Police Bhavan Kalaburagi

Police Bhavan Kalaburagi

Monday, July 19, 2021

BIDAR DISTRICT DAILY CRIME UPDATE 19-07-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-07-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 43/2021, ಕಲಂ. 379 ಐಪಿಸಿ :-

ಫಿರ್ಯಾದಿ ಚಂದ್ರಕಾಂತ ತಂದೆ ಮೊಗಲಪ್ಪಾ ಕೋಟೆ ಸಾ: ಇಡಗೇರಿ, ಬೀದರ ರವರು ತನ್ನ ಮನೆಯ ಮುಂದೆ ನಿಲ್ಲಿಸಿದ ತನ್ನ ಹೊಂಡಾ ಎಕ್ಟೀವಾ 3ಜಿ ವಾಹನ ಸಂ. ಕೆಎ-56/ಹೆಚ್-4713, .ಕಿ 25,000/- ರೂ. ಬೆಲೆ ಬಾಳುವುದನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 04-07-2021 ರಂದು 2200 ಗಂಟೆಯಿಂದ ದಿನಾಂಕ 05-07-2021 ರಂದು 0100 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 18-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 58/2021, ಕಲಂ. 279, 338 ಐಪಿಸಿ :-

ದಿನಾಂಕ 18-07-2021 ರಂದು ಚಂದ್ರಕಾಂತ ತಂದೆ ವಿಠ್ಠಲ ತ್ರಿಮುಖೆ, ವಯ: 34 ವರ್ಷ, ಜಾತಿ: ಢೋರ್, ಸಾ: ಇಲ್ಲಾಳ, ತಾ: ಬಸವಕಲ್ಯಾಣ ಈತನು ಫಿರ್ಯಾದಿ ಕಾಶೀನಾಥ ತಂದೆ ಸಾಯಬಣ್ಣಾ ಮೇತ್ರೆ, ವಯ: 62 ವರ್ಷ, ಜಾತಿ: ಎಸ್.ಟಿ (ಗೊಂಡ), ಸಾ: ಇಲ್ಲಾಳ, ತಾ: ಬಸವಕಲ್ಯಾಣ ಯ ತಮ್ಮನ ಮಗನಾಸ ಅಂಬಾದಾಸ ಇತನಿಗೆ ಚಿಟಗುಪ್ಪಾದಲ್ಲಿ ಕೆಲಸ ಇದೆ ಹೋಗಿ ಬರೋಣಾ ಅಂತಾ ಹೇಳಿದಕ್ಕೆ ಇಬ್ಬರು ಚಂದ್ರಕಾಂತ ಇತನ ಮೋಟರ ಸೈಕಲ್ ನಂ. ಕೆಎ-56/ಜೆ-9939 ನೇದರ ಮೇಲೆ ಹಿಂಭಾಗ ಕುಳಿತುಕೊಂಡು ಚಿಟಗುಪ್ಪಾಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಬರುವಾಗ ಆರೋಪಿ ಚಂದ್ರಕಾಂತ ಇತನು ತನ್ನ ಮೋಟರ ಸೈಕಲನ್ನು ವೇಗವಾಗಿ ಚಲಾಯಿಸಿ ರಾ.ಹೇ ನಂ. 65 ತಡೋಳಾ ಗ್ರಾಮ ದಾಟಿದ ನಂತರ  ತಾಜ್ ಧಾಬಾ ಸಮೀಪ ತಿರುವು ರಸ್ತೆಯಲ್ಲಿ ಮೋಟರ ಸೈಕಲನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ರೋಡಿನ ಪಕ್ಕದಲ್ಲಿ ಹಾಕಲಾದ ಎಮ್.ಬಿ.ಸಿ.ಬಿ ಸೈಡ್ ಬ್ಯಾರಿಯರ್ ಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಾಲು ಮೊಳಕಾಲಿನ ಕೆಳಭಾಗಕ್ಕೆ ಭಾರಿ ರಕ್ತಗಾಯವಾಗಿ ಕಾಲು ಕಟ್ ಆಗಿ ಬಿದ್ದಿರುತ್ತದೆ ಮತ್ತು ಚಂದ್ರಕಾಂತ  ತ್ರಿಮುಖೆ ಈತನ ಎಡಗಾಲು ಮೊಳಕಾಲು ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ, ನಂತರ ದಾರಿ ಹೋಕರು ಅಂಬುಲೆನ್ಸ ಕರೆಯಿಸಿ ಅದರಲ್ಲಿ ಇಬ್ಬರಿಗೂ ಹಾಕಿ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 62/2021, ಕಲಂ. 279, 337, 338 ಐಪಿಸಿ :-

