ಅಪಘಾತ ಪ್ರಕರಣಗಳು :
ಅಫಜಲಪೂರ
ಠಾಣೆ : ದಿನಾಂಕ:15/04/2019 ರಂದು ಸಾಯಂಕಾಲ 5-30 ಪಿ,ಎಮ್.ಸುಮಾರಿಗೆ ನನ್ನ ಗಂಡನು ಹೊಲಕ್ಕೆ ಹೋಗಿ ಬರುತ್ತೆನೆ ಅಂತ
ತನ್ನ ಮೋಟಾರ ಸೈಕಲ ನಂಬರ ಕೆ.ಎ-02 ಈಪಿ-2188
ನೇದ್ದನ್ನು ತಗೆದುಕೊಂಡು ನಮ್ಮ ಮನಯಿಂದ ಹೋಗಿರುತ್ತಾನೆ. ನಂತರ 6-30 ಪಿ,ಎಮ್.ಸುಮಾರಿಗೆ ನಮ್ಮ ಜಾತಿಯ ಬಲವಂತ ತಂದೆ ಹಣಮಂತ ಹೋರ್ತಿ ರವರು ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ
ನಾನು ನಮ್ಮ ಹೊಲದಿಂದ ಮನೆಗೆ ಬರಬೆಕೆಂದು ಅಂಬಣ್ಣ ಲೋಣಾರ ರವರ ಹೊಲದ ಹತ್ತೀರ ನಡೆದುಕೊಂಡು ಬರುತ್ತಿರುವಾಗ
6-00 ಪಿ,ಎಮ್.ಸುಮಾರಿಗೆ ಸದರಿ
ಹೊಲದ ಹತ್ತೀರ ಮೋಟಾರ ಸೈಕಲ ಮೇಲೆ ಕರಜಗಿ ಕಡೆಯಿಂದ ಬರುತ್ತೀದ್ದ ನಿಮ್ಮ ಗಂಡನ ಮೋಟಾರ ಸೈಕಲಿಗೆ ಅಫಜಲಪೂರ
ಕಡೆಯಿಂದ ಟ್ಯಾಂಕರ ನಂಬರ ಕೆ,ಎ-32 ಸಿ-9641
ನೆದ್ದರ ಚಾಲಕನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು
ಎದುರುಗಡೆಯಿಂದ ಅಪಘಾತಪಡಿಸಿದನು ಆಗ ನಾನು ಹೋಗಿ ನೋಡಲಾಗಿ ನಿಮ್ಮ ಗಂಡನ ತಲೆಗೆ ಭಾರಿ ರಕ್ತಗಾಯ, ಬಲಗಾಲಿಗೆ ಮತ್ತು ಬಲಗೈಗೆ ಗಾಯಗಳಾಗಿ ಚರ್ಮ ಸುಲಿದಂತಾಗಿ ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿ
ಮೃತಪಟ್ಟಿರುತ್ತಾನೆ ಮತ್ತು ಸದರಿ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಸ್ಥಳದಲ್ಲಿ ನಿಲ್ಲಿಸಿ ಅಪಘಾತವಾಗಿರುವದನ್ನು
ನೋಡಿ ಟ್ಯಾಂಕರ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಗಂಡನ ಸೋದರ
ಅಳಿಯನಾದ ಬಸವರಾಜ ತಂದೆ ಸುಭಾಷ ಶೇಷಗಿರಿ ಇಬ್ಬರು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನು ಅಪಘಾತದಲ್ಲಿ
ಆಗಿರುವ ಗಾಯಗಳಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಕಂಡುಬಂದಿರುತ್ತದೆ.
