Police Bhavan Kalaburagi

Police Bhavan Kalaburagi

Tuesday, August 10, 2021

BIDAR DISTRICT DAILY CRIME UPDATE 10-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-08-2021

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 10/2021, ಕಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶಕುಂತಲಾ ಗಂಡ ಕಲ್ಯಾಣರಾವ ವಾರದ ವಯ:45 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿಖೇಡ(ಕೆ) ರವರ ಗಂಡನಾದ ಕಲ್ಯಾಣರಾವ ತಂದೆ ಗುರುಲಿಂಗಪ್ಪಾ ವಾರದ, ವಯ: 50 ವರ್ಷ ರವರು ದಿನಾಂಕ 04-08-2021 ರಂದು 1600 ಗಂಟೆಗೆ ತಮ್ಮ ಹೊಲದ ಕಟ್ಟೆಯ ಮೇಲೆ ಹಾಕಿದ ಕಬ್ಬಿನ ವಾಡಿಯನ್ನು ತೆಗೆಯುವಾಗ ಆಕಸ್ಮಿಕವಾಗಿ ಅವರ ಎಡಗಾಲ ಹೆಬ್ಬೆರಳಿಗೆ ಹಾವು ಕಚ್ಚಿದಾಗ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 08-08-2021 ರಂದು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 09-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 14/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ರಾಜಕುಮಾರ ತಂದೆ ಬಾಬುರಾವ ಪಾಟೀಲ್ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಕಾಸರತುಗಾಂವ, ತಾ: ಭಾಲ್ಕಿ, ಸದ್ಯ: ಶಿವನಗರ ಭಾಲ್ಕಿ ರವರ ಮಗನಾದ ಅವಿನಾಶ ಪಾಟೀಲ್ ವಯ: 22 ವರ್ಷ ಈತನು ಯಾವದೋ ಕಾರಣಕ್ಕಾಗಿ ಜೀವನದಲ್ಲಿ ಚಿಗುಪ್ಸೆಗೊಂಡು ಫಿರ್ಯಾದಿಗೆ ಮತ್ತು ಕುಟುಂಬದಲ್ಲಿ ಯಾರಿಗೂ ತಿಳಿಸದೇ ದಿನಾಂಕ 07-08-2021 ರಂದು 0800 ಗಂಟೆಯಿಂದ 1200 ಗಂಟೆಮಧ್ಯದ ಅವಧಿಯಲ್ಲಿ ತ್ರಿಪೂರಾಂತ ಕೆರೆಗೆ ಹೋಗಿ ನೀರಿನಲ್ಲಿ ಜೀಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ, ತನ್ನ ಮಗನ ಸಾವಿನ ಬಗ್ಗೆ ನನಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-08-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 53/2021, ಕಲಂ. 506 ಐಪಿಸಿ ಮತ್ತು 3, 25 ಭಾರತೀಯ ಆಯುಧ ಕಾಯ್ದೆ 1959 :-

