Police Bhavan Kalaburagi

Police Bhavan Kalaburagi

Monday, March 29, 2021

BIDAR DISTRICT DAILY CRIME UPDATE 29-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-03-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 03/2021, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 27-3-2021 ರಂದು 1000 ಗಂಟೆಯಿಂದ 28-3-2021 ರಂದು 0845 ಗಂಟೆಯ ಅವಧಿಯಲ್ಲಿ ರೇಲ್ವೇ ಟ್ರ್ಯಾಕ ಹತ್ತಿರ ಒಬ್ಬ ಅಂದಾಜು 50-55 ವರ್ಷದ ಗಂಡು ವ್ಯಕ್ತಿಯ ಮ್ರತ ದೇಹದ ಮೇಲೆ ಒಂದು ಬಿಳಿ ಚೆಕ್ಸ್ವುಳ್ಳ ಫುಲ ಶರ್ಟ ಒಂದು ಚಾಕಲೇಟ ಬಣ್ಣದ ಪ್ಯಾಂಟ್ ಧರಿಸಿದ್ದು ಇವನು ಮಲಗಿಸ್ಥಳದಲ್ಲಿಯೇ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರಬಹುದು, ಆದರೂ ಸಹ ಸದರಿಯವನ ಮರಣದ ಬಗ್ಗೆ ಸಂಶಯ ಇರುತ್ತದೆ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 34/2021, ಕಲಂ. Karnataka Prevention of Sluaghter & Preservation of Cattle ordinance (2020) Sec. (5),(12) & Sec. (8) Sec(11) Of The Karnataka Prevention of Cow Sluaghter’s & Cattle Preservation act 1964 The prevention of  cruelty to animals act 1960 sec 11(d), 20, 26 :-

ದಿನಾಂಕ 28-03-2021 ರಂದು ಫಿರ್ಯಾದಿ ಚನ್ನಬಸವಂತರೆಡ್ಡಿ ತಂದೆ ಶಿವಲಿಂಗರೆಡ್ಡಿ ಪಾಟೀಲ, ವಯ: 55 ವರ್ಷ, ಸಾ: ನ್ಯೂ ಆದರ್ಶ ಕಾಲೋನಿ ಬೀದರ ರವರು ಪವನ, ಶರಣು ಪಾಟೀಲ 3 ಜನರು ಸೇರಿಕೊಂಡು ನೌಬಾದನಿಂದ ಬೀದರ ಕಡೆಗೆ ಹೋಗುವಾಗ ನೌಬಾದ ಪೆಟ್ರೊಲ ಬಂಕ ಹತ್ತಿರ ಇವರ ಮುಂದೆ ಒಂದು ಟೆಂಪು ನಂ. ಎಪಿ-23/ಡಬ್ಲು-7907 ನೇದರಲ್ಲಿ ಹೋರಿ ಹಾಗೂ ಗೋಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಸದರಿಯವರು ಗೋಹತ್ಯ ಮಾಡಲು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಅನುಮಾನ ಬಂದು ಟೆಂಪು ನಿಲ್ಲಿಸಿ ಅದರ ಚಾಲಕನಿಗೆ ಗೋ ಹಾಗೂ ಹೋರಿಗಳು ಎಲ್ಲಿ ಖರೀದಿ ಮಾಡಿದ್ದಿರಿ ಎಂದು ವಿಚಾರಿಸಿದಾಗ ಅವನು ಸಮಂಜಸ ಉತ್ತರ ನೀಡಲಿಲ್ಲಾ, ಆಗ ಸಾಗಾಣಿಕೆ ಬಗ್ಗೆ ಸಂಶಯ ಬಂದು ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಜಾಫರ್ ತಂದೆ ಅಹ್ಮದ ಬೇಪಾರಿ ಅಂತ ತಿಳಿಸಿರುತ್ತಾನೆ, ನಂತರ ಚಾಲಕನೊಂದಿಗೆ ಟೆಂಪುವಿನಲ್ಲಿ ನೋಡಲಾಗಿ ಒಳಗಡೆ 1-ಎಮ್ಮೆ, 9-ಗೋವುಗಳು ಮತ್ತು 7-ಹೋರಿಗಳು ಹೀಗೆ ಒಟ್ಟು 17 ಪ್ರಾಣಿಗಳಿದ್ದವು, ಟೆಂಪು ಚಾಲಕನು ಗೋಹತ್ಯ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಬಲವಾದ ಸಂಶಯ ಬಂದ ಕಾರಣ ಟೆಂಪು ಚಾಲಕ ಹಾಗೂ ಗೋವುಗಳ ಸಮೇತ ಠಾಣೆಗೆ ತಂದು ಒಪ್ಪಿಸಿದ್ದು ಇರುತ್ತದೆ, ನಂತರ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 32/2021, ಕಲಂ. 279, 338, 304() ಐಪಿಸಿ :-

ದಿನಾಂಕ 27-03-2021 ರಂದು ಫಿರ್ಯಾದಿ ಶ್ರೀ ಈಶ್ವರ ತಂದೆ ಹಸನಪ್ಪಾ ಕುಂದನ ವಯ 47 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ನಂದಗಾಂವ ಗ್ರಾಮ, ತಾ: ಹುಮನಾಬಾದ ರವರ ಚಿಕ್ಕಪ್ಪನ ಮಗನಾದ ರುದ್ರಪ್ಪಾ ತಂದೆ ಭೀಮಶಾ ಕುಂದನ ಸಾ: ನಂದಗಾಂವ ಇತನು ತನ್ನ ಖಾಸಗಿ ಕೆಲಸದ ಪ್ರಯಕ್ತ ನ್ನ ಟಿ.ವಿ.ಎಸ್ ಎಕ್ಸ್.ಎಲ್ ಸೂಪರ್ ಮೋಟಾರ್ ಸೈಕಲ್ ಸಂ. ಕೆಎ-39/ಕ್ಯೂ-0091 ನೇದನ್ನು ಚಲಾಯಿಸಿಕೊಂಡು ನಂದಗಾಂವದಿಂದ ಹುಮನಾಬಾದಕ್ಕೆ ಬಂದು ನನ್ನ ಖಾಸಗಿ ಕೆಲಸವನ್ನು ಮುಗಿಸಿಕೊಂಡು ಮರಳಿ ಹುಮನಾಬಾದನಿಂದ ನಂದಗಾಂವಕ್ಕೆ ಹೋಗುತ್ತಿರುವಾಗ ತನ್ನ ಮೋಟಾರ್ ಸೈಕಲನ್ನು ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಹುಗಿ ನಿಸರ್ಗ ಕಲ್ಯಾಣ ಮಂಟಪ ಹತ್ತಿರ ಬಂದಾಗ ಅದೇ ಸಮಯಕ್ಕೆ ರಾ.ಹೆದ್ದಾರಿ ನಂ. 65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. ಕೆಎ-39/ಎಲ್-2592 ನೇದರ ಚಾಲಕನಾದ ಆರೋಪಿ ಸಿದ್ದರಾಮೇಶ ತಂದೆ ವೈಜಿನಾಥ ದಡಿಮಾಳ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ತಾಳಮಡಗಿ, ಇತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ರುದ್ರ್ಪಪಾ ಇತನ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ಸದರಿ ಡಿಕ್ಕಿಯಿಂದ ರುದ್ರಪ್ಪಾ ಇತನಿಗೆ ಎಡಗೈ ಮುಂಗೈಗೆ ತೀವ್ರ ರಕ್ತಗಾಯ, ಬಲಗಾಲ ಬೆರಳುಗಳಿಗೆ ಸಾದಾ ರಕ್ತಗಾಯಗಳು ಆಗಿರುತ್ತವೆ ಹಾಗೂ ಆರೋಪಿ ಸಿದ್ದರಾಮೇಶ ಇವತನು ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿದ್ದು ಆತನಿಗೆ ಚಿಕಿತ್ಸೆ ಕುರಿತು 108 ಆಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಗಾಯಾಳು ರುದ್ರಪ್ಪಾ ಇವನಿಗೆ ಚಿಕಿತ್ಸೆ ಕುರಿತು ಹುಮನಾಬಾದ ಸಾಯಿನಿಧಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ, ನಂತರ ಸಿದ್ದರಾಮೇಶ ಇತನಿಗೆ ಹುಮನಾಬಾದ ಸರ್ಕಾರಿ ಆಸ್ಪತ್ರೆಯಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಮನ್ನೂರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೈದ್ರಾಬಾದಿನ ವೈದ್ಯರು ಗಾಯಾಳು ಸರಿ ಹೊಂದುವುದಿಲ್ಲಾ ಅಂತ ಸಲಹೆ ನೀಡಿದ ಮೇರೆಗೆ ಮರಳಿ ಕರೆದುಕೊಂಡು ಬರುವಾಗ ದಾರಿಯ ಮದ್ಯ ದಿನಾಂಕ 28-03-2021 ರಂದು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. ಹುಡುಗಿ ಕಾಣೆ :-

ದಿನಾಂಕ 25-03-2021 ರಂದು 1130 ಗಂಟೆ ಸುಮಾರಿಗೆ ಫಿರ್ಯಾದಿ ಅರುಣಕುಮಾರ ತಂದೆ ನಾಗಪ್ಪಾ ಜೋತಗೊಂಡ ಸಾ: ಬೇನ ಚಿಂಚೋಳಿ ರವರ ಮಗಳಾದ ಕಾವೇರಿ ವಯ: 20 ವರ್ಷ ಇಕೆಯು ತಮ್ಮ ಮನೆಯಿಂದ ಮಲ್ಕಾಪೂ ವಾಡಿ ಗ್ರಾಮಕ್ಕೆ ಮ್ಮ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ನೆಗೆ ಬರದೆ ಕಾಣೆಯಾಗಿರುತ್ತಾಳೆ, ಬಗ್ಗೆ ಎಲ್ಲಾ ಕಡೆ ಹುಡುಕಾಡಿ ತಿಳಿದುಕೊಳ್ಳಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 38/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 28-03-2021 ರಂದು ಶೇಮಶಾಪೂರವಾಡಿ ಗ್ರಾಮದ ಶಿವಾರದಲ್ಲಿ ದೇಶಮುಕಪ್ಪಾ ಕಟ್ಟಾಳೆ ರವರ ಹೊಲದ ಹತ್ತಿರ ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು ಮಹೇಂದ್ರಕುಮಾರ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶೇಮಶಾಪೂರವಾಡಿ ಗ್ರಾಮದ ದೇಶಮುಕಪ್ಪಾ ಕಟ್ಟಾಳೆ ರವರ ಹೊಲದ ಹತ್ತಿರ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ರವಿ ತಂದೆ ರಾಜಕುಮಾರ ತೆಲಂಗ ವಯ: 27 ವರ್ಷ, ಜಾತಿ: ತೆಲಂಗ, ಸಾ: ದೇವಿ ನಗರ ಭಾಲ್ಕಿ ಹಾಗೂ ಇನ್ನು 8 ಜನ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟಾ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿತರಿಗೆ ಹಿಡಿದುಕೊಂಡು ಅವರಿಂದ ಒಟ್ಟು 52 ಇಸ್ಪೀಟ ಎಲೆಗಳು ಹಾಗೂ 23,600/- ರೂ ನಗದು ಹಣ ತಾಬೇಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಂತಪೂ ಪೋಲಿಸ ಠಾಣೆ ಅಪರಾಧ ಸಂ. 24/2021, ಕಲಂ. 20(ಬಿ) (2) (ಸಿ) ಎನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ 28-03-2021 ರಂದು ಗಾಂಜಾವನ್ನು ಅನಧಿಕೃತವಾಗಿ ಸಂಗ್ರಹಿಸಿಕೊಂಡು ಕಾರನಲ್ಲಿ ಜಮಗಿ ಕಡೆಯಿಂದ ಸೊರಳ್ಳಿ ಕ್ರಾಸ-ಕಂದಗೂಳ ಮಾರ್ಗವಾಗಿ ಬೀದರ ಕಡೆಗೆ ಕಾನೂನು ಬಾಹಿರವಾಗಿ ಮಾರಾಟ ಮಾಡವುದಕ್ಕಾಗಿ ನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾರೆಂದು ಸಿದ್ದಲಿಂಗ ಪಿಎಸ್ಐ ಸಂತಪುರ ಪೊಲೀಸ ಠಾಣೆ ರವರಿಗೆ ಖಚೀತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಪತ್ರಾಂಕಿತ ಅಧಿಕಾರಿ, ಫೋಟೊ ಗ್ರಾಫರ, ತೂಕ ಮಾಡುವ ವ್ಯಕ್ತಿ, ಇಬ್ಬರು ಪಂಚರನ್ನು ಬರಮಾಡಿಕೊಂಡ, ಠಾಣೆಯ ಸಿಬ್ಬಂದಿಯವರೊಡನೆ ಸೊರಳ್ಳಿ ಕ್ರಾಸ ಹತ್ತಿರ ಹೋಗಿ ಬಸ್ಸ ನಿಲ್ದಾಣದ ಮರೆಯಾಗಿ ನಿಂತು ಜಮಗಿ ಕಡೆಯಿಂದ ಬರುವ ಕಾರಿನ ದಾರಿ ಕಾಯುತ್ತಿರುವಾಗ ಸೊರಳ್ಳಿ ಕಡೆಯಿಂದ ಬಂದ ಕಾರನ್ನು ಸಿಬ್ಬಂದಿಯವರೊಂದಿಗೆ ಕೂಡಿ ಪಂಚರ ಸಮಕ್ಷಮ ತಡೆದು ನಿಲ್ಲಿಸಿ ದಾಳಿ ಮಾಡಿ ಕಾರನಿಂದ ಇಳಿದು ಓಡಿ ಹೊಗಲು ಯತ್ನಿಸಿದ್ದ ಇಬ್ಬರನ್ನು ಹಿಡಿದುಕೊಂಡು ಅವರಿಗೆ ವಿಚಾರಿಸಲಾಗಿ ತಮ್ಮ ಹೆಸರುಗಳು 1) ಅನೀಲ ತಂದೆ ಲಾಲಸಿಂಗ ಚೌಹಾಣ ವಯ: 26 ವರ್ಷ, ಜಾತಿ: ಲಮಾಣಿ, ಸಾ: ತುಕರಾಮ ತಾಂಡಾ ಸಿದ್ದಹಂಗರಗಾ, ತಾ: ನಾರಾಯಣಖೇಡ, ಜಿಲ್ಲಾ: ಸಂಗಾರೆಡ್ಡಿ, ತೆಲಂಗಣಾ ರಾಜ್ಯ, 2) ರಾಜÄ ತಂದೆ ಲಕ್ಷ್ಮಣ ರಾಠೋಡ ವಯ: 26 ವರ್ಷ, ಜಾತಿ: ಲಮಾಣಿ, ಸಾ: ಘಾಮಾ ತಾಂಡಾ ಜಮಗಿ ಎಂದು ತಿಳಿಸಿರುತ್ತಾರೆ, ಸದರಿಯವರಿಗೆ ನೀವು ಯಾಕೆ ಓಡಿ ಹೋಗುತ್ತಿದ್ದಿರಿ ನಿಮ್ಮ ಕಾರಿನಲ್ಲಿ ಏನಿದೆ ಎಂದು ವಿಚಾರಿಸಲು ಸದರಿಯವರು ತಮ್ಮ ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದು ಪೊಲೀಸರಾದ ನಿಮಗೆ ನಾವು ನೋಡಿ ಓಡಿ ಹೋಗುತ್ತಿದ್ದೇವೆ ಎಂದು ತಿಳಿಸಿರುತ್ತಾರೆ, ನಿಮ್ಮ ಹತ್ತಿರ ಇರುವ ಮಾದಕ ವಸ್ತುವಾದ ಗಾಂಜಾ ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಸಾಗಿಸಲು ಸರಕಾರದ ಅನುಮತಿ ಇದೆಯೇ ಎಂದು ವಿಚಾರಿಸಲಾಗಿ ಯಾವುದೇ ಅನುಮತಿ ಇಲ್ಲಾ ಎಂದು ತಿಳಿಸಿರುತ್ತಾರೆ, ನಂತರ ಸದರಿ ಕಾರನ್ನು ಸಿಬ್ಬಂದಿಯವರ ಸಹಾಯದಿಂದ ಶೋಧನೆ ಮಾಡಿ ನೋಡಲು ಖಾಕಿ ಬಣ್ಣದ ಬ್ಯಾಂಡೇಜ ಸುತ್ತಿದ್ದ 85 ಪಾಕೇಟಗಳು ಇದ್ದು ಸದರಿ ಪಾಕೇಟಗಳಲ್ಲಿ ಬ್ಯಾಂಡೇಜ ತೆರೆದು ಪರಿಶೀಲಿಸಿ ನೋಡಲು ಹೂವು, ಬೀಜ, ಎಲೆಗಳಿದ್ದ ಗಾಂಜಾ ತುಂಬಿದು ಇರುತ್ತವೆ, ನಂತರ ಗಾಂಜಾವನ್ನು ತೂಕ ಮಾಡಿ ನೋಡಲು ಒಟ್ಟು 170 ಕೆಜಿ ಗಾಂಜಾ ಅ.ಕಿ 17,00,000/- ರೂ. ಗಾಂಜಾ ಇರುತ್ತದೆ., ನಂತರ ಅವರಿಂದ ಕೃತ್ಯಕ್ಕೆ ಬಳಸಿದ ಹೊಂಡಾಯ ಕಂಪನಿಯ ಕಾರ ನಂ. ಕೆಎ-03/ಎಂಜಿ-1398 ಅ.ಕಿ 1,50,000/-ರೂ. ನೇದು ಜಪ್ತಿ ಪಡಿಸಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 25/2021, ಕಲಂ. 20(ಬಿ) (2) (ಸಿ) ಎನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ 28-03-2021 ರಂದು ಗಾಂಜಾವನ್ನು ಅನಧಿಕೃತವಾಗಿ ಸಂಗ್ರಹಿಸಿಕೊಂಡು ತಂದು ಆಟೋ ಹಾಗೂ ಟಿ.ವಿ.ಎಸ್ ಮೋಟಾರ ಸೈಕಲ ಮೇಲೆ ಜಮಗಿ ಕಡೆಯಿಂದ ಚಿಕಲಿ(ಜೆ) ಕ್ರಾಸ - ವಡಗಾಂವ ಮಾರ್ಗವಾಗಿ ಬೀದರ ಕಡೆಗೆ ಕಾನೂನು ಬಾಹಿರವಾಗಿ ಮಾರಾಟ ಮಾಡವುದಕ್ಕಾಗಿ ಅಧೀಕೃತವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತ ರವಿಂದ್ರ ಸಿ.ಪಿ.ಐ ಔರಾದ (ಬಿ) ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಪತ್ರಾಂಕಿತ ಅಧಿಕಾರಿ, ತೂಕ ಮಾಡುವ ವ್ಯಕ್ತಿ ತೂಕದ ಎಲೇಕ್ಟ್ರಾನಿಕ ಮಷೀನದೊಂದಿಗೆ, ಫೋಟೊ ಗ್ರಾಫರ ಹಾಗೂ ತಮ್ಮ ಸಿಬ್ಬಂದಿಯವರೊಡನೆ ಚಿಕಲಿ(ಜೆ) ಕ್ರಾಸ ಹತ್ತಿರ ಹೋಗಿ ಬಸ್ ನಿಲ್ದಾಣದ ಹಿಂದುಗಡೆ ಮರೆಯಾಗಿ ಮರೆಯಾಗಿ ನಿಂತು ನೋಡಲು ಜಮಗಿ ಕಡೆಯಿಂದ ಬರುತ್ತಿದ್ದ ಆಟೋ ದಾರಿ ಕಾಯುತ್ತಿರುವಾಗ ಜಮಗಿ ಕಡೆಯಿಂದ ಬರುತ್ತಿದ್ದ ಆಟೋ ಹಾಗೂ ಟಿ.