ಅಂತಾ ಶ್ರೀಮತಿ ಭೌರಮ್ಮ ಗಂಡ ಹಣಮಂತ ನಿಂಬಾಳ ಸಾ: ಕರಜಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ಶ್ರೀ ಮಲ್ಲಿನಾಥ ತಂದೆ ಲಿಂಗಣ್ಣ ಅಂಕಲಗಿ ಸಾ: ಬೈರಾಮಡಗಿ ರವರು ದಿನಾಂಕ:24/02/2019
ರಂದು ಘತ್ತರಗಿ ಗ್ರಾಮದ ಶ್ರೀ ಭಾಗ್ಯವಂತಿ ದೆವಸ್ಥಾನದಲ್ಲಿ ನನ್ನ ತಂಗಿಯ ಮಗಳ ಜವಳ
ಕಾರ್ಯಕ್ರಮವಿದ್ದ ಕಾರಣ ಸದರಿ ಕಾರ್ಯಕ್ರಮಕ್ಕೆ ಹೋಗುವ ಕುರಿತು ನಾನು ಮತ್ತು ನನ್ನ ತಾಯಿಯಾದ ಶಾರದಾಭಾಯಿ ಇಬ್ಬರು ಕೂಡಿಕೊಂಡು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ
ನಂಬರ ಕೆ,ಎ-32 ಈಆರ್-7855 ನೇದ್ದರ ಮೇಲೆ ನಮ್ಮೂರಿನಿಂದ ಬಿಟ್ಟಿರುತ್ತೇವೆ ನಾವು 11-00 ಎ,ಎಮ್.ಸುಮಾರಿಗೆ ನಾವು ಹಿಂಚಗೇರಿ ಗ್ರಾಮ ದಾಟಿ ಅಂದಾಜು
500 ಮೀಟರದಲ್ಲಿ ಘತ್ರರ್ಗಿ ಗ್ರಾಮದ ಕಡೆ ಹೋಗುತ್ತಿದ್ದಾಗ ಸದರಿ ಕಾರ್ಯಕ್ರಮಕ್ಕೆ
ಬರುತ್ತಿದ್ದ ನಮ್ಮ ಗ್ರಾಮದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ ಕೋಗನೂರ ಈತನು ತನ್ನ ಮೋಟಾರ ಸೈಕಲ ನಂಬರ
ಕೆ,ಎ-32 ಈಎಲ್-3296 ನೇದ್ದರ ಮೇಲೆ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಹಿಂದಿನಿಂದ
ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದು ಆಗ ನನ್ನ ಮೋಟಾರ ಸೈಕಲ ಮೇಲೆ ಕುಳಿತಿದ್ದ ನನ್ನ ತಾಯಿಯು
ಮೋಟರ ಸೈಕಲ ಮೇಲಿಂದ ಕೇಳಗಡೆ ಬಿದ್ದಳು ಆಗ ನಾನು ಮೋಟಾರ ಸೈಕಲ ಮೇಲಿಂದ ಕೆಳಗಡೆ ಇಳಿದು ನೋಡಲಾಗಿ ನನ್ನ
ತಾಯಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಬೆಹುಸಾಗಿ ಬಿದ್ದಿರುತ್ತಾಳೆ ಮಾತನಾಡಿಸಿದರು ಮಾತನಾಡುವ ಸ್ಥಿತಿಯಲ್ಲಿ
ಇದ್ದಿರುವದಿಲ್ಲ ನಂತರ ನಾನು ನನ್ನ ತಾಯಿಗೆ ಅಫಜಲಪೂರ ಕಡೆ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ
ಹಾಕಿಕೊಂಡು ಬಂದು ಅಫಜಲಪೂರದ ಸರಕಾರಿ ದವಾಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ
ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ವಳಸಂಗಕರ ಆಸ್ಪತ್ರೇಗೆ ಸೇರಿಕ ಮಾಡಿರುತ್ತೇನೆ. ಕಾರಣ ನನ್ನ ಮೋಟಾರ ಸೈಕಲಕ್ಕೆ ಅಪಘಾತಪಡಿಸಿ
