Police Bhavan Kalaburagi

Police Bhavan Kalaburagi

Thursday, February 20, 2020

BIDAR DISTRICT DAILY CRIME UPDATE 20-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-02-2020

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 16/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 19-02-2020 ರಂದು ಫಿರ್ಯಾದಿ ಕಲ್ಲಪ್ಪಾ ತಂದೆ ಜ್ಞಾನಿ ಮೇತ್ರೆ : 38 ರ್ಷ, ಜಾತಿ: ಕ್ರಿಶ್ಚನ, : ನಿರ್ವಾಹಕ ಬೀದರ 2 ಡಿಪೋ, ಸಾ: ಜನವಾಡಾ, ತಾ: ಬೀದರ ರವರು ಡಿಪೋಗೆ ಹೊಗಿ ಫಿರ್ಯಾದಿ ಹಾಗೂ ಚಾಲಕ ಸಂತೋಷ ಬಿಲ್ಲೆ ನಂ. 1866 ರವರು ಕೂಡಿಕೊಂಡು ಬಸ್ಸ ನಂ. ಕೆಎ-38/ಎಫ್-0997 ನೇದ್ದನ್ನು ತೆಗೆದುಕೊಂಡು ಬೀದರದಿಂದ ಪ್ರಯಾಣಿಕರಿಗೆ ಕೂಡಿಸಿಕೊಂಡು ಭಾಲ್ಕಿ ಮುಖಾಂತರವಾಗಿ ಉದಗೀರಕ್ಕೆ ಹೊಗುತ್ತಿರುವಾಗ ಹೊಳಸಮುದ್ರ ಗ್ರಾಮ ದಾಟಿದ ನಂತರ ಹೊಳಸಮುದ್ರ ಶಿವಾರದಲ್ಲಿ ಎನ್.ಎಚ್-50 ರಸ್ತೆಯ ಮೇಲೆ ಎದುರಿನಿಂದ ಮೊಟಾರ ಸೈಕಲ್ ಎಮ್.ಎಚ್-24/ಡಬ್ಲೂ-5121 ನೇದರ ಚಾಲಕನಾದ ಆರೋಪಿ ಸಂಗಮೇಶ್ವರ ತಂದೆ ಅಶೋಕ ಮುಳಬಾಗೆ ವಯ: 34 ವರ್ಷ, ಜಾತಿ: ಜಂಗಮ, ಸಾ: ದೇವಣಿ, ತಾ: ದೇವಣಿ, ಜಿ: ಲಾತೂರ ಮಹಾರಾಷ್ಟ್ರ ಇತನು ತನ್ನ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ಒಮ್ಮೇಲೆ ಬಸ್ಸಿನ ಸೈಡಿಗೆ ಬಂದಾಗ ಚಾಲಕರಾದ ಸಂತೋಷ ಇವರು ಕೂಡಾ ಒಮ್ಮೇಲೆ ಬ್ರೆಕ ಹಾಕಿದ್ದು ಇರುತ್ತದೆ, ಆದರೂ ಕೂಡಾ ಸಂಗಮೇಶ್ವರ ಇತನು ಬಸ್ಸಿನ ಎದುರಿಗೆ ಎಡಭಾಗಕ್ಕೆ ಗುದ್ದಿರುತ್ತಾನೆ, ಆಗ ಬಸ್ಸಿನ ಎಡಭಾಗ ಡ್ಯಾಮೇಜ ಹಾಗು ಮೊಟಾರ ಸೈಕಲ್ ಕೂಡಾ ಮುಂದಿನ ಭಾಗ ಡ್ಯಾಮೇಜ ಆಗಿರುತ್ತದೆ, ನಂತರ ಸಂಗಮೇಶ್ವರ ಇತನಿಗೆ ನೋಡಲು ಅವನ ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.        

