ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ನೆಲೋಗಿ
ಠಾಣೆ : ಶ್ರೀ ರವರ ಮಗಳು
ಕುಮಾರಿ ಇವಳು ದಿನಾಂಕ: 6/12/2017 ರಂದು ಶಾಲೆಗೆ ಹೋಗಿ ಸಾಯಂಕಾಲ ಮನೆಗೆ
ಬಂದಿದ್ದು ರಾತ್ರಿ 9:00 ಗಂಟೆ ಸುಮಾರಿಗೆ
ನಾವೆಲ್ಲರೂ ಊಟ ಮಾಡಿ ಮಲಗಿಕೊಂಡಿದ್ದು ದಿನಾಂಕ:
7/12/2017 ರಂದು ಬೆಳಿಗ್ಗೆ 3:00
ಗಂಟೆಗೆ ಎದ್ದು
ನೋಡಲಾಗಿ ನನ್ನ ಮಗಳು ಹಾಸಿಗೆಯಲ್ಲಿ ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಕೂಡಿ ನನ್ನ ಗಂಡು
ಮಕ್ಕಳ ಹತ್ತಿರ ಹೋಗಿರಬೇಕೆಂದು ಗಾಬರಿಯಾಗಿ ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿಯು ಕೂಡಾ
ಇರಲ್ಲಿಲ್ಲಾ ನಂತರ ನಾವೆಲ್ಲರೂ ಗಾಬರಿಯಾಗಿ ಊರಲ್ಲಿ ಹುಡಕಾಡಿದರು ಸಿಗಲಿಲ್ಲಾ. ನಂತರ ನಮಗೆ ತಿಳಿದು ಬಂದಿದೆನೆಂದರೆ ನನ್ನ
ಮಗಳು ಶಾಲೆಯಿಂದ ಬರುವಾಗ ನನ್ನ ಮಗಳಿಗೆ ಚಂದ್ರಕಾಂತ ತಂದೆ ಮಾನಸಪ್ಪ ಮಾದರ ಇವನು
ಚೂಡಾಯಿಸಿದ್ದಾನೆ ಅಂತ ನನ್ನ ಮಗಳು ನನಗೆ ಹೇಳಿದ್ದು ಅವನೆ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು
ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಅವನ ಮೇಲೆ ಸಂಶೆಯದ ಮೇಲೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 18-12-2017 ರಂದು ಅಪಹರಣಕ್ಕೊಳಗಾದ ಬಾಲಕಿ ಕುಮಾರಿ ಇವಳು ಸೊನ್ನ ಕ್ರಾಸ
ಹತ್ತಿರ ಆರೋಪಿ ಫಿಚಂದ್ರಕಾಂತ @ ಕಾಂತು ಮಾದರ ಇವನೊಂದಿಗೆ ಪತ್ತೆ ಆಗಿದ್ದು, ಕುಮಾರಿ
ಇವಳಿಗೆ ಚಂದ್ರಕಾಂತ @ ಕಾಂತು ತಂದೆ ಮಾನಶೆಪ್ಪ ಮಾದರ ಸಾ|| ಬೆಣ್ಣೂರ ಇವನು
ದಿ:07-12-2017 ರಂದು ಅಪಹರಿಸಿಕೊಂಡು ಹೋಗುವಾಗ ಅವಳು ನಾನು ಚಿಕ್ಕವಳು ಇದ್ದೆನೆ ಬೇಡ ಅಂದರು ಕೇಳದೆ
ವಸ್ತಾರಿ ಸೀಮಾಂತರದ ಒಂದು ಹೊಲದಲ್ಲಿ ಬೆಳಿಗ್ಗೆ 2-3 ಸಲ ಜಬರಿ ಸಂಭೋಗ ಮಾಡಿ ನಂತರ ತನಗೆ
ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾನೆ ಅಲ್ಲಿ ಗುಡಿ ಗುಂಡಾರಗಳಲ್ಲಿ ಮಲಗಿಸಿ ನಂತರ ನಾವು
ಇಬ್ಬರೂ ಊರಿಗೆ ಹೋಗಿ ಮದುವೆ ಮಾಡಿಕೊಳ್ಳೊಣ ಅಂತಾ ಕರೆದುಕೊಂಡು ಬೆಣ್ಣೂರಿಗೆ ಬರುತ್ತಿರುವಾಗ
ಸೊನ್ನ ಕ್ರಾಸ ಹತ್ತಿರ ಪೊಲೀಸರು ನಮಗೆ ಹಿಡಿದುಕೊಂಡಿರುತ್ತಾರೆ ಚಂದ್ರಕಾಂತ ಇವನು ನಾನು ಬೇಡ
ಅಂತಾ ಹೇಳಿದರು ಕೇಳದೆ ನನಗೆ ಮದುವೆ ಆಗುತ್ತೇನೆ ಅಂತಾ ರಂಬಿಸಿ ನನ್ನೊಂದಿಗೆ ಜಬರಿಸಂಭೋಗ
ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ
ಠಾಣೆ : ದಿನಾಂಕ-18/12/2017 ರಂದು ಬೆಳಿಗ್ಗೆ ಸಾತ ಗುಮ್ಮಜದಿಂದ ಎಸ್.ಟಿ.ಬಿ.ಟಿ ಕ್ರಾಸ್ ರಸ್ತೆಯಲ್ಲಿ
ಬರುವ ಬಸವೇಶ್ವರ ಕಾಲೋನಿ ಕ್ರಾಸ್ ಹತ್ತಿರದ ಆರ್ಟ ರಾಗಜಿನ್ ಅಂಗಡಿ ಎದುರಿನ ರಸ್ತೆಯ ಮೇಲೆ ಚನ್ನಮ್ಮ
ಗಂಡ ಮಲ್ಲಿಕಾರ್ಜುನ ಬಿರಾದರ ಸಾ ತಾಜ ನಗರ ಕಲಬುರಗಿ ರವರ ಗಂಡನಾದ ಮಲ್ಲಿಕಾರ್ಜುನ ಬಿರಾದಾರ ಈತನು ತನ್ನ ಮೋಟಾರ
