Police Bhavan Kalaburagi

Police Bhavan Kalaburagi

Friday, October 30, 2020

BIDAR DISTRICT DAILY CRIME UPDATE 30-10-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-10-2020

 

ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 80/2020, ಕಲಂ. 279, 338, 283, 304 () ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 

ದಿನಾಂಕ: 29/10/2020 ರಂದು 0915 ಗಂಟೆಗೆ ಫಿರ್ಯಾದಿ ಕು: ದೀಪಕಕುಮಾರ ತಂದೆ ಕಾಶಿನಾಥ ಬುಟ್ಟೆನೋರ್ ಸಾ: ಹುಡಗಿ ತಾ: ಹುಮನಾಬಾದ ಜಿಲ್ಲೆ: ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೇನೆಂದರೆ ದಿನಾಂಕ: 29/10/2020 ರಂದು ಮುಂಜಾನೆ ಫಿರ್ಯಾದಿ ಮತ್ತು ಎಮ್ ಡಿ ಮೊಯಿನ್ ತಂದೆ ಎಮ್ ಡಿ ರಿಯಾಜ ಸಡಕವಾಲೆ ಇಬ್ಬರೂ ಕೂಡಿಕೊಂಡು ಮನೆಯಿಂದ ಕಾಲ ನಡಿಗೆಯಲ್ಲಿ ನಡೆದುಕೊಂಡು  ಬಹೀರ್ದೇಸೆಗೆ ಹೋಗುತ್ತಿದ್ದಾಗ ಮುಂಜಾನೆ 7:45 ಗಂಟೆಯ ಸುಮಾರಿಗೆ ಹುಡಗಿ ಗ್ರಾಮದ ಫ್ಲೈಓವರ್ ಹತ್ತಿರ ಬಂದಾಗ ಲಾರಿ ಸಂಖ್ಯೆ: TS-13/UB-4741. ನೇದರ ಚಾಲಕ ತನ್ನ ಲಾರಿಗೆ ಇಂಡಿಕೇಟರ್ ಹಾಕದೇ ಯಾವುದೇ ರೀತಿಯ ಮುಂಜಾಗೃತೆ ಕ್ರಮವನ್ನು ವಹಿಸದೇ ಲಾರಿಯನ್ನು ಹೈವೇ ರೋಡಿನ ಮೇಲೆ ನಿಲ್ಲಿಸಿದರೆ ಅಪಘಾತಗಳು ಆಗುತ್ತವೆ ಅಂತ ಗೊತ್ತಿದ್ದರೂ ಸಹ ಯಾವುದೇ ರೀತಿಯ ಮುಂಜಾಗೃತೆ ಕ್ರಮವನ್ನು ವಹಿಸದೇ ತನ್ನ ಲಾರಿಯನ್ನು ಹೈವೇ ರೋಡಿನ ಮೇಲೆ ನಿಲ್ಲಿಸಿ ಹೋಗಿದರಿಂದ ಅದೇ ಸಮಯಕ್ಕೆ ಹಿಂದಿನಿಂದ ಅಂದರೆ ಹೈದ್ರಾಬಾದ ಕಡೆಯಿಂದ ಒಂದು ಮೋಟಾರ್ ಸೈಕಲ್ ನೇದರ ಚಾಲಕ ತನ್ನ ಮೋಟಾರ್ ಸೈಕಲ್ ಮೇಲೆ ಇನ್ನೋಬ್ಬನಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಲಾರಿಯ ಹಿಂದುಗಡೆಯ ಬಲಗಡೆಯ ಭಾಗಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರದಲ್ಲಿ ಬಂದು ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾರೆ. ಮೋಟಾರ್ ಸೈಕಲ್ ಚಾಲಕನಿಗೆ ಎದೆಯಲ್ಲಿ ತೀವ್ರ ರಕ್ತಗಾಯ ಮತ್ತು ಎಡಗೈಗೆ ತೀವ್ರ ಗುಪ್ತಗಾಯಗಳು ಆಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 139/2020 ಕಲಂ 3 & 7 ಇ.ಸಿ. ಕಾಯ್ದೆ :-

