ಹಲ್ಲೆ ಪ್ರಕರಣಗಳು :
ಅಪಜಲಪೂರ ಠಾಣೆ : ಶ್ರೀ ಅಪ್ಪಾರಾವ ತಂದೆ ಶಿವರಾವ ಪಾಟೀಲ ಸಾ|| ತೇಲ್ಲೂಣಗಿ ಇವರು ದಿನಾಂಕ 09-08-2017 ರಂದು ರಾತ್ರಿ 9:00 ಗಂಟೆಗೆ ತೋಟದ ಮನೆಯಿಂದ
ಊರಿಗೆ ಬಂದಿದ್ದು, ನನ್ನನ್ನು ಕಂಡ ಸುಮಾರು 07 ಜನರ ತಂಡ ನಮ್ಮುರಿನ
ಅಂಬೇಡ್ಕರ ಸರ್ಕಲದಲ್ಲಿ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ, ಅಂದರೆ ಆನಂದ ತಂದೆ ಭೀಮಶಾ
ಚಿತ್ಪೂರ, ಪ್ರವೀಣಕುಮಾರ ಚಿತ್ಪೂರ, ಶಿವಾನಂದ ತಂದೆ ಅಣ್ಣಾರಾವ
ಚಿತ್ಪೂರ, ನಾಗೇಂದ್ರಪ್ಪ ಚಿತ್ಪೂರ, ಬೈರು ತಂದೆ ಭೀಮಶಾ ಚಿತ್ಪೂರ, ರಾಜು ಬಿ ಚಿತ್ಪೂರ ಪ್ರಮುಖ
ಆರೋಪಿ ಸಿದ್ದಾರಾಮ ತಂದೆ ಶ್ರೀಶೈಲ ಚಿತ್ಪೂರ ಇವರೆಲ್ಲರೂ ಕೂಡಿಕೊಂಡು ಬಂದು, ನನಗೆ ಅವಾಚ್ಯ ಶಬ್ದಗಳಿಂದ
ಬೈದಿದ್ದಲ್ಲದೆ, ನನಗೆ ಈ 07 ಜನರು ಒಮ್ಮಲೆ ನನ್ನ ಮೇಲೆ
ಎರಗಿ ಬಂದು ಹೊಡೆದಿದ್ದಾರೆ ಮತ್ತು ನನ್ನ ಕುತ್ತಿಗೆ ಒತ್ತಿ ಹಿಡಿದು ನನ್ನ ಮೇಲೆ ಮಾರಣಾಂತಿಕ
ಹಲ್ಲೆ ಮಾಡಿ, ನನ್ನ ಶರ್ಟ ಮತ್ತು ತಲೆಯ
ಮೇಲೆ ಅಂಗಾಂಗದ ಮೇಲೆ ಗಾಯಗಳಾಗಿವೆ, ನಂತರ ಊರಿನ ಜನರು ನನ್ನನ್ನು ಈ 07 ಜನರು ಹೊಡೆಯುವುದನ್ನು ಕಂಡು
ಓಡಿ ಬಂದು ಬಿಡಿಸಿದರು, ಆದ್ದರಿಂದ ಇವರಿಂದ
ಹಲವು ಸಾರಿ ನನಗೆ ಜೀವ ಬೇದರಿಕೆ ಹಾಕದ್ದಾರೆ ಮತ್ತು ನನ್ನ ಜೀವಕ್ಕೆ ಏನಾದರೂ ಆದರೆ ಈ 07 ಜನರೆ ನನ್ನ ಜಿವಕ್ಕೆ
ಅಪಾಯವಿದೆ ಆದ್ದರಿಂದ ಇವರಿಗೆ ಕಾನೂನಿನ ಪ್ರಕಾರ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸಿದ್ದರಾಮ ತಂದೆ ಶ್ರೀಶೈಲ ಚಿತ್ತಪೂರ ಸಾ||ತೆಲ್ಲೂಣಗಿ ತಾ||ಅಫಜಲಪೂರ ರವರ ಊರು ನಂದರ್ಗಾ
ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವುದರಿಂದ ಗ್ರಾಮಿಣ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನಮ್ಮ
ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದು ಸದರಿ ಕೆಲಸವನ್ನು ನಮ್ಮ ಗ್ರಾಮದ
ಅಪ್ಪಾಶ್ಯಾ ತಂದೆ ಶಿವರಾಮ ಪಾಟೀಲ ರವರು ಗುತ್ತಿಗೆ ಹಿಡಿದಿರುತ್ತಾರೆ. ಸದರಿ ಕಾಮಗಾರಿಯನ್ನು
ಸರಿಯಾಗಿ ಮಾಡದಿರುವುದರಿಂದ ನಾನು ನಮ್ಮ ಗ್ರಾಮದಲ್ಲಿ ಸದರಿ ಕೆಲಸದ ಬಗ್ಗೆ ಪ್ರಶ್ನಿಸಿದ್ದು
