Police Bhavan Kalaburagi

Police Bhavan Kalaburagi

Tuesday, May 12, 2020

BIDAR DISTRICT DAILY CRIME UPDATE 12-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 12-05-2020

ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 05/2020 ಕಲಂ 66(ಸಿ), 66(ಡಿ) ಐ.ಟಿ. ಕಾಯ್ದೆ ಮತ್ತು  419, 420 ಐಪಿಸಿ :-

ದಿನಾಂಕ: 11-05-2020 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ಚನ್ನಬಸಪ್ಪಾ ತಂದೆ ಬಂಡೆಪ್ಪಾ ಚಿಟ್ಟಾ ಸಾ//ಲಾಡಗೇರಿ ಬೀದರ ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಅಜರ್ಿ ಸಲ್ಲಿಸಿದರ ಸಾರಾಂಶವೆನೆಂದರೆ  ಫೀರ್ಯಾದಿಯು ಆಕ್ಸಿಸ್ ಬ್ಯಾಂಕ ಗೋಕಾಕನಲ್ಲಿ ಒಂದು ಎಸ್.ಬಿ. ಖಾತೆ ಸಂಖ್ಯೆ 912010060388826 ನೇದ್ದನ್ನು ಹೊಂದಿದ್ದು, ಅದಕ್ಕೆ  ಮೋಬಾಯಿಲ್ ಸಂ. 8970300918 ಲಿಂಕ್ ಇದ್ದು ಸದರಿ ಬ್ಯಾಂಕ ಖಾತೆಗೆ ಗೂಗಲ್ ಪೇ ಲಿಂಕ್ ಇರುತ್ತದೆ. ಹೀಗಿರುವಾಗ ದಿನಾಂಕ 07-05-2020 ರಂದು ಫಿರ್ಯಾದಿಯು ತನ್ನ ಗೂಗಲ್ ಪೇ ದಿಂದ 278/- ರೂಪಾಯಿಯ ಪರಿಚಯಸ್ಥರ ಸನ್ ಡೈರೇಕ್ಟ ಡೀಶ ರೀಚಾರ್ಜ ಮಾಡಿರುತ್ತಾರೆ.  ಆದರೆ ಸದರಿ ರೀಚಾರ್ಜ ಆಗದೇ ಇರುವುದರಿಂದ, ದಿನಾಂಕ 10-05-2020 ರಂದು ಗೂಗಲ್ ಪೇ ನಲ್ಲಿ  ಆಠಿಣಣಜ ಡಿಜ ಮಾಡಿ ನಂತರ ಗೂಗಲ್ ಬ್ರೌಸರ್ ನಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ ಸರ್ಚ ಮಾಡಿದಾಗ ಅದರಲ್ಲಿ ನನಗೆ ಒಂದು ಮೋಬಾಯಿಲ್ ಸಂಖ್ಯೆ 07739737291 ನೇದ್ದು ಸಿಕಿದ್ದು ಮದ್ಯಾಹ್ನ 01:10 ಗಂಟೆಗೆ ಅದಕ್ಕೆ ನಾನು ಕರೆ ಮಾಡಿ ರೂ. 278/- ಗೂಗಲ್ ಪೇ ದಿಂದ  ಸನ್ ಡೈರೇಕ್ಟ ಡೀಶ ರೀಚಾರ್ಜ ಮಾಡಿದ್ದು ಆದರೆ ಸದರಿ ರೀಚಾರ್ಜ ಆಗಿರುವುದಿಲ್ಲ ಅಂತಾ ಹೇಳಿದಾಗ ಅವರು ಫಿರ್ಯಾದಿಗೆ ನಿಮ್ಮ ಮೋಬಾಯಿಲ್ ಗೆ ಒಂದು ಮೇಸೆಜ್ ಕಳುಹಿಸುತ್ತೇವೆ ಅದನ್ನು ಮೋಬಾಯಿಲ್ ನಂಬರ 9004676782 ನೇದಕ್ಕೆ ಕಳುಹಿಸಿರಿ ನಿಮ್ಮ ರೂ. 278 ಹಣ ನಿಮ್ಮ ಖಾತೆಗೆ ಮರಳಿ ಹಾಕುತ್ತೇವೆ ಎಂದು ಹೇಳಿ ಫಿರ್ಯಾದಿ ಮೋಬೈಲ್ ಸಂಖ್ಯೆ 8670380695, 7866011810 ಮತ್ತು 863083157 ನೇದ್ದವುಗಳಿಂದ ಮೇಸೆಜ್ಗಳು ಬಂದಿದ್ದು ಅವುಗಳನ್ನು ಅವರು ಹೇಳಿದ ಮೋಬಾಯಿಲ್ ಸಂಖ್ಯೆ 9004676782 ನೇದಕ್ಕೆ ಫಾವರ್ಡ ಮಾಡಿದ್ದು ಆಗ, ಅವರು ಪುನಃ ಪುನಃ ಕರೆ ಮಾಡಿ ಸದರಿ ಮೇಸೇಜ್ ಬಂದಿರುವುದಿಲ್ಲ ಅಂತಾ ನನ್ನಿಂದ 05 ಸಲ ಮೇಸೆಜ್ ಫಾರ್ವಡ ಮಾಡಿಸಿಕೊಂಡಿರುತ್ತಾರೆ. ನಂತರ ಫಿರ್ಯಾದಿಯು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದು ಸ್ವಲ್ಪ ಸಮಯದ ನಂತರ ಫಿರ್ಯಾದಿ ಮೋಬಾಯಿಲ್ ಗೆ   ಬ್ಯಾಂಕ ಖಾತೆಯಿಂದ ರೂ. 48995.90, ರೂ. 48104.90, ರೂ. 48095.90, ರೂ. 48095.90 ಮತ್ತು ರೂ. 26005.90 ಹೀಗೆ ಐದು ಬಾರಿ ಒಟ್ಟು ರೂ. 2,19,298=50 ಹಣ ಕಡಿತವಾದ ಬಗ್ಗೆ ಮದ್ಯಾಹ್ನ 02;30 ಸುಮಾರಿಗೆ ಸಂದೇಶಗಳು ಬಂದಿರುತ್ತವೆ. ಕಾರಣ, ನಾನು ಸನ್ ಡೈರೆಕ್ಟ್ ಡಿಶ್ ರಿಚಾರ್ಜ ಮಾಡಲು ನನ್ನ ಗೂಗಲ್ಪೇ ದಿಂದ ರೂ. 278 ಪಾವತಿ ಮಾಡಿದ್ದು, ರಿಚಾರ್ಜ ಆಗದರಿಂದ ಗೂಗಲ್ನಲ್ಲಿ ಗೂಗಲ್ಪೇ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿ  ಅದಕ್ಕೆ ಕರೆ ಮಾಡಿದಾಗ ಸದರಿ ಸಂಖ್ಯೆಯಿಂದ ಯಾರೋ ಅಪರಿಚಿತ ವಂಚಕ ಗೂಗಲ್ ಪೇ ಕಸ್ಟಮರ್ಕೇರ ನಿಂದ ಮಾತನಾಡುತ್ತಿರುವುದಾಗಿ ಹೇಳಿ ನನಗೆ ಮೋಸದಿಂದ ಲಿಂಕ್ ಕಳುಹಿಸಿ ಅವುಗಳನ್ನು ಮೊಬಾಯಿಲ್ ಸಂಖ್ಯೆಗಳಿಗೆ ಪಾರ್ವಡರ್್ ಮಾಡಿಸಿಕೊಂಡು ನನ್ನ ಬ್ಯಾಂಕ ಖಾತೆಯಿಂದ ಒಟ್ಟು  ರೂ. 2,19,298=50 ವಂಚಿಸಿದ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡು ನನ್ನ ಹಣ ಮರಳಿ ಕೊಡಿಸಲು ವಿನಂತಿ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.  