ಸೈಕಲ ನಂ ಕೆಎ-32 ಇಕೆ-0050 ನೇದ್ದನ್ನು ಸಾತ ಗುಮ್ಮಜ ರೋಡ ಕಡೆಯಿಂದ ಅತೀವೇಗವಾಗಿ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಮೋಟಾರ ಸೈಕಲ ಬ್ರೇಕ್ ಹಿಡಿದು ತನ್ನಿಂದ ತಾನೆ
ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಾಗ
ಮಲ್ಲಿಕಾರ್ಜುನ ಈತನ ತೆಲೆಗೆ ರೋಡ ಡಿವೈಡರ್ ಬಡೆದು ತೆಲೆಗೆ ಭಾರಿಗಾಯ ಆಗಿ ಕಿವಿಯಿಂದ್
ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ
ವೈದ್ಯರು ಆತನಿಗೆ ಪರಿಕ್ಷಿಸಿ ದಾರಿ
ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ಶ್ರೀ ಪಕೀರಪ್ಪ ತಂದೆ ಬಲವಂತಪ್ಪ ಬಿರಾದಾರ ಸಾ|| ಬಂಕಲಗಾ ಇವರು ಹೆಂಡತಿ ಮಕ್ಕಳೊಂದಿಗೆ ನಮ್ಮ ಹೊಲದಲ್ಲಿಯೆ ಮನೆ ಮಾಡಿಕೊಂಡು
ವಾಸವಾಗಿದ್ದೆನೆ. ನಮ್ಮಅಣ್ಣನಾದ ಸಿದ್ರಾಮಪ್ಪ ಈತನು ಸಹ ನಮ್ಮ ಹೊಲದ ಪಕ್ಕದಲ್ಲಿಯೆ ಇದ್ದ ತನ್ನ
ಹೊಲದಲ್ಲಿ ಮನೆ ಕಟ್ಟಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ದಿನಾಂಕ 16-12-2017 ರಂದು 11:15 ಗಂಟೆ ಸುಮಾರಿಗೆ ನಾನು ನನ್ನ ಹೊಲದಲ್ಲಿ ಮನೆಯಲ್ಲಿದ್ದಾಗ, ನಮ್ಮೂರಿನ
ವಿಠ್ಠಲ ಜಾಮಗೊಂಡ ಇವರು ನನಗೆ ಪೋನ ಮಾಡಿ, ಅಫಜಲಪೂರ – ಕರಜಗಿ ರೋಡಿಗೆ ಇರುವ ಭವಾನಿ ದಾಬಾದ ಮುಂದೆ ನಿನ್ನ ಅಣ್ಣನಾದ ಸಿದ್ರಾಮಪ್ಪನು
ನಡೆದುಕೊಂಡು ಹೊಗುತ್ತಿದ್ದಾಗ ಪೀಕಪ್ ವಾಹನ ಡಿಕ್ಕಿಯಾಗಿ
ಎಕ್ಸಿಡೆಂಟ ಆಗಿದೆ ಜಲ್ದಿ ಬಾ ಅಂತಾ ತಿಳಿಸಿದ ಮೇರೆಗೆ, ನಮ್ಮ
ಹೊಲ ಸಹ ಅಲ್ಲೆ ಹತ್ತಿರದಲ್ಲೆ ಇದ್ದರಿಂದ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನಾದ
ಸಿದ್ರಾಮನಿಗೆ ತಲೆಗೆ ರಕ್ತಗಾಯ, ಏಡ ಪಕ್ಕೇಲುಬಿಗೆ ಭಾರಿ ಒಳಪೆಟ್ಟು,
ಏಡಗಾಲು ಮೊಳಕಾಲಿನ ಕೆಳಗೆ ಕಾಲು ಮುರಿದಂತೆ ಆಗಿ ಮೈಕೈಗೆ ತರಚಿದ ರಕ್ತಗಾಯಗಳು
ಮತ್ತು ಅಲ್ಲಿಲ್ಲಿ ಗುಪ್ತಗಾಯಗಳು ಆಗಿದ್ದವು, ನನ್ನ ಅಣ್ಣನಿಗೆ
ಡಿಕ್ಕಿಪಡಿಸಿದ ಪಿಕಪ್ ವಾಹನ ನಂಬರ ನೋಡಿದ್ದು ಅದರ ನಂಬರ ಕೆಎ-32 ಬಿ-7855 ಅಂತ ಇದ್ದು, ಡಿಕ್ಕಿಪಡಿಸಿದ ಚಾಲಕ ಘಟನೆ ನಂತರ ವಾಹನವನ್ನು
ಸ್ಥಳದಲ್ಲೆ ಬಿಟ್ಟು ಓಡಿ ಹೊಗಿದ್ದು, ಸದರಿ ಚಾಲಕನ ಹೆಸರು ಮಡಿವಾಳಪ್ಪ
ತಂದೆ ಗುರುಲಿಂಗಪ್ಪ ಪದಕಿ ಸಾ|| ಅಫಜಲಪೂರ ಅಂತ ಗೊತ್ತಾಗಿರುತ್ತದೆ. ನಂತರ
ನನ್ನ ಅಣ್ಣನನ್ನು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಸದಾಶಿವ ಪ್ಯಾಟಿ, ವಿಠ್ಠಲ ಜಾಮಗೊಂಡ, ಬಸವರಾಜ ಬಿರಾದಾರ ಇವರ ಸಹಾಯದಿಂದ ಒಂದು
ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಸೇರಿಕೆ ಮಾಡಿರುತ್ತೆವೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ
ಠಾಣೆ : ಶ್ರೀ ಶರಣಬಸಪ್ಪಾ ತಂದೆ ಗುಂಡಪ್ಪಾ ಕೆರಮಗಿ ಸಾ|| ಸಾವಳೇಶ್ವರ ತಾ|| ಆಳಂದ. ರವರು ತಮ್ಮ ಓಣಿಯ ಕವಿತಾ ಗಂಡ ಅಶೋಕ ಸಿಂಗೆ ಇವರು
ನಿರ್ಗುಡಿ ಬ್ಯಾಂಕಿಗೆ ಹೋಗಿ ಬರೋಣಾ ಅಂತಾ ನಮ್ಮ ಮನೆಯ ಪಕ್ಕದ ಅಶೋಕ ನಿಲೂರೆ ರವರ ಮೋಟರ ಸೈಕಲ್
ನಂ ಕೆಎ 32 ಕ್ಯೂ 1292 ನೇದ್ದರ ಮೇಲೆ ಮಧ್ಯಾಹ್ನ 01.00 ಗಂಟೆಗೆ ಹೊರಟು ನಾನು ಮೋಟರ್ ಸೈಕಲ್
ಚಲಾಯಿಸುತಿದ್ದು ನನ್ನ ಹಿಂದೆ ಕವಿತಾ ಸಿಂಗೆರವರು ಕುಳಿತು ಸಾವಳೇಶ್ವರ್ ಕ್ರಾಸ್ ಹತ್ತಿರದಿಂದ
ಪಡಸಾವಳಗಿ ಮಾರ್ಗವಾಗಿ ಹೋಗುವಾಗ ಸರಸಂಬಾ ಕಡೆಯಿಂದ ಒಬ್ಬ ಕಾರ್ ಚಾಲಕ ಅತಿವೇಗದಿಂದ ಮತ್ತು
ಅಲಕ್ಷತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ
ಸೈಕಲದಿಂದ ಕೆಳಗಡೆ ಬಿದ್ದು ನನಗೆ ತಲೆಗೆ ರಕ್ತಗಾಯ ಹಾಗೂ ಬಲಭುಜಕ್ಕೆ ರಕ್ತಗಾಯವಾಗಿದ್ದು ನನ್ನ
ಹಿಂದೆ ಕುಳಿತ ಕವಿತಾ ಇವರಿಗೆ ಮುಖಕ್ಕೆ ಭಾರಿಗಾಯವಾಗಿ ಹಲ್ಲುಗಳು ಬಿದ್ದಿದ್ದು ಗದ್ದಕ್ಕೆ
ಭಾರಿಗಾಯ & ಬಲಗಾಲ ಮುರಿದಿದ್ದು ಕೈಗೆ ರಕ್ತಗಾಯವಾಗಿದ್ದು ನಂತರ ನಮಗೆ
ಡಿಕ್ಕಿ ಪಡಿಸಿದ ಕಾರ್ ನಂ ನೋಡಲಾಗಿ ಎಮ್‌ಹೆಚ್ 05 ಎಜೆ 4460 ಇದ್ದು ಅದರ ಚಾಲಕನ ಹೆಸರು
ವಿಚಾರಿಸಲು ಮಹೇಶ ತಂದೆ ಬಸಯ್ಯಾ ಗುತ್ತೇದಾರ ಸಾ|| ತಡಕಲ್ ಅಂತಾ
ಗೊತ್ತಾಗಿದ್ದು ನಂತರ ನಮಗೆ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಯುನೈಟೆಡ್ ಆಸ್ಪತ್ರೆ
ಗುಲ್ಬರ್ಗಾದಲ್ಲಿ ತಂದು ಸೇರಿಕೆ ಮಾಡಿದ್ದು ನನಗೆ ಸಾದ ಗಾಯಗಳಾಗಿದ್ದು ಹಾಗೂ ಕವಿತಾ ಸಿಂಗೆ
ಇವರಿಗೆ ಭಾರಿಗಾಯಗೊಳಿಸಿ ವಾಹನ ಸ್ಥಳದಲ್ಲೆ ಬಿಟ್ಟು ಓಡಿಹೋದ ಚಾಲಕನ ಮೇಲೆ ಕಾನೂನು ಕ್ರಮ
ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯುನೈಟೆಡ್ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯ ಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ
ಶ್ರೀಮತಿ ಕವಿತಾ ಗಂಡ ಅಶೋಕ ಸಿಂಗೆ (ಹೊಸಮನಿ) ಸಾ||
ಸಾವಳೇಶ್ವರ್ ಇವಳು ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 16-12-2017 ಮೃತಪಟ್ಟಿರುತ್ತಾಳೆ,
ಅಂತಾ ಸಲ್ಲಿಸಿದ ದೂರುಇ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ
18-12-2017 ರಂದು ಬೆಳಿಗ್ಗೆ ನಮ್ಮ ಟ್ರ್ಯಾಕ್ಟರ ಚಾಲಕನಾದ ಈರಣ್ಣ ನಾಗಲಗಾಂವ ಎಂಬಾತನು ನನ್ನ ಮಗನಾದ
ದರ್ಶನನಿಗೆ ಕರೆದುಕೊಂಡು ಎಳ್ಳ ಅಮವಾಸೆ ಹಬ್ಬದ ಪ್ರಯುಕ್ತ ತಮ್ಮ ಊರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ
ನಮ್ಮೂರಿನ ದತ್ತಾತ್ರೇಯ ತಂದೆ ಶಿವಲಿಂಗ ಭೂಶೆಟ್ಟಿ ರವರ ಮೋಟರ ಸೈಕಲ ನಂ ಕೆಎ-28 ಇಪಿ-0986 ನೇದ್ದನ್ನು ತಗೆದುಕೊಂಡು ಹೋಗಿರುತ್ತಾನೆ.
ಸಾಯಂಕಾಲ 4:15 ಗಂಟೆಯ ಸುಮಾರಿಗೆ ನಮ್ಮೂರಿನ ನಾಗರಾಜ ತಂದೆ
ಮಲಕಪ್ಪ ಹತ್ತರಕಿ ಎಂಬುವವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 4:00 ಗಂಟೆ ಸುಮಾರಿಗೆ ನಾನು ನನ್ನ ಮೋಟರ ಸೈಕಲ ಮೇಲೆ ಕರಜಗಿಯಿಂದ ಅಫಜಲಪೂರಕ್ಕೆ ಹೋಗುತ್ತಿದ್ದೆನು.
