Police Bhavan Kalaburagi

Police Bhavan Kalaburagi

Thursday, February 2, 2017

BIDAR DISTRICT DAILY CRIME UPDATE 02-02-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-02-2017

d£ÀªÁqÀ ¥Éưøï oÁuÉ UÀÄ£Éß £ÀA. 06/2017, PÀ®A 87 PÉ.¦ PÁAiÉÄÝ :-
ದಿನಾಂಕ 01-02-2017 ರಂದು ಯರನಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ರವೀಂದ್ರನಾಥ ಎಎಸ್ಐ ಜನವಾಡಾ ಪೊಲೀಸ್ ಠಾನೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸಐ ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡೆ ಯರನಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂದೆ ಸಾರ್ವಜನಿಕರ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೊಪಿತರಾದ 1) ಲಿಂಗಾನಂದ ಸ್ವಾಮಿ ತಂದೆ ಶಿವಾರುದ್ರಯಸ್ವಾಮಿ, 2) ಕಾಂತಯ್ಯಾ ಸ್ವಾಮಿ ತಂದೆ ಗುರಯ್ಯಾ ಸ್ವಾಮಿ, 3) ವಿಜಯ ತಂದೆ ಬೀರಪ್ಪಾ ಪ್ರಭಾನೋರ, 4) ಆಮೇರ ತಂದೆ ಶಮಶೋದ್ದಿನ ಹೊಕಾರ್ಣೆವಾಲೆ, 5) ನವಾಜ್ ತಂದೆ ಇಮಾಮಸಾಬ ಮಚಕುರಿ ರವರ ಮೇಲೆ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು ನಗದು ಹಣ 2170/- ರೂಪಾಯಿ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 09/2017, PÀ®A 498(J), 323, 504 eÉÆvÉ 149 L¦¹ :-
ಫಿರ್ಯಾದಿ ಅಂಬಿಕಾ ಗಂಡ ದಯಾನಂದ ಸಾ: ಶರಣನಗರ (ಕಿಣ್ಣಿ), ಸದ್ಯ: ಮಂಗಳೂರ ರವರಿಗೆ ದಯಾನಂದ ತಂದೆ ದೇವಿಂದ್ರಪ್ಪಾ ತೆಳಕೇರಿ ಮು: ಶರಣನಗರ (ಕಿಣ್ಣಿ) ಎಂಬಾತನಿಗೆ ದಿನಾಂಕ 14-05-2015 ರಂದು ಗಂಡನ ಮನೆಯ ಮುಂದೆ ಸಾಂಪ್ರದಾಯಿಕವಾಗಿ ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆ ಸಮಯಕ್ಕೆ ಫಿರ್ಯಾದಿಯ ತಂದೆ ತಾಯಿಯವರು 40 ಗ್ರಾಂ. ಬಂಗಾರ ಹಾಗು 11,000/- ರೂಪಾಯಿ ಮತ್ತು 50 ಸಾವಿರದಷ್ಟು ಗೃಹ ಬಳಕೆಯ ಸಾಮಾನುಗಳು ವರನಿಗೆ ಉಡುಗರೆ ರೂಪದಲ್ಲಿ ಕೊಟ್ಟಿರುತ್ತಾರೆ, ಅಲ್ಲದೇ 20 ಸಾವಿರ ರೂಪಾಯಿ ಖರ್ಚು ಮಾಡಿ ಬಟ್ಟೆ ತಂದು ಬಾಸಣಕಿ ಹಾಕಿ ಕೊಟ್ಟಿರುತ್ತಾರೆ, ಲಗ್ನದ ನಂತರ ಗಂಡನ ಮನೆಗೆ ಕರೆದೊಯ್ದು 8 ದಿನಗಳು ಮಾತ್ರ ಚೆನ್ನಾಗಿ ಇಟ್ಟುಕೊಂಡಿರುತ್ತಾರೆ, ನಂತರ ಆರೋಪಿತರಾದ 1) ದಯಾನಂದ ತಂದೆ ದೇವಿಂದ್ರಪ್ಪಾ ವಯ: 45 ವರ್ಷ (ಗಂಡ), 2)  ಶಿವಭದ್ರಮ್ಮ (ಅತ್ತೆ), 3) ದೇವಿಂದ್ರಪ್ಪಾ (ಮಾವ), 4) ಶಶಿಕಲಾ (ಗಂಡನ ಅತ್ತಿಗೆ) 4 ಜನ ಸಾ: ಶರಣನಗರ (ಕಿಣ್ಣಿ) 5) ಸುನೀತಾ ಗಂಡ ಜಯಪ್ಪಾ ಸಾ: ಧನ್ನೂರ (ನಾದನಿ) ಇವರೇಲ್ಲರೂ ಕೂಡಿ ಫಿರ್ಯಾದಿಗೆ ಹೊಡೆಬಡೆ ಮಾಡಿ ಹೊಲಸು ಶಬ್ದಗಳಿಂದ ಬೈದು ಮಾನಸಿಕ ಹಾಗು ದೈಹಿಕ ಹಿಂಸೆ ಕೊಟ್ಟು ನಾನಾ ರೀತಿಯ ಕಿರುಕುಳ ಕೊಡಲಾರಂಭಿಸಿದರು, ಫಿರ್ಯಾದಿಯು ಬಿ.ಎ ಶಿಕ್ಷಣ ವಿದ್ಯಾರ್ಥಿನಿ ಇದ್ದು ಸರಿ ಹೊಂದಬಹುದೆಂದು ತಾಳಿಕೊಂಡರು ಸದರಿ ಆರೋಪಿರು ಸರಿ ಪಡಿಸಿಕೊಳ್ಳಲಿಲ್ಲ, ಫಿರ್ಯಾದಿಯ ನಿಶ್ಚಿತಾರ್ಥ ಮಾಡಿದ ಪ್ರಕಾಶ ಮೇತ್ರೆ ಪೂಜಾರಿ ಎಂಬಾತನು 20 ವರ್ಷದವಳಾದ ಫಿರ್ಯಾದಿಗೆ 45 ವರ್ಷದ ವೃದ್ಧನಿಗೆ ಅನೇಕ ಸುಳ್ಳುಗಳು ಹೇಳಿ ಕೆಟ್ಟ ಆಲೋಚನೆಯಿಂದ ಎಲ್ಲರೂ ಕೂಡಿ ಲಗ್ನ ಮಾಡಿ ಕೊಟ್ಟಿರುತ್ತಾರೆಂದು ಗೊತ್ತಾಯಿತು, ವರ ಹಣದ ಆಸೆಗೆ ಹಾಗು ಫಿರ್ಯಾದಿಗೆ ದುರುಪಯೋಗ ಮಾಡಿಕೊಳ್ಳುವ ವಿಚಾರದಿಂದ ಮಾಡಿಕೊಂಡಿದ್ದಾರೆ, ಅಲ್ಲದೇ ಫಿರ್ಯಾದಿಗೆ ಇನ್ನು 20 ಸಾವಿರ ರೂಪಾಯಿ ನಿಮ್ಮ ತಂದೆಯಿಂದ ತೆಗೆದು ಕೊಂಡು ಬಾ ಎಂದು ಕರೆ ಮುಖಾಂತರ ಸತ್ತಾಯಿಸುತ್ತಿದ್ದಾರೆ, ಫಿರ್ಯಾದಿಯ ತಂದೆ ತಾಯಿ ಯವರು ಅತಿ ಬಡವರಾಗಿದಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-02-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes.