ಇರುತ್ತದೆ. ಸದರಿ ವಿಷಯದ ಬಗ್ಗೆ ಅಪ್ಪಾಶ್ಯಾ ರವರು ನನ್ನ ಮೇಲೆ ದ್ವೇಷ ಕಟ್ಟಿಕೊಂಡು ದಿನಾಂಕ 09/08/2017 ರಂದು ಬೆಳಿಗ್ಗೆ ನಾನು
ಹಾಗು ನಮ್ಮ ಗ್ರಾಮದ ಕಲ್ಲಪ್ಪ ತಂದೆ ಧರ್ಮಣ್ಣ ಪುಲಾರಿ,ಚಂದ್ರಕಾಂತ ತಂದೆ ಶಂಕರ
ಬನಸೋಡಿ, ರಾಜಕೂಮಾರ ಮಾಂಗ ಎಲ್ಲರು
ಕೆಲಸದ ನಿಮಿತ್ಯಾ ಅಫಜಲಪೂರ ತಹಸಿಲ
ಕಾರ್ಯಾಲಯಕ್ಕೆ ಬಂದಿದ್ದು ಇರುತ್ತದೆ ನಮ್ಮಂತೆ ಅಪ್ಪಾಶ್ಯಾ ಪಾಟೀಲ ರವರು ಬಂದಿರುತ್ತಾರೆ ನಾನು
ಹಾಗು ಕಲ್ಲಪ್ಪ,ಚಂದ್ರಕಾಂತ, ರಾಜಕೂಮಾರ ನಾಲ್ಕು ಜನರು
ಮದ್ಯಾಹ್ನ 1.30 ಪಿಎಮ್ ಸುಮಾರಿಗೆ ತಹಸಿಲ
ಕಾರ್ಯಾಲಯದ ಮುಂದಿರುವ ಹೋಟೆಲದಲ್ಲಿ ಚಾಹ ಕುಡಿದು
ಹೋಟೆಲ ಮುಂದೆ ಮಾತನಾಡುತ್ತಾ ನಿಂತಾಗ ಅಪ್ಪಾಶ್ಯಾ ಪಾಟೀಲ ರವರು ನಮ್ಮ ಹತ್ತಿರ ಬಂದು
ನನಗೆ ತಡೆದು ನಿಲ್ಲಿಸಿ ರಂಡಿಮಗನೇ ಸಿದ್ದ್ಯಾ ನಾ ಪಂಚಾಯತಿ ಕಡೆದಿಂದ ಮಾಡಿಸಿದ ಕೆಲಸದ ಬಗ್ಗೆ
ಕೆಳ್ತಿ ಬೋಸಡಿಗೆ ನೀ ಯಾರ್ಲೆ ಅಂತ ಬೈಯುತಿದ್ದಾಗ ಅಲ್ಲೆ ಇದ್ದ ಕಲ್ಲಪ್ಪ, ಚಂದ್ರಕಾಂತ ಹಾಗು ರಾಜಕುಮಾರ
ಮೂರು ಜನರು ಅಪ್ಪಾಶ್ಯಾ ರವರಿಗೆ ಯಾಕ್ರಿ ಸುಮ್ನೆ ಬೈತಿರಿ ಊರಲ್ಲಿ ಮಾತಾಡೋಣ ಅಂತ ಹೇಳುತಿದ್ದಾಗ
ಅಪ್ಪಾಶ್ಯಾ ರವರು ಕೇಳದೆ ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಹೊಟ್ಟೆಗೆ, ಎದೆಗೆ ತಮ್ಮ ಕೈ ಮುಷ್ಠಿ
ಮಾಡಿ ಹೊಡೆಯುತಿದ್ದಾಗ ಕಲ್ಲಪ್ಪ, ಚಂದ್ರಕಾಂತ, ರಾಜಕುಮಾರ ಬಿಡಿಸಿರುತ್ತಾರೆ ಅಪ್ಪಾಶ್ಯಾ ಇತನು
ಅಲ್ಲಿಂದ ಹೋಗುವಾಗ ನನಗೆ ರಂಡಿ ಮಗನೇ ಸಿದ್ದ್ಯಾ ನೀ ಊರಾಗ ಸಿಗು ನಿನ್ನ ಜೀವಾ ಹೊಡಿತಿನಿ ಅಂತ
ಅಂದು ಅಲ್ಲಿಂದ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ನಾಗನಾಥ ತಂದೆ ಜಕ್ಕಪ್ಪ ಹಡಪದ ಸಾ:
ಸೊಲ್ಲಾಪೂರ ರವರು ದಿನಾಂಕ 10-07-2017 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ನನ್ನ
ಗೆಳೆಯನಾದ ಪಾಂಡು@ಮಲ್ಲನಾಥ ತಂದೆ ಸಿದ್ದಣ್ಣ
ಕಾಳೆ ಇಬ್ಬರು ಕೂಡಿ ನಮ್ಮ ಹಿರೋ ಹೊಂಡಾ ಮೋಟಾರ್ ಸೈಕಲ್ ನಂ MH 14 GG-0076 ನೇದ್ದರ ಮೇಲೆ ಅಫಜಲಪೂರ
ತಾಲೂಕಿನ ದೇವಲ ಗಾಣಗಾಪೂರದ ದತ್ತಾತ್ರೇಯ ದರ್ಶನಕ್ಕೆ ಬಂದು ಗಾಣಗಾಪೂರದಲ್ಲಿ ದರ್ಶನ ಮಾಡಿ ಮರಳಿ
