ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಜೇವರಗಿ ಠಾಣೆ : ದಿನಾಂಕ 21.02.2020 ರಂದು ಮುಂಜಾನೆ ಜೇವರಗಿ ಪಟ್ಟಣದ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ
ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿರುತ್ತಾನೆಂದು ಖಚಿತ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿ.ಐ
ಸಾಹೇಬ ಜೇವರಗಿ ಮತ್ತು ಮಾನ್ಯ ಡಿ.ಎಸ್.ಪಿ ಸಾಹೇಬರು ಗ್ರಾಮೀಣ ಉಪ
ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹೊರಟು ಬಸ್ಸ ನಿಲ್ದಾಣದ ಬಾತ್ಮೀ ಬಂದ ಸ್ಥಳ ತಲುಪಿದ ನಂತರ ಸ್ವಲ್ಪ ದೂರದಲ್ಲಿ ಹೊಟೇಲ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಸಜ್ಜ ಸುಪರ ಬಜಾರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು 1/- ರುಪಾಯಿಗೆ 80/- ರೂಪಾಯಿ ಗೆಲ್ಲಿರಿ ಭಾಗ್ಯ ಲಕ್ಷ್ಮೀ ನಿಮ್ಮ ಮನೆಗೆ ಬರುತ್ತಾಳೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ
ಪಡೆದು ಅಂಕಿ ಸಂಖ್ಯೆಯುಳ್ಳ ಮಟಕಾ ಚೀಟಿ ಬರೆದುಕೊಡುತ್ತಿದ್ದನು. ನಾವು ಸದರಿ ವ್ಯೆಕ್ತಿ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಮಟಕಾ ಬರೆಯಿಸಲು ಬಂದ ಸಾರ್ವಜನಿಕರು ಅಲ್ಲಿಂದ ಓಡಿ ಹೋದರು. ಸದರ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಒಬ್ಬನಿಗೆ ನಾವು ಬೆನ್ನು ಹತ್ತಿ ಹಿಡಿದು ಅವನ ಹೆಸರು ವಿಳಾಸ ಕೇಳಲಾಗಿ ಅವನು ತನ್ನ ಹೆಸರು ಶ್ರೀಕಾಂತ @ ಕಾಂತು ತಂದೆ ಸಾಯಿಬಣ್ಣಾ ಕೊಬಾಳ ಸಾಃ ಬಾಬುಜಗಜೀವರಾಮ ನಗರ ಜೇವರಗಿ ಅಂತಾ ಹೇಳಿದನು ಅವನಿಗೆ ಅಂಗಶೋದನೆ ಮಾಡಲಾಗಿದೆ ಅವನ ಹತ್ತಿರ ನಗದು ಹಣ 750-/-ರೂ, ಒಂದು ಮಟಕಾ ಚೀಟಿ ಅ.ಕಿ=00
ಒಂದು, ಬಾಲ್ ಪೆನ್ ಅ.ಕಿ=00
ಸಿಕ್ಕಿದ್ದು ಸದರಿಯವಗಳನ್ನು ವಶಕ್ಕೆ ಪಡೆದು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ವಾಡಿ ಠಾಣೆ : ದಿನಾಂಕ 21/02/2020 ರಂದು ವಾಡಿ ಠಾಣಾ ವ್ಯಾಪ್ತಿಯ ಪೈಕಿ ಲಾಡ್ಲಾಪೂರ ಗ್ರಾಮದಲ್ಲಿ ಯಾರೋ ಅನಧಿಕೃತವಾಗಿ ಮರಳನ್ನು ಕಳ್ಳತನದಿಂದ ತಮ್ಮ ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ ಅಂತಾ ಬಂದ ಖಚಿತ ಬಾತ್ಮೀ ಮೇರೆಗೆ ಪಿ.ಎಸ್.ಐ. ವಾಡಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಡ್ಲಪೂರ
ಗ್ರಾಮದ ಸಮೀಪ ಹೊರಟಾಗ ಎದರುಗಡೆಯಿಂದ ಒಂದು ಟ್ರ್ಯಾಕ್ಟರ ಹೊರಟಿದ್ದು ಸಂಶಯ ಬಂದು ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಹೇಳಿದಾಗ ಅದರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ ಟ್ರ್ಯಾಕ್ಟರ ನಿಲ್ಲಿಸಿ ಕೆಳಗೆ ಇಳಿದು ಓಡಲು ಪ್ರಾರಂಭಿಸಿದಾಗ ಜೀಪ ನಿಲ್ಲಿಸಿ ಸಿಬ್ಬಂದಿಯ ಸಹಾಯದಿಂದ ಟ್ರ್ಯಾಕ್ಟರ ಚಾಲಕನಿಗೆ ಹಿಡಿಯಲು ಪ್ರಯತ್ನಿಸಿದ್ದರು ಊರಲ್ಲಿ ಓಡಿ ಹೋದನು.ನಂತರ 06-00 ಎ.ಎಮ್ ಕ್ಕೆ ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ ಪರಿಶೀಲಿಸಿ ನೋಡಲಾಗಿ ಅದು ಸ್ವರಾಜ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಇಂಜಿನ ನಂಬರ ಕೆಎ-32 ಟಿ-7739 ಮತ್ತು ಟ್ರ್ಯಾಲಿ ನಂಬರ ಕೆಎ-32 ಟಿ-7740 ಅಂತಾ ಬರೆದಿದ್ದು ಸದರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಅಂದಾಜು 01 ಸಾವಿರ ರೂಪಾಯಿದಷ್ಟು ಮರಳು ತುಂಬಿದ್ದು ಟ್ರ್ಯಾಕ್ಟರ ಕಿಮ್ಮತ್ತು ಅಂದಾಜು 01 ಲಕ್ಷ ರೂಪಾಯಿ ಆಗುತ್ತದೆ. ನಂತರ ಸದರಿ ಪಂಚನಾಮೆ ಮೂಲಕ ಟ್ರ್ಯಾಕ್ಟರ ಜಪ್ತಿಪಡಿಸಿಕೊಂಡು ವಾಡಿ ಠಾಣೆಗೆ ಬಂದು ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಕ ಅನಧಿಕೃತವಾಗಿ ಯಾವದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಟ್ರ್ಯಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಜನರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೊರಟ ಬಗ್ಗೆ ಖಚಿತಪಟ್ಟಿದ್ದರಿಂದ ಠಾಣೆಗೆ ತಂದು ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಕನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ದಿನಾಂಕ 21/02/2020 ರಂದು ಬೆಳಗ್ಗೆ ವಾಡಿ, ಠಾಣಾ ವ್ಯಾಪ್ತಿಯ ಪೈಕಿ ಇಂಗಳಗಿ ಗ್ರಾಮದ ಕಾಗಿಣಾ ನದಿಯಿಂದ ಯಾರೋ ಅನಧಿಕೃತವಾಗಿ ಮರಳನ್ನು ಕಳ್ಳತನದಿಂದ ತಮ್ಮ ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ ಅಂತಾ ಬಂದ ಖಚಿತ ಬಾತ್ಮೀ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಇಂಗಳಗಿ ಗ್ರಾಮದ ಆಟೋ ಸ್ಟ್ಯಾಂಡ ಸಮೀಪ ಹೊರಟಾಗ ಎದರುಗಡೆಯಿಂದ ಒಂದು ಟ್ರ್ಯಾಕ್ಟರ ಹೊರಟಿದ್ದು ಸಂಶಯ ಬಂದು ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಹೇಳಿದಾಗ ಅದರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ ಟ್ರ್ಯಾಕ್ಟರ ನಿಲ್ಲಿಸಿ ಕೆಳಗೆ ಇಳಿದು ಓಡಲು ಪ್ರಾರಂಭಿಸಿದಾಗ ಜೀಪ ನಿಲ್ಲಿಸಿ ಸಿಬ್ಬಂದಿಯ ಸಹಾಯದಿಂದ ಟ್ರ್ಯಾಕ್ಟರ ಚಾಲಕನಿಗೆ ಹಿಡಿಯಲು ಪ್ರಯತ್ನಿಸಿದ್ದರು ಊರಲ್ಲಿ ಓಡಿ ಹೋದನು.ನಂತರ ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ ಪರಿಶೀಲಿಸಿ ನೋಡಲಾಗಿ ಅದು ಮಹೇಂದ್ರಾ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಇಂಜಿನ ನಂಬರ ಕೆಎ-32 ಟಿಎ-4520 ಅಂತಾ ಬರೆದಿದ್ದು ಟ್ರ್ಯಾಲಿ ನಂಬರ ನೋಡಲಾಗಿ ಇರುವದಿಲ್ಲ. ಸದರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಅಂದಾಜು 01 ಸಾವಿರ ರೂಪಾಯಿದಷ್ಟು ಮರಳು ತುಂಬಿದ್ದು ಟ್ರ್ಯಾಕ್ಟರ ಕಿಮ್ಮತ್ತು ಅಂದಾಜು 75 ಸಾವಿರ ರೂಪಾಯಿ ಆಗುತ್ತದೆ. ನಂತರ ಸದರಿ ಪಂಚನಾಮೆಯ ಮೂಲಕ ಟ್ರ್ಯಾಕ್ಟರ
ಹಾಗೂ ಮರಳನ್ನು ಜಪ್ತಿಪಡಿಸಿಕೊಂಡು ತಾಬಾಕ್ಕೆ ತೆಗೆದುಕೊಂಡು ವಾಡಿ ಠಾಣೆಗೆ ಬಂದು ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಕ ಅನಧಿಕೃತವಾಗಿ ಯಾವದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಟ್ರ್ಯಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಜನರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೊರಟ ಬಗ್ಗೆ ಖಚಿತಪಟ್ಟಿದ್ದರಿಂದ ಠಾಣೆಗೆ ತಂದು ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಕನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಲಾಗಿದೆ.