Police Bhavan Kalaburagi

Police Bhavan Kalaburagi

Wednesday, January 9, 2019

BIDAR DISTRICT DAILY CRIME UPDATE 09-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-01-2019

ಬೀದರ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2019, ಕಲಂ. 174(ಸಿ) ಸಿ.ಆರ್.ಪಿ.ಸಿ :-
ಫಿರ್ಯಾದಿ ನಜೀರ ತಂದೆ ಎಂ.ಡಿ ಹುಸೇನ್ ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಬೀದರ ರರು ಸುಮಾರು 5 ವರ್ಷಗಳಿಂದ ಬೀದರ ಕೋಟೆಯಲ್ಲಿದ್ದ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಅಂತ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 08-01-2019 ರಂದು 1200 ಗಂಟೆ ಸುಮಾರಿಗೆ ಫಿರ್ಯಾದಿಯು ಕೋಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಕಛೇರಿಯಲ್ಲಿ ಅಟೆಂಡೆಂಟ್ ಅಂತ ಕೆಲಸ ಮಾಡುವ ಸೈಮನ ತಂದೆ ಪುಂಡಲಿಕರಾವ ವಯ: 45 ವರ್ಷ, ಸಾ: ಶಹಾ ಗಂಜ್ ಬೀದರ ಇವರು ಕಛೇರಿಗೆ ಬಂದು ತಿಳಿಸಿದೇನೆಂದರೆ ನಾನು ಕೋಟೆಯಲ್ಲಿ ಪೇಟ್ರೋಲಿಂಗ ಮಾಡುತ್ತಾ ಹುಣಸೆ ಮರದ ಹತ್ತಿರ ಇದ್ದ ಬಾವಿಯಲ್ಲಿ ನೋಡಿದಾಗ ಯಾರದೋ ಶವ ನೀರಿನ ಮೇಲೆ ತೆಲಾಡುತ್ತಿದ್ದ ಬಗ್ಗೆ ಕಂಡು ಬರುತ್ತಿದ್ದು ನಾನು ನೋಡಿ ನಿಮಗೆ ತಿಳಿಸೋಣಾ ಅಂತ ಬಂದಿರುತ್ತೇನೆ ಅಂತ ತಿಳಿಸಿದಾಗ ಇಬ್ಬರು ಕೂಡಿ ಬಾವಿ ಹತ್ತಿರ ಹೋಗಿ ಸದರಿ ಬಾವಿಯಲ್ಲಿ ನೋಡಲಾಗಿ ಒಬ್ಬ ವ್ಯಕ್ತಿಯ ಶವ ನೀರಿನಲ್ಲಿ ತೇಲಾಡುತ್ತಿದ್ದುದ್ದು ಕಂಡು ಬಂದಿದ್ದರಿಂದ ಸದರಿ ವಿಷಯ ಬೀದರ ನಗರ ಠಾಣೆಗೆ ತಿಳಿಸಿದಾಗ ಪೊಲೀಸರು ಬಂದು ನೋಡಿ ಸದರಿ ಶವ ಜನರ ಸಹಾಯದಿಂದ ಮೇಲ್ಗಡೆ ತೆಗೆಯಿಸಿದಾಗ ನೋಡಲಾಗಿ ಸದರಿ ಶವ ಸಂಪೂರ್ಣವಾಗಿ ಕೊಳೆತು ಹೋಗಿ ಕ್ರಿಮಿಕೀಟಗಳು ಮೌಂಸ ಖಂಡಗಳು ತಿಂದು ಹಾಕಿದ್ದು, ಮೈ ಮೇಲೆ ಒಂದು ಕೆಂಪು, ನೀಲಿ, ಬಿಳಿ ಬಣ್ಣ ಉಳ್ಳ ಚೌಕಡಿ ಶರ್ಟ ಇದ್ದು, ಸದರಿ ಅಪರಿಚಿತ ವ್ಯಕ್ತಿಯ ಅಂದಾಜು ವಯಸ್ಸು 25 ರಿಂದ 30 ವರ್ಷ ದವನು ಇರುತ್ತಾನೆ, ಸದರಿಯವನು ಈಗ ಸುಮಾರು ಒಂದು ತಿಂಗಳ ಹಿಂದೆ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಹಗ್ಗದ ಸಹಾಯದಿಂದ ಯಾವುದೊ ಉದ್ದೇಶಕ್ಕೆ  ಬಾವಿಯಲ್ಲಿ ಇಳಿದಾಗ ಕಾಲು ಜಾರಿ ಬಾವಿಯಲ್ಲಿ ಬಿದ್ದು ನೀರು ಕುಡಿದು ಮೃತಪಟ್ಟಂತೆ ಕಂಡು ಬರುತ್ತಿದೆ, ಸದರಿಯವನ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀaAZÉÆý ¥Éưøï oÁuÉ C¥ÀgÁzsÀ ¸ÀA. 06/2018, PÀ®A. 279, 337, 338 L¦¹ :-
ದಿನಾಂಕ 08-01-2019 ರಂದು ಫಿರ್ಯಾದಿ ಸುನೀಲ ತಂದೆ ಬಾಬುರಾಬ ಬೀರಾದರ ವಯ: 24 ವರ್ಷ, ಜಾತಿ: ಮರಾಠಾ, ಸಾ: ಮದಕಟ್ಟಿ ರವರು ತನ್ನ ಗಳೆಯ ಅಭೀಷೆಕ ತಂದೆ ಚಂದ್ರಕಾಂತ ಮಿರಾಜದಾರ ಇಬ್ಬರೂ ಕೂಡಿ ಅಭೀಷೆಕ ಇತನ ಮೋಟರ ಸೈಕಲ್ (ಅದರ ನಂಬರ ಇರುವುದಿಲ್ಲ) ಮೇಲೆ ಫಿರ್ಯಾದಿಯ ಮಾವ ತಾನಾಜಿ ರವರ ರಾಶಿ ಮಾಡುವ ಮಷಿನ್ ರವಿ ಕಣಜೆ ರವರ ಹೊಲದಲ್ಲಿ ನಡೆಯುತ್ತಿದ್ದು ಅದಕ್ಕೆ ಡಿಸೇಲ್ ಮುಗಿದಿದ್ದು ಮದಕಟ್ಟಿಯಿಂದ ಡಿಸೇಲ್ ತೆಗೆದುಕೊಂಡು ರವಿ ಕಣಜೆ ರವರ ಹೋಲಕ್ಕೆ ಹೋಗಿ ರಾಶಿ ಮಾಡುವ ಮಷಿನನಲ್ಲಿ ಡಿಸೇಲ್ ಹಾಕಿ ಮರಳಿ ಮದಕಟ್ಟಿ ಗ್ರಾಮಕ್ಕೆ ಬರುತ್ತಿರುವಾಗ ಬಾಜೋಳಗಾ ಕ್ರಾಸ್ ಹತ್ತಿರ ಬಸವಕಲ್ಯಾಣ - ಭಾಲ್ಕಿ ರೋಡಿನ ಮೇಲೆ ತುಳಜಾ ಭವಾನಿ ಧಾಬಾದ ಎದುರುಗಡೆ ರಸ್ತೆ ಮೇಲೆ ಬಂದಾಗ ಬಸವಕಲ್ಯಾಣ ಕಡೆಯಿಂದ ಟವೇರಾ ಕಾರ ನಂ. ಎಪಿ-09/ಬಿ.ಕೆ-9161 ನೇದ್ದರ ಚಾಲಕನಾದ ಆರೋಪಿಯು ತನ್ನ ಟವೇರಾ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಬರುತ್ತಿದ್ದ ಮೋಟರ ಸೈಕಲಗೆ ಒಮ್ಮೆಲೆ ಎದುರುಗಡೆಯಿಂದ ಡಿಕ್ಕಿ ಮಾಡಿ ತನ್ನ ಕಾರನ್ನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಗಾಲ ಮೋಳಕಾಲ ಮೇಲೆ ರಕ್ತಗಾಯ, ಎಡಗಾಲ ಮೋಳಕಾಲ ಕೆಳಗೆ ಕಾಲಿನ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಅಭೀಷಕ ಇತನಿಗೆ ಬಲಗಡೆ ಹಣೆಯಲ್ಲಿ ಭಾರಿ ರಕ್ತಗಾಯವಾಗಿರುತ್ತದೆ, ಈ ಘಟನೆ ನೋಡಿ ಧಾಬಾದ ಹತ್ತಿರ ಇದ್ದ ತಮ್ಮೂರ  ರಾಜಕುಮಾರ ಹಾಗೂ ಇತರರು  ಬಂದು ಗಾಯಗೊಂಡ ಇಬ್ಬರಿಗೂ ಒಂದು ಖಾಸಗಿ ವಾಹಾನದಲ್ಲಿ ಹಾಕಿ  ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 01/2019, ಕಲಂ. 78(3) ಕೆ.ಪಿ ಕಾಯ್ದೆ :-
