Police Bhavan Kalaburagi

Police Bhavan Kalaburagi

Wednesday, January 8, 2020

BIDAR DISTRICT DAILY CRIME UPDATE 08-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-01-2020

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 07-01-2020 ರಂದು ಫಿರ್ಯಾದಿ ಸುಭಾಷ ತಂದೆ ನಾಮದೇವ ರಾಠೋಡ ಸಾ: ಲಿಡಕರ ಕಾಲೋನಿ ಔರಾದ(ಬಿ) ರವರ ಹೆಂಡತಿ ಮೀರಾಬಾಯಿ ಗಂಡ ಸುಭಾಷ ರಾಠೋಡ ಸಾ: ಲಿಡಕರ ಕಾಲೋನಿ ಔರಾದ(ಬಿ) ರವರು ಹೊಲದಲ್ಲಿ ಬಾವಿಯಿಂದ ನೀರು ತರಲು ಹೋಗಿ ಬಾವಿಯ ಮೇಲೆ ಚಪ್ಪಲಿಯನ್ನು ಬಿಟ್ಟು  ಬಾವಿಯಲ್ಲಿ ಇಳಿದು  ನೀರನ್ನು ತನ್ನ ಜೊತೆ ತಂದ ಸ್ಟೀಲ್ ಕಳಸಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದಾಗ ಕಾಲು ಜಾರಿ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದು ಇರುತ್ತದೆ, ಅವರ ಸಾವಿನ ಬಗ್ಗೆ ಯಾರ ಮೇಲು ಯಾವುದೇ ದೂರು ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 336 ಜೊತೆ 34 ಐಪಿಸಿ :-
ದಿನಾಂಕ 07-01-2020 ರಂದು ಬೀದರ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ರಾಷ್ಟ್ರ ಹಿತರಕ್ಷಣಾ ವೇದಿಕೆ ಬೀದರ ನೇದರ ಅಧ್ಯಕ್ಷರಾದ ಬಸವರಾಜ ಧನ್ನೂರೆ ರವರ ನೇತ್ರತ್ವದಲ್ಲಿ ಬೃಹತ ಮೆರವಣಿಗೆ ಹಮ್ಮಿಕೊಂಡಿದ್ದು, ಸದರಿ ಮೆರವಣಿಗೆಯು ಬೀದರ ನಗರದ ಗಣೇಶ ಮೈದಾನದಿಂದ ಪ್ರಾರಂಭವಾಗಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿ ಅಲ್ಲಿ ಮಾನ್ಯ ರಾಷ್ಟ್ರಪತಿಗಳು, ಭಾರತ ಸರ್ಕಾರ ರವರಿಗೆ ಬರೆದ ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳು, ಬೀದರ ರವರಿಗೆ ನೀಡುವವರಿದ್ದು ಅದರಂತೆ ಸದರಿ ಕಾರ್ಯಕ್ರಮ ಪ್ರಾರಂಭವಾಗಿ ಮೆರವಣಿಗೆಯು ಬೀದರ ಅಂಬೇಡ್ಕರ್ ಸರ್ಕಲ ಮಾರ್ಗವಾಗಿ ಶಿವಾಜಿ ಚೌಕ ಬಳಿ ಬಂದಾಗ ಆರೋಪಿತರಾದ 1) ಆಕಾಶ ತಂದೆ ರಘುನಾಥ ಕೋಟೆ, ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಅಲ್ಲಮಪ್ರಭು ನಗರ ಬೀದರ ಹಾಗೂ 2) ವಿವೇಕರೆಡ್ಡಿ ತಂದೆ ಗೋಪಾಲರೆಡ್ಡಿ, ವಯ: 25 ವರ್ಷ, ಜಾತಿ: ರೆಡ್ಡಿ, ಸಾ: ವಿದ್ಯಾನಗರ ಕಾಲೋನಿ 11 ನೇ ಕ್ರಾಸ ಬೀದರ ಇವರಿಬ್ಬರು ಒಂದು ಡ್ರೋಣ ಕ್ಯಾಮೇರಾ ಹಾರಿಸುತ್ತಿದ್ದು ಆಗ ಫಿರ್ಯಾದಿ ಶರಣಪ್ಪಾ ಸಿಪಿಸಿ-1110 ನೂತನ ನಗರ ಪೊಲೀಸ್ ಠಾಣೆ ರವರು ಅವರಿಗೆ ತನ್ನ ಗುರುತು ಪರಿಚಯ ತಿಳಿಸಿ ಅವೆರಿಗೆ ಡ್ರೋನ್ ಕ್ಯಾಮೇರಾ ಹಾರಿಸಲು ಸಂಬಂಧಿಸಿದ  ಪ್ರಾಧಿಕಾರಿಯವರಿಂದ ಅನುಮತಿ ಪಡೆದಿದ್ದಿರೋ ಹೇಗೆ ಎಂಬ ಬಗ್ಗೆ ವಿಚಾರಿಸಲಾಗಿ ಅವರುಗಳು ತಾವುಗಳು ಯಾವುದೇ ಅನುಮತಿ ಪಡೆದುಕೊಂಡಿರುವುದಿಲ್ಲ ಎಂದು ತಿಳಿಸಿದ್ದು, ಸದರಿ ಆರೋಪಿತರು ಡ್ರೋನ್ ಕ್ಯಾಮೇರಾವನ್ನು ಹಾರಿಸಲು ಸಂಬಂಧಿಸಿದ ಪ್ರಾಧೀಕಾರಿಯವರಿಂದ ಯಾವುದೇ ಅನುಮತಿಯನ್ನು ಪಡೆದಿರುವುದಿಲ್ಲ ಮತ್ತು ರೀತಿಯಾಗಿ ಡ್ರೋನ ಕ್ಯಾಮೇರಾವನ್ನು ಹಾರಿಸಿದರೇ ಮಾನವ ಜೀವಕ್ಕೆ ಅಪಾಯವಾಗುತ್ತದೆ ಎಂದು ಗೊತ್ತಿದ್ದರೂ ಸಹ ಡ್ರೋಣ ಕ್ಯಾಮೇರಾವನ್ನು ಹಾರಿಸಿ ಅಪರಾಧವೆಸಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 02/2020, ಕಲಂ. 279, 337, 338 ಐಪಿಸಿ ಜೊತೆ 192 ಐಎಂವಿ ಕಾಯ್ದೆ :-
ದಿನಾಂಕ 07-01-2020 ರಂದು ಮಹಾದೇವ ತಂದೆ ಹಿರೆಗೆಪ್ಪಾ ಪೂಜಾರಿ ವಯ: 26 ವರ್ಷ, ಜಾತಿ: ಕುರುಬ, ಸಾ: ರಟಕಲ್ ರವರು ತನ್ನ ಹೆಂಡತಿ ಗೀತಾ ರವರ ಜೊತೆಯಲ್ಲಿ ತಮ್ಮ ಮಾವನ ಮನೆ ಕಮಠಾಣಾಕ್ಕೆ ಬಂದು ಚಿಮಕೋಡದಲ್ಲಿ ಚಿಕ್ಕ ಅತ್ತೆ ಇರುವುದರಿಂದ ಅವರಿಗೆ ಮಾತನಾಡಿಕೊಂಡು ಬರಬೇಕೆಂದು ಫಿರ್ಯಾದಿಯು ತನ್ನ ಹೆಂಡತಿ ಗೀತಾ, ಅತ್ತೆ ಪದ್ಮಾವತಿ ಗಂಡ ತುಕಾರಾಮ ಬಾವಗೆ ಸಾ: ಕಮಠಾಣಾ, ಅಜ್ಜಿ: ಲಾಲಮ್ಮ 0ಗಂಡ ಅರ್ಜುನಪ್ಪಾ ಎರನಳ್ಳೆ ವಯ: 60 ವರ್ಷ, ಸಾ: ರಾಜಗೀರಾ, ಹೆಂಡತಿಯ ತಂಗಿ ಚಂದ್ರಕಲಾ ಗಂಡ ಮಂಜುನಾಥ  ವಯ: 25 ವರ್ಷ, ಸಾ: ಚಾಂಬೋಳ, ಅವರ ಗಂಡ ಮಂಜುನಾಥ ತಂದೆ ಶಿವರಾಜ ಸಾ: ಚಾಂಬೋಳ ತಮ್ಮ ಮಾವನ ಅಟೋ ನಂ ಕೆ.ಎ-38/3386 ನೇದರಲ್ಲಿ ಎಲ್ಲರು ಚಿಮಕೋಡಕ್ಕೆ ಹೋಗುವಾಗ ಗಾದಗಿ ಹತ್ತಿರ ಚೀಮಕೋಡ ರಸ್ತೆಯ ಮೇಲೆ  ಫಿರ್ಯಾದಿಯವರ ಹೆಂಡತಿ ತಂಗಿಯ ಗಂಡ ಮಂಜುನಾಥ ರವರು ಸದರಿ ಆಟೊವನ್ನು ಅತೀವೇಗ ನಿಷ್ಕಾಳಜಿಯಿಂದ ಚಲಾಯಿಸಿ ಒಮ್ಮಲೇ ಬ್ರೇಕ ಹಾಕಿದಾಗ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಣ ಆಟೋದಲ್ಲಿದ್ದ ಫಿರ್ಯಾದಿಯವರ ಬಲಭುಜಕ್ಕೆ ಭಾರಿ ಗುಪ್ತಗಾಯ, ಎಡಗೈ ಮೋಳಕೈ ಹತ್ತಿರ ಮತ್ತು ಎಡಗಾಲ ಹಿಮ್ಮಡಿ ಮೇಲೆ ರಕ್ತಗಾಯ, ಅತ್ತೆ ಪದ್ಮಾವತಿ ರವರಿಗೆ ತಲೆಯ ಹಿಂದೆ ಭಾರಿ ಗುಪ್ತಗಾಯ, ಎಡಕಿವಿಯಿಂದ ರಕ್ತ ಬಂದಿರುತ್ತದೆ ಮತ್ತು ಎಡಗಾಲ ಮೋಳಕಾಲಿಗೆ ರಕ್ತಗಾಯ ಹಾಗು ಅಜ್ಜಿ ಲಾಲಮ್ಮ ರವರಿಗೆ ಎಡಗಡೆಯ ಹಣೆಯ ಮೇಲೆ, ಎಡಗಣ್ಣಿನ ಮೇಲೆ, ಎಡಗಲ್ಲದ ಮೇಲೆ ರಕ್ತಗಾಯ ಮತ್ತು ಹೆಂಡತಿ ಗೀತಾ ಮತ್ತು ಅತ್ತಿಗೆ ಚಂದ್ರಕಲಾ ರವರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ, ಕೂಡಲೇ ರಸ್ತೆಯಲ್ಲಿ ಬೀದರ ಕಡೆಗೆ ಬರುತ್ತಿದ್ದ ಒಂದು ಆಟೋದಲ್ಲಿ ಎಲ್ಲರು ಕುಳಿತು ಚಿಕಿತ್ಸೆ ಬೀದರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 06/2020, ಕಲಂ. 457, 380 ಐಪಿಸಿ :-
ದಿನಾಂಕ 07-01-2020 ರಂದು ರಾತ್ರಿ 2:30 ರಿಂದ 2:45 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಶಿರಾಜ ಮೊತಪಳ್ಳಿ ವಯ: 30 ವರ್ಷ, ಜಾತಿ: ಲಿಂಗಾಯತ ರಡ್ಡಿ, ಸಾ: ಅಮೀರಾಬಾದ ವಾಡಿ ರವರ ಜಗಲಿ ರೂಮಿನ ಕೀಲಿಯನ್ನು ಯಾರೋ ಅಪರಿಚಿತ ಕಳ್ಳರು ಮುರಿದು ರೂಮಿನಲ್ಲಿ ಕಬ್ಬಿಣದ ಅಲಮಾರಿಯಲ್ಲಿಟ್ಟಿದ್ದ 1) ಬಂಗಾರದ ಒಂದು ತೊಲೆಯ ಒಂದು ಬೋರಮಳ ಸರಾ .ಕಿ 30,000/- ರೂ., 2) ಕಿವಿಗೆ ಹಾಕಿಕೊಳ್ಳುವ ಬಂಗಾರದ ಸರಪಳ 3 ಗ್ರಾಂ. .ಕಿ 9000/- ರೂ., 3) ಸಣ್ಣ ಮಕ್ಕಳ ಬಂಗಾರದ 2 ರಿಂಗಗಳು 2 ಗ್ರಾಂ. .ಕಿ 6000/- ರೂ., 4) ಬೆಳ್ಳಿಯ 15 ತೋಲಿಯ ಕಾಲಿನ 2 ಚೈನಗಳು, 5) ಬೆಳ್ಳಿಯ 6 ತೋಲಿಯ ಕಾಲಿನ 2 ಚೈನಗಳು, 6) ಬೆಳ್ಳಿಯ 5 ತೋಲಿಯ ಕಾಲಿನ 2 ಖಡ್ಗಗಳು ಹೀಗೆ ಒಟ್ಟು 26 ತೋಲಿ ಬೆಳ್ಳಿಯ ಆಭರಣಗಳು .ಕಿ 10,400/- ರೂ. ಮತ್ತು 7) 5000/- ರೂ. ನಗದು ಹಣ ಹೀಗೆ ಎಲ್ಲವುಗಳ ಒಟ್ಟು ಹಣ 60,400/- ರೂ. ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 07-01-2020 ರಂದು ಹಸ್ಸಿಕೇರಾ ಕ್ರಾಸ್ ಹತ್ತಿರ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಸರಾಯಿ ಇಟ್ಟುಕೊಂಡು ಸಾಗಾಟ ಮಾಡುವವರಿದ್ದಾರೆ ಅಂತ ವಿ.ಬಿ.