ನಮ್ಮ ಸೋಲಾಪೂರಕ್ಕೆ ಬರುವಾಗ ಸದರಿ ಮೋಟಾರ್ ಸೈಕಲ್ ನಾನೆ ಚಲಾಯಿಸುತ್ತಾ ಅಫಜಲಪೂರ ಸಮೀಪ ಇರುವ
ಆನೂರ ರೋಡಿಗೆ ಇರುವ ಹತ್ತಿ ಮೀಲ್ ಹತ್ತಿರ
ಸಾಯಂಕಾಲ 6.00 ಗಂಟೆ ಸುಮಾರಿಗೆ
ಬರುತಿದ್ದಾಗ ನಮ್ಮ ಎದುರಿನಿಂದ ಒಂದು ಟಿಪ್ಪರ ನೇದ್ದರ ಚಾಲಕ ಟಿಪ್ಪರನ್ನು ಅತಿವೇಗ ಹಾಗು
ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ನಾನು
ಹಾಗು ಪಾಂಡು@ ಮಲ್ಲಿನಾಥ ಇಬ್ಬರು ಜೋರಾಗಿ
ಕೆಳಗೆ ಬಿದ್ದು ನನ್ನ ಬಲಗಾಲು ಸದರಿ ಟಿಪ್ಪರಿನ ಚಕ್ರದದಲ್ಲಿ ಸಿಲುಕಿ ನನ್ನ ಬಲಗಾಲು ಮೊಳಕಾಲಿನಿಂದ ಕೆಳಗೆ ಪೂರ್ಣವಾಗಿ ನುಜ್ಜುಗುಜ್ಜಾಗಿರುತ್ತದೆ. ಪಾಂಡು@ ಮಲ್ಲಿನಾಥನಿಗೆ ಮೈಕೈಗೆ
ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ. ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು
ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ.ಟಿಪ್ಪರಿನ ನಂಬರ ನೋಡಲಾಗಿ TATA ಕಂಪನಿಯ ಟಿಪ್ಪರ ಇದ್ದು ಅದರ
ನಂ KA-28 B-6655 ಅಂತ ಇರುತ್ತದೆ.
ನಂತರ ಅಲ್ಲಿಂದ ಹೋಗುತಿದ್ದ ಜನರು ಹಾಗು ಅಲ್ಲೆ
ಹತ್ತಿ ಮಿಲ್ಲ್ ಬಳಿ ಇದ್ದ ಜನರು ನಮ್ಮ ಹತ್ತಿರ ಬಂದು ನಮ್ಮನ್ನು ಒಂದು ಖಾಸಗಿ ವಾಹನದಲ್ಲಿ
ಹಾಕಿಕೊಂಡು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಸೇರಿಕೆ
ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಸೊಮಶೇಖರ ತಂದೆ ಸುಭಾಶ್ಚಂದ್ರ ಆಲೂರ ಸಾ|| ಗುಂಜ ಬಬಲಾದ ತಾ|| ಆಳಂದ ಜಿ|| ಕಲಬುರಗಿ
ರವರು ತನ್ನ ಮೋಟಾರ ಸೈಕಲ್ ನಂ ಕೆ.ಎ-32 ಇ.ಸಿ 6925 Chassis No. MBLHA10AMCHL57788 Engine No HA10EJCHL09552 ಅ.ಕಿ.ರೂ 20,000/- ರೂ ನೇದ್ದನ್ನು ದಿನಾಂಕ 07-08-2017 ರಂದು 7-30 ಪಿಎಮ್
ಸುಮಾರಿಗೆ ಮಾಹಾಗಾಂವ ಕ್ರಾಸಿನ ರಾಕೇಶ ಹೋಟಲ ಮುಂದುಗಡೆ ನಿಲ್ಲಿಸಿ ಚಹಾ ಕುಡಿದು ಮರಳಿ 8-15
ಪಿಎಮ್ ಕ್ಕೆ ಬಂದು ನೋಡಲು ಮೋಟಾರ ಸೈಕಲ್ ಇರಲಿಲ್ಲ ಯಾರೋ ಅಪರಿಚಿತ ಕಳ್ಳರು ನನನ್ನ ಮೋಟಾರ ಸೈಕಲ್
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.