¢£ÀA¥Àæw C¥ÀgÁzsÀUÀ¼À
ªÀiÁ»w ¢£ÁAPÀ 08-09-2018
¨sÁ°Ì £ÀUÀgÀ ¥Éưøï oÁuÉ C¥ÀgÁzsÀ
¸ÀA. 250/2018, PÀ®A. 143, 427 L¦¹ :-
ದಿನಾಂಕ 07-09-2018 ರಂದು
ಫಿರ್ಯಾದಿ ಪ್ರಕಾಶ ತಂದೆ ವಿಶ್ವನಾಥಪ್ಪಾ ಬಿರಾದಾರ ವಯ: 64 ವರ್ಷ, ಸಾ:
ಶರಣ
ನಗರ ಅಗ್ನಿ ಶಾಮಕ ಹತ್ತಿರ ಭಾಲ್ಕಿ ರವರ ಹತ್ತಿರ ಕಾರ ನಂ. ಕೆಎ-38/ಎಂ-1224 ನೆದ್ದು ಇರುತ್ತದೆ,
ಸದರಿ ಕಾರನ್ನು ತನ್ನ ಮನೆಯ ಎದುರಿಗೆ ಇರುವ ರೋಡಿನ ಪಕ್ಕದಲ್ಲಿ ನಿಲ್ಲಿಸುತ್ತಾರೆ, ತನ್ನ ಕಾರಿನ
ಪಕ್ಕದಲ್ಲಿ ಇನ್ನು 8-10 ಕಾರುಗಳು ದಿನಾಲು ನಿಲ್ಲುತ್ತವೆ, ಕಳೆದ 2018 ವಿಧಾನಸಭೆ
ಚುಣಾವಣೆಯಲ್ಲಿ ಫಿರ್ಯಾದಿಯು ಭಾರತೀಯ ಜನತಾ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡು ಮುಂಚೂಣಿಯಲ್ಲಿ
ನಿಂತು ಕೆಲಸ ಮಾಡಿದ್ದರಿಂದ ವಿರೋಧ ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಫಿರ್ಯಾದಿಯವರ ವಾರ್ಡಿನಲ್ಲಿ
ಬಿಜಿಪಿಗೆ ಹೆಚ್ಚಿನ ಮತಗಳು ಬಂದಿರುವದರಿಂದ ಅವರಿಗೆ ಹೊಟ್ಟೆಕಿಚ್ಚು ಮತ್ತು ಮುಜುಗುರು ಉಂಟಾಗಿ
ಅವರು ಫಿರ್ಯಾದಿಯವರ ಮೇಲೆ ಅಸೂಯೇ ಪಡುತ್ತಿದ್ದಾರೆ, ಹೀಗಿರಲು ದಿನಾಂಕ 07-09-2018 ರಂದು ರಾತ್ರಿ ಫಿರ್ಯಾದಿಯು
ತನ್ನ ಕುಟುಂಬದೊಂದಿಗೆ ಮನೆಯಲ್ಲಿ ಮಲಗಿಕೊಂಡಿದ್ದು, ನಂತರ 0300 ಗಂಟೆಗೆ ಗಾಜು ಒಡೆಯುವ ಶಬ್ದ
ಕೇಳಿ ಫಿರ್ಯಾದಿಯು ಎಚ್ಚರವಾಗಿ ಹೊರಗೆ ಬಂದು ನೊಡಲು ಮನೆಯ ಲೈಟಿನ ಬೆಳಕಿನಲ್ಲಿ ಫಿರ್ಯಾದಿಗೆ
ಕಾಣಿಸದ್ದೆನೆಂದರೆ ಮನೆಯ ಬಾಗಿಲು ಎದುರು ಗಾಜಿನ ಬಾಟಲಿ ಚೂರು ಬಿದಿದ್ದು ಸ್ವಲ್ಪ ಮುಂದೆ ಬಂದು
ನೊಡಲು 8-10 ಜನ ಫಿರ್ಯಾದಿಗೆ ನೊಡಿ ಓಡಿ ಹೊದರು, ಮನೆಯ ಮುಂದಿನ ರಸ್ತೆಯ ಮೇಲೆ ಬಂದು ಆಚೆ ನೊಡಲು
ತನ್ನ ಕಾರಿನ ಕಡೆಗೆ ಗಮನ ಹರಿಸಲು ಕಾರಿನ ಮುಂದಿನ ಗಾಜುಗಳನ್ನು ಸಂಪೂರ್ಣವಾಗಿ ನುಚ್ಚು ನೊರಾಗಿ
ಕಾರಿನ ಗಾಜು ಒಡೆದು ಹಾನಿ ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ
ಪೊಲೀಸ್ ಠಾಣೆ ಅಪರಾಧ ಸಂ. 277/2018, ಕಲಂ. 279, 337 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 07-09-2018
ರಂದು
ಫಿರ್ಯಾದಿ ಅನೀಲಕುಮಾರ ತಂದೆ ಚೆನ್ನಪ್ಪಾ ಮುತ್ತಂಗಿಕರ್ ವಯ:
44 ವರ್ಷ,
ಸಾ:
ಸಿಕಿಂದ್ರಪೂರ ಗ್ರಾಮ ಬೀದರ ರವರು ತನ್ನ ಹೆಂಡತಿ ಲಕ್ಷ್ಮಿರವರೊಂದಿಗೆ ತಮ್ಮ ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ. ಕೆಎ-38/ಎಲ್-4677
ನೇದ್ದರ ಮೇಲೆ ಚಿಟ್ಟಾ ಗ್ರಾಮದ ತಮ್ಮ ಸಂಬಂಧಿಕರ ಗೃಹ ಪ್ರವೇಶ ಕಾರ್ಯಕ್ರಮ ಕುರಿತು ಚಿಟ್ಟಾ ವಾಡಿ ಗ್ರಾಮಕ್ಕೆ ಹೋಗುತ್ತಿರುವಾಗ ಚಿಟ್ಟಾ ವಾಡಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ಎದುರಿನಿಂದ ಚಿಟ್ಟಾ ಕಡೆಯಿಂದ ಹೋಡಾ ಶೈನ್ ಮೋಟಾರ ಸೈಕಲ ನಂ. ಕೆಎ-19/ಡಬ್ಲೂ-5300
ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಗೆ ಎಡಗಾಲಿನ ಕಣ್ಣಿಗೆ ರಕ್ತಗಾಯ, ಎಡಗೈ ಮುಂಗೈ ಹತ್ತಿರ ತರಚಿದ ಗಾಯವಾಗಿರುತ್ತದೆ ಹಾಗು ಹೆಂಡತಿ ಲಕ್ಷ್ಮಿ ಇವಳಿಗೆ ಗಟಾಯಿಗೆ, ಎಡ ಮೊಳಕೈ ಕೆಳಗೆ, ಬಲ ಮೊಳಕೈಗೆ, ಎಡಗಣ್ಣಿನ ಹತ್ತಿರ ರಕ್ತಗಾಯ ಹಾಗು ತಲೆಯ ಹಿಂದೆ ಗುಪ್ತಗಾಯವಾಗಿರುತ್ತದೆ,
ಆರೋಪಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ನಂತರ ಆರೋಪಿಯು ತನ್ನ ವಾಹನದ ಸಮೇತ ಅಲ್ಲಿಂದ ಹೋಗಿರುತ್ತಾನೆ, ನಂತರ ಫಿರ್ಯಾದಿಯವರು ಒಂದು ಆಟೋದಲ್ಲಿ ಕುಳಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.