Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 163/2018 ಕಲಂ 279, 337, 304 (ಎ) ಐ.ಪಿ.ಸಿ ಸಂ 187 ಐ.ಎಂ.ವಿ. ಕಾಯ್ದೆ;-
ದಿನಾಂಕ 06/07/2018 ರಂದು ಮದ್ಯಾಹ್ನ 2-00 ಪಿ.ಎಂ. ಕ್ಕೆ ಜಿಜಿಎಚ್ ಯಾದಗಿರಿಯಿಂದ
ದೂರವಾಣಿ ಮುಖಾಂತರ ಡೆತ್ ಎಂ.ಎಲ್.ಸಿ. ವಸೂಲಾಗಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ ವಾಹನ
ಅಪಘಾತದಲ್ಲಿ ಮೃತಪಟ್ಟ ಹಣಮಂತ ತಂದೆ ಮಲ್ಲಪ್ಪ ಕರ್ಣಪ್ಪನೊರ ವಯಾಃ 42 ವರ್ಷ ಸಾಃ
ಕಂದಕೂರ ಇವರ ಮಗನಾದ ಶ್ರೀ ದಿನೇಶ ತಂದೆ ಹಣಮಂತ ಕರ್ಣಪ್ಪನೊರ ವಯಾಃ 24 ವರ್ಷ ಸಾಃ
ಕಂದಕೂರ ಇವರು ಫಿರಯಾಧಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ
06/07/2018 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆ ಹಣಮಂತ
ಇಬ್ಬರೂ ನಮ್ಮ ಮೋಟಾರ ಸೈಕಲ್ ನಂ ಕೆ.ಎ-05-ಎಚ್.ಡಿ-1855 ನೆದ್ದರ ಮೇಲೆ ನಮ್ಮ ಬೀಗರ
ಊರಾದ ಗೌಡಗೇರಾ ಗ್ರಾಮಕ್ಕೆ ಹೋಗಬೇಕೆಂದು ನಮ್ಮೂರಿನಿಂದ ಹೊರಟೇವು, ಮೋಟಾರ ಸೈಕಲ್ ನಾನು
ನಡೆಸುತ್ತಿದ್ದೆನು, ಯಾದಗಿರಿ ಮುಖಾಂತರ ಶೆಟ್ಟಿಕೇರಾ ಗ್ರಾಮ ದಾಟಿ ಗುಡಿ ಹತ್ತಿರ ಬಂದಾಗ
ಆಗ ಸಮಯ ಮಧ್ಯಾಹ್ನ 12-30 ಗಂಟೆಯಾಗಿರಬಹುದು, ಅದೇ ವೇಳೆಗೆ ನಮ್ಮ ಹಿಂದುಗಡೆಯಿಂದ ಒಂದು
ಟ್ರ್ಯಾಕ್ಟರ ಅದರ ಚಾಲಕನು ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸುತ್ತಾ
ನಮಗೆ ಓವರಟೇಕ ಮಾಡಲು ಬಂದಾಗ ನಾನು ನಿಧಾನವಾಗಿ ಬಾ ಅಂತಾ ಆತನಿಗೆ ಕೈ ಸನ್ನೆ ಮಾಡಿ
ಹೇಳಿದರೂ ಕೂಡಾ ಟ್ರ್ಯಾಕ್ಟರ ಚಾಲಕನು ಅದೇ ವೇಗದಲ್ಲಿ ಬಂದು ನನ್ನ ಮೋಟಾರ ಸೈಕಲಕ್ಕೆ
ಹಿಂದಿನಿಂದ ಡಿಕ್ಕಿಪಡಿಸಿದಾಗ ನಾವು ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದೆವು, ನಮಗೆ
ಡಿಕ್ಕಿಪಡಿಸಿದ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ನಿಲ್ಲಿಸದೇ ಹಾಗೆ ಓಡಿಸಿಕೊಂಡು
ಹೋಗುವಾಗ ಅದರ ನಂ ಕೆ.ಎ-33-ಟಿಎ-5402 ಮತ್ತು ಟ್ರ್ಯಾಲಿ ನಂ ಕೆ.ಎ-33-ಟಿಎ-1951 ಅಂತಾ
