ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-01-2020
ಮಹಿಳಾ
ಪೊಲೀಸ್
ಠಾಣೆ
ಅಪರಾಧ
ಸಂ.
05/2020, ಕಲಂ.
498(ಎ), 324, 504 ಜೊತೆ 34 ಐಪಿಸಿ :-
ಫಿರ್ಯಾದಿ ಪೂಜಾ ಗಂಡ ಸೂರ್ಯಕಾಂತ ಜಾಧವ ವಯ: 38 ವರ್ಷ, ಜಾತಿ: ಕೋರವಾ, ಸಾ: ಕಮಠಾಣಾ, ತಾ: ಬೀದರ ರವರ ಮದುವೆಯು 17 ವರ್ಷಗಳ ಹಿಂದೆ ಕಮಠಾಣಾ ಗ್ರಾಮದ ಸೂರ್ಯಕಾಂತ ಇತನ ಜೊತೆಯಲ್ಲಿ ಆಗಿದ್ದು, ಗಂಡ ಸರಾಯಿ
ಕುಡಿಯುವ ಚಟದವನಿದ್ದು, ಸರಾಯಿ
ಕುಡಿದು ಬಂದು ಪಿüರ್ಯಾದಿಯವರ ಜೊತೆಯಲ್ಲಿ ಮೇಲಿಂದ
ಮೇಲೆ ಜಗಳ ತೆಗೆಯುವದು, ಸಂಶಯ
ಪಡುವದು ಮಾಡುತ್ತಾ ಬಂದಿರುತ್ತಾನೆ, ಅತ್ತೆ ಅಂಬಮ್ಮಾ, ಮಾವ ಪ್ರಭು, ಮೈದುನ ಕೃಷ್ಣಾ ಇವರೆಲ್ಲರೂ ಕೂಡಿ ಪಿüರ್ಯಾದಿಗೆ ನೀನು ಯಾವನಿಗೆ ಇಟ್ಟುಕೊಂಡಿದ್ದಿ ಅಂತ ಜಗಳ ತೆಗೆಯುತ್ತಾ ಬಂದಿರುತ್ತಾರೆ ಮತ್ತು
ಅವರೆಲ್ಲರೂ ಕೂಡಿ ಕೂದಲು ಹಿಡಿದು ಎಳೆದು, ಕೈಯಿಂದ ಹೊಡೆ
ಬಡೆ ಮಾಡುತ್ತಾ ಬಂದು ತೊಂದರೆ ಕೊಟ್ಟು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ, ಆರೋಪಿತರಾದ ಗಂಡ ಹಾಗು ಗಂಡನ ಮನೆಯವರು ಕಿರುಕುಳ ಕೊಡುವ ಬಗ್ಗೆ ತನ್ನ ತಾಯಿ, ತಮ್ಮ, ದೊಡ್ಡಮ್ಮ, ದೊಡ್ಡಪ್ಪ ರವರಿಗೆ ತಿಳಿಸಿದಾಗ ಅವರು ಗಂಡನ ಮನೆಗೆ ಬಂದು ಅನೇಕ ಸಲ ತಿಳುವಳಿಕೆ ಹೇಳಿರುತ್ತಾರೆ, ಹೀಗಿರುವಾಗ ದಿನಾಂಕ 16-01-2020 ರಂದು ಸದರಿ
ಆರೋಪಿತರು ಜಗಳ ತೆಗೆದು ಹೊಡೆ ಬಡೆ ಮಾಡಿದ್ದರಿಂದ ಸದರಿ
ವಿಷಯವನ್ನು ತನ್ನ ತಾಯಿ ಮತ್ತು
ಬಳಗದವರಿಗೆ ತಿಳಿಸಿದಾಗ ಅವರು ದಿನಾಂಕ 17-01-2020 ರಂದು ಗಂಡನ ಮನೆಯವರಿಗೆ ಬುದ್ದಿವಾದ ಹೇಳಲು ಮತ್ತು
ಫಿರ್ಯಾದಿಗೆ ಮಾತನಾಡಿ ಹೋಗಲು ಕಮಠಾಣಾಕ್ಕೆ ಬಂದಾಗ ಸದರಿ
ಆರೋಪಿತರು ನಿಮ್ಮ ಮಗಳ ಮಾತು
ಕೇಳಿ ನಮ್ಮ
ಮನೆಗೆ ಬಂದಿದ್ದಿರಿ ಅಂತ ಜಗಳ ತೆಗೆದು ಗಂಡ ಪಿüರ್ಯಾದಿಯ ತಾಯಿಗೆ ಬೆನ್ನಲ್ಲಿ ಒದ್ದಿರುತ್ತಾನೆ, ತಮ್ಮನಿಗೆ ಕೈ ಮುಷ್ಟಿ ಮಾಡಿ
