Police Bhavan Kalaburagi

Police Bhavan Kalaburagi

Wednesday, March 25, 2020

BIDAR DISTRICT DAILY CRIME UPDATE 25-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-03-2020

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 87/2020, ಕಲಂ. 498(ಎ), 323, 504, 506 ಐಪಿಸಿ :-
ಫಿರ್ಯಾದಿ ಸಪ್ನಾ ಗಂಡ ಅನೀಲಕುಮಾರ ವಾಘಮಾರೆ, ಸಾ: ಶಿವರಾಮ ಕಾಲೋನಿ ಶಿವಾಜಿ ಚೌಕ ಹತ್ತಿರ, ಭಾಲ್ಕಿ ರವರು ಈಗ ಸುಮಾರು 8 ವರ್ಷಗಳ ಹಿಂದೆ ಶಿವರಾಮ ಕಾಲೋನಿಯ ಅನೀಲಕುಮಾರ ತಂದೆ ಸಿಕಂದರ ವಾಘಮಾರೆ ಇವನಿಗೆ ಪ್ರೀತಿಸಿ ಅವನೊಂದಿಗೆ ಮದುವೆ ಮಾಡಿಕೊಂಡಿದ್ದು, ಫಿರ್ಯಾದಿಗೆ 1) ಸುಮೀತ, 2) ರೋಹನ ಅಂತ ಇಬ್ಬರು ಗಂಡು ಮಕ್ಕಳಿರುತ್ತಾರೆ, ಮನೆಯಲ್ಲಿ ಫಿರ್ಯಾದಿಯು ತನ್ನ ಗಂಡ, ಅತ್ತೆ ಸಂಗಮ್ಮಾ, ಮಾವ ಸಿಕಂದರ ಕೂಡಿ ಒಟ್ಟಿಗೆ ವಾಸವಾಗಿದ್ದು, ಆದರೆ ಈಗ ಎರಡು ವರ್ಷಗಳಿಂದ ಅತ್ತೆ ಮಾವ ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ಮದುವೆಯಾದ 4-5 ವರ್ಷಗಳ ನಂತರ ಗಂಡ ಬರಬರುತ್ತಾ ಫಿರ್ಯಾದಿಯ ಶೀಲದ ಮೇಲೆ ಸಂಶಯ ಮಾಡುವುದು, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ಅಂತ ಮನೆಯ ಯಾವುದಾದರು ಒಂದು ಸಣ್ಣ ಪುಟ್ಟ ವಿಷಯದಲ್ಲಿ ಜಗಳ ಮಾಡುವುದು ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ನಿಡುತಿದ್ದು, ಹೀಗಿರುವಾಗ ದಿನಾಂಕ 21-03-2020 ರಂದು ರಾತ್ರಿ ಗಂಡ ಸರಾಯಿ ಕುಡಿದು ಮನೆಗೆ ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಾಗ ವಿನಾಃ ಕಾರಣ ಯಾಕೆ ಬೈಯುತಿದ್ದಿರಿ ಅಂತ ಕೆಳಿದಕ್ಕೆ ನನಗೆ ಎದುರು ಮಾತಾಡುತ್ತಿ ಇಂದು ನಿನಗೆ ಬಿಡುವುದಿಲ್ಲಾ ಅಂತ ಜಗಳ ಮಾಡಿ ಕೈಯಿಂದ ಮೈಯಲ್ಲಾ ಹೊಡೆದಾಗ ಫಿರ್ಯಾದಿಯ ಗುಲ್ಲು ಮಾಡುವ ಶಬ್ದ ಕೆಳಿ ಮನೆಯ ಪಕ್ಕದವರಾದ ಜಗದೇವಿ ಗಂಡ ಮಲಿಕಾರ್ಜುನ ಹಾಗೂ ಅವಳ ಗಂಡ ಕೂಡಿ ಜಗಳ ಬಿಡಿಸಿಕೊಂಡಾಗ ಫಿರ್ಯಾದಿಯು ತನ್ನ ತಂದೆಯ ಹತ್ತಿರ ಹೊಗಿ ಎರಡು ದಿವಸ ಅಲ್ಲೆ ವಾಸವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 23/2020, ಕಲಂ. 153(ಎ) ಐಪಿಸಿ ಮತ್ತು 67 ಐ.ಟಿ ಕಾಯ್ದೆ :-
ದಿನಾಂಕ 21-03-2020 ರಂದು ಆರೋಪಿ ಯೇಸುಕುಮಾರ ತಂದೆ ಶಂಕರ ದೊಡ್ಡೆ ಸಾ: ರಕ್ಷಾಳ(ಕೆ) ಇತನು ತನ್ನ ಫೇಸ್ ಬುಕ್ ಅಕೌಂಟನಲ್ಲಿ ಮುಸ್ಲಿ ಧರ್ಮದ ಧಾರ್ಮಿಕ ಪೂಜ್ಯ ಸ್ಥಳವಾದ ಕಾಬಾ ಹತ್ತಿರ ಅರೆನಗ್ನ ಹೆಣ್ಣು ಮಗಳ ಭಾವಚಿತ್ರ ಹಾಕಿ, ಅಶ್ಲೀಲ ಪದಗಳನ್ನು ಬಳಸಿ ಫಿರ್ಯಾದಿ ಶೇಕ್ ಆರೀಫ್ ತಂದೆ ಶೇಕ್ ಹಮೀದಮಿಯ್ಯಾ ಸಾ: ಖುರೇಷಿ ಗಲ್ಲಿ ಔರಾದ(ಬಿ) ರವರು ಪೂಜಿಸುವ ಅಲ್ಲಾನಿಗೆ ಅವಹೇಳನ ಮಾಡಿ ಫಿರ್ಯಾದಿಯವರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