Police Bhavan Kalaburagi

Police Bhavan Kalaburagi

Sunday, December 18, 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ:18/12/2016 ರಂದು  ಶ್ರೀ ಶಿವಲಿಂಗಪ್ಪಾ ತಂದೆ ವೀಠಲ ಗೌಳಿ ಸಾ:ಜನತಾ ಲೇಜೌಟ ಕಲಬುರಗಿ ರವರ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ; 17/12/16 ರಂದು ರಾಜಾಪೂರಕ್ಕೆ ಖಾಸಗಿ ಬಸ್ಸ ನಂಬರ ಕೆಎ- 34 ಎ-2852 ನೇದ್ದರಲ್ಲಿ  ನಾನು ಮತ್ತು ನನ್ನ ಹೆಂಡತಿ ಶಾಂತಾಬಾಯಿ ನನ್ನ ಮಕ್ಕಳಾದ ದೀಪಾ ರಾಣಿ, ಪ್ರೀತಿ, ನೀತಿನ, ಚೇತನ, ನಮ್ಮ ತಮ್ಮ ಮಲ್ಲಿನಾಥ ಗೌಳಿ ಸೊಸೆ ಶಿವಲೀಲಾ ಗಂಡ ಮಲ್ಲಿನಾಥ ಗೌಳಿ, ನನ್ನ ತಮ್ಮನ ಮಗ ಈಶ್ವರ ತಂದೆ ಮಲ್ಲಿನಾಥ ಗೌಳಿ, ನಮ್ಮ ತಾಯಿ ಅಂಬುಬಾಯಿ ಗಂಡ ವಿಠಲ ಗೌಳಿ, ನಮ್ಮ ತಂದೆ ವಿಠಲ ತಂದೆ ಶರಣಪ್ಪ ಗೌಳಿ ಹಾಗೂ ಇತರೆ 40-50 ಜನರು ಕೂಡಿ ಸದರ ಬಸ್ಸಿನಲ್ಲಿ ಹೋಗುತ್ತಿರುವಾಗ ಬಸ್ಸ ಚಾಲಕ ರಾಮ ಮಂದಿರ  ಮಾರ್ಗವಾಗಿ ಜೇವರ್ಗಿ ಕಡೆಗೆ ಹೋಗುವಾಗ ಬಸ್  ಚಾಲಕನು ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸುತ್ತಿದ್ದಾಗ ನಾವು ಸವಕಾಶವಾಗಿ ಚಲಾಯಿಸಲು ಹೇಳಿದರು ಕೇಳದೆ ಅತೀವೇಗದಿಂದ ಓಡಿಸಿ ನಂದಿಕೂರ ದಾಟಿ ಸ್ವಲ್ಪ ಮುಂದೆ ಬಸ್ಸಿನ ಎದುರಿನ ಲಾರಿಯ ಹಿಂಬಾಗಕ್ಕೆ ಜೋರಾಗಿ ಹಾಯಿಸಿ ಡಿಕ್ಕಿ ಪಡೆಯಿಸಿದ್ದು.. ಅಫಘಾತದಿಂದ ಬಸ್ಸಿನಲ್ಲಿದ್ದ ನನ್ನ ಮಗಳಾದ ದೀಪಾರಾಣಿಯ ಮೂಗಿಗೆ ರಕ್ಗಗಯವಾಗಿದ್ದು. ಚೇತನನಿಗೆ ಬಲಗಣ್ಣೀನ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು ನನ್ನ ತಮ್ಮ ಮಲ್ಲಿನಾಥನಿಗೆ ಎದೆಗೆ ಗುಪ್ತ ಪೆಟ್ಟಾಗಿದ್ದು, ನನ್ನ ಸೊಸೆ ಶಿವಲೀಲಾಗೆ ಕೆಳ ತುಟಿಗೆ ಎಡ ಬಲ ಮೋಳಕಾಲಿಗೆ ರಕ್ತಗಾಯ ಗುಪ್ತ ಗಾಯವಾಗಿದ್ದು ಉಳಿದಂತೆ ನಮ್ಮ ಸಂಬಂದಿಕರು, ಬೀಗರುಗಳಾದ ಅಂಬಿಕಾ ಚೌದ್ರಿ, ಅಂಬವ್ವ ಗಂಡ ಬಸವರಾಜ ಹರಳಯ್ಯ, ನಾಗಮ್ಮ ಗಂಡ ಸಾಯಿಬಣ್ಣ ಕಡಬಿನ್‌‌, ಗುರುಲಿಂಗಪ್ಪ ತಂದೆ ಸಿದ್ದಣ್ಣ ಸನಗುಂದಿ, ಮಾಣೀಕರಾವ ಉಪ್ಪಾರ, ಚೆನ್ನಮ್ಮ ಗಂಡ ಸಿದ್ದರಾಮ ಹರಳಯ್ಯ, ಸಿದ್ದಾರಾಮ ತಂದೆ ಲಕ್ಷ್ಮಣ ಹರಳಯ್ಯ ಪ್ರೇಮಾ ಗಂಡ ಶ್ರೀಮಂತ ಚೌದ್ರಿ, ದೀಪಿಕಾ ತಂದೆ ಸೂರ್ಯಕಾಂತ, ಬೌರಮ್ಮ ಗಂಡ ರಾಜಕುಮಾರ ಚೌದ್ರಿ, ಲಕ್ಷ್ಮಿಬಾಯಿ ಗಂಡ ಶಿವಶರಣಪ್ಪಾ ಚೌದ್ರಿ, ರಮಾಬಾಯಿ ಗಂಡ ನಾಗೇಂದ್ರಪ್ಪಾ ಹರಳಯ್ಯ, ಶಿವಾನಂದ ತಂದೆ ಚಂದ್ರಶ್ಯಾ, ಗುರುಬಾಯಿ ಹರಳಯ್ಯ ಸಾ: ನರೋಣಾ ಶಾಂತಪ್ಪಾ ತಂದೆ ಹಣಮಂತ ಚೌದ್ರಿ, ನೀಲಮ್ಮ ಗಂಡ ಶಾಂತಪ್ಪಾ ಚೌದ್ರಿ ಸುಭಾಷ ತಂದೆ ಬಾಬುರಾವ ಜಮಗಾ, ರಾಜಶೇಖರ ತಂದೆ ತಿಪ್ಪಣ್ಣ ದೊಡ್ಡಮನಿ  ಹಾಗೂ ಇತರೆಯವರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು. ನನ್ನ ಮಗಳಾದ ಪ್ರೀತಿ ಇವಳಿಗೆ ತಲೆಗೆ, ಎದೆಗೆ ಪೆಟ್ಟಾಗಿ ಪ್ರಜ್ಞೆ ಇರಲಿಲ್ಲಾ ಅಫಘಾತಕ್ಕೆ ಒಳಗಾದ  ಲಾರಿ ನಂಬರ ಎಮ್‌ಹೆಚ್‌‌- 46 ಹೆಚ್‌‌- 2194 ಯಿದ್ದು. ನಂತರ ನಮ್ಮೇಲ್ಲರಿಗೆ ಇತರೆಯವರು ಬಸ್ಸಿನಿಂದ ಹೊರಗೆ ಇಳಿಸಿಕೊಂಡು 108 ಅಂಬುಲೈನ್ಸ್‌ ಕ್ಕೆ ಕರೆ ಮಾಡಿದಾಗ ಸದರಿ ವಾಹನಗಳು ಬಂದು ನಮ್ಮೇಲ್ಲರಿಗೆ ಜಿಜಿಹೆಚ್‌ ಕಲಬುರಗಿ ಹಾಗೂ ಗಂಗಾ ಆಸ್ಪತ್ರೆ ಕಲಬುರಗಿ ತಂದು ಸೇರಿಕೆ ಮಾಡಿದ್ದು. ನನ್ನ ಮಗಳಾದ ಪ್ರೀತಿ ವ: 19 ವರ್ಷ ಇವಳಿಗೆ ಭಾರಿ ಗಾಯದಿಂದ ಉಪಚಾರ ಹೊಂದುತ್ತಾ ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 18/12/16 ರಂದು 1 ಎಎಮಕ್ಕೆ ಮೃತ್ತಪಟ್ಟಿರುತ್ತಾಳೆ. ಕಾರಣ ಖಾಸಗಿ ಬಸ್ಸ ನಂಬರ ಕೆಎ- 34 ಎ- 2852 ನೇದ್ದರ ಚಾಲಕ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸಿ ಎದುರಿನಲ್ಲಿ ಹೊರಟ ಟ್ರಾಯಿಲರ್‌ಗೆ ಲಾರಿಗೆ ಡಿಕ್ಕಿ ಪಡೆಯಿಸಿ ಬಸ್ಸಿನಲ್ಲಿದ್ದವರಿಗೆ ಸಾದಾ ಮತ್ತು ಬಾರಿಗಾಯಗೊಳಿಸಿ ನನ್ನ ಮಗಳ ಸಾವಿಗೆ ಕಾರಣನಾದ ಬಸ್ಸ ಚಾಲಕನ ಮೇಲೆ ಕೂನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಶಂಡದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ :  ದಿ 17.12.2016 ರಂದು ಫಿರ್ಯಾದಿ ಮಾನಸಿಂಗ್ ತಂದೆ ಧಂಜು ರಾಠೋಡ ಸಾ|| ಖ್ಯಾದ್ಯಾಪುರ ಠಾಣೆಗೆ ಹಾಜರಾಗಿ ನಾನು ಮಾನಸಿಂಗ್ ತಂದೆ ದಂಜುನಾಯ್ಕ ರಾಠೋಡ ಸಾಃ ಖ್ಯಾದಾಪೂರ ಇದ್ದು ನಮ್ಮ ತಂದೆಯವರು ಮೃತಪಟ್ಟಿdfdu  ಹೊಲದ ವಿಷಯದಲ್ಲಿ ನನ್ನ ತಮ್ಮ ಶಂಕರ ನನ್ನ ಜಗಳ ಜಗಳ ಮಾಡುತ್ತಾ ಬಂದಿರುತ್ತಾನೆ  ಅದರಿಂದ ಅವನಿಗೂ ನಮಗೂ ಹಿಂದಿನಿಂದ ವೈಮನಸ್ಸು ಇರುತ್ತದೆ. ಹೀಗಿದ್ದು ದಿ. 14-12-2016 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ದೇನುನಾಯ್ಕ ತಂದೆ ಲಕ್ಮಣ ರಾಠೊಡ ಇಬ್ಬರೂ ನಮ್ಮ ಮನೆಯ ಎದುರು ಕುಳಿತುಕೊಂಡು ನಮ್ಮ ತಾಂಡಾದಲ್ಲಿ ಸೇವಲಾಲ ಗುಡಿ ಕಟ್ಟುವ ವಿಷಯದಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದೆವು. ಅದೇ ಸಮಯಕ್ಕೆ 1) ಶಂಕರ ತಂದೆ ದಂಜು ನಾಯ್ಕ ರಾಠೊಡ 2)  ಕೀಶನ ತಂದೆ ದಂಜು ನಾಯ್ಕ ರಾಠೊಡ, 3)  ರೂಪಲಾ ತಂದೆ ರಾಮಚಂದ್ರ ಚವ್ಹಾಣ, 4)  ಪರಶುರಾಮ  ತಂದೆ ಶಂಕರ ರಾಠೊಡ, 5) ಆಕಾಶ ತಂದೆ ಶಂಕರ ರಾಠೊಡ, 6)  ಶೀಲಾಬಾಯಿ ಗಂಡ ಶಂಕರ ರಾಠೊಡ, 7) ಶಾಂತಾಬಾಯಿ ಗಂಡ ಕೀಶನ ರಾಠೊಡ, 8) ಪುನ್ನಿಬಾಯಿ ಗಂಡ ರೂಪಲೂ ಚವ್ಹಾಣ ಸಾಃ ಎಲ್ಲರೂ ಖ್ಯಾದಾಪೂರ ಎಲ್ಲರೂ ಕೂಡಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈಯಹತ್ತಿದ್ದರು ಆಗ ನಾನು ಅವರಿಗೆ ನಾವು ತಾಂಡಾದಲ್ಲಿ ಸೇವಾಲಾಲ ಗುಡಿ ಕಟ್ಟುವ ವಿಷಯದಲ್ಲಿ ಮಾತನಾಡುತ್ತಿದ್ದೆವೆ ಅಂತಾ ಅಂದಾಗ ಅವರಲ್ಲಿ ಶಂಕರ ಇತನು ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದನು, ಕೀಶನ ಇತನು ನನಗೆ ಒತ್ತಿಯಾಗಿ ಹಿಡಿದುಕೊಂಡನು ರೂಪಲೂ ಇತನು ಕೈ ಮುಷ್ಠಿ ಮಾಡಿ ನನ್ನ ಮುಖದ ಮೇಲೆ ಹೊಡೆದನುಪರಶುರಾಮ ಇತನು ಕಾಲಿನಿಂದ ನನ್ನ ಹೊಟ್ಟೆ ಮೇಲೆ ಒದ್ದನು, ಆಕಾಶ ಇತನು ಕಲ್ಲಿನಿಂದ ನನ್ನ ಬಲಕಾಲಿನ ಮೇಲೆ ಹೊಡೆದಿರುತ್ತಾನೆ.  ಮತ್ತು ಅವರೆಲ್ಲರೂ ಈ ಮಗನಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ  ಬೇದರಿಕೆ ಹಾಕಿರುತ್ತಾರೆ ಅಷ್ಟರಲ್ಲಿಯೇ ದೇನುನಾಯಕ ತಂದೆ ಲಕ್ಮಣ ರಾಠೊಡ, ಬಸವರಾಜ ತಂದೆ ದೇಸು ನಾಯಕ್ಲಾಲಸಿಂಗ್ ತಂದೆ ಹರಿಶ್ಚಂದ್ರ ರಾಠೊಡ, ಗೇನು ತಂದೆ ಲಕ್ಮಣ ಚಿನ್ನಾರಠೊಡಶಾಂತಾಬಾಯಿ ಗಂಡ ಜಾನು ನಾಯಕ ರಾಠೋಡ, ಇವರು ಜಗಳ ನೊಡಿ ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ. . ಹಿಂದಿನ ಹಳೆಯ ದ್ವೇಷದಿಂದ ಶಂಕರ ಮತ್ತು ಅವನ ಸಂಗಡ ಇದ್ದವರು ನನ್ನ ಸಂಗಡ ಜಗಳ ಮಾಡಿ ಅವಾಚ್ಯವಾಗಿ ಬೈಯದು, ಕೈಯಿಂದ ಬಡಿಗೆಯಿಂದ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿರುತ್ತಾರೆ  ಕಾರಣ ಅವರ ವಿರುದ್ದ ಕಾನೂನು ಪ್ರಕಾರ  ಕ್ರಮ ಜರುಗಿಸಲು ವಿನಂತಿ.  ಅಂತ  ಸಲ್ಲಿಸಿದ ದೂರು ಸಾಟಾಣಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.