ಅದೆ ಸಮಯಕ್ಕೆ ನಿಮ್ಮ ಟ್ಯಾಕ್ಟರ ಚಾಲಕನಾದ ಈರಣ್ಣ ನಾಗಲಗಾಂವ ಎಂಬಾತನು ಮೋಟರ ಸೈಕಲ
ಕೆಎ-28 ಇಪಿ-0986 ನೇದ್ದರ ಮೇಲೆ ನಿಮ್ಮ ಮಗ ದರ್ಶನ
ಎಂಬಾತನಿಗೆ ಕೂಡಿಸಿಕೊಂಡು ಕರಜಗಿ ಕಡೆಯಿಂದ ಅಫಜಲಪೂರದ ಕಡೆಗೆ ತನ್ನ ಮೋಟರ ಸೈಕಲನ್ನು ಅತಿವೇಗವಾಗಿ
ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ನನ್ನ ಮೋಟರ ಸೈಕಲಗೆ ಓವರಟೇಕ್ ಮಾಡಿ ಮುಂದೆ ಹೋಗಿ ಭೀಮರಾಯ
ಮಂಟಗಿ ರವರ ಹೊಲದ ಹತ್ತಿರ ರೋಡಿನ ಪಕ್ಕದ ಬಸರಿಗಿಡಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿರುತ್ತಾನೆ.
ಸದರಿ ಘಟನೆಯಲ್ಲಿ ನಿಮ್ಮ ಮಗ ದರ್ಶನನ ಮುಖಕ್ಕೆ ಮತ್ತು ಹಣೆಗೆ ಹಾಗೂ ತಲೆಗೆ ಭಾರಿ
ರಕ್ತಗಾಯಗಳು ಮತ್ತು ಒಳಪೆಟ್ಟುಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಮೋಟರ ಸೈಕಲ ನಡೆಸುತ್ತಿದ್ದ ಈರಣ್ಣನ ಎಡಕೈ ಎಲಬು ಮುರಿದು ಭಾರಿ ಒಳಪೆಟ್ಟಾಗಿರುತ್ತದೆ.
ನಿಮ್ಮ ಮಗ ದರ್ಶನನ ಶವವನ್ನು 108 ವಾಹನದಲ್ಲಿ ಹಾಕಿಕೊಂಡು
ಅಫಜಲಪೂರದಲ್ಲಿ ಬಂದು ಅಫಜಲಪೂರ ಸರ್ಕಾರಿ ಆಸ್ಪತ್ರೆಯಲ್ಲಿ ನಿಮ್ಮ ಮಗನ ಶವ ಹಾಕಿಸಿ, ಈರಣ್ಣನನ್ನು ಚಿಕಿತ್ಸೆಗಾಗಿ 108 ವಾಹನದಲ್ಲಿ ಕಲಬುರಿಗೆ ಕಳುಹಿಸಿಕೊಟ್ಟಿರುತ್ತೆನೆ
ಅಂತ ತಿಳಿಸಿದ್ದು ನಾನು ಮತ್ತು ನನ್ನ ಚಿಕ್ಕಪ್ಪನ ಮಗನಾದ ಮಲಕಣ್ಣ ತಂದೆ ಷಣ್ಮುಕಪ್ಪ ಮಾಲಗಾರ ಇಬ್ಬರು
ಮೋಟಾರ ಸೈಕಲ ಮೇಲೆ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ದರ್ಶನನ ಶವ ನೋಡಿರುತ್ತೇವೆ. ದಿನಾಂಕ 18-12-2017 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಕರಜಗಿ - ಅಫಜಲಪೂರ ರೋಡಿಗೆ ಭೀಮರಾಯ ಮಂಟಗಿ ರವರ ಹೊಲದ ಹತ್ತಿರ ಮೋಟರ ಸೈಕಲ ನಂ ಕೆಎ-28 ಇಪಿ-0986 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷಯತನದಿಂದ
ನಡೆಸಿ ರೋಡಿನ ಪಕ್ಕದ ಗಿಡಕ್ಕೆ ಡಿಕ್ಕಿ ಹೊಡೆಸಿ ಈರಣ್ಣ ನಾಗಲಗಾಂವ ಎಂಬಾತನ ಮೇಲೆ ಕಾನೂನಿನ ಪ್ರಕಾರ
ಸೂಕ್ತ ಕ್ರಮ ಜರೂಗಿಸಲು ವಿನಂತಿ ಅಂತಾ ಶ್ರೀ ಈರಪ್ಪ ತಂದೆ ಮುರಗೆಪ್ಪ ಮಾಲಗಾರ ಸಾ|| ಗೋಳಸಾರ ತಾ|| ಇಂಡಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ
ಬಜಾರ ಠಾಣೆ : ಶ್ರೀ ಶರಣಬಸಪ್ಪ ತಂದೆ ಅಂಬಾರಾಯ ವಾಡಿ ಸಾ: ವಸತಿ ಗೃಹ ಸಂಖ್ಯೆ 36/ಎ ಡಿ.ಎ.ಅರ್.
ಲೈನ ಪೊಲೀಸ ಕಾಲೋನಿ ಕಲಬುರಗಿ ರವರು ದಿನಾಂಕ 16-12-2017 ರಂದು ಸಾಯಂಕಾಲ ಎಳ್ಳ ಅಮವಾಸೆ ಇದ್ದ ಪ್ರಯುಕ್ತ ಡಿ.ಎ.ಅರ್.
