Police Bhavan Kalaburagi

Police Bhavan Kalaburagi

Sunday, June 21, 2020

BIDAR DISTRICT DAILY CRIME UPDATE 21-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-06-2020

ಮಾರ್ಕೇಟ್ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 06/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 19-06-2020 ರಂದು 1100 ಗಂಟಯಿಂದ 2130 ಗಂಟೆಯ ಮಧ್ಯದ ಅವಧಿಯಲ್ಲಿ ಮೃತ ಖಾಜಾಶೇಖ ನಯಿಂ ತಂದೆ ಖಾಜಾ ಶೇಖ ಮಹೆಬೂಬ ವಯ: 49 ವರ್ಷ, ಸಾ: ಮುಲ್ತಾನಿ ಕಾಲೋನಿ ಬೀದರ ಇತನು ಮಾನಸೀಕ ಅಸ್ವಸ್ಥನಿದ್ದು, ಆತನ ಮದುವೆಯಾಗಿರುವುದಿಲ್ಲಾ, ಆತನು ತನ್ನ ಮನೆಯಲ್ಲಿಯೇ ಇರುವ ಕಬ್ಬಿಣದ ರಾಡಿಗೆ ನೈಲಾನ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತ ಫಿರ್ಯಾದಿ ಖಾಜಾಶೇಖ ವಸೀಮ ತಂದೆ ಖಾಜಾ ಶೇಖ ಮಹೆಬೂಬ ಸಾ: ಮುಲ್ತಾನಿ ಕಾಲೋನಿ ಬೀದರ ರವರು ನೀಡಿದ ಸಾರಾಂಶದ ಮೇರೆಗೆ ದಿನಾಂಕ 20-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 07/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 15-06-2020 ರಂದು ಫಿರ್ಯಾದಿ ರಮೇಶ ತಂದೆ ಶಂಕರ ಪವಾರ ವಯ: 39 ವರ್ಷ, ಜಾತಿ: ಲಂಬಾಣಿ, ಸಾ: ದೇವಗಿರಿ ತಾಂಡಾ, ತಾ: ಹುಮನಾಬಾದ  ರವರ ಸೋದರ ಅತ್ತೆ ಝಾಲಬಾಯಿ ಗಂಡ ಲಕ್ಷ್ಮೀಣ ರಾಠೋಡ ವಯ: 70  ವರ್ಷ, ಜಾತಿ: ಲಂಬಾಣಿ ರವರು ಮತ್ತು ಅವರ ಸೂಸೆ ನೀಲಾಬಾಯಿ ಗಂಡ ದೇವಿದಾಸ ಇಬ್ಬರೂ ನೀರು ತರುವ ವಿಷಯವಾಗಿ ತಕಾರರು ಮಾಡಿಕೊಂಡಿದ್ದು, ಅತ್ತೆ  ಅದೇ ದಿವಸ  ಮನೆ ಬಿಟ್ಟು ಹೋಗಿದ್ದು ಇರುತ್ತದೆ, ನಂತರ ಫಿರ್ಯಾದಿಯು ಅತ್ತೆಯನ್ನು ಎಲ್ಲಾ ಕಡೆ ಹುಡಕಾಡಿದರೂ ಅವರ ಬಗ್ಗೆ ಯಾವದೇ ಮಾಹಿತಿ ಸಿಕ್ಕಿರುವುದಿಲ್ಲಾ, ನಂತರ ದಿನಾಂಕ 20-06-2020 ರಂದು ಫಿರ್ಯಾದಿಯವರಿಗೆ ವಿಷಯ ಗೊತ್ತಾಗಿದ್ದೆನೆಂದರೆ ಅತ್ತೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನೇಣು ಬೀಗಿದುಕೊಂಡು ಮೃತಪಟ್ಟಿರುತ್ತಾಳೆ  ಅಂತಾ ವಿಷಯ ಗೊತ್ತಾಗಿ ಫಿರ್ಯಾದಿಯು ಅಲ್ಲಿಗೆ ಹೋಗಿ ನೋಡಲು ಅತ್ತೆ ಶವ ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದು, ಅವರ ಕುತ್ತಿಗಿಗೆ ಒಂದು ಪ್ಲಾಸ್ಟಿಕ ಹಗ್ಗದಿಂದ ಬಿಗಿದಿದ್ದು ಸದರಿ ಶವದ ಮೇಲೆ ಕ್ರಿಮಿ ಕೀಟಗಳು ಇದ್ದು ಕೊಳತೆ ಸ್ಥಿತಿಯಲ್ಲಿ ಕಂಡು ಬಂದಿದ್ದು ಇರುತ್ತದೆ, ಸೋದರ ಅತ್ತೆ ಮನೆ ಬಿಟ್ಟು ಹೋಗಿ ಮರಳಿ ಬಾರದೆ ಶವವಾಗಿ ಸಿಕ್ಕಿದು ಅವಳು ಹೇಗೆ ಮೃತಪಟ್ಟಿರುತ್ತಾಳೆಂದು ಗೊತ್ತಾಗಿರುವುದಿಲ್ಲಾ, ಅವಳ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 10/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸುಜಾತಾ ಗಂಡ ಶಂಕರ ಭೂಜಂಗಿ ವಯ: 30 ವರ್ಷ, ಜಾತಿ: ಕ್ರಿಶ್ಚನ್, ಸಾ: ಕುಂಬಾರವಾಡಾ ಬೀದರ ರವರ ಗಂಡನಾದ ಶಂಕರ ತಂದೆ ಬಸಪ್ಪಾ ಭೂಜಂಗಿ ವಯ: 38 ವರ್ಷ, ಜಾತಿ: ಕ್ರಿಶ್ಚನ್, ಸಾ: ಕುಂಬಾರವಾಡಾ ಬೀದರ ರವರು 3 ವರ್ಷಗಳಿಂದ ಹೊಟ್ಟೆ ಬೇನೆಯಿಂದ ಬಳಲುತ್ತಿದ್ದು, ಈಗ ಅಂದಾಜು 7-8 ದಿವಸಗಳಿಂದ ಅವರಿಗೆ ಹೊಟ್ಟೆ ಬೇನೆ ಹೇಚ್ಚಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದರು, ತನ್ನ ಹೊಟ್ಟೆ ಬೇನೆ  ಕಡಿಮೆಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-06-2020 ರಂದು ತಾನು ಮಲಗುವ ಕೋಣೆಯ ಛಾವಣಿಯ ಡಿ. ಹುಕ್ಕಿಗೆ ನೈಲಾನ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ದಿನಾಂಕ 20-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 11/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ವೈಶಾಲಿ ಗಂಡ ಅಶ್ವೀನ ಮೇತ್ರೆ ವಯ: 24 ವರ್ಷ, ಜಾತಿ: ಎಸ್.ಸಿ. ಹೊಲಿಯಾ, ಸಾ: ರಮಾಬಾಯಿ ಕಾಲೋನಿ ತ್ರಿಪೂರಾಂತ ಬಸವಕಲ್ಯಾಣ ರವರ ಗಂಡನಾದ ರವರು ಸುಮಾರು ದಿವಸಗಳಿಂದ ಕೊರೊನೊ ವೈರಸ್ ನಿಂದ ಮನೆಯಲ್ಲಿಯೇ 20 ದಿವಸಗಳಿಂದ ಹೋಮ್ ಕ್ವಾರಂಟೆನ್ ಆಗಿದ್ದು ಹಾಗೂ ಗಂಡ ತನ್ನ ಗೆಳೆಯನಿಗೆ ಕೊರೊನೊ ವೈರಸ್ ಪಾಸಿಟಿವ್ ಬಂದಿದ್ದರಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 19-06-2020 ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶದ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-06-2020 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.