ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ
ಠಾಣೆ : ದಿನಾಂಕ :29/07/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ
ಬರುವ ಲಕ್ಷ್ಮೀಪೂರ ವಾಡಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಕಟ್ಟೆಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂ
ಗೆಲ್ಲಿರಿ ಅಂತಾ ಕೂಗಾಡುತ್ತಾ ಜನರಿಗೆ ಮೋಸ ಮಾಡಿ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾರೆ
ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್.ಪಿ ಸಾಹೇಬರು ಶಹಾಬಾದ ಉಪ ವಿಭಾಗ ಹಾಗೂ ಮಾನ್ಯ ಸಿಪಿಐ ಸಾಹೇಬರು ಚಿತ್ತಾಪೂರ
ವೃತ್ತ ರವರ ಮಾರ್ಗದರ್ಶನದಲ್ಲಿ ಲಕ್ಷ್ಮೀಪೂರವಾಡಿ
ಗ್ರಾಮದ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು ಮರೆಯಲ್ಲಿ ನಿಂತು
ನಿರೀಕ್ಷಣೆ ಮಾಡಿ ನೋಡಿ ಸದರಿಯವನು ಮಟಕಾ ಅಂಕಿ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ
ಪಡಿಸಿಕೊಂಡು ದಾಳಿ ಮಾಡಲಾಗಿ ಮಟಾಕಾ ನಂಬರ ಬರೆಸುತ್ತಿದ್ದವರು ನಮ್ಮ ಪೊಲೀಸ ಸಮವಸ್ತ್ರ ನೋಡಿ ಓಡಿ
ಹೋಗಿದ್ದು ಸಿಬ್ಬಂದಿಯವರ ಸಹಾಯದಿಂದ ಮಟಕಾ ನಂಬರ
ಬರೆದುಕೊಳ್ಳುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಆನಂದ ತಂದೆ
ಭೀಮಯ್ಯಾ ಆಂದೇಲಿ ಸಾ:ಲಕ್ಷ್ಮೀಪೂರ ವಾಡಿ ಅಂತಾ ತಿಳಿಸಿದ್ದು ಆತನ ಅಂಗಶೋಧನೆ ಮಾಡಲಾಗಿ ಆತನ
ಹತ್ತಿರ ನಗದು ಹಣ 1640/- ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ
ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಅವುಗಳು ಜಪ್ತು ಪಡಿಸಿಕೊಂಡು ಸದರಿಯವನೊಂದಿಗೆ ಷಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂಬರ 85/2019 ಕಲಂ:78(3) ಕೆ.ಪಿ ಕಾಯ್ದೆ ಸಂಗಡ 420 ಐಪಿಸಿ
ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗೃಹಿಣಿಗೆ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ
ಠಾಣೆ : ಶ್ರೀಮತಿ ರವರ ತಂದೆಯವರು
ಈಗ 7-8 ವರ್ಷಗಳ
ಹಿಂದೆ ತೀರಿಕೊಂಡಿರುತ್ತಾರೆ, ನನಗೆ ಮದುವೆ ಮಾಡಿ
ಕೊಟ್ಟಿರುತ್ತಾರೆ, ನಾನು
ಬಾಣೆತನಕ್ಕೆ ನನ್ನ ತವರು
ಮನೆಗೆ ಬಂದು ನಮ್ಮ
ತಾಯಿಯೊಂದಿಗೆ ವಾಸವಾಗಿರುತ್ತೇನೆ, ನನಗೆ ಈಗ ಎರಡು
ತಿಂಗಳ ಹಿಂದೆ ಬಾಣೆತನವಾಗಿ
ಒಂದು ಗಂಡು ಮಗು
ಜನಿಸಿರುತ್ತದೆ. ನಮ್ಮ
ಮನೆಯಲ್ಲಿ ನಾನು ನನ್ನ
ತಾಯಿ ಹಾಗು ನನ್ನ
ಅಣ್ಣ, ತಮ್ಮ
