ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ನರೋಣಾ
ಠಾಣೆ : ಶ್ರೀ ಮಾರುತಿ ತಂ ಮೈಲಾರಿ ನಾಟೀಕರ, ಸಾ:ಲಿಂಗನವಾಡಿ ಇವರ ಮಗಳಾದ ಸುಜಾತಳಿಗೆ 7 ವರ್ಷಗಳ ಹಿಂದೆ ವ್ಹಿ ಕೆ ಸಲಗರ ಗ್ರಾಮದ ಶ್ರೀ
ಶಿವರಾಯ ತಂ ಖಂಡಪ್ಪ ಗದ್ಲೆಗಾಂವ ಸಾ: ವ್ಹಿ ಕೆ ಸಲಗರ ಇವರ ಮಗನಾದ ಗೋಪಾಲ ತಂ ಶಿವರಾಯ ಗದಲೆಗಾಂವ
ಈತನ ಜೊತೆ ಮದುವೆ ಮಾಡಿ ಕೊಟ್ಟಿದ್ದು, ಮದುವೆ ಆದ 2 ವರ್ಷ ಗಂಡ ಹೆಂಡತಿ ಸರಿಯಾಗಿ ಇದ್ದರು ಈಗ
5 ವರ್ಷಗಳಿಂದ ಮನೆಯಲ್ಲಿ ದಿನಾ ಮಗಳಿಗೆ ಜಾಚು ಮಾಡುತ್ತಿದ್ದರು ಬಂಗಾರ ತಗೆದುಕೊಂಡು ಬಾ 2 ಲಕ್ಷ
ರೂಪಾಯಿ ನಿನ್ನ ತಂದೆಯಿಂದ ತಗೆದುಕೊಂಡು ಬಾ ಎಂದು ದಿನನಿತ್ಯ ಮನೆಯಲ್ಲಿ ಅತ್ತೆಯಾದ ಶ್ರೀಮತಿ
1]ಕಾಶಿಬಾಯಿ ಗಂ ಶಿವರಾಯ 2]ಮಾವನಾದ ಶಿವರಾಯ ತಂ ಖಂಡಪ್ಪ, 3]ಅಳಿಯನಾದ ಗೋಪಾಲ ತಂದೆ ಶಿವರಾಯ, ಹಾಗೂ 4];ಲಕ್ಷ್ಮಣ ತಂ ಶಿವರಾಯ ಮತ್ತು ಲಕ್ಷ್ಮಣನ ಹೆಂಡತಿಯಾದ
5]ಲಲಿತಾಬಾಯಿ ಗಂ ಲಕ್ಷ್ಮೀಣ ಇವರೆಲ್ಲಾ ಸೇರಿ ದಿನನಿತ್ಯೆ ಹೊಡೆಯುವುದು ಬೈಯುವದು ಹೋಗು ನಾವು
ಹೇಳಿದಸ್ಟು ದುಡ್ಡು ನಿನ್ನ ತಾಯಿ-ತಂದೆಯಿಂದ ತಗೆದುಕೊಂಡು ಬಂದರೆ ಚಂದ, ಇಲ್ಲಾ ಅಂದರೆ ರಂಡಿ ದಿನಾ ಇದೆಗತಿ ಅಂತಾ ದಿನಾ ಎಲ್ಲರು ಕಿರಕುಳ ಕೊಡುತ್ತಿದ್ದರು.
ಮತ್ತು ಮನೆಯಲ್ಲಿ ಇನ್ನು ಇಬ್ಬರು ಹುಡಿಗಿಯರು ಕೂಡಾ ಇರುತ್ತಾರೆ ಶಿವರಾಯನ ಮೊಮ್ಮಕ್ಕಳಾದ 6]ಜೋತಿ
ತಂ ಹಣಮಂತ ಸಾ:ಸನಗುಂದಿ ಈ ಹುಡಗಿ ಕೂಡ ಸೋದರ ಮಾವನ ಜೊತೆ ಸೇರಿ ನನ್ನ ಮಗಳಿಗೆ ತೊಂದರೆ
ಕೊಡುತ್ತಿದ್ದರು. ಇದೆಲ್ಲಾ ನನ್ನ ಮಗಳು ಫೋನ ಮೂಲಕ ಹೇಳುತ್ತಿದ್ದಳು. ನಾನು 6 ತಿಂಗಳ ಹಿಂದೆ ಮಗಳ
ಮನೆಗೆ ಹೋಗಿ ಅಳಿಯನಿಗೆ ಬೀಗನಿಗೆ ಎಲ್ಲರಿಗೂ ಹೇಳಿ ನನ್ನ ಮಗಳಿಗೆ ನನ್ನ ಮನೆಗೆ ಕರೆದುಕೊಂಡು 6
ತಿಂಗಳ ನನ್ನ ಕಡೆ ಇಟ್ಟಿಕೊಂಡಿದ್ದೆ. 6 ತಿಂಗಳ ನಂತರ ಅಳಿಯ ಬಂದು ನನ್ನ ಹೆಂಡಿತಿಗೆ ಕರೆದುಕೊಂಡು
ಹೋಗುತ್ತೇನೆ ಸರಿಯಾಗಿ ಇಟ್ಟಿಕೊಳ್ಳುತ್ತೇನೆ ಎಂದು ದಿನಾಂಕ: 07/01/2016 ರಂದು ವ್ಹಿ ಕೆ
ಸಲಗರಕ್ಕೆ ಕರೆದುಕೊಂಡು ಹೋಗಿ 8 ದಿನದಲ್ಲಿ ಎಲ್ಲರು ಕೂಡಿ ನನ್ನ ಮಗಳಿಗೆ ನೇಣು ಹಾಕಿ
ಕೊಲೆಮಾಡಿರುತ್ತಾರೆ. ನಾನು ನನ್ನ ಮಗಳ ಲಗ್ನದಲ್ಲಿ ವರದಕ್ಷಿಣೆ 50,000/- ರೂಪಾಯಿ 25 ಗ್ರಾಮ ಬಂಗಾರ ಕೊಟ್ಟಿರುತ್ತೇನೆ. ಅದು ಅಲ್ಲದೇ ನನ್ನ ಮಗನ
ಲಗ್ನದಲ್ಲಿ ಅಳಿಯನಿಗೆ 5 ಗ್ರಾಮ ಬಂಗಾರ ಹಾಕಿರುತ್ತೇನೆ, ಇಷ್ಟೆಯಲ್ಲಾ ಕೊಟ್ಟರು ನನ್ನ ಮಗಳಿಗೆ ಬಂಗಾರ ದುಡ್ಡು ತಗೆದುಕೊಂಡು ಬಾ ಎಂದು ಕಿರಕುಳ
ಕೊಟ್ಟು ಕೊನೆಗೆ ನೇಣುಹಾಕಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಯಡ್ರಾಮಿ
ಠಾಣೆ : ದಿನಾಂಕ: 15-01-2016 ರಂದು ಬೆಳಗ್ಗೆ 4-30 ಗಂಟೆ
ಸುಮಾರಿಗೆ ನನ್ನ ಮಗ ನಿಂಗನಗೌಡ ಇತನು ವಾಕಿಂಗ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು.
ನಂತರ 6 ಗಂಟೆ ಸುಮಾರಿಗೆ ನಿಂಗನಗೌಢನ ಗೆಳೆಯ ಅನೀಲ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ ಇವನು
ಓಡುತ್ತಾ ನಮ್ಮ ಮನೆಗೆ ಬಂದು ಗಾಬರಿಯಲ್ಲಿ ಹೇಳಿದ್ದೇನೆಂದರೆ ನಾನು ಮತ್ತು ನಿಮ್ಮ ಮಗ ನಿಂಗನಗೌಡ
ಹಾಗೂ ನಮ್ಮೂರ ನನ್ನ ಗೆಳೆಯರಾದ ದೇವಿಂದ್ರ ಓವೂರ, ನಾಗರಾಜ ಕೊಳಿ , ರವಿ ಹಳ್ಳದ ಮನಿ ರವರೆಲ್ಲರೂ
ಕೂಡಿ ಬೆಳಗ್ಗೆ 4-30 ಗಂಟೆ ಸುಮಾರಿಗೆ ವಾಕಿಂಗ ಸಲುವಾಗಿ ನಮ್ಮೂರಿನಿಂದ ಸಿಂದಗಿ ಶಹಾಪೂರ
ರಸ್ತೆಯಲ್ಲಿರು ರಿಯಾಜ್ ಡೊಂಗರಗಾಂವ ರವರ ಪೆಟ್ರೊಲ್ ಪಂಪ ಹತ್ತಿರ ಹೋಗಿರುತ್ತೇವೆ ನಂತರ 5-30
ಗಂಟೆ ಸುಮಾರಿಗೆ ಸದರಿ ಪೆಟ್ರೋಲ್ ಹತ್ತಿರ ರಸ್ತೆಯ ಎಡಗಡೆ ನಾವೆಲ್ಲರೂ ನಿಂತಿದ್ದೇವು. ರಸ್ತೆಕಡೆ
ನಿಂಗನಗೌಡ ಇವನು ನಿಂತಿದ್ದು ಅದೇ ಸಮಯಕ್ಕೆ ಸಿಂದಗಿ ಕಡೆಯಿಂದ ಕಬ್ಬಿನ ಟ್ರ್ಯಾಕ್ಟರ ಅದರ ಚಾಲಕನು
ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಬಂದು ಡಿಕ್ಕಿ ಹೊಡೆದನು. ಆಗ ನಿಂಗನಗೌಢ ಆಯಾ ತಪ್ಪಿ
ಕೆಳಗೆ ಬಿದ್ದಾಗ ಟ್ರ್ಯಾಕ್ಟರ ಟ್ರ್ಯಾಲಿ ಗಾಲಿಯನ್ನು ಅವನ ತಲೆಯ ಮೇಲಿಂದ ಹಾದು ಹೋಗಿರುತ್ತದೆ.
ನಂತರ ಟ್ರ್ಯಾಕ್ಟರ ಚಾಲಕನಿಗೆ ಟ್ರ್ಯಾಕ್ಟರ ನಂಬರ ಕೇಳಲಾಗಿ ಕೆ.ಎ.-32 ಟಿ.ಎ-3693 ಅಂತಾ ಹೇಳಿ
ತನ್ನ ಟ್ರ್ಯಾಕ್ಟರ ತೆಗೆದುಕೊಂಡು ಜೋರಾಗಿ ಹೋದನು. ಅಂತಾ ಹೇಳಿದನು ನಂತರ ನಾನು ಮತ್ತು ನನ್ನ
ಹೆಂಡತಿ ಗಂಗಾಬಾಯಿ ಮತ್ತು ಅಣ್ಣ ತಮ್ಮಂದಿರಾದ ಗುರುಪ್ಪಗೌಡ ತಂದೆ ಬಸನಗೌಡ ಹಾಗೂ ಸಂಗನಗೌಡ ತಂದೆ
ಗೊಲ್ಲಾಳಪ್ಪ ರವರೆಲ್ಲರೂ ಕೂಡಿ ಸ್ಥಳಕ್ಕೆ ಹೋಗಿ ನೋಡಿದೇವು . ಅಲ್ಲಿ ರಸ್ತೆಯ ಎಡಗಡೆ ನನ್ನ ಮಗ ನಿಂಗನಗೌಡ ಇವನು ಮೃತಪಟ್ಟು ಬಿದ್ದಿದ್ದನು. ನಂತರ
ನೋಡಲಾಗಿ ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಪೂರ್ತಿ ಒಡೆದಿರುತ್ತದೆ. ಅಂತಾ ಶ್ರೀ ನಿಲಕಂಠ
ತಂದೆ ಗೊಲ್ಲಾಳಪ್ಪ ಪೊಲೀಸ್ ಪಾಟೀಲ್ ಸಾ:ಬಿರಾಳ ಹಿಸ್ಸಾ ತಾ:ಜೇವರಗಿ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ
ಠಾಣೆ : ದಿನಾಂಕ 14-01-2016 ರಂದು ಸಾಯಂಕಾಲ 7-00 ಗಂಟೆರ ಸುಮಾರಿಗೆ
ಜೇವರ್ಗಿ- ಶಹಾಪೂರ ಮೇನ್ ರೋಡ ಮುದಬಾಳ (ಬಿ) ಕ್ರಾಸ್ ಸಮೀಪ ರೋಡಿನಲ್ಲಿ ಮೀರಾಪಟೇಲ ತಂದೆ
ಚಾಂದಪಟೇಲ ಸಾ: ಬಿಳವಾರ ಈತನು ನಡೆಸುವ ಡಸ್ಟರ್ ಕಾರ ನಂ ಕೆಎ 32-ಎನ್-7191 ನೇದ್ದರಲ್ಲಿ ನಾನು
ಮತ್ತು ಸಿದ್ದಣ್ಣಗೌಡ ತಂದೆ ಸಿದ್ದಬಸಪ್ಪಗೌಡ ಕೂಡಲಗಿ, ಚೆನ್ನಪ್ಪ ತಂದೆ ರೇವಣಸಿದ್ದಪ್ಪ ಆನೂರ, ಶೀವನಗೌಡ ತಂದೆ ಪ್ರೇಮಣಗೌಡ ಪಾಟೀಲ ಎಲ್ಲರೂ ಕುಳಿತುಕೊಂಡು
ಹೋಗುತ್ತಿದ್ದಾಗ ಮೀರಾ ಪಟೇಲ ಈತನು ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಒಮ್ಮಲೇ
ಕಟ್ ಹೊಡೆದು ರೋಡಿನ ಬಲಸೈಡಿನಲ್ಲಿ ಪಲ್ಟಿ ಮಾಡಿದ್ದರಿಂದ ಸಿದ್ದಣ್ಣಗೌಡ ಕೂಡಲಗಿ ಈತನಿಗೆ ಭಾರಿ
ಗಾಯಗಳಾಗಿದ್ದರಿಂದ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಉಳಿದ
ನಮ್ಮೇಲ್ಲರೀಗೆ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ ಅಂತಾ ಶ್ರೀ ಬಸವಂತರಾಯ ತಂದೆ ಬಲವಂತರಾಯ
ಜ್ಯೋತೆಪ್ಪಗೌಡರ ಸಾ: ಅರಳಗುಂಡಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ದಿನಾಂಕ 11-01-2016 ರಂದು
