Police Bhavan Kalaburagi

Police Bhavan Kalaburagi

Saturday, June 23, 2018

BIDAR DISTRICT DAILY CRIME UPDATE 23-06-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-06-2018

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 15/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 19-06-2018 ರಂದು ಫಿರ್ಯಾದಿ ಬಾಬುರಾವ ತಂದೆ ಸಿದ್ರಾಮಪ್ಪಾ ಬಿರಾದರ್ ಸಾ: ಹಾಲ ಹಿಪ್ಪರ್ಗಾ ರವರ ಅಣ್ಣನಾದ ಕುಪೆಂದ್ರ ವಯ: 65 ವರ್ಷ ರವರು ತನ್ನ ಹೊಲಕ್ಕೆ ಹೋಗಿ ಹೊಲದ ಕಟ್ಟೆಯ ಮೇಲೆ ದನಗಳಿಗೆ ಮೇವು ತಯಾರು ಮಾಡುತ್ತಿದ್ದಾಗ ವಿಷದ ಹಾವು ಅವರ ಬಲಗಾಲು ಮೊಳಕಾಲು ಕೆಳಗೆ ಕಚ್ಚಿದ್ದರಿಂದ ಅವರಿಗೆ ಫಿರ್ಯಾದಿ ಮತ್ತು ರಾಜಕುಮಾರ ಕೂಡಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ಆದರೆ ಅವರ ಆರೋಗ್ಯ ಸುಧಾರಿಸದೇ ಇರುವುದರಿಂದ ಬೀದರ ಸರಕಾರಿ ಆಸ್ಪತ್ರೆಯ ವೈಧ್ಯರಲ್ಲಿ ಮನವಿ ಮಾಡಿಕೊಂಡು ಖಾಸಗಿ ಗಿಡ ಮೂಲಿಕ ಔಷಧಿ ಕೊಡಿಸಲು ಹಳ್ಳೀಖೆಡ(ಬಿ) ಗ್ರಾಮಕ್ಕೆ ತಂದು ನಂತರ ದಿನಾಂಕ 21-06-2018 ರಂದು ಹಳ್ಳಿಖೇಡದಿಂದ ಬರುವ ಮಾರ್ಗ ಮಧ್ಯದಲ್ಲಿ ಅವರ ಸ್ಥಿತಿ ಸಂಪೂರ್ಣ ಹದಗಟ್ಟಿದ್ದರಿಂದ ಮತ್ತು ಉಸಿರಾಟ ನಿಂತು ಹೊದ ಬಗ್ಗೆ ಅನುಮಾನ ಬಂದಿದ್ದರಿಂದ ಕೂಡಲೆ ಅವರಿಗೆ ಬೀದರ ಸರ್ಕಾರಿ ಆಸ್ಪತ್ರೆಗೆ ದಿನಾಂಕ 22-06-2018 ರಂದು ತಂದಾಗ ವೈಧ್ಯರು ನೋಡಿ ಅವರು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 218/2018, PÀ®A. 302 L¦¹ :-
¦üAiÀiÁ𢠪ÀÄAUÀ¯Á UÀAqÀ eÉÊgÁd ZÀAzÀæ£ÉÆÃgÀ ªÀAiÀÄ: 50 ªÀµÀð, eÁw: J¸À.¹ ºÉÆ°AiÀiÁ, ¸Á: WÁl¨ÉÆgÁ¼À, vÁ: ºÀĪÀÄ£Á¨ÁzÀ gÀªÀgÀ vÀªÀÄä£ÁzÀ ²ªÁf EvÀ£À ºÉAqÀw gÉÃSÁ EªÀ¼ÀÄ ºÀt PÉÆqÀÄ CAvÀ DUÁUÀ dUÀ¼À ªÀiÁqÀÄvÁÛ EgÀÄwÛzÀÄÝ, gÉÃSÁ EªÀ¼ÀÄ ²ªÁf EªÀ¤UÉ Hl ºÁPÀzÉ §gÉ ºÀt PÉÆqÀÄ CAvÀ dUÀ¼À ªÀiÁr