ದಿನಾಂಕ 18-07-2021 ರಂದು ಫಿರ್ಯಾದಿ ಉಮೇಶ ತಂದೆ ಪುಂಡಲಿಕ ದಾಸ, ವಯ: 19 ವರ್ಷ, ಜಾತಿ: ಕಬ್ಬಲಿಗ, ಸಾ: ದುಬಲಗುಂಡಿ, ತಾ: ಹುಮನಾಬಾದ ರವರು ತನ್ನ ಜೊತೆ ಕೆಲಸ ಮಾಡುವ ತಮ್ಮೂರ ಬಸವರಾಜ ತಂದೆ ಲಕ್ಷಣ ನಾತೆ, ವಯ : 23 ವರ್ಷ ಇಬ್ಬರೂ ಹುಮನಾಬಾದನಿಂದ ತಮ್ಮೂರಿಗೆ ತನ್ನ ಮಾಲಿಕರ ಮೋಟರ ಸೈಕಲ ನಂ. ಎಮ್.ಹೆಚ್-24/ಎ.ಜೆ-9673 ನೇದರ ಮೇಲೆ ರಾಜೇಶ್ವರದಿಂದ ಹುಮನಾಬಾದಗೆ ಬಂದು ಜಲಸಂಗಿ ಮಾರ್ಗವಾಗಿ ತಮ್ಮೂರಿಗೆ ಹೋಗುವಾಗ ಬಸವರಾಜನು ಮೋಟರ ಸೈಕಲ ಚಲಾಯಿಸುತ್ತಿದ್ದು, ಫಿರ್ಯದಿ ಹಿಂದೆ ಕುಳಿತಿದ್ದು, ಮೋಟರ ಸೈಕಲ ಚಲಾಯಿಸುತ್ತಿದ್ದ ಆರೋಪಿ 1) ಬಸವರಾಜ ಇತನು ಮೋಟರ ಸೈಕಲನ್ನು ಅತಿ ವೇಗವಾಗಿ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಹುಮನಾಬಾದ-ಜಲಸಂಗಿ ರೋಡ ಜಲಸಂಗಿ ಗ್ರಾಮದ ಶೇಕಪರಿ ದರ್ಗಾ ಎದುರು ಹೋಗುವಾಗ ಅದೇ ವೇಳೆ ಎದುರಿನಿಂದ ಜಲಸಂಗಿ ಗ್ರಾಮದ ಕಡೆಯಿಂದ ಬಂದ ಮೊಟರ ಸೈಕಲ ಚಾಲಕನಾದ ಆರೋಪಿ 2) ಜನ್ಮಜಯ ತಂದೆ ಜನಾರ್ದನ ಕಂಟಿ ವಯ: 22 ವರ್ಷ, ಸಾ: ನೀಲಮನಳ್ಳಿ, ತಾ: ಭಾಲ್ಕಿ ಇತನು ಸಹ ತನ್ನ ಮೋಟರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಇಬ್ಬರೂ ನಡುರಸ್ತೆಯಲ್ಲಿ ಪರಸ್ಪರ ಮುಖಾಮುಖಿ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾರೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಬಸವರಾಜನಿಗೆ ತಲೆ ಹಿಂಭಾಗದಲ್ಲಿ, ಎಡಗಣ್ಣಿನ ಮೇಲೆ, ಎಡಪಾದದ ಮೇಲೆ ರಕ್ತಗಾಯ ಹಾಗು ಎಡಮೋಳಕಾಲಿಗೆ ತರಚಿದಗಾಯಗಳಾಗಿದ್ದು ಹಾಘೂ ಜನ್ಮಜಯ ಇತನ ಎಡಗಾಲ ತೊಡೆ ಮೂಳೆ ಮುರಿದು ಭಾರಿ ಗುಪ್ತಗಾಯ, ಎಡಗಣ್ಣಿನ ಮೇಲೆ, ತುಟಿಗೆ, ತಲೆಗೆ ರಕ್ತಗಾಯಗಳಾಗಿರುತ್ತವೆ, ನಂತರ ಅವರನ್ನು ಫಿರ್ಯಾದಿ ಹಾಗೂ ದಾರಿ ಹೋಕರ ಸಹಾಯದಿಂದ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 79/2021, ಕಲಂ. 279, 338 ಐಪಿಸಿ ಜೊತೆ 187 .ಎಮ್.ವಿ ಕಾಯ್ದೆ :-

ದಿನಾಂಕ 18-07-2021 ರಂದು ಫಿರ್ಯಾದಿ ಎಮ್.ಡಿ ಶಕೀಲ ತಂದೆ ಅಬ್ದುಲ್ ಸಮದ ಖುರೇಷಿ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ(ಬಿ) ರವರು ತನ್ನ ಅಂಗಡಿಯಿಂದ ಮನೆಗೆ ಹಳ್ಳಿಖೇಡ(ಬಿ) ಪಟ್ಟಣದ ಸರಕಾರಿ ಆಸ್ಪತ್ರೆಯ ಹತ್ತಿರದಿಂದ ನಡೆದುಕೊಂಡು ಹೋಗುವಾಗ ಸಮಯಕ್ಕೆ ಫಿರ್ಯಾದಿಯ ಮಗಳಾದ ಇಖ್ರಾ ಹಾಗೂ ತಂಗಿಯ ಮಗನಾದ ಮುಷ್ರಾಫ್ ಇಬ್ಬರು ಸರಕಾರಿ ಆಸ್ಪತ್ರೆಯ ಹತ್ತಿರ ರೋಡಿನಿಂದ ಬಜಾರ ಕಡೆU ನಡೆದುಕೊಂಡು ಹೋಗುತ್ತಿದ್ದು, ಆಗ ಫಿರ್ಯಾದಿಯು ಅವರನ್ನು ನೋಡಿ ಅವರಿಗೆ ಎಲ್ಲಿಗೆ ಹೋಗುತ್ತಿದ್ದಿರಿ ಅಂತ ವಿಚಾರಿಸುವ ಸಲುವಾಗಿ ಕಡೆಗೆ ಹೋಗುತ್ತಿರುವಾಗ ಹಳ್ಳಿಖೇಡ(ಬಿ) ಪಟ್ಟಣದ ಬಸವೇಶ್ವರ ಚೌಕ ಕಡೆಯಿಂದ ಟಾಟಾ ಎಸ್ ಗೂಡ್ಸ್ ವಾಹನ ಸಂ. ಕೆಎ-56/5015 ನೇ ಚಾಲಕ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮಗಳಾದ ಇಖ್ರಾ ಹಾಗೂ ತಂಗಿಯ ಮಗನಾದ ಮುಷ್ರಾಫ್ ಇಬ್ಬರಿಗೂ ಡಿಕ್ಕಿ ಮಾಡಿ ರೋಡಿನ ಬಲ ಬದಿಗೆ ಪಲ್ಟಿ ಮಾಡಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಇಖ್ರಾ ಇವಳಿಗೆ ಹಣೆಯ ಮೇಲೆ ಭಾರಿ ಕಟ್ಟಾದ ರಕ್ತಗಾಯ, ಎಡಗಡೆ ಮೇಲುಕಿಗೆ ರಕ್ತಗಾಯ ಮತ್ತು ಎಡಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ ಮತ್ತು ಮುಷ್ರಾಫ ಇವನಿಗೆ ಹಣೆಯ ಮೇಲೆ ಭಾರಿ ಕಟ್ಟಾದ ರಕ್ತಗಾಯ ಮತ್ತು ಗಟಾಯಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 119/2021, ಕಲಂ. 279, 337, 338 ಐಪಿಸಿ :-