ನೋಡಿರುತ್ತೆನೆ, ಟ್ರ್ಯಾಕ್ಟರ ಚಾಲಕನ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ,
ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ ನನಗೆ ಎಡಮುಂಡಿಗೆ ತರಚಿದ ಗಾಯ ಆಗಿರುತ್ತದೆ. ನನ್ನ
ತಂದೆಯವರಿಗೆ ಎಡ ಮೆಲಕಿಗೆ ಭಾರಿ ರಕ್ತಗಾಯ ಮತ್ತು ಎಡಗಡೆ ಕುತ್ತಿಗೆಗೆ ಭಾರಿ ತರಚಿದಗಾಯ,
ಎಡ-ಬಲ ತೊಳಿಗೆ ತರಚಿದಗಾಯವಾಗಿದ್ದು, ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ,
ಸ್ವಲ್ಪ ಸಮಯದ ನಂತರ ಅಲ್ಲಿಗೆ 108 ಅಂಬುಲೆನ್ಸ ಬಂದಿದ್ದು, ನಮ್ಮ ತಂದೆಯವರಿಗೆ ಅದರಲ್ಲಿ
ಹಾಕಿಕೊಂಡು ಉಪಚಾರಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿದಾಗ ನಮ್ಮ
ತಂದೆಯವರು ಉಪಚಾರ ಹೊಂದುತ್ತಾ 1-50 ಪಿ.ಎಂ ಕ್ಕೆ ಆಸ್ಪತ್ರೆಯಲ್ಲಿ ಸತ್ತಿರುತ್ತಾರೆ, ಈ
ಘಟನೆಗೆ ಕಾರಣನಾದ ಟ್ರ್ಯಾಕ್ಟರ ಚಾಲಕನ ವಿರುಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ
ಫಿರ್ಯಾಧಿ ಹೇಳಿಕೆಯನ್ನು ಪಡೆದುಕೊಂಡು 3-00 ಪಿ.ಎಂ. ಕ್ಕೆ ಮರಳಿ ಠಾಣೆಗೆ ಬಂದು
ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 163/2018 ಕಲಂ 279, 337,
304(ಎ) ಐಪಿಸಿ ಸಂ 187 ಐ.ಎಂ.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 148/2018 ಕಲಂ 379 ಐಪಿಸಿ;-
ದಿನಾಂಕ: 06-07-2018 ರಂದು 02-15 ಎ.ಎಮ್ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು
ವರದಿ ಮತ್ತು ಎರಡು ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಠಾಣೆಗೆ ತಂದು ಹಾಜರುಪಡಿಸಿ
ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ವರದಿಯ ಆಧಾರದ ಮೇಲಿಂದ ಠಾಣಾ
ಗುನ್ನೆ ನಂ.148/2018 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 149/2018. ಕಲಂ: 147.341.447.504.506.ಸಂ 149 ಐ ಪಿ ಸಿ ;-