ನನ್ನ ತಾಯಿಗೆ ಗಾಯಗೋಳಿಸಿದ ಮೋಟಾರ ಸೈಕಲ ನಂಬರ ಕೆ,ಎ-32 ಈಎಲ್-3296 ನೇದ್ದರ ಸವಾರನಾದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ
ಕೋಗನೂರ ಸಾ||ಭೈರಾಮಡಗಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು
ಅಂತಾ ಸಲಕ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ
ಠಾಣೆ : ದಿನಾಂಕ 15/04/2019 ರಂದು ಮೃತ ಶಿವರಾಜ ಹಾಗೂ ಈಶ್ವರ
ಇವರಿಬ್ಬರು ಕೂಡಿಕೊಂಡು ಸೇಡಂ ಹತ್ತಿರ ರಂಜೋಳ ಗ್ರಾಮದಲ್ಲಿ ಫಿರ್ಯಾದಿಯ ಗ್ರಾಮದವನಾದ ಕಾಶಪ್ಪ
ತಂದೆ ಶಾಂತಪ್ಪ ಮಾಂಗ ಇವರು ದೇವರ ಕಾರ್ಯಕ್ರಮಕ್ಕೆ ಹೇಳಿದ ಮೇರೆಗೆ ಮೃತನು ತನ್ನ ಹತ್ತಿರ ಇದ್ದ
ಇನ್ನು ಪಾಸಿಂಗ ಆಗದ ಹಿರೋ ಹೊಂಡಾ ಸ್ಪಲೆಂಡರ ಮೋಟರ ಸೈಕಲ ನೇದ್ದನ್ನು ಇಬ್ಬರು ಕೂಡಿ ರಂಜೋಳ
ಗ್ರಾಮಕ್ಕ ಹೋಗಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಅದೇ ಮೋಟರ ಸೈಕಲ ಮೇಲೆ ಅಲ್ಲಿಂದ ಊರಿಗೆ
ಬರುತ್ತಿದ್ದಾಗ ಸಮಯ 6-15 ಪಿ.ಎಂ ಸುಮಾರಿಗೆ ಕಲಬುರಗಿಯ ಸೇಡಂ ರಾಜ್ಯ ಹೆದ್ದಾರಿಯ ಟೆಂಗಳಿ ಕ್ರಾಸ
ಸಮೀಪ ರಾಯಲ ಧಾಬಾದ ರೋಡಿನ ಮೇಲೆ ಮೋಟರ ಸೈಕಲ ಮೇಲೆ ಹೋಗುತ್ತಿದ್ದಾಗ ಎದುರು ಗಡೆಯಿಂದ ಅಂದರೆ
ಟೆಂಗಳಿ ಕ್ರಾಸ ಕಡೆಯಿಂದ ಲಾರಿ ನಂಬರ ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನು ತನ್ನ
ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಜಿತನದಿಂದ ಚಲಾಯಿಸಿಕೊಂಡು ಬಂದವನೇ ಮೃತನು ಚಲಾಯಿಸಿಕೊಂಡು
ಹೋರಟ ಮೋಟರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಸಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ
ಹೋಗಿರುತ್ತಾನೆ. ಈ ಅಪಘಾತದಲ್ಲಿ ಮೃತನ ತಲೆಯ ಹಿಂಬದಿಯಲ್ಲಿ ಭಾರಿ ರಕ್ತ ಗಾಯ, ಹಾಗೂ ಹಣೆಯ ಮುಂಭಾಗದಲ್ಲಿ ಭಾರಿ ರಕ್ತ
ಗಾಯ, ಬಲಗಣ್ಣಿನ ಹುಬ್ಬಿನ ಮೇಲೆ, ಮುಗಿಗೆ,
ಬಾಯಿಗೆ ರಕ್ತ ಗಾಯವಾಗಿರುತ್ತದೆ. ಮತ್ತು ಹೊಟ್ಟೆಯ ಮೇಲೆ ತರಚಿದ ಗಾಯ, ಬಲಗಾಲಿನ ಮೋಳಕಾಲ ಕೆಳಗೆ ರಕ್ತ ಗಾಯ, ಇತರ ಕಡೆಗೆ ತರಚಿದ
ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ತಲೆಯಲ್ಲಿ ರಕ್ತ ಗಾಯ ಮತ್ತು ಕುತ್ತಿಗೆಗೆ,
ಹೊಟ್ಟೆಗೆ ಒಳ ಪೆಟ್ಟಾಗಿರುತ್ತದೆ ಕಾರಣ ರಸ್ತೆ ಅಪಘಾತ ಪಡಿಸಿದ ಲಾರಿ ನಂಬರ
ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನ ಮೇಲೆ ಕಾನೂನಿ ಕ್ರಮ ಜರುಗಿಸಬೇಕೆಂದು ಶ್ರೀ ಈಶ್ವರ ತಂದೆ ಮಲ್ಕಪ್ಪ ತಳಕೇರಿ ಸಾ ಸಂಗಾವಿ ತಾ :
ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:33/2019 ಕಲಂ:279, 338,
304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ನೇದ್ದರ ಪ್ರಕಾರ ಗುನ್ನೆ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಅಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ
: ಶ್ರೀಮತಿ ಲಲಿತಾಬಾಯಿ ಗಂಡ ದೇವಿದಾಸ ರಾಠೋಡ ಸಾ:
ಟೇಕು ನಾಯಕ ತಾಂಡಾ ತಾ: ಆಳಂದ ರವರ ಗಂಡನು ಅಂಗವಿಕಲನಿದ್ದು ನನಗೆ ಎರಡು ಜನ ಹೇಣ್ಣು ಮಕ್ಕಳು, ಮೂರು ಜನ ಗಂಡು ಮಕ್ಕಳು ಇರುತ್ತಾರೆ
ಹೇಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡನ ಮನೆಯಲ್ಲಿ ವಾಸಿವಾಗಿರುತ್ತಾರೆ ಗಂಡು
ಮಕ್ಕಳು ಇನ್ನೂ ಚಿಕ್ಕವರಿದ್ದು ನಾನು & ನನ್ನ ಗಂಡ ಒಕ್ಕಲುತನ
ಕೆಲಸ ಮಾಡಿಕೊಂಡು ಬಂದಿರುತ್ತೇವೆ, ನಮ್ಮ ಹೇಣ್ಣು ಮಕ್ಕಳ ಮದುವೆ
ಕಾಲಕ್ಕೆ ಮತ್ತು ನಮ್ಮ ಹೋಲದಲ್ಲಿ ಬೋರವೆಲ ಹಾಕಿದ್ದು, ಹಾಗು ಇನ್ನೀತರ
ಹೊಲದ ಕೆಲಸ ಮಾಡಿಸಲು ಎಸ್.ಬಿ,ಹೆಚ್ ಬ್ಯಾಂಕ ಆಳಂದ ದಲ್ಲಿ ನಮ್ಮ ಹೋಲದ
ಮೇಲೆ 1.00.000/- (ಒಂದು ಲಕ್ಷ ರೂಪಾಯಿಗಳು) ಸಾಲಾ ಮಾಡಿದ್ದು ಮತ್ತು ನಮ್ಮ ಪ್ರಾಪಂಚಿಕ
ಅಡೆಚಡೆಗಾಗಿ ಅಲ್ಲಿಲ್ಲಿ ನಮ್ಮ ಪರಿಚಯಸ್ಥರಲ್ಲಿ ಕೈಗಡ ರೂಪದಲ್ಲಿ ಸುಮಾರು ಐದು ಲಕ್ಷ ರೂಪಾಯಿಗಳು
ಸಾಲ ಮಾಡಿದ್ದು ನನ್ನ ಗಂಡನು ನಮ್ಮ ಮನೆಯಲ್ಲಿ ಆಗಾಗ್ಗೆ ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ ಯಾವದೇ
ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು ಸರಿಯಾಗಿ ಇಳುವರಿ
