Police Bhavan Kalaburagi

Police Bhavan Kalaburagi

Wednesday, June 24, 2020

BIDAR DISTRICT DAILY CRIME UPDATE 24-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-06-2020

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 12/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 22-06-2020 ರಂದು ಫಿರ್ಯಾದಿ ರಾಜಕುಮಾರ ತಂದೆ ಶಿವರುದ್ರಪ್ಪಾ ತೇಲಿ ಸಾ: ಸಂಗಮೇಶ್ವರ ಕಾಲೋನಿ ಕೆ..ಬಿ ಲೆಔಟ್ ಬೀದರ ರವರ ಮಗನಾದ ಸತಿಷ ವಯ 22 ವರ್ಷ ಇತನು ಮನೆಯಿಂದ ಹೊರಗೆ ಹೋಗಿ ಗೆಳೆಯರ ಜೊತೆ ತಿರುಗಾಡಿ ಮರಳಿ ಮನೆಗೆ 2030 ಗಂಟೆಗೆ ಬಂದು ತನ್ನ ತಾಯಿಗೆ ನನ್ನ ಎದೆ ನೋಯುತ್ತಿದೆ ಅಂದಾಗ ಅವಳು ಆಸ್ಪತ್ರೆಗೆ ಹೋಗೋಣ ನಡೆ ಅಂತ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಒಂದು ಗುಳಿಗೆ ತೆಗೆದುಕೊಂಡಿದ್ದು ಪುನಃ 2130 ಗಂಟೆಗೆ ಸತಿಷ ಇತನು ಒಮ್ಮೆಲೆ ಎದೆ ನೋವು ಅಂತಾ ಬೆಹೂಶ ಆದ ಕಾರಣ ಫಿರ್ಯಾದಿಯು ತನ್ನ ಮಕ್ಕಳು, ಹೆಂಡತಿ ಎಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈದ್ಯರು ಈಗಾಗಲೇ ಮೃತಪಟ್ಟಿದ್ದು ಅಂತಾ ತಿಳಿಸಿದ್ದು ಇರುತ್ತದೆ, ಸತಿಷ ಇತನು ದಾರಿಯಲ್ಲಿ ಎದೆನೋವಿನಿಂದ ಮೃತಪಟ್ಟಿದ್ದು ಇರುತ್ತದೆ, ಕಾರಣ ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಹಿಳಾ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 24/2020, ಕಲಂ. 306 ಐಪಿಸಿ :-
ದಿನಾಂಕ 22-06-2020 ರಂದು ಫಿರ್ಯಾದಿ ಸೌರಬಸಿಂಗ್ @ ದೇವಿಂದ್ರ ಪ್ರತಾಪ ಸಿಂಗ್ ತಂದೆ ಜಗದೀಶ ಸಿಂಗ್ ವಯ: 30 ವರ್ಷ, ಜಾತಿ: ಕ್ಷತ್ರೀಯ (ರಜಪುತ), ಸಾ: ತಹರಪುರ ಮೈದು, ತಾ: ಅಕ್ಬರಪುರ, ಜಿ: ಕಾನ್ಪೂರ ದೇಹದ (ಯು.ಪಿ) ರವರ ಭಾವನಾದ ಸುನೀಲಸಿಂಗ್ ತಂದೆ ಕಲ್ಲುಸಿಂಗ್ ಈತನು ಫಿರ್ಯಾದಿಯ ಅಕ್ಕಳಾದ ಪುನಮಸಿಂಗ್ ಇವಳ ಜೋತೆಯಲ್ಲಿ ತಕರಾರು ಮಾಡಿಕೊಂಡು ಮನೆಯಲ್ಲಿ ಇದ್ದರೆ ಇರು ಇಲ್ಲವಾದರೆ ಎಲ್ಲಾದರು ಸತ್ತು ಹೋಗು ಅಂತಾ ತಕರಾರು ಮಾಡಿರುತ್ತಾರೆ, ಅದೆ ಒಂದು ವಿಷಯಕ್ಕಾಗಿ ಅವಳು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಒಂದು