Police Bhavan Kalaburagi

Police Bhavan Kalaburagi

Monday, June 20, 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಯಲ್ಲಮ್ಮ ಗಂಡ ಕೃಷ್ಣಪ್ಪ ಇವಳು ಸಾರ್ವಜನಿಕರೊಂದಿಗೆ ಅನೈತಿಕ ಸಂಭಂಧ ಇಟ್ಟುಕೊಂಡಿರುವುದರಿಂದ ಯಲ್ಲಮ್ಮಳ ಮಲತಾಯಿಯ ಮಗನಾದ ಮಾಹಾಂತೇಶ ಈತನು ಹಲವಾರು ಬಾರಿ ಯಲ್ಲಮ್ಮಳಿಗೆ ಮತ್ತು ಆತನ ತಂದೆಯಾದ ಕೃಷ್ಣಪ್ಪ ಇವರಿಗೆ ಅನೈತಿಕ ಸಂಭಂಧ ಬಿಡುವಂತೆ ಅದರಿಂದ ಮನೆಯ ಮರ್ಯಾದೆ ಹೋಗುತ್ತಿದೆ ಅಂತಾ ತಂಟೆ ತಕರಾರು ಮಾಡಿಕೊಳ್ಳುತ್ತಾ ಬಂದರೂ ಸಹ ಯಲ್ಲಮ್ಮ ಇವಳು ಅನೈತಿಕ ಸಂಭಂಧ ಮುಂದುವರೆಸಿಕೊಂಡು ಬಂದಿರುವುದರಿಂದ ಅವಳನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಆರೋಪಿತನಾದ ಅಶೋಕ ತಂದೆ ಶರಣಯ್ಯ ಗುತ್ತೇದಾರ ಈತನ ಪ್ರಚೋದನಯಿಂದ ತನ್ನ ಗೆಳೆಯರಾದ ಗುಡೂಸಾಬ್ ತಂದೆ ಅಜೀಜ್‌ ಮಿಯಾ ಹಾಗೂ ಅಂಬರೀಶ ತಂದೆ ಈರಣ್ಣ ಬಿರಾದಾರ ಇವರೊಂದಿಗೆ ದಿನಾಂಕ: 19/06/2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ದೀನ್‌ ದಯಾಳ್‌ ಕಾಲೋನಿಯ ಮಾಹಾಂತೇಶ ನ ಪಾನ್ ಶಾಪ್‌ ದಲ್ಲಿ ಪ್ಲಾನ್ ಮಾಡಿಕೊಂಡು ಯಲ್ಲಮ್ಮಳ ಮನೆಗೆ ಹೋಗಿ ನಿನ್ನ ಗಂಡ ಕುಡಿದು ರೋಡಿನ ಮೆಲೆ ಬಿದ್ದಿರುತ್ತಾನೆ ಅಂತಾ ಹೇಳಿ ಮನೆಯಿಂದ ಕರೆದುಕೊಂಡು ಎಸ್.ಎಂ ಕೃಷ್ಣಾ ಕಾಲೋನಿಯ ರೋಡಿಗೆ ಕರೆದುಕೊಂಡು ಹೋಗಿ ಯಲ್ಲಮ್ಮಳಿಗೆ ಗುಡೂಸಾಬ್‌ ಮತ್ತು ಅಂಬರೀಶ್ ಇವರು ಕೆಳಗೆ ಕೆಡವಿದ್ದು ಮಾಹಾಂತೇಶನು ಕಲ್ಲುಗಳಿಂದ ತಲೆಯ ಮೇಲೆ ಹಣೆಯ ಮೇಲೆ ಹೊಡೆದು ಕೊಲೆ ಮಾಡಿರುತ್ತಾನೆ ನಂತರ ಬಿಡಿಸಲು ಬಂದಿರುವ ಯಲ್ಲಮ್ಮಳ ಮಗಳು ಆಶಾ ಇವಳಿಗೂ ಸಹ ಸ್ವಲ್ಪ ದೂರ ಎಳೆದುಕೊಂಡು ಹೋಗಿ ಗೂಡೂಸಾಬ್ ಈತನು ಒಂದು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದಿದ್ದು ಅಂಬರೀಶ ಇತನು ಎರಡು ಕೈಗಳು ಹಿಡಿದಿದ್ದು ಮಾಹಾಂತೇಶನು ಚಾಕುವಿನಿಂದ ಆಶಾಳ ಕುತ್ತಿಗೆ ಕೊಯಿದು ಕೊಲೆ ಮಾಡಿರುತ್ತಾರೆ.  ಅಂಥಾ ಶ್ರೀ ಕೃಷ್ಣಪ್ಪ ತಂದೆ ರುಕ್ಮಯ್ಯ ಕಲಾಲ್‌ ಸಾ: ಡಬರಾಬಾದ ಹಾವ: ಪಂಡಿತ್ ದೀನ್‌ ದಯಾಳ್ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು ಮದ್ಯಾಹ್ನ 12-00 ಪಿ.