ದಿನಾಂಕ 06-07-2018 ರಂದು 7-17 ಪಿ ಎಂ ಕ್ಕೆ ಹಂಪನಗೌಡ ತಂದೆ ಚಂದ್ರಯ್ಯಾಗೌಡ ಪೊಲೀಸ
ಪಾಟಿಲ ವಯಾ|| 60 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೆಳಗುಂದಿ ತಾ||
ಜಿಲ್ಲಾ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಅಜರ್ಿಯನ್ನು
ಹಾಜರ ಮಾಡಿದ್ದು. ಅದರ ಸಾರಾಂಶವೇನಂದರೆ. ನನ್ನದು ಬೆಳಗುಂದಿ ಸೀಮಾತರದಲ್ಲಿ ಸವರ್ೆ ನಂಬರ
480-490-477-463 ಜಮೀನಿರುತ್ತದೆ. ಹಾಗೂ ಇತರೆ ಸವರ್ೆ ನಂಬರಗಳು ಇದ್ದು ನಮ್ಮ ಸುತ್ತ
ಮುತ್ತಲಿನ ಹೊಲದವರು ಬೀಮಾ ನದಿಯಿಂದ ನಿರಾವರಿ ಮಾಡಿಕೊಂಡು ನಮ್ಮ ಹೊಲದಲ್ಲಿ
ಅನಾವಶ್ಯಕವಾಗಿ ನೀರು ಹರಿಸಿ ಸುಮಾರು ವರ್ಷಗಳಿಂದ ಬೆಳೆ ಹಾಳ ಮಾಡುತ್ತಾ ಬಂದಿದ್ದು
ಇರುತ್ತದೆ. ದಿನಾಂಕ 05-06-2018 ರಂದು ನಾನು ಮುಂಜಾನೆ 9 ಗಂಟೆಯ ಸುಮಾರಿಗೆ ಹೊಲಕ್ಕೆ
ಹೋದಾಗ ಅಲ್ಲಿ ನಮ್ಮ ಹೊಲದಲ್ಲಿ ನೀರು ಬಂದಿದ್ದು. ಅದಕ್ಕೆ ನಾನು ನಮ್ಮ ಹೊಲಗಳ ಪಕ್ಕದ
ಹೊಲಗಳನ್ನು ಲೀಜಗೆ ಮಾಡುವ ವ್ಯಕ್ತಿಗಳಾದ ಕೊಂಡರಾಜು. ಮತ್ತು ಏಷಪ್ಪ ಇವರಿಗೆ ನನ್ನ
ಹೊಲದಲ್ಲಿ ಯಾಕೆ ನೀರು ಬಿಟ್ಟಿರಿ ಅಂತಾ ಕೇಳಲಾಗಿ ಇವರು ನಮಗೆ ಏನ ಕೇಳುತ್ತಿ ಹೊಲದವರಿಗೆ
ಕೇಳು ಅಂತಾ ಗದರಿಸಿ ಅವಾಚ್ಚವಾಗಿ ಬೈಯ್ದಿರುತ್ತಾರೆ. ನಮ್ಮ ಹೊಲದ ಪಕ್ಕದವರಾದ 1)
ರಾಘವೇಂದ್ರ ತಂದೆ ಕೆ.ಬಿ.ಅಶೋಕ 2) ಶ್ರೀಮತಿ ಇಂದಿರಾ ಗಂಡ ಕೆ.ಬಿ.ಅಶೋಕ 3) ಸಂತೋಷ ತಂದೆ
ಸಿದ್ರಾಮಪ್ಪ. 4) ಶರಣಬಸವ ತಂದೆ ಸಿದ್ರಾಮಪ್ಪ 5) ಕೆ.ಬಿ.ಅಶೋಕ ತಂದೆ ನಾರಾಯಣಪ್ಪ
ಎಲ್ಲಾರು ಸಾ|| ಸೈದಾಪೂರ ಇವರಿಗೆ ನಾನು ನೀನು ಬಂದ್ ಮಾಡಿದರು ಕೂಡ ಮತ್ತೆ ನನ್ನ
ಹೊಲದಲ್ಲಿ ಏಕೆ ನೂರು ಬಿಟ್ಟಿರು ನನ್ನ ಹೊಲ ನೀರು ನಿಂತು ಹಾಳಾಗುತ್ತದೆ ಅಂತಾ ಕೇಳಲಾಗಿ
ಇವರೆಲ್ಲಾರು ನನಗೆ ಏನಲೆ ಲಂಗಾ ಸೂಳೆ ಮಗನೆ ಅನ್ನುತ್ತ ನನ್ನ ಹೊಲದಲ್ಲಿ ಅಕ್ರಮ ಪ್ರವೇಶ
ಮಾಡಿ ಏನ ಮಾಡುತ್ತಿ ಮಾಡುಲೆ ಅಂತಾ ಅನ್ನುತ್ತಾ ಇವರೆಲ್ಲಾರು ನನಗೆ ಅಡ್ಡಗಟ್ಟಿ
