Police Bhavan Kalaburagi

Police Bhavan Kalaburagi

Saturday, April 6, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ. ಶಶಿಕಲಾ ಗಂಡ ಮಲ್ಲೇಶಿ ಕಮ್ಮನ ಸಾ; ಪಟ್ಟಣ ಗ್ರಾಮ ತಾ;ಜಿ;ಕಲಬುರಗಿ ರವರ ಗಂಡ ಮಲ್ಲೇಶಿ ಕಮ್ಮನ ಇವರು ಪ್ರತಿದಿವಸದಂತೆ ಆಟೋರಿಕ್ಷಾ ನಡೆಯಿಸಲು ಮನೆಯಿಂದ ಕಲಬುರಗಿಗೆ ಹೋದರು ಮದ್ಯಾನ 3 ಗಂಟೆಯ ಸುಮಾರಿಗೆ ನನ್ನ ಗಂಡ ನನಗೆ ಫೋನ ಮಾಡಿ ಮನೆಯಲ್ಲಿ ಮಕ್ಕಳು ಊಟ ಮಾಡಿದ್ದಾರೆ ಹೇಗೆ ಮತ್ತು ಏನು ಮಾಡುತಿದ್ದಾರೆ ಅಂತಾ ಕೇಳಿದರು ನಂತರ ಸಂಜೆ 06-30 ಗಂಟೆಯ ಸುಮಾರಿಗೆ ಪುನಾ ಫೋನ ಮಾಡಿ ರಾತ್ರಿಬರಲು ತಡವಾಗುತ್ತದೆ ಎಲ್ಲರೂ ಊಟ ಮಾಡಿಕೊಳ್ಳಿ ಅಂತಾ ಹೇಳಿದರು ರಾತ್ರಿಯಾದರೂ ಮನೆಗೆ ಬರಲಿಲ್ಲಾ ನಾವು ಅವರ ಹಾದಿ ಕಾಯ್ದು ಮಲಗಿ ಕೊಂಡೇವು ಇಂದು ದಿನಾಂಕ.05-04-2019 ರಂದು 7 ಗಂಟೆಯ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಅಂದಾಡುತಿದ್ದು ಏನೆಂದರೆ ಪಟ್ಟಣದಿಂದ ಆಳಂದಕ್ಕೆ ಹೋಗುವ ರೋಡಿಗೆ ಹೊಂದಿ ಹಣಮಂತ ಜವಳಗಿ ಚೌಡಪೂರವಿವರ ಹೊಲದ ಬಂದಾರಿಯಲ್ಲಿ ಒಬ್ಬ ವ್ಯಕ್ತಿಯ ಕೊಲೆಯಾಗಿ ಬಿದಿರುತ್ತಾನೆ ಅಂತಾ ಗೊತ್ತಾಗಿ ನಾನು ಮತ್ತು ನನ್ನ ಮಕ್ಕಳು ನಮ್ಮ ಅತ್ತೆ ತಾರಾಬಾಯಿ, ಭಾವ ಕುಪೇಂದ್ರ , ಮೈದುನ ಶ್ರೀಕಾಂತ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು  ಸದರಿ ಶವವು ನನ್ನ ಗಂಡನದೆಯಾಗಿದ್ದು ನೋಡಲಾಗಿ ಮೈಮೇಲೆ ಶರ್ಟ ಇರಲಿಲ್ಲಾ ತಲೆಯ ಬಲಭಾಗ, ಬಲಮೆಲಕಿಗೆ , ಮೂಖದ ಮೇಲೆ ಭಾರಿಗಾಯವಾಗಿ ಭಾರಿ ರಕ್ತಸ್ರಾವವಾಗಿ ,ಮುಖ ಜಜ್ಜಿದಂತ್ತಾಗಿ, ಮೂಗಿನಿಂದ ಬಾಯಿಂದ ರಕ್ತಸ್ರಾವಾಗಿ ವಿರೂಪವಾಗಿರುತ್ತದೆ. ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ನನ್ನ ಗಂಡ ಮಲ್ಲೇಶಿಗೆ ಬಾರವಾದ ಕಲ್ಲಿನಿಂದ ತಲೆಮೇಲೆ ಮುಖದ ಮೇಲೆ  ಹೊಡೆದು ಜಜ್ಜಿ ಕೊಲೆ ಮಾಡಿ ಮುಖ ಗುರ್ತು ಸಿಗದಂತೆ ಮಾಡಿ ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ.04-04-2019 ರಂದು ರಾತ್ರಿ 10 ಪಿ.ಎಂ.ದಿಂದ.ದಿನಾಂಕ.05-04-2019 ರಂದು ಮುಂಜಾನೆ 6 ಎ.ಎಂ.ದ ಮದ್ಯದ ಅವಧಿಯಲ್ಲಿ ಸಂಭವಿಸಿರುತ್ತದೆ. ಆದುದರಿಂದ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಪಟ್ಟಣ ಸೀಮಾಂತರದ ಚೌಡಾಪೂರ ಹೊಲದ ಬಂದಾರಿಯಲ್ಲಿ  ಆಳಂದ ರೋಡಿನ ಪಕ್ಕದಲ್ಲಿ ಬಯಲು ಜಾಗೆಯಲ್ಲಿ ನನ್ನ ಗಂಡ ಮಲ್ಲೇಶಿ ಕಮ್ಮನ ಇವರಿಗೆ ಭಾರವಾದ ಕಲ್ಲಿನಿಂದ ತಲೆ ಮೇಲೆ ಮುಖದ ಮೇಲೆ ಎತ್ತಿಹಾಕಿಕೊಲೆ ಮಾಡಿ ಮುಖ ಗುರುತು ಸಿಗದಂತೆ ಮುಖದ ಮೇಲೆ ಕಲ್ಲು ಎತ್ತಿಹಾಕಿ ಮುಖ ವಿರುಪಗೊಳಿಸಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಭಾರಿ ರಕ್ತಗಾಯ ಪಡಿಸಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಭಾಗ್ಯಶ್ರೀ ಗಂಡ ಸಂತೋಷ ದೊಡಮನಿ ಸಾ: ಹುಲ್ಲೂರ ರವರ ತವರುರೂ ದೇಸಾಯಿಕಲ್ಲೂರ ಗ್ರಾಮ ಇರುತ್ತದೆ. ನನಗೆ 6 ವರ್ಷಗಳ ಹಿಂದೆ ಹುಲ್ಲೂರ ಗ್ರಾಮದ ಸಂತೋಷ ತಂದೆ ಚಂದ್ರಾಮ ದೊಡಮನಿ ಇವನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ನನಗೆ ಚಂದ್ರಾಮ ಅಂತಾ ಒಂದು ಗಂಡು ಮಗು ಇರುತ್ತದೆ. ನನ್ನ ಗಂಡ ಮದುವೆ ಆದ ಕೆಲವು ವರ್ಷಗಳವರೆಗೆ ನನಗೆ ಚನ್ನಾಗಿ ನೋಡಿಕೊಂಡು ನಂತರ ನನ್ನ ಶೀಲದ ಮೇಲೆ ಸಂಶಯ ಮಾಡುತ್ತಾ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದನು, ನಾನು