ವಸತಿ ಗೃಹದಲ್ಲಿ ನನ್ನ ಮನೆಗೆ ಬೀಗ ಹಾಕಿಕೊಂಡು ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ರಾಜಲಕ್ಷ್ಮೀ
ಮಗಳಾದ ಸನ್ನಿಧಿ ಇವರೊಂದಿಗೆ ಸರದಾರ ವಲ್ಲಭಾಯಿ ಪಟೇಲ್ ಜಿ.ಡಿ.ಎ. ಬಡಾವಣೆ ಕಲಬುರಗಿಯಲ್ಲಿ ಇರುವ ನಮ್ಮ ಅಣ್ಣ ಶ್ರೀ
ಶಂಭುಲಿಂಗ ವಾಡಿ ಇವರ ಮನೆಗೆ ಹೋಗಿ ರಾತ್ರಿ ಅವರ ಮನೆಯಲ್ಲಿ ಇದ್ದೆನು. ಇಂದು ದಿನಾಂಕ 17-12-2017
ರಂದು ಮಧ್ಯಾಹ್ನ ಡಿ.ಎ.ಅರ್. ಪೊಲೀಸ ವಸತಿ ಗೃಹದಲ್ಲಿ ಇರುವ ಮನೆಯಿಂದ ಬ್ಲೋ ಟೂಥ ಸ್ಪೀಕರ ತರಬೇಕೆಂದು
ನಾನು ಮತ್ತು ನನ್ನ ತಂದೆ ಅಂಬಾರಾಯ ವಾಡಿ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಮನೆಗೆ ಹೋದಾಗ ಮನೆಯ
ಮುಖ್ಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಕಂಡು ಬಂತು ಆಗ ಗಾಬರಿಯಾಗಿ ಮನೆಯೊಳಗಿ ಹೋಗಿ ನೋಡಲಾಗಿ ನಮ್ಮ
ಮನೆಯ ದೇವರ ಕೋಣೆಯಲ್ಲಿ ಇರುವ ಕಬ್ಬಿಣದ ಅಲಮಾರಿ ಲಾಕ ಮುರಿದಿದ್ದು ಕಂಡು ಬಂತು ಅಲ್ಲದೇ ಅಲಮಾರಿಯಲ್ಲಿದ್ದ
ಲಾಕರ ಮುರಿದಿದ್ದು ನೋಡಲಾಗಿ ಒಳಗೆ ಇಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಹೀಗೆ
ಒಟ್ಟು 1,64,000/- ರೂ. ಬಂಗಾರ, ಬೆಳ್ಳಿ , ಹಣ ಯಾರೋ ಕಳ್ಳರು ದಿನಾಂಕ 16-12-2017 ರಂದು ಸಂಜೆ
05-30 ಗಂಟೆಯಿಂದ ದಿನಾಂಕ 17-12-2017 ರಂದು ಮಧ್ಯಾಹ್ನ
12-30 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಚೌಕ
ಠಾಣೆ : ಶ್ರೀಮತಿ ಭಾಗಿರಥಿ ಗಂಡ ಶ್ರೀಮಂತ ಕಾಂಬಳೆ (ಹೊಡೆಲ್) ಸಾಃ ಹೊಡೆಲ್ ಗ್ರಾಮ ತಾಃ
ಆಳಂದ ಜಿಃ ಕಲಬುರಗಿ ಹಾಃವಾಃ ಬ್ಲಾಕ್ ನಂ 10 ಮನೆ.ನಂ ಜಿ-2 ಪೊಲೀಸ್ ಕಾಲೋನಿ ಡಿ.ಎ.ಆರ್ ಕೇಂದ್ರ ಸ್ಥಾನ ಕಲಬುರಗಿ ರವರು ತನ್ನ
ಕುಟುಂಬದೊಂದಿಗೆ ವಾಸವಾಗಿದ್ದು ನನ್ನ ಗಂಡನಾದ ಶ್ರೀಮಂತ ತಂದೆ ಗಿರೆಪ್ಪಾ ಕಾಂಬಳೆ (ಹೊಡೆಲ್) ಇವರು
ಪೊಲೀಸ್ ಇಲಾಖೆಯಲ್ಲಿ ಕಳೆದ 26 ವರ್ಷದಿಂದ ಪೊಲೀಸ್ ಪೇದೆಯಾಗಿ ಕರ್ತವ್ಯ
ನಿರ್ವಹಿಸುತ್ತಾ ಬಂದಿರುತ್ತಾರೆ. ದಿನಾಂಕ 17-12-2017 ರಂದು ಮದ್ಯಾಹ್ನ 3.00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನವರು ನನಗೆ ಹೇಳಿದ್ದೆನೆಂದರೆ 'ನಾಳೆ ಯಳ್ಳ ಅಮವಾಸ್ಸೆ ಇರುವ ನಿಮಿತ್ತ ಸೂಪರ್ ಮಾರ್ಕೆಟಗೆ ಹೋಗಿ ತರಕಾರಿ, ಹಾಗೂ ಗಂಜದಿಂದ
ಅಕ್ಕಿ ತೆಗೆದುಕೊಂಡು ಬರೋಣ' ಅಂತಾ ಹೇಳಿದ್ದಕ್ಕೆ ನಾನು ನನ್ನ ಗಂಡ ಇಬ್ಬರೂ
ಸೇರಿ ತರಕಾರಿ ಖರಿದಿ ಮಾಡುವ ಕುರಿತು ನಮ್ಮ ಮನೆಯಿಂದ ಮಾರ್ಕೆಟಗೆ ಬಂದು ತರಕಾರಿ ಖರಿದಿ ಮಾಡುತ್ತಿದ್ದಾಗ ಅದೆ ಸಮಯಕ್ಕೆ ಒಮ್ಮಿಂದೊಮ್ಮೇಲೆ
ನನ್ನ ಗಂಡ ಶ್ರೀಮಂತ ಇವರಿಗೆ ಎದೆ ನೋವು ಶುರುಆಗಿ ಎದೆ ನೋವು ಎದೆ ನೋವು ಎಂದು ಎದೆಯನ್ನು ಒತ್ತಿ ಹಿಡಿದು
ಕೆಳೆಗೆ ಕುಸಿದು ಬಿಳುವಷ್ಠರಲ್ಲಿ ನಾನು ನನ್ನ ಗಂಡನಿಗೆ ಹಿಡಿದುಕೊಂಡು ತರಕಾರಿ ಮಾರ್ಕೆಟದಿಂದ ಹೊರೆಗೆ
ತಂದು ಜನತಾ ಬಜಾರ ಕ್ರಾಸ ಹತ್ತಿರ ಇರುವ ಒಂದು ಆಟೋದಲ್ಲಿ ನನ್ನ ಗಂಡ ಶ್ರೀಮಂತ ಇವರಿಗೆ ಉಪಚಾರಕ್ಕಾಗಿ
ಸರಕಾರಿ ಆಸ್ಪತ್ರೆಗೆ 5.00 ಪಿ.ಎಂ ಸುಮಾರಿಗೆ ತರಲು ಆಸ್ಪತ್ರೆಯ ವೈಧ್ಯಾಧಿಕಾರಿಗಳು
ನನ್ನ ಗಂಡನಿಗೆ ಪರಿಶೀಲಿಸಿ ನೋಡುವಷ್ಠರಲ್ಲಿ ನನ್ನ ಗಂಡ ಈಗಾಗಲೆ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ.
