Police Bhavan Kalaburagi

Police Bhavan Kalaburagi

Thursday, June 13, 2019

KALABURAGI DISTRICT PRESS NOTE


ಪತ್ರಿಕಾ ಪ್ರಕಟಣೆ
ದಿನಾಂಕ: 12/06/2019 ರಂದು ಮೇದಕ ಗ್ರಾಮಲ್ಲಿ ಹೊಲದ ಹಂಚಿಕೆ ವಿಷಯ ಹಾಗು ಹಳೆಯ ಸಾಲ 50ಸಾವಿರ ಮರಳಿ ನೀಡುವ ವಿಷಯದಲ್ಲಿ ಗ್ರಾಮದ ಮಲ್ಕಪ್ಪ ತಂದೆ ಚಿನ್ನಯಾ ಹಾಗು ಅವನ ಉಳಿದ 05 ಜನ ಅಣ್ಣ ತಮ್ಮಂದಿರ ನಡುವೆ ತಕರಾರು ಇದ್ದು, ಇದಲ್ಲದೆ ಇದೇ ವಿಷಯಕ್ಕೆ ಗ್ರಾಮದಲ್ಲಿ ಪಂಚಾಯತಿ ಆಗಿದ್ದು, ಅದರಲ್ಲಿ ಮಲ್ಕಪ್ಪನಿಗೆ ಅವನ ಅಣ್ಣ ತಮ್ಮಂದಿರು ಜಮೀನು ಪೋಡಿ ಖರ್ಚಿಗಾಗಿ ಬೇಕಾಗುವ ಹಣ ಕೊಡಬೇಕು ಹಾಗು ಹಳೆಯ ಬಾಕಿ 50 ಸಾವಿರ ರುಪಾಯಿಕೂಡ ಕೊಡಬೇಕು ಅಂತ ಪಂಚಾಯತಿಯಲ್ಲಿ ತೀರ್ಮಾನ ಆಗಿದ್ದು ಅದರಂತೆ ಮಲ್ಕಪ್ಪನು ತನ್ನ ಅಣ್ಣ ತಮ್ಮಂದಿರಿಗೆ ಜಮೀನು ಹಂಚಿಕೆ ಮಾಡಲು ತನಗೆ ಕೊಡಬೇಕಾದ ಹಳೆಯ ಬಾಕಿ 50 ಸಾವಿರ ರುಪಾಯಿ ಮತ್ತು ಪೋಡಿ ಮಾಡಿಕೊಡಲು ಬೇಕಾಗುವ ಹಣ ಕೊಡ್ರಿ ಅಂತ ಕೇಳುತ್ತಾ ಬಂದಿದ್ದು, ಅದಕ್ಕೆ ಅವರೆಲ್ಲರೂ ಮಲ್ಕಪ್ಪನೊಂದಿಗೆ ನಾವು ಯಾವುದೇ ದುಡ್ಡು ಕೊಡುವುದಿಲ್ಲ ನೀನು ಜಮೀನು ಹೇಗೆ ಹಂಚಿ ಕೊಡುವುದಿಲ್ಲ ಅಂತ ತಕರಾರು ಮಾಡಿದು ಅವರ ನಡುವೆ ವೈಮನಸ್ಸು ಉಂಟಾಗಿದ್ದು ಇರುತ್ತದೆ.
            ಹೀಗಿದ್ದು ನಿನ್ನೆ ದಿನಾಂಕ 12/06/2019 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ಮಲ್ಕಪ್ಪ ಹಾಗು ಆತನ ಮಕ್ಕಳಾದ ಶಂಕ್ರೆಪ್ಪ ಹಾಗು ಚನ್ನಪ್ಪ ಇವರು ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಮಲ್ಕಪ್ಪನ ಅಣ್ಣ ತಮ್ಮಂದಿರು ಹಾಗು ಅವರ ಕುಟುಂಬದವರಾದ  1] ಹಣಮಂತ ತಂದೆ ಆಶಪ್ಪ, 2] ಆಶಪ್ಪ ತಂದೆ ಚಿನ್ನಯ್ಯಾ, 3] ರಾಮಲು ತಂದೆ ಚಿನ್ನಯ್ಯಾ 4] ಸೀನಪ್ಪ ತಂದೆ ರಾಮಲು, 5] ಶರಣಪ್ಪ ತಂದೆ ಚನ್ನಪ್ಪ, 6] ಪದ್ಮಮ್ಮ ಗಂಡ ಆಶಪ್ಪ, 7] ಲಾಲಮ್ಮ ಗಂಡ ಶರಣಪ್ಪ, 8] ಪವಿತ್ರಾ ತಂದೆ ರಾಮಲು ಹೀಗೆ ಎಲ್ಲರೂ ಸೇರಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆಗಳಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ  ಗುನ್ನೆ ನಂ: 77/2019 ಕಲಂ 143. 147. 148. 302. ಸಂಗಡ 149 ಐಪಿಸಿ ನೇದ್ದರಲ್ಲಿ 08 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಇರುತ್ತದೆ.
