Police Bhavan Kalaburagi

Police Bhavan Kalaburagi

Sunday, June 16, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-06-2019 ರಂದು ಅಫಜಲಪೂರ ಠಾಣಾ ಹದ್ದಿಯ ಮಾಶಾಳ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿಯವನಿಗೆ ಹಣ ಕೇಳುತ್ತಿದ್ದರು, ಆಗ ಸದರಿಯನು ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದನು. ಆಗ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ದತ್ತು @ ದತ್ತಾತ್ರೇಯ ತಂದೆ ಜೋತಿಬಾ ಕ್ಷತ್ರಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 490/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ಪಡೆದು ಸದರಿವನೊಂದಿಗೆ ಅಫಜಲಪೂರ ಠಾಣೆಗೆ ಬಂದು  ಠಾಣೆ ಗುನ್ನೆ ನಂ 88/2019 ಕಲಂ 78 (3) ಕೆ.ಪಿ ಆಕ್ಟ್ ಮತ್ತು ಕಲಂ 420 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 14/06/2019 ರಂದು ಸಾಯಂಕಾಲ ನನ್ನ ಗಂಡ ಈರಣ್ಣ ಬದ್ರಿ ಈತನು ಎಂದಿನಂತೆ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮಂದೇವಾಲದಿಂದ ಜೇವರಗಿ ಕಡೆಗೆ ಹೋಗಿರುತ್ತಾರೆ. ನಂತರ ರಾತ್ರಿ 9-00 ಘಂಟೆಯ ಸುಮಾರಿಗೆ ನಮ್ಮೂರ ತಂಡಾದ ಅನಿಲ್ ರಾಠೋಡ್ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿನ್ನ ಗಂಡನಾದ ಈರಣ್ಣ ಈತನಿಗೆ ಸಿಂದಗಿ - ವಿಜಯಪೂರ ರೋಡಿನ ಜೇವರಗಿ ಬೈ ಪಾಸ್ ರೋಡಿನ ಹತ್ತಿರ ರಸ್ತೆ ಅಪಘಾತವಾಗಿ ಮೃತಪಟ್ಟಿರುತ್ತಾನೆ. ಕೂಡಲೆ ಬರ್ರಿ ಎಂದು ವಿಷಯ ತಿಳಿಸಿದ್ದರಿಂದ ನಾನು ಮತ್ತು ನನ್ನ ಸವತಿ ಸಂಗೀತಾ ಮತ್ತು ನಮ್ಮ ಮಕ್ಕಳು ಹಾಗು ನಮ್ಮ ಸಂಬಂದಿ ಸಿದ್ದಣ್ಣಗೌಡ ತಂದೆ ಬಸಲಿಂಗಪ್ಪ ಬದ್ರಿ, ಹಾಗು ಸಂಗಣ್ಣಗೌಡ ತಂದೆ ಯಮುನಪ್ಪ ಬದ್ರಿ ಇವರು ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಘಟನೆ ನಿಜವಿದ್ದು, ನನ್ನ ಗಂಡನಿಗೆ ತಲೆಯ ಮೇಲೆ ಭಾರಿ ಘಾಯವಾಗಿ ಎಡ ಕಣ್ಣು ಗುಡ್ಡೆ ಹೊರ ಬಂದಿದ್ದು, ಕಿವಿಯಿಂದ ಬಾಯಿಯಿಂದ ರಕ್ತ ಸ್ರಾವವಾಗುತ್ತಿದ್ದು, ಎರಡು ಕೈಗೆ ತರಚಿದ ರಕ್ತ ಘಾಯವಾಗಿದ್ದು, ಎಡ ಕೈ ಭುಜದ ಹತ್ತಿರ ಕೈ ಮುರಿದಂತೆ ಆಗಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದನು. ಮತ್ತು ಅಲ್ಲಿಯೇ ನನ್ನ ಗಂಡನು ಚಲಾಯಿಸಿಕೊಂಡು ಬಂದಿದ್ದ ಮೋಟಾರ ಸೈಕಲ್ ಬಿದ್ದಿದ್ದು ಅದರ ನಂಬರ್ ಕೆ.-28-.ಸಿ-1747 ಇತ್ತು. ನಂತರ ಸ್ಥಳದಲ್ಲಿ ಜನರು ಅಂದಾಡುವದರಿಂದ ವಿಷಯ ಗೊತ್ತಾಗಿದ್ದೇನೆಂದರೆ; ನನ್ನ ಗಂಡನು ನಮ್ಮ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ:ಕೆ.-28-.ಸಿ-1747 ನೇದ್ದನ್ನು ಚಲಾಯಿಸಿಕೊಂಡು ಕಟ್ಟಿಸಂಗಾವಿ ಕಡೆಗೆ ಹೋಗುತ್ತಿದ್ದಾಗ ಬೈ ಪಾಸ್ ರೋಡಿನ ಹತ್ತಿರ ರಾತ್ರಿ 8-30 ಪಿ.ಎಮ್ ವೇಳೆಗೆ ಎದುರಿನಿಂದ ಯಾವುದೋ ಒಂದು ವಾಹನ ಚಾಲಕನು ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಎದುರಿನಿಂದ ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ನನ್ನ ಗಂಡನು ಭಾರಿ ಘಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಮಲ್ಲಮ್ಮ ಗಂಡ ಈರಣ್ಣ ಬದ್ರಿ ಸಾ; ಕೂಡಲಗಿ ಹಾ. ಮಂದೆವಾಲ ಗ್ರಾಮ ತಾ; ಜೇವರಗಿ ಜಿ; ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆ ಗುನ್ನೆ ನಂ; 122/2019 ಕಲಂ: 279 304 () ಐಪಿಸಿ ಮತ್ತು ಕಲಂ; 187 .ಎಮ್.ವಿ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ಧಾಖಲಿಸಲಾಗಿದೆ
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶರಣು ತಂದೆ ಅಂಬಾರಾಯ ಬಿರೆದಾರ ಸಾ: ಕರಹರಿ ಹಾ:: ಕಮಲನಗರ ಕಲಬುರಗಿ ರವರು ದಿನಾಂಕ 15-06-2019 ರಂದು  ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಸಾಗರ ವೈನಶಾಪ್ಹಿಂದುಗಡೆ ನಾನು ಕಾಲಮಡಿಲಿಕ್ಕೆ ಹೋದಾಗ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಂತೆ ಬಿದಿದ್ದು ನಂತರ ಸಮೀಪ ಹೋಗಿ ನೋಡಲು ವ್ಯಕ್ತಿಯು ಅಂಗಾತವಾಗಿ ಬಿದಿದ್ದು ಅಂದಾಜು ವಯಸ್ಸು 60-65 ಇದ್ದು , ತೆಳ್ಳನೇಯ ದೇಹ . ಸಾದಾಗೆಂಪು ಮೈಬಣ್ಣ ಇದ್ದು ಅಂದಾಜು 5.6 ಎತ್ತರ ಹೊಂದಿದ್ದು ತಲೆಯ ಮೇಲೆ ಎರಡೂವರೆ ಇಂಚ ಕಪ್ಪು ಮತ್ತು ಬಿಳಪು ಕುದಲು ಇದ್ದು ಮತ್ತು ಮೈಮೇಲೆ ಒಂದು ತಿಳಿ ನೀಲಿ ಬಣ್ಣದ ಪ್ಯಾಂಟ , ಒಂದು ಬಿಳಿಬಣ್ಣದ ಬನಿಯನ್‌‌ ಹಾಗು ಒಂದು ನೀಲಿಬಣ್ಣದ ಹಂಡರವಿಯರ್‌‌ ಧರಿಸಿರುತ್ತಾನೆ. ಸದರಿಯವನು ಯಾವುದೋ ಕಾರಣದಿಂದ ಸಾಗರ ವೈನಶಾಪ್‌‌ ಹಿಂದುಗಡೆ ಹೋಗಿ ನಿನ್ನೆ ದಿನಾಂಕ 14/06/2019 ರಾತ್ರಿ 9:00 ಗಂಟೆಯಿಂದ ಇಂದು ದಿನಾಂಕ 15/06/2019 ಬೆಳಗಿನ 8:00 ಗಂಟೆಯ ಮದ್ಯದಲ್ಲಿ ಮೃತಪಟ್ಟಿರುತ್ತಾನೆ. ಸದರಿ ವ್ಯಕ್ತಿಯ ಬಗ್ಗೆ ಯಾವುದೆ ಮಾಹಿತಿ ಇರುವುದಿಲ್ಲಾ. ಸದರಿಯವನು ಅಪರಿಚಿತನಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಬೀರಬಲಸಿಂಗ್ ತಂದೆ ವಿಠಲ ಸಿಂಗ್ ಠಾಕೂರ ಸಾಃ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ರವರ ಮಗನಾದ ಪ್ರೀತಮ ಎಂಬುವನೊಂದಿಗೆ ಕನಕನಗರದ ಸೋಮು ಹಾಗೂ ಚಾಕಲೇಟ್ ಶರಣು ಎಂಬುವರು ನನ್ನ ಮಗನಿಗೆ ವಿನಾ ಕಾರಣ ಜಗಳ ಮಾಡುತ್ತಾ ಬಂದಿರುತ್ತಾರೆ. ವಿಷಯ ಕುರಿತು ನಾನು ಅವರಿಗೆ ಕರೆಯಿಸಿ ಸೂಕ್ತ ತಿಳುವಳಿಕೆ ಹೇಳಿ ಕಳುಹಿಸಿದ್ದು ಆದರೂ ಅವರು ನನ್ನ ಮಗನ ಮೇಲೆ ದ್ವೇಷದಿಂದ ಆಗಾಗ ಗೂರಾಯಿಸಿ ನೋಡುವದು ಅವಾಚ್ಯ ಶಬ್ದಗಳಿಂದ ಬೈಯುವದು ಮಾಡುತ್ತಾ ಬಂದಿರುತ್ತಾರೆ. ಆದರೂ ನಾವು ಸುಮ್ಮನಾಗಿದ್ದೇವೆ. ಮೊನ್ನೆದಿನ ವಿನಾಕಾರಣ ನನ್ನ ಸಂಗಡ ಜಗಳ ತೆಗೆದಾಗ ನಾನು ಕೂಡಾ ಹೀಗೆ ಮಾಡಬಾರದು ಎಂದು ತಿಳಿಸಿ ಹೇಳಿದ್ದು ಇರುತ್ತದೆ. ಹೀಗಿರುವಾಗ ದಿ:14/06/2019 ರಂದು ನನ್ನ ಕುಟುಂಬದ ಸಮಸ್ಯೆ ಕುರಿತು ಹೊರಗಡೆ ಹೋಗಿ ನಮ್ಮ ಸಮಸ್ಯೆ ಬಗೆಹರಿಸಿಕೊಂಡು ಮರಳಿ ನಮ್ಮ ಮನೆಗೆ ಬಂದು ನಮ್ಮ ಕಾರ ನಿಲ್ಲಿಸಿ ನಮ್ಮ ಮನೆಯ ಪಕ್ಕದ ನಿವಾಸಿ ಮರೇಪ್ಪಾ ಎಂಬುವನ ಸಂಗಡ ಮಾತನಾಡುತ್ತಾ ನಮ್ಮ ಮನೆಯ ಎದುರಿನ ರೋಡಿನ ಮೇಲೆ ನಿಂತುಕೊಂಡು ಮಾತನಾಡುತ್ತಿರುವಾಗ ಸೋಮು ಹಾಗೂ ಸಂದೇಶ ಎಂಬುವರು ಬಂದು ವಿನಾಕಾರಣ ನನ್ನ ಮತ್ತು ನನ್ನ ಮಗನೊಂದಿಗೆ ಜಗಳ ತೆಗೆದು ಸೋಮು @ ಸೋಮಶೇಖರ ಇತನು ರಂಡಿ ಮಕ್ಕಳೆ ನಿಮದು ಏರಿಯಾದಲ್ಲಿ ಬಹಳ ಆಗಿದೆ ಎಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಹೊಡೆದು ಬೈಯುತ್ತಿರುವಾಗ ಸಂದೇಶ ಇತನು ಯಾರಿಗೊ ಪೋನ ಮಾಡಿ ಕರೆಯಿಸಿದಾಗ ಪಿನ್ನು, ಗಂಗಾನಗರ ಮಹೇಶ, ಮಲ್ಲು, ಅಂಬರೀಶ, ಶಿವಶರಣ ಸಂಗಡ ಇನ್ನೂ 10-12 ಜನರು ಕೂಡಿ ಬಂದವರೆ ನನಗೆ ಕೊಲೆ ಮಾಡುವ ಉದ್ದೇಶದಿಂದ ಅಲ್ಲೆ ಬಿದ್ದಿರುವ ಪರ್ಶಿಕಲ್ಲನ್ನು ತೆಗೆದುಕೊಂಡು ಸೋಮು & ಸಂದೇಶ ಇವರು ನನ್ನ ತಲೆಯ ಮೇಲೆ ಹಾಕಿ ಭಾರಿ ರಕ್ತಗಾಯ ಪಡಿಸಿರುತ್ತಾರೆ. ಇದನ್ನು ನೋಡಿ ನನ್ನ ತಮ್ಮ ಮದನಸಿಂಗ ಮತ್ತು ಮಗ ಪ್ರೀತಮಸಿಂಗ ಇವರು ಜಗಳ ಬಿಡಿಸುವದಕ್ಕೆ ಬಂದಾಗ ಅವರಿಗೂ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿರುತ್ತಾರೆ. ನಂತರ ನಾವು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ.ಜಗಳದ ಸಮಯದಲ್ಲಿ ನನ್ನ ಹತ್ತಿರಿರುವ 2 ತೋಲೆ ಬಂಗಾರದ ಚೈನ್ ಕಳೆದು ಹೋಗಿರುತ್ತದೆ. ಅಂತಾ ಸಲ್ಲಿಸಿದ  ದೂರು  ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆ ಗುನ್ನೆ ನಂ.66/2019 ಕಲಂ: 143,147, 341,323,325,307,504,506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. 