ದಿನಾಂಕ 18-07-2021 ರಂದು ಫಿರ್ಯಾದಿ ಮೊಹನ ತಂದೆ ಅಂಬದಾಸ ಜಮಾದಾರ ವಯ: 18 ವರ್ಷ, ಜಾತಿ: ಕಬ್ಬಲಿಗ, ಸಾ: ನಾರಾಯಣಪೂರ ರವರು ತಮ್ಮೂರ ವೀರಾರಡ್ಡಿ ರವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮಾಡಿ ಮದ್ಯಾಹ್ನ ಊಟ ಮಾಡಲು ತನಗೆ ಪರಿಚಯದ ತಮ್ಮೂರ ಹಸೇನ್ ತಂದೆ ವಿಶ್ವನಾಥ ಸೂರ್ಯವಂಶಿ ವಯ: 14 ವರ್ಷ, ಜಾತಿ: ವಡ್ಡರ ಇತನು ಮಾಲಿಕರ ಮೊಟಾರ ಸೈಕಲ್ ಚಾಸಿಸ್ ನಂ. DFFBGM38739 ನೇದನ್ನು ತೆಗೆದುಕೊಂಡು ನಾರಾಯಣಪೂರಕ್ಕೆ ಹೊಗುತ್ತಿರುವಾಗ ಅವನ ಮೊಟಾರ ಸೈಕಲ್ ಹಿಂದೆ ಫಿರ್ಯಾದಿ ಕುಳಿತುಕೊಂಡು ಹೋಗುವಾಗ ನಾರಾಯಣಪೂರ ಗ್ರಾಮದ ಹತ್ತಿರ ಎದುರಿನಿಂದ ಕಾರ ನಂ. ಕೆಎ-29/ಎಂ-6311 ನೇದರ ಚಾಲಕನಾದ ಆರೋಪಿ ಶಿವಾಜಿ ತಂದೆ ವಿಠಲರಾವ ಕುಚಮೆ ವಯ: 42 ವರ್ಷ, ಜಾತಿ: ರಡ್ಡಿ, ಸಾ: ಔಸಾ (ಎಂ.ಎಸ್) ಇತನು ತನ್ನ ಕಾರನ್ನು ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಎಡಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯ, ಎಡ ಮೋಳಕಾಲ ಕೆಳಗೆ ಗುಪ್ತಗಾಯವಾಗಿರುತ್ತದೆ ಹಾಗೂ ಹಸೇನ್ ಈತನಿಗೆ ಎಡಗಾಲು ಕಪಗಂಡದ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ಮ್ಮೂರ ಕುಮಾರ ತಂದೆ ವಿಶ್ವನಾಥ ಸುರ್ಯವಂಶಿ, ಅಶೋಕರಡ್ಡಿ ತಂದೆ ಯಂಕಾರಡ್ಡಿ ಪಾಟೀಲ್ ನೋಡಿರುತ್ತಾರೆ, ನಂತರ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಬಸವಕಲ್ಯಾಣ ಖಾಸಗಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 122/2021, ಕಲಂ. 336 ಜೊತೆ 34 ಐಪಿಸಿ :-

