Police Bhavan Kalaburagi

Police Bhavan Kalaburagi

Monday, April 5, 2021

BIDAR DISTRICT DAILY CRIME UPDATE 05-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-04-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 13/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸುರೇಶ ತಂದೆ ಚನ್ನಬಸಪ್ಪಾ ಸಿದ್ರಾಮಶೇಟ್ಟಿ ವಯ: 62 ವರ್ಷ, ಜಾತಿ: ಲಿಂಗಾಯತ, ಸಾ: ಬ್ಯಾಂಕ/ರಾಂಪುರೆ ಕಾಲೋನಿ, ಬೀರ ರವರ ಮಗಳಾದ ಮೌನೇಶ್ವರಿ ಇವಳು ಸುಮಾರು 2 ವರ್ಷದಿಂದ ಹೊಟ್ಟೆ ಬೇನೆಯಿಂದ ಬಳಲುತ್ತಿದ್ದು, ಅವಳನ್ನು ಆಸ್ಪತ್ರೆಗೆ ತೊರಿಸಿದರು ಸಹ ಗುಣಮುಖವಾಗಿರುವುದಿಲ್ಲ, ಹೀಗಿರುವಾಗ ದಿನಾಂಕ 03-04-2021 ರಂದು 2100 ಗಂಟೆಯಿಂದ 2300 ಗಂಟೆಯ ಅವಧಿಯಲ್ಲಿ ಮೌನೇಶ್ವರಿ ಇಕೆಯು ತನಗಾಗುವ ಹೊಟ್ಟೆ ನೋವು ತಾಳಲಾರದೆ ಮನೆಯ ಬೇಡ್ ರೂಂದಲ್ಲಿರುವ ಸಿಲಿಂಗ ಫ್ಯಾನಿಗೆ ದುಪಟ್ಟಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ, ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಸಾರಾಂಶದ ಮೇರೆಗೆ ದಿನಾಂಕ 04-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 28/2021, ಕಲಂ. 279, 304() ಐಪಿಸಿ :-

ದಿನಾಂಕ 04-04-2021 ರಂದು ಫಿರ್ಯಾದಿ ಕಲಾವತಿ ಗಂಡ ದತ್ತಾತ್ರಿ ತ್ರೀಮುಖೆ ವಯ: 45 ವರ್ಷ, ಜಾತಿ: ಎಸ್.ಸಿ ಢೋರ, ಸಾ: ಮಂಠಾಳ ಗ್ರಾ, ರವರ ಗಂಡನಾದ ದತ್ತಾತ್ರಿ ರವರು ದಿನನಿತ್ಯದಂತೆ ಸೈಕಲ ಮೇಲೆ ತಮ್ಮ ಹೊಲಕ್ಕೆ ಹೋಗಿ ಹೊಲದಿಂದ ಮನೆಗೆ ಬರುವಾಗ ಪ್ರಶಾಂತ ತಂದೆ ಸಂಗಪ್ಪಾ ತ್ರೀಮುಖೆ ರವರ ಹೊಲದ ಮುಂದೆ ಕಾಂಬಳೆವಾಡಿ ರಸ್ತೆಯ ಮೇಲೆ ಎದುರಿನಿಂದ ಟ್ರ್ಯಾಕ್ಟರ್ ನಂ. ಕೆಎ-56/ಟಿ-1707 ನೇದರ ಚಾಲಕನಾದ ಆರೋಪಿ ಸೈಬಣ್ಣ ತಂದೆ ರಘೂನಾಥ ಕರಟಮೊಲ ವಯ: 50 ವರ್ಷ, ಸಾ: ಮಂಠಾಳ ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸೈಕಲ ಮೇಲೆ ಬರುತ್ತಿದ್ದ  ಗಂಡ ದತ್ತಾತ್ರೆ ಇವರಿಗೆ ಡಿಕ್ಕಿ ಮಾಡಿದ್ದರಿಂದ ದತ್ತಾತ್ರೆಯವರು ರೋಡಿನ ಮೇಲೆ ಜೋರಾಗಿ ಬಿದ್ದರಿಂದ ಅವರ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯವಾಗಿ ರೋಡಿನ ಮೇಲೆ ಬೆಹೋಷ ಆಗಿ ಬಿದ್ದಿರುತ್ತಾರೆ, ನಂತರ ಅವರನ್ನು ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಪಟ್ಟಣದ ಪಾಟೀಲ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಸೋಲಾಪುರನ ಸ್ಪರ್ಷ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಿಗೆ ತೊರಿಸಿದಾಗ ವೈದ್ಯರು ಗಂಡನಿಗೆ ಪರಿಶೀಲಿಸಿ ಅವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 33/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 04-04-2021 ಫಿರ್ಯಾದಿ ಸಿದ್ದು ತಂದೆ ಅಮೃತಪ್ಪಾ ಈರಗೊಂಡ ಸಾ: ಜಲಸಂಗಿ, ತಾ: ಹುಮನಾಬಾದ ರವರು ರಾ.ಹೆದ್ದಾರಿ-50 ಬೀದರ - ಹುಮನಾಬಾದ ರೋಡ ಜಲಸಂಗಿ ಶಿವಾರದ ದುಬಲಗುಂಡಿ ಕ್ರಾಸ್ ಹತ್ತಿರ ಕಬ್ಬಿನ ಹಾಲಿನ ವ್ಯಾಪಾರ ಮಾಡುತ್ತಿರುವಾಗ ಮಲಕಾಪೂರವಾಡಿ ಗ್ರಾಮದ ಕಡೆಯಿಂದ ಅನಿಲ ತಂದೆ ಕಲ್ಲಪ್ಪಾ ಕೇರೆನೋರ್ ವಯ: 35 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಜಲಸಂಗಿ, ತಾ: ಹುಮನಾಬಾದ ಇತನು ಮೋಟಾರ್ ಸೈಕಲ್ ನಂ. ಕೆಎ-39/ಎಸ್-8784 ನೇದನ್ನು ಚಲಾಯಿಸಿಕೊಂಡು ಖಾಜಾ ಹೋಟೆಲ್ ಹತ್ತಿರ ಬಂದು ರೋಡ ದಾಟಿಕೊಂಡು ಜಲಸಂಗಿ ಗ್ರಾಮಕ್ಕೆ ಹೋಗಲು ನಿಂತುಕೊಂಡಾಗ ಅದೇ ಸಮಯಕ್ಕೆ ಬೀದರ ಕಡೆಯಿಂದ ಕಾರ್ ನಂ. ಕೆಎ-02/ಎ.ಇ-7844 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರೋಡಿನ ಬದಿಯಲ್ಲಿ ನಿಂತಿರುವ ಮೋಟಾರ್ ಸೈಕಲ್ ಚಾಲಕನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಡಿಕ್ಕಿಯ ರಭಸಕ್ಕೆ ಮೋಟಾರ್ ಸೈಕಲ್ ಚಾಲಕ ತನ್ನ ಮೋಟಾರ್ ಸೈಕಲ್ ಸಮೇತ ಸುಮಾರು 50 ಮೀಟರ್ ದೂರದಲ್ಲಿ ಹೋಗಿ ಬಿದ್ದಿರುತ್ತಾನೆ, ಆರೋಪಿಯು  ಸುಮಾರು 100 ಮೀಟರ್  ದೂರದಲ್ಲಿ ಹೋಗಿ ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದು ಕಾರಿನಿಂದ ಕೆಳಗಡೆ ಇಳಿದು ಗಾಯಾಳುವಿಗೆ ತೀವ್ರ ಗಾಯಗಳು ಆಗಿರುವುದನ್ನು ನೋಡಿ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ಓಡುತ್ತಾ ಹೋಗಿ ಗಾಯಾಳುವಿಗೆ ನೋಡಲಾಗಿ ಆತನ ತಲೆಗೆ ತೀವ್ರ ಗುಪ್ತಗಾಯ, ಎಡಗೈ ಮೊಣಕೈ ಕೆಳಗೆ, ಎಡಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯ ಮತ್ತು ಹಣೆಯ ಮೇಲೆ ಸಾದಾ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 64/2021, ಕಲಂ. 454, 380 ಐಪಿಸಿ :-