¢£ÁAPÀ 08-01-2019 gÀAzÀÄ ZÁAUÀ¯ÉÃgÁ UÁæªÀÄzÀ §¸ï ¤¯ÁÝt ºÀwÛgÀ, ¸ÁªÀðd¤PÀ ¸ÀܼÀzÀ°è 1) £ÀgÀ¸À¥Áà fÃvÀt, 2) ±ÁªÀÄgÁªÀ ¥ÀÆeÁj, ¸Á: ZÁAUÀ¯ÉÃgÁ gÀªÀgÀÄ d£ÀjAzÀ ºÀt ¥ÀqÉzÀÄPÉÆAqÀÄ ªÀÄmÁÌ JA§ dÆeÁl aÃn §gÉzÀÄPÉƼÀÄîwÛzÁÝgÉ CAvÁ ºÀįÉÃ¥Áà ¦J¸ïL ¨ÉêÀļÀSÉÃqÁ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ZÁAUÀ¯ÉÃgÁ §¸ï ¤¯ÁÝtzÀ ¸À«ÄÃ¥À ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) £ÀgÀ¸À¥Áà vÀAzÉ ZÀAzÀæ¥Áà fÃvÀt ªÀAiÀÄ: 60 ªÀµÀð, eÁw: ªÀÄÄ£ÀÄßgÀ gÉrØ, ¸Á: ZÁAUÀ¯ÉÃgÁ, 2) ±ÁªÀÄgÁªÀ vÀAzÉ ªÀÄ®¥Áà ¥ÀÆeÁj ªÀAiÀÄ: 60 ªÀµÀð, eÁw: PÀÄgÀħ, ¸Á:  ZÁAUÀ¯ÉÃgÁ EªÀj§âgÀÄ §¸À ¤¯ÁÝtzÀ ªÀÄÄAzÉ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ 1 gÀÆ. UÉ 90/-gÀÆ.UÀ¼ÀÄ PÉÆqÀÄvÉÛªÉ CAvÁ aÃgÁr ºÉüÀÄvÁÛ d£ÀjAzÀ ºÀt ¥ÀqÉzÀÄ ªÀÄmÁÌ aÃn §gÉzÀÄPÉƼÀÄîwÛzÀÝgÀÄ, EªÀgÀ ¸ÀÄvÀÛ-ªÀÄÄvÀÛ 3-4 d£ÀgÀÄ ¤AwzÀÄÝ CzÀ£ÀÄß RavÀ ¥ÀrzÀÄPÉÆAqÀÄ ¦J¸ïL gÀªÀgÀÄ ¹§âA¢AiÀĪÀgÀ eÉÆvÉAiÀÄ°è ¸ÀzÀj DgÉÆævÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ E§âjUÀÆ »rzÁUÀ CªÀgÀ ¸ÀÄvÀÛ ªÀÄÄvÀÛ EzÀÝ d£ÀgÀÄ Nr ºÉÆÃVgÀÄvÁÛgÉ, £ÀAvÀgÀ ¸ÀzÀj DgÉÆævÀjAzÀ 2 ¨Á® ¥É£ÀÄß, 2 ªÀÄmÁÌ aÃn ªÀÄvÀÄÛ 810/- gÀÆ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 03/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 08-01-2019 ರಂದು ಮುಚಳಂಬ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ 1 ರೂಪಾಯಿಗೆ 80/- ರೂಪಾಯಿ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಅರುಣಕುಮಾರ ಪಿಎಸ್ಐ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಚಳಂಬ ಗ್ರಾಮದ ಬಸವೇಶ್ವರ ಚೌಕದಿಂದ ಸ್ವಲ್ಪ ದೂರದದಿಂದ ನೋಡಲಾಗಿ ಬಸವೇಶ್ವರ ಚೌಕ ಹತ್ತಿರ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಜಿತೇಂದ್ರ ತಂದೆ ಶಿವರಾಜ ರಾಧು ವಯ: 28 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮುಚಳಂಬ ಇತನು ಜೋರಾಗಿ ಕುಗುತ್ತಾ 1 ರೂಪಾಯಿಗೆ 80/- ರೂಪಾಯಿ ಅಂತಾ ಚೀರುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಆತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮಾಡಿದಾಗ ಅಲ್ಲೆ ಇದ್ದ ಜನರು ಓಡಿ ಹೋಗಿರುತ್ತಾರೆ, ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಆರೋಪಿಗೆ ಹಿಡಿದು ತನ ಅಂಗ ಝಡ್ತಿ ಮಾಡಲು ಆತನ ಹತ್ತಿರ 2200/- ರೂಪಾಯಿ, ಒಂದು ಬಾಲ ಪೇನ್ ಹಾಗೂ ಮಟಕಾ ಬರೆದ ಚೀಟಿ ಸಿಕ್ಕಿದ್ದು, ನಂತರ ಆತನಿಗೆ ವಿಚಾರಿಸಲು ನಾನು ಜನರಿಂದ ಹಣ ಪಡೆದು ಮಟಕ ಚೀಟಿ ಬರೆದುಕೊಳ್ಳುತ್ತೇನೆ ಹಣವನ್ನು ನಾನು ಮಹಾರಾಷ್ಟ್ರದ ತಾಂಬೊಳಾ ಗ್ರಾಮದ ಶಿವಾಜಿ ತಂದೆ ರಾಮ ವಾಗಮಾರೆ ವಯ: 30 ವರ್ಷ ಇತನು ಹಣ ಕೊಟ್ಟಾಗ ಇತನು ನನಗೆ 100 ರೂಪಾಯಿಗೆ 20 ರೂಪಾಯಿ ಕಮೀಷನ ಕೊಡುತ್ತಾನೆ ಅಂತಾ ತಿಳಿಸಿದನು, ನಂತರ ಸದರಿ ವಸ್ತುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 06/2019, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 08-01-2019 ರಂದು ಭಾಲ್ಕಿ ಹುಮನಾಬಾದ ರೋಡಿನ ಬದಿಯಲ್ಲಿರುವ ನ್ಯೂ ಜಗದಂಬಬಾ ದಾಭಾ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬನು ಸಂಬಂಧ ಪಟ್ಟ ಇಲಾಖೆಯಿಂದ ಯಾವದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವ ಕುರಿತು ತನ್ನ ವಶದಲ್ಲಿಟ್ಟುಕೊಂಡು ಕುಳಿತ್ತಿದ್ದಾನೆಂದು ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನ್ಯೂ ಜಗದಂಬಾ ದಾಭಾದ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ದಾಭಾದ ಪಕ್ಕದಲ್ಲಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿ ಪ್ರವೀಣ ತಂದೆ ರಾಜಕುಮಾರ ಶೃಂಗಾರೆ ವಯ: 22 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ದೇವನಾಳ, ತಾ: ಬಸವಕಲ್ಯಾಣ ಇತನು ತನ್ನ ವಶದಲ್ಲಿ ಎರಡು ಕಾಟನಗಳು ಇಟ್ಟುಕೊಂಡು ಕುಳಿತ್ತಿದ್ದಾಗ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಅವನ ವಶದಲ್ಲಿ ದೋರೆತ ಕಾಟನಗಳನ್ನು ಪರಿಶೀಲಿಸಿ ನೋಡಲು ಅವುಗಳಲ್ಲಿ 1) 650 ಎಂ.