Police Bhavan Kalaburagi

Police Bhavan Kalaburagi

Friday, April 2, 2021

BIDAR DISTRICT DAILY CRIME UPDATE 02-04-2021

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-04-2021 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2021 ಕಲಂ 379 ಐಪಿಸಿ :-

ದಿನಾಂಕ 01/04/2021  ರಂದು 2015  ಗಂಟೆಗೆ ಫಿರ್ಯಾದಿ ಶ್ರೀ.  ಶರಣಬಸಪ್ಪ ತಂದೆ ರೇವಣಸಿದ್ದಯ್ಯ ಸ್ವಾಮಿ ವಯ:33 ವರ್ಷ ಜಾತಿ:ಲಿಂಗಾಯತ ಉ:ಅಗ್ನಿ ಶಾಮಕ ದಳದಲ್ಲಿ ಫೈರಮ್ಯಾನ ಸಾ/ಹಳೆ ನೌಬಾದ  ಬೀದರ  ರವರು ಠಾಣೆಗೆ ಹಾಜರಾಗಿ  ಲಿಖಿತ ದೂರು ನೀಡಿದರ ಸಾರಾಂಶವೇನಂದರೆ ಇವರ ಹತ್ತಿರವಿರುವ ಬಜಾಜ ಪಲ್ಸಾರ  ಮೋಟರ ಸೈಕಲ  ನಂ ಕೆಎ38ಯು7987   ನೇದನ್ನು    ದಿನಾಂಕ 28/02/2021 ರಂದು ರಾತ್ರಿ 10 ಪಿ.ಎಮ್.  ಗಂಟೆಗೆ    ನೌಬಾದ ಮಲ್ಲಿಕಾಜರ್ುನ ಮಂದಿರದ ಹತ್ತೀರ   ಇರುವ ತಮ್ಮ  ಮನೆಯ ಮುಂದೆ    ನಿಲ್ಲಿಸಿ  ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 01/03/2021  ರಂದು 0600 ಎ.ಎಮ್. ಗಂಟೆಗೆ  ಎದ್ದು, ಮನೆಯಿಂದ ಹೋರಗೆ ಬಂದು ನೋಡಿದಾಗ    ಮೊಟರ ಸೈಕಲ   ಇಟ್ಟಿದ್ದ ಜಾಗದಲ್ಲಿ ಇದ್ದಿರುವದಿಲ್ಲ.   ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ ಸಿಗದಿದ್ದಾಗ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.  ಕಳ್ಳತನವಾದ ಮೋಟಾರ್ ಸೈಕಲ್ ವಿವರ ಹೀಗಿರುತ್ತದೆ:  ಹೀರೊ ಸ್ಪ್ಲೆಂಡರ ಪ್ಲಸ್   ಮೋಟರ ಸೈಕಲ  ನಂ ಕೆಎ38ಯು7987 ಚಾ.ನಂ. ಎಮ್.ಡಿ.211ಸಿವೈ1ಎಚ್.ಡಬ್ಲ್ಯೂಎಫ್06130 ಮತ್ತು   ಇಂ. ನಂ. ಡಿಎಚ್ವೈಡಬ್ಲ್ಯೂಎಚ್ಎಫ್54473 ಮಾಡಲ್: 2017,   ಅಂದಾಜು ಕಿಮ್ಮತ್ತು ರೂ- 30,000/-ರೂ ಆಗಿರುತ್ತದೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 10/2021 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ 01-04-2021 ರಂದು  ಮನ್ನಳ್ಳಿ ಗ್ರಾಮದ ಲೇದರ ಕಾಖರ್ಾನೆಯ ಹತ್ತಿರ ಭಂಗೂರ ರಸ್ತೆಯ ಬೇವಿನ ಮರದ ಕೆಳಗೆ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟಕಾ ಎಂಬ ನಸಿಬಿನ  ಚೀಟಿ ನಡೆಸುತಿದ್ದಾನೆ 1 ರೂಪಾಯಿಗೆ 100 ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ  ನೋಡಿದಾಗ  ಒಬ್ಬ ವ್ಯಕ್ತಿ 1 ರೂ:ಗೆ 100/- ಕೊಡುವುದಾಗಿ ಕೂಗುತ್ತಾ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗ ಖಚಿತ ಪಡಿಸಿಕೊಂಡು 1745 ಗಣಟೆಗೆ ದಾಳಿ ನಡೆಯಿಸಿ ಅವನನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಜಗನ್ನಾಥ ತಂದೆ ಲಕ್ಷ್ಮಣ ವಯ 25 ವರ್ಷ ಜಾತಿ ಕ್ರಿಶ್ಚೀಯನ ಉ ಆಟೋ ಚಾಲಕ ಕೆಲಸ ಸಾ ಭಂಗೂರ ಬೀದರ ಅಂತಾ ತಿಳಿಸಿದ್ದು ಅವನ ಬಳಿ ಇದ್ದ ಒಟ್ಟು ನಗದು ಹಣ ರೂ:  490/-ಎರಡು ಮಟಕಾ ಚಿಟಿಗಳು ಒಂದು ಬಾಲಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು  ಅರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 16/2021 ಕಲಂ 302, 149 ಐಪಿಸಿ :-

