Police Bhavan Kalaburagi

Police Bhavan Kalaburagi

Saturday, March 6, 2021

BIDAR DISTRICT DAILY CRIME UPDATE 06-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ  06-03-2021

 

ಕಮಲನಗರ ಪೊಲೀಸ್  ಠಾಣೆ ಅಪರಾಧ ಸಂ. 18/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 04-03-2021 ರಂದು ಕಮಲನಗರದಲ್ಲಿ ಶಿವಾಜಿ ಚೌಕ ಹತ್ತಿರ ಖಬ್ರಿಸ್ತಾನ ಹತ್ತಿರ ಬೆವಿನ ಗಿಡದ ಕೆಳಗೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಪಾಲಾಕ್ಷಯ್ಯಾ ಎಮ್ ಹಿರೇಮಠ ವಯ: 52 ವರ್ಷ, ಕಮಲನಗರ ವೃತ್ತ ಕಛೇರಿ ಕಮಲನಗರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿತಯವರೊಡನೆ ಬೇವಿನ ಮರದ ಕೆಳಗೆ ಇದ್ದ ಆರೋಪಿ ಚಾಂದಪಾಶ್ಯಾ ತಂದೆ ಅಬ್ದೂಲ ರೌಫ್‌ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಕಮಲನಗರ ಇತನ ಮೇಲೆ ದಾಳಿ ಮಾಡಿ ಹಿಡಿದು ಚೆಕ್ ಮಾಡಲು ಅವನ ಹತ್ತಿರ 1) 2 ಮಟಕಾ ನಂಬರ ಬೆರೆದ ಚೀಟಿಗಳು, 2) ನಗದು ಹಣ 460/- ರೂ. ಹಾಗು 3) ಒಂದು ಬಾಲ ಪೆನ್ನ ನೇದವುಗಳು ಸಿಕ್ಕಿದ್ದನ, ನಂತರ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ದಿನಾಂಕ 05-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 19/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 04-03-2021 ರಂದು ಕಮಲನಗರದ ರೈಲ್ವೇ ನಿಲ್ದಾಣಕ್ಕೆ ಹೊಗುವ ದಾರಿಯಲ್ಲಿದ್ದ ಟಾವರ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ನಂದಿನಿ.ಎಸ್ ಪಿಎಸ್ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಟಾವರ ಹತ್ತಿರ ಹೋಗಿ ಆರೋಪಿತನಾದ ಸಂಜು ತಂದೆ ಮಾಧವರಾವ ತಳವಾಡೆ ವಯ: 40 ವರ್ಷ, ಜಾತಿ: ಮರಾಠಾ, ಸಾ: ಕಮಲನಗರ ಇತನ ಮೇಲೆ ದಾಳಿ ಮಾಡಿ ಹಿಡಿದು ಆತನಿಗೆ ಚೆಕ್ ಮಾಡಲು ಅವನ ಹತ್ತಿರ 1) 2 ಮಟಕಾ ನಂಬರ ಬೆರೆದ ಚೀಟಿಗಳು, 2) ನಗದು ಹಣ 950/- ರೂಪಾಯಿ ಹಾಗು 3) ಒಂದು ಬಾಲ ಪೆನ್ನ ನೇದವುಗು ಸಿಕ್ಕಿದ್ದು, ನಂತರ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ದಿನಾಂಕ 05-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.