ಅಫಜಲಪೊರ ಠಾಣೆ : ಇಂದು ದಿನಾಂಕ 01-02-2017 ರಂದು 11:50 ಎಮ್ ಕ್ಕೆ ಮಾನ್ಯ ಪಿ.ಎಸ್. ಸಾಹೇಬರು ಒಬ್ಬ ಆರೋಪಿತನೊಂದಿಗೆ ಮುದ್ದೆ ಮಾಲು ಮತ್ತು ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶವೇನೆಂದರೆ ದಿನಾಂಕ 01-02-2017 ರಂದು 10:00 ಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರಾದ ಚಂದ್ರಕಾಂತ ಹೆಚ್.ಸಿ-449 ಅರವಿಂದ ಪಿಸಿ-501, ಶರಣು ಪಿಸಿ-881 ರವರೊಂದಿಗೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ಪಟ್ಟಣದ ತಹಸಿಲ ಕಾರ್ಯಾಲಯದ ಹತ್ತಿರ ಇದ್ದಾಗ ಬಾತ್ಮಿ ಬಂದಿದ್ದೇನೆಂದರೆ, ಘತ್ತರಗಾ ಗ್ರಾಮದಲ್ಲಿ ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಬಾತ್ಮಿ ಬಂದ ಮೇರೆಗೆ, ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದ ಅನುಮಾತಿಗಾಗಿ ಪತ್ರ ಬರೆದು ನಿವೇದಿಕೊಂಡು ನಂತರ ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ|| ಇಬ್ಬರು ಅಫಜಲಪೂರ ಇವರನ್ನು ಅಫಜಲಪೂರ ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯವನ್ನು ತಿಳಿಸಿ, ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ, ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರು ಹಾಗು ಪಂಚರೊಂದಿಗೆ 10:10 ಎಮ್ ಕ್ಕೆ ನಮ್ಮ ಇಲಾಖಾ ವಾಹನದಲ್ಲಿ ಹೊರಟು.10:30 ಎಮ್ ಕ್ಕೆ ಘತ್ತರಗಾ ಗ್ರಾಮದ  ಅಂಬೇಡ್ಕರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೇಡ್ಕರ ಸರ್ಕಲ ಹತ್ತಿರ ಶ್ರೀ ಭಾಗ್ಯವಂತಿ ದೇವಿಯ ಗುಡಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ದೇವಸ್ಥಾನಕ್ಕೆ ಹೋಗಿ ಬರುವ ಭಕ್ತಾದಿಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿ ವ್ಯಕ್ತಿಗೆ ಹಣ ಕೇಳುತ್ತಿದ್ದರು, ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಯಶವಂತ ತಂದೆ ಅಣ್ಣಪ್ಪ ಹೂಗಾರ ವಯಾ|| 59 ವರ್ಷ ಜಾ|| ಹೂಗಾರ || ಒಕ್ಕಲುತನ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2060/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಹಾಗೂ ಒಂದು ಸಮಸಂಗ ಕಂಪನಿಯ ಸಾದಾ ಮೋಬೈಲ ಪೋನ್ ಅಕಿ-100/- ರೂ ದೊರೆತವುಸದರಿಯವುಗಳನ್ನು ಪಂಚರ ಸಮಕ್ಷಮ10:35 .ಎಮ್ ದಿಂದ 11:30 .ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ ಮರಳಿ ಠಾಣೆಗೆ 11.50 .ಎಮ್ ಕ್ಕೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಿದ ಮೇರೆಗೆ ಸದರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 13/2017 ಕಲಂ 78 (3) ಕೆ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.