ಡೆತ್ ನೋಟ್ ಬರೆದಿಟ್ಟು ರಾತ್ರಿ ವೇಳೆಯಲ್ಲಿ ಪ್ಯಾನಿಗೆ ಓಡಣಿಯಿಂದ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾಳೆ, ಫಿರ್ಯಾದಿಯ ಅಕ್ಕಳ ಸಾವಿಗೆ ಅವಳ ಗಂಡನಾದ ಸುನೀಲಸಿಂಗ್ ತಂದೆ ಲ್ಲೂಸಿಂಗ್ ಈತನೆ ಕಾರಣನಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡ ಪೊಲೀಸ್ ಠಾಣೆ ಅಪರಾಧ ಸಂ. 31/2020, ಕಲಂ. 279, 337, 304() ಐಪಿಸಿ ಜೋತೆ 187 ಐಎಂವಿ ಕಾಯ್ದೆ :-
ದಿನಾಂಕ 22-06-2020 ರಂದು ಫಿರ್ಯಾದಿ ರೇಷ್ಮಾ ಗಂಡ ರಾಜಕುಮಾರ ತೆಲಗೆನೋರ ಸಾ: ಕನ್ನಳ್ಳಿ ಗ್ರಾಮ ರವರ ಮಗನಾದ ದಿನಕರ ಮತ್ತು ಗಂಡ ರಾಜಕುಮಾರ ತಂದೆ ಶರಣಪ್ಪಾ ತೆಲುಗುನೋರ ಇಬ್ಬರು ರೇಷನ್ ತರುವ ಸಲುವಾಗಿ ಪಲ್ಸರ್ ಮೋಟಾರ್ ಸೈಕಲ್ ನಂ. ಕೆಎ-38/ಕೆ-6388 ನೇದರ ಮೇಲೆ ಕನ್ನಳ್ಳಯಿಂದ ದದ್ದಾಪೂರ ಗ್ರಾಮಕ್ಕೆ ಹೋಗುವಾಗ ದಿನಕರ ಇತನು ಮೋಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಕನ್ನಳ್ಳಿ ಕ್ರಾಸ್ ಹತ್ತಿರ ಬಂದಾಗ ಚಾಂಬೋಳ ಕಡೆಯಿಂದ ಪಲ್ಸರ್ ಮೋಟಾರ್ ಸೈಕಲ್ ನಂ. ಕೆಎ-38/ವಿ-4584 ನೇದರ ಚಾಲಕನಾದ ಆರೋಪಿ ಅಮರನಾಥ  ತಂದೆ ಶಾಮರಾವ ಸಾ: ಬೋರ್ಗಿ ಗ್ರಾಮ, ತಾ: ಔರಾದ (ಬಾ) ಇತನು ಸಹ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅವನ ಮತ್ತು ಫಿರ್ಯಾದಿಯ ಮೋಟಾರ ಸೈಕಲ್ ಕನ್ನಳ್ಳಿ ಕ್ರಾಸ್ ಹತ್ತಿರ ಒಂದಕ್ಕೊಂದು ಡಿಕ್ಕಿಯಾಗಿ ಕೆಳಗಡೆ ಬಿದ್ದಿದ್ದು, ಸದರಿ ಅಪಘಾತದಿಂದ ದಿನಕರ ಮತ್ತು ಫಿರ್ಯಾದಿಯ ಗಂಡನಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಮಾತನಾಡಲಾರದ ಸ್ಥಿತಿಯಲ್ಲಿ ಬಿದ್ದಿದ್ದು ಹಾಗೂ ಅಮರನಾಥ ಇತನಿಗೂ ಗಾಯಗಳಾಗಿದ್ದು ಇರುತ್ತದೆ, ನಂತರ ಫಿರ್ಯಾದಿಯು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯ ವೈದ್ಯರು ಗಂಡನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೊಗಲು ತಿಳಿಸಿದ್ದರಿಂದ ಕೂಡಲೆ ನ್ನ ಗಂಡನಿಗೆ ಅಂಬುಲೇನ್ಸ ಬೀದರ ಭಾಲ್ಕೆ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ದಾಖಲು ಮಾಡಿದಾಗ ಫಿರ್ಯಾದಿಯ ಗಂಡನ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 23-06-2020 ರಂದು ಭಾಲ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 25/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-06-2020 ರಂದು ವೀರಯ್ಯ ತಂದೆ ರೇವಣಸಿದ್ದಯ್ಯ ಪುಜಾರಿ ವಯ: 45 ವರ್ಷ, ಜಾತಿ: ಜಂಗಮ, ಉಪವಲಯ ಅರಣ್ಯಾಧಿಕಾರಿ ಬಗದಲ್ ರವರು ಬೀದರದಿಂದ ಮನ್ನಳಿಗೆ ತನ್ನ ಮೋಟಾರ ಸೈಕಲ ನಂ. ಕೆಎ-38/ಜಿ-0482 ನೇದರ ಮೇಲೆ ಕರ್ತವ್ಯ ಕುರಿತು ಹೋಗುವಾಗ ಬೀದರ ಮನ್ನಳಿ ರೋಡಿನ ಮೇಲೆ ಟಿ.ಮರ್ಜಾಪೂರ ಕ್ರಾಸ ಹತ್ತಿರ ರಸ್ತೆಯ ತಿರುವಿನಲ್ಲಿ ಹಿಂದಿನಿಂದ ಕಾರ ನಂ. ಟಿ.ಎಸ್-.07/ಎಫ್.ಕ್ಯೂ-5350 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಅಪಘಾತ ಪಡಿಸಿ ತನ್ನ ಕಾರ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಬಲಗಾಲ ಪಾದಕ್ಕೆ ಭಾರಿ ರಕ್ತಗಾಯ ಮತ್ತು ತಲೆಗೆ ತರಚಿದ ಗಾಯವಾಗಿರುತ್ತದೆ, ಹಿಂದೆ ಬರುತ್ತಿದ್ದ ಪ್ರಫುಲ ತಂದೆ ಜಗನಾಥ ತ್ರೀಪಾಟಿ ಮತ್ತು ಅಖಿಲೇಸ ತಂದೆ ಶರಣಪ್ಪಾ ದೊಡ್ಡಮನಿ ಸಾ: ಗುಂಪಾ ಬೀದರ ರವರು ಘಟನೆ ನೋಡಿ ಫಿರ್ಯಾದಿಗೆ 108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 28/2020, ಕಲಂ. 379 ಐಪಿಸಿ :-
ಫಿರ್ಯಾದಿ ಪೆಂಟಾರೆಡ್ಡಿ ತಂದೆ ಅಶೋಕರೆಡ್ಡಿ ವಯ: 27 ವರ್ಷ, ಸಾ: ಚಟನಳ್ಳಿ ಗ್ರಾಮ ರವರು ತನ್ನ ರಾಯಲ್ ಎನ್ಫಿಲ್ಡ್ ಬುಲೆಟ್ ಕ್ಲಾಸಿಕ್ 350 ಮೊಟಾರ್ ಸೈಕಲ ನಂ. ಕೆಎ-38/ವಿ-5880, ಚಾಸಿಸ್ ನಂ. ಎಮ್..3.ಯು.3.ಎಸ್.5.ಸಿ.1.ಜೆ.ಜಿ.780864, ಇಂಜಿನ್ ನಂ. ಯು.35.ಎಸ್.5.ಸಿ.1.ಜೆ.ಜಿ.805204, ಬಣ್ಣ ಕೆಂಪು, 2018 ಮಾಡಲ್, ಅ.ಕಿ 49,900/- ರೂ. ನೇದನ್ನು ತನ್ನ ಮನೆಯ ಹತ್ತಿರ ನಿಲ್ಲಸಿರುವುದನ್ನು ದಿನಾಂಕ 23-06-2020 ರಂದು 0130 ಗಂಟೆಯಿಂದ 0400 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 08/2020, ಕಲಂ. 66(ಸಿ), 66(ಡಿ) .ಟಿ ಕಾಯ್ದೆ ಮತ್ತು 419, 420 ಐಪಿಸಿ :-
