Police Bhavan Kalaburagi

Police Bhavan Kalaburagi

Wednesday, January 27, 2021

BIDRA DISTRICT DAILY CRIME UPDATE 27-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-01-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 26-01-2021 ರಂದು ಫಿರ್ಯಾದಿ ಕುಶಾಲ ತಂದೆ ಶಿವರಾಜ ವಯ: 23 ವರ್ಷ, ಜಾತಿ: ಕುಂಬಾರ, ಸಾ: ಬುತ್ತಿ ಬಸವಣ್ಣ ಮಂದಿರ ಹತ್ತಿರ ಚಿದ್ರಿ ಬೀದರ ರವರ ತಮ್ಮನಾದ ಈಶ್ವರ ತಂದೆ ಶಿವರಾಜ ವಯ: 21 ವರ್ಷ ಇತನು ಬೀದರ ನಗರದ ಹಕ್ ಕಾಲೋನಿಯಲ್ಲಿರುವ ರೆಹಮಾನ ಎಂಬುವವರ ಮನೆಗೆ ಗಿಲಾವ ಕೆಲಸಕ್ಕೆಂದು ಹೋಗಿ ರೆಹಮಾನ ರವರ ಮನೆಯಲ್ಲಿ ಗಿಲಾವ ಕೆಲಸ ಮಾಡುತ್ತಿರುವಾಗ ಮನೆಯಲ್ಲಿದ್ದ ವಿದ್ಯುತ್ ಸಂಪರ್ಕದಿಂದ ಆಕಸ್ಮಿಕವಾಗಿ ತಮ್ಮನಿಗೆ ಕರೆಂಟ ಹತ್ತಿ ನೆಲದ ಮೇಲೆ ಬಿದ್ದಾಗ ಮನೆಯ ಮಾಲಿಕ ರೆಹಮಾನ ಈತನು ಚಿಕಿತ್ಸೆಗೆಂದು ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ನೋಡಿ ಕರೆಂಟ ಹತ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ, ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ತನ್ನ ತಮ್ಮನ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 17/2021, ಕಲಂ. 304() ಐಪಿಸಿ :-

ದಿನಾಂಕ 25-01-2021 ರಂದು ಫಿರ್ಯಾದಿ ಪರವೀನ ಗಂಡ ಶಾಬೋದ್ದೀನ ಬೋರಲವಾಲೆ ವಯ: 39 ವರ್ಷ, ಜಾತಿ: ಮುಸ್ಲಿಂ, ಸಾ: ಶಿವಪುರ ಗಲ್ಲಿ ಹುಮನಾಬಾದ ರವರ ಓಣಿಯ ಶಾರುಖ ಇವರು ಕರೆ ಮಾಡಿ ತಿಳಿಸಿದ್ದೆನೆಂದರೆ ನನ್ನ ಜೊತೆಯಲ್ಲಿ ಉಮರ ಮತ್ತು ಖಾಸಿಮ ರವರು ಕಮಲಾಪುರದಿಂದ ಕಟ್ಟಿಗೆ ಹೊಟ್ಟು ತುಂಬಿಕೊಂಡು ಹುಮನಾಬಾದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಖಾಜಾ ಕಂಪನಿಯ ಪೇಪರ ಮಿಲಗೆ ತಲುಪಿ ತಮ್ಮ ಗಾಡಿ ಖಾಲಿ ಮಾಡುವಾಗ ನಿಮ್ಮ ಗಂಡ ಥಕಾವಟ ಆಗಿ ಹೊಟ್ಟಿನ ಪಕ್ಕದಲ್ಲಿ ಕುಳಿತಾಗ ಖಾಜಾ ಕಂಪನಿಯ ಟ್ರಾಕ್ಟರ್ ನಂ. ಕೆಎ-39/ಟಿ-6012 ನೇದರ ಚಾಲಕನಾದ ಆರೋಪಿ ನರಸಿಂಗ ತಂದೆ ಶ್ರವಣಕುಮಾರ ಸಾ: ಚಂದನಹಳ್ಳಿ ಇತನು ತನ್ನ ಟ್ರಾಕ್ಟರ್ ಖಾಜಾ ಕಂಪನಿಯ ಒಳಗೆ ನಿರ್ಲಕ್ಷದಿಂದ ಚಲಾಯಿಸಿ ಹೊಟ್ಟಿನ ಪಕ್ಕದಲ್ಲಿ ಕುಳಿತ ನಿಮ್ಮ ಗಂಡ ಶಾಬೋದ್ದೀನ ಇವರಿಗೆ ಹೊಟ್ಟಿನಲ್ಲಿ ಒತ್ತಿದಾಗ ಬುಲ ಬಕೇಟ ಅವರ ಕುತ್ತಿಯ ಹತ್ತಿರ ತಗುಲಿ ಎಳೆದಾಗ ಕುತ್ತಿಗೆ ಮತ್ತು ಬಲಗೈಗೆ ಗಾಯವಾಗಿರುವದರಿಂದ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ ನೀವು ಬನ್ನಿ ಅಂತಾ ತಿಳಿಸಿದ್ದರಿಂದ ಫಿರ್ಯಾದಿಯು ಆಸ್ಪತ್ರೆಗೆ ಬಂದು ನೋಡಲು ಫಿರ್ಯಾದಿಯವರ ಗಂಡ ಶಾಬೋದ್ದಿನ್ ರವರ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಖ 26-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 18/2021, ಕಲಂ. 309 ಐಪಿಸಿ :-

ದಿನಾಂಕ 26-01-2021 ರಂದು ಫಿರ್ಯಾದಿ ಶ್ರೀಪಾದ ಮುಖ್ಯಾಧಿಕಾರಿಗಳು ಪುರಸಭೆ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪುರಸಭೆ ಕಛೇರಿಯ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಸದರಿ ದ್ವಜಾರೋರಣ ಕಾರ್ಯಕ್ರಮದ ಮುಗಿದ ನಂತರ ಆರೋಪಿ ರಾಘವೇಂದ್ರ ತಂದೆ ರೇವಣಸಿದ್ದಪ್ಪಾ ಹೊರ ಗುತ್ತಿಗೆ ಪೌರ ಕಾರ್ಮಿಕ (ಜಿ.ಸಿ.ಬಿ. ಚಾಲಕ), ಸಾ: ಚಿಟಗುಪ್ಪಾ ಇತನು ನೌಕರರ ಪುರಸಭೆ ಕಛೇರಿಯ ಕಟ್ಟಡದ ಮೇಲೆ ಏಕಾಏಕಿ ಏರಿ ಕೆಳಗಿರುವ ಎಲ್ಲ ಜನಪ್ರತಿನಿಧಿಗಳು ಹಾಗು ಉಪಸ್ತಿತರಿದ್ದ ಸಾರ್ವಜನಿಕರು ಧ್ವನಿಯ ಮೂಲಕ ಎಲ್ಲರೂ ಕೂಗಾಡಿ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿರುವಾಗ ಪುರಸಭೆ ಸದಸ್ಯರಾದ ನಸೀರ ಮತ್ತಿತರರು ಕಛೇರಿಯ ಕಟ್ಟಡದ ಮೇಲೆ ಓಡೊಡಿ ಹೋಗಿ ರಾಘವೇಂದ್ರ ಇತನಿಗೆ ಹಿಡಿದುಕೊಂಡು ಕೆಳಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.