ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-04-2021
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ.37/2021, ಕಲಂ. 379 ಐಪಿಸಿ :-
ಫಿರ್ಯಾದಿ ಮಾರುತಿ ತಂದೆ ಗ್ಯಾನೋಬಾ ಪವಾರ ವಯ: 52 ವರ್ಷ, ಜಾತಿ: ಲಮಾಣಿ, ಸಾ: ಇರಕಪಳ್ಳಿ, ಮಂಡಲ: ನಾಗಲಗಿದ್ದಾ, ತಾ: ನಾರಾಯಣಖೇಡ, ಜಿಲ್ಲಾ: ಸಂಗಾರಡ್ಡಿ ತೆಲಂಗಾಣಾ ಶಿವಪೂರ ತಾಂಡಾದ ಮಲ್ಕು ತಂದೆ ಟೊಗಾ ರಾಠೋಡ ರವರ ತಾಯಿ ವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರ ಮನೆಗೆ ಮಾತನಾಡಲು ದಿನಾಂಕ 12-09-2020 ರಂದು 1700 ಗಂಟೆಯ ಸುಮಾರಿಗೆ ಬಂದು ಅವರ ಮನೆಯ ಮುಂದೆ ತನ್ನ ದ್ವಿಚಕ್ರ ವಾಹನ ಸಂ. ಟಿ.ಎಸ್-15/ಇ.ಪಿ-3026 ನೇದನ್ನು 2200 ಗಂಟೆಯ ಸುಮಾರಿಗೆ ಹ್ಯಾಂಡ ಲಾಕ ಮಾಡಿ ಮಲಗಿಕೊಂಡು ದಿನಾಂಕ 13-09-2020 ರಂದು 0500 ಗಂಟೆಗೆ ಹೊರಗೆ ಬಂದು ನೋಡಲು ಸದರಿ ದ್ವಿಚಕ್ರ ವಾಹನ ಇರಲಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಫಿರ್ಯಾದಿಯವರ ಅನುಮಾನದ ಪ್ರಕಾರ ಹಂದಿಕೇರಾ ತಾಂಡಾದ ರಮೇಶ ತಂದೆ ಗುರುನಾಥ ಆಡೆ ಇತನು ಸದರಿ ದ್ವಿಚಕ್ರ ವಾಹನ ಕಳವು ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿರುತ್ತದೆ, ಕಳುವಾದ ವಾಹನದ ವಿವರ 1) ಟಿ.ಎಸ್-15/ಇ.ಪಿ-3026, 2) ಚಾಸಿಸ್ ನಂ. MIBLIARO22HGD16343, 3) ಇಂಜಿನ್ ನಂ. JA06ERHGD62273 ಇರುತ್ತದೆ ಹಾಗೂ ಸದರಿ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 47/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 21-04-2021 ರಂದು ಒಬ್ಬ ವ್ಯಕ್ತಿ ಭಾತಂಬ್ರಾ - ಲಖನಗಾಂವ ರೋಡಿಗೆ ಇರುವ ರೂದ್ರಭೂಮಿ ಹತ್ತಿರ ಸಾರ್ವಜನಿಕರಿಂದ ಒಂದು ರೂಪಾಯಿಗೆ 90/- ರೂಪಾಯ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾನೆ ಅಂತ ಮಹೇಂದ್ರಕುಮಾರ ಪಿಎಸ್ಐ (ಕಾ.ಸೂ) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾತಂಬ್ರಾ ಗ್ರಾಮದ ಲಖನಗಾಂವ ರೋಡಿಗೆ ಇರುವ ಭವಾನಿ ಗುಡಿಯ ಹತ್ತಿರ ಇರುವ ಗೋರಕ ವಡ್ಡರ ರವರ ಹೊಟಲ ಹತ್ತಿರ ಹೋಗಿ ಮರೆಯಾಗಿ ನೋಡಲು ಅಲ್ಲಿ ಆರೋಪಿ ಗಣೇಶ ತಂದೆ ಭಾಗ್ಯವಾನ ಸ್ವಾಮಿ ವಯ: 36 ವರ್ಷ, ಜಾತಿ: ಸ್ವಾಮಿ, ಸಾ: ಭಾತಂಬ್ರಾ, ತಾ: ಭಾಲ್ಕಿ ಇತನು ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ನಂತರ ಆರೋಪಿಗೆ ಹಿಡಿದು ಆತನ ಅಂಗ ಜಡತಿ ಮಾಡಿ ನೋಡಲು ಆತನ ಹತ್ತಿರ 1) ನಗದು ಹಣ 6570/- ರೂ 2) 4 ಮಟಕಾ ನಂಬರ ಬರೆದು ಚೀಟಿಗಳು, 3) ಒಂದು ಬಾಲ ಪೇನ್ ಹಾಗೂ 4) ಒಂದು ಶಾಮಸಂಗ ಮೋಬೈಲ್ ಅ.ಕಿ 500/- ರೂ. ಸಿಕ್ಕಿದ್ದು, ನಂತರ ಆತನ ಹತ್ತಿರ ಸಿಕ್ಕಿರುವುದನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿತನಿಗೆ ಮಟಕಾ ಚೀಟಿ ಬರೆದುಕೊಂಡು ಬುಕ್ಕಿ ಹಣ ಯಾರಿಗೆ ಕೊಡುತ್ತಿ ಅಂತ ವಿಚಾರಿಸಿದಾಗ ಆತನು ಸಂಜೀವಕುಮಾರ ಕಾರಬಾರಿ ಸಾ: ನಿಡೇಬನ ಇವರಿಗೆ ಕೊಡುತ್ತೇನೆ ಅಂತ ಹೇಳಿರುತ್ತಾನೆ ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.