          ಸದರಿ ಕೃತ್ಯ ನಡೆದ ಸ್ಥಳಕ್ಕೆ ಮಾನ್ಯ ಮನೀಷ್ ಖರ್ಬೀಕರ ಐ.ಪಿ.ಎಸ್  .ಜಿ.ಪಿ ಈಶಾನ್ಯ ವಲಯ, ಹಾಗು ಮಾನ್ಯ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಐ.ಪಿ.ಎಸ್. ಎಸ್.ಪಿ ಕಲಬುರಗಿ ರವರು ಸ್ಥಳಕ್ಕೆ ಭೆಟಿ ನೀಡಿದ್ದು ಸದರಿ ಪ್ರಕರಣದಲ್ಲಿ 08 ಜನ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ ಕಲಬುರಗಿ ರವರು ಮಾನ್ಯ ಎ.ಎಸ್.ಪಿ ಚಿಂಚೋಳಿ ರವರ ಮಾರ್ಗದರ್ಶನದಲ್ಲಿ ಮುಧೋಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ತಮ್ಮರಾಯ ಪಾಟೀಲ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಅದರಂತೆ ಇಂದು ದಿನಾಂಕ: 13/06/2019 ರಂದು ಪ್ರಕರಣ ಆರೋಪಿತರಾದ 1] ಆಶಪ್ಪ ತಂದೆ ಚಿನ್ನಯ್ಯಾ ವಯ: 55, 2] ರಾಮಲು ತಂದೆ ಚಿನ್ನಯ್ಯಾ ಇವರನ್ನು ತೆಲಂಗಾಣ ರಾಜ್ಯದ ವಿಠಲಾಪೂರ ಗ್ರಾಮದಿಂದ ಹಾಗು 3] ಪದ್ಮಮ್ಮ ಗಂಡ ಆಶಪ್ಪ, 4] ಲಾಲಮ್ಮ ಗಂಡ ಶರಣಪ್ಪ, 5] ಪವಿತ್ರಾ ತಂದೆ ರಾಮಲು ಇವರನ್ನು ಕಾನಾಗಡ್ಡ ಗ್ರಾಮದಿಂದ ಬೆಳಿಗ್ಗೆ 11:30 ಕ್ಕೆ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿ ಆರೋಪಿತರು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದು ಹಾಗು ಅದಕ್ಕೆ ಬಳಸಿದ್ದ ಎರಡು ರಕ್ತ ಹತ್ತಿದ ಗಳೆಯ ಮೇಳಿಗಳು, ರಕ್ತ ಹತ್ತಿದ ಒಂದು ಕೊಡಲಿ ಕಾವು ಮತ್ತು ರಕ್ತ ಹತ್ತಿದ ಒಂದು ಬಡಿಗೆಯನ್ನು ಜಪ್ತಿ ಪಡಿಸಿಕೊಂಡು ನಂತರ 05 ಜನ ಆರೋಪಿತರನ್ನು ಬಂಧನ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇರುತ್ತದೆ. ಸದರಿ ಕಾರ್ಯಾಚರಣೆಯಲ್ಲಿ ಮುಧೋಳ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಸಂಗಮೇಶ ಪ್ರೋ, ಪಿ.ಎಸ್., ಪಿಸಿ ಮಲ್ಲಿಕಾರ್ಜುನ್ ಮಡಿವಾಳ, ಮಂಜುನಾಥ, ದೊಡ್ಡ ಬಸವ, ಚಂದ್ರಕಾಂತ, ಶಾಂತವೀರ, ರಾಜಕುಮಾರ ತಳವಾರ, ಪ್ರೇಮಕುಮಾರ, ವೀರಾರೆಡ್ಡಿ, ಭಗವಂತ, ಇಂದುಮತಿ ಮಪಿಸಿ ಹಾಗು ಡಬ್ಲು ಹೋಮಗಾರ್ಡ ಈರಮ್ಮ ಭಾಗಿಯಾಗಿದ್ದರು.  
          ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿತರಾದ ಹಣಮಂತ ತಂದೆ ಆಶಪ್ಪ, ಸೀನಪ್ಪ ತಂದೆ ರಾಮಲು, ಹಾಗು ಶರಣಪ್ಪ ತಂದೆ ಚನ್ನಪ್ಪ ಇವರ ಶೋಧ ಕಾರ್ಯ ಜಾರಿಯಲ್ಲಿ ಇರುತ್ತದೆ .ಸದರಿ ಆರೋಪಿತರನ್ನು ಕೂಡಲೇ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಲಾಗುವುದು.

