Police Bhavan Kalaburagi

Police Bhavan Kalaburagi

Monday, May 31, 2021

BIDAR DISTRICT DAILY CRIME UPDAT 31-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-05-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 29-05-2021 ರಂದು 2100 ಗಂಟೆಯಿಂದ 2230 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಪರ್ವೇಜಖಾನ ತಂದೆ ಅಲಿ ಮೊಹ್ಮದ ಖಾನ ವಯ: 33 ವರ್ಷ, ಜಾತಿ: ಮುಸ್ಲಿಂ, ಸಾ: ರಾಜಭವನ ಎಮ.ಎಸ..ಮಕ್ತಾ ಹೈದ್ರಾಬಾದ ರವರ ತಂಗಿಯಾದ ಶಿರಿನ ಖಾನಮ ಗಂಡ ಶೇಖ್ ಮಹೆಫೂಸ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಅಬ್ದುಲ ಫೈಜ ದರ್ಗಾ ಹತ್ತಿರ ಬೀದರ ಇಕೆಯು ಯಾವುದೋ ವಿಷಯದಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಸದಿಯವಳ ಮರಣದಲ್ಲಿ ನಮಗೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 48/2021, ಕಲಂ. 279, 304() ಐಪಿಸಿ ಜೊತೆ 187 .ಎಂ.ವಿ ಕಾಯ್ದೆ :-

ಫಿರ್ಯಾದಿ ವನೀತಾ ಗಂಡ ನ್ಯಾನು ಬಿರಾದಾರ ವಯ: 25 ವರ್ಷ, ಜಾತಿ: ಮರಾಠಾ, ಸಾ: ಲವಂಗಪುರಿ ಚಿತ್ತಕೋಟಾ ಗ್ರಾಮ, ತಾ: ಉಮರ್ಗಾ, ಜಿ: ಉಸ್ಮಾನಾಬಾದ ಮಹಾರಾಷ್ಟ್ರ ರವರಿಗೆ ಆರಾಮ ಇಲ್ಲದ ಕಾರಣ 4-5 ದಿವಸಗಳ ಹಿಂದೆ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆ ಗ್ರಾಮವಾದ ರಾಮತೀರ್ಥ(ಡಿ)ಗೆ ಬಂದಿದ್ದು, ಹೀಗಿರುವಾಗ ದಿನಾಂಕ 30-05-2021 ರಂದು ಫಿರ್ಯಾದಿಯು ತನ್ನ ತಾಯಿ, ತಂದೆ ಎಲ್ಲರೂ ಮನೆಯ ಅಂಗಳದಲ್ಲಿ ಕುಳಿತಿರುವಾಗ ಮಗ ಕೇತನು ಇತನು ಮನೆಯಿಂದ ಹೊರಗಡೆ ಮನೆಯ ಮುಂದೆ ಇದ್ದ ಬಟಗೇರಾ-ರಾಮತೀರ್ಥ(ಡಿ) ರಸ್ತೆಯ ಪಕ್ಕದಲ್ಲಿ ಬರ್ಹಿದೆಸೆಗೆಂದು ಹೋದಾಗ ರೋಡಿನ ಮೇಲೆ ಅಶೋಕ ಲಿಲ್ಯಾಂಡ ದೊಸ್ತ ವಾಹನ ಸಂ. ಕೆಎ-56/5634 ನೇದರ ಚಾಲಕನಾದ ಆರೋಪಿ ಮಹ್ಮದ ಮುಸ್ತಕೀಮ್ ತಂದೆ ಮುನೀರೋದ್ದಿನ ದಾವಲಾಖಾ ವಯ: 28 ವರ್ಷ, ಸಾ:  ಕೋಹಿನೂರ ಪಹಾಡ, ತಾ: ಬಸವಕಲ್ಯಾಣ ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಗ ಕೇತನ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಎಕಂಬಾ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಕೇತನ ಇತನು ಜೋರಾಗಿ ಚೀರಿ ನೇಲದ ಮೇಲೆ ಬಿದ್ದಾಗ ಮನೆಯ ಅಂಗಳದಲ್ಲಿ ಕುಳಿತ ಎಲ್ಲರೂ ಕೇತನ ಇತನ ಹತ್ತಿರ ಹೋಗಿ ನೋಡಲು ಕೇತನ ಇತನಿಗೆ ಎಡಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯ, ಮುಖ ಜಜ್ಜಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಕೇತನ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2021, ಕಲಂ. 279, 337, 304() ಐಪಿಸಿ ಜೋತೆ 187 .ಎಂ.ವಿ ಕಾಯ್ದೆ :-

