ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-06-2021
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ವಿಮಲಾಬಾಯಿ ಗಂಡ ಮಾರುತಿ ಮಳಚಾಪೂರ ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹಳ್ಳಿಖೇಡ(ಬಿ) ರವರ ಮಾವ ರಾಮಣ್ಣಾ ರವರಿಗೆ ಈಗ ಕೆಲವು ದಿವಸಗಳಿಂದ ಆರಾಮ ಇಲ್ಲದ ಕಾರಣ ಆಸ್ಪತ್ರೆಗೆ ತೋರಿಸಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಲುವಾಗಿ ಹಣ ಇರದ ಕಾರಣ ಮಾವನಿಗೆ ಆರಾಮ ಆಗಿರುವುದಿಲ್ಲಾ, ಹಿಗಾಗಿ ಈಗ 7-8 ದಿವಸಗಳಿಂದ ಫಿರ್ಯಾದಿಯವರ ಗಂಡನಾದ ಮಾರುತಿ ತಂದೆ ರಾಮಣ್ಣಾ ಮಳಚಾಪುರ ವಯ: 48 ವರ್ಷ ರವರು ಇದೇ ಒಂದು ವಿಷಯವಾಗಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಸ್ವಲ್ಪ ಮಾನಸಿಕವಾಗಿ ಅಸ್ವಸ್ಥರಾಗಿದ್ದು ಮತ್ತು ಸರಾಯಿ ಸಹ ಕುಡಿಯುವುದು ಮಾಡುತ್ತಿದ್ದು, ಹೀಗಾಗಿ ದಿನಾಂಕ 27-06-2021 ರಂದು 0400 ಗಂಟೆ ಸುಮಾರಿಗೆ ಮನೆಯಿಂದ ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿ ಚಂದ್ರಶೇಖರ ಬುಲಗುಂಡಿ ರವರ ಹೊಲದಲ್ಲಿರುವ ನೇರಳೆ ಗೀಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ನಮಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 58/2021, ಕಲಂ. 302 ಐಪಿಸಿ :-
ಫಿರ್ಯಾದಿ ನಬಿಸಾಬ ತಂದೆ ಶಮಶೊದ್ದಿನ ನಯಾಗರ ವಯ: 72 ವರ್ಷ, ಜಾತಿ: ಮುಸ್ಲಿಂ, ಸಾ: ತಾಡಪಳ್ಳಿ ಗ್ರಾಮ, ತಾ: ಚಿಂಚೋಳ್ಳಿ, ಜಿ: ಕಲಬುರ್ಗಿ ರವರ ಮಗಳಾದ ಅನಿಷಾ ಬೇಗಂ ಇವಳಿಗೆ ಮದುವೆ ಮಾಡಿಕೊಟ್ಟಿದ್ದು, ಅವಳ ಗಂಡ ಬಿಟ್ಟುಕೊಟ್ಟಿದ್ದಕ್ಕೆ ಅವಳು ಸುಮಾರು ದಿವಸಗಳಿಂದ ಫಿರ್ಯಾದಿಯವರ ಮನೆಯಲ್ಲಿ ಬಂದು ವಾಸವಾಗಿದ್ದಳು, ನಂತರ ಈಗ ಸುಮಾರು 6 ತಿಂಗಳ ಹಿಂದೆ ಅನಿಷಾ ಬೇಗಂ ಇವಳಿಗೆ ಶಮತಾಬಾದ ಗ್ರಾಮದ ಮೈನೂ ಷಾ ತಂದೆ ಲಾಲ ಷಾ ವಯ: 50 ವರ್ಷ, ಜಾತಿ: ಮುಸ್ಲಿಂ, ಇತನಿಗೆ ಕೊಟ್ಟು ತಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಇದು ಮೈನೂ ಷಾ ಇತನ ಎರಡನೇ ಮದುವೆಯಾಗಿರುತ್ತದೆ, ಮೈನೂ ಷಾ ಇತನ ಮೊದಲನೇ ಹೆಂಡತಿ ಮೃತಪಟ್ಟಿದ್ದು, ಅವಳಿಗೆ 4 ಜನ ಮಕ್ಕಳಿದ್ದು, ಈಗ ಅವರ ಮನೆಯಲ್ಲಿ ಮಗಳು ಮತ್ತು ಮೈನೂ ಷಾ ಹಾಗೂ ಆತನ ಇಬ್ಬರೂ ಮಕ್ಕಳಾದ ಜಮೀರ ವಯ: 16 ವರ್ಷ ಮತ್ತು ಮುಂತಾಜ್ ವಯ: 14 ವರ್ಷ ಹೀಗೆ ಒಟ್ಟು ನಾಲ್ಕು ಜನ ಶಮತಾಬಾದನಲ್ಲಿ ವಾಸವಾಗಿರುತ್ತಾರೆ., ಮದುವೆಯ ನಂತರ ಮಗಳು ಮತ್ತು ಅಳಿಯ ಮೈನೂ ಷಾ ಇಬ್ಬರೂ ಚೆನ್ನಾಗಿಯೆ ಇದ್ದರೂ ಈಗ ಸುಮಾರು 2-3 ತಿಂಗಳಿಂದ ಇಬ್ಬರೂ ಸಂಸಾರಿಕ ವಿಷಯವಾಗಿ ಆಗಾಗ ತಕರಾರು ಮಾಡಿಕೊಂಡು ಜಗಳ ಮಾಡಿಕೊಳ್ಳುತ್ತಿದ್ದರು, ಹೀಗಿರುವಾಗ ದಿನಾಂಕ 27-06-2021 ರಂದು 0400 ಗಂಟೆಗೆ ಅಳಿಯ ಮೈನೂ ಷಾ ಇತನ ಮಗನಾದ ಜಮೀರ ಇತನು ಫಿರ್ಯಾದಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆನೆಂದರೆ ದಿನಾಂಕ 27-06-2021 ರಂದು ರಾತ್ರಿ ನಾವೇಲ್ಲಾರೂ ಮನೆಯಲ್ಲಿ ಮಲಗಿರುವಾಗ ತಂದೆಯಾದ ಮೈನೂ ಷಾ ರವರು ತಾಯಿ ಅನೀಷಾ ಬೇಗಂ ಇವಳಿಗೆ ಬಡಿಗೆಯಿಂದ ಹೊಡೆದು ಸಾಯಿಸಿರುತ್ತಾರೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಮಗನಾದ ಮಹೇಬೂಬ ಹಾಗೂ ಅಕ್ಕನ ಮಗನಾದ ಮಸ್ತಾನ ಪಟೇಲ್ ಎಲ್ಲರೂ ಸೇರಿ ಶಾಮತಾಬಾದನ ತನ್ನ ಮಗಳ ಮನೆಗೆ ಬಂದು ನೋಡಲಾಗಿ ವಿಷಯ ನಿಜವಿದ್ದು, ಅಲ್ಲಿ ಹಾಜರಿದ್ದ ಅಳಿಯನ ಮೊದಲನೇ ಹೆಂಡತಿಯ ಮಗನಾದ ಜಮೀರ ಇತನಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ ನಿನ್ನೆ ನಾನು ಮತ್ತು ನನ್ನ ತಂಗಿ ಹಾಗೂ ತಂದೆ-ತಾಯಿ ರವರೆಲ್ಲರೂ ಸೇರಿ ಊಟ ಮಾಡಿಕೊಂಡು 2200 ಗಂಟೆಯ ಸುಮಾರಿಗೆ ನಮ್ಮ ಮನೆಯ ಒಂದೇ ಕೊಣೆಯಲ್ಲಿ ಮಲಗಿಕೊಂಡಿದ್ದು, ತಂದೆ ಮತ್ತು ತಾಯಿ ಅನಿಷಾ ಇಬ್ಬರೂ ಜಗಳ ಮಾಡಿಕೊಂಡಿರುತ್ತಾರೆ, ನಂತರ ರಾತ್ರಿ ಅಂದರೆ ದಿನಾಂಕ 27-06-2021 ರಂದು 00:30 ಗಂಟೆಯ ಸುಮಾರಿಗೆ ತಾಯಿ ಅನಿಷಾ ಇವಳು “ಅಮ್ಮಾ ಮರೇರೆ” ಅಂತ ಚಿರಿದ ಶಬ್ದ ಕೇಳಿ ಎಚ್ಚರಗೊಂಡು ನೋಡಲು ತಂದೆಯವರಾದ ಮೈನೂ ಷಾ ರವರು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಾಯಿ ಅನಿಷಾ ಇವಳ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು, ಬಡಿಗೆಯಿಂದ ಹೊಡೆದ ಪ್ರಯುಕ್ತ ತಾಯಿ ಅನಿಷಾ ಬೇಗಂ ಇವಳು ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ, ನಂತರ ತಂದೆಯವರು ಹೊರಗಡೆ ಓಡಿ ಹೋಗಿರುತ್ತಾರೆಂದು ಅಂತ ತಿಳಿಸಿದರು, ನಂತರ ನೋಡಲಾಗಿ ಫಿರ್ಯಾದಿಯವರ ಮಗಳಾದ ಅನಿಷಾ ಇವಳ ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 73/2021, ಕಲಂ. 457, 380 ಐಪಿಸಿ :-
ದಿನಾಂಕ 27-06-2021 ರಂದು 0100 ಗಂಟೆಯಿಂದ 0130 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿ ನಾಗಲಿಂಗ ತಂದೆ ಹಾವಶೆಟ್ಟಿ ನಾಗಶೆಟ್ಟಿ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಕಬೀರಾಬಾದ ವಾಡಿ ರವರ ಮನೆಯ ಬೇಡ್ ರೂಮಿನ್ ಕೀಲಿ ಯಾರೋ ಅಪರಿಚಿತ ಕಳ್ಳರು ಮುರಿದು ಮನೆಯಲ್ಲಿದ್ದ ಕಬ್ಬಿಣದ ಅಲಮಾರಿ ತೆರೆದು ಅದರಲ್ಲಿದ್ದ 1) ಒಂದು ಗ್ರಾಂ. ಬಂಗಾರದ ಮಂಗಳ ಸೂತ್ರ, 2) 2 ಗ್ರಾಂ ಬಂಗಾರದ ಅಗಸಿ 4 ಮಣಿಗಳು, 3) 2 ಗ್ರಾಂ. ನ ಬಂಗಾರದ 2 ಕಿವಿ ಮುರುವು, 4) ಒಂದು ಗ್ರಾಂ. ಬಂಗಾರದ ಸೇಟಗೇನ್ ರೂಪ ಹೀಗೆ ಒಟ್ಟು 6 ಗ್ರಾಂ ಬಂಗಾರದ ಆಭರಣಗಳು ಅ.