ನನ್ನ ಗಂಡನಿಗೆ ಹೃದಯಾಘಾತವಾಗಿ ಸಾವು ಸಂಭವಿಸಿದ್ದು ಸದರಿ ವಿಷಯದಲ್ಲಿ ಯಾರ ಮೇಲೆಯು ಫಿರ್ಯಾಧಿ ಸಂಶಯ
ದೂರು ಇರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ
ಠಾಣೆ : ಶ್ರೀಮತಿ ಭೌರಮ್ಮ ಗಂಡ ಶಿವಯೋಗೆಪ್ಪ ಪೂಜಾರಿ@ಮೇಲಿನಮನಿ
ಸಾ|| ಸುಂಗಠಾಣ ತಾ|| ಸಿಂದಗಿ ಇವರಿಗೆ, ರಮೇಶ
ಮತ್ತು ಲಕ್ಷ್ಮೀ ಅಂತಾ ಇಬ್ಬರು ಮಕ್ಕಳಿರುತ್ತಾರೆ, ನಮ್ಮೂರ ಸಿಮಾಂತರದಲ್ಲಿ
ನನ್ನ ಗಂಡ ಶಿವಯೋಗೆಪ್ಪ ಇವರ ಹೆಸರಿಗೆ ಹೊಲಗಳಿದ್ದು ಅದರ ಸರ್ವೆ ನಂ 06 ನೇದ್ದರಲ್ಲಿ 2 ಎಕರೆ ಮತ್ತು ಸರ್ವೆ ನಂ 192 ನೇದ್ದರಲ್ಲಿ 2 ಎಕರೆ ಜಮೀನು ಇರುತ್ತದೆ, ನನ್ನ ಗಂಡ ಹೊಲಗಳ ಸಲುವಾಗಿ ಯಂಕಂಚಿ ಗ್ರಾಮಿಣ ಬ್ಯಾಂಕ ಶಾಖೆ ಸುಂಗಠಾಣ ನೇದ್ದರಲ್ಲಿ ಸುಮಾರು
60,000/- ರೂ, ನಮ್ಮೂರ ಸೊಸೈಟಿಯಲ್ಲಿ ಸುಮಾರು
40,000/- ರೂ ಹಾಗು ಖಾಸಗಿಯಾಗಿ ಸುಮಾರು 3,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ. ನನ್ನ ಗಂಡ ನಮಗೆ ಸಾಲ ಬಹಳಾಗಿದೆ
ಇದನ್ನು ನನ್ನಿಂದ ತೀರಿಸುವುದು ಆಗುವುದಿಲ್ಲಾ, ನಾನು ಸತ್ತರೆ ಎಲ್ಲಾ ಸರಿ
ಹೋಗುತ್ತೇ ಅಂತಾ ಅನ್ನುತ್ತಿದ್ದರು, ಆಗ ನಾನು ಅವರಿಗೆ ಸಮಾದಾನ ಹೇಳುತ್ತಾ
ಬಂದಿದ್ದು ದಿನಾಂಕ 09-12-2017 ರಂದು ಬೆಳಿಗ್ಗೆ 5;00 ಗಂಟೆ ಸುಮಾರಿಗೆ ನನ್ನ ಗಂಡ ಎದ್ದು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು,
ನಂತರ ನನ್ನ ಗಂಡ ಮರಳಿ ಮನೆಗೆ ಬರಲಿಲ್ಲಾ, ಅಂದಿನಿಂದ ನಾನು
ಮತ್ತು ನಮ್ಮ ಭಾವ ಸಂಗಪ್ಪ ಮತ್ತು ಸಂಬಂಧಿಕರಾದ ಶಂಕ್ರೆಪ್ಪ ಪೂಜಾರಿ, ಉಮೇಶ
ಪೂಜಾರಿ ರವರು ಕೂಡಿ ನನ್ನ ಗಂಡನಿಗೆ ಎಲ್ಲಾ ಕಡೆ ಹುಡಕಾಡಿದರು ಸಿಗಲಿಲ್ಲಾ. ಇಂದು ದಿನಾಂಕ 17-12-2017 ರಂದು 12;00 ಪಿ.ಎಂ ಸುಮಾರಿಗೆ ಮಾನಶಿವಣಗಿ ಗ್ರಾಮದ ರಮೇಶ ಚೌಧರಿ ಎಂಬುವರ ಹೊಲದ
ಭಾವಿಯಲ್ಲಿ ಒಂದು ಅಪರಿಚಿತ ಶವ ದೊರೆತಿದೆ ಅಂತಾ ಗೊತ್ತಾಗಿ ನಾನು ಮತ್ತು ನಮ್ಮ ಭಾವ ಸಂಗಪ್ಪ ಹಾಗು
ನಮ್ಮ ಸಂಬಂಧಿಕರಾದ ಶಂಕ್ರೆಪ್ಪ ಪೂಜಾರಿ, ಉಮೇಶ ಪೂಜಾರಿ, ಸಿದ್ದಣ್ಣ ಪೂಜಾರಿ ರವರು ಕೂಡಿ ಮಾನಶಿವಣಗಿ ಸಿಮಾಂತರದಲ್ಲಿರುವ ಹೊಲಕ್ಕೆ ಹೋಗಿ ಬಾವಿಯಲ್ಲಿ
ನೋಡಲಾಗಿ ಒಂದು ಶವ ಬೋರಲಾಗಿ ತೇಲುತ್ತಿತ್ತು, ನಂತರ ನಮ್ಮೂರ ಸಿದ್ದಪ್ಪ
ತಂದೆ ಹಿರಗೆಪ್ಪ ಕಾಂಬಳೆ, ನಿಂಗಪ್ಪ ತಂದೆ ದುಂಡಪ್ಪ ಪೂಜಾರಿ ರವರು ಬಾವಿಯಲ್ಲಿ
ಇಳಿದು ಶವ ಹೊರಗೆ ತೆಗೆದು ಹಾಕಿದಾಗ ನೋಡಲಾಗಿ ಶವವು ನನ್ನ ಗಂಡನದೆ ಇದ್ದು, ಅದನ್ನು ನಾವು ಗುರುತಿಸಿದ್ದು ಇರುತ್ತದೆ. ನನ್ನ ಗಂಡ ಹೊಲದ ಸಲುವಾಗಿ
ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು
ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೆ ಅಂತಾ ತಿಳಿದು ದಿನಾಂಕ 09-12-2017 ರಂದು ಬೆಳಿಗ್ಗೆ 10;00 ಗಂಟೆಯಿಂದ ದಿನಾಂಕ
17-12-2017 ರಂದು ಬೆಳಿಗ್ಗೆ 10;00 ಗಂಟೆ ಮದ್ಯದಲ್ಲಿ
ಮಾನಶಿವಣಗಿ ಗ್ರಾಮ ಸಿಮಾಂತರದ ರಮೇಶ ಚೌಧರಿ ಎಂಬುವರ ಹೊಲದ ಬಾವಿಯ ನೀರಲ್ಲಿ ಬಿದ್ದಿದ್ದರಿಂದ ಈಜು
ಬರದ ಕಾರಣ ನೀರಲ್ಲಿ ಮುಳಗಿ ಉಸಿರುಗಟ್ಟಿ ಮೃತ ಪಟ್ಟಿರುತ್ತಾರೆ, ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ
ಠಾಣೆ : ಶ್ರೀ ಮಲ್ಕಣಗೌಡ ತಂದೆ ಸಿದ್ದನಗೌಡ ಪೊಲೀಸ ಬಿರಾದಾರ ಸಾ|| ಹಂಗರಗಾ(ಬಿ) ಗ್ರಾಮ ಇವರು ತಮ್ಮೂರ ಸಿಮಾಂತರದಲ್ಲಿ
ನಮ್ಮ ತಂದೆ ಹೆಸರಿನಲ್ಲಿ ಸರ್ವೆ ನಂ 54 ನೇದ್ದರಲ್ಲಿ 4 ಎಕರೆ 15 ಗುಂಟೆ ಜಮೀನು ಇರುತ್ತದೆ. ನಾನು ಹೋಟೇಲ ಕೆಲಸ ಮಾಡಿಕೊಂಡಿರುತ್ತೇನೆ, ನನಗೆ 3 ಜನ ಅಕ್ಕ ತಂಗಿಯವರಿದ್ದು ಅವರಲ್ಲರ ಮದುವೆ ಮಾಡಿದ್ದು, ಸದ್ಯ ಅವರೆಲ್ಲರು
ತಮ್ಮ ಗಂಡನ ಮನೆಯಲ್ಲಿವಾಸವಾಗಿರುತ್ತಾರೆ, ನಮ್ಮ ತಂದೆಯವರು ಹೊಲದ ಸಲುವಾಗಿ
ಯಡ್ರಾಮಿ ಸಿಂಡಿಕೇಟ ಬ್ಯಾಂಕಿನಲ್ಲಿ 01 ಲಕ್ಷ ಮತ್ತು ಹಂಗರಗಾ(ಕೆ) ಗ್ರಾಮದ ಸೋಸೈಟಿಯಲ್ಲಿ 25,000/- ರೂ ಹಾಗು ಖಾಸಗಿಯಾಗಿ ಸುಮಾರು 2 ಲಕ್ಷ ಸಾಲ ಮಾಡಿಕೊಂಡಿರುತ್ತಾರೆ,
ಸಾಲ ಬಹಳಾಗಿದೆ ಅದನ್ನು ತೀರಿಸುವುದು ಹೇಗೆ ಅಂತಾ ಅನ್ನುತ್ತಾ ಚಿಂತೆ ಮಾಡುತ್ತಿದ್ದರು,
ನಾನು ನಮ್ಮ ತಾಯಿ ಅವರಿಗೆ ಸಾಮಾದಾನ ಹೇಳುತ್ತದ್ದೇವು. ನಿನ್ನೆ ದಿನಾಂಕ 15-12-2017 ರಂದು ರಾತ್ರಿ 10;00 ಗಂಟೆಗೆ ನಾವೆಲ್ಲರು ಊಟ ಮಾಡಿಕೊಂಡು ಮಲಗಿಕೊಂಡೆವು, ಬೆಳಿಗ್ಗೆ
04;00 ಗಂಟೆಗೆ ನಾನು ಎದ್ದು ನೋಡಿದಾಗ ನಮ್ಮ ತಂದೆ ಬಾಯಿಂದ ಬುರುಗ ಬಂದು ವಿಷದ ತರಹ
ವಾಸನೆ ಬರುತ್ತಿತ್ತು. ಆಗ ನಮ್ಮ ತಾಯಿಗೆ ಎಬ್ಬಿಸಿ ನಮ್ಮ ತಂದೆಯನ್ನು ನೋಡಲಾಗಿ
ನಮ್ಮ ತಂದೆ ಮೃತ ಪಟ್ಟಿದ್ದರು. ನಮ್ಮ ತಂದೆ ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು,
ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ನಿನ್ನೆ ದಿನಾಂಕ
15-12-2017 ರಂದು ರಾತ್ರಿ 11;00 ಗಂಟೆಯಿಂದ ದಿನಾಂಕ
16-12-2017 ರಂದು ಬೆಳಗಿನ ಜಾವ 04;00 ಗಂಟೆ ಮದ್ಯದಲ್ಲಿ
ಮನೆಯಲ್ಲಿ ಯಾವುದೋ ಕ್ರಿಮಿನಾಷಕ ಔಷಧಿ ಸೇವಿಸಿ ಮೃತ ಪಟ್ಟಿರುತ್ತಾರೆ, ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ
ಠಾಣೆ : ಶ್ರೀಮತಿ ಕನಿಸಬೇಗಂ ಗಂಡ ರುಸ್ತುಂಪಟೇಲ ಬಿರಾದಾರ ಸಾ; ಪಿರೋಜಾಬಾದ ರವರದು ತಮ್ಮೂರ
ಸೀಮಾಂತರ ದಲ್ಲಿ ಹೊಲ ಸರ್ವೇ ನಂ 80 ರಲ್ಲಿ 9 ಎಕರೆ 7 ಗುಂಟೆ ಜಮೀನು ಇದ್ದು.
