ಪತ್ರಿಕಾ ಪ್ರಕಟಣೆ
ದಿನಾಂಕ: 12/06/2019 ರಂದು ಮೇದಕ ಗ್ರಾಮಲ್ಲಿ ಹೊಲದ ಹಂಚಿಕೆ ವಿಷಯ ಹಾಗು ಹಳೆಯ ಸಾಲ
50ಸಾವಿರ ಮರಳಿ ನೀಡುವ ವಿಷಯದಲ್ಲಿ ಗ್ರಾಮದ ಮಲ್ಕಪ್ಪ ತಂದೆ ಚಿನ್ನಯಾ ಹಾಗು ಅವನ ಉಳಿದ 05
ಜನ ಅಣ್ಣ ತಮ್ಮಂದಿರ ನಡುವೆ ತಕರಾರು ಇದ್ದು, ಇದಲ್ಲದೆ ಇದೇ ವಿಷಯಕ್ಕೆ ಗ್ರಾಮದಲ್ಲಿ ಪಂಚಾಯತಿ ಆಗಿದ್ದು, ಅದರಲ್ಲಿ ಮಲ್ಕಪ್ಪನಿಗೆ
ಅವನ ಅಣ್ಣ ತಮ್ಮಂದಿರು ಜಮೀನು ಪೋಡಿ ಖರ್ಚಿಗಾಗಿ ಬೇಕಾಗುವ ಹಣ ಕೊಡಬೇಕು ಹಾಗು ಹಳೆಯ ಬಾಕಿ 50 ಸಾವಿರ ರುಪಾಯಿಕೂಡ ಕೊಡಬೇಕು ಅಂತ ಪಂಚಾಯತಿಯಲ್ಲಿ ತೀರ್ಮಾನ ಆಗಿದ್ದು ಅದರಂತೆ ಮಲ್ಕಪ್ಪನು ತನ್ನ ಅಣ್ಣ ತಮ್ಮಂದಿರಿಗೆ ಜಮೀನು ಹಂಚಿಕೆ ಮಾಡಲು ತನಗೆ ಕೊಡಬೇಕಾದ ಹಳೆಯ ಬಾಕಿ 50 ಸಾವಿರ ರುಪಾಯಿ ಮತ್ತು ಪೋಡಿ ಮಾಡಿಕೊಡಲು ಬೇಕಾಗುವ ಹಣ ಕೊಡ್ರಿ ಅಂತ ಕೇಳುತ್ತಾ ಬಂದಿದ್ದು,
ಅದಕ್ಕೆ ಅವರೆಲ್ಲರೂ ಮಲ್ಕಪ್ಪನೊಂದಿಗೆ ನಾವು ಯಾವುದೇ ದುಡ್ಡು ಕೊಡುವುದಿಲ್ಲ ನೀನು ಜಮೀನು ಹೇಗೆ ಹಂಚಿ ಕೊಡುವುದಿಲ್ಲ ಅಂತ ತಕರಾರು ಮಾಡಿದು ಅವರ ನಡುವೆ ವೈಮನಸ್ಸು
ಉಂಟಾಗಿದ್ದು ಇರುತ್ತದೆ.
ಹೀಗಿದ್ದು
ನಿನ್ನೆ ದಿನಾಂಕ 12/06/2019 ರಂದು ಬೆಳಿಗ್ಗೆ
09:00 ಗಂಟೆಯ ಸುಮಾರಿಗೆ ಮಲ್ಕಪ್ಪ ಹಾಗು ಆತನ ಮಕ್ಕಳಾದ ಶಂಕ್ರೆಪ್ಪ ಹಾಗು ಚನ್ನಪ್ಪ ಇವರು ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ
ಮಲ್ಕಪ್ಪನ ಅಣ್ಣ ತಮ್ಮಂದಿರು ಹಾಗು ಅವರ ಕುಟುಂಬದವರಾದ 1] ಹಣಮಂತ ತಂದೆ ಆಶಪ್ಪ, 2]
ಆಶಪ್ಪ ತಂದೆ ಚಿನ್ನಯ್ಯಾ, 3] ರಾಮಲು ತಂದೆ ಚಿನ್ನಯ್ಯಾ 4] ಸೀನಪ್ಪ ತಂದೆ ರಾಮಲು, 5] ಶರಣಪ್ಪ ತಂದೆ ಚನ್ನಪ್ಪ,
6] ಪದ್ಮಮ್ಮ ಗಂಡ ಆಶಪ್ಪ, 7]
ಲಾಲಮ್ಮ ಗಂಡ ಶರಣಪ್ಪ, 8] ಪವಿತ್ರಾ ತಂದೆ ರಾಮಲು ಹೀಗೆ ಎಲ್ಲರೂ ಸೇರಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆಗಳಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಈ
ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 77/2019 ಕಲಂ
143. 147. 148. 302. ಸಂಗಡ 149 ಐಪಿಸಿ
ನೇದ್ದರಲ್ಲಿ 08 ಜನರ ವಿರುದ್ದ ಪ್ರಕರಣ
ದಾಖಲಾಗಿದ್ದು ಇರುತ್ತದೆ.