ದಿನಾಂಕ 04-04-2021 ರಂದು ಫಿರ್ಯಾದಿ ಸಂಜುಕುಮಾರ ತಂದೆ ಗುರುಲಿಂಗಪ್ಪಾ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಹುಣಸಗೇರಾ ರವರು ಬಸವಕಲ್ಯಾಣದಲ್ಲಿ ತಮ್ಮ ಸಂಬಂಧಿಕರ ತೋಟ್ಟಿಲ ಕಾರ್ಯಕ್ರಮ ಇರುವದರಿಂದ ತನ್ನ ಹೆಂಡತಿ ಶೈಲಜಾ ಮತ್ತು ಚಿಕ್ಕ ಮಗಳು ಭವ್ಯಾ 3 ಜನರು ಬಸವಕಲ್ಯಾಣಕ್ಕೆ ಹೋಗಿ ದೊಡ್ಡ ಮಗಳು ಅಪೂರ್ವ ಇವಳಿಗೆ ತಾಯಿ ಜೊತೆ ಮನೆಯಲ್ಲಿ ಬಿಟ್ಟು ಹೋಗಿದ್ದು, ಹೀಗಿರುವಾಗ ಫಿರ್ಯಾದಿಯವರ ತಾಯಿ ಮತ್ತು ಅಪೂರ್ವ 7 ವರ್ಷ ಇಬ್ಬರು ಮನೆಯ ಬಾಗಿಲು ಮುಂದೆ ಮಾಡಿ ಪ್ರಲ್ಹಾದ ರವರ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರದಲ್ಲಿದ್ದ 1) 2 ತೋಲೆಯ ಬಂಗಾರದ ಬಿಸ್ಕಟ ಅ.ಕಿ 60,000/- ರೂ., 2) ಒಂದು ತೋಲೆಯ ಬಂಗಾರದ ಊಂಗುರು ಅ.ಕಿ 30,000/- ರೂ., 3) 4 ಗ್ರಾಂ ಬಂಗಾರದ ಒಂದು ಊಂಗುರ ಅ.ಕಿ 12,000/- ರೂ., 4) ಒಂದು 3 ಗ್ರಾಮ ಬಂಗಾರದ ಉಂಗುರು ಅ.ಕಿ 9000/-ರೂ., 5) 2 ಬಂಗಾರದ ಒಂದು ತೋಲೆಯ ಕಿವಿ ಒಲೆಗಳು ಅ.ಕಿ 30000/- ರೂ ಮತ್ತು 6) ಒಂದು ಕ್ಯಾಮೆರಾ ಅ.ಕಿ 2000/- ರೂ. ಹೀಗೆ ಒಟ್ಟು ಬಂಗಾರದ ಆಭರಣಗಳು ಮತ್ತು ಕ್ಯಾಮೇರಾ ಅ.ಕಿ 1,43,000/- ರೂಪಾಯಿ ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.