ಬೆನ್ನಲ್ಲಿ, ಎದೆಯಲ್ಲಿ ಗುದ್ದಿರುತ್ತಾರೆ, ಅತ್ತೆ ತಲೆಯ ಕೂದಲು ಹಿಡಿದು ಗೊಡೆಗೆ ಹೊಡೆದಿರುತ್ತಾಳೆ, ಫಿರ್ಯಾದಿಯು ಬಿಡಿಸಿಕೊಳ್ಳಲು ಹೋದಾಗ
ಗಂಡ ಫಿರ್ಯಾದಿಗೆ ನಿನ್ನಿಂದಲೆ ಈ ಜಗಳ ಆಗಿದೆ ಅಂತ ಬೈದು
ತಲೆಯ ಕೂದಲು ಹಿಡಿದು ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾನೆ, ಜಗಳದ
ಶಬ್ದವನ್ನು ಕೇಳಿ ಪಕ್ಕದ
ಮನೆಯ ಯಲ್ಲಮ್ಮಾ, ಅರ್ಮಾನ್ ರವರು ಬಂದು ಜಗಳವನ್ನು ಕಣ್ಣಾರೆ ನೋಡಿ
ಬಿಡಿಸಿಕೊಂಡಿರುತ್ತಾರೆ, ನಂತರ ಪಿüರ್ಯಾದಿ ಹಾಗು ತಮ್ಮಂದಿರು ಬೀದರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು ಇರುತ್ತದೆ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ
ಅಪರಾಧ ಸಂ. 14/2020, ಕಲಂ. 279, 338 ಐಪಿಸಿ ಜೊತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ 17-01-2020 ರಂದು ಫಿರ್ಯಾದಿ ಶಿರೋಮಣಿ ತಂದೆ ಮಾಪಣ್ಣಾ ಥರಥರೆ ವಯ: 55 ವರ್ಷ, ಜಾತಿ: ಕ್ರೀಶ್ಚಿಯನ, ಸಾ: ಯಶೋ ನಗರ ಚಕ್ರಧಾರಿ ಚಿಟಗುಪ್ಪಾ ರವರ ಸಡಕನ ಮಗನಾದ ಸಂಜುಕುಮಾರ ತಂದೆ ಜೈರಾಜ ನಾಗನಕೇರಾ ವಯ: 32 ವರ್ಷ ಇತನು ತನ್ನ ಫ್ಯಾಶನ ಪ್ರೋ ಮೋಟಾರ ಸೈಕಲ್ ನಂ. ಕೆಎ-39/ ಆರ್-3489 ನೇದ್ದರ ಮೇಲೆ ಕೂಡಂಬಲನಿಂದ ಬರುವಾಗ ಕೂಡಂಬಲ ಚಿಟಗುಪ್ಪಾ ರೋಡ ಚಿಟಗುಪ್ಪಾ ಶಿವಾರದ ರಗೋಜಿ ಫಂಕ್ಷ0ನ ಹಾಲ ಹತ್ತಿರ ರೋಡಿನ ಮೇಲೆ ಎದುರಿನಿಂದ ಅದರೆ ಚಿಟಗುಪ್ಪಾ ಕಡೆಯಿಂದ ಯಾವುದೋ ಒಂದು ವಾಹನ ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಸಂಜುಕುಮಾರನ ಮೋಟಾರ ಸೈಕಲಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಘಟನೆಯಿಂದ ಸಂಜುಕುಮಾರನಿಗೆ ಎಡಗಡೆ ಹಣೆಗೆ, ಎಡಗಡೆ ಮೇಲಕಿಗೆ ರಕ್ತಗಾಯ ಮತ್ತು ಬಲಮೊಳಕಾಲಿಗೆ ರಕ್ತಗಾಯ, ಬಲಗಾಲ ಬೆರಳುಗಳಿಗೆ ತರಚಿದ ಗಾಯ, ಎಡಗಡೆ ಮೇಲಕಿಗೆ ಭಾರಿ ರಕ್ತಗಾಯವಾಗಿ ಎಡಕಿವಿಯಿಂದ ರಕ್ತ ಸ್ರಾವವಾಗಿರುತ್ತದೆ, ಡಿಕ್ಕಿ ಮಾಡಿದ ವಾಹನ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್