ನಿಲ್ಲಿಸಿ ಹೊಲದಲ್ಲಿ ಬಂದು ನಾನು ನೀರು ಬರದಂತೆ ಮಾಡಿದ ಒಡ್ಡನ್ನು ತೆಗೆದು ನನ್ನ
ಹೊಲದಲ್ಲಿ ನೀರು ಬಿಟ್ಟರು ಇವರು ಸುಮಾರು ದಿನಗಳಿಂದ ನನ್ನ ಹೊಲದಲ್ಲಿ ನೀರು ಬಿಟ್ಟು
ನನ್ನ ಹೊಲವನ್ನು ಹಾಳ ಮಾಡಿ 3-4 ವರ್ಷಗಳಿಂದ ನನ್ನ ಮೇಲೆ ದಬ್ಬಾಳಿಕೆ. ಗುಂಡಾಗಿರಿ
ಮಾಡುತ್ತಾ ಬಂದು ನನಗೆ ಕೊಲೆ ಬೆದರಿಕೆ ಹಾಕುತ್ತಾ ಬಂದು ಇವರು ನಮ್ಮ ಊರಲ್ಲಿನ ಪಟ್ಟಭದ್ರ
ಹಿತಾಸಕ್ತಿ ವ್ಯಕ್ತಿಗಳ ಮಾತು ಕೇಳಿ ಈರೀತಿ ನನ್ನ ಮೇಲೆ ಗುಂಡಾಗಿರಿ ಮಾಡುತ್ತಿದ್ದಾರೆ
ತಾವು ನನ್ನ ಮೇಲೆ ದಬ್ಬಾಳಿಕೆ ಮಾಡಿ ಗುಂಡಾಗಿರಿ ತೋರಿಸುವವರ ಮೇಲೆ ಕ್ರಿಮಿನಲ್ ದೂರು
ದಾಖಲಿಸಿ ಕ್ರಮ ಜರುಗಿಸಬೇಕಾಗಿ ವಿನಂತಿ ಮನೆಯಲ್ಲಿ ವಿಚಾರಣೆ ಮಾಡಿಕೊಂಡು ಬಂದು ದೂರು
ನೀಡುವದು ವಿಳಂಭವಾಗಿದೆ ಅಂತಾ ಅಜರ್ಿ ಸಾರಾಂಶಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ
ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 149/2018 ಕಲಂ 147.341.447.504.506.ಸಂ 149 ಐ
ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 246/2018 ಕಲಂ:323, 324, 354, 504, 506 ಸಂಗಡ 34 ಐಪಿಸಿ;-
ದಿನಾಂಕ 06.07.2018 ರಂದು ಸಮಯ ಬೆಳಿಗ್ಗೆ 9-00 ಗಂಟೆಗೆ ಶ್ರೀ ಜಾಧವ ಪಿಸಿ-148
ಗುರುಮಠಕಲ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದಿಂದ ವಸೂಲಾದ ಪತ್ರ ಸಂಖ್ಯೆ
/2018 ದಿನಾಂಕ 03.07.2018 ನೇದ್ದನ್ನು ಹಾಜರುಪಡಿಸಿದ್ದು ಅದರ ಸಂಕ್ಷಿಪ್ತ
ಸಾರಾಂಶವೆನೆಂದರೆ ಯದ್ಲಾಪೂರ ಸಿಮಾಂತರದ ಸವರ್ೆ ನಂ: 88 ರ ವಿಸ್ತೀರ್ಣ 7 ಎಕರೆ 2 ಗುಂಟೆ
ಜಮೀನನ್ನು ಫಿರ್ಯಾದಿಯ ತಂದೆ ಕೆಲವು ವರ್ಷಗಳ ಹಿಂದೆ ಸ್ವಂತ ದುಡಿಮೆಯಿಂದ ಮತ್ತು
ಕುರಿ-ಆಡುಗಳನ್ನು ಮಾರಾಟ ಮಾಡಿ ಬಂದಂತಹ ಹಣದಿಂದ ಸದರಿ ಜಮೀನನ್ನು ನಮ್ಮ ತಂದೆಯವರು
ಖರೀದಿ ಮಾಡಿದ್ದು ಅದರ ಕಬ್ಜದಾರರು ಹಾಗೂ ವಾರಸುದಾರರು ಫಿರ್ಯಾದಿಯ ತಂದೆಯವರೆ ಇದ್ದು
ದಿನಾಂಕ 17.06.2018 ರಂದು ಬೆಳಿಗ್ಗೆ 10:30 ರ ಫಿರ್ಯಾದಿ ಹಾಗೂ ಇತರರು ಸೇರಿ ಸದರಿ
ಹೊಲಕ್ಕೆ ಬಿತ್ತಲು ಹೋಗುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಫಿರ್ಯಾದಿಗೆ ಮತ್ತು ಆತನ
ಸಂಗಡ ಇದ್ದವರಿಗೆ ಅವಾಚ್ಯವಾಗಿ ಬೈದು, ಕೈಯಿಂದ, ಕಲ್ಲಿನಿಂದ, ಬಡಿಗೆ ಯಿಂದ ಹೊಡೆ-ಬಡೆ
ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಮಾನ್ಯ ನ್ಯಾಯಾಲಯದ ಉಲ್ಲೇಖದ ವರದಿಯಂತೆ ಠಾಣೆ
ಗುನ್ನೆ ನಂ 246/2018 ಕಲಂ: 323, 324, 354, 504, 506, ಸಂಗಡ 34 ಐಪಿಸಿ ಅಡಿಯಲ್ಲಿ
ಮಾನ್ಯ ನ್ಯಾಯಾಲಯದ ಉಲ್ಲೇಖಿತ ಗುನ್ನೆ ದಾಖಲಿಸಿಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ ;-.163/2018 ಕಲಂ. 279 337 338 ಐಪಿಸಿ ;- ದಿನಾಂಕ:06/07/2018
ರಂದು 11:00 ಗಂಟೆಯ ಸುಮಾರಿಗೆ ಆರೋಪಿ ನಂ:1 ನೇದ್ದವನು ಫಿರ್ಯಾದಿಗೆ ತನ್ನ ಮೋಟಾರ್
ಸೈಕಲ್ ನಂ:ಕೆಎ-33 ವಿ-1513 ಮೇಲೆ ಕೂಡಿಸಿಕೊಂಡು ಹುಣಸಗಿ ಬರಲು ಬನ್ನೆಟ್ಟಿ ಕ್ರಾಸ್
ದಾಟಿ ಹೊರಟು ತನ್ನ ಮೋಟಾರ್ ಸೈಕಲ್ನ್ನು ಅತೀವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು
ಹಿಂದೆ ಮುಂದೆ ನೋಡದೆ ನಡುರಸ್ತೆಯ ಮೇಲೆ ನಿಲ್ಲಿಸಲು ಪ್ರಯತ್ನಿಸಿದಾಗ ಹಿಂದಿನಿಂದ ಆರೋಪಿ
ನಂ:2 ನೇದ್ದವನು ತನ್ನ ಮೋಟಾರ್ ಸೈಕಲ್ ಕೆಎ-33 ಎಸ್-2917 ನೇದ್ದನ್ನು ಅತೀವೇಗ ಮತ್ತು
ನಿಸ್ಕಾಳಜೀತನದಿಂಧ ನಡೆಸಿಕೊಂಡು ಬಂದು ಆರೋಪಿ ನಂ:1 ನೇದ್ದವನ ಮೋಟಾರ್ ಸೈಕಲ್ಗೆ ಜೋರಾಗಿ
ಡಿಕ್ಕಿ ಕೊಟ್ಟಿದ್ದರಿಂದ ಎರಡೂ ಮೋಟಾರ್ ಸೈಕಲ್ ಮೇಲೆ ಇದ್ದವರು ಕೆಳಗೆ ಬಿದ್ದು ಭಾರಿ
ಮತ್ತು ಸಾಧಾಗಾಯಗಳಾದ ಬಗ್ಗೆ ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ
ಜರುಗಿಸಲಾಗಿದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 347/2018. ಕಲಂಃ 193,199,200,323,324,504,506,420,418,424 ಐಪಿಸಿ;- ದಿನಾಂಕ
06/07/2018 ರಂದು ಸಾಯಂಕಾಲ 06:30 ಪಿಎಮ್ ಕ್ಕೆ ಠಾಣೆಯ ನ್ಯಾಯಾಲಯ ಕರ್ತವ್ಯ
ನಿರ್ವಹಿಸುವ ಪಿಸಿ-256 ಶ್ರೀ ಸುರೇಶ ಕದಂ ರವರು ಠಾಣೆಗೆ ಬಂದು ಗೌರವಾನ್ವಿತ ಪ್ರಧಾನ
ಜೆ,ಎಮ್,ಎಪ್,ಸಿ ನ್ಯಾಯಾಲಯ ಶಹಾಪೂರ ರವರಿಂದ ವಸೂಲಾದ ಖಾಸಗಿ ಪಿಯರ್ಾದಿ ಸಂ-38/2018
ನೇದ್ದು ಹಾಜರು ಪಡಿಸಿದ್ದು ಸದರಿ ಖಾಸಗಿ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ
ನಂ-347/2018 ಕಲಂ-193,199,200,323,324,504,506,420,418,424 ಐಪಿಸಿ
ನೇದ್ರಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 111/2018 ಕಲಂ:143, 147, 148, 341, 323, 324, 504, 506 ಸಂಗಡ 149 ಐಪಿಸಿ;- ದಿನಾಂಕ:06.07.2018
ರಂದು 8:15 ಪಿಎಮ್ ಗಂಟೆಗೆ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಕೊಳುರ
ರವರು ಫೋನ್ ಮಾಡಿ ಯಲ್ಲಪ್ಪ ತಂದೆ ಬಸಪ್ಪ ಮ್ಯಾಗೇರಿ ಸಾ:ಕೊಡೇಕಲ್ ಇವರು ಜಗಳದಲ್ಲಿ
ಗಾಯಹೊಂದಿ ಉಪಚಾರಕ್ಕಾಗಿ ತಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಬಂದು ಮುಂದಿನ ಕ್ರಮ
ಜರುಗಿಸಬೇಕು ಅಂತಾ ತಿಳಿಸಿದ್ದರಿಂದ ನಾನು 8:30 ಪಿಎಮ್ ಗಂಟೆಗೆ ಸರಕಾರಿ ಆಸ್ಪತ್ರೆ
ರಾಜನಕೊಳುರಕ್ಕೆ ಹೋಗಿ ಉಪಚಾರ ಹೊಂದುತ್ತಿದ್ದ ಯಲ್ಲಪ್ಪ ತಂದೆ ಬಸ್ಪಪ ಮ್ಯಾಗೇರಿ ವಯ:38,
ಉ:ಒಕ್ಕಲುನತ, ಜಾ:ಹಿಂದು ಮಾದರ ಸಾ:ಕೊಡೆಕಲ್ ರವರಿಗೆ ವಿಚಾರಿಸಲಾಗಿ ಸದರಿಯವನು ತನಗೆ
ಹೊಡೆಬಡೆ ಮಾಡಿದ ಬಗ್ಗೆ ಲಿಖಿತ ದೂರು ನೀಡುವದಾಗಿ ತಿಳಿಸಿದ್ದರಿಂದ ನಾನು
ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದು, ಸದರಿಯವನು 10:30 ಪಿಎಮ್ ಕೆ ಆಸ್ಪತ್ರೆಯಲ್ಲಿ
ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿಯರ್ಾದಿ ಅಜರ್ಿಯನ್ನು
ಹಾಜರುಪಡಿಸಿದ್ದು, ಸದರ ಫಿಯರ್ಾದಿಯ ಅಜರ್ಿಯೊಂದಿಗೆ 10:45 ಪಿಎಮ್ ಕ್ಕೆ ಮರಳಿ ಠಾಣೆಗೆ
ಬಂದಿದ್ದು, ಫಿಯರ್ಾದಿಯ ಅಜರ್ಿಯ ಸಾರಾಂಶವೆನೆಂದರೆ, ನಾನು ತಂದೆ ಹೆಂಡತಿ ಮಕ್ಕಳೊಂದಿಗೆ
ಒಕ್ಕುತನ, ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮೂರ ಸಂಗಪ್ಪ ತಂದೆ ಹಣಮಪ್ಪ ಹೊಸಮನಿ