ದಿನಾಂಕ: 01//04/2021 ರಂದು 1400 ಗಂಟೆಗೆ  ಫಿರ್ಯಾದಿ ಶ್ರೀ ಸಾಧುರಾಮ ತಂದೆ ನರಸಿಂಗರಾವ ಕೈಪಾಳೆ ವಯ: 50 ವರ್ಷ ಜಾ; ಎಸ.ಸಿ ಮಾದಿಗ ಉ; ಕೂಲಿ ಕೆಲಸ ಸಾ: ಸಾಯಗಾಂವ ಇವರು ಲಿಖತ ದೂರು ನೀಡಿದರ  ಸಾರಾಂಶವೆನೆಂದ್ದರೆ, ಫೀರ್ಯಾದಿಗೆ ನಾಲ್ಕು ಜನ ಮಕ್ಕಳು ಇರುತ್ತಾರೆ. 1) ಸಂದೀಪ 2) ನಾಮದೇವ 3) ಕೃಷ್ಣ ಹಾಗೂ ಮನೀಷಾ (ಮಗಳು) ಇರುತ್ತಾರೆ. ಇವರಲ್ಲಿ ಸಂದೀಪ ಮತ್ತು ನಾಮದೇವ ಹಾಗೂ ನನ್ನ ಮಗಳಾದ ಮನೀಷಾ ಇವರ ಮದುವೆ ಮಾಡಿದ್ದು ಇರುತ್ತದೆ. ಮೂರು ಜನ ಗಂಡು ಮಕ್ಕಳು ಮತ್ತು ಮಗಳು ಬಾಂಬೆಯಲ್ಲಿ ಇರುತ್ತಾರೆ. ಮಗಳಾದ ಮನೀಷಾ ಗಂಡ ಸಂತೋಷ ಸೂರ್ಯವಂಶಿ 30 ವರ್ಷ ಜಾ; .ಜಾ ಉ: ಮನೆ ಕೆಲಸ ಸಾ; ಜಾಮಖಾಂಡಿ ಸದ್ಯ ಸಾಯಗಾಂವ ಇವಳ ಮದುವೆ ಈಗ 5 ವರ್ಷದ ಹಿಂದೆ ಆಗಿರುತ್ತದೆ. ಅವಳಿಗೆ ಸಾದಿಯಾ ಅಂತ 04 ವರ್ಷದ ಮಗಳು ಇರುತ್ತಾಳೆ.   ಮಗಳು ಮತ್ತು ಅಳಿಯ ಈ ವರ್ಷ ಏಳಮಾಸ್ಯೆ ಹಬ್ಬಕ್ಕೆ ಊರಿಗೆ ಬಂದಿರುತ್ತಾರೆ. ಅದನಂತರ   ಬಾಂಬೆಯಲ್ಲಿ ಲಾಕಡೌನ  ಇರುವುದರಿಂದ ಮಗಳು ಏಳಮಾಸೆಯಿಂದ   ಸಾಯಗಾಂವದಲ್ಲಿ ಇರುತ್ತಾರೆ.    ದಿನಾಂಕ; 31/03/2021 ರಂದು ನನ್ನ ಹಾಗೂ ನನ್ನ ಅಣ್ಣ ಅರ್ಜುನ ತಂದೆ ನರಸಿಂಗ 1100 ಗಂಟೆಗೆ ಗ್ರಾಮದ ಹನುಮಾನ ಮಂದಿರ ಹತ್ತಿರ ಮನೆಯ ಜಾಗೆಯ ವಿಷಯವಾಗಿ   ಜಗಳ ತೆಗೆದಾಗ ನನ್ನ ಮಗಳು ಬಂದು ಬಿಡಿಸಿಕೊಂಡಿರುತ್ತಾಳೆ. ಆಗ ಅರ್ಜುನ ಇವನು ನಿನಗೆ ಮತ್ತು ನಿಮ್ಮ ಮಗಳಿಗೆ ಖತಮ ಮಾಡುತ್ತೇನೆ. ಅಂತ ಹೇಳುರುತ್ತಾನೆ. ನಂತರ ರಾತ್ರಿ 900 ಗಂಟೆಯ ಸುಮಾರಿಗೆ 1) ರಾಮ ತಂದೆ ಚಂದರ 2)  ಖಂಡು ತಂದೆ ರಾಮ ಹಾಗೂ 3) ಲುಬಜಾಬಾಯಿ ನಮ್ಮ ಮನೆಯ ಮುಂದೆ ನಿಂತು ಅವಾಚ್ಯವಾಗಿ ಬೈದು ನೀಮಗೆ ಸೊಕ್ಕು ಜಾಸ್ತಿಯಾಗಿದೆ ಇಳಿಸುತ್ತೇವೆ ನೀವು ನಾಟಕ ಮಾಡಲತ್ತಿರಿ ಅಂತ ಬೈದು ಹೋಗಿರುತ್ತಾರೆ. ಹೀಗೆ ನನ್ನ ಅಣ್ಣ ಅರ್ಜುನ ನಮ್ಮ ಚುಲಾತ ರಾಮ ಅವನ ಮಗ ಖಂಡು, ಅವನ ಹೆಂಡತಿ ಲುಬಜಾಬಾಯಿ ಇವರು ನನ್ನ ಮಗಳು ಹೊರಗಡೆ ಬಂದಾಗ ನಸುಕಿನಲ್ಲಿ ಇವಳಿಗೆ ಕರೆದುಕೊಂಡು ಬಂದು ಕಲ್ಲಿನಿಂದ ಹೊಡೆದು ಕಲ್ಲನ್ನು ತಲೆಯಲ್ಲಿ ಮುಖದ ಮೇಲೆ ಹಾಕಿ ಕೊಲೆ ಮಾಡಿರಬುದೆಂದು ಸಂಶಯ ಇರುತ್ತದೆ. ಅಲ್ಲದೇ ಮೊಮ್ಮಗಳಿಗೆ ವಿಚಾರಿಸಿದಾಗ ನನ್ನ ತಂದೆ ಬಂದು ಹೊಡೆದಿರುತ್ತಾರೆ. ಅಂತ ಹೇಳುತ್ತಿದ್ದಾಳೆ ಹೀಗಾಗಿ ನನ್ನ ಅಳಿಯನ ಸಂತೋಷ ಮೇಲೆ ಸಂಶಯ ಇರುತ್ತದೆ. ಸಂತೋಷ ಹಾಗು ಅವನ ತಂದೆಯಾದ ಧೋಂಡಿಬಾ ಸೂರ್ಯವಂಶಿ, ತಾಯಿ ಲೋಚನಾ ಹಾಗೂ ಸಂತೋಷನ ತಮ್ಮ ಸಂದೀಪ ಇವರು ನನ್ನ ಮಗಳಿಗೆ ಕರೆತಂದು ಸಾಯಗಾಂವ ಹೊರವಲಲಯದ ಪಂಚಯ್ಯ ತಂದೆ ವಿಸ್ವನಾಥಯ್ಯ ರವರ ಹೊಲದಲ್ಲಿನ ಬಾವಿಯ ಹತ್ತಿರ ಬಿಳಿ ಜೋಳದ ಹೊಲದಲ್ಲಿ ನನ್ನ ಮಗಳಿಗೆ ಕರೆದುಕೊಂಡು ಬಂದು ಅವರ ಮುಖದ ಮೇಲೆ ತಲೆಯಲ್ಲಿ ಕಲ್ಲು ಹಾಕಿ ಕೊಲೆ ಮಾಡಿರಬಹುದೆಂದು ಸಂಶಯ ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2021 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ:01/04/2021ರಂದು ಪಿಎಸ್ಐ ರವರು ಬಸವ ಕಲ್ಯಾಣ ನಗರದಲ್ಲಿ ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುವಾಗ ನಗರದ ಸದಾನಂದ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ 1 ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ :18:30 ಗಂಟೆಗೆ   ದಾಳಿಮಾಡಿ  ಮನೋಹರ ತಂದೆ ಲಿಂಬಾಜಿ ಗಾಯಕವಾಡ ವಯಸ್ಸು:61 ವರ್ಷ ಜಾತಿ: ಎಸ್.ಸಿ  ದಲಿತ :ಕೂಲಿಕೆಲಸ ಸಾ:ಸಸ್ತಾಪೂರ ತಾ: ಬಸವಕಲ್ಯಾಣ ಇತನನ್ನು ಹೀಡಿದು ಇವ ಹತ್ತಿರವಿದ್ದ ನಗದು ಹಣ :1,050/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೇನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.