Police Bhavan Kalaburagi

Police Bhavan Kalaburagi

Monday, August 17, 2020

BIDAR DISTRICT DAILY CRIME UPDATE 17-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-08-2020

 

ಬಗದಲ ಪೊಲೀಸ ಠಾಣೆ ಅಪರಾಧ ಸಂ. 50/2020, ಕಲಂ. 279, 337,  338, 304(ಎ) ಐಪಿಸಿ :-

ದಿನಾಂಕ 16-08-2020 ರಂದು ಫಿರ್ಯಾದಿ ಮಹ್ಮದ್ ತಾಜೋದ್ದಿನ್ ತಂದೆ ಮಹ್ಮದ್ ಸತ್ತಾರಸಾಬ ಸೈಯದ್ ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಅಬ್ದುಲ್ ಫೈಜ್ ದರ್ಗಾ ಬೀದರ ರವರ ಸೋದರಳಿಯನಾದ ಮಹ್ಮದ್ ಐಹ್ಮದ್ ತಂದೆ ಅಜೀಜಮಿಯ್ಯಾ ಶಾ ವಯ: 21 ವರ್ಷ ಇತನು ತನ್ನ ಮೊಟರ ಸೈಕಲ್ ನಂ. ಕೆಎ-38/ಎಲ್-189 ನೇದರ ಮೇಲೆ ಚಿಟಗುಪ್ಪಾ ಪಟ್ಟಣಕ್ಕೆ ಕೂಕ್ಕರ ಕೆಲಸದ ಆರ್ಡರ್ ನಿಮಿತ್ಯ ಬೀದರದಿಂದ ಹೋಗಿ ಇತನು ಚಿಟಗುಪ್ಪಾದಿಂದ ತನ್ನ ಕೆಲಸ ಮುಗಿಸಿಕೊಂಡು ಮರಳಿ ಬೀದರಗೆ ಮನ್ನಾಏಖೇಳ್ಳಿ-ಬೀದರ ರೋಡ್ ಮುಖಾಂತರ ಬರುತ್ತಿರುವಾಗ ಬಗದಲ ರೋಡಿನ ಮೇಲೆ ವೀರಶೇಟ್ಟಿ ದೇಸಾಯಿ ರವರ ಹೊಲದ ಹತ್ತಿರ ನ್ನ ಮೊಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಬೀದರ ಕಡೆಯಿಂದ ಬರುತ್ತಿದ್ದ ಅಪ್ಪಿ ಆಟೋ ನಂ. ಕೆಎ-38/ 6135 ನೇದ್ದಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಮಹ್ಮದ್ ಐಹ್ಮದ್ ಇತನ ಹಣೆಗೆ ಭಾರಿ ರಕ್ತಗಾಯ, ಡಭುಜದಿಂದ ಡಮೊಣಕೈವರೆಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ, ಬಲಗಾಲು ಹೆಬ್ಬೆರಳಿಗೆ ರಕ್ತಗಾಯ ಮತ್ತು ಬಲಗಾಲು ಮೊಳಕಾಲಿಗೆ ರಕ್ತಗಾಯವಾಗಿ ಆಟೋದ ಮೇಲೆ ಬಿದ್ದು ಭಾರಿ ಗಾಯಗೊಂಡಿದ್ದರಿಂದ ಆತನಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಅಂಬುಲೇನ್ಸ್ ಮುಖಾಂತರ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದಾಗ ಚಿಕಿತ್ಸೆ ಫಲಕಾರಿಯಾಗದೇ ಮಹ್ಮದ್ ಐಹ್ಮದ್ ಇತನು ಮೃತಪಟ್ಟಿರುತ್ತಾನೆ ಹಾಗೂ ಅಪಘಾತಕೊಳ್ಳಗಾದ ಆಟೋ ನಂ. ಕೆಎ-38/6135 ನೇದರ ಚಾಲಕನಾದ ನಾಗಶೇಟ್ಟಿ ತಂದೆ ಪಾಂಡುರಂಗ ವಯ: 43 ವರ್ಷ, ಜಾತಿ: ಲಿಂಗಾಯತ, ಸಾ: ಬಗದಲ ಇತನಿಗೂ ಸಹ ಡಗಣ್ಣಿನ ಹುಬ್ಬಿಗೆ ಭಾರಿಗಾಯ, ಡಗಲ್ಲಕ್ಕೆ ರಕ್ತಗಾಯ, ಬಲಗಾಲು ಮೊಳಕಾಲಿಗೆ ರಕ್ತಗಾಯ ಮತ್ತು ಆಟೋ ಚಾಲಕ ನಾಗಶೇಟ್ಟಿ ಇತನ ಮಗನಾದ ಪಾಂಡು ವಯ: 10 ವರ್ಷ ಇತನಿಗೂ ಸಹ ತುಟಿಗೆ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 81/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 16-08-2020 ರಂದು ಸಿದ್ದಿ ತಾಲೀಮ ಓಣಿಯ ಲಾಲ್ ದರ್ವಾಜಾ ಮಜ್ಜಿದ್ ಹತ್ತಿರ ಕೆಲವು ಜನರು ಗುಂಪು ಕಟ್ಟಿಕೊಂಡು ಹಣ ಪಣಕ್ಕೆ ಹಚ್ಚಿ ಪರೆಲ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಸಿದ್ಧಲಿಂಗ ಪಿ.ಎಸ್.ಐ (ಕಾ.ಸೂ) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ 1) ಅಬ್ದುಲ್ ಫರೀದ ತಂದೆ ಅಬ್ದುಲ್ ಮಾಜೀದ ವಯ: 38 ವರ್ಷ, ಸಾ: ಸಿದ್ದಿ ತಾಲೀಮ್ ಬೀದರ, 2) ಅಬ್ದುಲ್ ಸತ್ತಾರ ತಂದೆ ಉಸ್ಮಾನ ಸಾಬ ವಯ: 50 ವರ್ಷ, ಸಾ: ಮುಸ್ತೈದಪುರಾ ಬೀದರ, 3) ಸಲೀಮ್ ತಂದೆ ಎಂ.ಡಿ ಶರೀಫ್ ವಯ: 35 ವರ್ಷ, ಸಾ: ನಯಾಕಮಾನ ಹತ್ತಿರ ಬೀದರ ಹಾಗೂ 4) ಜಮೀರ ತಂದೆ ಎಂ.ಡಿ ಅಮೀರ ವಯ: 37 ವರ್ಷ, ಸಾ: ಸಿದ್ದಿ ತಾಲೀಮ್ ಬೀದರ ಇವರೆಲ್ಲರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 2190/- ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ ಠಾಣೆ ಅಪರಾಧ ಸಂ. 115/2020, ಕಲಂ. 457, 380 ಐಪಿಸಿ :-