ಕಿ 25,000/- ಮತ್ತು 1) 2 ಬೆಳ್ಳಿ ಕಾಲ ಖಡಗಗಳು 2 ತೊಲೆ, 2) ಒಂದು ಬೆಳ್ಳಿ ಉಡಧಾರ 2 ತೊಲೆ, 3) 2 ಬೆಳ್ಳಿ ಚೌಕ 2 ತೊಲೆ ಹೀಗೆ ಒಟ್ಟು 6 ತೊಲೆ ಬೆಳ್ಳಿಯ ಆಭರಣಗಳು ಅ.ಕಿ 3,600/- ಹಾಗೂ ನಗದು ಹಣ 2,000/- ರೂ. ಹೀಗೆ ಎಲ್ಲವುಗಳ ಒಟ್ಟು ಅ.ಕಿ 30,600/- ರೂ. ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 93/2021, ಕಲಂ. 392 ಐಪಿಸಿ :-
ದಿನಾಂಕ 16-06-2021 ರಂದು 0730 ಗಂಟೆಗೆ ಫಿರ್ಯಾದಿ ಪ್ರೇಮ ತಂದೆ ಬಸ್ವರಾಜ ಮೇತ್ರೆ ವಯ: 19 ವರ್ಷ, ಜಾತಿ: ಗೊಂಡಾ, ಸಾ: ವಿದ್ಯಾನಗರ ಕಾಲೋನಿ ಬೀದರ ಟೀಫನ ತರಲು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಟೇಲಗೆ ಹೊಗಿ ಟಿಫನ್ ಪಾರ್ಸಲ ತೆಗೆದುಕೊಂಡು ತಮ್ಮ ಮನೆಗೆ ನಡೆದುಕೊಂಡು ಬರುತ್ತಿರುವಾಗ ಅಂದಾಜು 0800 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಕರೆ ಬಂದಾಗ ಅದನ್ನು ಸ್ವೀಕರಿಸಿ ಮಾತನಾಡುತ್ತಾ ವಿದ್ಯಾಶ್ರೀ ಶಾಲೆಯ ಹತ್ತಿರ ಬಂದಾಗ ಯಾರೋ ಇಬ್ಬರು ಅಪರಿಚಿತರು ಹಿಂದಿನಿಂದ ಯುನಿಕಾರ್ನ ಕಪ್ಪು ಬಣ್ಣ ಮೋಟರ ಸೈಕಲ ಮೇಲೆ ಬಂದು ಮೋಟರ ಸೈಕಲ ಹಿಂಬದಿಯಲ್ಲಿ ಕುಳಿತ ವ್ಯಕ್ತಿಯು ಫಿರ್ಯಾದಿಯ ಮೋಬೈಲ್ ಕಸಿದುಕೊಂಡು ಅದೇ ವಾಹನದ ಮೇಲೆ ವೇಗವಾಗಿ ವಾಹನ ಓಡಿಸಿಕೊಂಡು ಹೋಗಿರುತ್ತಾರೆ, ನಂತರ ಫಿರ್ಯಾದಿಯು ಚಿರುತ್ತಾ ಅವರ ಬೆನ್ನು ಹತ್ತಿದ್ದು ಆದರೆ ಅವರು ಮೋಟರ ಸೈಕಲ ಮೇಲೆ ಓಡಿ ಹೊಗಿರುತ್ತಾರೆ, ದೋಚಿಕೊಂಡು ಹೋದ ಮೋಬೈಲ ಒನ ಪ್ಲಸ ಒನ ಗ್ರೇ ಬಣ್ಣದು ಇದ್ದು, ಅದರ ಐಎಂಇಐ ನಂಬರ 1) 865295051532836, 2) 865295051532828 ನೇದು ಇದ್ದು, ಅ.ಕಿ 25,000/- ರೂ. ಇರುತ್ತzೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 95/2021, ಕಲಂ. ಹುಡುಗಿ ಕಾಣೆ :-