ಕೊಟ್ಟಿರುವದಿಲ್ಲ ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ
ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನನ್ನ ಮುಂದೆ ಆಗಾಗ್ಗೆ ಹೇಳಿರುತ್ತಾರೆ. ದಿನಾಂಕ
16/04/2019 ರಂದು 05;00 ಎ.ಎಂಕ್ಕೆ ನನ್ನ ಗಂಡನು ನಮ್ಮ ಮನೆಯಲ್ಲಿ
ಎಂದಿನಂತೆ ಎದ್ದು ನಾನು ನಮ್ಮ ಹೋಲದಲ್ಲಿನ ಭಾಗ್ಯವಂತಿ ದೇವಿಗೆ ಪೂಜೆ ಮಾಡಿ ಬರುತ್ತೇನೆ ಅಂತಾ
ಹೇಳಿ ಹೋಲಕ್ಕೆ ಹೋಗಿದ್ದು ನಂತರ 07;00 ಗಂಟೆಯಾದರು ಮನೆಗೆ ಬರದೆ
ಇದ್ದುದ್ದರಿಂದ ನಮ್ಮ ಮೈದುನನಾದ ಹರಿ ತಂದೆ ತುಕಾರಾಮ ಪವಾರ ಇವರು ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ
ನನ್ನ ಗಂಡ ನಮ್ಮ ಹೋಲ ಸರ್ವೇ ನಂ, 119 ನೇದ್ದರಲ್ಲಿ ಬೇವಿನ ಗಿಡಕ್ಕೆ
ನೇಣು ಹಾಕಿಕೊಂಡು ನೇತಾಡುತ್ತಿದ್ದುನ್ನು ನೋಡಿ ಗಾಬರಿಯಾಗಿ ಮನೆಗೆ ಬಂದು ವಿಷಯ ತಿಳಿಸಿದ್ದರಿಂದ
ನಾನು ಮತ್ತು, ಹರಿ ಪವಾರ, ನೀಲಕಂಠ ತಂದೆ
ಕೀಶನ ರಾಠೋಡ, ಶಂಕರ ತಂದೆ ಲಕ್ಷ್ಮಣ ಆಡೆ, ಮೋಹನ
ತಂಧೆ ಗೋಪಿಚಂದ ಪವಾರ, ದಿನೇಶ ತಂದೆ ಖೇರು ರಾಠೋಡ ರವರೆಲ್ಲರೂ
ಕೂಡಿಕೊಮಡು ಗಾಬರಿಯಾಗಿ ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ ಬೇವಿನ ಗಿಡಕ್ಕೆ ನನ್ನ ಗಂಡನು ನೇಣು
ಹಾಕಿಕೊಂಡು ನೇತಾಡುತ್ತಿದ್ದನು, ಕಾರಣ ನನ್ನ ಗಂಡನು ಈ ವರ್ಷ ಮಳೆ
ಸರಿಯಾಗಿ ಬಂದಿಲ್ಲ ಯಾವದೇ ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು
ಸರಿಯಾಗಿ ಇಳುವರಿ ಕೊಟ್ಟಿರುವದಿಲ್ಲ ಮತ್ತು ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ
ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ಬೇಳಿಗ್ಗಿನ ಜಾವ 05;45 ಎ.ಎಂ
ಸುಮಾರಿಗೆ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಯಡ್ರಾಮಿ
ಠಾಣೆ : ಶ್ರೀ ಸಿದ್ದನಗೌಡ ತಂದೆ ಅಯ್ಯಪ್ಪಗೌಡ ಪೊಲೀಸ ಬಿರಾದಾರ
ಸಾ|| ಜಂಬೇರಹಳ್ಳ ತಾ|| ಜೇವರ್ಗಿ ರವರು ಸುಮಾರು ತಿಂಗಳಿಂದ ನಮ್ಮ
ಅಣ್ಣನ ಮಗನಾದ ಬಸವರಾಜ ತಂದೆ ಮಡಿವಾಳಪ್ಪಗೌಡ ಪೊಲೀಸ ಬಿರಾದಾರ ಈತನು ಆಸ್ತಿ ವಿಷಯದಲ್ಲಿ ಮತ್ತು ಮನೆಯಲ್ಲಿ
ಪಾಲಿನ ವಿಷಯದಲ್ಲಿ ತಕಾರು ಮಾಡುತ್ತಾ ನನ್ನೊಂದಿಗೆ ಹಗೆ ಸಾಧಿಸುತ್ತಾ ಬಂದಿರುತ್ತಾನೆ. ದಿನಾಂಕ
16-04-2019 ರಂದು 5;30 ಪಿ.ಎಂ ಕ್ಕೆ ನಾನು ನನ್ನ ಮಗ ಮಡಿವಾಳಪ್ಪಗೌಡ ಮತ್ತು ನನ್ನ ಸೊಸೆ ನಿರ್ಮಲಾ ರವರು ಕೂಡಿ ನಮ್ಮ
ಮನೆಯ ಮುಂದೆ ಮಾತಾಡುತ್ತಾ ಕುಳತಿದ್ದೆವು, ಅದೇ ಸಮಯಕ್ಕೆ ನಮ್ಮ ಅಣ್ಣನ ಮಗ
ಬಸವರಾಜ ಇವನು ಕೈಯಲ್ಲಿ ಕೊಡಲಿ ಸಮೇತ ಮುಳ್ಳಿನ ಕಂಟಿಗಳನ್ನು ಹಿಡಿದುಕೋಂಡು ನಮ್ಮ ಮನೆಗೆ ಬಂದು ಏ
ಸೂಳಿ ಮಕ್ಕಳ್ಯಾ ನಿಮ್ಮ ಮನೆಯಲ್ಲಿ ನನಗ ಇನ್ನು ಪಾಲು ಬರಬೇಕು, ನೀವು ಕೊಡುತ್ತಿಲ್ಲಾ,
ಅದಕ್ಕೆ ಇವತ್ತ ನಿಮ್ಮ ಮನೆಯಲ್ಲಿ ಮುಳ್ಳು ಕಂಟಿ ಹಾಕಿ ನಿಮಗೆಲ್ಲರಿಗು ಕೊಡಲಿಯಿಂದ
ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಮುಳ್ಳಕಂಟಿಗಳು ನಮ್ಮ ಮನೆಯಲ್ಲಿ ಹಾಕಿದನು, ನಂತರ ನಾನು ಈತರಹ ಯಾಕ ಮಾಡಲಾಕತ್ತಿ ಅಂತಾ ಕೇಳಿದ್ದಕ್ಕೆ ನನಗೆ ತಡೆದು ನಿಲ್ಲಿಸಿ,
ಏ ರಂಡಿ ಮಗನೆ ಈ ಮನೆಯಲ್ಲಿ ನನಗೆ ಪಾಲು ಬರುತ್ತದೆ ಅಂತಾ ಹೇಳಿದರು ನನಗೆ ಪಾಲು ಕೊಡುತ್ತಿಲ್ಲಾ,
ಇವತ್ತ ನಿನಗ ಸಾಯಿಸೆ ಬಿಡುತ್ತೇನೆ ಅಂತಾ ಅಂದು ತನ್ನ ಕೈಯಲ್ಲಿದ್ದ ಕೊಡಲಿಯನ್ನು
ಬೀಸಿದನು, ಆಗ ನಾನು ನೆಲಕ್ಕೆ ಕುಳಿತುಕೊಂಡೆನು, ಇಲ್ಲದಿದ್ದರೆ ನನ್ನ ತಲೆ ಕತ್ತರಿಸುತ್ತಿತ್ತು, ನಂತರ ನಾನು ಅಲ್ಲಿಂದ
ಓಡಿ ಹೋಗುತ್ತಿದ್ದಾಗ, ಬಸವರಾಜ ಇವನು ಕೊಡಲಿ ತೆಗೆದುಕೋಂಡು ನನಗೆ ಸಾಯಿಸಲು
ಬೆನ್ನು ಹತ್ತಿದ್ದನು, ನಂತರ ನಮ್ಮೂರ ಶಿವಪುತ್ರಪ್ಪ ತಂದೆ ಗುರಪ್ಪ ಅರಳಗುಂಡಗಿ,
ರೇವಣಸಿದ್ದಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಪೊಲೀಸ ಬಿರಾದಾರ ರವರು ಬಂದು ಬಸವರಾಜನಿಗೆ
ಹಿಡಿದು ಅವನ ಕೈಯಲ್ಲಿದ್ದ ಕೊಡಲಿಯನ್ನು ಕಸಿದುಕೋಂಡು ನಮ್ಮ ಮನೆಯ ಮುಂದೆ ಬಿಸಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ
ಠಾಣೆ : ದಿನಾಂಕ:15.04.2019
ರಂದು ರಾತ್ರಿ 10 ಗಂಟೆಯ ಸೂಮಾರಿಗೆ ಸಿರನೂರ ಗ್ರಾಮದ ಹತ್ತೀರ ಇರುವ ವೆಂಕೇಶ್ವರ
ಪ್ಲಾಜಾ ರೆಸ್ಟೊರೆಂಟ ಹತ್ತೀರ ರಾಜಅಹ್ಮದ ಹುಸೇನಿ ಕೋಗನೂರ ಸಾ ಬೈರಮಡಗಿ ಇವನು ಶ್ರೀ ಮಲ್ಲಿ ನಾಥ ತಂದೆ ಲಿಂಗಣ್ಣಾ ಅಂಕಲಗಿ ಸಾ : ಬೈರಮಡಗಿ ಇವರಿಗೆ ಹಣ ಕೋಡು ಅಂತಾ ಹೇಳಿ ವಿನಾಕಾರಣ ಜಗಳ ತೆಗೆದು ಕೈಯಿಂದ
ಕಲ್ಲಿನಿಂದ ಹೋಡೆಬಡೆ ಮಾಡಿ ಭಾರಿ ಗಾಯವುಂಟು ಮಾಡಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ
ಠಾಣೆ : ಶ್ರೀ ಸುನೀಲ ತಂದೆ ವಸಂತ ಕಲಕುಟಗಿ ಸಾಃ ಭೂಸನೂರ
ಗ್ರಾಮ, ತಾಃ ಆಳಂದ ರವರು ಮತ್ತು ನನ್ನ ತಾಯಿಯಾದ ಮಲ್ಲಮ್ಮ
ಇಬ್ಬರೂ ಕೂಡಿಕೊಂಡು ತೆಲ್ಲೂರ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು
ಮರಳಿ ತೆಲ್ಲೂರದಿಂದ ನಮ್ಮೂರಿಗೆ ನಾನು ಮತ್ತು ನನ್ನ ತಾಯಿ ಕೂಡಿಕೊಂಡು ದಿನಾಂಕ 16/04/2019
ರಂದು ಖಾಸಗಿ ಜೀಪನಲ್ಲಿ ಬಂದು ನಮ್ಮೂರಿನ ಬಸ ನಿಲ್ದಾಣದಲ್ಲಿ ಇಳಿದು ಬಸ ನಿಲ್ದಾಣದ ಮುಂದೆ ರೋಡಿನ
ಪಕ್ಕದಲ್ಲಿ ಮಾತನಾಡುತ್ತಾ ನಿಂತಾಗ ಮಧ್ಯಾಹ್ನ 01.30 ಪಿ.ಎಮ ಸುಮಾರು ನಮ್ಮೂರಿನ ಬಾಷಾಸಾಬ ತಂದೆ
ನಜೀರ ಕರ್ಜಗಿ ಮತ್ತು ರಾಜೋಳ ಗ್ರಾಮದ ಆತನ ಸಂಭಂಧಿಕ ಹೆಸರು ಗೊತ್ತಿಲ್ಲ ಇಬ್ಬರೂ ಕೂಡಿಕೊಂಡು
ಒಂದು ಮೋಟಾರ ಸೈಕಲ ಮೇಲೆ ಜೋರಾಗಿ ಬಂದು ನನ್ನ ತಾಯಿಯಾದ ಮಲ್ಲಮ್ಮ ಇವಳಿಗೆ ಬೈಕ ಹತ್ತಿ
ಸವರಿಕೊಂಡು ಮುಂದೆ ಹೋಗಿದ್ದು ಅದಕ್ಕೆ ನಾನು ಬಾಷಾಸಾಬನಿಗೆ ಮೊಟಾರ ಸೈಕಲ ಸಾವಕಾಸ ನಡೆಸು ನಮ್ಮ
ತಾಯಿಗೆ ಸವರಿಕೊಂಡು ಯಾಕ ಹೊಗಿದ್ದಿ ಅಂತ ಅಂದಾಗ ಏ ಭೋಸಡಿ ಮಗನಾ ಸುನೀಲ್ಯಾ ವಡ್ಡರ ಸೂಳೆ ಮಗನೆ
ನಿಮ್ಮದು ಊರಾಗ ಬಹಳ ಆಗದ ಅಂತ ಜಾತಿ ಎತ್ತಿ ಬೈದು ಬೈಕ ಅಲ್ಲಿಯೆ ನಿಲ್ಲಿಸಿ ಸ್ವಲ್ಪ ಮುಂದೆ ಹೋಗಿ
ಒಂದು ಕಬ್ಬಿಣದ ರಾಡು ತೆಗೆದುಕೊಂಡು ಬಂದನು ಆಗ ಬಾಷಾಸಾಬನ ಸಂಗಡ ಇದ್ದವನು ನನ್ನ ಎರಡು ಕೈಗಳನ್ನು
ಹಿಡಿದನು ಬಾಷಾಸಾಬನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಎಡ ತಲೆಯ ಮೇಲೆ ಹೋಡೆದು ಭಾರಿ
ರಕ್ತಗಾಯಪಡಿಸಿದನು, ನಾನು ಕೆಳಗಡೆ ಬಿದ್ದಾಗ ಇಬ್ಬರೂ ಕೂಡಿಕೊಂಡು
ಕಾಲಿನಿಂದ ಹೊಟ್ಟೆ, ಬೆನ್ನ ಮೇಲೆ ಕಾಲಿನಿಂದ ಒದ್ದರು ನನ್ನ ತಾಯಿಯು
ಬಿಡಸಲು ಬಂದಾಗ ಏ ರಂಡಿ ಮಲ್ಲಿ ನೀನು ಬಂದರೆ ನಿನಗೂ ಕೂಡ ಖಲಾಸ ಮಾಡುತ್ತೇವೆ ಅಂತ ಬೈದು ಜೀವ
ಭಯಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.