 ಬೇಮಳೇಡಾ ಠಾಣೆ ಅಪರಾಧ ಸಂಖ್ಯೆ 14/2020 ಕಲಂ 279, 337, 338, 304 (ಎ)   ಐಪಿಸಿ :-

ದಿನಾಂಕ 10-05-2020 ರಂದು 2100 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟ್ಟಿ ಮಾಡಿ ಎಮ್ ಎಲ್ ಸಿ ಪಡೆದುಕೊಂಡು ಗಾಯಾಳು ಶ್ರೀ  ಶಂಕರಯ್ಯಾ ತಂದೆ ಶರಣಯ್ಯಾ ಮುಸ್ತಾರಿ ವಯ 22 ವರ್ಷ ಜಾತಿ ಸ್ವಾಮಿ ಉ|| ಕೂಲಿ ಕೆಲಸ ಸಾ|| ಬೇಮಳಖೇಡಾ ಇವರ ಹೇಳಿಕೆ ಪಡೆದುಕೊಂಡಿದರ ಸಾರಾಂವೆನೆಂದರೆ ದಿನಾಂಕ 10-05-2020 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಅವರ ಚಿಕ್ಕಪ್ಪನ ಮಗನಾದ ವಿನಿತ ತಂದೆ ವೈಜಿನಾಥ ಜಾಂಗಟಿ ವಯ 18 ವರ್ಷ ಉ|| ವಿಧ್ಯಾರ್ಥಿ ಮತ್ತು ನಮ್ಮ ಅತ್ತೆಯ ಮಗನಾದ ಅಮರ ತಂದೆ ದಯಾನಂದ ಚಿಕಮಠ ವಯ 19 ವರ್ಷ ಉ|| ಖಾಸಗಿ ಕೆಲಸ ಚಳಕಾಪೂರ ರವರೆಲ್ಲರೂ ಕೂಡಿಕೊಂಡು ನಮ್ಮ ಹೊಸ ಮನೆಯ ಕಡೆಗೆ ಹೋಗಿದ್ದು ಅಲ್ಲಿ   ಹೊಸ ಮನೆಯ ಕಟ್ಟಡ ನೋಡಿಕೊಂಡು ಮರಳಿ   ಮನೆಯ ಕಡೆಗೆ ಮೂವರು ನಡೆದುಕೊಂಡು ಬರುವಾಗ ಸಾಯಂಕಾಲ 7:00 ಗಂಟೆಯ ಸುಮಾರಿಗೆ  ಬೇಮಳಖೇಡಾ ಪೊಲೀಸ ಠಾಣೆಯ ಹತ್ತೀರ ಇದ್ದಾಗ ನಮ್ಮ ಹಿಂದಿನಿಂದ ಅಂದರೆ ಉಡಮನಳ್ಳಿ ಗ್ರಾಮದ ಕಡೆಯಿಂದ ಒಂದು ದ್ವೀಚಕ್ರ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀದ್ದ   ಚಿಕ್ಕಪ್ಪಾನ ಮಗನಿಗೆ ಮತ್ತು ಫಿರ್ಯಾದಿಗೆ ಡಿಕ್ಕಿ ಮಾಡಿ ವಾಹನ ಸಮೇತ ರೋಡಿನ ಮೇಲೆ ಬಿದ್ದ ಪ್ರಯುಕ್ತ  ಎಡಗಾಲಿನ ಪಾದಕ್ಕೆ ಗುಪ್ತಗಾಯ, ಮತ್ತು ಬೆನ್ನಿನಲ್ಲಿ ತರಚಿದ ಗಾಯವಾಗಿದ್ದು ಮತ್ತು   ವಿನೀತ ಇತನಿಗೆ ಹೊಟ್ಟಯಲ್ಲಿ ಬೆನ್ನಿನಲ್ಲಿ ಮತ್ತು ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯಗಳಾಗಿದ್ದು   ಡಿಕ್ಕಿ ಮಾಡಿದ ದ್ವೀಚಕ್ರ ವಾಹನದ ನಂಬರ ನೊಡಲಾಗಿ ಅದರ ನಂಬರ ಕೆಎ-38-ಆರ್-8003 