ದಿನಾಂಕ 08-08-2021 ರಂದು ಫಿರ್ಯಾದಿ ಅಕ್ಷಯ ತಂದೆ ರಮೇಶರಾವ ಸದಾಫಾಲೆ ವಯ: 28 ವರ್ಷ, ಜಾತಿ: ಕೋಷ್ಟಿ, : ಎಸ್..ಎಸ್ ಸೆಕ್ಯೂರೀಟಿ ಗಾರ್ಡ, ಜೀಮಿನಿ ಗ್ರಾಫಿಕ್ಸ್ ಕಂಪನಿ ಕೊಳಾರ ಇಂಡಸ್ಟ್ರೀಯಲ್ ಏರಿಯಾ ಬೀದರ, ಸಾ: ದ್ವಾರಕಾ ಚೌಕ ಸುರಜಿ ಗ್ರಾಮ, ತಾ: ಅಂಜನಗಾಂವ ಸುರಜಿ. : ಅಮರಾವತಿ ಮಹಾರಾಷ್ಟ್ರಾ ರಾಜ್ಯ ಸದ್ಯ: ಬಕಚೋಡಿ ರೋಡ್ ಮುರಮುರಾ ಕಂಪನಿ ಹತ್ತಿರ ಕೊಳಾರ ಇಂಡಸ್ಟ್ರೀಯಲ್ ಏರಿಯಾ ಬೀದರ ರವರು ತಮ್ಮ ರೂಮಿನಿಂದ ಅಂದರೆ, ಕೊಳಾರ ಇಂಡಸ್ಟ್ರೀಯಲ್ ಏರಿಯಾದಿಂದ ಆಟೋದಲ್ಲಿ ಕುಳಿತು ಬೀದರ ನಗರದ ಬಸ್ಸ ನಿಲ್ದಾಣಕ್ಕೆ ಬಂದು ಅಲ್ಲಿ ಇಳಿದು ಅಲ್ಲಿಂದ ನಡೆದುಕೊಂಡು ಬೀದರ ನಗರದ ಮಹಾವೀರ ವೃತ್ತದ ಬಳಿ ಇರುವ ಖಾನ ಚಾಚಾ ಹೋಟಲದಲ್ಲಿ ಊಟ ಮಾಡುವ ಕುರಿತು 2140 ಗಂಟೆಯ ಸುಮಾರಿಗೆ ಬಂದಾಗ ಖಾನ ಚಾಚಾ ಹೋಟಲ ಬಂದ ಇರುವುದರಿಂದ ನಡೆದುಕೊಂಡು ಮರಳಿ ಮಹಾವೀರ ವೃತ್ತ ಕಡೆಗೆ ಹೋಗುವಾಗ ಮಹಾವೀರ ವೃತ್ತದ ಮುಂದೆ 2145 ಗಂಟೆಯ ಸುಮಾರಿಗೆ ಅಲ್ಲಿ ಒಂದು ಬಿಳಿ ಬಣ್ಣದ ಸ್ವೀಪ್ಟ್ ಡಿಜೈರ್ ಕಾರ್ ನಂ. ಕೆ.-01/ಎಂ.ಎಲ್-8342 ನೇದು ನಿಂತಿದ್ದು ಅದರಲ್ಲಿಯ ಒಬ್ಬ ಅಪರಿಚಿತ ವ್ಯಕ್ತಿ ಫಿರ್ಯಾದಿಯು ಧರಿಸಿದ ಟಿ-ಶರ್ಟ ಹಿಡಿದು ಅವನ ಹತ್ತಿರವಿರುವ ಪಿಸ್ತೂಲನ್ನು ಎದೆಗೆ ಹಚ್ಚಿ ತು ಜಹಾನ ಜಿಮಿನಿ ಗ್ರಾಫಿಕ್ಸ್ ಕಂಪನಿ ಮೇ ಕಾಮ ಕರತೈ ವಹಾ ಪರ ಕ್ಯಾಕ್ಯಾ ಚಲತಾ ಹೈ ಮುಜೇ ಮಾಲೂಮ ಹೈ ತು 2 ತಾರೀಕ ತಕ್ ಮುಜೇ ಸಬ್ ಮಾಹಿತಿ ದೇನಾ ನೈತು ತುಜೇ ಖತಂ ಕರದೇತು ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ಫಿರ್ಯಾದಿಯು ಅವನಿಂದ ತಪ್ಪಿಸಿಕೊಂಡು ಅಲ್ಲಿಂದ ಬೀದರ ರೈಲ್ವೆ ಸ್ಟೇಷನ್ ಹತ್ತಿರ ಹೋಗಿ ತಮ್ಮ ಕಂಪನಿಯ ಸಿಬ್ಬಂದಿಯವರಿಗೆ ವಿಷಯ ತಿಳಿಸಿದಾಗ ಸಿದ್ದಲಿಂಗ ತಂದೆ ಧೋಳಪ್ಪಾ ಬಿರಾದಾರ ವಯ: 30 ವರ್ಷ, ಜಾತಿ: ಲಿಂಗಾಯತ, : ಹೆಚ್.