ಈ ಬಗ್ಗೆ ಹಬ್ಬ ಹರಿದಿನಕ್ಕೆ ನನ್ನ ತವರೂರಿಗೆ ಹೋದಾಗ ನನ್ನ ತಂದೆ ಚಂದ್ರಕಾಂತ, ತಾಯಿ ಮಲ್ಲಮ್ಮಗೆ ನನ್ನ ಗಂಡ ನನಗೆ ಶೀಲ ಶಂಕೆ ಮಾಡಿ ದೈಹಿಕವಾಗಿ, ಮಾನಸಿಕಕವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಹೇಳಿದಾಗ ಅವರು ಆಯಿತು ನಾವು ಅವನಿಗೆ ಹೇಳುತ್ತೇವೆ ನೀನು ಅವನೊಂದಿಗೆ ಹೊಂದಿಕೊಂಡು ಇರುವಂತೆ ಬುದ್ದಿ ಮಾತು ಹೇಳಿದ್ದರು. ದಿನಾಂಕ: 04-04-2019 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ನನ್ನ ಗಂಡ ಸಂತೋಷ  ತಂದೆ ಚಂದ್ರಾಮ ದೊಡಮನಿ ಇವನು ನನಗೆ ಏ ರಂಡಿ ಬಾಗಿ ನಾನು ಮನೆಯಲ್ಲಿ ಇರಲಾರದಾಗ ನೀ ಯಾವನ ಜೋಡಿ ಮಕ್ಕೊಂಡಿದಿ ಅಂತಾ ಅಂದಾಗ ನಾನು ಯಾಕ್ರಿ ಸುಮ ಸುಮನೆ ಯಾಕ ನನ್ನ ಮೇಲೆ ಸಂಶೆಯ ಮಾಡತಿರಿ ಅಂತಾ ಅಂದಿದ್ದಕ್ಕೆ ನನಗೆ ಕೈಯಿಂದ ಕಪಾಳಕಕ್ಕೆ ಹೊಡೆದನು ನಾನು ನೆಲಕ್ಕೆ ಬಿದ್ದೆನು ಆಗ ನನ್ನ ಗಂಡನು ನನಗೆ ಕೊಲೆ ಮಾಡುವ ಉದ್ದೇಶದಿಂದ ಅಲ್ಲೆ ನಮ್ಮ ಮನೆಯ ಮೂಲೆಯಲಿದ್ದ ಕೊಡಲಿ ತಗೆದುಕೊಂಡು ನನ್ನ ಬಲಗಾಲಿನ ಮೊಳಕಾಲ ಕೆಳಗೆ ಹೊಡೆದು ಕಾಲ ಕತ್ತರಿಸಿದನು, ನಂತರ ಅದೆ ಕೊಡಲಿಯಿಂದ ರಂಡಿ ನಿನಗೆ ಇವತ್ತ ಬಿಡಲಾ ಖಲಾಸ ಮಾಡತಿನಿ ಅಂತಾ ಅಂದು ನನ್ನ ಕುತ್ತಿಗೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದರಿಂದ ಕುತ್ತಿಗೆಗೆ ಬಿಳುವ ಏಟು ನನ್ನ ಎಡೈ ರಟ್ಟೆಗೆ ಬಿದ್ದು ಬಾರಿ ರಕ್ತಗಾಯ ಮಾಡಿದ್ದು, ಅದೆ ಕೊಡಲಿಯಿಂದ ನನ್ನ ಎಡಗಾಲ ಮೊಳಕಾಲ ಮೇಲೆ ಹೊಡೆದು ಬಾರಿ ರಕಕ್ತಗಾಯ ಮಾಡಿದನು ಆಗ ನಾನು ಚಿರಾಡುವದನ್ನು ಕೇಳಿ ನಮ್ಮ ಪಕ್ಕದ ಮನೆಯವರಾದ ನಾಗಪ್ಪ ದೊಡಮನಿ, ಶಾಂತವ್ವ ದೊಡಮನಿ ಹಾಗೂ ಇತರರೂ ಕೂಡಿ ಜಗಳ ಬಿಡಿಸಿದರು, ನಂತರ ನಾಗಪ್ಪ, ಶಾಂತಮ್ಮ ಇವರು ನನಗೆ 108 ಅಂಬುಲೆನ್ಸ ವಾಹನದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರ್ಗಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಗಂಡ ಸಂತೋಷನು ನನ್ನ ಶೀಲದ ಮೇಲೆ ಶಂಕೆ ಮಾಡಿ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ, ಕಪಾಳಕ್ಕೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ನನಗೆ ಕೊಲೆ ಮಾಡು ಉದ್ದೇಶದಿಂದ ಕೊಡಲಿಯಿಂದ ನನ್ನ ಬಲಗಾಲ ಮೊಳಕಾಲಗೆ ಹೊಡೆದು ಕಾಲ ಕತ್ತರಿಸಿ, ಎಡಗೈಗೆ, ಎಡಗಾಲ ಮೊಳಕಾಲಗೆ ಬಾರಿ ರಕ್ತಗಾಯ ಮಾಡಿದ ನನ್ನ ಗಂಡನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಪಶು ಪರೀವೀಕ್ಷಕರು ಮತ್ತು ವೈದ್ಯಾಧಿಕಾರಿಯವರು ನೀಡಿದ ಚುಚ್ಚು ಮದ್ದಿನಿಂದ  ಎಮ್ಮ ಸಾವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದೇವಿದಾಸ ತಂದೆ ಕೇರಪ್ಪ ಭಾಸ್ಕರ ಸಾ: ಮಡ್ಡಿ ನಂಬರ 01 ರೈಲ್ವೆ ಗೇಟ ಶಹಾಬಾದ ರವರ ಕುಟುಂಬದ ಎಲ್ಲಾ ಸದಸ್ಯರು ಎಮ್ಮೆಗಳ ಸಾಗುವಳಿ ಮೂಲಕ ಜೀವನ ಸಾಗಿಸುತ್ತಿದ್ದೇವು ತಮ್ಮ ಹತ್ತಿರ ಒಟ್ಟು 35-40 ಎಮ್ಮೆಗಳ ಸಾಗುವಳಿ ಮಾಡುತ್ತೇವೆ  ನಮ್ಮ ಎಮ್ಮೆಗಳು ಸಾಗುವಳಿ ಸಮಯದಲ್ಲಿ ಯಾವುದೆ ರೀತಿಯ ಅರೋಗ್ಯ ತಪಾಸಣೆ ಗೊಸ್ಕರ ನಮ್ಮ ಶಹಾಬಾದ ನಗರ ಪಶು ವೈದ್ಯಕೀಯ ಚಿಕಿತ್ಸೆಯಲ್ಲಿ ಅರೋಗೈ ತಪಾಸಣೆ ಮಾಡುವ ರುಡಿಯಲ್ಲಿ ಇರುತ್ತೇವೆ ದಿನಾಂಕ: 05/04/2019 ರಂದು ನಮ್ಮ ಎಮ್ಮೆ ಆರೋಗ್ಯ ಏರುಪೇರುವಾದ ಪ್ರಯುಕ್ತ ಸ್ಥಳಿಯ ಪಶು ವೈದ್ಯಕೀಯ ಆಸ್ಪತ್ರೆಗೆ ಮುಂಜಾನೆ 10-00 ಗಂಟೆಗೆ ಹೋಗಿ ಸಂದರ್ಶನ ನೀಡಿದಾಗ ಪಶು ಅರೋಗ್ಯ ಆಧಿಕಾರಿಗಳಾದ ಶ್ರೀ ನೀಲಪ್ಪ ಪಾಟೀಲ ರವನರನ್ನು ಸಂಪರ್ಕ ಮಾಡಿದಾಗ ವೈದ್ಯಕೀಯ ಅಧಿಕಾರಿಗಳು ತಮ್ಮ ಆಸ್ಪತ್ರೆಯಲ್ಲಿ ಪಶು ವೈದ್ಯಕೀಯ ಪರೀಕ್ಷಕರಾದ ಶ್ರೀ ಶಿವಶಂಕರಪ್ಪ ಎಮ್ ಮೈನಾಳ ರವರು ನಮ್ಮ ಎಮ್ಮೆ ತಪಾಸಣೆಗೊಸ್ಕರ ಇಂದು ಮುಂಜಾನೆ 10-50 ರಿಂದ 11-45 ಗಂಟೆ ಒಳಗಾಗಿ ಮನೆಗೆ ಸಂಪರ್ಕ ನೀಡಿದಾಗ  ನಮ್ಮ ಎಮ್ಮೆ ತುಂಬು ಗರ್ಭಣಿ ಹೊಂದಿದ್ದ  ಬಗ್ಗೆ ತಿಳಿಯ ಪಡಿಸಲಾಗಿಯು ಸಂಬಂದ ಪಟ್ಟ ಪಶು ವೈದ್ಯಕೀಯ ಅಧಿಕಾರಿಗಳು ಆಗಮಿಸಿ ಸಂಪೂರ್ಣವಾಗಿ ಎಮ್ಮೆ ತಪಾಸಣೆ ಮಾಡದೆ ಎಮ್ಮೆಗೆ ಒಟ್ಟು 03 ಚುಚ್ಚುಮುದ್ದು ನೀಡಿ ಸಂಪೂರ್ಣವಾಗಿ ಎಮ್ಮೆ ಆಸ್ತವ್ಯವಸ್ಥೆ ಮಾಡಿರುತ್ತಾರೆ ನಂತರ ನನ್ನ ಎಮ್ಮೆ ಮರಣ ಹೊಂದಿದೆ  ತಕ್ಷಣ ಸಂಬಂಧ ಪಟ್ಟ ವೈದ್ಯ ಆಧಿಕಾರಿಗಳಿಗೆ  ಈ ಘಟನೆ ಬಗ್ಗೆ ಕೇಳಿದಾಗ ವೈದ್ಯಾಧಿಕಾರಿಗಳು ನಾನು ಏನು ಮಾಡುವಂತಿಲ್ಲವೆಂದು ಹೇಳಿಕೆ ನೀಡಿರುತ್ತಾರೆ ಸಾವು ಯಾರ ಕೈಯಲ್ಲಿ ಇರುತ್ತದೆ ಎಂದು ಮರು ಪ್ರಶ್ನೆ ಹಾಕಿರುತ್ತಾರೆ  ಇಂದು ದಿನಾಂಕ: 05/04/2019 ರಂದು ಪಶು ವೈದ್ಯಕೀಯ ಪರಿಕ್ಷಕರಿಂದ ನನ್ನ ಎಮ್ಮೆಯನ್ನು ಮರಣ ಹೊಂದಿರುತ್ತದೆ  ಇದ್ದರಿಂದ ನನಗೆ ಒಟ್ಟು 150000-00 ರೂ ದಷ್ಟು ಕಿಮ್ಮತಿನ ಎಮ್ಮೆ ಕಳೆದುಕೊಂಡಿರುತ್ತೇನೆ ಈ ಪ್ರಯುಕ್ತ ತಾವುಗಳು ನನ್ನ ಎಮ್ಮೆಗೆ ವಿನಾಕಾರಣ ಜೀವ ತೆಗೆದು ಹಾಕಿದ  ಶಿವಶರಣಪ್ಪ ಎಮ್ ಮೈನಾಳ , ಪಶು ವೈದ್ಯಕೀಯ ಪರೀಕ್ಷಕರು ಪಶು ಆಸ್ಪತ್ರೆ ಶಹಾಬಾದ ಮತ್ತು ಶ್ರೀ ನೀಲಪ್ಪ ಪಾಟೀಲ ಪಶು ವೈದ್ಯರು ಶಹಾಬಾದ ಇವರ ಮೇಲೆ ಕಾನೂನುನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣಭೆಯಲ್ಲಿ ಪ್ರಕರಣ ದಾಖಲಾಗಿದೆ.