ಫಿರ್ಯಾದಿ ಸಿದ್ರಾಮ ತಂದೆ ವಿಶ್ವ್ವನಾಥ ಮುತ್ತಂಗೆ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಹುಪಳಾ ಗ್ರಾಮ, ತಾ: ಭಾಲ್ಕಿ ರವರಿಗೆ ಈಗ ಸುಮಾರು ಒಂದು ತಿಂಗಳಿಂದ ಎಡಗಾಲಿಗೆ ಚಾಲಕ ಬಾಹು ಆಗಿದ್ದು, ಅಲ್ಲದೇ ಅದೇ ಗ್ರಾಮದ ಕಸ್ತೂರಿಬಾಯಿ ಗಂಡ ವೀರಶೆಟ್ಟಿ ಕೊಸಂಬೆ ಇವಳಿಗೂ ಕೂಡಾ ಕಾಲಿಗೆ ಚಾಲಕ ಬಾಹು ಇರುವುದರಿಂದ ದಿನಾಂಕ 30-05-2021 ರಂದು ಇಬ್ಬರು ಕೂಡಿ ಮೋಟರ ಸೈಕಲ ನಂ.ಕೆ.-39/ಕ್ಯೂ-2708 ನೇದರ ಮೇಲೆ ಕುಳಿತು ಹುಪಳಾ ಗ್ರಾಮದಿಂದ ವರವಟ್ಟಿ ಗ್ರಾಮಕ್ಕೆ ಹೋಗಿ ತೋರಿಸಿಕೊಂಡು ಮರಳಿ ಹುಪಳಾ ಗ್ರಾಮಕ್ಕೆ ಬರುತ್ತಿರುವಾಗ ಭಾಲ್ಕಿ ಹುಮನಾಬಾದ ರೋಡಿನ ಮೇಲೆ ಆದಿತ್ಯ ಕಾಲೇಜ ಹತ್ತಿರ ಬಂದಾಗ ಹಿಂದಿನಿಂದ ಒಂದು ಬಿಳಿ ಬಣ್ಣದ ಕಾರ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿಯ ಬಲಗೈ ಮೋಳಕೈ ಕೆಳಗೆ ರಕ್ತಗಾಯ, ಬಲ ಭುಜಕ್ಕೆ ತರಚಿದ ಗಾಯ ಮತ್ತು ಉಂಗುರ ಬೆರಳಿಗೆ ರಕ್ತ ಗಾಯವಾಗಿರುತ್ತದೆ ಮತ್ತು ಕಸ್ತೂರಿಬಾಯಿ ಇವಳಿಗೆ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ, ಹಣೆಗೆ ರಕ್ತಗಾಯ, ಎಡಗೈ ಮೋಳಕೈ ಹತ್ತಿರ ತರಚಿದ ರಕ್ತಗಾಯ, ಬಲಗೈ ಕಿರು ಬೆರಳಿಗೆ ತರಚಿದ ಗಾಯಗಳು ಆಗಿರುವುದರಿಂದ ಕೂಡಲೆ ಫಿರ್ಯಾದಿಯು ಸದರಿ ವಿಷಯ ಅವರ ಮಗನಾದ ಭಿಮಣ್ಣಾ ರವರಿಗೆ ವಿಷಯ ತಿಳಿಸಿ 108 ಅಂಬುಲೇನ್ಸಗೆ ಕರೆ ಮಾಡಿದಾಗ ಅಂಬುಲೇನ್ಸ ಬಂದ ಮೇಲೆ ಕಸ್ತೂರಿಬಾಯಿ ಇವಳಿಗೆ ಅದರಲ್ಲಿ ಹಾಕಿಕೊಂಡು ಭಾಲ್ಕಿ ಸರಕಾರಿ ಆಸ್ಪತ್ರೆ ತಂದು ದಾಖಲು ಮಾಡಿದಾಗ ವೈದ್ಯರು ನೋಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡದ್ದರಿಂದ ಅವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಭಾಲ್ಕೆ ವೈದೆಹಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ತೋರಿಸಿದಾಗ ಅವರು ಎಕ್ಸರೆ ತೆಗೆದು ಪರಿಶೀಲಿಸಿ ಮನೆಗೆ ತೆಗೆದುಕೊಂಡು ಹೋಗಿ ಅಂತಾ ತಿಳಿಸಿದಾಗ ಕಸ್ತೂರಿಬಾಯಿಗೆ ಮನೆಗೆ ತರುವಾಗ ದಾರಿ ಮದ್ಯ ಅವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 62/2021, ಕಲಂ. 498(), 323, 504 ಜೊತೆ 34 ಐಪಿಸಿ :-

ಫಿರ್ಯಾದಿ ಬಸಮ್ಮಾ ಗಂಡ ಮಂಜುನಾಥ ವಿಭೂತಿ ಸಾ: ಸೀತಾಳಗೇರಾ, ಸದ್ಯ: ತವರು ಮನೆ ಖೇಣಿ ರಂಜೋಳ ಗ್ರಾಮ ರವರಿಗೆ ಈಗ ಸುಮಾರು 12 ವರ್ಷದ ಹಿಂದೆ ಸೀತಾಳಗೇರಾ ಗ್ರಾಮದ ಮಂಜುನಾಥ ವಿಭೂತಿ ಇವರ  ಜೊತೆ ಮದುವೆ ಮಾಡಿಕೊಟ್ಟಿದ್ದು, ಇಬ್ಬರು ಮಕ್ಕಳಿರುತ್ತಾರೆ, ಗಂಡ ಹಳ್ಳಿಖೇಡ(ಬಿ) ದಲ್ಲಿ ಮೋಟಾರ ಸೈಕಲ್ ಗ್ಯಾರೇಜ್ ಇಟ್ಟುಕೊಂಡು ಮೇಕ್ಯಾನಿಕ ಕೆಲಸ ಮಾಡಿಕೊಂಡಿರುತ್ತಾರೆ, ಗಂಡ ದಿನಾಲು ಅವರ ತಮ್ಮ ಅಮರ ಹಾಗೂ ಅವರ ಹೆಂಡತಿ ಸ್ನೇಹಾ ಇವರ ಮಾತು ಕೇಳಿ ತವರು ಮನೆಯಿಂದ ಹಣ ತೆಗೆದುಕೊಡು ಬಾ ಅಂತ ಫಿರ್ಯಾದಿಗೆ ಪಿಡಿಸಿ ಹೊಡೆಬಡೆ ಮಾಡುತ್ತಾ ಬಂದಿರುತ್ತಾನೆ ಮತ್ತು ಗಂಡನ ತಮ್ಮನಾದ ಅಮರ ಇವನು ಮದ್ಯ ಬಂದು ಅಣ್ಣನಂತೆ ಮಾತಾಡಿ ಫಿರ್ಯಾದಿಯ ಕುತ್ತಿಗೆ ಹಿಸಿಕಲು ಬರುತ್ತಾನೆ ಮತ್ತು ತಮ್ಮನ ಹೆಂಡತಿ ಸ್ನೇಹಾ ನೀನು ಇಲ್ಲಿ ಏಕೆ ಇದ್ದಿ ನಿನ್ನ ತವರು ಮನೆಗೆ ಹೋಗು ಅಂತ ಬೈಯುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 30-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. 379 ಐಪಿಸಿ :-       

ಫಿರ್ಯಾದಿ ಸುನೀಲ ತಂದೆ ಬಳಿರಾಮ ಹಡೋಳೆ ವಯ: 21 ವರ್ಷ, ಜಾತಿ: ಮರಾಠಾ, ಸಾ: ಮೇಹಕರ, ತಾ: ಭಾಲ್ಕಿ ರವರು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ ಮೋಟಾರ ಸೈಕಲ ನಂ. ಎಮ್.ಹೆಚ್-14/ಎಫ.ಎಲ್-3061, ಚಾಸಿಸ್ ನಂ. MBLHA10CGFHM13313, ಇಂಜಿನ ನಂ. HA10ERFHM75390, ಅ.ಕಿ 19,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ದಿನಾಂಕ 03-05-2021 ರಂದು 0015 ಗಂಟೆಯಿಂದ 0300 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 30-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.