ಈತನು ಈಗ 3 ವರ್ಷಗಳ ಹಿಂದೆ ತನಗೆ ದುಡ್ಡಿನ ಅಡಚಣೆ ಇದೆ ಅಂತ ಹೇಳೆ ನನ್ನಿಂದ 18000/-
ರೂಪಾಯಿ ಕೈ ಸಾಲ ಪಡೆದುಕೊಂಡಿದ್ದು, ನಾನು ಸಂಗಪ್ಪನಿಗೆ ಇಲ್ಲಿಯವರೆಗೂ ನಾನು ಕೊಟ್ಟ
ಕೈಸಾಲದ ಹಣದ ಬಗ್ಗೆ ಕೇಳಿದಾಗ ಇವತ್ತು ಕೊಡುತ್ತೆನೆ, ನಾಳೆ ಕೊಡುತ್ತೇನೆ ಅಂತ ಅನ್ನುತ್ತ
ಬಂದಿದ್ದು, ಆದರೂ ಕೂಡಾ ನಾನು ಇಲ್ಲಿಯ ವರೆಗೆ ತಾಳಿಕೊಂಡು ಬಂದಿದ್ದು, ನಿನ್ನೆ
ದಿ:05.07.2018 ರಂದು ಬೆಳಿಗ್ಗೆ 11:15 ಗಂಟೆಯ ಸುಮಾರಿಗೆ ನಾನು ಕೊಡೇಕಲ್ ಗ್ರಾಮದ ಬಸ್
ನಿಲ್ದಾಣದ ಹತ್ತಿರ ಇದ್ದಾಗ ಸಂಗಪ್ಪನಿಗೆ ನನಗೆ ಹಣದ ಅವಶ್ಯಕತೆ ಇದೆ ನಾನು ಕೊಟ್ಟ ಹಣ
ಕೊಡು ಅಂತಾ ಫೋನ್ ಮಾಡಿ ತಿಳೀಸಿದ್ದು, ಅವನು ಆಯಿತು ಮನೆಯಲ್ಲಿ ವಿಚಾರ ಮಾಡಿ
ಹೇಳುತ್ತೇನೆ. ಅಂತಾ ಅಂದಿದ್ದು, ನಂತರ ನಾನು 11:30 ಗಂಟೆಯ ಸುಮಾರಿಗೆ ನನ್ನ ಕೆಲಸದ
ನಿಮಿತ್ಯ ನಮ್ಮೂರ ಹೈಸ್ಕೂಲ್ ಹತ್ತಿರ ಮುದಕಪ್ಪ ಹೆಬ್ಬಾಳ ರವರ ಮನೆಯ ಹತ್ತಿರ ರಸ್ತೆಯ
ಮೇಲೆ ಹೊಗುತ್ತಿದ್ದಾಗ ಸಂಗಪ್ಪ ತಂದೆ ಹಣಮಪ್ಪ ಹೊಸಮನಿ ಈತನು ತನ್ನ ತಮ್ಮಂದಿರಾದ ಮಹರಾಜ
ತಂದೆ ಹಣಮಪ್ಪ ಹೊಸಮನಿ, ನಿಂಗಪ್ಪ ತಂದೆ ಹಣಮಂತ ಹೊಸಮನಿ, ಬಸಪ್ಪ ತಂದೆ ಹಣಮಂತ ಹೊಸಮನಿ
ಹಾಗು ಅವರ ಸಂಬಂಧಿಕರಾದ ಸಂಗಪ್ಪ ತಂದೆ ಬಸಪ್ಪ ಮ್ಯಾಗೇರಿ, ಪರಸಪ್ಪ ತಂದೆ ಬಸಪ್ಪ
ಮ್ಯಾಗೇರಿ, ಶೇಖಪ್ಪ ತಂದೆ ಮಲ್ಲಪ್ಪ ಮ್ಯಾಗೇರಿ, ಬಸಪ್ಪ ತಂದೆ ಮಲ್ಲಪ್ಪ ಮ್ಯಾಗೇರಿ
ರವರೊಂದಿಗೆ ಗುಂಪಾಗಿ ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದವರೇ ನನಗೆ
ತಡೆದು ನಿಲ್ಲಿಸಿ ಬೋಸಡೀ ಮಗನೇ ನೀನು ನಮಗೆ ಕೊಟ್ಟ ರೊಕ್ಕ ನಾವು ಕೊಡುವದಿಲ್ಲ. ನೀನು ಏನ
ಶೆಂಟ ಹರಿಕೊಂತಿದಿ ಹರಿದುಕೋ ನಿನ್ನ ಸೊಕ್ಕು ಬಹಳ ಆಗಿದೆ. ಮನೆಗೆ ಬಂದು ಕೇಳುತ್ತೀ
ಅಲ್ಲದೇ ಎಲ್ಲಿ ದಾರಿಯಲ್ಲಿ ಸಿಕ್ಕರೂ ಕೇಳುತ್ತೀ ನಾವು ಕೊಡುವದಿಲ್ಲ. ಅಂತಾ ಅನ್ನುತ್ತಲೇ
ಅವರಲ್ಲಿಯ ಸಂಗಪ್ಪ ತಂದೆ ಬಸಪ್ಪ ಮ್ಯಾಗೇರಿ, ಪರಸಪ್ಪ ತಂದೆ ಬಸಪ್ಪ ಇವರಿಬ್ಬರು ನನ್ನ
