Police Bhavan Kalaburagi

Police Bhavan Kalaburagi

Sunday, July 19, 2020

BIDAR DISTRICT DAILY CRIME UPDATE 19-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-07-2020

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 58/2020 ಕಲಂ 379 ಐಪಿಸಿ :-
ದಿನಾಂಕ:-18/07/2020ರಂದು 1100 ಗಂಟೆಗೆ ಫಿರ್ಯಾದಿ ಶ್ರೀ ಅನೀಲಕುಮಾರ ತಂದೆ ಸುಭಾಸ ಬುಳ್ಳಾ ಸಾಃ ಬೋರಾಳ ತಾಃ ಹುಮನಬಾದ  ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ ಇವರು ಗ್ರಾಮದ ಮಾಹಾನಂದ ರೆಡ್ಡಿ ಇವರ  ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಉಪಜೀವಿದಸುತ್ತಿದ್ದು ದಿನಾಂಕಃ 6/07/2020 ರಂದು ಮುಂಜಾನೆ 1100 ಗಂಟೆಗೆ  ಕೆಲಸ ಮಾಡಲು ರೆಡ್ಡಿ ಇವರ ಇಂಟರ ಪ್ರಾಯಸ್ಸ ಅಂಗಡಿಗೆ ಬಂದು  ಕೆಲಸ ಮಾಡುತ್ತಿರುವಾಗ ಅಂಗಡಿಯಲ್ಲಿ ಜಾಸ್ತಿ ಜನರು ಟಿ,ವ್ಹಿ ರಿಚಾರ್ಜ ಮಾಡಲು ಸಾಮಾನುಗಳು ಖರೀದಿ ಮಾಡಲು ಅಂಗಡಿಗೆ ಬಂದಿದ್ದು  ಸೂಮಾರು 1200 ಗಂಟೆಗೆ ನೋಡಲು ಅಂಡಿಯ ಮುಂದೆ ಇಟ್ಟಿದ್ದ ಮೋಟಾರ ಸೈಕಲ ನಂ ಕೆಎ- 39 ಕ್ಯೊ 6032 (ಸ್ಪ್ಪ್ಯ್ಲೆಂಡರ್ ಪ್ಲಸ್) ಅಕಿ.25000=00 ಬೆಲೆವುಳ್ಳದ್ದು ಇರಲಿಲ್ಲಾ ಅಕ್ಕಪಕ್ಕದ ಅಂಗಡಿಯವರಿಗೆ ಹಾಗು ನಮ್ಮ ಮಾಲಿಕರಾದ ಮಹಾನಂದ ರೆಡ್ಡಿ ಇವರಿಗೆ ವಿಚಾರಿಸಲು ಅವರು ಕೂಡಾ ವ್ಯಾಪಾರದಲ್ಲಿ ನಿರತರಾಗಿದ್ದರಿಂದ  ಅವರು ಕೂಡಾ ನೋಡಿರಲಿಲ್ಲಾ.  ನಂತರ ನಾನು ನನ್ನ ದ್ವೀಚಕ್ರ ವಾಹನ ಯಾರೋ ತಮ್ಮ ವಾಹನವೆಂದು ತಪ್ಪು ತಿಳಿದು ತೆಗೆದುಕೊಂಡು ಹೊಗಿರಬಹುದು ಮರಳಿ ನನ್ನ ದ್ವೀಚಕ್ರ ವಾಹನ ಇಲ್ಲಿಗೆ ತಂದು ನಿಲ್ಲಿಸಿಬಹುದೆಂದು ತಿಳಿದು ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಎಲ್ಲಾ ಕಡೆ ವಿಚಾರಿಸಲಾಗಿ ಮತ್ತು ಹುಡುಕಾಡಲಾಗಿ ನನ್ನ ವಾಹನ ಸಿಕ್ಕಿರುವುದಿಲ್ಲ. ನಂತರ ನನ್ನ ಗ್ರಾಮಕ್ಕೆ ಬೇರೆ ವಾಹನದಲ್ಲಿ ಹೋಗಿ ಮನೆಯಲ್ಲಿ ವಿಚಾರ ಮಾಡಿ ಸುತ್ತಾ ಮುತ್ತಲ್ಲಿನ ಗ್ರಾಮಗಳಗೆ ಹೋಗಿ ವಿಚಾರ ಮಾಡಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 59/2020 ಕಲಂ 498(ಎ), 306 ಜೊತೆ 34 ಐಪಿಸಿ  :-