ಅಂದಾಜ ರಾತ್ರಿ 9;00 ಗಂಟೆ ಸುಮಾರಿಗೆ ನಮ್ಮ ತಮ್ಮ
ಮಲ್ಲಿನಾಥ ಇವನು ನಮ್ಮ ಸಂಬಂಧಿಕರಾದ ಭೀಮರಾಯ
ಕಲಶೇಟ್ಟಿ ರವರ ಮೋಟರ ಸೈಕಲ್ ನಂ ಕೆ.ಎ-32/ಇ.ಎಫ್-1742 ನೇದ್ದನ್ನು ತೆಗೆದುಕೊಂಡು ತನ್ನ
ಸಂಗಡ ನಮ್ಮ ಗ್ರಾಮದ ಸಂಗಣ್ಣ ಕಲಶೇಟ್ಟಿ ಇತನಿಗೆ ಕರೆದುಕೊಂಡು ನಮ್ಮ ಹೊಲಕ್ಕೆ ಹೋಗುತ್ತೇನೆ ಅಂತ
ಹೇಳಿ ಹೋಗಿರುತ್ತಾನೆ ಹೋದ ಸ್ವಲ್ಪ ಸಮಯದಲ್ಲಿ ನಮ್ಮೂರ ನಿಂಗಣ್ಣ ತಂದೆ ಗೊಲ್ಲಾಳಪ್ಪ ಕಲಶೇಟ್ಟಿ
ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ನಮ್ಮೂರ ಪೀರಪ್ಪ
ಮಂದೇವಾಲ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮೂರ ಶರಣಪ್ಪ ಮಾಂಗ ರವರ
ಹೊಲದ ಹತ್ತಿರ ಇದ್ದಾಗ ನಮ್ಮ ಮುಂದೆ ಅದೇ ಸಮಯಕ್ಕೆ ಆನೂರ ಗ್ರಾಮ ಕಡೆಯಿಂದ ಒಂದು ಮೋಟರ ಸೈಕಲ
ಬರುತ್ತಿದ್ದು, ಸದರಿ ಮೋಟಾರ ಸೈಕಲ್ ಸವಾರನು
ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ತಮ್ಮ ಮೋಟಾರ
ಸೈಕಲ್ ಸ್ಕಿಡ್ಡಾಗಿ ಅಲ್ಲೆ ಲೈಟಿನ ಕಂಬದ ಹತ್ತಿರ ಜೋರಾಗಿ ಮೋಟಾರ ಸೈಕಲ ಸವಾರ ಹಾಗು ಅದರ ಹಿಂದೆ
ಹುಳಿತಿದ್ದವನು ಬಿದ್ದರು ಆಗ ನಾನು ಮತ್ತು ನನ್ನೊಂದಿಗೆ ಇದ್ದ ಪೀರಪ್ಪ ಮಂದೇವಾಲ
ಇಬ್ಬರು ಕೂಡಿ ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ನೋಡಿದಾಗ ಸವಾರನು ನಮ್ಮ ಗ್ರಾಮದ ಸಂಗಣ್ಣ ತಂದೆ
ಹಣಮಂತ್ರಾಯ ಕಲಶೇಟ್ಟಿ ಹಾಗೂ ಹಿಂದೆ ಕುಳಿತಿದ್ದವನು
ನಿಮ್ಮ ತಮ್ಮ ಮಲ್ಲಿನಾಥ ಇದ್ದನು, ಇಬ್ಬರಿಗೆ ನಾವು ನೋಡಲಾಗಿ
ಸಂಗಣ್ಣ ಇತನಿಗೆ ಸಣ್ಣಪುಟ್ಟ ತರಚಿದ ಗಾಯ ವಾಗಿದ್ದು ಮಲ್ಲಿನಾಥ ಇತನಿಗೆ ಅಲ್ಲೆ ಇದ್ದ ಲೈಟಿನ ಕಂಬದ ಗೈ ವಾಯರ್ ಕುತ್ತಿಗಿಗೆ
ತಗುಲಿ ಗಂಟಲ ಹತ್ತಿರ ಭಾರಿ ಗಾಯವಾಗಿದ್ದು ಹಾಗೂ ತಲೆಗೆ ರಕ್ತಗಾಯ ಮತ್ತು ಮೈಕೈಗೆ ತರಚಿದ
ಗಾಯಗಳಾಗಿರುತ್ತವೆ ಸದರಿ ಮೊಟಾರ ಸೈಕಲ್ ನಂಬರ ನೋಡಲಾಗಿ ಕೆಎ-32 ಇಎಫ್ 1742 ಇತ್ತು ಅಂತಾ ತಿಳಿಸಿದನು. ನಂತರ ನಾನು ಮತ್ತು ನಮ್ಮ
ಸಂಬಂಧಿಕರಾದ ಭೀಮರಾಯ ಕಲಶಟ್ಟಿ, ನಮ್ಮ ಅಣ್ಣನಾದ ಬಲಭೀಮ ಬಳೂಂಡಗಿ
ರವರೊಂದಿಗೆ ಒಂದು ಖಾಸಗಿ ವಾಹನ ತೆಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನಿಗೆ ಲೈಟಿನ
ಕಂಬದ ಗೈ ವಾಯರ್ ಕುತ್ತಿಗೆಗೆ ತಗುಲಿ ಗಂಟಲ ಹತ್ತಿರ ಭಾರಿ ಗಾಯವಾಗಿದ್ದು ಹಾಗೂ ತಲೆಗೆ ರಕ್ತಗಾಯ
ಮತ್ತು ಮೈಕೈಗೆ ತರಚಿದ ಗಾಯಗಳಾಗಿರುತ್ತವೆ ನಂತರ ನಮ್ಮ ತಮ್ಮ ಮಲ್ಲಿನಾಥನಿಗೆ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ.
ಅಂತಾ ಶ್ರೀ ಅಶೋಕ ತಂದೆ ಮೇಲಪ್ಪ ಬಳೂಂಡಗಿ ಸಾ||ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ನೆಲೋಗಿ
ಠಾಣೆ : ಶ್ರೀ ನಿಂಗಣ್ಣ ತಂದೆ ಭೀಮರಾಯ
ಹೊಸ್ಮನಿ ಸಾ||
ಕಲ್ಲಹಂಗರಗಾ ತಾ-ಜೇವರ್ಗಿ
ಜಿ-ಕಲಬುರ್ಗಿ ಇವರ ತಂದೆ ತಾಯಿಗೆ ನಾನು ಮತ್ತು ಸಂಗಣ್ಣ ಅಂತಾ ಇಬ್ಬರೂ ಗಂಡು ಮಕ್ಕಳು
ಇರುತ್ತೇವೆ. ನಮ್ಮ ತಾಯಿಯವರು ಕಳೆದ 5 ವರ್ಷದ ಹಿಂದೆ ತೀರಿಕೊಂಡಿದ್ದು ಇರುತ್ತದೆ. ನಮ್ಮ
ತಂದೆಯವರ ಹೆಸರಿನಿಂದ ನೆಲೋಗಿ ಸೀಮಾಂತರದಲ್ಲಿ ಜಮೀನು ಸರ್ವೇ ನಂ. 164 ವಿಸ್ತಿರ್ಣ 4 ಎಕರೆ 14
ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ಈ ವರ್ಷ ತೋಗರಿ ಬೆಳೆ ಹಾಕಿದ್ದು ಇರುತ್ತದೆ.
ತೊಗರೆ ಬೆಳೆ ಚನ್ನಾಗಿ ಬರೆದೆ ನಮ್ಮ ತಂದೆಯವರು ಕೃಷಿಗಾಗಿ ಹಾಗೂ ಸಂಸಾರದ ಅಡಚಣೆಗಾಗಿ ಊರ ಜನರ
ಹತ್ತಿರ ಕೈಗಡದ ಹಾಗೆ ತಂದಿರುವ 5,00,000=00ನ ರೂಪಾಯಿ ಹೇಗೆ
ತೀರಿಸಬೇಕು ಅಂತಾ ಯಾವಾಗಲು ಚಿಂತೆ ಮಾಡುತ್ತಾ ಕುಳಿತುಕೊಳ್ಳುತಿದ್ದರು, ನಾನು ನಮ್ಮ ಅಜ್ಜಿ ಭೀಮಬಾಯಿ, ನನ್ನ ಅಣ್ಣ ನಿಂಗಣ್ಣ ತಂದೆ
ಬಸಣ್ಣ ಎಲ್ಲರೂ ನಮ್ಮ ತಂದೆಯವರಿಗೆ ತಿಳಿ ಹೇಳಿ ಮುಂದಿನ ವರ್ಷ ತಿರಿಸಿದರಾಯಿತು ಅಂತಾ
ಹೇಳಿದ್ದೆವು.
ಆದರು ನಮ್ಮ ತಂದೆಯವರು ಮಾಡಿದ
ಸಾಲ ಹೇಗೆ ತೀರಿಸಬೇಕು ಅಂತಾ ಚಿಂತಿಸುತಿದ್ದರು. ದಿನಾಂಕ: 14/01/2016 ರಂದು ರಾತ್ರಿ 10-00
ಪಿ.ಎಮ್ ಕ್ಕೆ ಎಂದಿ ನಂತೆ ನಾನು ನನ್ನ ತಂದೆ ಭೀಮರಾಯ, ಅಜ್ಜಿ ಭೀಮಬಾಯಿ ನಮ್ಮ ತಮ್ಮ ಸಂಗಣ್ಣ ಎಲ್ಲರೂ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆವು ನಮ್ಮ
ತಂದೆಯವರು ಊಟ ಸರಿಯಾಗಿ ಮಾಡದೆ ಹಾಗೆ ಮಲಗಿಕೊಂಡಿದ್ದರು, ದಿನಾಂಕ: 15-01-2016 ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ನಮ್ಮ
ತಂದೆಯವರ ಬಾಯಿಯಿಂದ ನೊರೆ ಬರುತ್ತಿತ್ತು. ಆಗ ನಾನು ಗಾಬರಿಯಾಗಿ ಚಿರಾಡುತಿದ್ದಾಗ ನಮ್ಮ ಅಜ್ಜಿ
ಮತ್ತು ನಮ್ಮ ತಮ್ಮ ಸಂಗಣ್ಣ ಎಲ್ಲರೂ ಬಂದು ನೋಡುವಷ್ಟರಲ್ಲಿ ನಮ್ಮ ತಂದೆ ಭೀಮರಾಯ
ತೀರಿಕೊಂಡಿದ್ದರು. ನಮ್ಮ ತಂದೆಯವರು ಕೃಷಿಗಾಗಿ ಮತ್ತು ಸಂಸಾರದ ಅಡಚಣೆಗಾಗಿ ಊರ ಮನೆಯವರ ಹತ್ತಿರ
ಮಾಡಿದ 5,00,000=00 ರೂಪಾಯಿ ಸಾಲದ, ಈ ವರ್ಷ ಮಳೆ ಬರದೆ ಬೆಳೆ
ಬೆಳೆಯದೆ ಸಾಲದ ಹಣ್ಣ ಹೇಗೆ ತೀರಿಸಬೇಕು ಅಂತಾ ಮಾಡಿದ ಸಾಲವನ್ನು ತೀರಿಸಲಾಗದೆ ಮನಃನೊಂದು
ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು:
ರೇವೂರ ಠಾಣೆ : ಶ್ರೀಮತಿ ಶಶಿಕಲಾ ಗಂಡ ಆದಪ್ಪಗೌಡ
ಹಿರಿಗೊಡ ಸಾ:ಭೈರಾಮಡಗಿ ಇವರನ್ನು. ನನ್ನ
ತಂದೆಯಾದ ಬಸವರಾಜ ಮುಗಳಿ ರವರು ನನಗೆ ನಮ್ಮ ಗ್ರಾಮದ ನನ್ನ ಸೊದರತ್ತೆಯ ಮಗನಾದ ಆದಪ್ಪಗೌಡ ತಂದೆ
ದುಂಡಪ್ಪ ಹಿರಿಗೊಡ ರವರೊಂದಿಗೆ 5 ವರ್ಷಗಳ ಹಿಂದೆ ನಮ್ಮ ಸಂಪ್ರದಾಯದಂತೆ 2 ವರೆ ತೋಲೆ ಬಂಗಾರ
ಮತ್ತು 21 ಸಾವಿರ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ.ಮದುವೆಯಾದ 3 ವರ್ಷಗಳವರೆಗೆ ನನ್ನ ಗಂಡ ಹಾಗೂ ಗಂಡನ
ಮನೆಯವರು ಚನ್ನಾಗಿ ನೊಡಿಕೊಂಡು ನಂತರ ನನ್ನ ಗಂಡ
ಹಾಗೂ ಅತ್ತೆಯಾದ ಕಸ್ತೂರಿ ಬಾಯಿ ಮತ್ತು ಮಾವನಾದ ದುಂಡಪ್ಪ ರವರು ನಿಮ್ಮಪ್ಪನ ಮನೆಯಿಂದ 50 ಸಾವಿರ
ರೂಪಾಯಿ ಹುಂಡಾ ತೆಗೆದುಕೊಂಡು ಬಾ ಅಂತಾ ಹೇಳಿ
ನನಗೆ ಹೊಡೆಬಡೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸಿಕವಾಗಿ ಮತ್ತು
ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ಆದರೆ ಇವರು ಇಂದು ನಾಳೆ ಸರಿ ಹೋಗಬಹುದೆಂದು