ದಿನಾಂಕ: 29-10-2020 ರಂದು ಒಂದು ಅಶೋಕ ಲೇಲ್ಯಾಂಡ್ ಟೆಂಪೊ ನಂ ಎಂ.ಹೆಚ್-25/.ಜೆ-2812 ನೇದ್ದನ್ನು  ಪಿ.ಎಸ್. (ಕಾ&ಸೂ) ಹಾಗು ಅವರ ಸಿಬ್ಬಂದ್ದಿಯವರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲು   50 ಕೆ.ಜಿ ತೂಕದ 68 ಚೀಲಗಳಲ್ಲಿದ್ದ ಒಟ್ಟು 34 ಕ್ವೀಂಟಲ್ ಅಕ್ಕಿ ಪ್ರತಿ ಕೆ.ಜಿ ಪಿ.ಡಿ.ಎಸ್ ಅಕ್ಕಿಯ ಬೆಲೆ 30/-ರೂ ಇದ್ದು 34 ಕ್ವೀಂಟಲ್ ಅಕ್ಕಿಯ ಬೆಲೆ  1,02,000/- ರೂ ಮತ್ತು ಅಶೋಕ ಲೇಲ್ಯಾಂಡ್ ಟೆಂಪೊ ನಂ ಎಂ.ಹೆಚ್-25/.ಜೆ-2812 ನೇದ್ದರ ಅಂದಾಜು ಕಿಮ್ಮತ್ತು 5,00000/-ರೂ ಹೀಗೆ ಒಟ್ಟು 6,02,000/-ರೂ ಬೆಲೆಯ ಸ್ವತ್ತು ಜಪ್ತಿ ಮಾಡಿಕೊಂಡು  ಟೆಂಪೊ ಹತ್ತಿರ ಇದ್ದ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಹಸನಮುಲ್ಲಾ ತಂದೆ ಚಾಂದಮುಲ್ಲಾ ವಯಸ್ಸು// 21 ವರ್ಷ ಜಾತಿ// ಮುಸ್ಲಿಂ // ಚಾಲಕ ಸಾ// ಚಿಂಚೋಳಿ ಭೂಯಾರ ತಾ// ಉಮರ್ಗಾ ಎಂದು ತಿಳಿಸಿದಾಗ ಅವನಿಗೆ ನಿನ್ನ ಹತ್ತಿರ ಅಕ್ಕಿ ಲೋಡಿಗೆ ಸಂಬಂಧಿಸಿ ಯಾವುದೇ ರೀತಿಯ ದಾಖಲಾತಿಗಳನ್ನು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿರುತ್ತಾನೆ. ಅಕ್ಕಿ ಎಲ್ಲಿಂದ ಲೋಡ ಮಾಡಿದ್ದಿ ಎಂದು ವಿಚಾರಿಸಿದಾಗ ಅವನು ನಮ್ಮ ಮಾಲಿಕ ವಿಜಯ ಸಾ// ಉಮರ್ಗಾ ಮತ್ತು ಆರೀಫ ತಂದೆ ಮೋಸಿನ್ ಜಮಾದಾರ ಸಾ// ಹುಮನಾಬಾದ ಇವರು ಬಸವಕಲ್ಯಾಣದಲ್ಲಿ ಎಲ್ಲಿ ಲೋಡ ಮಾಡಿದ್ದಾರೆ ನನಗೆ ಗೋತ್ತಿಲ್ಲಾ ಅಕ್ಕಿ ಲೋಡ ಮಾಡಿದ ಟೆಂಪೋವನ್ನು ರಾಜಬಾಗ ಸವಾರ ದರ್ಗಾ ಹತ್ತಿರ ಮುಂಜಾನೆ 08;45 ಗಂಟೆಗೆ ಕೊಟ್ಟಿದ್ದು ಸದರಿ ಅಕ್ಕಿವುಳ್ಳ ಟೆಂಪೊವನ್ನು ಉಮರ್ಗಾನಗರದಲ್ಲಿ ಮಣಿಕಂಠ ರಾಠೋಡ ಸಾ// ಗುರಮಿಠಕಲ್ ರವರಿಗೆ ಒಪ್ಪಿಸಲು ತಿಳಿಸಿದ್ದರಿಂದ ನಾನು ಉಮರ್ಗಾಕ್ಕೆ ತೆಗೆದುಕೊಂಡು ಹೋಗುತ್ತಿದ್ದೆನೆ ಅಂತಾ ತಿಳಿಸಿರುತ್ತಾನೆ ಆದ್ದರಿಂದ ಸದರಿ ಮಾಲನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 96/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ 30/10/2020 ರಂದು 0100 ಗಂಟೆಗೆ ಶ್ರೀ ಮೈನು ತಂದೆ ಇಮಾಮಸಾಬ ಶೇಖ ವಯ 23 ವರ್ಷ ಜ್ಯಾತಿ ಮುಸ್ಲಿಂ ಉ// ಹೊಟೇಲ ಕೆಲಸ ಸಾ// ಸಾವಳಿ ರವರು ಠಾಣೆಗೆ ಹಾಜರಾಗಿ  ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ  ದಿನಾಂಕ 29/10/2020 ರಂದು 1930 ಗಂಟೆಗೆ  ಅಣ್ಣಾನಾದ ಹುಸೇನ ತಂದೆ ಇಮಾಮಸಾಬ ಶೇಖ ವಯ 30 ವರ್ಷ ಜ್ಯಾತಿ ಮುಸ್ಲಿಂ   ಹಾಗು ಶ್ಯಾದುಲ ತಂದೆ ಅಮಿನಸಾಬ ಶೇಖ ವಯ 20 ವರ್ಷ   ಇವರು ಕೂಡಿ ಮೊಟಾರ ಸೈಕಲ್‌ ನಂ ಎಮ್‌ ಎಚ್‌ 11 ಡಬ್ಲೂ 8647 ನೇದ್ದರ ಮೇಲೆ ಶ್ಯಾದೂಲ ತಂದೆ ಅಮೀನಸಾಬ ಶೆಖ್‌ ಇವರು ಓಡಿಸಿಕೊಂಡು ಹೊಳಸಮುದ್ರಕ್ಕೆ ಹಿಂದೆ ಹುಸೇನ ತಂದೆ ಇಮಾಮಸಾಬ ಶೇಖ ರವರಿಗೆ ಕೂಡಿಸಿಕೊಂಡು ಸಾವಳಿಯಿಂದ ಹೊಳಸಮುದ್ರಕ್ಕೆ ಜೋಳಾ ತೆರಲು ಅಂತಾ ಹೊಗಿದ್ದು ಹೋಳಸಮುದ್ರದಿಂದ ಮರಳಿ ರಾತ್ರಿ 10-15 ಗಂಟೆಯ ಸುಮಾರಿಗೆ ಬರುವಾಗ ಹೊಳಸಮುದ್ರ ಸಾವಳಿ ಮಧ್ಯ ಎನ್‌ ಎಚ್‌ 50 ರೋಡಿಗೆ ಹೊಳಸಮುದ್ರ ಶಿವಾರದಲ್ಲಿ ಸಾವಳಿ ಕಡೆಯಿಂದ ಯಾವುದೋ ವಾಹಾನ ನನ್ನ ಅಣ್ಣಾ ಹುಸೇನ ಹಾಗು ಶ್ಯಾದೂಲ ಬರುತ್ತಿದ್ದ ಮೊಟಾರ ಸೈಕಲ್‌ ನಂ ಎಮ್‌ ಎಚ್‌ 11 ಡಬ್ಲೂ 8647 ನೇದಕ್ಕೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿಹೊಗಿರುತ್ತಾನೆ ಇದರಿಂದ ಫಿರ್ಯಾದಿ ಅಣ್ಣಾ ಹುಸೇನ ಹಾಗು ಶ್ಯಾದೂಲ ಇವರು ಸ್ಥಳದಲ್ಲೆ ಮೃತ ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.