Police Bhavan Kalaburagi

Police Bhavan Kalaburagi

Monday, August 30, 2021

BIDAR DISTRICT DAILY CRIME UPDATE 30-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-08-2021

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 76/2021, ಕಲಂ. 279, 337, 338 ಐಪಿಸಿ :-

ದಿನಾಂಕ 29-08-2021 ರಂದು ಫಿರ್ಯಾದಿ ಇಸ್ಮಾಯಿಲ ತಂದೆ ಮೈನೋದ್ದಿನ ಮೌಜನ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ತಾಳಮಡಗಿ ಗ್ರಾಮ ರವರು ತಮ್ಮ ಸಂಭಂದಿಯಾದ ಇಸ್ಸಾಮಿಯ್ಯಾ ತಂದೆ ಇಬ್ರಾಹಿಂ ಸಾಬ ಇಬ್ಬರು ಫಿರ್ಯಾದಿಯವರ ಮೋಟಾರ ಸೈಕಲ ಮೇಲೆ ಮ್ಮೂರಿನಿಂದ ಮನ್ನಾಎಖೇಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ಮುಂದೆ ಒಂದು ಪಾಸ್ಯೆಂಜರ ಹೊಡೆಯುವ ಅಪ್ಪಿ ಆಟೋ ನಂ. ಕೆಎ-39/1608 ನೇದು ಹೋಗುತ್ತಿದ್ದು, ತಾಳಮಡಗಿ ಬ್ರೀಡ್ಜ್ ದಾಟಿ ಸ್ವಲ್ಪ ಮುಂದೆ ಲ್ಲಪ್ಪ ಶೇರಿಕಾರ ನರ್ಸರಿ ಹತ್ತಿರ ರಾ.ಹೆದ್ದಾರಿ ನಂ. 65 ನೇದರ ಮೇಲೆ ಆಟೋ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮಲೆ ಬ್ರೇಕ ಹಾಕಿದ್ದರಿಂದ ವಾ ಕಂಟ್ರೋಲ್ ಮಾಡದೇ ರೋಡಿನ ಮೇಲೆ ಪಲ್ಟಿ ಮಾಡಿರುತ್ತಾನೆ, ಹಿಂದೆ ಹೋಗುತ್ತಿದ್ದ ಫಿರ್ಯಾದಿಯು ಹೋಗಿ ನೋಡಲು ಸದರಿ ಆಟೋದಲ್ಲಿದ್ದ ತಮ್ಮೂರಿನ ಸಲಾವುದ್ದಿನ ತಂದೆ ಗೌಸೋದ್ದಿನ ಮತ್ತು ರವಿ ತಂದೆ ಮಾಣಿಕಪ್ಪ ಯರಬಾಯಿ ಇಬ್ಬರೆ ಇದ್ದು, ಸದರಿ ಆಪಘಾತದಿಂದ ಸಲ್ಲಾವುದ್ದಿನ ಇವರಿಗೆ ಲೆ ಹಿಂದುಗಡೆ ಭಾರಿ ರಕ್ತಗಾಯ, ಗಟಾಯಿಗೆ ರಕ್ತಗಾಯ, ತುಟಿಗೆ ರಕ್ತಗಾಯ, ಬಲಗೈ ಮೋಳಕೈ ಟ್ಟೆಗೆ ಭಾರಿ ರಕ್ತಗಾಯ, ಎಡಗಾಲು ಮೋಳಕಾಲು ಕೆಳಗೆ ರಕ್ತಗಾಯವಾಗಿರುತ್ತದೆ ಹಾಗೂ ರವಿ ಇತನಿಗೆ ಎಡಗೈ ಟ್ಟೆಗೆ ರಕ್ತಗಾಯ, ಎಡಗಾಲು ಪಿಂಡ್ರಿಗೆ ರಕ್ತಗಾಯವಾಗಿರುತ್ತದೆ  ಮತ್ತು ಆಟೋ ಚಾಲಕನಾದ ತಮ್ಮೂರ ಮಸ್ತಾನ ತಂದೆ ಮೈನೊದ್ದಿನ ಮೌಜನ ಇತನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ, ಕೂಡಲೆ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆಯಿಸಿ ಅದರಲ್ಲಿ ಗಾಯಗೊಂಡ ಸಲ್ಲಾವುದ್ದಿನ್ ಮತ್ತು ರವಿ ರವರಿಗೆ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ, ನಂತರ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಅಪೇಕ್ಸ್ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 154/2021, ಕಲಂ. 279, 337, 338 ಐಪಿಸಿ :-

ದಿನಾಂಕ 29-08-2021 ರಂದು ಫಿರ್ಯಾದಿ ಪ್ರಶಾಂತ ತಂಧೆ ಕಲ್ಲಪ್ಪಾ ಸೂರ್ಯವಂಶಿ ರವರು ತನ್ನ ಮನೆಯಿಂದ ಗಾಂಧಿ ಚೌಕ  ಮಾರ್ಗವಾಗಿ ಎ.ಪಿ.ಎಮ.ಸಿ ಗೆ ಖಾಸಗಿ ಕೆಲಸಕ್ಕಾಗಿ ಹೋಗುವಾಗ ಶಿವಾಜಿ ಚೌಕ ಹತ್ತಿರ ಗಾಂಧಿ ಚೌಕ ಕಡೆಯಿಂದ ಮೋಟಾರ್ ಸೈಕಲ್ ನಂ. ಎಪಿ-10/ಎಇ-5954 ನೇದರ ಚಾಲಕನಾದ ಆರೋಪಿ ಉಮೇಶ ತಂದೆ ರಾಜಕುಮಾರ ಸೋನಾಳೆ ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಸಾಯಿ ನಗರ ಭಾಲ್ಕಿ ಇತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಿಜೀತನದಿಂದ ಚಲಾಯಿಸಿಕೊಂಡು ಬಂದು ಭಾಲ್ಕಿ ಬೀದರ ರೋಡಿನ ಶಿವಾಜಿ ಚೌಕ ಹತ್ತಿರ ಗಾಂಧಿ ಚೌಕದಿಂದ ಶಿವಾಜಿ ಚೌಕ ಕಡೆಗೆ ಬರುತ್ತಿರುವಾಗ ರೈಲ್ವೆ ಗೇಟ ಹತ್ತಿರ ಒಮ್ಮೇಲೆ ಬ್ರೆಕ ಹಾಕಿದ್ದರಿಂದ ಬೈಕ್  ಸ್ಕಿಡ ಆಗಿ ಬಿದ್ದು ಬೈಕ ಸವಾರನಿಗೆ ಎಡಗಾಲು ಮೊಳಕಾಲಿಗೆ ತರಚಿದ ಗಾಯ, ಮೂಗಿಗೆ ಗುಪ್ತಗಾಯ, ತಲೆಗೆ ಗಾಯವಾಗಿದ್ದು ಇರುತ್ತದೆ, ನಂತರ ಖಾಸಗಿ ವಾಹನದಲ್ಲಿ ಬೈಕ ಸವಾರನಿಗೆ ಕರೆದುಕೊಂಡು ಬಂದು ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ರೇಫರ್ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.