Police Bhavan Kalaburagi

Police Bhavan Kalaburagi

Saturday, September 14, 2019

KALABURAGI DISTRICT REPORTED CRIMES

ಮಟಕಾ ಜೂಝಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 13/09/2019 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ  ಲಾಡಚಿಂಚೋಳಿ ಕ್ರಾಸನಲ್ಲಿರುವ ಬಸ್‌ ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ. ನರೋಣಾ ಠಾಣೆ ಹಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಾಡಚಿಂಚೋಳಿ ಕ್ರಾಸನಲ್ಲಿರುವ  ಬಸ್‌ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಬಸ್‌ ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಒಬ್ಬನು ಓಡಿಹೋಗಿದ್ದು ಉಳಿದ ಒಬ್ಬನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಈರಣ್ಣಾ ತಂದೆ ಗಿರಿಮಲ್ಲಪ್ಪಾ ಧುತ್ತರಗಾಂವ, ಸಾ:ಲಾಡಚಿಂಚೋಳಿ ಗ್ರಾಮ ಅಂತಾ ತಿಳಿಸಿದ್ದು, ಓಡಿಹೋದವನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಮಲ್ಲಪ್ಪ ತಂದೆ ಬೀರಪ್ಪಾಝಳಕಿ, ಸಾ:ಕಡಗಂಚಿ ಅಂತಾ ತಿಳಿದು ಬಂದಿರುತ್ತದೆ.  ಸದರಿ ಈರಣ್ಣನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 820/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.