ದಿನಾಂಕ:-18/07/2020 ರಂದು 1300 ಗಂಟೆಗೆ  ಫಿರ್ಯಾದಿ ಶ್ರೀ ಜೈರಾಜ ತಂದೆ ಚಂದ್ರಪ್ಪಾ ಮೇತ್ರೆ ವಯ:60 ವರ್ಷ ಜಾ: ಎಸ್ ಸಿ ಮಾದಿಗ ಉ: ಕೂಲಿ ಕೇಲಸ ಸಾ: ಖಾಶೆಂಪುರ (ಸಿ) ಇವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಕೊಟ್ಟ ಫಿರ್ಯಾದು ಸಾರಂಶವೆನೆಂದರೆ, ಇವರಿಗೆ ಒಬ್ಬಳು ಹೆಣ್ಣು ಮಗಳು ಇದ್ದು ಶಾರದಾ ವಯ: 28 ವರ್ಷ ಇವಳಿಗೆ 10 ವರ್ಷಗಳ ಹಿಂದೆ ಕಂದಗೊಳ ಗ್ರಾಮದ ಶ್ರೀನಿವಾಸ ತಂದೆ ಶರಣಪ್ಪಾ ಖೇಳಗಿ ಇತನ ಜೊತೆ ಮದುವೆ ಮಾಡಿಕೊಟ್ಟಿದ್ದು ಶಾರದ ಇವಳಿಗೆ 2 ಹೆಣ್ಣು ಮಕ್ಕಳಿದ್ದು ಮಗಳು ಮದುವೆ ಯಾಗಿ 5 ವರ್ಷ ಗಂಡನ ಮನೆಯಲ್ಲಿ ಚನ್ನಾಗಿ ಸಂಸಾರ ಮಾಡಿ ನಂತರ ಕೇಲವು ವರ್ಷಗಳಿಂದ ಇವರ ಅಳಿಯ ಶ್ರೀನಿವಾಸ ಇತನು  ಫಿರ್ಯಾದಿ ಮಗಳಿಗೆ ಯಾವಾಗಲು ಬೈಯುವುದು ಹೊಡೆಯುವುದು ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು   ಇತನ ಕೀರುಕುಳದಿಂದ ನಾನು ಸಾಯಬೆಕೆಂದು ಅನಿಸುತ್ತಿದ್ದೆ ಅಂತಾ ನಮಗೆ ತೀಳಿಸಿರುತ್ತಾಳೆ ನಾವು ಅವಳಿಗೆ ನಿನು ನಿನ್ನ  ಗಂಡನ ಮನೆಯಲ್ಲಿ ಸಂಸಾರ ಮಾಡಬೇಕು ಎಷ್ಟಾದರು ನೀನ್ನ ಗಂಡನೆ ಇದ್ದು ಇಂದು-ಇಲ್ಲಾ ನಾಳೆ ನಿನ್ನ ಗಂಡ ಸಂಸಾರ ಚನ್ನಾಗಿ ಆಗುತ್ತೆ ಅಂತಾ ಅವಳಿಗೆ ಸಮಧಾನ ಮಾಡಿ ಗಂಡನ ಮನೆಗೆ ಕಳುಹಿಸುತ್ತಿದ್ದೆವು. ಹಿಗಿರುವಲ್ಲಿ ದಿನಾಂಕ 18/07/2020 ರಂದು ಬೇಳಗ್ಗಿನ ಜಾವಾ 0500 ಗಂಟೆಗೆ ನನ್ನ ಅಳಿಯ ಶ್ರೀನಿವಾಸ ಇತನು ಫೊನ ಮಾಡಿ ತೀಳಿಸಿದ್ದೆನೆಂದರೆ  ರಾತ್ರಿ ಶಾರದ ಇವಳು ಎದೆ ಬೇನೆ ಅಂತಾ ಅಂದು ಮಲಗಿದ್ದು ನಾವು ನೊಡಲು ರಾತ್ರಿ 01:00 ಗಂಟೆಗೆ ಮನೆಯಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ಮಾಹಿತಿ ತೀಳಿಸಿರುತ್ತಾನೆ, ಫಿರ್ಯಾದಿ ಮತ್ತು ಇವರು ತಮ್ಮ ಪತ್ನಿ ಸುಶೀಲಮ್ಮಾ ಇಬ್ಬರು ಗಾಬರಿಗೊಂಡು  ಕಂದಗೂಳ ಗ್ರಾಮಕ್ಕೆ ಹೋಗಿ ನೊಡಲು ನೀಜವಾಗಿಯು  ಮಗಳು ಅವಳ ಮನೆಯಲ್ಲಿ ಮೃತಪಟ್ಟಿದ್ದು ನೊಡಿರುತ್ತೆನೆ ಅಲ್ಲಿಯೆ ಇದ್ದ ಗುಂಡಪ್ಪಾ ತಂದೆ ಮಾರುತಿ ಸಾ: ಕಂದಗೂಳ ಇವರಿಗೆ ವಿಚಾರಿಸಲು ಅವರು ನಿನ್ನೆ ರಾತ್ರಿ ನಾನು ಇವರ ಮನೆಯ ಮುಂದಿನಿಂದ ಹೊಗುತ್ತಿರುವಾಗ  ಶ್ರೀನಿವಾಸ ಹಾಗು ಅವನ ತಂದೆ ಶರಣಪ್ಪಾ ಆತನ ತಾಯಿ ರೇಖಮ್ಮಾ ಮುವರು ಕೂಡಿ ಶಾರದ ಇವಳಿಗೆ ಬೈಯುವುದು ಹೊಡೆಯುವುದು ಅವಳಿಗೆ ಮಾನಸಿಕ ಹಾಗು ದೈಹಿಕ ಕೀರುಕುಳ ನೀಡಿ ಹೊಡೆ- ಬಡೆ ಮಾಡಿದ್ದರಿಂದ ಶಾರದ ಇವಳು ಕೀರುಕುಳ ತಾಳಲಾರದೆ ರಾತ್ರಿ 01:00 ಗಂಟೆಗೆ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದು ಮೃತಪಟ್ಟಿದ್ದು ಇರುತ್ತದೆ, ನಾನು ಇಂದು ಅವರ ಮನೆಗೆ ಬಂದು ಹೇಣವನ್ನು ನೊಡಿರುತ್ತೆನೆ ಅಂತಾ ತೀಳಿಸಿದ್ದು ಕಾರಣ ಶಾರದ ಇವಳಿಗೆ ಅವಳ ಗಂಡ ಶ್ರೀನಿವಾಸ ಅತ್ತೆ ರೇಖಮ್ಮಾ ಮಾವ ಶರಣಪ್ಪಾ ಇವರು ಮಾನಸಿಕ ದೈಹಿಕ ಕೀರುಕುಳ ನೀಡಿದ್ದು ಇವರ ಕೀರುಕುಳ ತಾಳಲಾರದೆ  ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಮನಾಬಾಧ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 106/2020 ಕಲಂ 87 ಕೆ.ಪಿ ಕಾಯ್ದೆ :-
 ದಿನಾಂಕ 18/07/2020 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಹುಮನಾಬಾದ ಹಳೆ ಆರ.ಟಿಓ ಕಚೇರಿ ಹತ್ತಿರ ಕಲಬುರಗಿ  ರೋಡಿಗೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹೇಬರ ಎಂಬ ನಸೀಬಿನ ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ದಾಳಿ ಮಾಡಿ  ಜೂಜಾಟ ಆಡುತ್ತಿದ್ದ ಪರಮೇಶ್ವರ್, ಜ್ಞಾನೇಶ್ವರ್, ಖಲೀಲ್, ಶ್ರೀನಿವಾಸ, ,ಮೋಹನ, ವಿಶಾಲ, ಎಮ್.ಡಿ. ಜಿಹಾ ಮತ್ತು ಕಮಲಾಕರ ದಸ್ತಗಿರಿ ಮಾಡಿ ಜೂಜಾಟದಲ್ಲಿ ತೊಡಗಿಸಿರುವ  52 ಇಸ್ಪೀಟ್ ಎಲೆಗಳು ಹಾಗೂ ನಗದು ಹಣ  ಒಟ್ಟು ರೂ. 56,300/-ನೇದ್ದನ್ನು  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಬ.ಕಲ್ಯಾಣ ನಗರ ಠಾಣೆ ಅಪರಾಧ ಸಂಖ್ಯೆ 96/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ:18/07/2020 ರಂದು 1830 ಗಂಟೆಗೆ  ಪಿ.ಎಸ್.ಐ(ಕಾ&ಸು) ಪೊಲೀಸ್ ಠಾಣೆಯಲ್ಲಿರುವಾಗ  ಬಸವಕಲ್ಯಾಣ ನಗರದ ಪಾಟೀಲ್ ಪೆಟ್ರೋಲ್ ಬಂಕ್ ಹತ್ತಿರ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಸರಾಯಿವುಳ್ಳ ಬಾಟಲ್ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತ ವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿಸಿದ ಮೇರೆಗೆ ಸಿಬ್ಬಂದಿಯೊಂದಿಗೆ  ಬಸವಕಲ್ಯಾಣ ನಗರದ ಪಾಟೀಲ್ ಪೆಟ್ರೋಲ್ ಬಂಕ್ ಹೋಗಿ ನೋಡಲು ಭಾತ್ಮಿಯಂತೆ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡು ಕುಳಿತ್ತಿದ್ದು  ದಾಳಿ ಮಾಡಿ   ವಿರೇಶ @ ಕುಮ್ಯಾ ತಂದೆ ದೇವಿಂದರ ಗಸ್ತೆ ವಯಸ್ಸು//27 ವರ್ಷ ಜಾತಿ//ಎಸ್.ಸಿ ಮಾದಿಗ ಉ//ಕೂಲಿಕೆಲಸ ಸಾ//ಧರ್ಮಪ್ರಕಾಶಗಲ್ಲಿ ಬಸವಕಲ್ಯಾಣ ಇವನ ಹತ್ತಿರ ಇರುವ ಪ್ಲಾಸ್ಟೀಕ್ ಚೀಲ ದಲ್ಲಿದ್ದ ಒರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ 90 ಎಮ್.ಎಲ್. ಲಿಕ್ಕರ್ 96 ಪೌಚ್. ಪ್ರತಿ ಒಂದರ ಬೆಲೆ ಅಂದಾಜು 35/-ರೂ ಹೀಗೆ ಒಟ್ಟು ರೂ. 3360/-, ಒಲ್ಡ್ ಟಾವೆರೆನ್ ವಿಸ್ಕಿ 180 ಎಮ್.ಎಲ್. ಲಿಕ್ಕರ್ 15 ಪೌಚ್ ಪ್ರತಿ ಒಂದರ ಬೆಲೆ ಅಂದಾಜು 86/-ರೂ ಹೀಗೆ ಒಟ್ಟು ರೂ.  1290/-, ಆಫಿಸರ್ ಚಾಯಿಸ್ ಸ್ಪೆಷಲ್ ವಿಸ್ಕಿ 180 ಎಮ್.ಎಲ್. ಲಿಕ್ಕರ್ 11 ಪೌಚ್  ಪ್ರತಿ ಒಂದರ ಬೆಲೆ ಅಂದಾಜು 106/-ರೂ ಹೀಗೆ ಒಟ್ಟು ರೂ.  1166/-ಈ ಎಲ್ಲ ಸರಾಯಿವುಳ್ಳ ಪೌಚ್ಗಳ ಒಟ್ಟು ಬೆಲೆ 5816/-ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ. ಅಪರಾಧ ಸಂಖ್ಯೆ 55/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 18/07/2020 ರಂದು 19:30 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿದ್ದಾಗ ಗುಂಡೂರು ಗ್ರಾಮದಲ್ಲಿ ಮಾರುತಿ ತಂದೆ ಹಣಮಂತ ಮೇತ್ರೆ ಇವನು ತನ್ನ ಪಾನಶಾಪ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಸರಕಾರ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಸರಾಯಿ ಪೌಚಗಳು ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಗುಂಡೂರು ಗ್ರಾಮದ ಬಸನಿಲ್ದಾಣದ ಹತ್ತಿರ ಹೋಗಿ  ನೋಡಲು ಅಲ್ಲಿ ಒಬ್ಬ ವ್ಯಕ್ತಿ ಪಾನಶಾಪ ಮುಂದಿನ ಮತ್ತು ಬೀದಿ ದೀಪದ ಬೇಳಕಿನಲ್ಲಿ ನಿಂತು ಸಾರ್ವಜನಿಕರಿಗೆ ಸಾರಾಯಿ ಪೌಚಗಳನ್ನು ಮಾರಾಟ ಮಾಡುವದನ್ನು ಖಚಿತ ಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿ ವ್ಯಕ್ತಿಗೆ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಾರುತಿ ತಂದೆ ಹಣಮಂತ ಮೇತ್ರೆ ವಯ-40 ವರ್ಷ ಜಾತಿ-ಎಸ್.