ಎಂಕ್ಕೆ  ಶ್ರೀ. ಸುರೇಶ ತಂದೆ ನಿಂಗಪ್ಪಾ ಕಟ್ಟಿಮನಿ  ಸಾ:  ಅರುಣ ಗೊಡಬೊಲೆ ಮನೆಯಲ್ಲಿ ಬಾಡಿಗೆ ಅಶೋಕ ನಗರ ಕಲಬುರಗಿ ರವರು ಮತ್ತು ತನ್ನ ಪತ್ನಿ ಮಕ್ಕಳೊಂದಿಗೆ ಈಗ ಒಂದುವರೆ ವರ್ಷಗಳಿಂದ ಅರುಣ ಗೊಡಬೊಲೆ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುತ್ತೆವೆ.  ಅದೇ ಮನೆಯಲ್ಲಿ ಓರಿಸ್ಸಾ ಮೂಲದವರಾದ ಕೃಷ್ಣಾ ಮತ್ತು ಅವರ ಪತ್ನಿ ಮಮತಾ ರವರು ವಾಸವಾಗಿರುತ್ತಾರೆ. ನೀರು ತುಂಬವ ಮೊಟರ ಸಲುವಾಗಿ ಈ ಹಿಂದೆ ನನ್ನ ಪತ್ನಿ ವಾಣಿ ಜೊತೆಯಲ್ಲಿ ಮಮತಾ ರವರು ಜಗಳ ಮಾಡಿದ್ದರು. ಇಂದು ದಿನಾಂಕ 19/06/2016 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಳೆ ನೀರು ನಿಂತಿದಕ್ಕೆ ನನ್ನ ಪತ್ನಿ ವಾಣಿ ರವರು ಮನೆ ಮಾಲಿಕರ ಸಂಬಂಧಿಕ ಮನೋಜ ರವರಿಗೆ ಹೇಳಿದಕ್ಕೆ ಅವರು ಒಡ್ಡೆ ಒಡೆದು ನೀರು ತೆಗೆದಿರುತ್ತಾರೆ. ಅದಕ್ಕೆ ಕೃಷ್ಣ ಮತ್ತು ಮಮತಾ  ರವರು ನನ್ನ ಪತ್ನಿ ವಾಣಿ ರವರಿಗೆ ರಂಡಿ ನೀನೆ ಹೇಳಿ ಒಡ್ಡು ಮುರಿಸಿದ್ದಿ ಅಂತಾ ಬೈದ್ದರು. ಆಗ ನಾನು ನನ್ನ ಹೆಂಡತಿಗೆ ಯ್ಯಾಕೆ? ಬೈಯ್ದಿರಿ ಎಂದು ಕೇಳಲು ಹೊದಾಗ ಕೃಷ್ಣ ರವರು  ರಂಡಿ ಮನಗೆ ಭೋಸಡಿ ಮನಗೆ ಎಂದು ಬೈದ್ದು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಾಯಗೊಳಿಸಿರುತ್ತಾರೆ.  ಮಮತಾ ರವರು ನನ್ನ ಪತ್ನಿ ವಾಣಿರವರ ಜೋತೆ ದಕ್ಕಮಸ್ತಿಗೆ ಬಿದ್ದು ಕೈಯಿಂದ ಹೊಡೆದಿರುತ್ತಾರೆ. ಮತ್ತು ಅವರಿಂದ ನನ್ನ ಜೀವಕ್ಕೆ ಅಪಾಯವಿದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಬಸ್ಸಿಗೆ ಕಲ್ಲು ತೂರಾಟ ಮಾಡಿದ ಪ್ರಕರಣಗಳು :
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು 13:30  ಪಿ.ಎಮ್.ಕ್ಕೆ ನಾನು & ಕಂಡಕ್ಟರ್ ಅಣ್ಣಪ್ಪಾ ಕಂ. ನಂ. 4992 ರವರೊಂದಿಗೆ ಕೆ.ಎಸ್.ಆರ್.ಟಿ.