ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-07-2021
ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 05/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 10-07-2021 ರಂದು 1030 ಗಂಟೆಯಿಂದ 1100 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಇಂದುಬಾಯಿ ಗಂಡ ಭೀವಾಜಿ ಸೂರ್ಯವಂಶಿ ವಯ: 45 ವರ್ಷ, ಜಾತಿ: ಎಸ್.ಸಿ ಹರಿಜನ, ಸಾ: ಲಾಡವಂತಿ, ತಾ: ಬಸವಕಲ್ಯಾಣ ರವರ ಗಂಡನಾದ ಭೀವಾಜಿ ತಂದೆ ನಾಗಪ್ಪಾ ಸೂರ್ಯವಂಶಿ ವಯ: 50 ವರ್ಷ, ಜಾತಿ: ಎಸ್.ಸಿ ಹರಿಜನ, ಸಾ: ಲಾಡವಂತಿ, ತಾ: ಬಸವಕಲ್ಯಾಣ ರವರು ಯಾವುದೋ ಕಾರಣಕ್ಕಾಗಿ ತಮ್ಮ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯ ತಗಡದ ಕೆಳಗೆ ಹಾಕಿರುವ ಕಟ್ಟಿಗೆಗೆ ಹಗ್ಗ ಕಟ್ಟಿ ತನ್ನ ಕುತ್ತಿಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ನಮಗೆ ಯಾರ ಮೇಲೆಯು ಯಾವುದೇ ರೀತಿಯಾದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 10-07-2021 ರಂದು ಫಿರ್ಯಾದಿ ಆಸ್ಮಾ ಬೇಗಂ ಗಂಡ ನಿಜಾಮ ಅಲ್ಲಿಭಾಯಿ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಅತಿವಾಳ ರವರ ಗಂಡನಾದ ನಿಜಾಮ ತಂದೆ ಮಂಜ್ಲೆಮೀಯ ಅಲ್ಲಿಭಾಯಿ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಅತಿವಾಳ ಇವರು ಅಲ್ಲೂರ ಗ್ರಾಮದ ವಿಜಯಕುಮಾರ ತಂದೆ ಶಂಕ್ರೇಪ್ಪಾ ಲೋಹಾರ ರವರ ಹೊಲದಲ್ಲಿದ್ದ ಜೋಡಿ ಕೆ.ಇ.ಬಿ ಕಂಬಗಳ ಕರೇಂಟ್ ಫಾಲ್ಟ್ ನೋಡುವಾಗ ಒಮ್ಮೇಲೆ ಆಕಸ್ಮಿಕವಾಗಿ ಕರೆಂಟ್ ಹತ್ತಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ನನಗೆ ಯಾರ ಮೇಲೆ ಯಾವುzೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 27/2021, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ನಾಗಮ್ಮಾ ಗಂಡ ಮಾರುತಿ ಪಂಚಾಳ ವಯ: 40 ವರ್ಷ, ಜಾತಿ: ವಿಶ್ವಕರ್ಮ, ಸಾ: ಬರಿದಾಬಾದ ಗ್ರಾಮ, ತಾ: ಜಿ: ಬೀದರ ರವರ ಗಂಡನಾದ ಮಾರುತಿ ತಂದೆ ದೇವೆಂದ್ರ ಪಂಚಾಳ ರವರಿಗೆ ಆವಾಗ ಆವಾಗ ಕುಡಿಯುವ ಚಟವಿದ್ದು ಸರಾಯಿ ಕುಡಿದು ಫಿರ್ಯಾದಿಯ ಜೊತೆ ಜಗಳ ಮಾಡುತ್ತಿದ್ದರು ಮತ್ತು ಫಿರ್ಯಾದಿಗೆ ಹೆದರಿಸುವ ಸಲುವಾಗಿ ಮನೆ ಬಿಟ್ಟು ಹೋಗುತ್ತಿದ್ದರು ಪುನಃ 02-03 ದಿವಸಗಳ ನಂತರ ಮನೆಗೆ ಬರುತ್ತಿದ್ದರು, ಹೀಗಿರುವಾಗ ದಿನಾಂಕ 15-05-2021 ರಂದು ಗಂಡ ಕುಡಿದು ಬಂದು ಫಿರ್ಯಾದಿಯ ಜೊತೆ ಗಲಾಟೆ ಮಾಡಿಕೊಂಡು ಮರು ದಿವಸ 16-05-2021 ರಂದು ಅಂದಾಜು 1100 ಗಂಟೆಯ ಸುಮಾರಿಗೆ ಬೀದರನಲ್ಲಿ ಕಾರಪೆಂಟರ ಕೆಲಸ ಮಾಡಿದ ಹಣ ಬರಬೇಕಾಗಿದೆ ನಾನು ಬೀದರಗೆ ಹೋಗಿ ತೆಗೆದುಕೊಂಡು ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾರೆ, ನಂತರ ಸಾಯಂಕಾಲದವರೆಗೆ ಮನೆಗೆ ಬಂದಿರುವುದಿಲ್ಲಾ, ನಂತರ ಅವರಿಗೆ ಕರೆ ಮಾಡಲು ಅದು ಸ್ವಿಚ್ಡ ಆಫ ಆಗಿರುತ್ತದೆ, ನಂತರ ಫಿರ್ಯಾದಿಯು ಗಾಬರಿಯಿಂದ ಎಲ್ಲಾ ಕಡೆ ಹುಡುಕಾಡಿ ಗ್ರಾಮದಲ್ಲಿ ಸಂಬಂಧಿಕರ ಹತ್ತಿರ ಹುಡುಕಾಡಿ, ನಂತರ ಸದರಿ ವಿಷಯ ತನ್ನ ತಮ್ಮ ನಾಗಮೂರ್ತಿ ತಂದೆ ದಶರಥ ಇವರಿಗೆ ತಿಳಿಸಿ ಎಲ್ಲರೂ ಸೇರಿಕೊಂಡು ಗಂಡನ ಬಗ್ಗೆ ಎಲ್ಲಾ ಕಡೆ ಸಂಬಂದಿಕರ ಹತ್ತಿರ, ಗೆಳೆಯರ ಹತ್ತಿರ ಎಲ್ಲಾ ಕಡೆ ಹುಡುಕಾಡಲಾಗಿ ಗಂಡ ಮಾರುತಿ ಇವರ ಪತ್ತೆಯಾಗಿರುವದಿಲ್ಲ, ಅವರು ಗಂಡ ಕಾಣೆಯಾಗಿರುತ್ತಾರೆ, ಗಂಡನ ವಿವರ 1) ಹೆಸರು ಮಾರುತಿ ತಂದೆ ತಂದೆ ಪಂಚಾಳ, ವಯ: 51 ವರ್ಷ, ಜಾತಿ: ವಿಶ್ವಕರ್ಮ (ಪಂಚಾಳ), ಸಾ: ಬರಿದಾಬಾದ ಗ್ರಾಮ, ತಾ: & ಜಿ: ಬೀದರ, 2) ಮೈಬಣ್ಣ: ಗೋಧಿ ಮೈಬಣ್ಣ, ಚಹರೆ: ಉದ್ದನೆ ಮುಖ ಸಾಧಾರಣ ಮೈಕಟ್ಟು, ಎತ್ತರ: 05 ಅಡಿ 04 ಇಂಚ ಎತ್ತರ, 3) ಧರಿಸಿದ ಬಟ್ಟೆ: ಬಿಳಿ ಶರ್ಟ & ಕಪ್ಪು ಬಣ್ಣದ ಪ್ಯಾಂಟ ಹಾಗೂ 4) ಭಾಷೆ: ಕನ್ನಡ & ಹಿಂದಿ ಭಾಷೆ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 27/2021, ಕಲಂ. 498(ಎ), 323, 324, 504, 506 :-
ದಿನಾಂಕ 10-07-2021 ರಂದು ಫಿರ್ಯಾದಿ ನಿಕೀತಾ ಗಂಡ ತಿಪ್ಪಣ್ಣಾ @ ರಾಜು ವಯ: 35 ವರ್ಷ, ಜಾತಿ: ಕ್ರಿಶ್ಚನ್, ಸಾ: ಸಂಜು ನಗರ ಕಲಬುರಗಿ, ಸದ್ಯ: ಪಕ್ಕಲವಾಡ ಬೀದರ ರವರ ಮದುವೆಯು ಸುಮಾರು 13 ವರ್ಷಗಳ ಹಿಂದೆ ಸಂಜು ನಗರ ಕಲಬುರಗಿಯ ಮಳ್ಳಪ್ಪಾ ರವರ ಮಗನಾದ ತಿಪ್ಪಣಾ್ಣ @ ರಾಜು ಇತನೊಂದಿಗೆ ಆಗಿರುತ್ತದೆ, ಗಂಡನಿಗೆ ಸರಾಯಿ ಕುಡಿಯುವ ಚಟ ಇದ್ದು, ದಿನಾಲು ಸರಾಯಿ ಕುಡಿದು ಬಂದು ವಿನಾಃ ಕಾರಣ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ನೀನು ಕೆಲಸಕ್ಕೆ ಹೋದಾಗ ಬೇರೆಯವರ ಜೊತೆ ಇರುತ್ತಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ-ಬಡೆ ಮಾಡುವುದು, ಕಾಲಿನಿಂದ ಒದೆಯುವದು ಮಾಡುತ್ತಾ ಬಂದು ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ತನ್ನ ಗಂಡ ಕಿರುಕುಳ ಕೊಡುವ ಬಗ್ಗೆ ಫಿರ್ಯದಿಯು ತನ್ನ ತಂಗಿಯಾದ ಜೈಶೀಲಾ, ತಮ್ಮಂದಿರಾದ ಆನಂದ, ಏಸುದಾಸ ಮತ್ತು ಮನೆಯ ಮಾಲಿಕರಾದ ಜಾಶ್ವಾ @ ಪಿಂಟು ರವರಿಗೆ ಗೊತ್ತಿದ್ದು, ಅವರು ನೋಡಿ ಅನೇಕ ಸಾರಿ ಗಂಡಡನಿಗೆ ತಿಳುವಳಿಕೆ ಹೇಳಿರುತ್ತಾರೆ, ಆದರೆ ಗಂಡ ಯಾರದೆ ಮಾತು ಕೇಳದೆ ಫಿರ್ಯಾದಿಗೆ ಹೊಡೆ-ಬಡೆ ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 07-07-2021 ರಂದು ಫಿರ್ಯಾದಿಯು ತನ್ನ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಗಂಡ ಸರಾಯಿ ಕುಡಿದು ಮನೆಗೆ ಬಂದು ನೀನು ಇಷ್ಟು ತಡಮಾಡಿ ಏಕೆ ಮನೆಗೆ ಬಂದಿರುವೆ ನಿನಗೆ ಯಾರು ಇದ್ದಾರೆ, ಯಾವನ ಹತ್ತಿರ ಹೋಗಿದಿ ಹೇಳು ಅಂತ ಕಾಲಿನಿಂದ ಎರಡು ತೊಡೆಗಳ ಮೇಲೆ ವದ್ದು, ಕೂದಲು ಹಿಡಿದು ಕೈಯಿಂದ ಹೊಡೆ ಬಡೆ ಮಾಡಿ ಮಗನಾದ ದಿನಾಕರ್ ಇತನಿಗೆ ಚಾರ್ಜರ್ ವೈಯರ್ ತೆಗೆದುಕೊಂಡು ಬೆನ್ನಿನ ಮೇಲೆ, ಎಡಗೈ ಮೇಲೆ ಹೊಡೆದು ಕಂದುಗಟ್ಟಿದ ರಕ್ತಗಾಯ ಪಡಿಸಿ, ನಿನಗೆ ಮತ್ತು ನಿನ್ನ ಮಗನಿಗೆ ಜೀವಂತ ಇಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ, ಫಿರ್ಯಾದಿಯು ಚಿರಾಡುವ ಶಬ್ದವನ್ನು ಕೇಳಿ ಮನೆಯ ಮಾಲಿಕರಾದ ಜಾಶ್ವಾ @ ಪಿಂಟು, ರೇಣುಕಾ ಗಂಡ ಜಾಸ್ವಾ ರವರು ಕಣ್ಣಾರೆ ನೋಡಿ ಬಿಡಿಸಿಕೊಂಡಿರುತ್ತಾರೆ, ನಂತರ ಮಗನಾದ ದಿನಕರ್ ಇತನಿಗೆ ಹೆಚ್ಚಿಗೆ ಗಾಯ ಆಗಿದ್ದರಿಂದ ಬೀದರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 10-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 78/2021, ಕಲಂ. ಮಹಿಳೆ ಕಾಣೆ :-