ದಿನಾಂಕ 15-08-2020 ರಾತ್ರಿ ವೇಳೆಯಲ್ಲಿ ಫಿರ್ಯಾದಿ ಶಿವಾನಂದ ತಂz ಗುರಲಿಂಗಪ್ಪಾ ಹೊನ್ನಳ್ಳಿ, ವಯ: 51 ವರ್ಷ, ಜಾತಿ: ಲಿಂಗಾಯತ, ಸಾ: ಹುಣಸಗೇರಾ ರವರ ತಮ್ಮನಾದ ಸಂಜುಕುಮಾರ ಇವರ ಮನೆಯಲ್ಲಿ ಯಾರು ಲ್ಲದೇ ಇರುವಾಗ ಯಾರೋ ಅಪರಿಚಿತ ಕಳ್ಳರು ಬಾಗಿಲು ಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟ 1) 20 ಗ್ರಾಮ ಬಂಗಾರದ ಒಂದು ಲಾಕೇಟ .ಕಿ 1,00,000/- ರೂ., 2) 2 ಗ್ರಾಮದ ಎರಡು ಬಂಗಾರದ ಉಂಗುರ .ಕಿ 20,000/- ರೂ., 3) ನಗದು ಹಣ 30,000/- ರೂ ಹೀಗೆ ಒಟ್ಟು ನಗದು 30,000/- ರೂ ಮತ್ತು 24 ಗ್ರಾಮ ಬಂಗಾರ ಒಟ್ಟು .ಕಿ 1,50,000/- ರೂ. ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ ಠಾಣೆ ಅಪರಾಧ ಸಂ. 116/2020, ಕಲಂ. 457, 380 ಐಪಿಸಿ :-

ದಿನಾಂಕ 15-08-2020 ರಂದು ಫಿರ್ಯಾದಿ ದೊಡ್ಡಪ್ಪಾ ತಂದೆ ಚನ್ನಪ್ಪಾ ಬಿರಾದಾರ, ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹುಣಸಗೇರಾ ರವರ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ನೋಡಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಿಯ ಲಾಕರ ತೆಗೆದು ಅಲಮಾರದಲ್ಲಿದ್ದ 1) 10 ಗ್ರಾಮ ಬಂಗಾರದ ಒಂದು ರಿಂಗ್ .ಕಿ 50,000/- ರೂ., 2) 2.5 ಗ್ರಾಮ ಬಂಗಾರದ ಎರಡು ಉಂಗುರುಗಳು .ಕಿ 25,000/- ರೂ., 3) 8 ಗ್ರಾಮ ಬಂಗಾರದ ಬೆಂಡೋಲಿ .ಕಿ 40,000/- ರೂ.. ಮತ್ತು 4) ನಗದು 50,000/- ರೂ. ಹೀಗೆ ಒಟ್ಟು 50,000/- ರೂ. ನಗದು ಮತ್ತು ಒಟ್ಟು 23 ಗ್ರಾಮ ಬಂಗಾರದ ಅಭರಣಗಳು .ಕಿ 1,20,000/- ರೂ. ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 117/2020, ಕಲಂ. 379 ಐಪಿಸಿ :-