ಎಲ್ ವುಳ್ಳ 15 ಕಿಂಗ್ ಫಿಶರ್ ಬಿಯರ್, 2) 275 ಎಂ.ಎಲ್ ವುಳ್ಳ 4 ಬ್ರಿಝರ್  ಬಾಟಲಿಗಳು, 3) 180 ಎಂ.ಎಲ್ ವುಳ್ಳ 5 ಆಕ್ಸಿಜನ್ ಆರೆಂಜ್ ವೊಡ್ಕಾ ಬಾಟಲಿಗಳು, 4) 180 ಎಂ.ಎಲ್ ವುಳ್ಳ 3 ಬ್ಲೆಂಡ್ಸ್ ಪ್ರೈಡ್ ಬಾಟಲಿಗಳು, 5) 180 ಎಂ.ಎಲ್ ವುಳ್ಳ 4 ಮ್ಯಾಕಡಾಲ್ ವಿಸ್ಕಿ ಬಾಟಲಿಗಳು, 6) 180 ಎಂ.ಎಲ್ ವುಳ್ಳ 3 ಇಂಪೆರಿಯಲ್ ಬ್ಲು ವಿಸ್ಕಿ ಬಾಟಲಿಗಳು, 7) 180 ಎಂ.ಎಲ್ ವುಳ್ಳ 2 ರಾಯಲ್ ಸ್ಟ್ಯಾಗ್ ವಿಸ್ಕಿ ಬಾಟಲಿಗಳು ಹಾಗೂ 8) 180 ಎಂ.ಎಲ್ ವುಳ್ಳ 4 ಓಲ್ಡ್ ಟಾವನ್ ವಿಸ್ಕಿ ಪೇಪರ ಪಾಕೇಟಗಳು ಇದ್ದವು, ಹೀಗೆ ಒಟ್ಟು ಎಲ್ಲಾ ಮಧ್ಯದ ಬಾಟಲಿಗಳ ಅ.ಕಿ 6,043/- ರೂ. ದಷ್ಟು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 08-01-2019 ರಂದು ಸೊನ್ನ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಹೊಸ ಬಡಾವಣೆಗೆ ಹೋಗುವ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗುತ್ತಿದ್ದನು, ಆಗ ನಾವು ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಾತಲಿಂಗಪ್ಪ ತಂದೆ ಭೀಮಶ್ಯಾ ದೇವರನಾವದಗಿ ಸಾ||ಸೊನ್ನ ತಾ|| ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ವಿಚಾರಿಸಲಾಗಿ ತನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು SWARAJ ಕಂಪನಿಯದಿದ್ದು, ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ಎಲ್ಲಿಯೂ ನಂಬರ ಬರೆದಿರುವುದಿಲ್ಲ. ನಂತರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ Engine NO 47.5013/SZDo4456 CHASSIS NO WZCD61930952916 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅ.ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ  ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-01-2019 ರಂದು ಮಲ್ಲಾಬಾದ ಗ್ರಾಮದ ಕನಕದಾಸ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿ ಸ್ಥಳಕ್ಕೆ ಹೋಗಿ ಮಲ್ಲಾಬಾದ ಗ್ರಾಮದ ಕನಕದಾಸ ಚೌಕದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಕನಕದಾಸ ಚೌಕ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿದಾಗ ಮಟಕಾ ಬರೆಸಲು ಬಂದಂತಹ ಜನರು ಓಡಿ ಹೊದರು. ಮಟಕಾ ಬರೆದುಕೊಳ್ಳುತ್ತಿದ್ದ ವ್ಯೆಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅಡಿವೆಪ್ಪ ತಂದೆ ಶಿವಶರಣಪ್ಪ ಪಾಟೀಲ ಸಾ|| ಅತನೂರ ಹಾ|| || ಮಲ್ಲಾಬಾದ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3670/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು  ಸದರಿ ಆರೋಪಿತನೊಂದಿಗೆ ಮರಳಿ ಅಫಜಲಪೂರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ರೇವೂರ ಠಾಣೆ : ಶ್ರೀ ಮಲ್ಲಪ್ಪ ತಂದೆ ರಾಮಚಂದ್ರ ಕಡಗಂಚಿ ಸಾ:ಭೈರಾಮಡಗಿ ತಾ:ಅಫಜಲಪೂರ ರವರ ಮಗಳಾದ ಅಂಜನಾ ಇವಳು 10 ತರಗಿತಿಯವರೆಗೆ ನಮ್ಮ ಗ್ರಾಮದಲ್ಲಿ ವಿದ್ಯೆಭ್ಯಾಸ ಮುಗಿಸಿದ್ದು ದಿನಾಂಕ:20-12-2018 ರಂದು ನಾನು ಮತ್ತು ನನ್ನ ಹೆಂಡತಿ ಪ್ರತಿ ದಿನದಂತೆ ಬೆಳಿಗ್ಗೆ 10,ಎಮ್,ಕ್ಕೆ ನಮ್ಮ ಹೋಲಕ್ಕೆ ಹೋಗಿರುತ್ತೇವೆ ನಾವ ಹೋಲಕ್ಕೆ ಹೋಗುವಾಗ ನನ್ನ ಮಗಳು ಅಂಜನಾ ಮನೆಯಲ್ಲಿಯೆ ಇದ್ದಳು ಮತ್ತು ಕೋಮಲ ಹಾಗೂ ಖ್ಯಾಮಲಿಂಗ ಇಬ್ಬರು ಶಾಲೆಗೆ ಹೋಗಿದ್ದರು ನಾವು ಹೋಲ್ಕಕೆ ಹೋಗಿ ನಮ್ಮ ಕೇಲಸ ಮುಗಿಸಿಕೊಂಡು ಮರಳಿ 6 ಪಿ,ಎಮ್.ಕ್ಕೆ ಮನೆಗೆ ಬಂದಿದ್ದು ಮನೆಗೆ ಬಂದಾಗ ನನ್ನ ಮಗಳು ಅಂಜನಾ ಮನೆಯಲ್ಲಿ ಇದ್ದಿರಲಿಲ್ಲ ಸ್ವಲ್ಪ ಹೋತ್ತು ಕಾದು ನೋಡಿದರು ಅವಳು ಬರಲಿಲ್ಲ ಆಗ ಗಾಬರಿಯಿಂದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕುಡಿ ಹುಡುಕಾಡಲು ಸುರುಮಾಡಿದೆವು ಮತ್ತು ಅಕ್ಕ ಪಕ್ಕದ ಮನೆಯವರಿಗೆ ವಿಚಾರಿಸಲು ಸುರುಮಾಡಿದಾಗ ನಮ್ಮ ಪಕ್ಕದ ಮನೆಯವರಾದ ಬಿರಣ್ಣ ತಂದೆ ನ್ಯಾಮಣ್ಣ ಜಮಾದಾರ ಇವರು ತಿಳಿಸಿದ್ದೆನಂದರೆ ನಾನು ಮಧ್ಯಾಹ್ನ 2 ಪಿ,ಎಮ್. ಸುಮಾರಿಗೆ ಬಿರಲಿಂಗೆಶ್ವರ ಗುಡು ಹತ್ತೀರ ಕುಳಿತಿದ್ದಾಗ ಮಲ್ಲಿಕಾರ್ಜುನ @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಈತನು ಟಂಟಂ ತಗೆದುಕೊಂಡು ಬಂದು ನಿಮ್ಮ ಮನೆ ಹತ್ತೀರ ನಿಂತು ನಿನ್ನ ಮಗಳಾದ ಅಂಜನಾ ಈವಳಿಗೆ ಹೆದರಿಸಿ ಟಂಟಂ ನಲ್ಲಿ ಕೂಡಿಸಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಕಲಬುರಗಿ ಯಲ್ಲಿರುವ ನನ್ನ ಮಗನಾದ ಶರಣು ಈತನಿಗೆ ನಮ್ಮ ಗ್ರಾಮಕ್ಕೆ ಕರೆಯಿಸಿ ಈ ಬಗ್ಗೆ  ವಿಷಯ ತಿಳಿಸಿ ನಾನು ಮತ್ತು ನನ್ನ ಹೆಂಡತಿ ನನ್ನ ಸಂಬಂಧಿಕರೊಂದಿಗೆ ಚರ್ಚಿಸಿ  ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತೀದ್ದು ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಅಂಜನಾ ಈವಳಿಗೆ ಹೆದರಿಸಿ ಅಪಹರಿಸಿಕೊಂಡು ಹೋದ ನಮ್ಮ ಗ್ರಾಮದ ಮಲ್ಲಿಕಾರ್ಜುನ  @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 06/01/2019 ರಂದು ರಾತ್ರಿ  ಶ್ರೀ ಶಿವಾನಂದ ಈತನು ತನ್ನ ಅಟೋರಿಕ್ಷಾ ನಂ ಕೆಎ-32 ಬಿ-6333 ನೇದ್ದರಲ್ಲಿ ತನ್ನ ಮಕ್ಕಳಾದ ಶಿವರಾಜ ಮತ್ತು ಬಸವರಾಜ ಹಾಗೂ ಅಳಿಯನಾದ ಸಂಜುಕುಮಾರ ಇವರಿಗೆ ಕೂಡಿಸಿಕೊಂಡು ಯಕ್ಕಂಚಿ ದಿಂದ ಸಿಂದಗಿ ಕಡೆಗೆ ಅಟೋ ಚಾಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಾಲಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿ ಅಟೋ ಪಲ್ಟಿಗೊಳಿಸಿ ಫೀರ್ಯಾದಿಯ ಮಗನಾದ ಬಸವರಾಜ ಈತನು ಎಡಗಾಲು ಮೊಳಕಾಲಿಗೆ, ಬಲಗೈ ರಟ್ಟೆಗೆ , ತರಚಿದಗಾಯ ಬಾಯಿಗೆ ಪೆಟ್ಟಾಗಿದ್ದು ತಲೆಗೆ ಭಾರಿಗಾಯಗೊಳಿಸಿ ಟ್ರ್ಯಾಕ್ಟರ ಸಮೇತ ಚಾಲಕ ಓಡಿಹೋಗಿದ್ದು ಬಸವರಾಜ ಈತನಿಗೆ ಉಪಚಾರ ಕುರಿತು ವಿಜಯಪೂರ ವಾಸುದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಹಣದ ಅಡಚಣೆ ಇದ್ದ ಪ್ರಯುಕ್ತ ಆತನ ತಂದೆ ಮತ್ತು ತಾಯಿ ಕೂಡಿ ಬಸವರಾಜ ಈತನಿಗೆ ನಿನ್ನೆ ವಿಜಯಪೂರದಿಂದ ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಬಸವರಾಜ ಈತನು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ 08/01/2019 ರಂದು ಬೆಳಿಗ್ಗೆ 10-30 ಎ.ಎಂ.ಕ್ಕೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.