ನಾನು ಕೂಡಾ ತಾಳಿಕೊಂಡು ಬಂದಿರುತ್ತೇನೆ. ಈ ವಿಷಯ ನಮ್ಮ
ತಂದೆ ತಾಯಿಯವರಿಗೆ ಗೋತ್ತಾಗಿ ಅವರ ನನ್ನ ಗಂಡನಿಗೆ ಮತ್ತು ಅತ್ತೆ ಮಾವರಿಗೆ
ನಿಮಗೆ ಗೊತ್ತಿದೆ ನಾವು ಬಡವರಿದ್ದೆವು ಮೇಲಾಗಿ ಸಂಧಿಕರಿದ್ದೇವು ಈ ರೀತಿ ನಮ್ಮ
ಮಗಳಿಗೆ ಕಿರುಕುಳ ನೀಡಬೇಡಿ ಅಂತಾ ಹೇಳಿದಾಗ ಅವರ
ನಮ್ಮ ತಂದೆ ಯವರಿಗೆ ವರದಕ್ಷಿಣೆ ಕೊಟ್ಟು ಆ ಮೇಲೆ ನೀವು ನಮ್ಮ ಮನೆಗೆ ಬನ್ನಿ ಇಲ್ಲವಾದರೆ ನನ್ನ
ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಹೇಳುತ್ತಾ ಬಂದಿರುತ್ತಾರೆ. ದಿನಾಂಕ:13-01-2016 ರಂದು ರಾತ್ರಿ 9
ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನು ನನಗೆ ಏ ರಂಡಿ ನಿಮ್ಮಪ್ಪನ ಮನೆಯಿಂದ 50 ಸಾವಿರ ರೂಪಾಯಿ
ವರದಕ್ಷಿಣೆ ತಗೆದುಕೊಂಡು ಬಾ ಅಂತಾ ಹೇಳಿದರು ಕೂಡಾ ಮನೆಯಲ್ಲಿಯೇ ಇದ್ದಿಯಾ ಅಂತಾ ಬೈದು
ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು ಆಗ ನನ್ನ
ಅತ್ತೆಯು ರಂಡಿ ನಿಮ್ಮಪ್ಪನ ಮನೆಗೆ ಹೋಗು ಹಣ
ತರುವುದಾದರೆ ಈ ಮನೆಗೆ ಬಾ ಅಂತಾ ಅಂದು ನನ್ನ
ತಲೆಯ ಮೇಲಿನ ಕೂದಲು ಹಿಡಿದು ಎಳೆದು ಮನೆಯಿಂದ
ಹೊರೆಗೆ ಹಾಕಿದಳು ಆಗ ನನ್ನ ಭಾವನಾದ ಹಣಮಂತನು
ನನಗೆ ಈ ರಂಡಿಗೆ ಎಷ್ಟು ಸಲ ಹೇಳಿದರು ಕೇಳುತ್ತಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದನು
ಆಗ ನನ್ನ ಮಾವನು ನನಗೆ ಏ ರಂಡಿ ನಿನ್ನ ಮನೆಯಿಂದ
50 ಸಾವಿರ ರೂಪಾಯಿ ತರದೆ ಮನೆಗೆ ಬರಬೇಡ ಬಂದರೆ ನಿನಗೆ
ಜೀವ ಸಹಿತ ಬಿಡುವದಿಲ್ಲ ಖಲಾಸ
ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಭಯ ಹಾಕಿದನು ಆಗ ನಮ್ಮ ಸಂಬಂದಿಕರಾದ ದತ್ತಪ್ಪಾ ತಂದೆ ಮಲಕಣ್ಣಾ ಮುಗಳಿ
ಮತ್ತು ಬಸಮ್ಮ ಗಂಡ ಲೊಕಪ್ಪಾ ಮುಗಳಿ
ಹಾಗೂ ನಮ್ಮ ಗ್ರಾಮದವರಾದ ಬಸವಂತರಾಯ ತಂದೆ ಮಲಕಣ್ಣ ಮುಗಳಿ ರವರು ಬಂದು ಜಗಳ ಬಿಡಿಸಿರುತ್ತಾರೆ.
ಆಗ ನಾನು ನೇರವಾಗಿ ನನ್ನ ತಂದೆಯ ಮನೆಗೆ ಹೋಗಿ ಸದರಿ ವಿಷಯವನ್ನು ನನ್ನ ತಂದೆ ಹಾಗೂ ತಾಯಿಯವರಿಗೆ ತಿಳಿಸಿ ಅವರೊಂದಿಗೆ ಚರ್ಚಿಸಿ ಇಂದು
ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿದ್ದೆನೆ. ನನಗೆ ಯಾವ ಗಾಯ ವಗೈರೆ ಯಾಗದ
ಕಾರಣ ಆಸ್ಪತ್ರೆಗೆ ತೋರಿಸುವ ಅವಶ್ಯಕತೆ
ಇರುವುದಿಲ್ಲಾ, ಕಾರಣ ವರದಕ್ಷಿಣೆ ಸಲುವಾಗಿ ನನಗೆ ಅವಾಚ್ಯ ಶಬ್ದಗಳಿಂದ ಬೈದು
ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ
ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಅನಿತಾ ಗಂಡ ಅಂಭಾದಾಸ
ಗಡೇಕರ ಸಾ:ಅಣಕಲ್ ತಾ:ಚಿತ್ತಾಪುರ ಜಿ:ಕಲಬುರಗಿ ಹಾ:ವ:ಮಾಣಿಕೇಶ್ವರಿ ಕಾಲೋನಿ ಇವರ ಮದುವೆ ಅಂಭಾದಾಸ ತಂದೆ ದಯಾನಂದ ಸಾ:ಅಣಕಲ ತಾ:ಚಿತ್ತಾಪುರ ಜಿ:ಕಲಬುರಗಿ ಇವರ
ಜೊತೆ 2ನೇ ವಿವಾಹ ವಾಗಿರುತ್ತದೆ.