ºÉÆqÉ §qÉ ªÀiÁqÀÄwÛzÀݼÀÄ, F §UÉÎ ²ªÁf EvÀ£ÀÄ ¦üAiÀiÁð¢AiÀÄ ªÀÄ£ÉUÉ §AzÀÄ ºÉ¼ÀÄwÛzÀÝ£ÀÄ, ¦üAiÀiÁð¢AiÀÄÄ C£ÉÃPÀ ¨Áj gÉÃSÁ EªÀ½UÉ dUÀ¼À ªÀiÁqÀ¨ÉÃqÀ E§âgÀÄ ZÀ£ÁßVj CAvÀ w½ºÉ½zÀgÀÆ PÀÆqÀ gÉÃSÁ EªÀ¼ÀÄ ²ªÁfUÉ ºÀt vÀAzÀÄ PÉÆqÀÄ CAvÀ dUÀ¼À ªÀiÁqÀÄwÛzÀݼÀÄ, »VgÀĪÀ°è ¢£ÁAPÀ 21-06-2018 gÀAzÀÄ gÁwæ ¸ÀªÀÄAiÀÄzÀ°è ²ªÁf ªÀÄvÀÄÛ gÉÃSÁ EªÀgÀ ªÀÄzÀå dUÀ¼ÀªÁVzÀÄÝ, gÉÃSÁ EªÀ¼ÀÄ ºÀt vÀAzÀÄ PÉÆqÀÄ CAvÀ dUÀ¼À vÉUÉzÀÄ CªÀgÀ ªÀÄ£ÉAiÀÄ ªÀÄÄAzÉ CAUÀ¼ÀzÀ°è E§âgÀÄ dUÀ¼À ªÀiÁrPÉÆAqÀÄ dUÀ¼ÀzÀ°è ²ªÁfUÉ gÉÃSÁ EªÀ¼ÀÄ §rUɬÄAzÀ ªÉÄÊAiÀÄ°è C®°è ºÉÆqÉzÀÄ UÀÄ¥ÀÛUÁAiÀÄ ¥Àr¹ K¼ÉzÁr vÀgÀazÀ UÁAiÀÄ ªÀiÁrgÀÄvÁÛ¼É, ²ªÁfUÉ §rUɬÄAzÀ ºÉÆqÉ¢zÀÄzÀÝjAzÀ ²ªÁf EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 22-06-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 166/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 22-06-2018 ರಂದು ಫಿರ್ಯಾದಿ ರಾಜಕುಮಾರ ತಂದೆ ಚನ್ನಬಸಯ್ಯ ಸ್ವಾಮಿ ಸಾ: ತ್ರಿಪುರಾಂತ ಬಸವಕಲ್ಯಾಣ ರವರ ಹೆಂಡತಿ ಜಗದೇವಿ ಮತ್ತು ಮಗ ಅಭೀಷೆಕ ಇಬ್ಬರು ಕಣಜಿ ಗ್ರಾಮದಲ್ಲಿ ಸಂಬಂಧಿಕರು ಮೃತ್ತಪಟ್ಟಿದರಿಂದ ಕಣಜಿ ಗ್ರಾಮಕ್ಕೆ ಕಾರ ನಂ. ಕೆಎ-56/ಎಮ್-0679 ನೇದರಲ್ಲಿ ಕುಳಿತುಕೊಂಡು ಬ್ಯಾಲಳ್ಳಿ ಕಡೆಯಿಂದ ಹುಮನಾಬಾದ ಕಡೆಗೆ ಬರುವಾಗ ಬೀದರ-ಹುಮನಾಬಾದ ರಸ್ತೆಯ ದೆವಣಿ ಡೈರಿ ಫಾರಂ ಹತ್ತಿರ ಬಂದಾಗ ಕಾರ ಚಾಲಕನಾದ ಆರೋಪಿ ಉಮೇಶ ತಂದೆ ಬಸವರಾಜ ಸಾ: ತ್ರಿಪುರಾಂತ, ತಾ: ಬಸವಕಲ್ಯಾಣ ಇತನು  ತನ್ನ ಕಾರನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಾರ ಒಮ್ಮೆಲೆ ಪಲ್ಟಿ ಮಾಡಿದ್ದರಿಂದ ಕಾರಿನಲ್ಲಿದ್ದ ಫಿರ್ಯಾದಿಯವರ ಮಗನಾದ ಅಭೀಷೆಕ ಇತನಿಗೆ ತಲೆಯಲ್ಲಿ ಭಾರಿ ಗಾಯವಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ನಂತರ ಆರೋಪಿಯು ಅಲ್ಲಿಂದ ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 119/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 22-06-2018 ರಂದು ಫಿರ್ಯಾದಿ ಸ್ವರಸ್ವತಿ ಗಂಡ ಶಿವಕುಮಾರ ಹಾಲಭಾವಿ, ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಮುಸ್ತಾಪೂರ ರವರ ಗಂಡನಾದ ಶಿವಕುಮಾರ ತಂದೆ ಶಂಭುಲಿಂಗ ಹಾಲಭಾವಿ ವಯ: 40 ವರ್ಷ ರವರು ತಮ್ಮ ಮೋಟರ ಸೈಕಲ ನಂ. ಕೆಎ-39/ಕೆ-5858 ನೇದ್ದರ ಮೇಲೆ ಹಳ್ಳಿಖೇಡ(ಕೆ) ಗ್ರಾಮದ ಕಡೆಗೆ ಹೋಗುವಾಗ ಹುಮನಾಬಾದ-ಕಲಬುರ್ಗಿ ರಾಷ್ಟ್ರಿಯ ಹೆದ್ದಾರಿ ನಂ. 50 ಹಳ್ಳಿಖೆಡ(ಕೆ) ವಾಡಿಯ ಶಿವಾರದ ಮಾರುತಿ ಸದ್ಲಾಪೂರೆ ರವರ ಹೊಲದ ಹತ್ತಿರ ರೋಡಿನ ಮೇಲೆ ಎದುರಿನಿಂದ ಅಂದರೆ ಹಳ್ಳಿಖೇಡ(ಕೆ) ಗ್ರಾಮದ ಕಡೆಯಿಂದ ಬಂದ ಒಂದು ಅಪರಿಚಿತ ಮೋಟಾರ ಸೈಕಲ್ ಚಾಲಕನ್ನು ತನ್ನ ಮೋಟಾರ ಸೈಕಲನ್ನು ಅತಿ ವೇಗ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಗಂಡನ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಅವರ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಬಲಗಡೆ ಕಿವಿಯಿಂದ ರಕ್ತ ಸ್ರಾವವಾಗಿ  ಬೇಹೋಷಾಗಿರುತ್ತಾರೆ, ನಂತರ ಅವರಿಗೆ ಚಿಕಿತ್ಸೆಗಾಗಿ ಒಂದು ಖಾಸಗಿ ವಾಹನದಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 199/2018, ಕಲಂ. 323, 498(ಎ), 504, 506 ಜೊತೆ 34 ಐಪಿಸಿ :-
ದಿನಾಂಕ 22-06-2018 ರಂದು ಫಿರ್ಯಾದಿ ಸುನೀತಾ ಗಂಡ ಮಹೇಶ ಶೀಂಧೆ ಸಾ: ದತ್ತ ನಗರ ಭಾಲ್ಕಿ ರವರ ತವರು ಮನೆ ಮಹಾರಾಷ್ಟ್ರದ ಅಹಮದಪೂರ ಇದ್ದು, 9 ವರ್ಷಗಳ ಹಿಂದೆ ಫಿರ್ಯಾದಿಯವರ ಮದುವೆ ಭಾಲ್ಕಿಯ ಮಹೇಶ ತಂದೆ ಬಾಬುರಾವ ಶೀಂಧೆ ರವರ ಜೋತೆ ಆಗಿದ್ದು, ಈಗ ಫಿರ್ಯಾದಿಗೆ 1) ಸೃಷ್ಟಿ, 2) ಖುಷಿ ಅಂತಾ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ, ಫಿರ್ಯಾದಿಗೆ ಎರಡನೇ ಮಗಳು ಹುಟ್ಟುವವರೆಗೆ ಗಂಡನ ಮನೆಯಲ್ಲಿ ಅತ್ತೆ ಕಮಲಾ, ಮಾವ ಬಾಬುರಾವ, ಭಾವ ಮಂಗೆಶ ರವರು ಸರಿಯಾಗಿ ನೋಡಿಕೊಂಡಿದ್ದು, ನಂತರ ಬರ ಬರುತ್ತಾ ಗಂಡ ಮಹೇಶ, ಅತ್ತೆ ಕಮಲಾ, ಭಾವ ಮಂಗೇಶ ರವರು ಸೇರಿ ನಿನಗೆ ಗಂಡು ಮಕ್ಕಳು ಹುಟ್ಟಿಲ್ಲಾ ಮತ್ತು ನಿನಗೆ ಮನೆ ಕೆಲಸ ಮಾಡಲು ಬರುವದಿಲ್ಲಾ ಅಂತಾ ಮಾನಸಿಕ ಹಾಗೂ ದೈಹೀಕವಾಗಿ ಕಿರುಕುಳ ಕೊಡುವದು ಹಾಗು ನಿನ್ನ ನಡತೆ ಸರಿಯಾಗಿಲ್ಲಾ ಅಂತಾ ಶೀಲದ ಮೇಲೆ ಸಂಶಯ ಪಟ್ಟು ತೊಂದರೆ ಕೊಡುತ್ತಿದ್ದರು, ಆಗ ಈ ಬಗ್ಗೆ ಫಿರ್ಯಾದಿಯು ತನ್ನ ತಂದೆ ತಾಯಿಗೆ ತಿಳಿಸಿದಾಗ ತಂದೆ ತಾಯಿ ಹಾಗು ಸಂಬಂಧಿಕರು ಕೂಡಿ ಭಾಲ್ಕಿಗೆ ಬಂದು ತನ್ನ ಗಂಡ, ಅತ್ತೆ ಕಮಲಾ, ಭಾವ ಮಂಗೇಶ ರವರಿಗೆ ಬುದ್ದಿ ಹೇಳಿ ಹೋಗಿದ್ದು, ಫಿರ್ಯಾದಿಯವರ ತಂದೆ ತಾಯಿ ಹಾಗೂ ಸಂಬಂಧಿಕರು ಬುದ್ದಿ ಹೇಳಿ ಹೋದ ನಂತರ ಸ್ವಲ್ಪ ದಿವಸ ಸರಿಯಾಗಿ ನೋಡಿಕೊಂಡು ಪುನ: ಮೊದಲಿನಂತೆ ತೊಂದರೆ ಕೊಡಲು ಪ್ರಾರಂಭಿಸಿ ಈಗ 4 ವರ್ಷಗಳ ಹಿಂದೆ ಫಿರ್ಯಾದಿಗೆ ಬೇರೆ ಮನೆ ಕಟ್ಟಿ ಇಟ್ಟಿದ್ದು, ಅಲ್ಲಿ ಸ್ವಲ್ಪ ದಿವಸ ಇಟ್ಟು ಶೀಲದ ಮೇಲೆ ಸಂಶಯ ಪಟ್ಟು ವಾಪಸ ಮನೆಗೆ ಕರೆದುಕೊಂಡು ಬಂದು ಒಂದು ಬೇರೆ ಕೋಣೆಯಲ್ಲಿ ಇಟ್ಟಿರುತ್ತಾರೆ, ಹಿಗಿರಲು ದಿನಾಂಕ 22-06-2018 ರಂದು ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ಮನೆಯ ಮುಂದೆ ಕುಳಿತಿರುವಾಗ ಆರೋಪಿತರಾದ ಗಂಡ ಮಹೇಶ, ಅತ್ತೆ ಕಮಲಾ, ಭಾವ ಮಂಗೇಶ ರವರು ಬಂದವರೆ ಅವರ ಪೈಕಿ ಗಂಡ ನೀನು ಬೇರೆಯವರ ಜೋತೆ ಸಂಬಂಧ ಇಟ್ಟುಕೊಂಡಿದ್ದು ಅದಕ್ಕೆ ನಿನಗೆ ನನ್ನ ನೆನಪು ಬರುತಿಲ್ಲಾ ಅಂತ ಅಂದವನೆ ಕೈಯಿಂದ ತಲೆಯಲ್ಲಿ, ಎದೆಯಲ್ಲಿ, ಬೆನ್ನಲ್ಲಿ ಹೊಡೆದು ಗಾಯ ಪಡಿಸಿದನು, ಅತ್ತೆ ಕಮಲಾ ಇವಳು ನೀನು ನಮ್ಮ ಮನೆಯ ಮಾನ ಕಳೆಯುತಿದ್ದಿ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಅಂದು ಕೈಯಿಂದ ಗಲ್ಲದ ಮೆಲೆ ಹೋಡೆದಳು, ಭಾವ ಮಂಗೇಶನು ಇವಳಿಗೆ ನಮ್ಮ ಮನೆಯಲ್ಲಿ ಇಟ್ಟಿಕೊಳ್ಳುವದು ಬೇಡ ಅವಳಿಗೆ ಖತಂ ಮಾಡು ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.