ಫಿರ್ಯಾದಿ ಗುರಮ್ಮಾ ಗಂಡ ಸಿದ್ದರಡ್ಡಿ ವಯ: 75 ವರ್ಷ, ಸಾ: ಎಮ್.ಐ.ಜಿ-19 ಕೆ.ಹೆಚ್.ಬಿ. ಕಾಲೋನಿ ಹೌಸಿಂಗ ಬೋರ್ಡ ಲೇಔಟ ಬೀದರ ಕಿತ್ತೂರ ರಾಣಿ ಚೆನ್ನಮ್ಮಾ ಮಹಿಳಾ ಮಂಡಳ ಸ್ವಧಾರ ಗ್ರಹದಿಂದ ಕುಮಾರಿ ಉಮನ ಪಾತಿಮಾ ತಂದೆ ಸೈಯದ ಉಮರ ಅಲಿ ಮೌಜನ ವಯ 18 ವರ್ಷ ಇವಳನ್ನು ಬಸವಕಲ್ಯಾಣ ಸಾಂತ್ವನ ಕೇಂದ್ರದಿಂದ ಸ್ವಧಾರ ಗ್ರಹಕ್ಕೆ ದಿನಾಂಕ 07-06-2021 ರಂದು ತಂದು ಬಿಟ್ಟಿರುತ್ತಾರೆ, ತದನಂತರ ದಿನಾಂಕ 22-06-2021 ರಂದು ಬಸವಕಲ್ಯಾಣ ಸಾಂತ್ವನ ಕೇಂದ್ರದ ಶಿವಕಾಂತ ಸ್ವಾಮಿ ಮತ್ತು ಅವರ ಸಿಬ್ಬಂದಿ ಮಾಣಿಕೇಶ್ವರಿ ಯವರು ನ್ಯಾಯಾಲಯಕ್ಕೆ ಹಾಜರು ಪಡಿಸುವದು ಇದೆ ಅಂತ ಹೇಳಿ ಉಮರ ಫಾತಿಮಾ ಇವಳನ್ನು ಕರೆದುಕೊಂಡು ಹೋಗಿ ಅದೆ ದಿವಸ 1730 ಗಂಟೆಗೆ ಸ್ವಧಾರ ಗ್ರಹಕ್ಕೆ ತಂದು ಬಿಟ್ಟಿರುತ್ತಾರೆ, ಹೀಗಿರುವಾಗ ದಿನಾಂಕ 23-06-2021 ರಂದು 2100 ಗಂಟೆಗೆ ಊಟ ಮಾಡಿ ಎಲ್ಲರೂ ಮಲಗಿಕೊಂಡಾಗ 2330 ಗಂಟೆಯ ಸುಮಾರಿಗೆ ನೋಡಲು ಕುಮಾರಿ ಉಮನ ಫಾತಿಮಾ ತಂದೆ ಸೈಯದ ಉಮರ ಅಲಿ ಮೌಜನ ಸಾ: ಕಿಟ್ಟಾ, ತಾ: ಬಸವಕಲ್ಯಾಣ ಇವಳು ಕಾಣೆಯಾಗಿರುತ್ತಾಳೆ ಅಂತ ಸ್ವಧಾನ ಕೇಂದ್ರದ ಪ್ರಥಮ ಸಹಾಯಕಿ ಗೀತಾ ರವರು ಫಿರ್ಯಾದಿಯವರಿಗೆ ಕರೆ ಮಾಡಿ ತಿಳಿಸಿರುತ್ತಾರೆ, ಹೋಗುವಾಗ ನಾನು ನನ್ನ ಸ್ವ-ಇಚ್ಚೆಯಿಂದ ಹೋಗುತ್ತಿದ್ದೆನೆಂದು ಪತ್ರ ಬರೆದಿಟ್ಟು ಹೋಗಿರುತ್ತಾಳೆ, ಅವಳ ಚಹರೆ ಪಟ್ಟಿ 1) ಹೆಸರು ಮತ್ತು ವಿಳಾಸ: ಕುಮಾರಿ ಉಮನ್ ಫಾತಿಮಾ ತಂದೆ ಸೈಯದ ಉಮರ ಅಲಿ ಮೌಜನ, ವಯ: 18 ವರ್ಷ, ಸಾ: ಕಿಟ್ಟಾ ಗ್ರಾಮ, ತಾ: ಬಸವಕಲ್ಯಾಣ, 2) ಮೈಬಣ್ಣ: ಗೋದಿ ಮೈಬಣ್ಣ, 3) ಮೈಕಟ್ಟು: ಸಾಧಾರಣ ಮೈಕಟ್ಟು, 4) ಬಟ್ಟೆ : ಕೆಂಪು ಬಣ್ಣದ ಚೂಡಿದಾರ, ಬೂದಿ ಬಣ್ಣದ ಸ್ವೇಟgÀ, ನೀಲಿ ಬಣ್ಣದ ಸ್ಕಾರ್ಪ ಧರಿಸಿರುತ್ತಾಳೆ, 5) ಭಾಷೆ : ಹಿಂದಿ ಮಾತನಾಡುತ್ತಾಳೆ, 6) ಎತ್ತರ: 4-6 ಎತ್ತರ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 24/2021, ಕಲಂ. 498(ಎ), 323, 324, 504 ಐಪಿಸಿ :-
ಸುಮಾರು 1 ವರ್ಷಗಳ ಹಿಂದೆ ಫಿರ್ಯಾದಿ ರಬೇಕಾ ಗಂಡ ರಾಹುಲ ದಲಾಲ ವಯ: 20 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ವಾಲದೊಡ್ಡಿ, ಬೀದರ ರವರ ಹಿರಿಯರು ವಾಲದೊಡ್ಡಿ ಗ್ರಾಮದ ರಾಹುಲ ಇತನೊಂದಿಗೆ ಸಾಂಪ್ರದಾಯಿಕªÁಗಿ ಮದುವೆ ಮಾಡಿಕೊಟ್ಟಿರುತ್ತಾರೆ, ಈಗ 20 ದಿವಸದ ಒಂದು ಗಂಡು ಮಗುವಿರುತ್ತದೆ, ಸುಮಾರು 7-8 ದಿವಸಗಳ ಹಿಂದೆ ಗಂಡ ಫಿರ್ಯಾದಿಯ ತವರು ಮನೆಗೆ ಬಂದು ಫಿರ್ಯಾದಿಗೆ ಹಾಗೂ ಮಗುವಿಗೆ ವಾಲದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಬಂದಿರುತ್ತಾನೆ, ಗಂಡನಿಗೆ ಸರಾಯಿ ಕುಡಿಯುವ ಚಟವಿದ್ದು ಪ್ರತಿದಿನ ಸರಾಯಿ ಕುಡಿದು ಮನೆಗೆ ಬರುತ್ತಾರೆ, ಮದುವೆಯಾದ 1-2 ತಿಂಗಳು ಮಾತ್ರ ಗಂಡ ಚೆನ್ನಾಗಿ ನೊಡಿಕೊಂಡು, ನಂತರ ನೀನು ಆವಾರಾ ಇದ್ದಿ, ನಿನ್ನ ಗುಣ ನಡತೆ ಸರಿಯಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಮನಸ್ಸಿಗೆ ಹತ್ತುವ ಹಾಗೆ ಬೈಯುವುದು, ಹೊಡೆ, ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಗಂಡ ಹೊಡೆ ಬಡೆ ಮಾಡಿ ಕಿರುಕುಳ ಕೊಡುವ ಬಗ್ಗೆ ತನ್ನ ತಂದೆ-ತಾಯಿ ಯವರಿಗೆ ತಿಳಿಸಿದಾಗ ಅವರು 1-2 ಸಲ ಫಿರ್ಯಾದಿಯ ಮನೆಗೆ ಬಂದು ಗಂಡನಿಗೆ ತಿಳುವಳಿಕೆ ಹೇಳಿದ್ದು ಇರುತ್ತದೆ, ಅಲ್ಲದೇ ಅತ್ತೆಯಾದ ಶಾರಮ್ಮಾ, ಮಾವನಾದ ರಾಜು@ ರಾಜಕುಮಾರ, ಮೈದುನನಾದ ಅಭೀಶೆಕ ರವರು ಫಿರ್ಯಾದಿಯ ಜೊತೆಯಲ್ಲಿ ಚೆನ್ನಾಗಿದ್ದು, ಗಂಡ ಬೈದು ಹೊಡೆ ಬಡೆ ಮಾqÀÄವಾಗ ಅವರೆ ಬಿಡಿಸಿಕೊಳ್ಳುತಿದ್ದರು ಮತ್ತು ಅವರು ಸಹ ಗಂಡನಿಗೆ ತಿಳುªÀಳಿಕೆ ಹೇಳಿರುತ್ತಾರೆ, ಆದರೆ ಗಂಡ ಯಾರದೇ ಮಾತು ಕೇಳಿರುವದಿಲ್ಲ, ಹೀಗಿರುವಾಗ ದಿನಾಂಕ 25-06-2021 ರಂದು ಚುಡುಗುಪ್ಪಾ ಗ್ರಾಮದಲ್ಲಿರುವ ನಾದನಿಯ ಮನೆಯಲ್ಲಿ ಪ್ರಾರ್ಥನೆ ಕೂಟ ಇದ್ದಪ್ರಯುಕ್ತ ಅತ್ತೆ, ಮಾವ, ಮೈದುನ ಚುಡಗುಪ್ಪಾ ಗ್ರಾಮಕ್ಕೆ ಹೋಗಿರುತ್ತಾರೆ, ರಾತ್ರಿ ಸಮಯದಲ್ಲಿ ಗಂಡ ಸರಾಯಿ ಕುಡಿದು ಮನೆಗೆ ಬಂದು ನೀನು ಹಾಗೂ ನಿಮ್ಮ 3 ಅಕ್ಕಂದಿರು ಅವಾರಾ ಇದ್ದಿರಿ, ನಿನ್ನ ಗುಣ ನಡತೆ ಸರಿಯಾಗಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈ ಮುಷ್ಠಿ ಮಾಡಿ ಎರಡು ಕಣ್ಣಿನ ಮೇಲೆ ಹೊಡೆದಿರುವದರಿಮದ ರಕ್ತ ಕಂದುಗಟ್ಟಿದ ಗಾಯವಾಗಿರುತ್ತದೆ, ಫಿರ್ಯಾದಿಯು ಚಿರುತ್ತಾ ಮನೆಯಿಂದ ಹೊರಗೆ ಹೋಗುವಾಗ ಕೂದಲು ಹಿಡಿದು ಎಳೆದು ಮನೆಯಲ್ಲಿದ್ದ ಓಲೆ ಊದುವ ಕಬ್ಬಿಣದ ಫುಕುಣಿಯಿಂದ ಎಡ ತೊಡೆಗೆ ಹೊಡೆದು ಗುಪ್ತಗಾಂiÀÄ ಪಡಿಸಿರುತ್ತಾನೆ, ಫಿಯಾದಿಯು ಚಿರಾಡುವ ಶಬ್ದ ಕೇಳಿ ಊರಿನ ಸಂಜು ತಂದೆ ದಿಲೀಪ ಮತ್ತು ಸುರೇಶ ತಂದೆ ಶಂಕರ ರವರು ಬಂದು ಜಗಳವನ್ನು ಕಣ್ಣಾರೆ ನೋಡಿ ಬಿಡಿಸಿರುತ್ತಾರೆ, ಗಂಡ ಫಿರ್ಯಾದಿಗೆ ಹೊಡೆ-ಬಡೆ ಮಾಡಿದ ವಿಷಯ ತನ್ನ ತಾಯಿಗೆ ತಿಳಿಸಿದಾಗ ತಾಯಿ ಹಾಗೂ ತಮ್ಮನಾದ ರೋಹನ್ ಇವರು ದಿನಾಂಕ 26-06-2021 ರಂದು ಫಿರ್ಯಾದಿಯವರ ಮನೆಗೆ ಬಂದು ಫಿರ್ಯಾದಿಗೆ ಗುಪ್ತಗಾಯಗಳು ಆಗಿರುವುದನ್ನು ನೋಡಿ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.