ದಿನಾಂಕ 29-05-2020 ರಂದು ಫಿರ್ಯಾದಿ ಮಹಾದೇವಪ್ಪಾ ತಂದೆ ರೆªÀಣಪ್ಪಾ ಬೆಂಬಳಗೆ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಮಂಗಲಪೇಟ, ಸದ್ಯ: ಹೂಗೇರಿ ಬೀದರ ರವರು CrazeNDemand ನಲ್ಲಿ ಖರೀದಿಸಿದ ಸೀರೆ ಮರಳಿಸಲು ಸದರಿ ಸೈಟಿನ ಕಸ್ಟಮರ ಕೇರ ನಂಬರ ಗೂಗಲನಲ್ಲಿ ಸರ್ಚ ಮಾಡಿದಾಗ ಅದರಲ್ಲಿದ್ದ ನಕಲಿ ಕಸ್ಟಮರ ಕೇರ ನವರು CrazeNDemand ಸೈಟ ನಿಂದಲೆ ಮಾತನಾಡುತ್ತಿರುವುದಾಗ ಹೇಳಿ ನಂಬಿಸಿ, ಮೋಸದಿಂದ ಫಿರ್ಯಾದಿಯ ಮೊಬೈಲಿಗೆ ಲಿಂಕ ಕಳುಹಿಸಿ, ಅದರ ಮುಖಾಂತರ ಫಿರ್ಯಾದಿಯ ಖಾತೆಯ ಮಾಹಿತಿ ಮತು್ತ ಯು.ಪಿ. ಪಿನ್ ಪಡೆದುಕೊಂಡು ಫಿರ್ಯಾದಿಯ ಎರಡು ಬ್ಯಾಂಕ ಖಾತೆಯಲ್ಲಿನ ಒಟ್ಟು 53,900/- ರೂ. ಲಪಟಾಯಿಸಿರುತ್ತಾರೆ, ಕಾರಣ ಸದರಿ ಮೊಬೈಲ ನಂ. 9309782962 ಮತ್ತು 9223011112 ನೇದ್ದವುಗಳಿಂದ ಕರೆ ಮಾಡಿದ ಅಪರಿಚಿತ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟ ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 23-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 82/2020, ಕಲಂ. 87 ಕೆ.ಪಿ ಕಾಯ್ದೆ ಜೊತೆ 269 ಐಪಿಸಿ :-
ದಿನಾಂಕ 23-06-2020 ರಂದು ಬಸವಕಲ್ಯಾಣ ನಗರದ ವಿಜಯನಗರ ಕಾಲೋನಿಯಲ್ಲಿ ರೆಡ್ಡಿ ಕಾಂಪ್ಲೇಕ್ಷ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನಿಲಕುಮಾರ ಪಿ.ಎಸ್. (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ವಿಜಯನಗರ ಕಾಲೋನಿಯಲ್ಲಿ ರೆಡ್ಡಿ ಕಾಂಪ್ಲೇಕ್ಷ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಈರಣ್ಣಾ ತಂದೆ ಶಂಕರರಾವ ಕೋಳಕುರ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಶಾಹಪೂರ ಗಲ್ಲಿ ಬಸವಕಲ್ಯಾಣ, 2) 2) ಮೋಹಿವೋದ್ದಿನ್ ತಂದೆ ಅಹ್ಮೇದಸಾಬ ಕಬಾಡಿ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ಗೋಲಚೌಡಿ ಬಸವಕಲ್ಯಾಣ, 3) ಜಲೀಲ್ ತಂದೆ ಮೈನೋದ್ದಿನ್ ವಯ: 48 ವರ್ಷ, ಜಾತಿ: ಮುಸ್ಲಿಂ, ಸಾ: ತಾಜ ಕಾಲೋನಿ ಬಸವಕಲ್ಯಾಣ ಹಾಗೂ 4) ಶೇಖ ಜಾಫರಸಾಬ ತಂದೆ ಶೇಖ ಇಸ್ಮಾಯಿಲ್ಸಾಬ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಯಾಕುಬಪೂರಾ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಬಗ್ಗೆ ನೀರ್ಲಕ್ಷವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ 1) ಒಟ್ಟು ನಗದು ಹಣ 4,120/- ರೂ ಮತ್ತು 2) 52 ಇಸ್ಪಿಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 51/2020, ಕಲಂ. 78 ಕೆ.ಪಿ ಕಾಯ್ದೆ :-