ನೇದ್ದು ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಬಾಬರ ತಂದೆ ಖಾಜಾಸಾಬ್ ವಯ 42 ವರ್ಷ ಸಾ|| ಅಮಲಾಪೂರ ಅಂತಾ ಹೇಳಿದ್ದು ಅವನಿಗೆ ಬಲಕಾಲಿನ ಹೆಬ್ಬರಳಿಗೆ ರಕ್ತಗಾಯವಾಗಿದ್ದು ಮತ್ತು ಅವನ ಹಿಂಬದಿಯ ಸವಾರನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ತುಕ್ಕಾರೆಡ್ಡಿ ತಂದೆ ಮಾಣಿಕರೆಡ್ಡಿ ವಯ 35 ವರ್ಷ ಸಾ|| ಅಮಲಾಪೂರ ಅಂತಾ ಗೋತ್ತಾಗಿದ್ದು ಅವನಿಗೆ ಬಲ ಮೋಲಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ನಂತರ ಫಿರ್ಯಾದಿಯು ಮಾವನಾದ ಭದ್ರಯ್ಯಾ ಸಾಮ್ವಿ ಇವರಿಗೆ ಪೋನ ಮಾಡಿ ವಿಷಯ ತಿಳಿಸಿದ ಮೇರೆಗೆ ಅವರು ಅಲ್ಲಿಗೆ ಬಂದು ನನಗೆ ಮತ್ತು ವಿನೀತ ಇತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸೆರಿಕ ಮಾಡಿದ್ದು ವೈದ್ಯರು ವಿನೀತ ಈತನಿಗೆ ನೋಡಿ ಮಾರ್ಗ ಮಧ್ಯ ಮೃತಪಟ್ಟಿರುತ್ತಾನೆ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 27/2020 ಕಲಂ 457, 380 ಐಪಿಸಿ :-

ದಿನಾಂಕ-11/05/2020 ರಂದು 16:00 ಗಂಟೆಗೆ ಫೀರ್ಯಾದಿ ಶ್ರೀ ಬಸವಸಾಗರ ತಂದೆ ರಾಜಶೇಖರ ಕಾರಬರಿ ಸಾ-ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನಿಡಿದರ ಸಾರಾಂಶವೆನೆಂದರೆ  ಫಿರ್ಯಾದಿಯು ಖಟಕ ಚಿಂಚೋಳಿ ಅಂಚೆ ಕಛೇರಿಯಲ್ಲಿ ಸುಮಾರು 2 ತಿಂಗಳಿಂದ ಪೋಸ್ಟ್ ಮಾಸ್ಟರ್ ಅಂತಾ ಕೇಲಸ ಮಾಡಿಕೊಂಡಿದ್ದು ಜೋತೆಯಲ್ಲಿ ಖಟಕ ಚಿಂಚೊಳಿ ಗ್ರಾಮದ ಗುರನಾಥ ತಂದೆ ಶರಣಪ್ಪಾ ಭುರಕ್ಕೆ  ರವರು ಸಾಹಾಯಕ ಪೋಸ್ಟ್ ಮಾಸ್ಟರ್ ಅಂತಾ ಕೇಲಸ ಮಾಡಿಕೊಂಡು ಇರುತ್ತಾರೆ   ಹೀಗಿರುವಾಗ ದಿನಾಂಕ: 08/05/2020 ರಂದು ಫೀರ್ಯಾದಿಯು ದಿನನಿತ್ಯದಂತೆ ಕೇಲಸಕ್ಕೆ ಬಂದು ಕಛೇರಿಯಲ್ಲಿ ದಿನದ ಎಲ್ಲಾ ಕೇಲಸ ಮುಗಿಸಿಕೊಂಡು ನಂತರ ಭಾಲ್ಕಿಯಲ್ಲಿ ನಮ್ಮ ಕಛೇರಿಯ ಕೇಲಸದ ನಿಮಿತ್ಯ  ಭಾಲ್ಕಿಗೆ  12:30 ಗಂಟೆಗೆ ಹೋಗಿರುತ್ತಾರೆ ಮತ್ತು   ಭಾಲ್ಕಿಗೆ ಹೋಗುವಾಗ ಎಲ್ಲಾ ದಾಖಲೆ ಪತ್ರಗಳು ಮತ್ತು ಇನ್ನಿತರೆ ವಸ್ತುಗಳು ಅಲ್ಮಾರದಲ್ಲಿ ಇಟ್ಟು ಹೋಗಿರುರುತ್ತಾರೆ ಫಿರ್ಯಾದಿಯು ಭಾಲ್ಕಿಯ ಕಛೇರಿಗೆ ಹೋಗುವಾಗ 12:30 ಗಂಟೆಗೆ ಕೇಲ ಗ್ರಾಹಕರು ತಮ್ಮ ಬ್ಯಾಲೇನ್ಸ್ ಚೆಕಿಂಗ ಕುರಿತು ಪೋಸ್ಟ್ ಆಫೀಸ್ ಗೆ ಬಂದಿರುತ್ತಾರೆ ಈ ವೇಳೆಯಲ್ಲಿ  ಅವಸರದಲ್ಲಿ ನಮ್ಮ ಪೋಸ್ಟ್ ಆಫೀಸ್ ಗೆ ಸಂಬಂಧಪಟ್ಟ ಐ.ಪಿ.ಪಿ.ಬಿ ಮೋಬೈಲ್ ಉಪಕರಣವನ್ನು ಕಛೇರಿಯಲ್ಲಿನ ಕಟ್ಟಿಗೆ ಯ ಟೇಬಲ್ ನ ಡ್ರಾದಲ್ಲಿ ಇಟ್ಟು ಹೋಗಿರುತ್ತಾರೆ  ನಂತರ ಗುರನಾಥ ತಂದೆ ಶರಣಪ್ಪಾ ಭುರಕ್ಕೆ ಸಾಹಾಯಕ ಪೋಸ್ಟ್ ಮಾಸ್ಟರ್ ರವರು ಕೂಡ ಸಾಯಂಕಾಲ 06:00 ಪಿ.ಎಮ್ ಗಂಟೆ ವರಗೆ ಕಛೇರಿಯಲ್ಲಿ ತಮ್ಮ ಕೇಲಸ ಮುಗಿಸಿಕೊಂಡು ಹೋಗುವಾಗ ಕಛೇರಿಗೆ ಕಿಲಿ ಹಾಕಿ ಹೋಗಿರುತ್ತಾರೆ  ದಿನಾಂಕ: 09/05/2020 ರಂದು ಮುಂಜಾನೆ 08:30 ಗಂಟೆಗೆ ಫಿರ್ಯಾದಿ ಮತ್ತು  ಕಛೇರಿಯ  ಸಾಹಾಯಕ ಪೋಸ್ಟ್ ಮಾಸ್ಟರ್ ಗುರನಾಥ ತಂದೆ ಶರಣಪ್ಪಾ ಭುರಕ್ಕೆ  ರವರು ಕೂಡಿಕೊಂಡು  ಕಛೆರಿಗೆ ಬಂದಾಗ ನಮ್ಮ ಕಛೇರಿಯ ಮುಂದೆ ಎಂದಿನಂತೆ ಗ್ರಾಹಕರು ನಿಂತಿದ್ದರು ಈ  ವೇಳೆಯಲ್ಲಿ ನಾವು ಕಛೆರಿಯ ಬಾಗಿಲ ಹತ್ತಿರ ಹೋಗಿ ಕೀಲಿ ನೋಡಲು ಬಾಗಿಲ ಕೀಲಿ ಮುರಿದ ಸ್ಥಿತಿಯಲ್ಲಿ ಇದ್ದು  ಕಛೆರಿಯ ಬಾಗಿಲು ತೆರೆದಿದ್ದು ಇರುತ್ತದೆ   ಕಛೇರಿಯ ಒಳಗೆ ಹೋಗಿ ಅಲ್ಲಿ ಚೇಕ ಮಾಡಿ ನೋಡಲು ಕಟ್ಟಿಗೆ ಯ ಟೇಬಲ್ ನ ಡ್ರಾದಲ್ಲಿ ಇಟ್ಟಿದ ಐ.ಪಿ.ಪಿ.ಬಿ ಮೋಬೈಲ್  ಅದರ ಒಇ ಓಔ-1:356277090914197, ಒಇ ಓಔ-2:356277091414197, ಖ/ಓ:ಇಐಗಉ731812005619 ಅ/ಕೀ 11999/- ರೂಪಾಯಿಯ ಉಪಕರಣವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.