ಸಿ ನೃಪತುಂಗ ನಗರ ಸಾರಿಗೆ ಸಬ್ ನಂ. ಕೆಎ 32 ಎಪ್‌ 1850 ರಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ಬಸ್ಟಾಂಡದಿಂದ ರಾಮ ಮಂದಿರ ಕಡೆಗೆ ಹೋಗುತ್ತಿರುವಾಗ ಸಮಯ 13:45 ಪಿಎಮ್ ಕ್ಕೆ ರಾಷ್ಟ್ರಪತಿ ಸರ್ಕಲ ಎದುರುಗಡೆ ಎಕ್ಸಿಸ್ ಬ್ಯಾಂಕ ಎದುರುಗಡೆ ರಸ್ತೆಯ ಮೇಲೆ ಎರಡು ಬೈಕ್ ಮೇಲೆ 3-4 ಜನ ಪ್ರತಿಭಟನಾ ಕಾರರು ಒಮ್ಮೆಲೆ ಬಂದು ಕಲ್ಲು ತೂರಾಟ ಮಾಡಿದ್ದರಿಂದ ನಮ್ಮ ಬಸ್ಸಿನ ಎದುರುಗಡೆ ಗ್ಲಾಸ ಮತ್ತು ಬಲಗಡೆಯ ಎರಡು ಗ್ಲಾಸಗಳು ಜಖಂಗೊಂಡಿದ್ದು ಇದರಿಂದ 15000/-ರೂ. ಹಾನಿ ಆಗಿರುತ್ತದೆ. ಇಂದು ನಗರದಲ್ಲಿ ಖಮರುಲ್ ಇಸ್ಲಾಂ ರವರಿಗೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಆಕ್ರೋಶಗೊಂದು ಪ್ರತಿಭಟನೆ ಮಾಡಿ ಕಲ್ಲು ತೂರಾಟ ಮಾಡಿರುತ್ತಾರೆ. ಕಲ್ಲು ತೂರಾಟ ಮಾಡಿದವರಲ್ಲಿ ಒಬ್ಬ ಕಪ್ಪು ಟಿ ಶರ್ಟ ಧರಿಸಿದ್ದು ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ರವಿ ತಂದೆ ಪ್ರಭುಲಿಂಗ ಡ್ರೈವರ ನಂ.972 ಬಸ್ ಡಿಪೋ ನಂ.4 ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು 13-50 ಪಿಎಂಕ್ಕೆ  ನಾನು ಮತ್ತು ಕಂಡಕ್ಟರ ರೂಪ್ಲಪ್ಪಾ ಡಿ ಕಂ.ಸಿ 195 ರವರೊಂದಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ  ನಿಲ್ದಾಣದಿಂದ ಬಸ ನಂ. ಕೆಎ 36-ಎಫ್‌-1237 ರಲ್ಲಿ ಪ್ರಯಾಣಿಕರೊಂದಿಗೆ ಬಸ  ಸ್ಟ್ಯಾಂಡ ದಿಂದ ಹೊರ ಹೊಗುವಾಗ  13-50 ಪಿಎಂಕ್ಕೆ ರಸ್ತೆಯ ಮೇಲೆ 2 ಬೈಕ ಮೇಲೆ 3-4 ಪ್ರತಿಭಟನಾಕಾರರು ಒಮ್ಮೇಲೆ ಬಂದು ಕಲ್ಲು ತೂರಾಟ ಮಾಡಿದ್ದ ಕಾರಣ ನಮ್ಮ ಬಸ್ಸಿನ ಎದರುಗಡೆಯ ಗ್ಲಾಸ ಜಖಂ ಗೊಂಡಿದ್ದು ಇದರಿಂದ 15000/- ರೂ ಹಾನಿ ಹಾಗಿರುತ್ತದೆ. ಇಂದು ಕಲಬುರಗಿ ನಗರದಲ್ಲಿ  ಖಮರೂಲ ಇಸ್ಲಾಂ ರವರಿಗೆ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಆಕ್ರೊಶಗೊಂಡು ಪ್ರತಿಭಟನೆ ಮಾಡುತ್ತಾ ಕಲ್ಲು ತೂರಾಟ ಮಾಡಿರುತ್ತಾರೆ.  ಕಲ್ಲು ತೂರಾಟ ಮಾಡಿದವರಲ್ಲಿ ಒಬ್ಬ ಕಪ್ಪು ಟಿ-ಶರ್ಟ ಧರಿಸಿದವನು ಆಗಿದ್ದು ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೆಕೆಂದು  ಅಂತಾ ಶ್ರೀ ಇಬ್ರಾಹಿಂ ಬಸ ಚಾಲಕ ನಂ.257 ಸಿಂಧನೂರ ಬಸ ಡಿಪೊ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 19/06/16 ರಂದು ಬೆಳಿಗ್ಗೆ 11-45  ಗಂಟೆ ಸುಮಾರಿಗೆ ಕೆ.