ದಿನಾಂಕ 23-06-2020 ರಂದು ಚಿಕನಾಗಾಂವ ಗ್ರಾಮ ಶಿವಾರದ ಜನವಾಡಾ ರೋಡಿನ ಮೇಲೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಕನಾಗಾಂವ ಗ್ರಾಮಕ್ಕೆ ಹೋಗಿ ಅಲ್ಲಿಂದ ಜನವಾಡಾ ರೋಡಿಗೆ ಹೋಗಿ ರೋಡಿನ ಮೇಲೆ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ರೋಡಿನ ಮೇಲೆ ಸಾರ್ವಜನೀಕ ಸ್ಥಳದಲ್ಲಿ ನಿಂತುಕೊಂಡು ರೋಡಿನ ಮೇಲೆ ಹೋಗಿ ಬರುವವರಿಗೆ ಮಟಕಾ ಆಡಿರಿ ಒಂದು ರೂಪಾಯಿಗೆ 90/- ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದನು, ಸದರಿ ವ್ಯಕ್ತಿಯ ಮೇಲೆ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿದಾಗ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದು ಅವನಿಗೆ ವಿಚಾರಿಸಲು ಅವನು ತನ್ನ ಹೆಸರು ಶಿವಾನಂದ ತಂದೆ ಹಣಮಂತಪ್ಪಾ ಪಾಟೀಲ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಚಿಕನಾಗಾಂವ ಅಂತಾ ತಿಳಿಸಿ ನಾನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವದಾಗಿ ತಿಳಿಸಿದನು, ನಂತರ ಅವನಿಗೆ ವಿಚಾರಿಸಲು ನೀನು ಪಡೆದುಕೊಂಡ ಹಣ ಯಾರಿಗೆ ಕೊಡುತ್ತಿ ಅಂದಾಗ ಶಿವಾನಂದ ಇತನು ನಾನು ಮಟಕಾ ಚೀಟಿ ಬರೆದುಕೊಂಡು ಸಾರ್ವಜನೀಕರಿಂದ ಪಡೆದ ಹಣವನ್ನು ನಮ್ಮೂರ ಪ್ರಶಾಂತ ತಂದೆ ಭೊಜಪ್ಪಾ ಬಿರಾದಾರ ಎಂಬಾತನಿಗೆ ಕೊಡುತ್ತೇನೆ ನನಗೆ ಅವನು ಕಮಿಷನ್ ಕೊಡುತ್ತಾನೆ ಹೀಗೆ ಇಬ್ಬರೂ ಕೂಡಿ ಮಟಕಾ ಚಿಟಿ ಬರೆದುಕೊಳ್ಳುವದು ಮಾಡುತ್ತೇವೆ ಅಂತಾ ತಿಳಿಸಿರುತ್ತಾನೆ, ನಂತರ ಸದರಿಯವನ ಹತ್ತಿರವಿದ್ದ 1) 2 ಮಟಕಾ ಚೀಟಿಗಳು, ನಗದು ಹಣ 4000/- ರೂಪಾಯಿಗಳು, 3) ಒಂದು ಬಾಲ ಪೆನ್ನ ಹಾಗೂ 4) ಒಂದು ಎಮ್.ಐ ಕಂಪನಿಯ ಟಚ್ ಸ್ಕ್ರೀನ ಮೋಬೈಲ್ ಅ.ಕಿ 4000/- ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 101/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 23-06-2020 ರಂದು ಜಾಂತಿ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಇಬ್ಬರು ವ್ಯಕ್ತಿಗಳು ಒಂದು ರೂ. ಗೆ 80/- ರೂ ಕೊಡುತ್ತೆವೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿದ್ದಾರೆ ಅಂತ ಚಿದಾನಂದ ಸೌದಿ ಪಿಎಸ್ಐ ಧನ್ನೂರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜಾಂತಿ ಗ್ರಾಮಕ್ಕೆ ಹೋಗಿ ಗ್ರಾಮದ ಬಸವೇಶ್ವರ ಚೌಕದಿಂದ ಮರೆಯಾಗಿ ನಿಂತು ನೊಡಲು ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತರಾದ 1) ವೀರಶೇಟ್ಟಿ ತಂದೆ ಬಾಬುರಾವ ಬಿಲಗುಂದೆ ವಯ: 36 ವರ್ಷ, ಜಾತಿ: ಲಿಂಗಾಯತ, ಹಾಗೂ ಶಿವಕುಮಾರ ತಂದೆ ಶಂಕರ ಮೆತ್ರೆ ವಯ: 40 ವರ್ಷ, ಜಾತಿ: ಕುರುಬ ಇಬ್ಬರು ಸಾ: ಜಾಂತಿ ಇವರಿಬ್ಬರು ಮಟಕಾ ಜೂಜಾಟ ನಡೆಸುತ್ತಿದ್ದು ಒಬ್ಬ ವ್ಯಕ್ತಿ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದನು ಮತ್ತೊಬ್ಬ ವ್ಯಕ್ತಿ ಒಂದು ರೂ. 80/- ರೂಪಾಯಿ ಕೊಡುತ್ತೆವೆಂದು ಕೂಗಿ ಕೂಗಿ ಜನರಿಗೆ ಆರ್ಕಷಣೆ ಮಾಡಿ ಜನರಿಗೆ ಕರೆಯುತ್ತಿದ್ದನು, ಸದರಿಯವರು ಮಟಕಾ ಜೂಜಾಟ ನಡೆಸುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿದಾಗ ಇಬ್ಬರು ಓಡಿ ಹೊಗಲು ಪ್ರಯತ್ನಿಸುತ್ತಿದ್ದಾಗ ಅವರಿಗೆ ಹಿಡಿದಾಗ ಅಲ್ಲಿದ್ದ ಜನರು ಓಡಿ ಹೊಗಿರುತ್ತಾರೆ, ನಂತರ ಪಂಚರ ಸಮಕ್ಷಮ ಅವರಿಬ್ಬರ ಅಂಗ ಜಡ್ತಿ ಮಾಡಿ ಅವರಿಂದ 1) ಒಟ್ಟು ನಗದು ಹಣ 2160/- ರೂಪಾಯಿ, 2) ಒಂದು ಮೊಬೈಲ ಫೊನ್, 3) ಎರಡು ಬಾಲ್ ಪೆನ್ನ ಮತ್ತು 4) ಮಟಕಾ ನಂಬರ ಬರೆದ 10 ಚೀಟಿಗಳು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 48/2020, ಕಲಂ. 20(ಬಿ) (2) ಎನ್.ಡಿ.ಪಿ.ಎಸ್ ಕಾಯ್ದೆ :-
ದಿನಾಂಕ 23-06-2020 ರಂದು ವಡಗಾಂವ-ಕಂದಗೂಳ ರೋಡಿನಿಂದ ಸೋರಳ್ಳಿ ಕ್ರಾಸ ಕಡೆಗೆ ಒಂದು ಮೋಟಾರ ಸೈಕಲ ಮೇಲೆ ಗಾಂಜಾ ತೆಗೆದುಕೊಂಡು ಬರುತ್ತಿದ್ದಾನೆಂದು ಡಾ. ದೇವರಾಜ ಡಿ.ಎಸ್.ಪಿ ಭಾಲ್ಕಿ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ ರವರು ಪತ್ರಾಂಕಿತ ಅಧಿಕಾರಿ, ತೂ ಮಾಡುವ ವ್ಯಕ್ತಿ, ತೂಕ ಮಾಡುವ ಎಲೆಕ್ಟ್ರಾನಿಕ ಯಂತ್ರ, ಫೋಟೋಗ್ರಾಫರ್, ಇಬ್ಬರು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಯವರೊಡನೆ ಸೊರಳ್ಳಿ ಕ್ರಾಸ್ ಹತ್ತಿರ ಇರುವ ಬಸ್ ನಿಲ್ದಾಣದ ಹಿಂದೆ ಮರೆಯಾಗಿ ನಿಂತು ನೋಡಲು ಜಂಬಗಿ ಸೊರಳ್ಳಿ ಕಡೆಯಿಂದ ಒಬ್ಬ ವ್ಯಕ್ತಿಯು ಒಂದು ಮೋಟಾರ ಸೈಕಲ್ ಮೇಲೆ ಕಪ್ಪು ಬ್ಯಾಗ ಬೆನ್ನಿಗೆ ಹಾಕಿಕೊಂಡು ಬರುತ್ತಿರುವುದನ್ನು ನೋಡಿ ಆತನಿಗೆ ಕೈ ಮಾಡಿ ನಿಲ್ಲಿಸಲು ತಿಳಿಸಿದಾಗ ಅವನು ಬೈಕ ನಿಲ್ಲಿಸದೆ ಹಾಗೆಯೇ ಕಂದಗೂಳ ಕಡೆಗೆ ಹೋಗುತ್ತಿರುವಾಗ ಅವನ ಬೆನ್ನಟ್ಟಿ ಅವನ ಮೋಟಾರ ಸೈಕಲ ಮುಂದೆ ಸಂಜು ತಂದೆ ಅರ್ಜುನ ಪಾಟೀಲ್ ಸೊರಳ್ಳಿ ರವರ ಹೋಲದ ಹತ್ತಿರ ಇರುವ ಸಣ್ಣ ಸೆತುವೆ ಬಳಿ ಅಡ್ಡ ಗಟ್ಟಿ ದಾಳಿ ಮಾಡಿ ನಿಲ್ಲಿಸಿದಾಗ ಆತನು ಗಾಬರಿಗೊಂಡಿದ್ದು ಸದರಿ ವ್ಯಕ್ತಿಗೆ ಕಪ್ಪು ಬ್ಯಾಗನಲ್ಲಿ ಏನಿದೆ ಅಂತಾ ವಿಚಾರಿಸಲು ಏನು ಇಲ್ಲಾ ಅಂತಾ ಹೇಳಿ ಗಾಬರಿಗೊಂಡಿದ್ದು, ನಂತರ ಆತನ ಹೆಸರು ವಿಚಾರಿಸಲು ತನ್ನ ಹೆಸರು ಸಂಜುಕುಮಾರ ತಂದೆ ವಿಠಲರಾವ ಪಾಟೀಲ್ ವಯ: 40 ವರ್ಷ, ಜಾತಿ: ಮರಾಠಾ, ಸಾ: ಏಸಗಿ (ಟಿ.ಎಸ) ಅಂತಾ ತಿಳಿಸಿದ್ದು, ಆತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ ಇದ್ದ ಒಂದು ಕಾರ್ಬನ್ ಮೋಬೈಲ್ ಅದರ ಐ.ಎಂ.ಇ.ಐ ನಂ. 1) 353076110303529, 2) 353076110303537 ಅಂತ ಇದ್ದು ಅದರ ಅ.ಕಿ 500/- ರೂ. ಹಾಗೂ ಜೇಬಿನಲ್ಲಿ ನಗದು ಹಣ 200/- ರೂಪಾಯಿ ಇದ್ದು, ನಂತರ ಸಂಜುಕುಮಾರ ಇತನಿಗೆ ನಿನ್ನ ಬೆನ್ನಿನ ಹಿಂದೆ ಹಾಕಿಕೊಂಡ ಬ್ಯಾಗದಲ್ಲಿ ಏನಿದೆ ಅಂತಾ ವಿಚಾರಿಸಲು ಬ್ಯಾಗನಲ್ಲಿ ಎರಡು ಗಾಂಜದ ಪಾಕೇಟಗಳು ಇರುತ್ತೆವೆ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಬ್ಯಾಗನ್ನು ಪರಿಶಿಲಿಸಿ ನೋಡಲು ಎರಡು ಗಾಂಜಾ ಪಾಕೇಟಗಳು ಇದ್ದು ಅವುಗಳನ್ನು ತೂಕ ಮಾಡಿ ನೋಡಲು ಒಟ್ಟು 2495 ಗ್ರಾಂ ಇದ್ದು ಅ.ಕಿ 27,500/- ಆಗಬಹುದು ಮತ್ತು ಕಾರ್ಬನ್ ಮೋಬೈಲ .ಕಿ 500/- ರೂಪಯಿ ಆಗಬಹುದು, ಗಾಂಜಾ ಸಾಗಿಸುತ್ತಿದ್ದ ಹಿರೋ ಹೊಂಡಾ ಸೂಪರ್ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ. ಎಂ.ಎಚ್-14/ಸಿ.ಝಡ್-8679 .ಕಿ 50,000/- ರೂ., ಸದರಿ ಗಾಂಜಾವು ಅರೆ ಬರೆ ಹಸಿ ಹೂವು ಎಲೆ ಮತ್ತು ಮಗ್ಗುವುಳ್ಳದ್ದು ಇದ್ದು, ವಾಸನೆಯು ಗಾಂಜಾ ಇದ್ದ ಬಗ್ಗೆ ಕಂಡು ಬಂದಿರುತ್ತದೆ, ನಂತರ ಎಲ್ಲವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.