ವಿ.ಎಸ್. ಮೋಟಾರ ಸೈಕಲಿಗೆ ತಡೆದು ದಾಳಿ ಮಾಡಿ ಆರೋಪಿತರಾದ 1) ದೇವಿದಾಸ ತಂದೆ ರಾಮಲು ರಾಠೊಡ ವಯ: 19 ವರ್ಷ, ಜಾತಿ: ಲಮಾಣಿ, 2) ದೇವಿದಾಸ ತಂದೆ ಬಾಬು ರಾಠೋಡ ವಯ: 34 ವರ್ಷ, ಜಾತಿ: ಲಮಾಣಿ ಹಾಗೂ 3) ಸಂತೋಷ ತಂದೆ ರಾಮಲು ರಾಠೋಡ ವಯ: 25 ವರ್ಷ, ಜಾತಿ: ಲಮಾಣಿ, ಮೂವರು ಸಾ: ವಾಚುರಾಮ ತಾಂಡಾ ಕಂಗಟ್ಟಿ (ಟಿ.ಎಸ್), ತಾ: ನಾರಾಯಣಖೇಡ, ಜಿಲ್ಲಾ: ಸಂಗಾರೆಡ್ಡಿ, ತೆಲಂಗಣಾ ರಾಜ್ಯ, ಇವರಿಗೆ ಹಿದಿದು ನಿಮ್ಮ ಆಟೋ ಹಾಗೂ ಟಿ.ವಿ.ಎಸ್ ಮೇಲಿನ ಚೀಲದಲ್ಲಿ ಏನಿದೆ ಎಂದು ಅಂತ ವಿಚಾರಿಸಲು ಸದರಿಯವರು ತಮ್ಮ ಆಟೋದಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದು ಹಾಗೂ ಟಿ.ವಿ.ಎಸ್ ಮೋಟಾರ ಸೈಕಲ್ ಮುಂದೆ ಇರುವ ಚೀಲದಲ್ಲಿ ಗಾಂಜಾದ ಪಾಕೆಟಗಳು ಇವೆ ಅಂತ ತಿಳಿಸಿರುತ್ತಾರೆ, ನಂತರ ನಿಮ್ಮ ಹತ್ತಿರ ಇರುವ ಮಾದಕ ವಸ್ತುವಾದ ಗಾಂಜಾ ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಸಾಗಿಸಲು ಸರಕಾರದ ಅನುಮತಿ ಇದೆಯೇ ಎಂದು ವಿಚಾರಿಸಲಾಗಿ ಯಾವುದೇ ಅನುಮತಿ ಇಲ್ಲಾ ಎಂದು ತಿಳಿಸಿರುತ್ತಾರೆ, ನಂತರ ಆಟೋ ಮತ್ತು ಮೋಟಾರ ಸೈಕಲ್ ಮೇಲಿನ ಚೀಲಗಳು ಸಿಬ್ಬಂದಿಯವರ ಸಹಾಯದಿಂದ ಶೋಧನೆ ಮಾಡಿ ನೋಡಲು ಖಾಕಿ ಬಣ್ಣದ ಬ್ಯಾಂಡೇಜ ಸುತ್ತಿದ್ದ 18 ಪಾಕೇಟಗಳಿದ್ದು ಇದ್ದು ಸದರಿ ಪಾಕೇಟಗಳಲ್ಲಿ ಬ್ಯಾಂಡೇಜ ತೆರೆದು ಪರಿಶೀಲಿಸಿ ನೋಡಲು ಹೂವು, ಬೀಜ, ಎಲೆಗಳಿದ್ದ ಗಾಂಜಾ ತುಂಬಿದು ಇರುತ್ತದೆ, ಸದರಿ ಆಟೋ  ಬಜಾಜ ಕಂಪನಿಯ ನಂ. ಟಿ.ಎಸ್-15/ಯುಸಿ-7313 ಇರುತ್ತದೆ, ನಂತರ ಅದರಲ್ಲಿದ್ದ ಗಾಂಜಾವನ್ನು ತೆಗೆದು ತೂಕ ಮಾಡಿ ನೊಡಲಾಗಿ ಒಟ್ಟು 36 ಕೆ.ಜಿ ಗಾಂಜಾ .ಕಿ 3,80,000/- ರೂ. ಇದ್ದು ಹಾಗೂ ಗಾಂಜಾ ಸಾಗಿಸಲು ಬಳಸಿದ ಬಜಾಜ ಕಂಪನಿಯ ಆಟೊ ನಂ. ಟಿ.ಎಸ್-15 ಯುಸಿ 7313 .ಕಿ 50,000/- ರೂ. ನೇದು ಮತ್ತು ಟಿ.ವಿ.ಎಸ್ ಎಕ್ಸ್‌ಲ್ ಮೊಟಾರ ಸೈಕಲ ನಂ. ಟಿ.ಎಸ್-15/ಇಟಿ-3953 .ಕಿ 10,000/- ರೂ. ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.