ದಿನಾಂಕ 18-07-2021 ರಂದು ಹುಮನಾಬಾದ ಇಂಡಿಸ್ಟ್ರೀಲ ಏರಿಯಾದಲ್ಲಿ ಮಾನವ ಪ್ರಾಣಕ್ಕೆ ಮತ್ತು ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುವ ರೀತಿಯಲ್ಲಿ ಬೈಯೋ ಡಿಸೇಲ ಸಂಗ್ರಹಿಸಿರುತ್ತಾರೆಂದು ರವಿಕುಮಾರ ಪಿಎಸಐ (ಕಾಸು) ಹುಮನಾಬಾದ ಪೊಲಿಸ ಠಾಣೆ ರವರಿಗೆ ಖಚಿತ ಭಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಕರೆಯಿಸಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಹುಮನಾಬಾದ ಹಳೆ ಅರ.ಟಿ.ಓ ಕಚೇರಿಯಿಂದ ಸ್ವಲ್ಪ ದೂರದಲ್ಲಿ ಹೋಗಿ ನೋಡಲು ಒಂದು ತಗಡದ ಶೆಡ್ಡಿನಲ್ಲಿ 3 ಜನರು ಸುಮಾರು 20,000/- ಲೀಟರ ಸಾಮಥ್ರ್ಯ ಇರುವ ದೊಡ್ಡ ಟ್ಯಾಂಕರ ಇಟ್ಟುಕೊಂಡು ಕುಳಿತ್ತಿದ್ದು ಅದರಲ್ಲಿ ಬೈಯೋ ಡಿಸೇಲ ಇರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿದಾಗ ಒಬ್ಬ ವ್ಯಕ್ತಿ ಸಿಕ್ಕಿದ್ದು ಉಳಿದ 2 ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ, ಸಿಕ್ಕ ವ್ಯಕ್ತಿಗೆ ಹೆಸರು ವಿಚಾರಿಸಲು ಅವನು ತನ್ನ ಹಸೆರು 1) ಖಾಜಾ ತಂದೆ ಇಸ್ಮಾಯಿಲ ಸಾಬ ಭಾಗವಾನ, ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಮಂಠಾಳ ಅಂತಾ ತಿಳಿಸಿದನು ಮತ್ತು ಓಡಿ ಹೋದವರ ಹೆಸರು 2) ಅಜಾಮ ಸಾ: ರಾಜೇಶ್ವರ ಹಾಗೂ 3) ಇಬ್ರಾಹಿಂ ಸಾ: ರಾಜೇಶ್ವರ ಅಂತಾ ತಿಳಿಸಿದನು, ನಂತರ ಟ್ಯಾಂಕರದಲ್ಲಿ ಏನಿದೇ ಅಂತಾ ವಿಚಾರಿಸಲು ಇದರಲ್ಲಿ ಬೈಯೋ ಡಿಸೇಲ ಇರುತ್ತದೆ ಅಂತಾ ತಿಳಿಸಿದನು, ನಂತರ ಪಿಎಸ್ಐ ರವರು ಟ್ಯಾಂಕರ ಪರೀಸಿಲಿಸಿ ನೋಡಲು ಟ್ಯಾಂಕರದಲ್ಲಿ ಅಂದಾಜು 5000-6000 ಲೀಟರ ಬೈಯೋ ಡಿಸೀಲ ಇದ್ದು ಅ.ಕಿ 4,20,000/- ರೂ. ಇರುತ್ತದೆ, ನಂತರ ಈ ಬೈಯೋ ಡಿಸೀಲ ಈ ರೀತಿ ಸಂಗ್ರಹ ಮಾಡುವದರಿಂದ ಮಾನವ ಪ್ರಾಣಕ್ಕೆ ಮತ್ತು ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುವ ಸಂಭವ ಇರುತ್ತದೆ ಅಂತಾ ತಿಳಿಸಿ, ಇದರ ಸುರಕ್ಷತೆಯ ಬಗ್ಗೆ ನೀವು ಏನು ಮುಂಜಾಗ್ರತೆ ಕೈಗೊಂಡಿದ್ದಿರಿ ಅಂತಾ ವಿಚಾರಿಸಲು ಯಾವುದೇ ಮುಂಜಾಗ್ರತೆ ಕ್ರಮ ಕೈಕೊಂಡಿಲ್ಲ ಅಂತಾ ತಿಳಿಸಿದನು, ನಂತರ ಸದರಿ ಅಂಗಡಿಗೆ ಜಪ್ತಿ ಮಾಡಿ ಅದಕ್ಕೆ ಸೀಲ್ ಹಾಕಿ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.