಡರ ಮೋಟಾರ ಸೈಕಲ ನಂ ಕೆಎ 32 ಇಸಿ 5284
ನೇದ್ದು ತೆಗೆದುಕೊಂಡು ನಿಂತ್ತಿದ್ದು ಸದರಿ ಮೋಟಾರ ಸೈಕಲ ಮೇಲೆ ಒಂದು ಬಿಳಿ ಪ್ಲಾಸ್ಟಿಕ ಚೀಲ
ಇರುವದನ್ನು ಖಚಿತ ಪಡಿಸಿ ಕೊಂಡು ನಂತರ ಪಿ.ಎಸ್.ಐ. ಸಾಹೇಬರು ಮತ್ತು ಅವರ ಸಿಬ್ಬಂದಿ ಜನರು ನಮ್ಮ
ಸಮಕ್ಷಮ ಸದರಿ ಇಬ್ಬರ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಸದರಿಯವರಿಗೆ ಹಿಡಿದುಕೊಂಡು ಅವರ ಹೆಸರು
ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಪ್ರಕಾಶ ತಂದೆ ಶಿವಪ್ಪ ಕೈಕಡಿ ಸಾ: ಕನಕಟ ತಾ:
ಹುಮನಾಬಾದ ಜಿ: ಬೀದರ 2. ವಿಜಯಕುಮಾರ ತಂದೆ ರಾಮಣ್ಣ ಸಾ: ಬೇಳಕೇರಾ ತಾ:ಹುಮನಾಬಾದ ಜಿ: ಬೀದರ ಅಂತ
ತಿಳಿಸಿದ್ದು ನಂತರ ಸದರಿಯವರಿಗೆ ವಿಚಾರಣೆಗೊಳಪಡಿಸಿದಾಗ ಸದರಿಯವರು ಶ್ರೀಗಂಧದ ಕಟ್ಟಿಗೆಗಳನ್ನು
ಪ್ಲಾಸ್ಟಿಕ ಚೀಲದಲ್ಲಿ ಹಾಕಿಕೊಂಡು ಹೊಗುತ್ತಿರುವ ಬಗ್ಗೆ ತಿಳಿಸಿದ್ದು ನಂತರ ಪಂಚರ ಸಮಕ್ಷಮ
ಸದರಿಯವರ ವಶದಲ್ಲಿದ್ದ ಪ್ಲಾಸ್ಟಿಕ ಚೀಲ ಪರಿಶೀಲಿಸಿ ನೋಡಲು ಪ್ಲಾಸ್ಟಿಕ ಚೀಲದಲ್ಲಿದ್ದ
ಕಟ್ಟಿಗೆಗಳನ್ನು ತುಕಡಿಗಳನ್ನು ಹೊರಗೆ ತೆಗೆದು ನೊಡಲು ಒಟ್ಟು 15 ಕಟ್ಟಿಗೆ ತುಕ್ಕಡಿಗಳಿದ್ದು
ಸದರಿ ಕಟ್ಟಿಗೆಗಳಿಂದ ಸುವಾಸನೆ ಬರುತ್ತಿದ್ದು ಸದರಿ ಕಟ್ಟಿಗೆಗಳು ಶ್ರೀಗಂದನ ಕಟ್ಟಿಗೆಯ
ತುಕ್ಕಡಿಗಳಿದ್ದು ಅವುಗಳ ಪರಿಶೀಲಿಸಿ ನೋಡಲು ಹಸಿ ಶ್ರೀಗಂದಕಟ್ಟಿಗೆ ತುಕಡಿಗಳಿದ್ದು ಸದರಿ ಎಲ್ಲಾ
ಕಟ್ಟಿಗಳ ಮೇಲೆ ಕ್ರ.ಸಂಖೆ 1 ರಿಂದ 15 ಸಂಖೈಗಳನ್ನು ಬರೆದು ಪ್ರತಿಯೊಂದು ಕಟ್ಟಿಗೆ ತುಕಡಿಯನ್ನು
ತೂಕಮಾಡಿ ನೊಡಲು ಒಟ್ಟು 8 ಕಿಲೋ 500 ಗ್ರಾಮ
ತೂಕದ ಶ್ರೀಗಂಧನ ಕಟ್ಟಿಗೆ ಇದ್ದು ಸದರಿ ಶ್ರೀಗಂಧನ ಕಟ್ಟಿಗೆಯ ಅಂದಾಜ ಕಿಮ್ಮತ್ತು 12,000/-
ರೂಪಾಯಿ ಬೇಲೆ ಬಾಳುವದಿದ್ದು ಸದರಿ ಶ್ರೀಗಂಧದ ಕಟ್ಟಿಗೆಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ದಿನಾಂಕ: 13.02.2016 ರಂದು ಬೆಳಗ್ಗೆ 05:00 ಗಂಟೆಗೆ ಮೊತಕಪಲ್ಲಿ ಗ್ರಾಮಸ್ಥರು ಹಾಗು ದೇವಸ್ಥಾನದ ಪೂಜಾರಿಗಳು
ಶ್ರೀ ಬಲಭೀಮಸೇನ ದೇವಸ್ಥಾನ ಮೊತಕಪಲ್ಲಿಯಲ್ಲಿ ಕಳೂವಾದ ಬಗ್ಗೆ ದೂರವಾಣಿ ಮೂಲಕ ಕರೆ ಬಂದ ಕಾರಣ
ಮೊತಕಪಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ಅಂದಾಜು 3 ಕೆಜಿಯ ಬೆಳ್ಳಿ ಪಾದುಕೆಗಳು ಅದರ ಮೌಲ್ಯ ಅಂದಾಜು 1 ಲಕ್ಷ ಹಾಗು ದೇವಸ್ಥಾನದ ಹುಂಡಿಯು ಒಡೆದು ಪಕ್ಕಕ್ಕೆ
ಇಟ್ಟಿರುತ್ತಾರೆ. ಅದರಲ್ಲಿನ ಹಣ ದೇವಸ್ಥಾನದ ಆವರಣದಲ್ಲಿ ಹುಂಡಿಯ ಸುತ್ತಾ ಬಿದ್ದರಿರುತ್ತವೆ. ಈ
ಕೃತ್ಯವು ರಾತ್ರಿ 02:00 ಎ.ಎಮ್ ದಿಂದ 04:00 ಎ.ಎಮ್ ದ ಮಧ್ಯದ ಅವಧಿಯಲ್ಲಿ ಆಗಿರುತ್ತದೆ ಅಂತಾ ಶ್ರೀ ಸುಬ್ಬಣ್ಣಾ
ಜಮಖಂಡಿ ತಹಸೀಲ್ದಾರರು ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.