ನನ್ನ ವಿವಾಹವಾಗುವದಕ್ಕಿಂತ ಮುಂಚೆ ನನ್ನ ಅಕ್ಕಳಾದ ಸುನೀತಾ ಇವಳ ಮದುವೆ ಕೂಡಾ ಅಂಭಾದಾಸ ಜೊತೆ 20/05/2005
ರಲ್ಲಿ ನಮ್ಮ ಹಿರಿಯರ ಸಮ್ಮುಖದಲ್ಲಿಯಾಗಿರುತ್ತದೆ. ಸುಮಾರು 5 ವರ್ಷಗಳ ಕಾಲ ಅಣಕಲ್, ಗುರುಮೀಠಕಲ್, ಹಾಗೂ ಬೆಂಗಳೂರಿನಲ್ಲಿ ಇರುತ್ತಿದ್ದರು ನನ್ನ ಅಕ್ಕಳಿಗೆ 2 ಮಕ್ಕಳು ಆಗಿರುತ್ತವೆ. ಒಂದು ಗಂಡು ಒಂದು ಹೆಣ್ಣು ದಿನಾಂಕ:26/01/2011
ರಂದು ಬೆಂಗಳೂರಿನಲ್ಲಿ ಅಂಭಾದಾಸನು ನನ್ನ ಅಕ್ಕನಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿರುತ್ತಾನೆ. ಉಪಚಾರ
ಕುರಿತು ವಿಕ್ಟೋರಿಯಾ
ಆಸ್ಪತ್ರೆಯಲ್ಲಿ ದಾಖಲು ಮಾಡಿ ದಿನಾಂಕ:30/11/2011 ರಂದು ನನ್ನ ಅಕ್ಕ ಮೃತ ಪಟ್ಟಿರುತ್ತಾಳೆ. ನನ್ನ ಅಕ್ಕನ ಶವವನ್ನು ಅಣಕಲ್ ಗ್ರಾಮಕ್ಕೆ ತಂದು ಶವ ಸಂಸ್ಕಾರ
ಮಾಡಿರುತ್ತಾರೆ. ನನ್ನ ಭಾವ ಅಂಭಾದಾಸ
ನನ್ನ ತಂದೆ-ತಾಯಿಗೆ ಹೇಳಿದ್ದೆನೆಂದರೆ ನನ್ನ ಮಕ್ಕಳಿಗೆ ನೋಡಿಕೊಳ್ಳುವರು ಯಾರು ಇಲ್ಲಾ
ಅದಕ್ಕಾಗಿ ನಿಮ್ಮ ಎರಡನೇ ಮಗಳಾಸ ಅನೀತಾಳ ಜೊತೆಗೆ ನನಗೆ ಎರಡನೇ ಮದುವೆ ಮಾಡಿ ಎಂದು ಮನ ಒಲಿಸಿದಾಗ ನನ್ನ
ತಂದೆ-ತಾಯಿಯವರು ನಿನ್ನ ಅಕ್ಕನ ಮಕ್ಕಳನ್ನು ನೋಡುವರು ಯಾರು ಇಲ್ಲಾ ಅಂತಾ ಹೇಳಿ ಆತನ
ಜೊತೆಯಲ್ಲಿ ದಿನಾಂಕ:10/09/2012 ರಂದು ಮದುವೆ ಮಾಡಿಕೊಟ್ಟಿರುತ್ತಾರೆ. ನನ್ನ ಗಂಡ ಅಂಭಾದಾಸ ಈತನು ದಿನಾಲು ಕುಡಿದು ಬಂದು ಏ ರಂಡಿ ಮಗಳೆ ಭೋಸಡಿ ಮಗಳೆ ನೀನು ನಿನ್ನ ತವರು
ಮನೆಯಿಂದ 3 ಲಕ್ಷ ರೂಪಾಯಿ ತರದೆ
ಇದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಸಾಕಷ್ಟು ಸಾರಿ ಭಯಾ ಹಾಕಿದ್ದಾನೆ. ಅಲ್ಲದೆ ನೀನು ತವರು
ಮನೆಯಿಂದ 3 ಲಕ್ಷ ರೂಪಾಯಿ
ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡುತ್ತಿದ್ದಾನೆ. ಸುಮಾರು 2 ತಿಂಗಳ ಹಿಂದೆ ನಾನು
ನನ್ನ ಗಂಡನಾದ ಅಂಭಾದಾಸ ನಮ್ಮ ಊರಾದ ಅಣಕಲ ಗ್ರಾಮಕ್ಕೆ ಹೋಗಿದ್ದು ನನ್ನ ಮಾವನಾದ ದಯಾನಂದ ತಂದೆ ಜಂಪಣ್ಣಾ, ನನ್ನ ಅತ್ತೆಯಾದ ಇಟಾಬಾಯಿ ಗಂಡ ದಯಾನಂದ ಇಬ್ಬರೂ ಕೂಡಿಕೊಂಡು ಏ ರಂಡಿ ಮಗಳೆ ಸೂಳೆ ಮಗಳೆ ಅಂತಾ ಅವಾಚ್ಯ ಶಬ್ದಗಳಿಂದ
ಬೈಯುತ್ತಾ ನೀನು ತವರು ಮನೆಗೆ
ಹೋಗಿ ಬೆಳ್ಳಿ ಮತ್ತು ಬಂಗಾರ ತರದೆ ಇದ್ದರೆ ನಿನಗೆ ನನ್ನ ಮಗನ ಜೊತೆ ಸಂಸಾಗ ಮಾಡಲು
ಬಿಡುವದಿಲ್ಲಾ ಅಂತಾ ಬೈಯುತ್ತಿದ್ದಾರೆ. ಮತ್ತು ನನ್ನ ಭಾವನಾದ ರಾಮಕೃಷ್ಣ ತಂದೆ ದಯಾನಂದ, ಆತನ ಹೆಂಡತಿ ಯಮುನಾ ಗಂಡ ರಾಮಕೃಷ್ಣ ಇವರು ಕೂಡಾ ಸೂಳಿ ರಂಡಿ ಎಂದು ಬೈದು ಇವಳಿಗೆ
ಮನೆಯಲ್ಲಿ ಊಟ ಕೊಡಬೇಡಿರಿ ಏನಾದರೂ
ದುಡ್ಡು ತರದೆ ಹೋದರೆ ನಿನ್ನನ್ನು ಸಾಯಿಸಿ ಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಈ
ಬಗ್ಗೆ ನಾನು ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ತಾಳುತ್ತಾ ಸಾಕಷ್ಟು ಬಾರಿ ಪೊಲೀಸರಿಗೆ ದೂರು
ನೀಡಬೇಕೆಂದಿದ್ದೆ ಆದರೆ ನನ್ನ ಅಕ್ಕನ ಮಕ್ಕಳ ಮಾರಿ ನೋಡಿ ಸುಮ್ಮನೆ ಆಗಿದ್ದೇನೆ. ನಾವು ನಮ್ಮ
ತಂದೆಯವರ ಸ್ವಂತ ಮನೆಯಾದ ಕಲಬುರಗಿ ನಗರದ ಬ್ರಹ್ಮಪೂರ ಬಡವಾಣೆಯ ಮಾಣಿಕೇಶ್ವರಿ ಕಾಲೋನಿಯಲ್ಲಿ
ವಾಸವಾಗಿರುತ್ತೇವೆ. ಪ್ರತಿನಿತ್ಯ ನನಗೆ ನಿಮ್ಮ ಅಪ್ಪನಿಗೆ ಹೇಳಿ ಬೈಕ ಖರೀದಿಸಿ ಕೊಡಿಸು ಮತ್ತು
ಕಲಬುರಗಿಯಲ್ಲಿ ನಿಮ್ಮ ತಂದೆಯವರ ಹೆಸರಿಗೆ ಇರುವ ಮನೆಯನ್ನು ನನ್ನ ಹೆಸರಿಗೆ ಮಾಡಿಸಿಕೊಡು ಅಂತಾ
ಪ್ರತಿನಿತ್ಯ ಮಾನಸಿಕ ತೊಂದರೆ ಕೊಡುತ್ತಿದ್ದಾನೆ ಈ ಘಟನೆಯು ನಮ್ಮ ಪಕ್ಕದ ನೆರೆಹೊರೆಯವರಾದ
ಆನಂದ ಹಾಗೂ ಅರ್ಚನಾ ಶಿವಶರಣಪ್ಪಾ ಇವರು ನೋಡಿರುತ್ತಾರೆ. ದಿನಾಂಕ:09/01/2016
ರಂದು ನಾನು ನನ್ನ ಗಂಡನ ಅನುಮತಿ ಪಡೆದು ಹೊಟೇಲನಲ್ಲಿ ಕೆಲಸ
ಮಾಡುತ್ತಿರುವಾಗ 10.00 ಗಂಟೆಗೆ ನನ್ನ ಗಂಡ ಕುಡಿದು ಬಂದು
ನನಗೆ ಹೊಡೆಬಡೆ ಮಾಡಿರುತ್ತಾನೆ. ಮತ್ತು ಹೊಟೇಲನಿಂದ ಮನೆಯವರೆಗೆ ಹೊಡೆಬಡೆ ಮಾಡುತ್ತಾ
ಕರೆದುಕೊಂಡು ಹೋಗಿರುತ್ತಾನೆ. ನಾನು ಈ ಬಗ್ಗೆ ನನ್ನ ಅಣ್ಣನಾದ ಮಾಧವ ಇವರಿಗೆ ತಿಳಿಸಿದಾಗ ನನ್ನ
ಗಂಡನು ಕಲಬುರಗಿಗೆ ಬಂದಿರುತ್ತಾನೆ. ಮತ್ತು ನನಗೆ ನನ್ನ ಗಂಡ ಮನೆಯ ಒಳಗೆ ಕರೆದುಕೊಂಡು ಹೋಗಿ
ಹೊಟ್ಟೆಗೆ ಹಾಗೂ ಬೆನ್ನಿಗೆ ಹೊಡೆದಿರುತ್ತಾನೆ. ಮತ್ತು ಸುಮಾರು ಒಂದು ಗಂಟೆಗಳ ಕಾಲ ಹೀಗೆ
ಹೊಡೆಯುತ್ತಾ ನನ್ನ ಕುತ್ತಿಗೆ ಹಿಡಿದು ಹಿಚುಕಿ ಸಾಯಿಸುವ ಸಂದರ್ಭದಲ್ಲಿ ನಾನು ನನ್ನ ಕೈಯಿಂದ ಆತನ
ಮುಖಕ್ಕೆ ಉಗುರಿನಿಂದ ಚಿವರಿ ಬಿಡಿಸಿಕೊಂಡು ಹೊರಗೆ ಹೋಗುವ ಸಂದರ್ಭದಲ್ಲಿ ಮತ್ತೆ ನನಗೆ ಹಿಡಿದು ಒಳಗೆ
ಕರೆದುಕೊಂಡು ಹೋಗಿ ಸೀಮೆ ಎಣ್ಣೆ ಡಬ್ಬಿ ತೆಗೆದುಕೊಂಡು ನನ್ನ ಮೈಮೇಲೆ ಸುರಿದಿರುತ್ತಾನೆ. ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವಾಗ ಹೀಗೆ ನಿನ್ನ ಅಕ್ಕನಿಗೆ ಇದೆ
ರೀತಿ ಬೆಂಕಿ ಹಚ್ಚಿ
ಸಾಯಿಸಿರುತ್ತೇನೆ ನಿನಗೂ ಕೂಡಾ ಇದೆ ರೀತಿ ಬೆಂಕಿ ಹಚ್ಚಿ ಸಾಯಿಸುತ್ತೇನೆ ಅಂತಾ ಹೇಳಿದಾಗ ನಾನು
ಕೂಡಲೆ ಆತನ ಕೈಯಿಂದ ಬಿಡಿಸಿಕೊಂಡು ಓಡುತ್ತಿರುವಾಗ ನಮ್ಮ ಅಣ್ಣ ಮಾಧವ ಬಿಡಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಠಾಣೆ : ಶ್ರೀಮತಿ ಖೈರುನ್ನಿಸಾ ಗಂಡ ಮಹ್ಮದ ಹುಸೇನ ಸಾ:ಗವಂಡಿ ಬೈಗನ್ ವಾಡಿ ಪ್ಲಾಟ ನಂ:14 ಡಿ3 ಹುಸೇನ ಗೋರಿಯಾ ರೋಡ ನಂ:10 ಬಾಂಬೆ ಮಹಾರಾಷ್ಟ್ರ ಹಾ:ವ: ಐಲಿಯಾ ಮಜೀದ ಹತ್ತಿರ
ಸಂತ್ರಾಸವಾಡಿ ಕಲಬುರಗಿ ಇವರು ಸುಮಾರು 6 ವರ್ಷಗಳ ಹಿಂದೆ ಮಹ್ಮದ ಹುಸೇನ ಒಬ್ಬರಿಗೊಬ್ಬರೂ
ಪ್ರೀತಿಸಿ ದಿನಾಂಕ 19-06-2003 ರಂದು ಖಾಜಿ ಹತ್ತಿರ
ಬಾಂಬೆಯಲ್ಲಿ ನಮ್ಮ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುತ್ತೇವೆ. ಮದುವೆಯಾದ ಸುಮಾರು 15 ದಿವಸಗಳ ವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ತದನಂತರ ನನ್ನ ಗಂಡ ಮಹ್ಮದ ಹುಸೇನ ಇತನು ನನಗೆ ನಾನು ದುಡ್ಡಿನ
ಸಲುವಾಗಿ ನಿನಗೆ ಮದುವೆ ಮಾಡಿಕೊಂಡಿರುತ್ತೇನೆ ನಿನ್ನ ತವರು ಮನೆಯಿಂದ ನನಗೆ 2 ಲಕ್ಷ ರೂಪಾಯಿ ಹಣ ತಂದು ಕೊಡು ಅಂತಾ ಜಗಳ ತೆಗೆದು ಹೊಡೆ ಬಡೆ
ಮಾಡಲು ಪ್ರಾರಂಭಿಸಿದನು. ಮತ್ತು ನನಗೆ ಬೇರೆಯವರ ಮನೆಯಲ್ಲಿ ಬಟ್ಟೆ, ಬಾಂಡೆ ಮಾಡುವ ಕೆಲಸಕ್ಕೆ ಹಚ್ಚಿ ನಾನು ದುಡಿದ ಹಣವೆಲ್ಲಾ ತಾನೇ
ತೆಗೆದುಕೊಳ್ಳುತ್ತಿದ್ದನು. ಮತ್ತು ನನ್ನ ಸವತಿ ರಿಹಾನಾ ಹಾಗೂ ಅವಳ ತಮ್ಮ ಮೈನು , ನಾದಿನಿ ಆಶಾ ಇವರು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಈ
ಮನೆಯಲ್ಲಿ ಇರಬೇಡ ಅಂತಾ ಬೈಯುತ್ತಿದ್ದರು. ಹಾಗೂ ನನ್ನ ಗಂಡ ಮಹ್ಮದ ಹುಸೇನ ಇತನು ನನಗೆ ಹೊಡೆ ಬಡೆ
ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದನು. ದಿನಾಂಕ 30-09-2015 ರಂದು ನನಗೆ ಹೊಡೆ ಬಡೆ ಮಾಡಿ ನನ್ನ ತವರು ಮನೆಯಾದ ಕಲಬುರಗಿಯ ಸಂತ್ರಾಸವಾಡಿಗೆ ತಂದು
ಬಿಟ್ಟು ಹೋದನು. ದಿನಾಂಕ 10-01-2016 ರಂದು 7-00 ಪಿ.ಎಮ್ ಕ್ಕೆ ನನ್ನ ಗಂಡನಾದ ಮಹ್ಮದ ಹುಸೇನ ಇತನು
ಸಂತ್ರಾಸವಾಡಿಯ ನನ್ನ ತವರು ಮನೆಗೆ ಬಂದು ರಂಡಿ ನೀನು ಇಲ್ಲೇ ಇರು ನನ್ನ ಹತ್ತಿರ ಬರಬೇಡ ನೀನು 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಂದರೆ ಮಾತ್ರ ನಿನಗೆ
ಕರೆದುಕೊಂಡು ಹೋಗಿ ಬೇರೆ ಮನೆ ಮಾಡಿ ಇಡುತ್ತೇನೆ. ಬರಿಗೈಲ್ಲೇ ಬಂದರೆ ನಿನಗೆ ಜೀವ ಸಹಿತ
ಬಿಡುವುದಿಲ್ಲ ಅಂತಾ ಹೊಡೆ ಬಡೆ ಮಾಡಿರುತ್ತಾನೆ.ಕಾರಣ ಮದುವೆಯಾದಾಗಿನಿಂದ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು
ದೈಹಿಕ ಕಿರುಕುಳ ಕೊಟ್ಟು ಜೀವ ಬೆದರಿಕೆ ಹಾಕಿದ ನನ್ನ ಗಂಡ ಹಾಗೂ ನನ್ನ ಸವತಿ ರಿಹಾನಾ ಹಾಗೂ ಅವಳ
ತಮ್ಮ ಮೈನು , ನಾದಿನಿ ಆಶಾ ಇವರೆಲ್ಲರ ಮೇಲೆ
ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪ್ರಭು ತಂದೆ ಶೇಖಪ್ಪ ನಾಯಕೋಡಿ ಸಾ :
ಮೈನಾಳ ತಾ/ಜಿ ಕಲಬುರಗಿ ಇವರ ಅಕ್ಕ ಗಂಗೂಬಾಯಿ ಗಂಡ ಶರಣಪ್ಪ ಜಮಾದಾರ ಸಾ : ಕಿರಸಾವಳಗಿ ತಾ :
ಅಫಜಲಪುರ ಇವಳ ಮಗನಾದ ಮೌಲಾ ತಂದೆ ಶರಣಪ್ಪ ಜಮಾದಾರ ಇತನು ಆಗಾಗ ನಮ್ಮ ಮನೆಗೆ ಬಂದು ಹೋಗುವದು
ಮಾಡುತ್ತಿದ್ದು ಎಂದಿನಂತೆ ನಿನ್ನೆ ದಿನಾಂಕ 13/1/2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದಿದ್ದು
ತನಗೆ ಸಾಲವಾಗಿದೆ 40,000/- ರೂ ಹಣ ಕೊಡಿರಿ ಅಂತಾ ಕೇಳಿದ್ದು ಅದಕ್ಕೆ ನಾವಿಇಬ್ಬರು ನಮ್ಮ ಹತ್ತಿರ ಹಣ
ಇಲ್ಲ ಎಲ್ಲಿಂದ ಕೊಡಣಾ ಅಂತಾ ಅಂದಿದ್ದು ಅದರಿಂದ ಅವನು ಇದೇ ವಿಷಯವಾಗಿ ಫಿರ್ಯಾದಿ ಹಾಗು ಫಿರ್ಯಾದಿ
ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ರಾತ್ರಿ ಅವರ ಮನೆಯಲ್ಲಿಯೇ ಊಟ ಮಾಡಿಕೊಂಡು ಮಲಗಿಕೊಂಡಿದ್ದು ದಿನಾಂಕ
14/1/2016 ರಂದು ರಾತ್ರಿ 3-00 ಎಎಂ ಸುಮಾರಿಗೆ ಸದರಿ ಮೌಲಾ ಇತನು ಅಲ್ಲಿಯೇ
ಮನೆಯಲ್ಲಿ ಇಟ್ಟಿರುವ ಕಬ್ಬು ಕತ್ತರಿಸುವ ಕೊಯಿತಾ ತೆಗೆದುಕೊಂಡು ಮಲಗಿಕೊಂಡಿರುವ ಫಿರ್ಯಾದಿ
ಹೆಂಡತಿಯ ಕುತ್ತಿಗೆಯ ಎಡ ಭಾಗದಲ್ಲಿ ಮತ್ತು ತಲೆಗೆ ಕೊಯಿತಾದಿಂದ ಹೊಡೆದು ರಕ್ತಗಾಯಗೊಳಿಸಿದ್ದು
ತನ್ನ ಹೆಂಡತಿ ಚಿರಾಡುವದುನ್ನು ಕೇಳಿ
ಎಚ್ಚರಗೊಂಡು ಫಿರ್ಯಾದಿಗೆ ಅವನು ನೀವು ಹಣ ಕೊಡು ಅಂತಾ ಕೊಟ್ಟಿರುವದಿಲ್ಲ ಭೋಸಡಿ ಮಕ್ಕಳೆ
ಇಂದು ನಿಮಗೆ ಖಲಾಸ ಮಾಡುತ್ತೇನೆ ಅಂತಾ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಎಡಗೈ
ಮುಂಗೈ ಹತ್ತಿರ ಹೊಡೆದು ರಕ್ತಗಾಯಗೊಳಿಸಿದ್ದು ಆಗ ಈ ಇಬ್ಬರು ಗಂಡ ಹೆಂಡತಿ ಚಿರಾಡುತ್ತಿರುವಾಗ
ಅಲ್ಲಿಯೇ ಮಲಗಿಕೊಂಡಿರುವ ಇವರ ಮಗ 6 ವರ್ಷ ಭೂತಾಳಿ ಇತನಿಗೆ ಮೌಲಾ ಇತನು ಅದೇ ಕೊಯಿತಾದಿಂದ ಕುತ್ತಿಗೆ
ಬಲಬಾಗದಲ್ಲಿ ಮತ್ತು ತಲೆಗೆ ಹೆಡಕಿಗೆ ಬಲವಾಗಿ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಆಗ ಇವರು
ಚಿರಾಡುವದನ್ನು ನೋಡಿ ಕೇಳಿ ಪಕ್ಕದ ಮನೆಯವರು ಓಡಿ ಬಂದಾಗ ಮೌಲಾ ಇತನು ಓಡಿ ಹೋಗಿರುತ್ತಾನೆ. ಈ
ಮೂರು ಜನ ಗಾಯಾಳುದಾರರನ್ನು ಚಿಕಿತ್ಸೆಗಾಗಿ ಕಲಬುರಗಿಗೆ ತರುವಾಗ ಮಾರ್ಗ ಮದ್ಯದಲ್ಲಿ ಭೂತಾಳಿ
ಇತನು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.