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 24/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 19-02-2020 ರಂದು ಫಿರ್ಯಾದಿ ಮಾರುತಿ ತಂದೆ ಮಾಣಿಕಪ್ಪಾ ಸಾ: ಇಂದಿರಾ ನಗರ ಹುಡಗಿ, ತಾ: ಹುಮನಾಬಾದ ರವರ ಹೆಂಡತಿಯ ತಮ್ಮನಾದ ಚಂದ್ರಪ್ಪಾ ತಂದೆ ಗೋಪಾಲ ರವರು ಕಾಲ ನಡಿಗೆಯಲ್ಲಿ ಚಹಾ ಕುಡಿಯಲು ಹುಡಗಿ ಗ್ರಾಮದ ಕಡೆಗೆ ಹೊಗಿ ಹೋಗುತ್ತಿರುವಾಗ ಚಿಟಗುಪ್ಪಾ ಕ್ರಾಸ್ ಹತ್ತಿರ ರಾ.ಹೆ ನಂ. 65 ನೇದರ ಮೇಲೆ ಹಿಂದಿನಿಂದ ಅಂದರೆ ಹೈದ್ರಾಬಾದ – ಸೋಲಾಪುರ ರೋಡಿನ ಮೇಲೆ ಹೈದ್ರಾಬಾದ ಕಡೆಯಿಂದ ಯಾವುದೊ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಂದ್ರಪ್ಪಾ ರವರಿಗೆ ಡಿಕ್ಕಿ ಹೊಡೆದು ತನ್ನ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಓಡಿ ಹೋಗಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಚಂದ್ರಪ್ಪಾ ಇತನ ತಲೆಗೆ ತೀವ್ರ ರಕ್ತಗಾಯ, ಬಲಗಾಲ ಮಣಕಾಲಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ  ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 25/2020, ಕಲಂ. 379 ಐಪಿಸಿ :-
ದಿನಾಂಕ 05-02-2020 ರಂದು ಫಿರ್ಯಾದಿ ವೀರಭದ್ರಪ್ಪಾ ತಂದೆ ಕಂಟೆಪ್ಪಾ ವಯ: 25 ವರ್ಷ, ಜಾತಿ:  ಲಿಂಗಾಯತ, ಸಾ: ಮರಕಲ, ತಾ: ಬೀದರ ರವರು ತಮ್ಮ ಸಂಬಂಧಿಕರಾದ ಬಾಬುರಾವ ವಿಶ್ವಕರ್ಮ ಸಾ: ಟೀಚರ್ಸ ಕಾಲೋನಿ ಬೀದರ ರವರ ಮನೆಯಲ್ಲಿ ಕಿರಗುಣಿ, ಶಾಲು ಹೊದಿಸುವ ಕಾರ್ಯಕ್ರಮ ಇದ್ದ ಕಾರಣ ಫಿರ್ಯಾದಿಯು ತನ್ನ ದ್ವಿಚಕ್ರ ವಾಹನ ಸಂ, ಕೆಎ-38/ಆರ-2465 ನೇದರ ಮೇಲೆ ಸದರಿ ಕಾರ್ಯಕ್ರಮಕ್ಕೆ ಹಾಜಾರಾಗಲು ಹೊಗಿ ವಾಹನವನ್ನು ಬಾಬುರಾವರವರ ಮನೆಯ ಮುಂದೆ ನಿಲ್ಲಿಸಿ ಕಾರ್ಯಕ್ರಮ ಮುಗಿಸಿ ಬಂದು ನೊಡಲಾಗಿ ತಾನು ನಿಲ್ಲಿಸಿದ ವಾಹನ ಸ್ಥಳದಲ್ಲಿ ಇರಲಾರದ ಕಾರಣ ಗಾಬರಿಗೊಂಡು ಅಲ್ಲಿ ಇಲ್ಲಿ ಹುಡುಕಾಡಲಾಗಿ ಅಕ್ಕ ಪಕ್ಕದವರಿಗೆ ಕೆಳಲಾಗಿ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಕಾರಣ ಫಿರ್ಯಾದಿಯವರ ದ್ವಿಚಕ್ರ ವಾಹನ ಸಂ. ಕೆಎ-38/ಆರ-2465, ಅ.ಕಿ 28,500/- ರೂಪಾಯಿ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 19-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.