ಯಾದವಾಡ ಪಿಎಸ್ಐ ಕುಶನೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಸ್ಸಿಕೇರಾ ಕ್ರಾಸ್ ಹತ್ತಿರ ಹೋಗಿ ಔರಾದ-ಹಸ್ಸಿಕೇರಾ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ನಿಂತಿದ್ದು ಅದರಲ್ಲಿ ಒಬ್ಬನ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲ ಇದ್ದು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಚೀಲದಲ್ಲಿ ಏನಿದೆ ಅಂತ ವಿಚಾರಿಸಿಧಘ ಸಮಂಜಷವಾದ ಉತ್ತರ ಕೊಡದ ಕಾರಣ ಪಂಚರ ಸಮಕ್ಷಮ ಚೀಲ ತೆರೆದು ನೋಡಲಾಗಿ ಅದರಲ್ಲಿ ಒಂದು ಕಾರ್ಟನ ಇದ್ದು ಕಾರ್ಟನ ಬಿಚ್ಚಿ ನೋಡಲಾಗಿ ಅದರಲ್ಲಿ 90 ಎಂ.ಎಲ್ ಓರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ ಒಟ್ಟು 96 ಫುಟ್ಟದ ಸರಾಯಿ ಪ್ಯಾಕೇಟಗಳು ಅ.ಕಿ 2880/- ರೂ., ಸದರಿ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಆತ ತನ್ನ ಹೆಸರು ರಾಜಕುಮಾರ ತಂದೆ ಪ್ರಭು ರಾಠೋಡ ವ: 33 ವರ್ಷ, ಜಾತಿ: ಲಮಾಣಿ, ಸಾ: ಧನಸಿಂಗ್ ತಾಂಡ, ಮುಧೋಳ(ಬಿ) ತಾ: ಔರಾದ(ಬಿ) ಅಂತ ತಿಳಿಸಿದನು, ನಂತರ ಸದರಿ ವ್ಯಕ್ತಿಗೆ ನಿನ್ನ ಹತ್ತಿರ ಸರಾಯಿ ಸಾಗಾಟ ಮಾಡಲು ಸರಕಾರದಿಂದ ಯಾವುದಾದರೂ ಲೈಸನ್ಸ್/ಪರವಾನಿಗೆ ಇದೇಯೇ ಅಂತ ವಿಚಾರಿಸಲಾಗಿ ತನ್ನ ಹತ್ತಿರ ಯಾವುದೇ ಲೈಸನ್ಸ್/ಅನುಮತಿ ಇರುವುದಿಲ್ಲ, ನಾವಿಬ್ಬರೂ ಅನಧೀಕೃತವಾಗಿ ಸಂಗ್ರಹಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದನು, ಇನ್ನೊಬ್ಬ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಿದ್ದು ಆತ ತನ್ನ ಹೆಸರು ಮಾರುತಿ ತಂದೆ ಧನಸಿಂಗ್ ರಾಠೋಡ ವಯ: 54 ವರ್ಷ, ಜಾತಿ: ಲಮಾಣಿ, ಸಾ: ಧನಸಿಂಗ್ ತಾಂಡ, ಮುಧೋಳ(ಬಿ) ತಾ: ಔರಾದ(ಬಿ) ಅಂತ ತಿಳಿಸಿದನು, ನಂತರ ಸದರಿ ಸರಾಯಿ ಪ್ಯಾಕೇಟಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 05/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 07-01-2020 ರಂದು ಬಸವಕಲ್ಯಾಣ ನಗರದ .ಪಿ.ಎಂ.ಸಿ ಕಛೇರಿ ಹತ್ತಿರ ಬಸವ ಗಂಜ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ. [ಕಾ&ಸು] ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ ಬಾತ್ಮಿ ತಿಳಿದು ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ .ಪಿ.ಎಂ.ಸಿ ಕಛೇರಿ ಬಸವ ಗಂಜ ಹತ್ತಿರ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸದರಿ .ಪಿ.ಎಂ.ಸಿ ಕಛೇರಿ ಬಸವ ಗಂಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಿಜಾಮ ತಂದೆ ನಬಿಸಾಬ ಧೋಬಿ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಧೋಬಿ ಗಲ್ಲಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1560/- ರೂ., ಮತ್ತು 02 ಮಟಕಾ ಚೀಟಿಗಳು ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 04/2020, ಕಲಂ. 498(ಎ), 323, 324, 504 ಜೊತೆ 34 ಐಪಿಸಿ :-
ಫಿರ್ಯಾದಿ ಪಂಚಶೀಲಾ @ ಸೊನಾ ಗಂಡ ಉತ್ತಮ ಡೊಂಗರೆ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಬೆಳಕುಣಿ(ಬಿ) ರವರ ಮದುವೆ 8 ವರ್ಷಗಳ ಹಿಂದೆ ಉತ್ತಮ ತಂದೆ ಶೆಷೆರಾವ ಡೊಂಗರೆ ಬೆಳಕುಣಿ(ಬಿ) ಗ್ರಾಮ ಇವರ ಜೊತೆ ಆಗಿದ್ದು, ಮದುವೆಯಾದಾಗಿನಿಂದ ಗಂಡ ಸರಾಯಿ ಕುಡಿದು ಬಂದು ಹೊಡೆಯುವುದು, ಫಿರ್ಯಾದಿಯ ಮೇಲೆ ಸಂಶಯ ಪಟ್ಟು ನೀನು ಆಕಡೆ ಯಾಕೆ ನೋಡಿದ್ದಿ, ಈ ಕಡೆ ಯಾಕೆ ನೋಡಿದ್ದಿ ನಿನಗೆ ಮಕ್ಕಳು ಆಗಿಲ್ಲಾ ಅಂತಾ ಅವಾಚ್ಯವಾಗಿ ಬೈಯುವುದು ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 06-01-2020 ರಂದು ಮೈದುನ ಆನಂದ ಶೆಷರಾವ ಡೊಂಗರೆ ಇವನು ಬಂದು ನೀನು ಪಕ್ಕದ ಮನೆಯವರ ಮನೆಗೆ ಏಕೆ ಹೊಗುತ್ತಿ ಅಂತಾ ಅಂದು ಬಾತರೂಮನ ಕಟ್ಟಿಗೆ ತೆಗೆದು ಫಿರ್ಯಾದಿಯ ಎಡಕಪಾಳಕ್ಕೆ ಹೊಡೆದಿರುತ್ತಾನೆ, ನನ್ನ ಹೊಟೆಯಲ್ಲಿ ಒದ್ದಿರುತ್ತಾನೆ ಹಾಗು ಮನೆಯ ಅಂಗಳದಿಂದ ರೋಡಿನವರೆಗೆ ಕೂದಲು ಹಿಡಿದು ಎಳೆದಿರುತ್ತಾನೆ, ನಾದಿನಿ ಪೊಪಟ(ಸುಜಾತಾ) ಇವಳು ನೀನು ನನ್ನ ತಮ್ಮನಿಗೆ ಯಾಕೆ ಹೊಡೆದಿದ್ದಿ ಅಂತಾ ಎರಡು ಕಪಾಳದಲ್ಲಿ ಕೈಯಿಂದ ಹೊಡೆದಿರುತ್ತಾಳೆ, ಸದರಿ ಘಟನೆ ಪಕ್ಕದ ಮನೆಯವರಾದ ಶಾಂತಾಬಾಯಿ ಗಂಡ ದಾಮೋದರ ಡೊಂಗರೆ, ಪಿಂಕಾಬಾಯಿ ಗಂಡ ಸಂಜೀವ ಡೊಂಗರೆ ಇವರು ನೋಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.