ಆರ್ ಸಹಾಯಕ ಜಿಮಿನಿ ಗ್ರಾಫಿಕ್ಸ್ ಕಂಪನಿ ಕೊಳಾರ ಇಂಡಸ್ಟ್ರೀಯಲ್ ಏರಿಯಾ ಬೀದರ, ಸಾ: ಜಾಂತಿ ಗ್ರಾಮ, ತಾ: ಭಾಲ್ಕಿ, ಸದ್ಯ: ಶಿವನಗರ ಬೀದರ ಇವರು ಬಂದಾಗ ಫಿರ್ಯಾದಿಯು ಅವರ ಜೋತೆ ಕಂಪನಿಗೆ 2230 ಗಂಟೆಯ ಸುಮಾರಿಗೆ ಹೋದಾಗ ಫಿರ್ಯಾದಿಯ ಜೋತೆ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ ಕರ್ತವ್ಯ ನಿವಹಿಸುತ್ತಿರುವ ಶುಭಂ ಇವರು ನನಗೆ ತಿಳಿಸಿದೆನಂದರೆ ನಿಮ್ಮ ಜೋತೆ ಆದ ಘಟನೆಯ ಕಾರನ್ನು ನಮ್ಮ ಜಿಮಿನಿ ಗ್ರಾಫಿಕ್ ಕಂಪನಿಯ ಕ್ರಾಸ್ ಹತ್ತಿರ 2245  ಗಂಟೆಯ ಸುಮಾರಿಗೆ ನಿಂತಿದ್ದು ನಾನು ನೋಡಿರುತ್ತೇನೆ ಸದರಿ ಕಾರಿನಿಂದ ಅಲ್ಲೆ ಇರುವ ಪಾನ್ ಶಾಪ್ ಅಂಗಡಿಯವನು ಇಳಿದಿರುತ್ತಾನೆ ಎಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಖ 09-08-2021 ರಂದು ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 33/2021, ಕಲಂ. 279, 337, 338 ಐಪಿಸಿ ಜೋತೆ 187 ಮೋಟಾರ್ ವಾಹನ ಕಾಯ್ದೆ :-

ದಿನಾಂಕ 09-08-2021  ರಂದು ಫಿರ್ಯಾದಿ ಅಜಯ ತಂದೆ ಮಾರುತಿ ತ್ರಿಮುಖೆ ಸಾ: ಯಾಕತಪೂರ ಗ್ರಾಮ, ತಾ: & ಜಿ: ಬೀದರ ರವರು ತನ್ನ ತಾಯಿ ಲಕ್ಷ್ಮೀಬಾಯಿ ತ್ರಿಮುಖೆ, ಅಜ್ಜಿ ದೊಂಡೆಮ್ಮಾ ಗಂಡ ಅರ್ಜುನ ತ್ರಿಮುಖೆ ಎಲ್ಲರೂ ಮನ್ನಳ್ಳಿ ಗ್ರಾಮಕ್ಕೆ ಖಾಸಗಿ ಕೆಲಸ ಕುರಿತು ಹೋಗಲು ಮ್ಮೂರ ಬಸ್ ನಿಲ್ದಾಣದ ಹತ್ತಿರ ನಿಂತಾಗ ಬೀದರ ಕಡೆಯಿಂದ ಆಟೊ ನಂ. ಕೆಎ-38/9281 ನೇದರ ಚಾಲಕ ತನ್ನ ಆಟೋದಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಮನ್ನಳ್ಳಿ ಕಡೆಗೆ ಹೊಗುತ್ತಿರುವಾಗ ಫಿರ್ಯಾದಿಯು ಸದರಿ ಆಟೋಗೆ ಕೈಮಾಡಿ ನಿಲ್ಲಿಸಿ ಅದರಲ್ಲಿ ಎಲ್ಲರ ಮತ್ತು ಪರಿಚಯಸ್ತ ಸಾತೋಳಿ ಗ್ರಾಮ ಲಕ್ಷ್ಮೀ ಗಂಡ ಭೀಮಣ್ಣ ಮುಲಕನೂರ ರವರು ಸಹ ಅದೇ ಆಟೋದಲ್ಲಿ ಕುಳಿತುಕೊಂಡು ಮನ್ನಳ್ಳಿಗೆ ಬರುತ್ತಿರುವಾಗ ಸರಿ ಆಟೋ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬೀದರ - ಮನ್ನಳ್ಳಿ ರೋಡ ಮನ್ನಳ್ಳಿ ಗ್ರಾಮದ ಕೆರೆ ಹತ್ತಿರ ಬಂದಾಗ ಆರೋಪಿಯು ವೇಗದಲ್ಲಿದ್ದ ತನ್ನ ಆಟೋಕ್ಕೆ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಆಟೋ ರೋಡಿನ ಬದಿಯ ತಗ್ಗಿನಲ್ಲಿ ಪಲ್ಟಿಯಾಗಿದ್ದು, ಸದರಿ ಪಲ್ಟಿಯಿಂದ ಫಿರ್ಯಾದಿಯ ಬಲಗೈಗೆ ತರಚಿದ ಗಾಯ, ತಾಯಿಗೆ ಬಲಗಣ್ಣಿನ ಮೇಲಿನ ಹುಬ್ಬಿಗೆ ರಕ್ತಗಾಯ, ಬಲಗೈ ಭುಜಕ್ಕೆ ಭಾರಿ ಗುಪ್ತಗಾಯ, ಅಜ್ಜಿಎದೆ ಮೇಲೆ ಗುಪ್ತಗಾಯವಾಗಿರುತ್ತದೆ ಮತ್ತು ಸಾತೋಳಿ ಗ್ರಾಮದ ಲಕ್ಷ್ಮೀ ರವರಿಗೆ ನೋಡಲು ಅವರ ಬಲಗಣ್ಣಿನ ಕೆಳಗಡೆ ಗುಪ್ತಗಾಯ, ಬಾಯಿಗೆ ರಕ್ತಗಾಯ ಹಾಗೂ ಬಲಗಾಲಿನ ತೊಡೆಗೆ ಭಾರಿ ಗುಪ್ತಗಾಯ, ಸೊಂಟದ ಹತ್ತಿರ ಗುಪ್ತಗಾಯ ಮತ್ತು ಆಟೋದಲ್ಲಿ ಬೀದರದಿಂದ ಕುಳಿತು ಬರುತ್ತಿದ ಪ್ರಯಾಣಿಕರಾದ ರಮೇಶ ತಂದೆ ದಶರಥ ಮಡಿವಾಳ ಕೆ.ಇ.ಬಿ ಕಾಲೋನಿ ಬೀದರ ರವರ ಎದೆಯ ಮೇಲೆ ಗುಪ್ತಗಾಯ, ಮುಖದ ಮೇಲೆ ರಕ್ತಗಾಯ, ಎಡಗೈಗೆ ಗುಪ್ತಗಾಯ, ತಲೆ ಮೇಲೆ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಯು ತನ್ನ ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ಅಂಬುಲೇನ್ಸ್ ಕರೆಯಿಸಿ ಅದರಲ್ಲಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಹಾಗೂ ಲಕ್ಷ್ಮೀಬಾಯಿ ರವರು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಮನ್ನಳ್ಳಿ ಸರಕಾರಿ ಆಸ್ಪತ್ರೆಗೆ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ 09-08-2021 ರಂದು ಧರ್ಮಾಪೂರ ಗ್ರಾಮದ ಮೋಹನರೆಡ್ಡಿ ತಂದೆ ಸಂಗಾರೆಡ್ಡಿ ಗಡಿಲೋರ ಇವನು ಧರ್ಮಾಪೂರ ಗ್ರಾಮದ ಸಮೀಪ ಇರುವ ಮಲ್ಲಪ್ಪ ಚಿಂತಲಗೇರಾ ರವರ ಹೊಲದ ಹತ್ತಿರ ಧರ್ಮಾಪೂರ- ಮನ್ನಳ್ಳಿ ರೋಡಿನ ಪಕ್ಕದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಮಲ್ಲಿಕಾರ್ಜುನ ಪಿ.ಎಸ್. ಮನ್ನಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಧರ್ಮಾಪೂರ ಗ್ರಾಮದ ಸಮೀಪ ಇರುವ ಮಲ್ಲಪ್ಪಾ ಚಿಂತಲಗೇರಾ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಮೋಹನರೆಡ್ಡಿ ತಂದೆ ಸಂಗಾರೆಡ್ಡಿ ಗಡಿಲೋರ ವಯ: 25 ವರ್ಷ, ಜಾತಿ: ರೆಡ್ಡಿ, ಸಾ: ಧರ್ಮಾಪೂರ ಇತನು ಒಂದು ಬಿಳಿ ಚೀಲದಿಂದ ಸರಾಯಿ ಬಾಟಲ ತೆಗೆದು ಮಾರಾಟ ಮಾಡುತ್ತಿರುವುದನ್ನು ನೋಡಿ ಮಾಹಿತಿ ಖಚಿತ ಪಡಿಸಿಕೊಂಡು ಲ್ಲರು ಹೋಗಿ ಅವನ ಮೇಲೆ ಒಮ್ಮೆಲೆ ದಾಳಿ ಮಾಡಿ ಸದರಿ ಆರೋಪಿಗೆ ಹಿಡಿದು ಅವನ ಹತ್ತಿರವಿದ್ದ ಬಿಳಿ ಚೀಲದಲ್ಲಿ ಏನಿದೆ? ಅಂತ ವಿಚಾರಿಸಿದಾಗ ಇದರಲ್ಲಿ ಸರಾಯಿ ಇರುತ್ತದೆ ಅಂತಾ ತಿಳಿಸಿದನು, ನಂತರ ಸದರಿ ಬಿಳಿ ಚೀಲದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಅದರಲ್ಲಿ 1) ಓಲ್ಡ್ ಟಾವ್ನ ವಿಸ್ಕಿ 180 ಎಮ್.