Police Bhavan Kalaburagi

Police Bhavan Kalaburagi

Friday, July 3, 2020

BIDAR DISTRICT DAILY CRIME UPDATE 03-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 03-07-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 87/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ:02/07/2020 ರಂದು 11;00 ಗಂಟೆಗೆ   ಸುನೀಲ್ ಕುಮಾರ ಪಿ.ಎಸ. [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವ ಕಲ್ಯಾಣ ನಗರದ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ  ಅಂತಾ ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ  ಹೊಗಿ  ನೋಡಲು ಭಾತ್ಮಿಯಂತೆ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 16;00 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿದಾಗ ಮಲ್ಲಿಕಾರ್ಜುನ ಸಿಪಿಸಿ-1043 ರವರು ಹಿಡಿದು ಸದರಿ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಫ್ರೋಶ ಖಾನ  ತಂದೆ  ಅನ್ವರ ಖಾನ ಗುತ್ತೆದಾರ  ವಯಸ್ಸು:25 ವರ್ಷ  : ಹೋಟಲ್ ಕೆಲಸ  ಸಾ:ಪರುಷಕಟ್ಟಾ ಬಸವಕಲ್ಯಾಣ ಎಂದು ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1050/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ. ನೇದ್ದವುಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 58/2020  ಕಲಂ 354, 307 ಜೊತೆ 34  ಐಪಿಸಿ :- 

ದಿನಾಂಕ 02/07/2020 ರಂದು 2015  ಗಂಟೆಗೆ ಫಿರ್ಯಾದಿ   ಶಿವಾನಂದ ತಂದೆ ಕಾಶಿನಾಥ ಸ್ವಾಮಿ ವಯ 44 ವರ್ಷ ಜ್ಯಾತಿ ಸ್ವಾಮಿ ಉ// ವ್ಯಾಪಾರ ಸಾ// ಬೆಳಕುಣಿ(ಬಿ) ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆದಂರೆ ಫಿರ್ಯಾದಿ ಅತ್ತಿಗೆಯಾದ ಅನಿತಾ ಗಂಡ ದಯಾನಂದ ಸ್ವಾಮಿ ಯವರು ಭೂಮಿ ಸರ್ವೆ ನಂ 156 ರಲ್ಲಿ ದಿನಾಂಕ 02/07/2020 ರಂದು ಮಧ್ಯಾಹ್ನ ರಂದು 0230 ಸುಮಾರಿಗೆ ಸತೀಷ ತಂದೆ ದಯಾನಂದ ಸ್ವಾಮಿ , ಶಿವ ಕಾಮಾಜಿ ಮೇತ್ರೆ ಇತರರು ಔಷದಿಯನ್ನು ಹೊಡೆಯುವಾಗ ತಡೆಯಲು ಬಂದ ಕಾರಣ ಅನಿತಾ ಅವರನ್ನು ಎಲ್ಲರು ಕೂಡಿ ಕುತ್ತಿಗೆ ಹಿಡಿದು ಒತ್ತಾಯಪೂರ್ವಕವಾಗಿ ಮೈ ಮೇಲೆ ಮತ್ತು ಬಾಯಲ್ಲಿ ಕೂಡ ಔಷದಿ ಹಾಕಿ ಕೊಲೆಗೆ ಯತ್ನಿಸಿದ್ದಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.