ಎಸ್.ಅರ್.ಟಿ.ಸಿ. ಬಸ್ಸು ನಂ ಕೆಎ 32 F 1702 ನೇದ್ದರಲ್ಲಿ ಪ್ರಯಾಣಿಕರನ್ನು  ಉಮರ್ಗಾದಿಂದ ಕೂಡಿಸಿಕೊಂಡು ಬಸ್ಸು ನಡೆಸುತ್ತಾ ಮಧ್ಯಾಹ್ನ 02-30 ಗಂಟೆ ಸುಮಾರಿಗೆ  ಕಲಬುರಗಿ ನಗರದ ಮಿಜಾಬ ರಿಂಗ ರೋಡ ಕ್ರಾಸನಲ್ಲಿ ಬಂದಾಗ ಆಗ ನಾಲ್ಕು ಜನರು ಅಂದಾಜ 30-34 ವರ್ಷ ವಯಸ್ಸಿನವರು ಕೂಡಿಕೊಂಡು ಬಂದು ಖಮರಲ್ಲ ಇಸ್ಲಾಂ ಇವರಿಗೆ ಸಚಿವ ಸಂಪುಟಕ್ಕೆ ಕೈ ಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಪ್ರತಿಭಟನೆ ಮಾಡುತ್ತಾ ಮತ್ತು ಕೂಗುತ್ತಾ  ಆಕ್ರೋಶಗೊಂಡು  ನಮ್ಮ ಬಸ್ಸಿನ ಎದುರುಗಡೆ ಬಂದು ನನಗೆ ಬಸ್ಸು ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಬಸ್ಸು ನಿಲ್ಲಿಸಿ, ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಬಸ್ಸಿನ ಮುಂದಿನ ಗ್ಲಾಸಿಗೆ ಕಲ್ಲು ತೂರಾಟ ಮಾಡಿ ದೊಡ್ಡ ಗ್ಲಾಸು ಒಡೆದರು. ಮತ್ತು ಅದರಂತೆ ಬಲಗಡೆಯ ಸೈಡ ಗ್ಲಾಸು ಒಟ್ಟು ಆರು ಗ್ಲಾಸುಗಳಿಗೆ ಕಲ್ಲು ತೂರಾಟ ಮಾಡಿ ಒಡೆದು ಅಲ್ಲಿಂದ ಹೋದರು. ಈ ಘಟನೆಯಿಂದಾಗಿ ಬಸ್ಸಿನಲ್ಲಿದ್ದ  ನನಗೆ ಮತ್ತು ಕಂಡಕ್ಟರ ಹಾಗೂ ಪ್ರಯಾಣಿಕರಿಗೆ ಯಾವುದೇ ಗಾಯಗಳು ವಗೈರೇ ಆಗಿರುವುದಿಲ್ಲಾ. ಬಸ್ಸಿನಲ್ಲಿದ್ದ ಪ್ರಯಾಣಿಕರ ಹೆಸರು ವಿಳಾಸ ಗೊತ್ತಿಲ್ಲಾ. ಮುಂದಿನ ಗ್ಲಾಸು ಒಡೆದಿದ್ದರಿಂದ ಅಂದಾಜ 12,000/- ರೂ.  ಮತ್ತು ಬಲಗಡೆ ಸೈಡ ಗ್ಲಾಸು ಒಡೆದಿದ್ದರಿಂದ ಅಂದಾಜ 6000/- ರೂ. ಹೀಗೆ ಒಟ್ಟು 18,000/- ರೂ. ಲುಕ್ಸಾನ ಆಗಿರುತ್ತದೆ. ಕಲ್ಲು ತೂರಾಟ ಮಾಡಿದ ನಾಲ್ಕು ಜನರ ಹೆಸರು ವಿಳಾಸ ಗೊತ್ತಿಲ್ಲಾ. ಅವರಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಅಂತಾ ಶ್ರೀ ಕರಬಸಪ್ಪ ತಂದೆ ಶಿವಪ್ಪ ಮೂಕ ವ:34 ವರ್ಷ ಉ:ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 32 ಎಫ 1702 ಚಾಲಕ  ಪಿ.ನಂ. 26824 ಆಳಂದ ಡಿಪೋ ಮು:ಕಡಗಂಚಿ ಗ್ರಾಮ ತಾ:ಆಳಂದ ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.