ಎಲ್ ವುಳ್ಳ 08 ಟೆಟ್ರಾ ಪ್ಯಾಕೆಟಗಳು ಅ.ಕಿ 694/- ರೂ., 2) 8 ಪಿ.ಎಂ ವಿಸ್ಕಿ 180 ಎಮ್.ಎಲ್ ವುಳ್ಳ 05 ಟೆಟ್ರಾ ಪ್ಯಾಕೆಟಗಳು ಅ.ಕಿ 433/- ರೂ., 3) ಯು.ಎಸ್ ವಿಸ್ಕಿ 90 ಎಮ್.ಎಲ್ ವುಳ್ಳ 38 ಪ್ಲಾಸ್ಟಿಕ ಬಾಟಲಗಳು ಅ.ಕಿ 1334/- ರೂಪಾಯಿಗಳು ಇದ್ದು, ನಂತರ ಸದರಿ ಆರೋಪಿತನಿಗೆ ಸದರಿ ಸರಾಯಿ ಮಾರಾಟ ಮಾಡಲು ಸರಕಾರದ ವತಿಯಿಂದ ಲೈಸನ್ಸ್ ಇದೆಯಾ? ಎಂದು ವಿಚಾರಿಸಲು ಆತನು ನನ್ನ ಹತ್ತಿರ ಯಾವುದೆ ಲೈಸನ್ಸ  ಇರುವುದಿಲ್ಲಾ ನನ್ನ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದೆನೆ ಅಂತಾ ತಿಳಿಸಿರುತ್ತಾನೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 53/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 09-08-2021 ರಂದು ಮರಖಲ್ ಗ್ರಾಮದ ಬಸವ ಮಂಟಪದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಶಿವರಾಜ ಪಾಟೀಲ್ ಪಿಎಸ್ಐ (ಕಾ&ಸೂ) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮರಖಲ್ ಗ್ರಾಮದ ಬಸವ ಮಂಟಪದ ಹತ್ತಿರ ಹೋಗಿ ನೋಡಲು ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಿವಕುಮಾರ ತಂದೆ ಘಾಳೆಪ್ಪಾ ಪೋತೆ ವಯ: 29 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಮರಖಲ ಗ್ರಾಮ ಇತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕೆ ಸಂಖ್ಯೆವುಳ್ಳ ಚೀಟಿ ಬರೆದುಕೊಡುತ್ತ 1/- ರೂಪಾಯಿಗೆ 80/- ರೂ. ಹಾಗೂ 10/- ರೂಪಾಯಿಗೆ 800/- ರೂ ಕೊಡುತ್ತೆನೆ ಅಂತಾ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆತನಿಗೆ ಹಿಡಿದುಕೊಳ್ಳುವಷ್ಟರಲ್ಲಿ ಮಟಕಾ ಚೀಟಿಗೆ ಹಣ ಹಚ್ಚುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಶಿವಕುಮಾರನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1480/- ರೂ., 2) ಅಂಕೆ ಸಂಖ್ಯೆ ಬರೆದ 2 ಮಟಕಾ ಚೀಟಿಗಳು & 3) ಒಂದು ಪೆನ್ನು ಸಿಕ್ಕಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.