ದಿನಾಂಕ 15-08-2020 ರಂದು 1930 ಗಂಟೆಗೆ ಫಿರ್ಯಾದಿ ಶೇಶಿಕಾಂತ ತಂದೆ ಮಾಣಿಕರಾವ ಕುಲಕರ್ಣಿ ವಯ: 60 ವರ್ಷ, ಜಾತಿ: ಬ್ರಾಹ್ಮಣ, ಸಾ: ಹುಣಸಗೇರಾ ರವರು ನ್ನ ಹೊಲದಿಂದ ಮನೆಗೆ ಬಂದು ನ್ನ ಮೊಟಾರ ಸೈಕಲ ನಂ. ಕೆಎ-39/ಕೆ-2725 ನೇದನ್ನು ತನ್ನ ಮನೆಯ ಪರಖಾನೆಯಲ್ಲಿ ಇಟ್ಟು, ರಾತ್ರಿ 2300 ಗಂಟೆಗೆ ಮಲಗಿಕೊಂಡು ದಿನಾಂಕ 16-08-2020 ರಂದು 0500 ಗಂಟೆಗೆ ಎದ್ದು ನೋಡಲು ಸದರಿ ಮೋಟಾರ ಸೈಕಲ ಪರಖಾನೆಯಲ್ಲಿಯೇ ಇದ್ದು, ನಂತರ ಆಳು ಮನುಷ್ಯನಾದ ಗುರುನಾಥ ಕೊಟಗೆಳೆ ಇವನು ಬೆಳಗಿನ ಜಾವ ಮನೆಗೆ ಕೆಲಸಕ್ಕೆ ಬರುತ್ತಿದ್ದರಿಂದ ಹೊರ ಬಾಗಿಲು ಕೊಂಡಿ ತೆಗೆದು ಸುಮ್ಮನೆ ಬಾಗಿಲು ಮುಂದಕ್ಕೆ ಮಾಡಿ ಪುನಃ ಮನೆಯಲ್ಲಿ ಹೋಗಿ ಮಲಗಿಕೊಂಡು 0600 ಗಂಟೆ ಸುಮಾರಿಗೆ ಆಳು ಮನುಷ್ಯ ಗುರುನಾಥ ಇವನು ಮನೆಗೆ ಬಂದು ಎಬ್ಬಿಸಿ ನಿಮ್ಮ ಮೊಟಾರ ಸೈಕಲ ಕೀಲಿ ಕೊಡಿ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಕೇಳಲು ಫಿರ್ಯಾದಿಯು ಇಟ್ಟಿದ ನ್ನ ಮೋಟಾರ ಸೈಕಲ ಪರಖಾನೆಯಲ್ಲಿ ಇರುವುದಿಲ್ಲ, ನಂತರ ಫಿರ್ಯಾದಿಯು ಊರಲ್ಲಿ ಹಾಗು ಘಾಟಬೊರಾಳ, ರಾಜೋಳಾ, ಸೋನಕೇರಾ, ಕನಕಟ್ಟಾ ಗ್ರಾಮಗಳಲ್ಲಿ ಹುಡುಕಾಡಿದರು ಎಲ್ಲಿಯೂ ಸದರಿ ಮೊಟಾರ ಸೈಕಲ ಸಿಕ್ಕಿರುವುದಿಲ, ಯಾರೊ ಅಪರಿಚಿತ ಕಳ್ಳರು ಸದರಿ ಮೋಟಾರ ಸೈಕಲ ಅ.ಕಿ 30,000/- ರೂ. ಬೆಲೆ ಬಾಳುವುದು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಮೋಟಾರ ಸೈಕಲ ಬಣ್ಣ: ನೀಲಿ ಬಣ್ಣ, ಇಂಜಿನ ನಂ. HA10ELCHD23135, ಚಾಸಿಸ್ ನಂ. MBLHA10ARCHD02243, ಮಾಡಲ್ 2012 ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.