ಇದ್ದಿರುತ್ತೇವೆ, ನನ್ನ
ಮದುವೆಯ ಮುಂಚೆ ನಮ್ಮ
ಅಣ್ಣತಮ್ಮಕಿಯ ಮಹಾಂತೇಶ ತಂದೆ
ದೊಡ್ಡಪ್ಪ ತಳವಾರ ರವರು
ನನಗೆ ಚುಡಾಯಿಸುತ್ತಾ ನನಗೆ ಹಿಂಬಾಲಿಸುತ್ತಾ ನಾನು
ನಿನಗ ಮದುವೆಯಾಗುತ್ತೇನೆ ಅಂತಾ
ಹೇಳುತ್ತಾ ನನಗೆ ಕಿರುಕುಳ
ಕೊಡುತ್ತಾ ಬಂದಿರುತ್ತಾನೆ. ಈ
ಬಗ್ಗೆ ನಾನು ನಮ್ಮ
ತಾಯಿಗೆ ಮತ್ತು ನಮ್ಮ
ಚಿಕ್ಕಪ್ಪ ರವರಿಗೆ ತಿಳಿಸಿರುತ್ತೇನೆ, ಆಗ ನಮ್ಮ ತಾಯಿ
ಮತ್ತು ನಮ್ಮ ಚಿಕ್ಕಪ್ಪ
ರವರು ಕೂಡಿ ಮಹಾಂತೇಶನಿಗೆ
ತಿಳವಳಿಕೆ ಹೇಳಿರುತ್ತಾರೆ, ಈಗ ಕೆಲವು ದಿನಗಳಿಂದ ನಾನು ಬೈಹಿರದೇಸೆಗೆ
ಹೋದಾಗಲೆಲ್ಲಾ ಮಹಾಂತೇಶ ಇವನು
ನನಗೆ ಹಿಂಬಾಲಿಸುತ್ತಾ ಬಂದು
ನೀನು ನಿನ್ನ ಗಂಡನಿಗೆ ಬಿಟ್ಟು ನನ್ನೊಂದಿಗೆ
ಬಾ ಅಂತಾ ಅನ್ನುತ್ತಾ
ನನ್ನ ಕೈಹಿಡಿದು ಎಳೆದಾಡುತ್ತಿದ್ದನು, ಆಗ
ನಾನು ಅವನಿಂದ ತಪ್ಪಿಸಿಕೋಂಡು
ಓಡಿ ಮನೆಗೆ ಹೋಗುತ್ತಿದ್ದೇ, ಈ
ಎಲ್ಲಾ ವಿಚಾರ ನಾನು
ನನ್ನ ಮರಿಯಾದಿಗೆ ಅಂಜಿ
ಯಾರ ಮುಂದೆಯು ಹೇಳಿರುವದಿಲ್ಲಾ. ನಂತರ ದಿನಾಂಕ 07-07-2019 ರಂದು ರಾತ್ರಿ 8;00 ಗಂಟೆ
ಸುಮಾರಿಗೆ ನಾನೊಬ್ಬಳೆ ಬೈಹಿರದೇಸೆಗೆ ಹೋಗುತ್ತಿದ್ದಾಗ ಮಹಾಂತೇಶ ಇವನು ಯಾರು ಇರದ
ಸಮಯ ನೋಡಿ ನನ್ನ ಹಿಂದೆ ಬಂದು ನನಗೆ ಏ
ಸಿದ್ದಮ್ಮ ನಿಲ್ಲು ಅಂತಾ ಹೇಳಿ ಒಮ್ಮೇಲೆ ನನ್ನ ಬಾಯಿ ಒತ್ತಿ ಹಿಡಿದನು, ನಂತರ
ಅಲ್ಲೆ ಮರಿಯಲ್ಲಿ ಎಳೆದುಕೋಂಡು ಹೋಗಿ ನನಗೆ ಚೀರಾಡಿದರೆ ಖಲಾಸೆ
ಮಾಡುತ್ತೇನೆ ಅಂತಾ ಅಂದು ನನ್ನ ಬಾಯಿ ಒತ್ತಿ ಹಿಡಿದು ನನಗೆ
ನೆಲದ ಮೇಲೆ ಕೆಡವಿ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಭೋಗ ಮಾಡಿದನು, ನಂತರ
ಮಹಾಂತೇಶ ಇವನು ಈ ವಿಷಯ ಯಾರಿಗಾದರು ಹೇಳಿದರೆ ನಿನಗ ಜೀವ ಸಹಿತ
ಬಿಡುವುದಿಲ್ಲಾ ರಂಡಿ ಅಂತಾ ಅಂದು ಅಲ್ಲಿಂದ ಹೋದನು, ನಂತರ
ನಾನು ನನ್ನ ಮರಿಯಾದಿಗೆ ಅಂಜಿ ಸುಮ್ಮನಿದ್ದೆ. ನಿನ್ನೆ
ದಿನಾಂಕ 28-07-2019 ರಂದು ಮಹಾಂತೇಶ ಇವನು
ನನ್ನ ಗಂಡನ ಮೋಬೈಲಿಗೆ ಫೋನ ಮಾಡಿ ಅವಾಚ್ಯವಾಗಿ ಬೈದು ನಾನು ನಿನ್ನ ಹೆಂಡತಿಗೆ ಕೆಡಸಿನಿ ರಂಡಿ ಮಗನೆ
ಏನ ಕಿತಗೋತಿ ಕಿತಗೊ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ, ನಂತರ
ಇಂದು ನಾನು ನಮ್ಮ ತಾಯಿ ಮತ್ತು ನಮ್ಮ
ಚಿಕ್ಕಪ್ಪ ಮಹಾಂತೇಶ ಇವನು ನನಗೆ ಲೈಂಗಿಕ ಸಂಭೋಗ ಮಾಡಿದ ಬಗ್ಗೆ ತಿಳಿಸಿ ನಮ್ಮ
ತಾಯಿ ಮತ್ತು ನಮ್ಮ ಚಿಕ್ಕಪ್ಪನೊಂದಿಗೆ ಠಾಣೆಗೆ ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಯಡ್ರಾಮಿ ಠಾಣೆಯ ಗುನ್ನೆ ನಂ: 82/2019 ಕಲಂ 376 341,504,506 ಐಪಿಸಿ ಅಡಿಯಲ್ಲಿ
ಪ್ರಕರಣ ದಾಖಲಿಸಲಾಗಿದೆ.