ಟಿ ಗೊಂಡ ಉದ್ಯೋಗ-ಪಾನಶಾಪ ಕೆಲಸ ಸಾ|| ಗುಂಡೂರು ತಾ|| ಬಸವಕಲ್ಯಾಣ ಅಂತ ತಿಳಿಸಿದನು. ನಂತರ ಆತನ ಹತ್ತಿರವಿದ್ದ ಪ್ಲಾಸ್ಟಿಕ ಚೀಲ ಪರಿಶಿಲಿಸಿ ನೋಡಲು ಅದರಲ್ಲಿ ಸಾರಾಯಿ ರಟ್ಟಿನ ಪೌಚಗಳು ಇದ್ದದ್ದನ್ನು   ಸರಾಯಿ ಪೌಚಗಳ ಬಗ್ಗೆ ವಿಚಾರಿಸಲು ಸಾರ್ವಜನಿಕರಿಗೆ ಮಾರಾಟ ಮಾಡುವ ಕುರಿತು ತಂದಿದ್ದು ಇರುತ್ತದೆ ಅಂತಾ ತಿಳಿಸಿದನು.  ಸದರಿ ವ್ಯಕ್ತಿಯ ಹತ್ತಿರವಿದ್ದ ಸರಾಯಿ ಚೀಲ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1) 90 ಎಂ.ಎಲ್ನ 96 ಓರಿಜಿನಲ್ ಚ್ವಾಯಿಸ್ ಡಿಲೇಕ್ಸ್ ವಿಸ್ಕಿ ಸರಾಯಿ ರಟ್ಟಿನ ಪೌಚಗಳು ಅ|| ಕಿ|| 3372/- ರೂಪಾಯಿ 2] 180 ಎಂ.ಎಲ್ನ 37 ಓಲ್ಡ್ ಟಾವರ್ನ ವಿಸ್ಕಿ ಸರಾಯಿ ರಟ್ಟಿನ ಪೌಚಗಳು ಅ|| ಕಿ|| 3210/- ರೂಪಾಯಿ ಒಟ್ಟು 6582/- ರೂಪಾಯಿದ್ದು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 18/07/2020 ರಂದು 1800 ಗಂಟೆಗೆ ಯರನಳ್ಳಿ ಗ್ರಾಮದ ಮಾಣಿಕೇಶ್ವರ ಮುಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನವರು ಅಂದರ ಬಾಹರ ಇಸ್ಪಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ನ ಪಿಎಸ್ಐ (ಅ.ವಿ) ರವರು ಸಿಬ್ಬಂದಿಯೊಂದಿಎ ಹೋಗಿ  ಇಸ್ಪಿಟ್ ಜೂಜಾಟದಲ್ಲಿ ತೊಡಗಿದ ಜನರಾದ 1.  ಈರಪ್ಪಾ ತಂದೆ ವೈಜಿನಾಥ ಬೀರಗೊಂಡೆ 2. ಕಾಮಶೆಟಟಿ ತಂದೆ ನರಸಪ್ಪಾ ವಾರಿಕ್ 3. ಧನರಾಜ ತಂದೆ ವಿಠಲರಾವ ಪಾಂಚಾಳ 4. ಜಗನ್ನಾಥ ತಂದೆ ಮಾರುತಿ ಸಿಕನಪೂರೆ 5. ನಾಗನಾಥ ತಂದೆ ಬಾಬುರಾವ ಕಪಲಾಪೂರೆ. 6. ಓಕಾರ ತಂದೆ ವಿಠಲ ಚಾಂಬೋಳೆ 7. ಕಲ್ಲಯ್ಯಾ ತಂದೆ ಬಾಬಯ್ಯಾ ಸ್ವಾಮಿ 8. ಗುಣವಂತ ತಂದೆ ಮೊಗಲಪ್ಪಾ ಖಂಡೆನೋರ ಎಲ್ಲರೂ ಸಾ|| ಯರನಳ್ಳಿ ಗ್ರಾಮ ರವರ ಮೇಲೆ 1915 ಗಂಟೆಗೆ ಜೂಜಾಟದ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿ ಆರೋಪಿತರ ಕಡೆಯಿಂದ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 4040/- ರೂ ಗಳು ಮತ್ತು 50 ಇಸ್ಪಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.