ಸದರಿ ಕೃತ್ಯ ನಡೆದ ಸ್ಥಳಕ್ಕೆ ಮಾನ್ಯ ಮನೀಷ್ ಖರ್ಬೀಕರ ಐ.ಪಿ.ಎಸ್ ಐ.ಜಿ.ಪಿ ಈಶಾನ್ಯ ವಲಯ, ಹಾಗು ಮಾನ್ಯ ಯಡಾ ಮಾರ್ಟಿನ್
ಮಾರ್ಬನ್ಯಾಂಗ್ ಐ.ಪಿ.ಎಸ್. ಎಸ್.ಪಿ ಕಲಬುರಗಿ ರವರು ಸ್ಥಳಕ್ಕೆ ಭೆಟಿ ನೀಡಿದ್ದು ಸದರಿ ಪ್ರಕರಣದಲ್ಲಿ
08 ಜನ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ
ಕಲಬುರಗಿ ರವರು ಮಾನ್ಯ ಎ.ಎಸ್.ಪಿ ಚಿಂಚೋಳಿ
ರವರ ಮಾರ್ಗದರ್ಶನದಲ್ಲಿ ಮುಧೋಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ತಮ್ಮರಾಯ ಪಾಟೀಲ ರವರ
ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಅದರಂತೆ ಇಂದು ದಿನಾಂಕ:
13/06/2019 ರಂದು ಪ್ರಕರಣ ಆರೋಪಿತರಾದ 1] ಆಶಪ್ಪ
ತಂದೆ ಚಿನ್ನಯ್ಯಾ ವಯ: 55, 2] ರಾಮಲು ತಂದೆ ಚಿನ್ನಯ್ಯಾ ಇವರನ್ನು
ತೆಲಂಗಾಣ ರಾಜ್ಯದ ವಿಠಲಾಪೂರ ಗ್ರಾಮದಿಂದ ಹಾಗು 3] ಪದ್ಮಮ್ಮ ಗಂಡ
ಆಶಪ್ಪ, 4] ಲಾಲಮ್ಮ ಗಂಡ ಶರಣಪ್ಪ, 5]
ಪವಿತ್ರಾ ತಂದೆ ರಾಮಲು ಇವರನ್ನು ಕಾನಾಗಡ್ಡ ಗ್ರಾಮದಿಂದ ಬೆಳಿಗ್ಗೆ 11:30 ಕ್ಕೆ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿ ಆರೋಪಿತರು ಮಾಡಿದ ಕೃತ್ಯವನ್ನು
ಒಪ್ಪಿಕೊಂಡಿದ್ದು ಹಾಗು ಅದಕ್ಕೆ ಬಳಸಿದ್ದ ಎರಡು ರಕ್ತ ಹತ್ತಿದ ಗಳೆಯ ಮೇಳಿಗಳು, ರಕ್ತ
ಹತ್ತಿದ ಒಂದು ಕೊಡಲಿ ಕಾವು ಮತ್ತು ರಕ್ತ ಹತ್ತಿದ ಒಂದು ಬಡಿಗೆಯನ್ನು ಜಪ್ತಿ ಪಡಿಸಿಕೊಂಡು ನಂತರ 05 ಜನ ಆರೋಪಿತರನ್ನು ಬಂಧನ ಕುರಿತು
ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇರುತ್ತದೆ. ಸದರಿ
ಕಾರ್ಯಾಚರಣೆಯಲ್ಲಿ ಮುಧೋಳ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಸಂಗಮೇಶ ಪ್ರೋ, ಪಿ.ಎಸ್.ಐ, ಪಿಸಿ ಮಲ್ಲಿಕಾರ್ಜುನ್ ಮಡಿವಾಳ, ಮಂಜುನಾಥ, ದೊಡ್ಡ ಬಸವ, ಚಂದ್ರಕಾಂತ, ಶಾಂತವೀರ,
ರಾಜಕುಮಾರ ತಳವಾರ, ಪ್ರೇಮಕುಮಾರ, ವೀರಾರೆಡ್ಡಿ, ಭಗವಂತ, ಇಂದುಮತಿ
ಮಪಿಸಿ ಹಾಗು ಡಬ್ಲು ಹೋಮಗಾರ್ಡ ಈರಮ್ಮ ಭಾಗಿಯಾಗಿದ್ದರು.
ಪ್ರಕರಣದಲ್ಲಿ ತಲೆ
ಮರೆಸಿಕೊಂಡ ಆರೋಪಿತರಾದ ಹಣಮಂತ ತಂದೆ ಆಶಪ್ಪ, ಸೀನಪ್ಪ ತಂದೆ ರಾಮಲು,
ಹಾಗು ಶರಣಪ್ಪ ತಂದೆ ಚನ್ನಪ್ಪ ಇವರ ಶೋಧ ಕಾರ್ಯ ಜಾರಿಯಲ್ಲಿ ಇರುತ್ತದೆ .ಸದರಿ ಆರೋಪಿತರನ್ನು ಕೂಡಲೇ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ
ಪಡಿಸಲಾಗುವುದು.
No comments:
Post a Comment