Police Bhavan Kalaburagi

Police Bhavan Kalaburagi

Friday, January 10, 2020

BIDAR DISTRICT DAILY CRIME UPDATE 10-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-01-2020

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 03/2020, ಕಲಂ. 379 ಐಪಿಸಿ :-
ದಿನಾಂಕ 05-01-2020 ರಂದು ಬೀದರ ನೆಹರು ಕ್ರಿಡಾಂಗಣದ ಹತ್ತಿರ ಇರುವ ಗುರುನಾನಕ ಪಬ್ಲಿಕ್ ಶಾಲೆಯ ವಾರ್ಷಿಕೊತ್ಸವ ಇದ್ದ ಕಾರಣ ಕಾರ್ಯಕ್ರಮಕ್ಕೆ ಹೋಗಲು ಫಿರ್ಯಾದಿ ಕವಿಶ್ವರ ತಂದೆ ವೆಂಕಟೇಶ ವಯ: 45 ವರ್ಷ, ಜಾತಿ: ವೈಷ್ಯ, ಸಾ: ಭವಾನಿ ಗುಡಿಯ ಹತ್ತಿರ ಹಳೆಯ ಸರ್ವಿಸ ಸ್ಟ್ಯಾಂಡ ಹತ್ತಿರ ಬೀದರ ರವರ ಹೊಂಡಾ ಎಕ್ಟಿವಾ ಮೊಟರ ಸೈಕಲ ನಂ. ಕೆಎ-38/ಎಸ್-3799 ನೇದನ್ನು ಶಾಲೆಯ ಮುಂದೆ ನಿಲ್ಲಿಸಿ ವಾರ್ಷಿಕೊತ್ಸವ ಕಾರ್ಯಕ್ರಮಕ್ಕೆ ಹೋಗಿ ಮರಳಿ 2100 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಸದರಿ ಮೋಟಾರ ಸೈಕಲ್ ಇರಲಿಲ್ಲ, ನಂತರ ಫಿರ್ಯಾದಿಯು ತನ್ನ ಸದರಿ ಮೋಟರ ಸೈಕಲ ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಪತ್ತೆಯಾಗಲಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ, ಕಳುವಾದ ವಾಹನದ ವಿವರ 1) ಹೊಂಡಾ ಎಕ್ಟಿವಾ ಮೋಟರ ಸೈಕಲ ನಂ. ಕೆಎ-38/ಎಸ್-3799, 2) ಚಾಸಿಸ್ ನಂ. ಎಮ್..4.ಜೆ.ಎಫ್.505.ಬಿ.ಜಿ.ಟಿ.082708, 3) ಇಂಜಿನ್ ನಂ. ಜೆ.ಎಫ್.50..ಟಿ.3082713, 4) ಮಾಡಲ್: 2016, 5) ಬಣ್ಣ: ಬ್ರೌನ್ ಹಾಗೂ 6) .ಕಿ 30,000/-ರೂ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 03/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 09-01-2020 ರಂದು ಸಂತಪುರ ಗ್ರಾಮದಲ್ಲಿ ಬಸವೇಶ್ವರ ಅನುಭವ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದಾರೆ ಅಂತ ದಾಮೋದರ ರಾವ ಎ.ಎಸ್.ಐ ಸಂತಪುರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಬಸವೇಶ್ವರ ಚೌಕ ಹತ್ತಿರ ಹಿಂದುಗಡೆಯಿಂದ ಮರೆಯಾಗಿ ನಿಂತು ನೋಡಲಾಗಿ ಅನುಭವ ಮಂಟಪದ ಮುಂದೆ ಆರೋಪಿ ವಿಶ್ವನಾಥ ತಂದೆ ಶಿವರಾಯ ಬುಣಗೆ ವಯ: 38 ವರ್ಷ, ಜಾತಿ : ಲಿಂಗಾಯತ, ಸಾವಡಗಾಂವ (ದೆ) ಇತನು ಸಾರ್ವಜನಿಕರಿಗೆ ಒಂದು ಒಂದು ರೂಪಾಯಿಗೆ 80/- ರೂ. ಕೋಡುತ್ತೆನೆ ಅಂತ ಕನ್ನಡ ಭಾಷೆಯಲ್ಲಿ ಕೂಗುವಾಗ ಅದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಅಂಗ ಝಡ್ತಿ ಮಾಡಿ ನೋಡಲು ಅವನ ಹತ್ತಿರ ನಗದು ಹಣ 4600-/ ರೂ. ಹಾಗು ಒಂದು ಬಾಲ ಪೇನ್ ಹಾಗು ಒಂದು ಮಟಕಾ ಚೀಟಿ ಸಿಕ್ಕಿದ್ದು ಅವಗಳು ಪಂಚರ ಸಮಕ್ಷ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 09-01-2020 ರಂದು ಬಸವಕಲ್ಯಾಣ ನಗರದ ಹಳೆ ತಹಸೀಲ್ ಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ತಹಸೀಲ್ ಕಛೇರಿ ಹತ್ತಿರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸದರಿ ಹಳೆ ತಹಸೀಲ್ ಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅನ್ಸರ್ ತಂದೆ ಇಮಾಮಸಾಬ ಭಾಲ್ದಾರ್ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಒಮ್ಮೇಲೆ ದಾಳಿ ಮಾಡಿ ಸದರಿ ಆರೋಪಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 840/- ರೂ., ಮತ್ತು 02 ಮಟಕಾ ಚೀಟಿಗಳು ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 03/2020, ಕಲಂ. 279, 337, 338 ಐಪಿಸಿ  ಜೋತೆ 187 .ಎಂ.ವಿ ಕಾಯ್ದೆ :-
ದಿನಾಂಕ 09-01-2020 ರಂದು ಬಸವರಾಜ ತಂದೆ ಆನಂದಪ್ಪಾ ಬೇಲೂರೆ ವಯ: 54 ವರ್ಷ, ಜಾತಿ: ಲಿಂಗಾಯತ, ಸಾ: ಲೆಕ್ಚರ ಕಾಲೋನಿ ಭಾಲ್ಕಿ ರವರು ಡೋಣಗಾಪೂರ ಶಿವಾರದ ಹೊಲದಲ್ಲಿ ಕೆಲಸವಿದ್ದ ಪ್ರಯುಕ್ತ ತನ್ನ ಹೆಂಡತಿ ರೇಖಾ, ಅತ್ತೆ ಅನ್ನಪೂರ್ಣಾ ಎಲ್ಲರೂ ಕೂಡಿ ಮೋಟಾರ ಸೈಕಲ ನಂ. ಕೆಎ-39/ ಎಲ್-5086 ನೇದರ ಮೇಲೆ ಡೊಣಗಾಪೂರ ಹೊಲಕ್ಕೆ ಹೋಗುವಾಗ ದಾರಿ ಮದ್ಯ ಶಿವಲಿಂಗ ಹೂಗಾರ ರವರ ಹೊಲದ ಹತ್ತಿರ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ ನಂ ಕೆ.ಎ-39/ಟಿ-5116 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿ ಒಮ್ಮೇಲೆ ವಾಹನ ತಿರುಗಿಸಿ ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿಯ ಎಡಕಾಲ ಮೋಳಕಾಲ ಹತ್ತಿರ ಮುರಿದು ಭಾರಿ ರಕ್ತಗಾಯ, ಎಡಮೋಳಕೈ ಹತ್ತಿರ ರಕ್ತಗಾಯವಾಗಿರುತ್ತದೆ ಮತ್ತು ಫಿರ್ಯಾದಿಯವರ ಹೆಂಡತಿ ಇವರಿಗೆ ಎಡಗಾಲ ಮೋಳಕಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಅತ್ತೆ ಅನ್ನಪೂರ್ಣಾ ಇವರಿಗೆ ಎಡಗಾಲ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಸಂಗಮೇಶ ಸಾ: ಸಾಂಗಮ ಮತ್ತು ಪ್ರಸಿಧ್ಧ ಸಾ: ಗೋರಚಿಂಚೊಳಿ ರವರು ಎಲ್ಲರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಳಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.