Police Bhavan Kalaburagi

Police Bhavan Kalaburagi

Tuesday, March 15, 2016

Kalaburagi District Reported Crimes

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 15.03.2016 ರಂದು ಶ್ರೀ ಶಿವುಕುಮಾರ ತಂದೆ ಸೋಮನಾಥ ಮಠಪತಿ ಸಾ; ಗೋಗಿ(ಕೆ) ತಾ;ಜಿ ಕಲಬುರಗಿ ಕಮಲಾಪೂರ ಗ್ರಾಮದಲ್ಲಿ ನನ್ನ ಕೆಲಸವಿದ್ದ ಪ್ರಯುಕ್ತ ಕಮಲಾಪೂರಕ್ಕೆ ಬರುವ ಕುರಿತು ಬೆಳ್ಳಿಗ್ಗೆ ನಾನು ನಮ್ಮ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ಬಂದಿದ್ದು ನಮ್ಮ ಗ್ರಾಮದ ಶ್ರೀಮತಿ ಮಲ್ಲಮ್ಮ ಗಂಡ ಬಸಯ್ಯ ಮಠ ಇವರು ಹಾಗೂ ನಮ್ಮ ಗ್ರಾಮದ ಮಲ್ಲಿಕಾರ್ಜುನ ಪೊಲೀಸ ಬಿರಾದಾರ, ಅಂಬರಿಷ ಗಂಗದಿ ಇವರು ಕೂಡಾ ಕಮಲಾಪೂರಕ್ಕೆ ಹೊಗುವ ಸಂಬಂದ ನಿಂತ್ತಿದ್ದು ಬೆಳ್ಳಿಗ್ಗೆ 10:15 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ತಿಪ್ಪಣ್ಣ ಪೊಲೀಸ ಬಿರಾದಾರ ಇತನು ಟಂಟಂ ಅಟೊ ನಂ ಕೆಎ 32 ಬಿ 8566 ನೇದ್ದು ಬಸ್ಸ ನಿಲ್ದಾಣ ಹತ್ತಿರ ತೆಗೆದುಕೊಂಡು ಬಂದು ಕಮಲಾಪೂರಕ್ಕೆ ಹೋಗುತ್ತೆನೆ ಅಂತ ಹೇಳಿದ್ದು ಆಗ ನಾನು ಮತ್ತು ಮಲ್ಲಮ್ಮ, ಮಲ್ಲಿಕಾರ್ಜುನ ಹಾಗೂ ಅಂಬರಿಷ ಕೂಡಿಕೊಂಡು ಸದರಿಯವರ ಟಂಟಂ ಅಟೊದಲ್ಲಿ ಕುಳಿತಿದ್ದು ತಿಪ್ಪಣ್ಣ ಇತನು ತನ್ನ ಟಂಟಂ ಅಟೊವನ್ನು ನಡೆಯಿಸಿಕೊಂಡು ಹೊರಟಿದ್ದು ನಮ್ಮ ಟಂಟಂ ಅಟೊ ಜೀವಣಗಿ ಗ್ರಾಮಕ್ಕೆ ಬಂದಾಗ ಜೀವಣಗಿ ಗ್ರಾಮದ ನಮಗೆ ಪರಿಚಯದ ಲಾಡಲೆಸಾಬ ತಂದೆ ನಬಿಸಾಸ ಮೋಮಿನ ಇತನು ನಮ್ಮ ಟಂಟಂ ಅಟೊದಲ್ಲಿ ಬಂದು ಕುಳಿತಿದ್ದು ನಂತರ ನಮ್ಮ ಟಂಟಂ ಅಟೊ ಚಾಲಕನು ಅಟೊವನ್ನು ನಡೆಯಿಸಿಕೊಂಡು ಕಮಲಾಪೂರ ಕಡೆಗೆ ಬರುತ್ತಿದ್ದು ನಮ್ಮ ಅಟೋ ಕಮಲಾಪೂರ ಗ್ರಾಮದ ಕೆ.ಇ,ಬಿ ಕ್ರಾಸ ದಿಂದ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ಕಮಲಾಪೂರ ಬಸ್ಸ ನಿಲ್ದಾಣದ ಕಡೆಗೆ ಹೊಗುತ್ತಿದ್ದಾಗ ನಮ್ಮ ಟಂಟಂ ಅಟೊ ಚಾಲಕ ತಿಪ್ಪಣ್ಣ ಇತನು ಅಟೊವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಹೊಗುತ್ತಿದ್ದು ಆಗ ನಾನು ಸದರಿಯವನಿಗೆ ಟಂಟಂನ್ನು ನಿಧಾನವಾಗಿ ನಡೆಯಿಸಲು ತಿಳಿಸಿದ್ದು ಆದರೂ ಕುಡಾ ಸದರಿಯವನು ಕಮಲಾಪೂರ ಗ್ರಾಮದ ವಿಶೇಷ ತಹಸಿಲ್ದಾರರ ಆಫೀಸ ದಿಂದ ಸ್ವಲ್ಪ ಮುಂದೆ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ರಸ್ತೆಯ ಮೇಲೆ ಬೆಳ್ಳಿಗ್ಗೆ 11 ಗಂಟೆಯ ಸುಮಾರಿಗೆ ತನ್ನ ಟಂಟಂ ಅಟೊವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ರಸ್ತೆಯ ಮೇಲೆ ಒಮ್ಮಲೆ ಕಟ್ಟ ಮಾಡಲು ಹೊಗಿ ಟಂಟಂ ಅಟೊ ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಅಪಘಾತ ಪಡಿಸಿದ ಪರಿಣಾಮ ಟಂಟಂದಲ್ಲಿ ಕಳಿತ್ತಿದ್ದು ನನಗೆ ಎಡಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿದ್ದು, ಮಲ್ಲಮ್ಮ ಇವರಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಬೆನ್ನಿಗೆ ತೆರಚಿದ ಗಾಯವಾಗಿದ್ದು, ಮತ್ತು ಬಲಗೈ ಮುಂಗೈ ಹತ್ತಿರ ತರಚಿದ ಗಾಯವಾಗಿದ್ದು ಸದರಿಯವರಿ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ರಕ್ತಸ್ರಾವವಾಗಿ ಸದರಿ ಮಲ್ಲಮ್ಮ ಇವರು ಸ್ಥಳದಲ್ಲಿ ಮೃತ ಪಟ್ಟಿದ್ದು. ಮತ್ತು ಟಂಟಂದಲ್ಲಿ ಕುಳಿತ ಮಲ್ಲಿಕಾರ್ಜುನ ಇತನಿಗೆ ಎಡಗೈ ಹಸ್ತದ ಮೇಲೆ ರಕ್ತಗಾಯವಾಗಿದ್ದು, ಅಂಬರಿಷ ಇತನಿಗೆ ಮುಖದ ಮೇಲೆ ರಕ್ತಗಾಯವಾಗಿದ್ದು ಮತ್ತು ಜೀವಣಗಿ ಗ್ರಾಮದ ಲಾಡಲೆಸಾಬ ಇತನಿಗೆ ಟೊಂಕದ ಹತ್ತಿರ ಬಾರಿ ಒಳಪೆಟ್ಟಾಗಿದ್ದು ಮತ್ತು ಎರಡು ಮಳಕಾಲ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ಅಂಬರಿಷ ಮತ್ತು ಲಾಡಲೇಸಾಬ ಇಬ್ಬರು ಖಾಸಗಿ ವಾಹನದಲ್ಲಿ ಕುಳಿತು ಉಪಚಾರ ಕುರಿತು ಕಲಬುರಗಿಗೆ ಹೋಗಿದ್ದು ಇರುತ್ತದೆ. ಸದರಿ ಟಂಟಂ ಚಾಲಕ ತಿಪ್ಪಣ ಇತನು ಅಪಘಾತಪಡಿಸಿದ ನಂತರ ತನ್ನ ಟಂಟಂ ಅಟೊವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಲಿಂಗಪ್ಪಾ ತಂದೆ ಭೀಮರಾವ ಪಾಟೀಲ ಸಾ:ಜೆ.ಆರ್‌ ನಗರ ಕಲಬುರಗಿ ಇವರು ದಿನಾಂಕ:13/03/2016 ರಂದು ಮಧ್ಯಾನ 3.00 ಗಂಟೆಗೆ ತನ್ನ ಮನೆಗೆ ಬೀಗ ಹಾಕಿ ನಾನು ಮತ್ತು ಶ್ರೀಮತಿ ಮಹಾನಂದ ಹೈದ್ರಾಬಾದಗೆ ಹೋಗಿದ್ದು ಮರಳಿ ದಿನಾಂಕ:14/03/2016 ರಂದು ರಾತ್ರಿ 2.30 ಗಂಟೆಗೆ ಮನೆಗೆ ಬಂದು ನೋಡಲು ನಮ್ಮ ಮುಖ್ಯ ಬಾಗಿಲ ಕೀಲಿ ತೆರೆದಿದ್ದು ಇದ್ದು ನಾನು ನೋಡಲು ಬಾಗೀಲ ಒಳಗೆ ಕೊಂಡಿ ಹಾಕಿದ್ದು ಇತ್ತು ಹಿಂಬದಿ ಬಾಗಿಲು ತೆರೆದು ಹೋದಾಗ ಒಳಗೆ ಹೋಗಿ ನೋಡಲು ಅಲಮಾರದಲ್ಲಿದ್ದ ಎಲ್ಲಾ ಸಾಮಾನುಗಳು ಚಿಲ್ಲಾ-ಪಿಲ್ಲಿಯಾಗಿ ಬಿದ್ದಿದ್ದವು ಅಲಮಾರದಲ್ಲಿದ್ದ ಬಂಗಾರದ 05 ಗ್ರಾಂ 2 ಉಂಗುರುಗಳು, ಬಂಗಾರದ 50 ಗ್ರಾಂ ತಾಳಿಚೈನ, ಬಂಗಾರದ 10 ಗ್ರಾಂ ಕಿವಿ ಹೂಗಳು ಹಾಗೂ ನಗದು ಹಣ 50000/-ರೂ ಹೀಗೆ ಒಟ್ಟು 2,60,000/-ರೂ ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಹಚ್ಚಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಳಂದ ಠಾಣೆ : ಶ್ರೀ ಮಹಾದೇವರಾವ ತಂದೆ ಸಿದ್ದಪ್ಪಾ ಕವಲಗಾ ಸಾ: ಚಿತಲಿ ಗ್ರಾಮ ತಾ; ಆಳಂದ ರವರು  ದಿನಾಂಕ; 13/03/2016 ರಂದು ರಾತ್ರಿ ಎಂದಿನಂತೆ 11-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀಬಾಯಿ ಕೂಡಿ ಊಟ ಮಾಡಿಕೊಂಡು  ಬೇಸಿಗೆ ಸೆಕೆ ಇರುವದರಿಂದ ನಮ್ಮ ಮನೆಯ ಕೀಲಿ ಹಾಕಿ ಮನೆಯ ಮುಂದೆ ಇರುವ ನಮ್ಮ ಹೊಲದಲ್ಲಿ ಹೋಗಿ ಮಲಗಿರುತ್ತೇವೆ. ನಂತರ ದಿನಾಂಕ: 14/03/2016 ರಂದು ರಾತ್ರಿ 4-30 ಗಂಟೆಯ ಸುಮಾರಿಗೆ ಏಕಿ ಮಾಡಲು ಎದ್ದಾ ಗ ನಮ್ಮ ಮನೆಯ ಬಾಗಿಲು ಖುಲ್ಲಾ ಇರುವದನ್ನು ನೋಡಿ ನಾನು ನನ್ನ ಹೆಂಡತಿಗೆ ಎಬ್ಬಿಸಿ ಮನೆ ಕೀಲಿ ಹಾಕಿದ ಬಗ್ಗೆ ವಿಚಾರಿಸಲು ಅವಳು ಮಲಗುವಾಗ ಕೀಲಿ ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿದ್ದು, ನಂತರ ನಾವು ಹತ್ತಿರ ಹೋಗಿ ನೋಡಲು ಮನೆಯ ಕೀಲಿ ಮುರಿದಿದ್ದು ಮನೆಯ ಒಳಗಡೆ ಹೋಗಿ ನೋಡಲು ಮನೆಯಲ್ಲಿದ್ದ ಟ್ರಂಕ್‌ ಖುಲ್ಲಾ ಇದ್ದು ಅದರೊಳಗಡೆ ಡಬ್ಬದಲ್ಲಿ ಇಟ್ಟಿದ್ದ 01) ಒಂದು ತೊಲಾ ಬಂಗಾರದ ಬೋರಮಳ ಸರ ಅಕಿ; 6000/- ರೂ 02) ಒಂದು ತೊಲಾ ಬಂಗಾರದ ಕಿವಿ ಹೂ ಮತ್ತು ಜುಮಕಿ ಅಕಿ; 6000/- ರೂ 03) ಗಡಿಗೆಯಲ್ಲಿ ಡಬ್ಬದಲ್ಲಿಟ್ಟಿದ್ದ 10,000/- ರೂ ನಗದು ಹಣ ಮತ್ತು 04) ಒಂದು ಸ್ಯಾಮಸಂಗ ಮೊಬೈಲ್‌ ಸೆಟ್‌ ಸಿಮ್‌ ನಂ: 9902455839 ಇದ್ದು ಅಕಿ: 1000/- ರೂ 05) ಮತ್ತು ಸೀರೆಗಳು ಬಟ್ಟೆಬರೆಗಳು ಅಕಿ: 1500/- ರೂ ಹೀಗೆ ಒಟ್ಟು 24,500/- ರೂ ಬೆಲೆಬಾಳುವ ಸ್ವತ್ತನ್ನು               ದಿನಾಂಕ: 13/03/2016 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 14/03/2016 ರಂದು ರಾತ್ರಿ 04-30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ರಾತ್ರಿ ವೇಳೆಯಲ್ಲಿ ಮನೆಯ ಒಳಗಡೆ ಹೋಗಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.