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಶಂಕ್ರೆಪ್ಪ ಯಂಗಿನಮನೆ  ಸಾ|| ಮೇದಕ ತಾ|| ಸೇಡಂ ರವರ ಮಾವ ಮಲ್ಕಪ್ಪ ಮತ್ತು ಆತನ ಅಣ್ಣತಮ್ಮಂದಿರ ಮದ್ಯ ಹೊಲ ಹಂಚಿಕೆ ಮಾಡಿಕೊಳ್ಳುವ ವಿಷಯದಲ್ಲಿ ತಕರಾರಿದ್ದು ದಿನಾಂಕ 12-06-2019 ರಂದು 09-30 ಎ.ಎಂಕ್ಕೆ ನಮ್ಮ ಮಾವ ಮಲ್ಕಪ್ಪ, ಗಂಡ ಶಂಕ್ರೆಪ್ಪ ಮತ್ತು ಭಾವ ಚನ್ನಪ್ಪ ಮೇದಕ ಗ್ರಾಮದ ತಮ್ಮ ಹೊದಲ್ಲಿರುವಾಗ ಹಣಮಂತ ತಂದೆ ಆಶಪ್ಪ ಸಂಗಡ 07 ಜನರು ಸಾ|| ಎಲ್ಲರೂ ಮೇದಕ ತಾ|| ಸೇಡಂ ರವರು ಕುಡಿಕೊಂಡು  ಕೂಡಿ ಕೊಲೆ ಮಾಡುವ ಉದ್ದೇಶದಿಂದ ಕೊಡಲಿ, ಬಿಡಿಗೆ ಹಿಡಿದುಕೊಂಡು ಬಂದು ಮಲ್ಕಪ್ಪ, ಶಂಕ್ರೆಪ್ಪ ಮತ್ತು ಚನ್ನಪ್ಪ ಇವರೊಂದಿಗೆ ಜಗಳ ತೆಗೆದು ಕೊಡಲಿ ಬಡಿಗೆಯಿಂದ ಮೂವರಿಗೂ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆ  ಗುನ್ನೆ ನಂ.77/2019 ಕಲಂ.143,147,148,302 ಸಂ.149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 12-06-2019 ರಂದು ಬನ್ನೆಟ್ಟಿ ಗ್ರಾಮದ ಭೀಮಾ ನದಿಯಲ್ಲಿ ಟಿಪ್ಪರದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಅಫಜಲಪೂರ ಪಟ್ಟಣ ಕಡೆ ಬರುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನೆಟ್ಟಿ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಅಫಜಲಪೂರ ಘತ್ತರಗಾ ಗ್ರಾಮಕ್ಕೆ ಹೋಗುವ ರೋಡಿಗಿರುವ ಬನ್ನೆಟ್ಟಿ ಕ್ರಾಸ್ ಹತ್ತಿರ 6-20 ,ಎಮ್.ಕ್ಕೆ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟಿಪ್ಪರ ನಮ್ಮ ಎದುರುಗಡೆ ಬರುತ್ತಿದ್ದು ಟಿಪ್ಪರನ್ನು ನಿಲ್ಲಿಸಲು ಸೂಚನೆ ಕೊಟ್ಟಾಗ ಅದರ ಚಾಲಕನು ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಓಡಿ ಹೋದನು  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಕೆಎ-32 ಡಿ-1624 ಇದ್ದು  ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 85/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 12.06.2019 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಮೃತ ಗಿರೀಶ ಇತನು ತಾನೂ ಕೆಲಸ ಮಾಡುವ ಚೌಡಾಪೂರ ಗ್ರಾಮದ ಪೆಟ್ರೊಲ ಪಂಪದಿಂದ ಕಲಬುರಗಿ ಕಡೆಗೆ ಬರುವ ಕುರಿತು ತನ್ನ ಮೋಟಾರ ಸೈಕಲ ನಂ ಕೆಎ-32/ಇಯು-4149 ನೇದ್ದನ್ನು ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಹಡಗಿಲ ಹಾರುತಿ ಗ್ರಾಮದ ಕ್ರಾಸ ಹತ್ತೀರ ರೋಡ ಮೇಲೆ ರೋಡ ಪಕ್ಕದಲ್ಲಿರುವ ರೋಡಿಗೆ ಸಂಬಂದಿಸಿದ ಒಂದು ಕಲ್ಲಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದು ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಜಗದೇವಿ ಗಂಡ ಗಿರೀಶ ರೆಡ್ಡಿ  ಸಾ: ಫಾರೆಸ್ಟ  ಐಬಿ ಹತ್ತೀರ ಲಂಗಾರ ಹನುಮಾನ ನಗರ ನಿಜಾಮಪೂರ ರಿಂಗ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಠಾಣೆ ಗುನ್ನೆ ನಂ 72/2019  ಕಲಂ 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. 