ಠಾಣೆ ಅಪರಾಧ ಸಂ. 12/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 17-01-2020 ರಂದು ಭಾಲ್ಕಿಯ ಚೌಡಿ ಗಲ್ಲಿಯ ಹತ್ತಿರ
ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ
ಆಡುತ್ತಿದ್ದಾರೆ ಅಂತಾ ರಮೇಶಕುಮಾರ ಪಿ.ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ
ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಫುಲೆ ಚೌಕ
ಮುಖಾಂತರ ಚೌಡಿ ಗಲ್ಲಿಯ ಮಜಿದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಖುಲ್ಲಾ
ಜಾಗೆಯಲ್ಲಿ ಲೈಟಿನ ಬೆಳಕಿನ ವ್ಯವಸ್ಥೆ ಮಾಡಿಕೊಂಡು ಆರೋಪಿತರಾದ 1) ಮಹೇಶ ತಂದೆ ಧನರಾಜ ಸುಂಟೆ, ವಯ: 41 ವರ್ಷ, ಜಾತಿ: ಲಿಂಗಾಯತ, ಸಾ: ದಾಡಗಿ ಬೇಸ ಹಳೆ ಭಾಲ್ಕಿ, 2) ಶ್ರೀಕಾಂತ ತಂದೆ ಸಿದ್ರಾಮಪ್ಪಾ ಸುಂಟೆ, ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ದಾಡಗಿ ಬೇಸ ಹಳೆ ಭಾಲ್ಕಿ, 3) ಶಕೀಲ ತಂದೆ ಅಜೀಮ ಮಾಸೂಲ್ದಾರ, ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಚೌಡಿ ಗಲ್ಲಿ ಭಾಲ್ಕಿ, 4) ಧನರಾಜ ತಂದೆ ಬಸ್ವರಾಜ ಮೈನಳ್ಳೆ ವಯ: 47 ವರ್ಷ, ಜಾತಿ: ಲಿಂಗಾಯತ, ಸಾ: ಚೌಡಿ ಗಲ್ಲಿ ಭಾಲ್ಕಿ,
5) ಚಂದ್ರಕಾಂತ ತಂದೆ ಪ್ರಕಾಶ ಸ್ವಾಮಿ ವಯ: 29 ವರ್ಷ, ಜಾತಿ: ಸ್ವಾಮಿ, ಸಾ: ಮಾಶೆಟ್ಟೆ ಗಲ್ಲಿ
ಭಾಲ್ಕಿ, 6) ಪಿಂಟು @ ಗೋವಿಂದ ತಂದೆ ವಿಠಲರಾವ ತೀರ್ಥ ವಯ: 28 ವರ್ಷ, ಜಾತಿ: ಮರಾಠಾ, ಸಾ: ಚೌಡಿ ಗಲ್ಲಿ ಭಾಲ್ಕಿ
ಹಾಗೂ 7) ಮಹೇಬೂಬ ತಂದೆ ರೌಫ ಚೌಧರಿ ವಯ: 36 ವರ್ಷ, ಜಾತಿ: ಮುಸ್ಲಿಂ, ಸಾ: ಸಿದ್ದಿ ತಾಲೀಮ
ಭಾಲ್ಕಿ ಇವರೆಲ್ಲರು ಕುಳಿತುಕೊಂಡು ಇಸ್ಪೀಟ ಜೂಜಾಟ ಆಡುತ್ತಿರುವದನ್ನು ನೋಡಿ ಪಂಚರ ಸಮಕ್ಷಮ
ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 5,850/- ರೂ. ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.