ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಕಾಳಗಿ ಠಾಣೆ : ದಿನಾಂಕ 28-06-2019 ರಂದು ಕಾಳಗಿ ಠಾಣಾ ವ್ಯಾಪ್ತಿಯ ಕೊಡದೂರ
ಗ್ರಾಮದ ಬಸ ನಿಲ್ದಾಣದ ಹತ್ತಿರ ಇರುವ ಸಿದ್ದಪ್ಪ ತಂದೆ ಈರಣ್ಣ ಶಿವಗೊಂಡ ಈತನು ತಮ್ಮ ಕಿರಾಣಿ
ಅಂಗಡಿಯಲ್ಲಿ ಕುಳಿತು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ
ಕೊಡುತ್ತೇನೆ ಅಂತಾ ಮಟಕಾ ನಂಬರ ಚೀಟಿ ಬರೆದುಕೊಟ್ಟು ಸಾರ್ವಜನಿಕರಿಂದ ಹಣ
ಪಡೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮೆ ಬಂದ ಮೇರೆಗೆ ಪಿ.ಎಸ್.ಐ. ಕಾಳಗಿ ರವರು ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ,ಎಸ್,ಪಿ
ಸಾಹೇಬರು ಶಹಾಬಾದ, ಮಾನ್ಯ ಸಿಪಿಐ ಸಾಹೇಬರು ಕಾಳಗಿ ರವರ ಮಾರ್ಗದರ್ಶನಲ್ಲಿ, ಸದರಿ
ಸ್ಥಳಕ್ಕೆ ತಲುಪಿ ರೋಡಿನ ಪಕ್ಕದಲ್ಲಿ ಜೀಪ ನೀಲ್ಲಿಸಿ ಬಸ ನಿಲ್ದಾಣದ ಮರೆಯಲ್ಲಿ ನಿಂತು ನೋಡಲು
ಅಪಾಧಿತನು ತನ್ನ ಕಿರಾಣಿ ಅಂಗಡಿಯಲ್ಲಿ ಕುಳಿತು
ಒಬ್ಬನು 1 ರೂಪಾಯಿಗೆ 80 ರೂಪಾಯಿ
ಕೊಡುವುದಾಗಿ ಹೇಳಿ ದೈವ ಲೀಲೆ ಆಟ ಆಡ್ರಿ ಅಂತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ
ಬರೆದ ಚೀಟಿ ಕೊಡುತ್ತಿದದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ
ತನ್ನ ಹೆಸರು ಸಿದ್ದಪ್ಪ ತಂದೆ ಈರಣ್ಣ ಶೀವಗೊಂಡ ಸಾ:ಕೊಡದೂರ ಅಂತಾ ಹೇಳಿದನು, ಅಂಗ
ಶೋಧನೆ ಮಾಡಲಾಗಿ ಅವನ ಹತ್ತಿರ 1] ನಗದು ಹಣ 2300/-ರೂಪಾಯಿ 2]ಒಂದು
ಮಟಕಾ ನಂಬರ ಬರೆದ ಚೀಟಿ 3] ಒಂದು
ಬಾಲ ಪೆನ್ನ ದೋರೆತ್ತಿದ್ದು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡುಸದರಿಯವೊಂದಿಗೆ ಕಾಳಗಿ ಠಾಣೆಗೆ
ಬಂದು ಠಾಣೆಯ ಗುನ್ನೆ ನಂ 22/2019 ಕಲಂ
78 (3) ಕೆ.ಪಿ ಆಕ್ಟ್ ನೇದ್ದರ ಪ್ರಕಾರ ಪ್ರಕರಣ
ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:28/06/2019