ಸಂಚಾರಿ ಠಾಣೆ 02 : ದಿನಾಂಕ 12.06.2019 ರಂದು ಸಾಯಂಕಾಲ ಶ್ರೀ ಲಕ್ಷ್ಮಣ ತಂದೆ ಮರೆಪ್ಪಾ ಸೇಡಂಕರ ಸಾ : ಕುರಕುಂಟಾ ತಾ : ಸೇಡಂ ರವರ ಮಗ ಶ್ಯಾಮಕುಮಾರ ಇತನು ಮೋಟಾರ ಸೈಕಲ್ ನಂ KA32 W 4359 ನೇದ್ದನ್ನು ಸೇಡಂ ರೋಡದಿಂದ ಕಲಬುರಗಿ ರೋಡನಲ್ಲಿ ಬರುವ ಮದಿಹಾಳ ತಾಂಡಾ ಕ್ರಾಸ್ ಹತ್ತಿರ ರೋಡ ಮೇಲೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಬಸ್ ನಂ KA32 F 2069ನೇದ್ದರ ಚಾಲಕ ನಾಗಪ್ಪ ಈತನು ತನ್ನ ಬಸ್ಸನ್ನು ಅತೀ ವೇಗ & ಅಲಕ್ಷತನದಿಂದ ಚಲಾಯಿಸಕೊಂಡು ಬಂದು ಶ್ಯಾಮಕುಮಾರ ಇತನು ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಶ್ಯಾಮಕುಮಾರ ಈತನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರ ಗುನ್ನೆ ನಂ 95/2019 ಕಲಂ 279, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ 12-06-2019 ರಂದು  08-00 ಎ.ಎಂಕ್ಕೆ ಶ್ರೀಮತಿ ರಾಮಲಮ್ಮ ಗಂಡ ಸಾಯಪ್ಪ ಬಿಚಲ್ ಸಾ|| ದಮಗಾನಪೂರ (ತೆಲಂಗಾಣ) ಮತ್ತು  ಗಂಡ ಸಾಯಪ್ಪ, ಮಕ್ಕಳಾದ ಸಂಧ್ಯಾ, ಲಾವಣ್ಯ, ಸ್ವಾತಿ ಕೂಡಿ ಕಾರ ನಂ.ಎಂಹೆಚ್-04 ಹೆಚ್ಎಕ್ಸ್-4594 ನೇದ್ದರಲ್ಲಿ ಕಲಬುರಗಿ-ಆಳಂದ ರೋಡಿನ ಕಡಗಂಚಿ ಕೇಂದ್ರಿಯ ವಿಶ್ವವಿದ್ಯಾಲಯದ ಹತ್ತಿರ  ಹೋಗುತ್ತಿರುವಾಗ ಸಾಯಪ್ಪ ಇತನು ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಸಾಯಪ್ಪ ಮತ್ತು ಸಂಧ್ಯಾ ಇಬ್ಬರಿಗೂ ಭಾರಿಗಾಯವಾಗಿ ಮೃತಪಟ್ಟಿದ್ದು  ನನಗು  ಮತ್ತು ಲಾವಣ್ಯ, ಸ್ವಾತಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆ ಗುನ್ನೆ ನಂ . 85/2019 ಕಲಂ.279,337,338,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 12-06-2019 ರಂದು 04-00 ಪಿ.ಎಂಕ್ಕೆ ಶ್ರೀಮತಿ ಪ್ರಭಾವತಿ ಗಂಡ ಸಂಗಣ್ಣ ತಳವಾಡ ಸಾ|| ಭಟ್ಟರ್ಗಾ ತಾ|| ಆಳಂದ ರವರ  ಅಕ್ಕ ಕಸ್ತೂರಬಾಯಿ ಇವಳು ಹಿತ್ತಲಶಿರೂರ ಗ್ರಾಮದ ಕನಕದಾಸ ಚೌಕ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ ಸೈಕಲ್ ನಂ.ಕೆಎ-32 ಜಿಎ-9537 ನೇದ್ದರ ಸವಾರ ಸಿದ್ದಾರಾಮ ತಂದೆ ಶಿವಪುತ್ರ ಮೇತ್ರಿ ಸಾ|| ಯಳಸಂಗಿ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಡಿಕಿಪಡಿಸಿದ್ದರಿಂದ ಕಸ್ತೂರಬಾಯಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ.51/2019 ಕಲಂ.279,337,338,304(ಎ) ಐಪಿಸಿ ಸಂ.187 ಐ.ಎಂ.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