ತೆಕ್ಕೆಗೆ ಬಿದ್ದು, ನೆಲಕ್ಕೆ ಕೆಡವಿದ್ದು, ಆಗ ಶೇಖಪ್ಪ ತಂದೆ ಮಲ್ಲಪ್ಪ, ಮತ್ತು ಬಸಪ್ಪ
ತಂದೆ ಮಲ್ಲಪ್ಪ ರವರು ನನಗೆ ಕಾಲಿನಿಂದ ಒದ್ದು, ಕೈಯಿಂದ ಮೈಮೇಲೆಲ್ಲ ಹೊಡೆದು
ಗುಪ್ತಗಾಯಪಡಿಸಿದ್ದು, ಸಂಗಪ್ಪ ತಂದೆ ಹಣಮಪ್ಪ ಹೊಸಮನಿ ಈತನು ತನ್ನ ಕೈಯಲ್ಲಿಯ
ಕಲ್ಲಿನಿಂದ ನನ್ನ ತಲೆಯ ಮೇಲೆ ಮಂಬಾಜುವಿಗೆ ಹೊಡೆದು ರಕ್ತಗಾಯಪಡಿಸಿದ್ದು, ಮಹರಾಜನು
ತನ್ನ ಕೈಯಲ್ಲಿಯ ಬಡಿಗೆಯಿಂದ ತಲೆಯ ಹಿಂಬಾಜುವಿಗೆ ಹೊಡೆದು ಗುಪ್ತಗಾಯಪಡಿಸಿದ್ದು,
ನಿಂಗಪ್ಪ ತಂದೆ ಹಣಮಂತ ಹಾಗು ಬಸಪ್ಪ ತಂದೆ ಹಣಮಂತ ರವರು ತಮ್ಮ ಕೈಯಲ್ಲಿಯ ಬಡಿಗೆಗಳಿಂದ
ನನ್ನ ಎಡಗಡೆ ಮುಡ್ಡಿಯ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು, ಆಗ
ನಾನು ಚಿರಾಡಲು ಅಲ್ಲಿಯೇ ಇದ್ದ ಮುದಕಪ್ಪ ತಂದೆ ಸಂಗಪ್ಪ ಹೆಬ್ಬಾಳ ಹಾಗು ಸುಭಾಷ ತಂದೆ
ಮೊಹನದಾಸ್ ಚವ್ಹಾಣ, ಪ್ರಭು ತಂದೆ ಮಲ್ಲಪ್ಪ ಯಾಳವಾರ ಇರವರುಗಳ ಬಂದು ನೋಡಿ ಬಿಡಿಸಿದ್ದು,
ಹೋಗುವಾಗ ಅವರೆಲ್ಲರೂ ನನಗೆ ಬೊಸಡೀ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳದೀದಿ ಇನ್ನೊಂದು
ಸಲ ಸಿಕ್ಕರೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು
ಮನೆಗೆ ಹೋಗಿ ಮನೆಯಲ್ಲಿದ್ದು, ಈ ದಿವಸ ನನಗೆ ಮೇಲೆ ನಮೂದಿಸಿದ ಅವರೆಲ್ಲರೂ ಹೊಡೆದು
ಗಾಯಪಡಿಸಿದ್ದ ಗಾಯಗಳ ನೋವು ಹೆಚ್ಚಾಗಿ ಉಪಚಾರಕ್ಕಾಗಿ ರಾಜನಕೊಳೂರು ಸರಕಾರಿ ಆಸ್ಪತ್ರೆಗೆ
ಬಂದು ಸೇರಿಕೆಯಾಗಿದ್ದು, ಕಾರಣ ನಾನು ಕೊಟ್ಟ ದುಡ್ಡು ಕೇಳಿದ್ದಕ್ಕೆ ಸಿಟ್ಟಾಗಿ ನನಗೆ
ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 8 ಜನರ ಮೇಲೆ ಕಾನೂನು ಪ್ರಕಾರ
ಕ್ರಮ ಜರುಗಿಸಲು ವಿನಂತಿ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:111/2018
ಕಲಂ:143, 147, 148, 341, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ
ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು