Police Bhavan Kalaburagi

Police Bhavan Kalaburagi

Wednesday, August 19, 2020

BIDAR DISTRICT DAILY CRIME UPDATE 19-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-08-2020

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 15/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 18-08-2020 ರಂದು ಫಿರ್ಯಾದಿ ಗಂಗಶೆಟ್ಟಿ ತಂದೆ ಬಸಪ್ಪಾ ಹೌಸೆಟ್ಟಿ ಸಾ: ನಂದಿ ನಗರ ರವರ ಸೊದರಳಿಯನಾದ ಸಂಜುಕುಮಾರ ಇತನ ಮದುವೆ ಆಗಿನಿಂದ ಆತನ ಹೆಂಡತಿಯಾದ ಲಲಿತಬಾಯಿ ಇವಳು ಅವಳ ಅತ್ತೆ ಜೊತೆ ಜಗಳ ತಕರಾರು ಮಾಡುತ್ತಾ ಬಂದಿರುತ್ತಾಳೆ, ಅಂದಾಜು 8 ಮತ್ತು 10 ತಿಂಗಳ ಹಿಂದೆ ಸಂಜುಕುಮಾರ ಹಾಗೂ ಅವನ ಹೆಂಡತಿ ಇಬ್ಬರು ಚಟನಾಳ ಗ್ರಾಮದ ಅವರ ಹೊಲವನ್ನು ಲಾವಣಿಗೆ ಕೊಟ್ಟು ಮಕ್ಕಳೊಂದಿಗೆ ಚಟನಾಳ ಬಿಟ್ಟು ಭಾಲ್ಕಿಯಲ್ಲಿ ಎರಡು ತಿಂಗಳು ಬಾಡಿಗೆ ಮನೆ ಮಾಡಿ ವಾಸವಾಗಿ ನಂತರ ಜೈನಾಪೂರ್ ಗ್ರಾಮದಲ್ಲಿ ಸಂಜುಕುಮಾರ್ ಇವನ ಸಡಕನ ಜಾಗದಲ್ಲಿ ಒಂದು ಶೆಡ್ ಹೊಡೆದುಕೊಂಡು ವಾಸವಾಗಿದ್ದು, ಹೀಗಿರುವಾಗ ದಿನಾಂಕ 18-08-2020 ರಂದು ಫಿರ್ಯಾದಿಯವರಿಗೆ ಸಂಜುಕುಮಾರ ಇವನ ಮೃತ ಶರೀರವು ಚಟ್ಟನಾಳ ಗ್ರಾಮದಲ್ಲಿ ಅವನ ಮನೆಯಲ್ಲಿ ಇಟ್ಟಿರುತ್ತಾರೆ ಅಂತ ಗೊತ್ತಾಗಿ ಫಿರ್ಯಾದಿ ಹಾಗು ಇತರರು ಹೋಗಿ ನೋಡಿ ವಿಚಾರಿಸಲು ಅಲ್ಲಿ ಗೊತ್ತಾಗಿದ್ದೆನೆಂದರೆ ಸಂಜುಕುಮಾರ ಇತನಿಗೆ ಟೈಫಾಯಿಡ್ ಕಾಯಿಲೆ ಆಗಿದ್ದು, ಆತನಿಗೆ ಬೀದರ್ ಸರಕಾರಿ ಆಸ್ಪತ್ರಗೆ ಹಾಗೂ ಇತರ ಕಡೆ ತೋರಿಸಿದರು ಸಹ ಕಡಿಮೆ ಆಗದೇ ದಿನಾಂಕ 17-08-2020 ರಂದು 2300 ಗಂಟೆಗೆ ಮಲಗಿದ್ದಲ್ಲೆ ಮೃತಪಟ್ಟಿರುತ್ತಾನೆಂದು ಆತನ ಹೆಂಡತಿ ಹಾಗೂ ಇತರರಿಂದ ಗೊತ್ತಾಗಿರುತ್ತದೆ, ಫಿರ್ಯಾದಿಯವರ ಸೋದರಳಿಯನಾದ ಸಂಜುಮಾರ ತಂದೆ ಬಂಡೆಪ್ಪಾ ಇತನು ಮೃತ್ತಪಟ್ಟ ಬಗ್ಗೆ ನನಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 106/2020, ಕಲಂ. 363 ಐಪಿಸಿ :-

ದಿನಾಂಕ 18-08-2020 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಶರಣಪ್ಪಾ ಹಡಪದ ಸಾ: ಹುಣಜಿ(ಎ), ತಾ: ಭಾಲ್ಕಿ ರವರ ಮಗಳಾದ ವೈಷ್ಣವಿ ಇವಳು ಭಾಲ್ಕಿ ನಗರದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾವಿದ್ಯಾಲಯದಲ್ಲಿ 10 ನೇ ತರಗತಿಯ 2020 ನೇ ವರ್ಷದ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ನಾಪಾಸ ಆಗಿದ್ದರಿಂದ ಮನೆಯಲ್ಲಿಯೇ ಇದ್ದು, ಹೀಗಿರುವಾಗ ದಿನಾಂಕ 15-08-2020 ರಂದು 1900 ಗಂಟೆಯ ಸುಮಾರಿಗೆ ಫಿರ್ಯಾದಿ ನಾನು ಫಿರ್ಯಾದಿಯ ಹೆಂಡತಿ ಲೋಬಾವತಿ ಮನೆಯಲ್ಲಿರುವಾಗ ವೈಷ್ಣವಿ ಇವಳು ನಾನು ಪೈಖಾನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು 2000 ಗಂಟೆಯಾದರು ಮನೆಗೆ ಬರಲಿಲ್ಲ, ನಂತರ ಫಿರ್ಯಾದಿಯ ಹೆಂಡತಿ ತಿಳಿಸಿದ್ದೇನೆಂದರೆ ವೈಷ್ಣವಿ ಇವಳು ಇಲ್ಲಿಯವರೆಗೆ ಪೈಖಾನೆಗೆ ಹೋಗಿ ಮನೆಗೆ ಬರಲಿಲ್ಲ, ನೋಡಿರಿ ಅಂತ ಹೇಳಿದ್ದರಿಂದ ಫಿರ್ಯಾದಿಯು ತನ್ನ ಅಣ್ಣ ನಾರಾಯಣ ತಂದೆ ಶರಣಪ್ಪಾ ರವರ ಜೊತೆಯಲ್ಲಿ ತಮ್ಮೂರಲ್ಲಿ ಅಕಡೆ ಇಕಡೆ ಹುಡಕಾಡಿದರು ಮಗಳು ಸಿಗಲಿಲ್ಲ, ನಂತರ ತಮ್ಮ ಸಂಬಂಧಿಕರ ಗ್ರಾಮಗಳಿಗೆ ಹೋಗಿ ಮಗಳ ಬಗ್ಗೆ ವಿಚಾರಿಸಿ ಹುಡಕಾಡಲು ವೈಷ್ಣವಿ ಇವಳ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಮಗಳು ವೈಷ್ಣವಿ ಇವಳು ಕಾಣೆ/ಅಪಹರಣವಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 123/2020, ಕಲಂ. ಮನುಷ್ಯ ಕಾಣೆ :-

ದಿನಾಂಕ 15-08-2020 ರಂದು ಫಿರ್ಯಾದಿ ಸೂರ್ಯಕಾಂತ ತಂದೆ ಮಾರುತಿ ಜಾಧವ ವಯ: 35 ವರ್ಷ, ಸಾ: ಗುಂಡುರು ತಾಂಡಾ, ಸದ್ಯ: ಕಾಳಿ ಗಲ್ಲಿ ಬಸವಕಲ್ಯಾಣ ರವರ ಹೆಂಡತಿಯಾದ ಶ್ವೇತಾ, ಮಕ್ಕಳಾದ ಸ್ನೇಹಾ ಹಾಗು ತ್ರಿಶಾ ಇವರೆಲ್ಲರೂ ಹೆಂಡಿತಯ ತವರು ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿರುವದಿಲ್ಲಾ, ಅವರನ್ನು ಫಿರ್ಯಾದಿಯು ಎಲ್ಲಾ ಕಡೆಗೆ ಹುಡುಕಾಡಿ ಹಾಗೂ ತಮ್ಮ ಸಂಬಂಧಿಕರಲಲಿ ವಿಚಾರಣೆ ಮಾಡಲು ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲಾ, ಕಾಣೆಯಾದವರ ಹೆಂಡತಿಯ ಚಹರೆ ಪಟ್ಟಿ 1) ಹೆಸರು: ಶ್ವೇತಾ ಗಂಡ ಸೂರ್ಯಕಾಂತ, ವಯ: 33 ವರ್ಷ, ಜಾತಿ: ಲಂವಾಣಿ, ಸಾ: ಗುಂಡುರು ತಾಂಡಾ, ಸದ್ಯ: ಕಾಳಿ ಗಲ್ಲಿ ಬಸವಕಲ್ಯಾಣ, ಜಿ: ಬೀದರ, 2) ಎತ್ತರ: 5 ಅಡಿ 2 ಇಂಚು, 3) ಮೈಬಣ್ಣ: ಗೋಧಿ ಬಣ್ಣ, 4) ಮೈಕಟ್ಟು: ಸಾಧಾರಣ, 5) ಭಾಷೆ: ಕನ್ನಡ, ಹಿಂದಿ, ಇಂಗ್ಲೀಷ ಮಾತನಾಡುತ್ತಾಳೆ, 6) ಬಟ್ಟೆ: ಜಿನ್ಸ ಪ್ಯಾಂಟ, ಕೆಂಪು ಕಪ್ಪು ಟಾಪ, 7) ಗುರುತು: ಎಡಗೈ ಮುಂಗೈ ಮೇಲೆ ಬಟರ ಪ್ಲೈ ಟ್ಯಾಟೂ ಮಾರ್ಕ ಇರುತ್ತದೆ ಹಾಗೂ ಕಾಣೆಯಾದ ಮಗಳ ಚಹರೆ ಪಟ್ಟಿ 1) ಹೆಸರು: ಸೆ್ನೕಹಾ ತಂದೆ ಸೂರ್ಯಕಾಂತ ವಯ: 11 ವರ್ಷ, ಜಾತಿ: ಲಂಬಾಣಿ, ಸಾ: ಗುಂಡುರು ತಾಂಡಾ, ಸದ್ಯ: ಕಾಳಿ ಗಲ್ಲಿ ಬಸವಕಲ್ಯಾಣ, 2) ಎತ್ತರ: 4 ಅಡಿ, 3) ಮೈಬಣ್ಣ: ಗೋಧಿ ಬಣ್ಣ, 4) ಭಾಷೆ: ಹಿಂದಿ ಮಾತನಾಡುತ್ತಾಳೆ, 5) ಬಟ್ಟೆ: ಜಿನ್ಸ ಪ್ಯಾಂಟ, ಕಪ್ಪು ಬಣ್ಣದ ಟೀ ಶರ್ಟ, 6) ಮೈಕಟ್ಟು: ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ ಹಾಗೂ ಕಾಣೆಯಾದ ಮಗಳು ತ್ರಿಶಾ ಇವಳ ಚಹರೆ ಪಟ್ಟಿ 1) ಹೆಸರು: ತ್ರಿಶಾ ತಂದೆ ಸೂರ್ಯಕಾಂತ ವಯ: 3 ವರ್ಷ, ಜಾತಿ: ಲಂಬಾಣಿ, ಸಾ: ಗುಂಡುರು ತಾಂಡಾ, ಸದ್ಯ: ಕಾಳಿ ಗಲ್ಲಿ ಬಸವಕಲ್ಯಾಣ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 124/2020, ಕಲಂ. 379 ಐಪಿಸಿ :-

ದಿನಾಂಕ 11-07-2020 ರಂದು 2030 ಗಂಟೆಯಿಂದ ದಿನಾಂಕ 12-07-2020 ರಂದು 0430 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಆಕಾಶ ತಂದೆ ಚಂದ್ರಕಾಂತ ಹೊನ್ನಾಳೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 9-4-271 ಲಿಂಗಾನಂದ ನಗರ ಸಾಯಿ ಮಂದಿರ ಹತ್ತಿರ ಬೀದರ ರವರ ದ್ವಿಚಕ್ರ ವಾಹನ ನಂ. KA-38/V-8155, ಇಂಜಿನ್ ನಂ. G3J3E0362041, ಚಾಸಿಸ್ ನಂ. ME1RG4459J0039274 ನೇದನ್ನು ಅವರ ಮನೆಯ ಮುಂದಿನಿಂದ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ, ಬೀದರ ಅಪರಾಧ ಸಂ. 28/2020, ಕಲಂ. 3, 4, 6 ಪಿ..ಟಿ ಕಾಯ್ದೆ-1956 :-

ದಿನಾಂಕ 18-08-2020 ರಂದು ಬೀದರನ ಮಮತಾ ಲಾಡ್ಜ ರೂಮ ನಂ. 207 ನೇದರಲ್ಲಿ ವೈಷಾವಾಟಿಕೆ ನಡೆಯುತ್ತಿದೆ ಅಂತ ಎಂ.ಆರ್ ಚೌಬೆ ಪಿಐ ಮಹಿಳಾ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ರವರು ತಮ್ಮ ಸಿಬ್ಬಂದಿಯವರೊಡನೆ ಮಮತಾ ಲಾಡ್ಜಗೆ ಹೋಗಿ ಲಾಡ್ಜನ ಮ್ಯಾನೇಜರಗೆ ಹೆಸರು ವಿಚಾರಿಸಲು ಆತನ ತನ್ನ ಹೆಸರು ಮಲ್ಲಿಕಾರ್ಜುನ್ ತಂದೆ ಚಂದ್ರಪ್ಪಾ ಕಟ್ಟಿಮನಿ ಸಾ: ನೌಬಾದ ಅಂತ ತಿಳಿಸಿದಾಗ ಎಲ್ಲರೂ ರೂಮ್ ನಂ. 207 ನೇದರ ಹತ್ತಿರ ಹೋಗಿ ರೂಮಿನ ಬಾಗಿಲ ಬಡೆದು ತೆರೆಯಲಾಗಿ ಒಳಗಡೆ ಒಬ್ಬ ಹೆಣ್ಣು ಮಗಳು ಹಾಗು ಒಬ್ಬ ಗಂಡಸು ಇದ್ದರು, ಅವರ ಬಗ್ಗೆ ಮ್ಯಾನೇಜರ್ ರವರಿಗೆ ವಿಚಾರಿಸಲಾಗಿ ಇವರು ರೂಮ್ ಬಾಡಿಗೆ ತೆಗೆದುಕೊಂಡಿರುತ್ತಾರೆ ಅಂತ ತಿಳಿಸಿದನು, ಆಗ ಒಳಗಡೆ ಇದ್ದ ವ್ಯಕ್ತಿಯ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಶಾದುಲ್ ತಂದೆ ಅಹ್ಮದ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಕೌಡಗಾಂವ ಅಂತ ತಿಳಿಸಿದನು, ನಂತರ ಒಳಗಡೆ ಇದ್ದ ಹೆಣ್ಣು ಮಗಳ ಬಗ್ಗೆ ವಿಚಾರಿಸಲಾಗಿ ಅವಳು ತನ್ನ ಹೆಸರು ಪರವಿನ್ ತಂದೆ ಯಾಸಿನ್ ಸಾಬ ವಯ: 30 ವರ್ಷ, ಸಾ: ಗಡಿ ಕುಶನೂರ ಅಂತ ತಿಳಿಸಿದಾಗ ಅವಳಿಗೆ ಪುನಃ ವಿಚಾರಿಸಲಾಗಿ ಶಾದುಲ್ ಇತನು ನನಗೆ 1,000/- ರೂಪಾಯಿ ಕೊಡುತ್ತೇನೆಂದು ಹೇಳಿ ನನಗೆ ಗಡಿ ಕುಶನೂರದಿಂದ ಲಾಡ್ಜಗೆ ಕರೆದುಕೊಂಡು ಬಂದಿರುತ್ತಾನೆ ನಾನು ನನ್ನ ಹೊಟ್ಟೆಯ ಪಾಡಿಗಾಗಿ ಆತನ ಜೊತೆಗೆ ಬಂದಿರುತ್ತೇನೆ ಅಂತ ತಿಳಿಸಿರುತ್ತಾಳೆ, ನಂತರ ಶಾದುಲ್ ಇತನಿಗೆ ವಿಚಾರಿಸಲಾಗಿ ನಾನು ಪರವಿನ್ ಇವಳ ಜೊತೆಯಲ್ಲಿ ವೈಶ್ಯಾವಾಟಿಕೆ ಮಾಡಲು ಬಂದಾಗ ಲಾಡ್ಜನ ಮ್ಯಾನೇಜರ ಆದ ಮಲ್ಲಿಕಾರ್ಜುನ್ ಇತನು ನಮಗೆ ರೂಮನ ವ್ಯವಸ್ಥೆ ಮಾಡಿರುತ್ತಾನೆ, ನಾನು ಅವಳಿಗೆ ವೈಶ್ಯಾವಾಟಿಕೆಗಾಗಿ ಕರೆದುಕೊಂಡು ಬಂದ ವಿಷಯ ಆತನಿಗೆ ಗೊತ್ತಿರುತ್ತದೆ ಅಂತ ತಿಳಿಸಿರುತ್ತಾನೆ, ನಂತರ ಶಾದುಲ್ ಮತ್ತು ಪರವಿನ ಇಬ್ಬರ ಅಂಗ ಝಡ್ತಿ ಮಾಡಲಾಗಿ ಅವರಿಂದ ಒಟ್ಟು ನಗದು ಹಣ 2050/- ರೂಪಾಯಿ ಹಾಗು ಒಂದು ವಿವೊ ಕಂಪನಿಯ ಮೊಬೈಲ್ ದೊರೆತ್ತಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು, ನಂತರ ಪಕ್ಕದ ರೂಮನ್ನು ಪರಿಶಿಲಿಸಲಾಗಿ ಒಳಗಡೆ ಒಬ್ಬ ಹೆಣ್ಣು ಮಗಳು ಕುಳಿತ್ತಿದ್ದು ಅವಳ ಹೆಸರು ವಿಳಾಸ ವಿಚಾರಿಸಲಾಗಿ ಅವಳು ತನ್ನ ಹೆಸರು ಸಿಮ್ರಾನಖಾನ ತಂದೆ ಜಮೀಲಖಾನ ವಯ: 24 ವರ್ಷ, ಸಾ: ಮನೆ ನಂ. 202 2ನೇ ಮಹಡಿ ಶೋಭಾರಾಮ ಪ್ರದೇಶಿ ಕಟ್ಟಡ ಬ್ಲಾಕ್ ಸೆಕ್ಟರ್ ಕಲ್ಯಾಣ ರೋಡ ಜರಿಮಠ ಮಂದಿರ ಎದುರುಗಡೆ ಕಲ್ಯಾಣ ಡಿ.ಸಿ ಮಹಾರಾಷ್ಟ್ರ ಅಂತ ತಿಳಿಸಿ ನನಗೆ ಲಾಡ್ಜನ ಮಾಲಿಕರಾದ ಮಾರುತಿ ತಂದೆ ಕಾಶಿನಾಥ ರಡ್ಡಿ ತಾಜಲಾಪುರ್ ವರು ನನಗೆ ಪರಿಚಯ ಆಗಿದ್ದು ಅವರು ನನಗೆ ನನ್ನ ಲಾಡ್ಜದಲ್ಲಿ ಒಂದು ರೂಮ್ ಕೊಡುತ್ತೇನೆ ಅಲ್ಲಿ ಗಿರಾಕಿಗಳು ಬರುತ್ತವೆ ನಿನಗೆ ಹಣ ಸಿಗುತ್ತವೆ ಅಂತ ಹೇಳಿದಾಗ ನಾನು ನನ್ನ ಹೊಟ್ಟೆಯ ಪಾಡಿಗಾಗಿ ನನ್ನ ಜೀವನಕ್ಕಾಗಿ ಧಂದೆಗೆ ಇಳಿದಿರುತ್ತೇನೆ ಅವರು ನನಗೆ ಇಲ್ಲಿ ರೂಮನ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ ಅಂತ ಹೇಳಿರುತ್ತಾಳೆ, ಆಗ ಮ್ಯಾನೇಜರ ಮಲ್ಲಿಕಾರ್ಜುನ್ ಇತನು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೊಗಿರುತ್ತಾನೆ, ನಂತರ ಆರೋಪಿತರಾದ ಶಾದುಲ್, ಪರವಿನ್, ಸಿಮ್ರಾನಖಾನ ಹಾಗೂ ಮ್ಯಾನೆಜರ್ ಮಲ್ಲಿಕಾರ್ಜುನ ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 106/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 18-08-2020 ರಂದು ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಕವೀಲ್ ತಂದೆ ದಿಲಿಪ ಸಿಂಧೆ ವಯ: 22 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಭೀಮ ನಗರ ಬಸವಕಲ್ಯಾಣ ಹಾಗೂ 2) ಪುರಸೊತ್ತಂ ತಂದೆ ಭೀಮು ಚವ್ಹಣ ವಯ: 27 ವರ್ಷ, ಜಾತಿ: ಲಂಬಾಣಿ, ಸಾ: ಆಶ್ರಯ ಕಾಲೋನಿ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮಲೆ ದಾಳಿ ಮಾಡಿ ಸದರಿ ಆರೋಪಿತರಿಗೆ ಹಿಡಿದುಕೊಂಡು ಅವರಿಂದ 1) ನಗದು ಹಣ 5500/- ರೂ., 2) 04 ಮಟಕಾ ಚೀಟಿಗಳು ಹಾಗು 3) 2 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.