ರಂದು ಗುಡ್ಡೆವಾಡಿ ಗ್ರಾಮದ ಜಟ್ಟಿಂಗರಾಯ ದೇವರ ಗುಡಿಯ ಮುಂದೆ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗುಡ್ಡೆವಾಡಿ ಗ್ರಾಮದ ಜಟ್ಟಿಂಗರಾಯ ದೆವರ ಗುಡಿಯಿಂದ ಸ್ವಲ್ಪ ದೂರು ಜಿಪ ನಿಲ್ಲಿಸಿ ಕಾಲ ನಡಿಗೆಯ ಮೂಲಕ ಹೋಗಿ ಮರೆಯಾಗಿ ನಿಂತು ನೋಡಲು ಜಟ್ಟಿಂಗರಾಯ ಗುಡಿಯ ಮುಂದೆ 05 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ನಾನು ಮತ್ತು ಸಿಬ್ಬಂದಿ ಜನರು ದಾಳಿ ಮಾಡಿ ಜೂಜಾಡುತ್ತಿದ್ದ 05 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಸಿದ್ದರಾಮ ತಂದೆ ಅಂಬುಜಾ ಹುಗಾರ ಸಾ||ಗುಡ್ಡೆವಾಡಿ 2) ಜಟ್ಟೆಪ್ಪಾ ಗಿರೇಪ್ಪ ತಳವಾರ 3)ಶರಣಪ್ಪ ತಂದೆ ಗುರುಪಾದಪ್ಪ ದಣ್ಣೂರ 4)ವಿಠಲ ತಂದೆ ಮಲ್ಕಪ್ಪ ಹರಿಜನ 5) ಗಣಪತಿ ತಂದೆ ಬಮ್ಮರಾಯ ತಳವಾರ ಸಾ|| ಎಲ್ಲರು ಗುಡ್ಡೆವಾಡಿ ಅಂತ ತಿಳಿಸಿದ್ದು ಸದರಿಯವರಿಂದ
ಜೂಜಾಟಕ್ಕೆ ಬಳಸಿದ ಒಟ್ಟು 2,230/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ
ಠಾಣೆಗೆ ಬಂದು ಠಾಣೆಯ ಗುನ್ನೆ ನಂ 102/2019 ಕಲಂ:87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ತುಂಬಿ
ಸಾಗಿಸುತ್ತಿದ್ದ ಟಿಪ್ಪರಗಳು ಮತ್ತು ಟ್ರ್ಯಾಕ್ಟರಗಳ ಜಪ್ತಿ :
ಫರತಾಬಾದ ಠಾಣೆ :ದಿನಾಂಕ 28/06/2019 ರಂದು ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಟಿಪ್ಪರಗಳಲ್ಲಿ ತುಂಬಿಕೊಂಡು ಜೇವರ್ಗಿ ಕಡೆಯಿಂದ ಸಾಗಾಣೆ ಮಾಡುತ್ತಿದ್ದಾರೆ ಎಂಬ ಭಾತ್ಮಿ ಬಂದ ಮೇರೆಗೆ ಪಿ.ಐ. ಫರತಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರಾಷ್ಟ್ರೀಯ ಹೇದ್ದಾರಿ 218 ಫಿರೋಜಾಬಾದ ಧರ್ಗಾದ ರಸ್ತೆಯ ಹತ್ತಿರ ಹೋಗಿ ನಾವು ಕಾಯುತ್ತಾ ನಿಂತಿರುವಾಗ ಬೆಳಗಿನ 7.00 ಎ.ಎಮಕ್ಕೆ ಜೇವರ್ಗಿ ಕಡೆಯಿಂದ ಟಿಪ್ಪರಗಳು ಬರುತ್ತಿರುವುದನ್ನು ನೋಡಿ ನಮಗೆ ಸಂಶಯ ಬಂದು ಸದರಿ ಟಿಪ್ಪರಗಳನ್ನು ನಿಲ್ಲಿಸಲು ಚಾಲಕರಿಗೆ ಕೈ ಮಾಡಿ ಸೂಚಿಸಿದಾಗ, ಸದರಿ ಟಿಪ್ಪರಗಳ ಚಾಲಕರು ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿದ್ದು, ಟಿಪ್ಪರದಲ್ಲಿ ಮರಳು ತುಂಬಿದ್ದು, ಸದರಿ ಚಾಲಕರಿಗೆ ಮರಳು ಸಾಗಾಣಿಕೆಗೆ ಸಂಬಂಧಿಸಿದ ದಾಖಲಾತಿಗಳು ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ. ನಮ್ಮ ಮಾಲಿಕರ ಸೂಚನೆ ಮೇರೆಗೆ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದೆವೆ ಅಂತಾ ತಿಳಿಸಿದ್ದು, ಕೂಡಲೆ ಸದರಿ ಚಾಲಕರಿಗೆ ವಶಕ್ಕೆ ಪಡೆದುಕೊಂಡು ಹೆಸರು ವಗೈರೆ ವಿಚಾರಿಸಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರು 1) ಬಸವರಾಜ ತಂದೆ ಶಂಕ್ರೆಪ್ಪ ಹೋಳಿಕೇರಿ ಸಾಃ ಹಾವಳಗಿ ತಾಃ ಅಫಜಲಪೂರ ಅಂತಾ ತಿಳಿಸಿದ್ದು, ಸದರಿ ಟಿಪ್ಪರದ ಮಾಲಿಕನ ಹೆಸರು ವಿಚಾರಿಸಲಾಗಿ ಮಹಾಂತಯ್ಯ ತಂದೆ ಮಲ್ಲಯ್ಯ ಹೀರೆಮಠ ಸಾಃ ಹಾವಳಗಿ ಅಂತಾ ತಿಳಿಸಿದ್ದು, ಸದರಿ ಟಿಪ್ಪರ ಪರಿಶೀಲಿಸಲಾಗಿ ನಂ ಕೆಎ-32 ಡಿ-4947 ನೇದ್ದು ಇದ್ದು ಅದರ ಅ.ಕಿಃ 5,00,000/-ರೂ ಮತ್ತು ಮರಳಿನ ಅ.ಕಿಃ 6,000/-ರೂ ಇರುತ್ತದೆ. 2) ಅಮರೆಪ್ಪ ತಂದೆ ನಾಗಪ್ಪ ಸುರಪೂರ ಸಾಃ ಬ್ಯಾಕೋಡ ತಾಃ ಸಿಂದಗಿ ಜಿಃ ವಿಜಯಪೂರ ಅಂತಾ ತಿಳಿಸಿದ್ದು, ಸದರಿ ಟಿಪ್ಪರದ ಮಾಲಿಕನ ಹೆಸರು ವಿಚಾರಿಸಲಾಗಿ ಶಿವಾನಂದ ಅಜಗೊಂಡ ಸಾಃ ಸಿಂದಗಿ ಅಂತಾ ತಿಳಿಸಿದ್ದು, ಸದರಿ ಟಿಪ್ಪರ ಪರಿಶೀಲಿಸಲಾಗಿ ನಂ ಕೆಎ-28 ಸಿ-3517 ನೇದ್ದು ಇದ್ದು ಅದರ ಅ.ಕಿಃ 5,00,000/-ರೂ ಮತ್ತು ಮರಳಿನ ಅ.ಕಿಃ 6,000/-ರೂ ಇರುತ್ತದೆ. 3) ನಿಂಗಯ್ಯ ತಂದೆ ಮಲ್ಲಯ್ಯ ನಾಗಯ್ಯ ಸಾಲಿಮಠ ಸಾಃ ಇಂಗಳಗಿ ತಾಃ ಸಿಂದಗಿ ಅಂತಾ ತಿಳಿಸಿದ್ದು, ಸದರಿ ಟಿಪ್ಪರದ ಮಾಲಿಕನ ಹೆಸರು ವಿಚಾರಿಸಲಾಗಿ ಪ್ರವೀಣ ಹುಗ್ಗಿ ಸಾಃ ಇಂಗಳಗಿ ಅಂತಾ ತಿಳಿಸಿದ್ದು, ಸದರಿ ಟಿಪ್ಪರ ಪರಿಶೀಲಿಸಲಾಗಿ ನಂಬರ ಇರುವುದಿಲ್ಲ ಅದರ ಇಂಜೀನ ನಂ 400.952.ಆ.0084311 ಇದ್ದು ಅದರ ಅ.ಕಿಃ 5,00,000/-ರೂ ಮತ್ತು ಮರಳಿನ ಅ.ಕಿಃ 6,000/-ರೂ ಇರುತ್ತದೆ. ಸದರಿ ಟಿಪ್ಪರಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು
ಸದರಿಯವರೊಂದಿಗೆ ಫರತಾಬಾದ ಠಾಣೆಗೆ ಬಂದು ¸ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ
(ಕಳ್ಳತನದಿಂದ) ಮರಳನ್ನು ಕಳ್ಳತನ ಮಾಡಿ ಸಾಗಣೆ ಮಾಡುತ್ತಿರುವ ಟಿಪ್ಪರ ನಂಬರಗಳಾದ 1) ಕೆಎ-32 ಡಿ-4947 2) ಕೆಎ-28 ಸಿ-3517 3) ಇಂಜೀನ ನಂ 400.952.ಆ.0084311 ನೆದ್ದವುಗಳ ಚಾಲಕರಾದ ಬಸವರಾಜ ತಂದೆ ಶಂಕ್ರೆಪ್ಪ ಹೋಳಿಕೇರಿ 2) ಅಮರೆಪ್ಪ ತಂದೆ ನಾಗಪ್ಪ ಸುರಪೂರ 3) ನಿಂಗಯ್ಯ ತಂದೆ ಮಲ್ಲಯ್ಯ ನಾಗಯ್ಯ ಸಾಲಿಮಠ ಮತ್ತು ಸದರಿ ಟಿಪ್ಪರಗಳ ಮಾಲಿಕರಾದ 1) ಮಹಾಂತಯ್ಯ ತಂದೆ ಮಲ್ಲಯ್ಯ ಹೀರೆಮಠ ಸಾಃ ಹಾವಳಗಿ 2) ಶಿವಾನಂದ ಅಜಗೊಂಡ ಸಾಃ ಸಿಂದಗಿ 3) ಪ್ರವೀಣ ಹುಗ್ಗಿ ಸಾಃ ಇಂಗಳ ಇವರುಗಳ
ವಿರುದ್ದ ಠಾಣೆ ಗುನ್ನೆ ನಂ
93/2019 ಕಲಂ 379 ಐಪಿಸಿ ಹಾಗೂ 21(1) ಎಂ.ಎಂ.ಆರ್.ಡಿ ಆಕ್ಟ 1957 ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ
27-06-2019 ರಂದು ರಾತ್ರಿ ಅಫಜಲಪೂರ ಠಾಣಾ ವ್ಯಾಪ್ತಿಯ ಹಿಂಚಗೇರಾ ಗ್ರಾಮದ ಭೀಮಾನದಿಯಲ್ಲಿ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಟಾರ್ಚ ಬೆಳಕಿನಲ್ಲಿ ನೊಡಲಾಗಿ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ, ಟ್ಯಾಕ್ಟರ ಹೆಡ್ ಲೈಟ ಬೆಳಕಿನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ, ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಕತ್ತಲಲ್ಲಿ ಓಡಿಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ಟ್ಯಾಕ್ಟರ ಚಾಲಕನನ್ನು ಸುತ್ತ ಮುತ್ತಲು ನೋಡಲು ಪರಾರಿ ಆಗಿದ್ದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಜಾನಡಿಯರ್ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ ENG NO:- PY3029T244204, CH NO:-
1PY5050ETGA016139 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಹಾಕಿರುವುದಿಲ್ಲ. ಸದರಿ ಟ್ರ್ಯಾಕ್ಟರ ಅ.ಕಿ
5,00,000/-ರೂ ಇರಬಹುದು. ನಂತರ ಸದರಿ ಟ್ರ್ಯಾಕ್ಟರನೊಂದಿಗೆ
ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ಸಂ 100/2019 ಕಲಂ 379
ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ
ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 28-06-2019 ರಂದು ಮುಂಜಾನೆ ಅಫಜಲಪೂರ ಠಾಣಾ ವ್ಯಾಪ್ತಿಯ
ಹಿಂಚಗೇರಾ ಗ್ರಾಮದ ಭೀಮಾನದಿಯಲ್ಲಿ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿ ಪಿ.ಐ. ಅಫಜಲಪೂರ ರವರು ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ನೋಡಲಾಗಿ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ CH NO :- PY5310S065153 ENG NO:-
PY3029D265297 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ ಅ.ಕಿ
5,00,000/-ರೂ ಇರಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು
ಠಾಣೆಯ ಗುನ್ನೆ ನಂ 101/2019 ಕಲಂ 379 ಐಪಿಸಿ ಮತ್ತು 21
(1) ಎಮ್.ಎಮ್.ಡಿ.ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಗೋದಾವರಿ ಗಂಡ
ಶರಣಬಸಪ್ಪಾ ರೋಜಾ ಸಾ: ಧರ್ಮಾಪೂರ ಹಾ:ವ: ವಿದ್ಯಾ ನಗರ ಕಲಬುರಗಿ ರವರ ಗಂಡನಾದ ಶರಣಬಸಪ್ಪಾ
ರವರಿಗೆ ನಮ್ಮ ಊರಾದ ಧರ್ಮಾಪೂರದಲ್ಲಿ ನಮ್ಮದು
ಸ್ವಂತ ಜಮೀನು ಇರುತ್ತದೆ. ನನ್ನ ಗಂಡನು ಸದರಿ ಜಮೀನಿಗೆ ಕಲಬುರಗಿಯಿಂದ ಹೋಗಿ ಬಂದು
ಮಾಡುತ್ತಿದ್ದನು. ಸದರಿ ಜಮೀನಿನಲ್ಲಿ ಉಳುಮೆಗಾಗಿ ನನ್ನ ಗಂಡನು ಬ್ಯಾಂಕಿನಲ್ಲಿ ಮತ್ತು ಕೈಗಡ
ಅಂತಾ ಬೇರೆ ಯಾರೋ ಹತ್ತಿರ ಸಾಲ ತೆಗೆದುಕೊಂಡಿರುತ್ತಾರೆ. ಕಳೆದ ವರ್ಷ ನಮ್ಮ ಜಮೀನಿನಲ್ಲಿ ಮಳೆ
ಬರದೇ ಇರುವುದರಿಂದ ಯಾವುದೇ ಬೆಳೆ ಬೆಳೆದಿರುವುದಿಲ್ಲಾ. ನಮ್ಮ ಹೊಲದಲ್ಲಿ ಉಳುಮೆಗಾಗಿ ನನ್ನ
ಗಂಡನು ಸುಮಾರು 9-10
ಲಕ್ಷ ರೂಪಾಯಿ ಸಾಲ ಪಡೆದಿದ್ದರಿಂದ ಹೊಲದಲ್ಲಿ ಯಾವುದೇ ಬೆಳೆ ಬೆಳೆಯದೇ ಇರುವುದರಿಂದ ಸಾಲ
ಮುಟ್ಟಿಸುವುದು ಹೇಗೆ ಮತ್ತು ಈ ವರ್ಷ ಬಿತ್ತುವುದಕ್ಕಾಗಿ ಮತ್ತೆ ಸಾಲ ಎಲ್ಲಿಂದ ಮಾಡುವುದು ಅಂತಾ
ಮನೆಯಲ್ಲಿ ಆಗಾಗ ಚಿಂತೆ ಮಾಡುತ್ತಿದ್ದರು. ನನ್ನ ಗಂಡನು ಸಾಲ ಮುಟ್ಟಿಸುವ ಸಲುವಾಗಿ ಚಿಂತೆ
ಮಾಡುತ್ತಿದ್ದಾಗ ನಮ್ಮ ಹೊಲ ಮಾರಿ ಸಾಲ ಮುಟ್ಟಿಸಿದರಾಯಿತ್ತು ಅಂತಾ ಅವರಿಗೆ ಧೈರ್ಯ
ಹೇಳುತ್ತಿದ್ದರು ಸಹ ನನ್ನ ಗಂಡ ಹಾಗೇ ಚಿಂತೆಯಲ್ಲಿಯೇ ಕುಳಿತ್ತುಕೊಳ್ಳುತ್ತಿದ್ದರು. ಹೀಗಿರುವಾಗ
ದಿನಾಂಕ:27.06.2019 ರಂದು ಬೆಳಗ್ಗೆ 11 ಗಂಟೆಯ
ಸುಮಾರಿಗೆ ನನ್ನ ಗಂಡನಾದ ಶರಣಬಸಪ್ಪಾ ರವರು ಊರ ಕಡೆಗೆ ಮಳೆ ಬಂದಿದೆ ಇಲ್ಲಾ ನೋಡಿಕೊಂಡು ಹೊಲಕ್ಕೆ
ಹೋಗಿ ಬರುತ್ತೆನೆ ಅಂತಾ ತಮ್ಮ ಮೋಟಾರ ಸೈಕಲ ಮೇಲೆ ನಮ್ಮೂರಾದ ಧರ್ಮಾಪೂರಕ್ಕೆ ಹೋಗಿರುತ್ತಾರೆ.
ನಂತರ ಸಾಯಂಕಾಲ 6 ಗಂಟೆಯ ಸುಮಾರಿಗೆ ನಮ್ಮ ಮೈದುನನಾದ ರಾಮಲಿಂಗಪ್ಪಾ
ಈತನು ಪೋನ ಮಾಡಿ ಅಣ್ಣನಾದ ಶರಣಬಸಪ್ಪಾ ಈತನು ನಮ್ಮ ಹೊಲ ಸರ್ವೇ ನಂ 92 ರಲ್ಲಿದ್ದ ಹುಣಸಿ ಮರಕ್ಕೆ ಪ್ಲಾಸ್ಟಿಕ್ ವೈರನಿಂದ ನೇಣು
ಬೀಗಿದುಕೊಂಡು ಮೃತ ಪಟ್ಟಿರುತ್ತಾನೆ ನೀವು ಬೇಗ ಹೊಲಕ್ಕೆ ಬನ್ನಿ ಅಂತಾ ತಿಳಿಸಿದರಿಂದ ನಾನು
ಕಲಬುರಗಿಯಿಂದ ಕೂಡಲೇ ಧರ್ಮಾಪೂರ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೇ ನಂ 92 ರಲ್ಲಿ ಬಂದು ನೋಡಲಾಗಿ ನನ್ನ ಗಂಡನು ಹುಣಸಿ ಮರಕ್ಕೆ ಪ್ಲಾಸ್ಟಿಕ್ ವೈರನಿಂದ ನೇಣು
ಬಿಗಿದುಕೊಂಡು ಮೃತ ಹೊಂದಿದ್ದು ಇರುತ್ತದೆ. ಸದರಿ ನನ್ನ ಗಂಡನಾದ ಶರಣಬಸಪ್ಪಾ ಈತನು ನಮ್ಮ ಹೊಲ
ಸರ್ಚೇ ನಂ 92 ನೆದ್ದರ ಬೆಳೆ ಸಲುವಾಗಿ ಮಾಡಿದ ಬ್ಯಾಂಕಿನ ಮತ್ತು ಕೈಗಡ
ಸಾಲ ತೀರಿಸುವುದು ಹೇಗೆ ಅಂತಾ ಚಿಂತೆಗೀಡಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ
ಮಾಡಿಕೊಂಡಿರುತ್ತಾನೆ. ನಮ್ಮದು ಯಾರ ಮೇಲೆಯೂ ಸಂಶಯ ವೈಗೆರೆ ಇರುವುದಿಲ್ಲಾ . ಕಾರಣ ತಾವು ಮುಂದಿನ
ಕಾನೂನು ಕ್ರಮ ಜರೂಗಿಸಬೇಕು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯ ಯುಡಿಆರ್
ನಂ:10/2019 ಕಲಂ 174 ಸಿಆರ್ ಪಿಸಿ ಪ್ರಕಾರ
ಪ್ರಕರಣ ದಾಖಲಿಸಲಾಗಿದೆ.
ಫರತಾಬಾದ ಠಾಣೆ : ಶ್ರೀ ಶಿವಾಜಿ ತಂದೆ ಖೀರು
ರಾಠೋಡ ಸಾಃ ಮಿಣಜಗಿ ತಾಂಡಾ ತಾ.ಜಿಃ ಕಲಬುರಗಿ ರವರ ತಂದೆ ತಾಯಿಯವರು ತಿರಿಕೊಂಡಿದ್ದು, ನಾವು ಇಬ್ಬರು
ಅಣ್ಣ ತಮ್ಮಂದಿರಿದ್ದು, ಹಿರಿಯವನು ನಾನು ಇರುತ್ತೇನೆ, ಎರಡನೆಯವನು ಸುಭಾಷ ಅಂತಾ ಇರುತ್ತಾನೆ. ಸದರಿಯವನು ಕೂಲಿಕೆಲಸ ಮಾಡಿಕೊಂಡಿರುತ್ತಾನೆ.
ಆತನಿಗೆ ಮದುವೆಯಾಗಿರುವುದಿಲ್ಲ ನನ್ನ ತಮ್ಮನು ನಮ್ಮ ತಾಂಡಾದ ಕುಮಾರಿ ರೇಸ್ಮಾ ಇವಳೊಂದಿಗೆ
ಸಲುಗೆಯಿಂದ ಇದಿದ್ದು ಈ ವಿಷಯ ತಾಂಡಾದವರಿಗೆ ಗೊತ್ತಾಗಿ ಅವರಿಬ್ಬರ ಮದುವೆ ಮಾಡುವ ಬಗ್ಗೆ ಒಪ್ಪಂದ
ಮಾಡಿಕೊಂಡಿದ್ದು ಇರುತ್ತದೆ. ಸದರಿ ನನ್ನ ತಮ್ಮನು ಹುಡುಗಿಯ ವಿಷಯದಲ್ಲಿ
ಮನಸ್ಸಿನ ಮೆಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 27/06/2019
ರಂದು 11.00 ಪಿ.ಎಮ ದಿಂದ ದಿನಾಂಕ
28/06/2019 ರಂದು 6.00 ಎ,ಮದ ಅವದಿಯಲ್ಲಿ ತಾನು ಮಲಗಿಕೊಂಡು ಮನೆಯ ಕಟ್ಟಿಗೆ ಜಂತಿಗೆ ಬಿಳಿ ಓಡಣಿಯಿಂದ ತನ್ನಿಂದ ತಾನೆ
ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಸದರಿಯವನ ಸಾವಿನಲ್ಲಿ
ಯಾರ ಮೆಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಸದ
ಮೇಲಿಂದ ಫರತಾಬಾದ ಠಾಣೆಯ ಯು.ಡಿ.ಆರ್
ನಂ 13/2019 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 02 : ದಿನಾಂಕ-28/06/2019 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಕಲಬುರಗಿ ದಿಂದ
ಚಿತ್ತಾಪುರ ರೋಡನಲ್ಲಿ ಬರುವ ಶ್ರೀನಿವಾಸ ಸರಡಗಿ ಕ್ರಾಸ್ ಸಮೀಪದ ಪ್ರಭುದೇವ ಕಂಕರ ಮಶೀನ ಸಮೀಪ
ರೋಡ ಮೇಲೆ ಒಬ್ಬ ಅಪರಿಚಿತ ಮನುಷ್ಯ ಅಂದಾಜು ವಯ: 60-65 ವರ್ಷ ಈತನು ರಸ್ತೆ ಬದಿಯಿಂದ
ನಡೆದುಕೊಂಡು ಹೋಗುತ್ತಿದ್ದಾಗ ಒಂದು ಲಾರಿ ನಂ ಎಮ್.ಹೆಚ್-12 ಎನ್.ಎಕ್ಸ 9718 ನೇದ್ದರ ಚಾಲಕ
ದತ್ತ ನಿಂಬಾಳ್ಕರ್ ಈತನು ಕಲಬುರಗಿ ರೋಡ ಕಡೆಯಿಂದ ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ಅಪರಿಚಿತ ಮನುಷ್ಯನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಆತನ ತಲೆಗೆ ಭಾರಿಗಾಯಗೊಳಿಸಿದರಿಂದ
ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಾರಿ ಚಾಲಕ ದತ್ತ ನಿಂಬಾಳ್ಕರ್ ಈತನ ಮೇಲೆ ಕಾನೂನು ಕ್ರಮ
ಕೈಕೊಳ್ಳಬೇಕೆಂದು ಶ್ರೀ ನಾರಾಯಣ ತಂದೆ ದಾಮು ಪವಾರ ಸಾ : ಶ್ರೀನಿವಾಸ ಸರಡಗಿ ತುಕಾರಾಮ ನಾಯಕ
ತಾಂಡಾ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರ ಗುನ್ನೆ ನಂ 115/2019
ಕಲಂ 279, 304[J] L¦¹ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ
ಪ್ರಕರಣ :
ಫರತಾಬಾದ ಠಾಣೆ : ದಿನಾಂಕ:27.06.2019 ರಂದು ಸಾಯಂಕಾಲದ ವೇಳೆಯಲ್ಲಿ ನಾನು ಬಿಜಾಪೂರನಿಂದ ನಮ್ಮೂರಿಗೆ ಬಂದು ನಮ್ಮೂರ ಸರಕಾರಿ
ಶಾಲೆಯ ಹತ್ತೀರ ಮೋ.ಸೈಕಲ ಮೇಲೆ ಕುಳಿತಿದ್ದಾಗ ಸಾಯಂಕಾಲ 06.30 ಗಂಟೆಯ
ಸೂಮಾರಿಗೆ ನಮ್ಮ ಮನೆಯ ಹತ್ತೀರ ನನ್ನ ತಾಯಿ ಜಗದೇವಿ ಇವಳ ಸಂಗಡ ಯಾರೋ ಜಗಳ ಮಾಡುತ್ತಿದ್ದು ನನ್ನ
ತಾಯಿ ಚಿರಾಡುತ್ತಿರುವ ಸಪ್ಪಳ ಕೇಳಿ ನಾನು ನನ್ನ ಮನೆಯ ಹತ್ತೀರ ಹೋಗಿ ನೋಡಲು ನನ್ನ ತಾಯಿಗೆ
ನಮ್ಮೂರ 1. ಅಂಬಿಕ ಗಂಡ ಶ್ರೀಮಂತ ಬಟಗೇರಿ 2. ಗುರುಬಾಯಿ ಗಂಡ ಶಿವರಾಯ ಬಟಗೇರಿ 3. ವಿಜಯಲಕ್ಷ್ಮೀ ಗಂಡ
ಸಿದ್ರಾಮಪ್ಪ ಬಟಗೇರಿ 4. ಸರುಬಾಯಿ ಗಂಡ ಭೀಮಾಶಂಕರ ಬಟಗೇರಿ 5.
ಗಂಗಮ್ಮ ಗಂಡ ಶಿವರಾಯ ಬಿರಾದಾರ 6. ಶರಣಮ್ಮ
ಸಾ:ಗೋಬ್ಬೂರ ಕೆ ಇವರು ನನ್ನ ತಾಯಿಗೆ ರಂಡಿ ಮುಂಡಿ ಅಂತಾ ಬೈಯುತ್ತ ಕೂದಲು ಹಿಡಿದು ಏಳೆದಾಡಿ
ಹೋಡೆಬಡೆ ಮಾಡುತ್ತಿದ್ದು ಅದನ್ನು ನೋಡಿ ನಾನು ಮೋ.ಸೈಕಲಗೆ ಸ್ಟ್ಯಾಂಡ ಹಚ್ಚಿ ಕೆಳಗೆ
ಇಳಿಯುತ್ತಿದ್ದಾಗ ಗುರಣ್ಣ ಬಟಗೇರಿ ಇವನು ಬಡಿಗೆಯಿಂದ ನನ್ನ ತಲೆಯ ಹಿಂದೆ ಹೋಡೆದನು ಸುಬ್ಬಣ್ಣ
ಬಟಗೇರಿ ಇವನು ಬಡಿಗೆಯಿಂದ ನನ್ನ ತಲೆಯ ಹಿಂದೆ ಹೋಡೆದು ರಕ್ತಗಾಯ ಮಾಡಿದನು. ಶ್ರೀಮಂತ ಬಟಗೇರಿ
ಇವನು ಬಡಿಗೆಯಿಂದ ನನ್ನ ಹಣೆಗೆ ಹೋಡೆದು ರಕ್ತಗಾಯ ಮಾಡಿದನು ಸಿದ್ರಾಮ ಬಟಗೇರಿ ಇವನು ಬಡಿಗೆಯಿಂದ
ನನ್ನ ಎಡ ತಲೆಗೆ ಹೋಡೆದು ರಕ್ತಗಾಯ ಮಾಡಿದನು ಇನ್ನೂಳಿದ ಭೀಮಾಶಂಕರ ತಂದೆ ಮಲ್ಲಣ್ಣ ಬಟಗೇರಿ,
ನಾಗಣ್ಣ ತಂದೆ ಗುರಣ್ಣ ಬಟಗೇರಿ, ಜಗ್ಗಣ್ಣ ತಂದೆೆ
ಶಿವರಾಯ ಬಿರಾದಾರ ಹಾಗೂ ಶಿವರಾಯ ತಂದೆ ಗುರಣ್ಣ ಬಟಗೇರಿ ಇವರು ನನಗೆ ಬಡಿಗೆಗಳಿಂದ ನೆಲಕ್ಕೆ ಹಾಕಿ
ಎರಡು ಕಾಲುಗಳಿಗೆ ಎರಡು ಕೈಗಳಿಗೆ ಬೆನ್ನಿಗೆ ಎಲ್ಲಂದರಲ್ಲಿ ಮನಬಂದಂತೆ ಹೋಡೆದರು ನಮಗೆ ಹೋಡೆಬಡೆ
ಮಾಡಿದನ್ನು ನಮ್ಮೂರ ಜನರು ನಿಂತು ನೋಡಿದ್ದು ಯಾರೂ ಕೂಡಾ ಜಗಳ ಬಿಡಿಸಿರುವುದಿಲ್ಲ ಜಗಳದಲ್ಲಿ
ನನ್ನ ಕಿಸೆಯಲ್ಲಿದ್ದ ಓಪೋ ಕಂಪನಿಯ ಮೋಬಾಯಿಲ್ ಹಾಗೂ 12 ಸಾವಿರ
ರೂಪಾಯಿಗಳು ಬಿದ್ದಿದ್ದು ಹುಡುಕಾಡಿದರು ಸಿಕ್ಕಿರುವುದಿಲ್ಲ ನಂತರ 108
ಅಂಬುಲೆನ್ಸದಲ್ಲಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇನೆ. ನನ್ನ ತಾಯಿ ಜಗದೇವಿ ಇವಳು ಇಂದು
ಮುಂಜಾನೆ ವೇಳೆಯಲ್ಲಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತಾಳೆ ವಿನಾಕಾರಣ ನನಗೆ ನನ್ನ ತಾಯಿಗೆ
ಕೈಯಿಂದ ಬಡಿಗೆಯಿಂದ ಹೋಡೆಬಡೆ ಮಾಡಿದ ಮೇಲೆ ಹೇಳಿದವರ ವಿರುದ್ದ ಕಾನೂನ ಕ್ರಮ ಜರುಗಿಸಬೇಕು ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯ ಗುನ್ನೆ ನಂಬರ-94/2019 ಕಲಂ.143,147,148,341,323,324,504 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.