ಅದನ್ನು ಅದು ಸುಮಾರು ವರ್ಷಗಳಿಂದ ನನ್ನ ಮಾವ ಮಹಿಮೂದ ಪಟೇಲ ಬಿರಾದಾರ ಉಳುಮೆ ಮಾಡುತ್ತಾ
ಬಂದಿರುತ್ತಾರೆ. ಈ ಹೊಲ ಸಂಬಂಧ ಮಹೇಶ ತಂದೆ ರಾಮಯ್ಯ ಯರಗೋಳ ಇತನು ತಮ್ಮ ಹೊಲ ಇದೆ
ಬಿಟ್ಟು ಹೋಗಿರಿ ಎಂದು ತಕರಾರು ಜಗಳ ಮಾಡುತ್ತಾ ಬಂದಿರುತ್ತಾರೆ ಸದ್ಯ ಈ ವರ್ಷ
ಹೊಲದಲ್ಲಿ 7 ಎಕರೆ ತೋಗರಿ ಬೆಳೆಸಿದ್ದು 2 ಎಕರೆ 7 ಗುಂಟೆ ಜೋಳದ ಬೆಳೆ ಇರುತ್ತದೆ.
ದಿನಾಂಕ 17/12/2017 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ಸರ್ವೇ ನಂ 80 ರಲ್ಲಿ ನಾನು
ಹಾಗೂ ನಮ್ಮ ಅತ್ತೆ ಹನೀಫಾ ಬೀ ಗಂಡ ಮಹೇಮೂದ ಪಟೇಲ ಬಿರಾದಾರ ಕೂಡಿ ಹೊಲದಲ್ಲಿ
ಇದ್ದಾಗ ಅಲ್ಲಿಗೆ ಈ ಮೊದಲು ಹೊಲದ ಸಂಭಂದ ನಮ್ಮೊಂದಿಗೆ ತಕರಾರು ಜಗಳ ಮಾಡುತ್ತಾ ಬಂದಿದ್ದ ಮಹೇಶ
ತಂದೆ ರಾಮಯ್ಯ ಯರಗೋಳ ಇತನು ತನ್ನೊಂದಿಗೆ 18/20 ಜನರೊಂದಿಗೆ ಬಂದು ತೋಗರಿ
ರಾಶಿಯನ್ನು ಮಷೀನನಿಂದ ಕೊಯಿದ್ದಾ ಮಾಡುವಾಗ ನಾನು ಹಾಗೂ ನಮ್ಮ ಅತ್ತೆ ಹನೀಫಾ ಕೂಡಿ ರಾಶಿ
ಮಾಡುವುದನ್ನು ತಡೆಯಲು ಹೋದಾಗ ಮಹೇಶ ಇತನು ಇದು ನಮ್ಮ ಹೊಲ ಇದ್ದು ಇಲ್ಲಿಂದ ನೀವು ಬಿಟ್ಟು
ಹೋದರೆ ಸರಿ ಇಲ್ಲದಿದ್ದರೇ ನಿಮಗೆ ಖಲ್ಲಾಸ ಮಾಡುತ್ತೇವೆ ಅಂತಾ ಬೆದರಿಸಿದಾಗ ನಾನು ನಮ್ಮ
ಅತ್ತೆ ರಾಶಿಯನ್ನು ತೆಗೆದುಕೊಂಡು ಹೋಗದಂತೆ ತಡೆದಾಗ ಅವರು ನಮಗೆ ನೂಕಿಸಿ ಕೊಟ್ಟು
ಕೈ ಹಿಡಿದು ಎಳಾದಾಡಿರುತ್ತಾರೆ ಇನ್ನೂ ಮುಂದೆ ಈ ಹೊಲದಲ್ಲಿ ಕಾಲು ಇಟ್ಟರೆ ಇದೆ ಚಾಕುವಿ ನಿಂದ
ಖಲ್ಲಾಸ ಮಾಡುತ್ತೇನೆ ಅಂತಾ ಬೆದರಿಸಿದಾಗ ನಾವು ಚೀರಾಡುವ ಸಪ್ಪಳ ಕೇಳಿ ಪಕ್ಕದ ಹೊಲದ
ಸಾಬವ್ವ ಗಂಡ ಶ್ರೀಮಂತ ಸುಂಬಳವಾಲೆ ಹಾಗೂ ಅಲ್ಲಾವುದ್ದಿನ ರವರುಗಳು ಬಿಡಿಸಲು
ಬಂದಾಗ ಅವರಿಗೆ ಮಹೇಶ ಹಾಗೂ ಇತರರು ಕೂಡಿ ಬೈಯ್ದು ಅಲ್ಲಿಂದ ಕಳಿಸಿರುತ್ತಾರೆ ನಂತರ
ನನಗೆ ಹಾಗೂ ನನ್ನ ಅತ್ತೆಗೆ ಗುಪ್ತಗಾಯವಳಾಗಿದ್ದು ಉಪ ಚಾರ ಕುರಿತು ಅಂಬುಲೈನ್ಸ್‌ದಲ್ಲಿ ಬಂದು
ಸೇರಿಕೆಯಾಗಿರುತ್ತೇವೆ. ಕಾರಣ ಅಕ್ರಮ ಕೂಟ ಮಾಡಿಕೊಂಡು ಬಂದು ನನಗೆ ನನ್ನ ಅತ್ತೆಗೆ
ಹೊಲದಲ್ಲಿ ಬರದಂತೆ ಹೊಲಸು ಬೈಯಿದ್ದು ಕೈಯಿಂದ ಹೊಡೆದು ಜೀವದ ಭಯ ಹಾಕಿ ಎಳೆದಾಡಿದವರ ಮೇಲೆ
ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.