ಗ್ರಾಮೀಣ ಠಾಣೆ : ಶ್ರೀ ಶರಣಗೌಡ ತಂದೆ ಹಣಮಂತರಾಯ ಪಾಟೀಲ ಸಾ: ವಿಜಯ ನಗರ ಕಾಲೋನಿ ಆಳಂದ ರೋಡ ಕಲಬುರಗಿ ರವರು ತಮ್ಮ ಕಾಲೋನಿಯಲ್ಲಿ ಇರುವ ಶರಣಬಸಪ್ಪಾ ಸ್ವಾಧಿ ಕೂಡಿಕೊಂಡು ಆರೋಗ್ಯ ಕಾಪಾಡಲು ದಿನಾಲೂ ಬೆಳಿಗ್ಗೆ 4-5 ಕೀಲೋ ಮೀಟರ ವಾಕಿಂಗ್ಮಾಡುತ್ತಾ ಬಂದಿರುತ್ತೇವೆ.  ದಿನಾಂಕ 14/06/2019 ರಂದು ಬೆಳಿಗ್ಗೆ 5:00 ಗಂಟೆಗೆ ನಾನು ಬೇಗ ಎದ್ದು ಶರಣಬಸಪ್ಪಾ ಬರುವ ಮುಂಚಿತವಾಗಿ ನಾನು ಒಬ್ಬನೆ ಆಳಂದ ಚೆಕ್ಕಪೊಸ್ಟ್‌‌ ಮೂಲಕ ಡಬರಾಬಾದ ಕ್ರಾಸ ಹತ್ತಿರದಿಂದ ಡಬರಾಬಾದಿಗೆ ಹೊಗುವ ರೋಡ ಕಡೆಗೆ ಬೆಳಗಿನ ಜಾವ 05:15 ಸುಮಾರಿಗೆ ವಾಕಿಂಗ್‌‌ ಮಾಡುತ್ತಾ ಹೊಗುವಾಗ ನನ್ನ ಮುಂದಿನಿಂದ ಅಂದರೆ ಡಬರಾಬಾದ ಕಡೆಯಿಂದ ಒಂದು ಮೋಟರ ಸೈಕಲ ಮೇಲೆ ಇಬ್ಬರು ಬಂದು ನನನ್ನು ತಡೆದು ನಿಲ್ಲಿಸಿ ಯಾವುದೋ ಉದ್ದೇಶದಿಂದ ನನಗೆ ಕೆಡವಿ ಅವಾಚ್ಯವಾಗಿ ಬೈಯುತ್ತಾ ನನಗೆ ಒತ್ತಿ ಹಿಡಿದು ಹೊಡೆಯುತ್ತಿದ್ದಾಗ ನಾನು ಸಹ ಅವರನ್ನು ಯ್ಯಾಕೆ ಹೊಡೆಯುತ್ತಿದ್ದಿರಿ ಅಂತಾ ಕೇಳಿ ನಾನು ಸಹ ಅವರನ್ನು ನೂಕಿಸಿಕೊಡುತ್ತಿದ್ದಾಗ ನಾನು ಕೆಳಗಡೆ ಬಿದ್ದಾಗ ನನ್ನ ಎಡಗಾಲ ಮೋಲಕಾಲಿನ ಕೆಳಗೆ ಮತ್ತು ಎಡಗೈ ಮೊಳಕೈ ಕೆಳಭಾಗದಲ್ಲಿ ಚಾಕುವಿನಿಂದ ಚುಚ್ಚಿ ಗಾಯಮಾಡಿ ಮಗನೇ ವಿಷಯವನ್ನು ಯಾರಿಗೆ ಆದರೂ ಹೇಳಿದರೆ ನಿನಗೆ ಖಲಾಷ ಮಾಢುತ್ತೇವೆ ಅಂತಾ ಹೇಳಿ ತಮ್ಮ ಮೋಟರ ಸೈಕಲ ಸಮೇತ ಓಡಿ ಹೋದರು ಬಹಳ ನಸುಕು ಇರುವುದರಿಂದ ಅವರ ಮೋಟರ ಸೈಕಲ ನಂಬರ ನೋಡಿರುವುದಿಲ್ಲಾ ಅವರ ಅಂದಾಜು ವಯಸ್ಸು 20-25 ಇರಬಹುದು ಅವರನ್ನು ನಾನು ಮುಂದೆ ನೋಡಿದರೆ ಗುರ್ತಿಸುತ್ತೇನೆ. ನಂತರ ನಾನು ನನ್ನ ಹಿಂದುಗಡೆ ಬರುತ್ತಿದ್ದ ಶರಣಬಸಪ್ಪಾ ಇವರನ್ನು ಪೋನ ಮಾಡಿ ವಿಷಯ ತಿಳಿಸಿದಾಗ ಅವರು ಬಂದು ನನಗೆ ಆಸ್ಪತ್ರೆಗೆ ತಂದು ಸೇರಿಕೆ ಮಾಢಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆ : ಶ್ರೀಮತಿ  ಬಸಮ್ಮ ತಂದೆ ಬಸವರಾಜ ಅನ್ನಪೂರ ಮು:ಬೇಳಗೆರಾ ರವರು ಸದ್ಯ ಶಹಾಪೂರದಲ್ಲಿ ಜ್ಞಾನಜ್ಯೋತಿ ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಅಂತಾ ಕೆಲಸ ಮಾಡಿಕೊಂಡು ವಾಸವಾಗಿರುತ್ತೆನೆ. ನಮ್ಮ ಅಣ್ಣ ಮಲ್ಲಪ್ಪ ತಂದೆ ಬಸವರಾಜ ಆತನ ಹೆಂಡತಿ ಲಕ್ಷ್ಮೀ ಗಂಡ ಮಲ್ಲಪ್ಪ ಮತ್ತು ನಮ್ಮ ತಂದೆ ಬೇಳಗೆರಾದಲ್ಲಿ ವಾಸವಾಗಿರುತ್ತಾರೆ. ನನಗೆ ನಮ್ಮ ಅಣ್ಣ ಅತ್ತೆಗೆ ಸರಿಯಾಗಿ ನೋಡಿಕೊಳ್ಳದೆ ಇರುವದರಿಂದ ನಾನು ನಮ್ಮ ತಾಯಿ ನೀಲಮ್ಮ ಇವಳೊಂದಿಗೆ ಕೊಲ್ಲೂರ ಗ್ರಾಮದಲ್ಲಿ ವಾಸವಾಗಿದ್ದು ನಮ್ಮ ತಾಯಿಯ ಮರಣದ ನಂತರ ಶಹಾಪೂರದಲ್ಲಿ ವಾಸವಾಗಿರುತ್ತೆನೆ.  ದಿನಾಂಕ 13/06/2019 ರಂದು ಮದ್ಯಾಹ್ನ 01-00 ಗಂಟೆಗೆ ನಾನು ನನ್ನ ಪುಸ್ತಕಗಳು ಹಾಗೂ ಬಟ್ಟೆ ಬರೆಗಳನ್ನು ತೆಗೆದುಕೊಂಡು ಬರಲು ಬೇಳಗೆರಾ ಗ್ರಾಮದ ನಮ್ಮ ಅಣ್ಣನ ಮನೆಗೆ ಹೋದಾಗ ನಮ್ಮ ಅಣ್ಣನ ಹೆಂಡತಿ ಲಕ್ಷ್ಮೀ ಇವಳು ‘’ ರಂಡಿ ಬೋಸಡಿ ಇಲ್ಲಿ ಯಾಕ ಬಂದಿದ್ದಿ ಅಂತಾ ಬೈದು ಅಲ್ಲೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಬಲತಲೆಗೆ ಹೊಡೆದು ರಕ್ತಗಾಯ ಪಡಿಸಿದಳು ಆಗ ನಮ್ಮ ಅಣ್ಣನು ಸಹ ನನಗೆ ಕೈ ಹಿಡಿದು ಜಗ್ಗಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ. ಆಗ ನಾನು ಜೋರಾಗಿ ಚೀರಿದಾಗ ಅಕ್ಕ ಪಕ್ಕದ ಜನರು ಬಂದು ನಮ್ಮ ಅಣ್ಣ ಹಾಗೂ ಅತ್ತಿಗೆಗೆ ಸಮಜಾಯಿಸಿದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆ ಗುನ್ನೆ ನಂ 63/2019 ಕಲಂ:504,324,354 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.