ಅಫಜಲಪೊರ ಠಾಣೆ : ನಾನು ಧರ್ಮರಾಜ ತಂದೆ ಸತೀಶ ನನಾಜಿ || 30 ವರ್ಷ ಜಾ|| ಮರಾಠ || ಒಕ್ಕಲುತನ ಸಾ||ಮಣುರ  ತಾ||ಅಫಜಲಪೂರ ಇದ್ದು  ಮೂಲಕ ವಿನಂತಿಸಿಕೊಳ್ಳುವದೆನೆಂದರೆ ನಮ್ಮ ತಂದೆತಾಯಿಗೆ ನಾವು ಮೂರು ಜನ ಗಂಡು ಮಕ್ಕಾಳಾದ 1) ನಾನು 2) ಜ್ಞಾನೇಶ್ವರ 3) ಮಾದುರಾವ ||21 ವರ್ಷ ಅಂತ ಇದ್ದು ನಮ್ಮ ತಮ್ಮನಾದ ಮಾದುರಾವ ಈತನು ಈಗ ಒಂದು ವರ್ಷದಿಂದ ಜೆಸ್ಕಾಂ ಇಲಾಖೆಯಲ್ಲಿ ಕಿರಿಯ ಲೈನ್ ಮ್ಯಾನ್ ಹುದ್ದೆಗೆ ನೇಮಕವಾಗಿ ಸಧ್ಯ ಅಫಜಲಪೂರ ಜೆಸ್ಕಾಂ ಉಪ ವಿಭಾಗದಲ್ಲಿ ಬರುವ ಕರಜಗಿಯ ಶಾಖೆಯಲ್ಲಿ  ಕಿರಿಯ ಲೈನ್ ಮ್ಯಾನ್ ಅಂತ ಕರ್ತವ್ಯ ನಿರ್ವಯಿಸುತ್ತಿದ್ದನು ಇಂದು ದಿನಾಂಕ 01/02/2017 ರಂದು 12 ಪಿಎಮ್ ಸುಮಾರಿಗೆ ನಾನು ನಮ್ಮ ತಂದೆ ತಾಯಿ ಹಾಗು ನಮ್ಮ ತಮ್ಮನಾದ ಜ್ಞಾನೇಶ್ವರ ಮೂರು ಜನರು ನಮ್ಮ  ಮನೆಯಲಿದ್ದಾಗ ನಮ್ಮ ಖಾಕನ ಮಗನಾದ ಮಹೇಶ ಈತನು ನನ್ನ ಮೋಬೈಲ್ ಗೆ ಕಾಲ ಮಾಡಿ ತಿಳಿಸಿದ್ದೇನೆಂದರೆ ಇಂದು 11.40 ಎಎಮ್ ಸುಮಾರಿಗೆ ನಾನು ಬಸ್ಸಿನಲ್ಲಿ ನಮ್ಮ ಗ್ರಾಮಕ್ಕೆ ಬರುವಾಗ ಕರಜಗಿ ಮಣುರ ರೋಡಿಗೆ ಇರುವ ರಾಮನಗರ ಹತ್ತಿರ ಮಾದುರಾವ ಈತನು ವಿದ್ಯೂತ್ ಕಂಬದಲ್ಲಿ ಕೆಲಸ ಮಾಡುತಿದ್ದಾಗ ಕರೆಂಟ್ ತಗುಲಿ ಬಿದ್ದಿರುತ್ತಾನೆ ನಿವು ಬನ್ನಿ ಅಂತ ತಿಳಿಸಿದ ಬಳಿಕ ನಾನು ನಮ್ಮ ತಂದೆ ತಾಯಿ ನಮ್ಮ ತಮ್ಮ ಹಾಗು ನಮ್ಮ ಗ್ರಾಮದ ಅನಿಕೇತನ ಮೋರೆ, ಅಂಬರೀಶ ನಾವದಗಿ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನಾದ ಮಾದುರಾವ ಇತನಿಗೆ ವಿದ್ಯೂತ್ ತಗುಲಿ ವಿದ್ಯೂತ್ ಕಂಬದಿಂದ ಕೆಳಗೆ ಬಿದ್ದು  ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ನಂತರ ನಮ್ಮ ತಮ್ಮನ ಮೃತ ದೇಹವನ್ನು   ಒಂದು ಖಾಸಗಿ ವಾಹನಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ನಮ್ಮ ತಮ್ಮನಾದ ಮಾದುರಾವ ಈತನು ಜೆಸ್ಕಾಂ ಕರಜಗಿ ಶಾಖೆಯ ಎಸ್ ಆದ ,ಮಳಸಿದ್ದಪ್ಪ ನಿಲೂರ, ವಿಮಲ್ ಫರ್ಮ ಗುತ್ತಿಗೆದಾರನಾದ ಕಿಶನ ಹಾಗು ಮಣೂರ 33 ಕೆವಿ  ಸ್ಟೇಷನ್  ದಲ್ಲಿ ಆಪರೇಟರ್ ಕೆಲಸ ಮಾಡುವ ಸಿಬ್ಬಂದಿಯವರಾದ ನಾಗಪ್ಪ ಶಿರವಾಳ ,ರಾಮಣ್ಣ ಅಂದೇವಾಡಿ ಸಾ|| ಇಬ್ಬರು ಹೊಸೂರ ಇವರ ನಿಸ್ಕಾಳಜಿತನದಿಂದ ಕರ್ತವ್ಯದ ಮೇಲೆ ಇದ್ದ ನಮ್ಮ ತಮ್ಮನಿಗೆ ವಿದ್ಯೂತ್  ತಗುಲಿ ಮೃತಪಟ್ಟಿದ್ದು ಇರುತ್ತದೆ ನಮ್ಮ ತಮ್ಮನ ಸಾವಿಗೆ ಕಾರಣರಾದ ನಾಲ್ಕು ಜನರ ಮೇಲೆ ಕಾನೂನಿನ ಕ್ರಮ ಜರೂಗಿಸಲು ಬಗ್ಗೆ ವರದಿ.