ದಿನಾಂಕ 06-07-2021 ರಂದು 2100 ಗಂಟೆಯ ಸುಮಾರಿಗೆ ಫಿರ್ಯಾದಿ ರಾಜೆಮ್ಮಾ ಗಂಡ ದತ್ತಾತ್ರಿ ಕದಲಾಬಾದೆ ಸಾ: ಹರನಾಳ, ತಾ: ಭಾಲ್ಕಿ ರವರ ಮನೆಯಲ್ಲಿ ಫಿರ್ಯಾದಿ ಹಾಗೂ ಗಂಡ ದತ್ತಾತ್ರಿ ಹಾಗೂ ಮಕ್ಕಳಾದ ಶೀಲ್ಪಾ, ಸೊನಿಯಾ, ಸುಮೀತ ಎಲ್ಲರೂ ಕೂಡಿ ಊಟ ಮಾಡಿ ರಾತ್ರಿ ಮನೆಯಲ್ಲಿ ಮಲಗಿದ್ದು ನಂತರ ದಿನಾಂಕ 07-07-2021 ರಂದು 0600 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಗಂಡ ಎದ್ದು ನೋಡಲು ಮಗಳಾದ ಶಿಲ್ಪಾ ಇವಳು ಮನೆಯಲ್ಲಿ ಇರಲಿಲ್ಲ, ನಂತರ ತಮ್ಮ ಮಗಳಿಗೆ ಮನೆಯ ಸುತ್ತಲು, ಊರಲ್ಲಿ ಹೋಗಿ ಹುಡಕಾಡಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ನಂತರ ತಮ್ಮ ಸಂಬಂಧಿಕರ ಗ್ರಾಮಗಳಿಗೆ ಹೋಗಿ ಹುಡಕಾಡಲು ಮಗಳ ಬಗ್ಗೆ ಯಾವುದೇ ಖಚೀತ ಮಾಹಿತಿ ಸಿಕ್ಕಿರುವುದಿಲ್ಲ, ಅವಳು ಕಾಣೆಯಾಗಿರುತ್ತಾಳೆ, ಕಾಣೆಯಾದ ಮಗಳ ವಿವರ 1) ಹೆಸರು ಶೀಲ್ಪಾ ತಂದೆ ದತ್ತಾತ್ರಿ, ವಯ: 20 ವರ್ಷ, 2) ಬಣ್ಣ: ಗೋಧಿ ಮೈಬಣ್ಣ, 3) ಎತ್ತರ: 5.2 ಫೀಟ, 4) ಭಾಷೆ: ಹಿಂದಿ, ಕನ್ನಡ ಮಾತನಾಡುತ್ತಾಳೆ ಹಾಗೂ 5) ಧರಿಸಿದ ಬಟ್ಟೆ: ನೀಲಿ ಬಣ್ಣದ ಟಾಪ ಮತ್ತು ಬಿಳಿ ಬಣ್ಣದ ಪ್ಯಾಂಟ ಚುಡಿದಾರ ಧರಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 53/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 10-07-2021 ರಂದು ಏಣಕೂರ ಗ್ರಾಮದ ಹಳೆ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರದ ಸಾರ್ವಜನಿಕ ಸಿಸಿ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತಿದ್ದಾನೆಂದು ಹುಲೇಪ್ಪ ಪಿ.ಎಸ್.ಐ ಖಟಕ ಚಿಂಚೋಳಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಏಣಕೂರ ಗ್ರಾಮದ ಮುಸ್ಲಿಂ ಸಮುದಾಯದ ಮಜೀದ ಹತ್ತಿರ ಹೋಗಿ ಗ್ರಾಮ ಪಂಚಾಯತ ಕಡೆಗೆ ಹೋಗುವ ಸಿಸಿ ರಸ್ತೆಯಲ್ಲಿನ ಮನೆಯ ಮರೇಯಾಗಿ ನಿಂತು ನೊಡಲು ಏಣಕೂರ ಗ್ರಾಮದ ಹಳೆ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರದ ಸಾರ್ವಜನಿಕ ಸಿಸಿ ರಸ್ತೆಯ ಮೇಲೆ ಆರೋಪಿ ನಾಗಪ್ಪ ತಂದೆ ಸಿದ್ರಾಮ ಮೇತ್ರೆ ವಯ: 28 ವರ್ಷ, ಜಾತಿ: ಕುರುಬ, ಸಾ: ಏಣಕೂರ ಇತನು ಒಂದು ರೂಪಾಯಿಗೆ 90/- ರೂಪಾಯಿ ಕೊಡುತ್ತೇವೆ, ಮಟಕಾ ಇದು ನಸೀಬಿನ ಆಟ ಇರುತ್ತದೆ ಅಂತ ಜೋರಾಗಿ ಚೀರಿ ಜನರಿಂದ ಹಣ ಪಡೆದು ಮಟಕಾ ಚಿಟಿ ಬರೆದುಕೊಳ್ಳುತ್ತಿರುವುದುನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದು ಅಂಗ ಜಪ್ತಿ ಮಾಡಿ ನೋಡಲಾಗಿ ಸದರಿಯವನ ಶರ್ಟಿನ ಜೇಬಿನಲ್ಲಿ 1) 1 ಮಟಕಾ ನಂಬರವುಳ್ಳ ಚೀಟಿ, 2) 1430/- ರೂ. ನಗದು ಹಣ ಹಾಗೂ 3) 1 ಬಾಲಪೇನ್ ಸಿಕ್ಕಿದ್ದು, ನಂತರ ಸದರಿ ಆರೋಪಿಗೆ ಈ ಮಟಕಾ ಚೀಟಿ ಬರೆದುಕೊಳ್ಳಲು ಯಾವುದಾರರು ಇಲಾಖೆಯಿಂದ ಅನುಮತಿ ತೆಗೆದುಕೊಂಡಿದ್ದಿಯಾ ? ಮತ್ತು ನೀನು ಮಟಕಾ ಚೀಟಿ ಬರೆದುಕೊಂಡು ಯಾರಿಗೇ ನೀಡುತ್ತಿಯಾ ಅಂತ ವಿಚಾರಿಸಲು ಸದರಿಯವನು ನಾನು ಯಾವುದೇ ಇಲಾಖೆಯಿಂದ ಅನುಮತಿ ಪಡೆದುಕೊಂಡಿರುವುದಿಲ್ಲ ಮತ್ತು ನಾನು ಈ ಮಟಕ ಚೀಟಿಗಳನ್ನು ಬರೆದುಕೊಂಡು ನಂತರ ಮಟಕಾ ಚೀಟಿ ಹಾಗೂ ಅದರಿಂದ ಬಂದ ಹಣವನ್ನು ನಮ್ಮೂರ ಖಾಜಾ ಪಟೇಲ ತಂದೆ ರಶೀದ ಪಟೇಲ ರವರಿಗೆ ನೀಡುತ್ತೆನೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತನ ಹತ್ತಿರ ದೊರೆತ ಮಟಕಾ ನಂಬರವುಳ್ಳ ಚೀಟಿ, ನಗದು ಹಣ & ಬಾಲ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 117/2021, ಕಲಂ. 457, 380 ಐಪಿಸಿ :-
ದಿನಾಂಕ 13-06-2021 ರಂದು 2300 ಗಂಟೆಯಿಂದ ದಿನಾಂಕ 14-06-2021 ರಂದು 0500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಅಬ್ದುಲ ಹಫೀಜ ತಂದೆ ಅಬ್ದುಲ ಸಲೀಮ ಪೇಶಕಾರ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಶಾಹು ನಗರ ಭಾಲ್ಕಿ ರವರ ಅಂಗಡಿಯ ಮೇಲೆ ಇರುವ ತಗಡಗಳನ್ನು ಮೇಲೆ ಎತ್ತಿ ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿರುವ 1) ಟಿಎಂಬಿ ಕಂಪನಿಯ ಸ್ಮಾರ್ಟ ಫೋನ ಅ.ಕಿ 5800/- ರೂ., 2) ಸ್ಯಾಮಸಂಗ ಎಸ-6 ಎಡ್ಜ ಮೋಬೈಲ ಅ.ಕಿ 5,000/- ರೂ., 3) ಅಂಗಡಿಯಲ್ಲಿದ್ದ ಎಟಿಎಂ ಕಾರ್ಡ, 4) ಒಲ್ಡ್ ಮೈಕ್ರೋ ಮ್ಯಾಕ್ಸ ಮೊಬೈಲ ಅ.ಕಿ 1,500/- ರೂ., 5) ವಿಡಿಯೋ ಕೌನ ಕಿ ಪ್ಯಾಡ ಮೋಬೈಲ ಅ.ಕಿ 1000/- ರೂ. ಹಾಗೂ 6) ಸ್ಯಾಮಸಂಗ ಮೋಬೈಲ ಒಲ್ಡ್ ಅ.ಕಿ 1,000/- ರೂ. ಹೀಗೆ ಒಟ್ಟು 14,300/- ರೂಪಾಯಿ ಬೆಲೆವುಳ್ಳ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.